Wednesday, 31 January 2018

ಮನೆಯ ಅತಿ ಸೂಕ್ಷ್ಮ, ಸಂವೇದನಾಶೀಲ ಸ್ಥಳ ಯಾವುದು ಗೊತ್ತಾ?

ನಿಮ್ಮ ವಾಸ್ತು ರೀತಿಯಾಗಿ, ಸರಿಯಾಗಿ ಮಾಡಿಕೊಳ್ಳುವುದು ಒಂದು ಕ್ರಮ. ಮೊತ್ತ ಮೊದಲಾಗಿ ವಾಸ್ತು ಶಾಸ್ತ್ರದ ಸಕಲ ವೈಶಿಷ್ಠಗಳನ್ನು ಅಕ್ಷರಶಃ ಪರಿಪಾಲಿಸಲು ಅಸಾಧ್ಯವಾಗಿದೆ.

ಆಧುನಿಕವಾದ ಈ ಕಾಲದಲ್ಲಿ ಎಂಬುದ ನಿಮಗೆ ತಿಳಿದೇ ಇದೆ. ಆದರೆ ಪರಿಷ್ಕರಿಸಿಕೊಳ್ಳಬಲ್ಲ ಇನ್ನೊಂದು ಅಂಶ ನಮ್ಮೊಳಗೇ ಇರುವ ಒಂದು ಆತ್ಮಸಾಕ್ಷಿಯ ಆವರಣಗಳನ್ನು ಅದು ಧೈರ್ಯ ಮತ್ತು ನಮ್ಮ ಮನುಷ್ಯತ್ವದ ಘಟಕಗಳ ಪರಿಷ್ಕರಣಗಳಿಂದ ಸಾಧ್ಯವಾಗಲೂ ಅವಕಾಶ ಪಡೆದಿದೆ. ಪಂಚಭೂತಗಳು ಶವವನ್ನೇ ರೂಪಿಸಿದೆ. ಅದೂ ನಮ್ಮನ್ನು ರೂಪಿಸಿದೆ. ನಮ್ಮ ಬಾಹ್ಯ ಹಾಗೂ ಆಂತರ್ಯದ ಅತಿಸೂಕ್ಷ್ಮ ಕಣಗಳು ಕೋಶಗಳು ಚೈತನ್ಯವನ್ನು ಪಡೆಯುವ, ನಿಷ್ಕ್ರಿಯಗೊಳ್ಳುವ ವಿಚಾರಗಳು ಪಂಚಭೂತಗಳಿಂದಲೇ ಚಾಲನೆ ಪಡೆಯುತ್ತದೆ.

ನಮ್ಮ ಸುತ್ತಲೂ ಅಲೌಕಿಕವಾದ ಒಂದು ಪ್ರಭಾವಳಿ ಇದೆ. ಅದು ನಮ್ಮನ್ನು ನಮ್ಮ ವ್ಯಕ್ತಿತ್ವ, ವರ್ಚಸ್ಸು, ಶಕ್ತಿ, ಲವಲವಿಕೆಗಳನ್ನು ಕೊಡುವ ಕಳೆಯುವ ಮೂಲಕ ನಿಯಂತ್ರಿಸುತ್ತದೆ. ಕುಶಲಮತಿಯಾದವನು ತನ್ನ ಜಾnನದಿಂದ ತನ್ನ ಮತ್ತು ಸುತ್ತಲಿನ ಒಳಿತುಗಳಿಗೆ ಕಾರಣನಾಗಬಹುದು. ಆದರೆ ಜಾnನಿಗಳಾಗಿಯೂ ಬುದ್ಧಿಯ ಪ್ರಯೋಜನ ಪಡೆಯಲಾಗದೆ ಜಡವಾಗಿರುವ ಎಷ್ಟೋ ಜನರಿದ್ದಾರೆ. ಜಾnನವನ್ನೂ ದುಬುìದ್ಧಿಯನ್ನು ಸೂಕ್ಷ್ಮವಾದ ಒಂದು ಕೂದಲೆಳೆಯ  ಅಂತರ ಒಂದು ಇನ್ನೊಂದಕ್ಕಿಂತ ಬೇರೆಯಾಗುವಂತೆ ಮಾಡುತ್ತದೆ.
ಹೀಗಾಗಿ ಜಾnನವಿದ್ದರೂ ದುಬುìದ್ಧಿಯಿಂದ ಸುತ್ತಲ ಜನಜೀವನ ಸ್ವಕೀಯರ ವಿಶ್ವಶಾಂತಿಗೆ ಕಾರಣರಾಗುತ್ತಾರೆ. ಭಯೋತ್ಪಾದಕರೂ, ಭ್ರಷ್ಟರೂ, ವಿಘ್ನಸಂತೋಷಿಗಳು ಪರ ಹಿಂಸಾ ನಿರತರಾಗಿ ಸಂತೋಷಪಡುವವರು, ವಕ್ರವಾಗೇ ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವವರು, ಪರರ ತಪ್ಪುಗಳನ್ನೇ ಹುಡುಕುತ್ತ ಭೂತಗನ್ನಡಿಯನ್ನು ಕೈಗಂಟಿಸಿಕೊಂಡವರು, ಇನ್ನೊಬ್ಬರ ತೇಜೋವಧೆಗಾಗಿ ಸೂಕ್ಷ್ಮವಾಗಿ ವರ್ತಿಸುವವರು, ಬ್ಲಾಕ್‌ ಮೇಲ್‌ ಮಾಡುತ್ತ ಬೇಳೆ ಬೇಯಿಸಿಕೊಳ್ಳುವವರು ಇತ್ಯಾದಿ ಇತ್ಯಾದಿಗಳನ್ನು ನಾವು ನೋಡುತ್ತಲೇ ಇದ್ದೇವೆ. ಸಂಧಿಸುತ್ತಲೇ ಇರುತ್ತೇವೆ. ಇದು ಎಲ್ಲರ ಅನುಭವ.

