Tuesday, 24 December 2019

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ.
ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿಂದ ಅವರಿಗೆ ಜ್ಞಾನೋದಯವಾಗುತ್ತದೆ.
ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗ ಶೈಕ್ಷಣಿಕ ಪರಿಣತಿ ಸಾಧಿಸಲು ಪೂರ್ವ ದಿಕ್ಕಿಗೆ ತಿರುಗಿರಬೇಕು
ಪ್ರವಾಸ ಮಾಡುವಾಗ ಪಶ್ಚಿಮಕ್ಕೆ ಒಬ್ಬರು ತಲೆ ಹಾಕಿಕೊಂಡು ಮಲಗಬೇಕು.

ಮನೆ ನಿರ್ಮಾಣಕ್ಕೆ ಮುಂಚೆ ನಿವೇಶನದ ಈಶಾನ್ಯ ಮೂಲೆಯಲ್ಲಿ ವಾಸ್ತು ಮತ್ತು ಗಣಪತಿ ಪೂಜೆಯನ್ನು ನೆರವೇರಿಸಬೇಕು.
ಯಾವುದೇ ಕೆಲಸ ಮಾಡುವ ಮುಂಚೆ ಪೂಜೆಯನ್ನು ಮಾಡಬೇಕು.

ನೀರನ್ನು ತುಂಬಲು ತಾಮ್ರದ ಪಾತ್ರೆಯನ್ನು ಬಳಸಬೇಕು ಮತ್ತು ಹಣತೆ ಹಚ್ಚಲು ಹಿತ್ತಾಳೆಯನ್ನು ಬಳಸಬೇಕು
ಸ್ವಂತ ಮನೆಯಲ್ಲಿ ಕುಟುಂಬದ ಸದಸ್ಯರು ಪಶ್ಚಿಮ ದಿಕ್ಕಿಗೆ ತಲೆಇಟ್ಟುಕೊಂಡು ಮಲಗಬಾರದು. ಇದು ದುಃಖ ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ.

ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಬಾರದು.


ಪೂಜೆಗೆ ಕಬ್ಬಿಣ, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಲ್ಯುಮಿನಿಯಂ ವಸ್ತುಗಳನ್ನು ಬಳಸಬಾರದು.


ಪ್ರಾಣಿಗಳ ಹೋರಾಟದ, ಹಣ್ಣುಗಳು ಮತ್ತು ಹೂವುಗಳಿಲ್ಲದ ಮರ, ಸತ್ತ ಪ್ರಾಣಿಗಳು, ಮನೆಗೆ ಬಿದ್ದ ಬೆಂಕಿ, ಯುದ್ಧದ ದೃಶ್ಯಗಳ ಚಿತ್ರಗಳನ್ನು ನೇತುಹಾಕಬೇಡಿ

ಮನೆಯ ಉತ್ತರದ ಕಡೆ ತಡೆ ಇದ್ದರೆ ಅದು ಸಮೃದ್ಧಿಯನ್ನು ತಡೆಯುತ್ತದೆ. ನಗದು ಪೆಟ್ಟಿಗೆ ಅಥವಾ ಲಾಕರ್ ಬಿಂಬಿಸಲು ಕನ್ನಡಿಯೊಂದನ್ನು ನೇತುಹಾಕಿದರೆ ಅದು ಸಾಂಕೇತಿಕವಾಗಿ ಸಂಪತ್ತು ಮತ್ತು ಅವಕಾಶಗಳನ್ನು ಇಮ್ಮಡಿಗೊಳಿಸುತ್ತದೆ.

Sunday, 8 December 2019

ಜಾಗ ಕೊಳ್ಳಬೇಕಾಗುವಾಗ ಪಾಲಿಸಬೇಕಾದ ವಾಸ್ತು!

ಒಂದು ಮನೆ ಅಥವಾ ಮನುಷ್ಯನು ವಾಸ ಮಾಡುವ ಜಾಗವನ್ನು ಕೊಳ್ಳುವ ಮುನ್ನ ಮೊದಲೇ ಜಾಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು.  ಒಂದು ಜಾಗವು ಕೊಂಡುಕೊಳ್ಳುವಾಗ ಆ ಜಾಗವು ನಮ್ಮ ಜಾತಕಕ್ಕೆ ಅನುಕೂಲಕರವಾಗಿದ್ದರೆ  ಎಲ್ಲವೂ ಶುಭವಾಗುತ್ತದೆ. ಇಲ್ಲದಿದ್ದರೆ ಸರಿಯಾದ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು.