ಆದರೆ ಒಂದು ತಿಳಿಯಿರಿ ಈ ಎಲ್ಲಾ ದೋಷಗಳನ್ನು ಹೊಂದಿದ ವ್ಯಕ್ತಿಯ ಆತ್ಮ ಎಂದೂ ಸುಖದಲ್ಲಿ ಇರಲಾರದು. ಯಾಕೆಂದರೆ ಆನೆಗೆ ಸಿಂಹ ಉಂಟು. ಹಾಗೆ ಗರುಡಾ ಉಂಟು ಎಂಬಂತೆ ಈ ರೀತಿಯ ದರಿದ್ರಗಳನ್ನು ಮೀರಿಸುವ ಈ ದರಿದ್ರಗಳಿಗೆ ಶಿಖರಪ್ರಾಯವಾಗುವ ಅತಿದರಿದ್ರಗಳು ಸಿಗುತ್ತಾರೆ. ಅಪರೂಪಕ್ಕೆ ಶಿಷ್ಟರ ಬಲವೇ ಇಂತ ದುಷ್ಟ ಪಿಡುಗುಗಳನ್ನು ಸಕಾರಾತ್ಮಕವಾಗಿ ಬಗ್ಗು ಬಡಿಯುತ್ತದೆ. ಈ ನಮ್ಮ ಪ್ರಭಾವಳಿಯು ಪ್ರತಿಯೊಬ್ಬನಲ್ಲೂ ಪರಿಶುದ್ಧವಾಗಿಯೇ ಇದ್ದು ಅರಿಷಡ್ವರ್ಗಗಳು ಪ್ರಭಾವಳಿಯನ್ನು ಕೆಡಿಸುತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಛಿದ್ರಗೊಳಿಸುತ್ತದೆ. ಮನೆಯ ವಾಸ್ತು ದೋಷವು ನಮ್ಮ ನಾಶಕ್ಕೆ ಪ್ರಧಾನವಾದ ವಂತಿಗೆಯನ್ನು ಕೊಡಲಾರದು. ನೈತಿಕವಾದ ಎತ್ತರವನ್ನು ನಾವು ಸ್ಪಷ್ಟವಾಗಿ ಪಡೆದೆವಾದರೆ ವಾಸ್ತುವಿನ ದೋಷ ಗೌಣವಾಗುತ್ತದೆ. ಆದರೆ ಮನೆಯ ಸ್ವತ್ಛತೆ ಪರಿಶುದ್ಧತೆ ವಸ್ತುಗಳ ಚೆಲ್ಲಾಪಿಲ್ಲಿತನ ತಡೆಯಿರಿ. ಬೆಳಕೇ ಇರದಿದ್ದಲ್ಲಿ ಸೂಕ್ತವಾದ ಬಲುºಗಳನ್ನು ಉರಿಸಿ. ಉರಿಬಿಸಿಲು ಪೂರ್ವದಿಂದ ಕಣ್ಣುಕುಕ್ಕುವ ಹಾಗೆ ಬರುವಂತಿದ್ದರೂ ಪೂರ್ವದ ಬಾಗಿಲು ಶುಭಕರವಾಗಿರುವುದಿಲ್ಲ. ಸಂಡಾಸು, ಸ್ನಾನಗೃಹ, ಶುಚಿಯಾಗಿರಲಿ. ಅಡುಗೆಯ ಮನೆ ಸರಳವಾಗಿ ಪರಿಶುದ್ಧವಾಗಿರಲಿ. ಮನಸ್ಸು ನಿರಾಳವಾಗಿರಲು ಬಿಡಿ.