ಭೂಮಿ ಅಥವಾ ಸೈಟ್ ನ ಯಾವುದಾದರೂ ಒಂದು ಭಾಗದಲ್ಲಿ ಅರ್ಧ ಅಡಿ ವ್ಯಾಸ ಒಂದು ಅಡಿ ಆಳವಿರುವಂತೆ ಗುಂಡಿಯೊಂದನ್ನು ತೋಡಿ. ಹೀಗೆ ಅಗೆದ ಜಾಗದಲ್ಲಿ ತೋರು ಬೆರಳಿನಿಂದ ಓಂಕಾರ ಶಬ್ಧವನ್ನು ಬರೆಯಿರಿ. ಆಮೇಲೆ ಅಷ್ಟದಿಕ್ಕುಗಳ ದೇವರನ್ನು ನೆನೆಯಿರಿ. ಮಣ್ಣನ್ನು ಶೇಖರಣೆ ಮಾಡಿ. ಮೂರು ರಾತ್ರಿಗಳ ಕಾಲ ಆ ಜಾಗವನ್ನು ಹಾಗೇ ಬಿಡಿ. ನಾಲ್ಕನೆಯ ದಿನ ಅಗೆದ ಜಾಗದಲ್ಲಿ ಶೇಖರಿಸಿಟ್ಟುಕೊಂಡ ಮಣ್ಣನ್ನು ತುಂಬಿ. ಒಂದೊಮ್ಮೆ ಮಣ್ಣು ತುಂಬಿದ ಮೇಲೂ ಒಂದಷ್ಟು ಮಣ್ಣು ಉಳಿದರೆ ನೀವು ಕೊಳ್ಳಲಿರುವ ಜಾಗ ಒಳ್ಳೆಯದು ಮುಂದೆ ಅಭಿವೃದ್ಧಿ ಕಾಣುತ್ತದೆ ಎಂದು ಅರ್ಥ. ಶೇಖರಿಸಿದ ಮಣ್ಣು ತುಂಬದೇ ಹೋದರೆ ಆ ಜಾಗ ಪ್ರಶಸ್ತವಲ್ಲ ಎಂದು ಅರ್ಥ.

Monday, 25 November 2019

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ತಪ್ಪಿಸಿಕೊಲ್ಳುವ ಉಪಾಯಗಳಿಗಾಗಿ ಮುಂದೆ ಓದಿ

*ಶನಿವಾಋ ವೃತ ಮಾಡಿ

* ಶನಿವಾರ ಶನಿನಿಯ ಪೂಜೆ ಮಾಡಿ ( ಕವಚ , ಸ್ತೋತ್ರ , ಮಂತ್ರ ಜಪ ಮಾಡಿ)

* ಶನಿವಾರ ಶನಿದೇವರ ವೃತದ ಕಥೆ ಓದಿ.

* ವೃತದ ಸಮಯದಲ್ಲಿ ಹಾಲು, ಲಸ್ಸಿ, ಹಣ್ಣುಗಳನ್ನು ಸೇವನೆ ಮಾಡಿ.

* ಸಂಜೆ ಹನುಮಾನ ದೇವರ ದರ್ಶನ ಮಾಡಿ .

* ಶನಿವಾರ ಸಾಯಂಕಾ ಆಲದ ಮರಕ್ಕೆ ಹತ್ತಿದಾರವನ್ನು 7 ಸುತ್ತು ಸುತ್ತಿ. ಈ ಸಮಯದಲ್ಲಿ ಶನಿಯ ಮಂತ್ರವನ್ನು ಜಪಿಸಿ .

* ಆಲದ ಮರದ ಕೆಳಗಡೆ ದೀಪವನ್ನು ಹಚ್ಚಿ.

Saturday, 23 November 2019

ಆರೋಗ್ಯ ಮತ್ತು ಶ್ರೀಮಂತಿಕೆ ಪಡೆಯಲು ವಿಶೇಷ ವಾಸ್ತು ಟಿಪ್ಸ್

ಕಸ ಗುಡಿಸುವ ಪೊರಕೆಗಳನ್ನು ಕಣ್ಣಿನಿಂದ ಮರೆಯಾಗುವಂತೆ ಮ‌ೂಲೆಯಲ್ಲಿ ತಲೆಕೆಳಗಾಗಿ ಇಡುವುದರಿಂದ ಕುಟುಂಬದ ಜೀವನ ತೊಳೆದುಹೋಗದಂತೆ ತಪ್ಪಿಸುತ್ತದೆ.

* ಸ್ನಾನದ ಗೃಹ ಅಥವಾ ಅಡುಗೆ ಮನೆಯ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕದಂತೆ ಖಾತರಿ ಮಾಡಿಕೊಳ್ಳಿ.ಸತತ ನೀರಿನ ತೊಟ್ಟಿಕ್ಕುವಿಕೆಯು ನಕಾರಾತ್ಮಕ ಶಕ್ತಿಯನ್ನು ಸೂಸುವುದರಿಂದ ನೀರಿನ ತೊಟ್ಟಿಕ್ಕುವಿಕೆಯು ಸಂಪತ್ತಿನ ಸೋರುವಿಕೆಯನ್ನು ಸಂಕೇತಿಸುತ್ತದೆ.

* ಸ್ವಚ್ಛವಾದ ಡೆಸ್ಕ್ ಸ್ಪಷ್ಟ ಯೋಚನೆಗೆ ಪ್ರೋತ್ಸಾಹಿಸುತ್ತದೆ. ಇದು ಆರ್ಥಿಕ ಶಕ್ತಿ ಮತ್ತು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಕಂಪ್ಯೂಟರ್, ಫೋನ್ ಮುಂತಾದುವನ್ನು ಡೆಸ್ಕ್‌ನಲ್ಲಿ ಬಳಸಬಹುದು.

* ಎಲ್ಲ ಗಡಿಯಾರಗಳು ಸುಸ್ಥಿತಿಯಲ್ಲಿ ಇರಬೇಕು. ಕಾರ್ಯನಿರ್ವಹಿಸದ ಗಡಿಯಾರವು ಹಣಕಾಸು ಸ್ಥಿತಿ ಸುಧಾರಿಸದೇ ಅಲ್ಲೇ ನಿಲ್ಲುವಂತೆ ಮಾಡುತ್ತದೆ. ನಿಧಾನ ಗಡಿಯಾರದಿಂದ ನಿಮ್ಮ ಕೆಲಸಗಳು ವಿಳಂಬವಾಗುತ್ತದೆ.

* ನಿಮ್ಮ ಮಲಗುವ ಕೋಣೆಯ ಕಿಟಕಿಗಳನ್ನು ಕನಿಷ್ಠ 20 ನಿಮಿಷಗಳ ಕಾಲ ತೆರೆದು ಹೊಸ ಗಾಳಿ ಒಳಪ್ರವೇಶಕ್ಕೆ ಅವಕಾಶ ನೀಡಿ. ಇಲ್ಲದಿದ್ದರೆ ಪ್ರತಿ ರಾತ್ರಿ ನೀರಸ ಗಾಳಿಯೊಂದಿಗೆ ನೀವು ಮಲಗಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಿದರೆ, ಜೀವನದಲ್ಲಿ ಉತ್ತಮ ಅದೃಷ್ಟವನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ? 

* ನೆಲದಿಂದ ಒಂದು ಅಡಿ ಎತ್ತರದಲ್ಲಿ ಹಾಸಿಗೆಯಿರಬೇಕು. ಇದರಿಂದ ನೆಲದಲ್ಲಿ ಮುಕ್ತವಾಗಿ ಶಕ್ತಿ ಹರಿಯಲು ಅವಕಾಶ ಕಲ್ಪಿಸುತ್ತದೆ. ಶಕ್ತಿಯ ಮುಕ್ತ ಹರಿಯುವಿಕೆ ತಡೆದರೆ ನಿಮ್ಮ ಸಂಪತ್ತು ಗಳಿಸುವ ಅವಕಾಶ ಕೂಡ ಮೊಟಕಾಗುತ್ತದೆ.

* ತಲೆಯ ಹಿಂಭಾಗದಲ್ಲಿ ಭದ್ರಗೋಡೆಯೊಂದಿಗೆ ಮಲಗಿ. ಈ ಸ್ಥಿತಿಯು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ತಲೆಯ ಹಿಂಭಾಗದಲ್ಲಿ ಕಿಟಕಿಗಳು ಮತ್ತು ಬಾಗಿಲಿಗೆ ಅವಕಾಶ ಕೊಡಬಾರದು.

* ನೆಲವನ್ನು ಮನೆಯ ಒಳಗೆ ಗುಡಿಸಿಕೊಂಡು ಹೋಗಬೇಕು. ಮುಖ್ಯ ದ್ವಾರದತ್ತ ಕಸ ಗುಡಿಸುವುದರಿಂದ ಸಂಪತ್ತು ಕ್ಷೀಣಿಸುತ್ತದೆ.

* ಕಸದ ಬುಟ್ಟಿಗಳನ್ನು ಸದಾ ಮುಚ್ಚಿರಬೇಕು. ಇಲ್ಲದಿದ್ದರೆ ಸಂಪತ್ತಿನ ಶಕ್ತಿಯ ಭ್ರಷ್ಟತೆಗೆ ದಾರಿಕಲ್ಪಿಸುತ್ತದೆ.

* ಮನೆಯ ಮುಖ್ಯದ್ವಾರದಲ್ಲಿ ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬಾರದು. ಮುಖ್ಯದ್ವಾರದಲ್ಲಿ ಮುಕ್ತ ಮತ್ತು ಸ್ವಚ್ಛ ಜಾಗವಿರಬೇಕು. ಇಲ್ಲದಿದ್ದರೆ ಗಾಳಿಯೊಂದಿಗೆ ಹರಿಯುವ ಶಕ್ತಿಯು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯೊಂದಿಗೆ ಮಿಶ್ರಣಗೊಂಡು ಮನೆಯಲ್ಲಿ ನಷ್ಟಗಳು ಪ್ರಾಪ್ತವಾಗುತ್ತದೆ.

* ತೊಳೆಯದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೇ ಬಿಡದೇ ಆದಷ್ಟು ಬೇಗ ತೊಳೆಯುವುದು ಒಳ್ಳೆಯದು. ತಕ್ಷಣವೇ ತೊಳೆಯದಿರುವುದು ಅಪೂರ್ಣತೆಯ ಸಂಕೇತವಾಗಿದ್ದು, ಹಣಕಾಸು ಪರಿಸ್ಥಿತಿಯ ಅವ್ಯವಸ್ಥೆಗೆ ಪುರಾವೆ ಒದಗಿಸುತ್ತದೆ.

* ಮುಖ್ಯ ಪ್ರವೇಶದ್ವಾರದ ಮೇಲೆ ಶೌಚಾಲಯಗಳು ಇರಬಾರದು. ಅದು ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ. ಇದು ಮುಖ್ಯದ್ವಾರದಿಂದ ಪ್ರವೇಶಿಸುವ ನಕಾರಾತ್ಮಕ ಶಕ್ತಿಗೆ ಹಸ್ತಕ್ಷೇಪ ಉಂಟುಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Wednesday, 20 November 2019

ಭಾರತೀಯ ವಾಸ್ತುಶಾಸ್ತ್ರ

ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ವಿವರಣೆ ನೀಡುತ್ತದೆ. ಗಾಳಿ, ಬೆಳಕು, ನೀರು , ನೆಲ , ಆಕಾಶ ಇತ್ಯಾದಿಗಳನ್ನಾಧರಿಸಿ ನಿರ್ಮಾಣದ ಕುರಿತು ವಿವರಣೆ ನೀಡುತ್ತದೆ. ವಾಸ್ತುಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿಯೂ ಪರಿಗಣಿಸಲ್ಪಡುತ್ತದೆ.

ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ. ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.

ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ. ಈ ಮುಂತಾದ ಕಾರ್ಯಗಳನ್ನು ವಾಸ್ತು ನಿರ್ದೇಶಿಸುತ್ತದೆ.

Saturday, 16 November 2019

ಮಗುವಿಲ್ಲದ ಮನೆ

ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ.

ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಒತ್ತಡ ,ಪ್ರದೂಷಣೆ ಗರ್ಭಾಶಯದ ಉಷ್ಣ ಕಡಿಮೆ ಮಾಡುತ್ತದೆ. ಇದರಿಂದ ಗರ್ಭಧಾರಣೆ ಶಕ್ತಿ ಕಡಿಮೆ ಮಾಡುತ್ತದೆ.

ಪ್ರತಿಯೊಬ್ಬ ವ್ಯಕ್ತಿಗೆ ಅದೃಷ್ಟ ನೀಡುವ ತನ್ನದೆ ಆದ ದಿಕ್ಕು ಇರುತ್ತದೆನಿಯನ್ ಯೆನ್ ದಿಕ್ಕೂ ಎಂದು ಕರೆಯುತ್ತಾರೆ.ಮಲಗುವ ಕೋಣೆಯಲ್ಲಿ ನಿಯನ್ ಯೆನ್ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಕು ತೊಲೆಯ ಕೆಳಗೆ ಮಲಗಬಾರದು.

ಮನೆಯ ಪ್ರವೇಶದ್ವಾರವನ್ನು ಪರೀಕ್ಷಿಸಿಕೊಳ್ಳಿ, ಮಲಗುವ ಕೋಣೆಯಲ್ಲಿ ಹರಿತವಾದ ಬಾಣಗಳು ಇರುವಂತ ಚಿತ್ರವನ್ನು ಹಾಕಬೇಡಿ. ರಾತ್ರಿ ಮಲಗುವಾಗ ಸಂತಾನಕ್ಕಾಗಿ ಯತ್ನಿಸುತ್ತಿರುವಾಗ ಇಂಪಾದ ಸಂಗೀತ ಆಲಿಸಿ ಒತ್ತಡದಲ್ಲಿರಬೇಡಿ ಆನಂದವಾಗಿರಿ .

Wednesday, 13 November 2019

ಡೋರ್ ಮ್ಯಾಟ್ ಕೆಳಗೆ ಇದನ್ನು ಇಟ್ಟರೆ ದರಿದ್ರ ಲಕ್ಷ್ಮೀ ನಿಮ್ಮ ಮನೆ ಪ್ರವೇಶಿಸುವುದಿಲ್ಲ

ಎಲ್ಲರ ಮನೆಯಲ್ಲಿಯೂ ಡೋರ್ ಮ್ಯಾಟ್ ನ್ನು ಉಪಯೋಗಿಸುತ್ತಾರೆ. ಈ ಡೋರ್ ಮ್ಯಾಟ್ ಕೆಳಗೆ ಈ ಒಂದು ವಸ್ತುವನ್ನು ಇಡುವುದರಿಂದ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸದಂತೆ ಮಾಡಬಹುದು.

ಹೌದು. ಮನೆಯ ಡೋರ್ ಮ್ಯಾಟ್ ಹಾಕುವಾಗ ಯಾವಾಗಲೂ ಕಪ್ಪು ಬಣ್ಣದ ಮ್ಯಾಟ್ ಗಳನ್ನು ಬಳಸಬೇಕು. ಮತ್ತು ಈ ಡೋರ್ ಮ್ಯಾಟ್ ಕೆಳಗೆ ಸ್ಫಟಿಕವನ್ನು ಪುಡಿ ಮಾಡಿ ಕೆಂಪು ಬಣ್ಣದ ಬಟ್ಟೆಯಿಂದ ಸುತ್ತಿ ಇಡಬೇಕು. ಇದರಿಂದ ಮನೆಗೆ ದರಿದ್ರ ಲಕ್ಷ್ಮೀ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹಾಗೇ  ಮನೆಯಲ್ಲಿ ಅಷ್ಟ ಐಶ್ವರ್ಯ ತುಂಬಿರುತ್ತದೆ.

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...