ನಿಮ್ಮ ದೇಹದ ಸುತ್ತಲಿನ ಪ್ರಭಾವಳಿಗೆ ಆಗ ತ್ರಿಮೂರ್ತಿ ತತ್ವಗಳು ಒಗ್ಗೂಡಿ ಪಂಚಭೂತಗಳನ್ನು ನಿಮ್ಮ ಪಾಲಿನ ಕಾಯುವ ಶಕ್ತಿಯನ್ನಾಗಿಸುತ್ತದೆ. ಮನೆಯೊಳಗೆಯೇ ಒಂದು ಪ್ರಭಾವಳಿ ಮನೆ ಮಾಡಿರುತ್ತದೆ. ನಿಮ್ಮ ದೇಹದ ಸುತ್ತಲಿನ ಪ್ರಭಾವಳಿಗೆ ಅದು ಕೊಂಡಿ ಕೂಡಿಸಿಕೊಂಡಾಗ ಜೀವನದ ಸಾಫ‌ಲ್ಯತೆಗೆ ದಾರಿ ತಂತಾನೆ ಸಿಗಲು ಅವಕಾಶ ಸಾಧ್ಯ.

ಮನೆಯ ಅತಿ ಸೂಕ್ಷ್ಮ ಸಂವೇದನಾಶಿಲ ಸ್ಥಳ ಗುರುತಿಸಿಕೊಳ್ಳಿ. ಅದು ನಿಮ್ಮ ಮೇಧಾಶಕ್ತಿಯನ್ನು ಸಂವರ್ಧನೆಗಳಿಗೆ ಕಾರಣ ಮಾಡಿಕೊಡುತ್ತದೆ. ಮುಖ್ಯವಾದುದನ್ನು ಅಲ್ಲಿಯೇ ನಿಷ್ಕರ್ಷಿಸಿ. ಆ ಸ್ಥಳದಲ್ಲಿ ಮನೆಮಂದಿಯೊಂದಿಗೆ ಒಳಿತುಗಳ ಬಗ್ಗೆ ಚರ್ಚಿಸಿ. ನಿಮ್ಮ ಒತ್ತಡಗಳನ್ನು ಒಮ್ಮೆಗೇ ತಿಳಿಗೊಳಿಸಿಕೊಳ್ಳುವ ವರ್ತಮಾನ ಅವಕಾಶ ನೀಡದು. ಚರ್ಚಿಸಬೇಕಾದ ಒತ್ತಡದ ವಿಚಾರಗಳನ್ನು ಒಂದೆಡೆ ಪಟ್ಟಿ ಮಾಡಿಕೊಳ್ಳಿ. ಸಂಬಂಧಿಸದವರ ಜೊತೆ ಅವರೂ ನಿರಾಳವಾಗಿರುವಾಗಿ ಚರ್ಚಿಸಿ. ಇದರಿಂದ ನಿಮ್ಮ ಕೆಲಸಗಳು ಹಗುರವಾಗುತ್ತದೆ.


Tuesday, 30 January 2018

ಆಧುನಿಕ ಉಪಕರಣಗಳು ಮತ್ತು ಮನೆ

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ.

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯವಾದೊಂದು ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ.

ನಿಜ ಹೇಳಬೇಕಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು ವರ್ಧಿಸುತ್ತ ಹೋಗಬೇಕಿತ್ತು. ಆದರೆ ನಾವು ಇಂದು ಬದುಕುತ್ತಿರುವ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಅನಿಸುತ್ತದೆಯೇ? ದೂರದ ಅಮೆರಿಕಾ ಎಷ್ಟು ಹತ್ತಿರವಾಗಿದೆಯೆಂದರೆ ಅಮೆರಿಕದವರಿಗೂ ಭಾರತ ಅಪರಿಚಿತವಾದೊಂದು ದೇಶವಲ್ಲ. ಇದು ತಮಗೆ ಬೇಕೆಂದಾಗ ದೇಶ ಅನಿವಾರ್ಯವಾಗಿ ನಾವು ಆಶ್ರಯಿಸಿ ಇರಬೇಕಾದ ದೇಶ ಎಂಬ ಅವರ ಮನೋಭಾವವನ್ನು ಗಮನಿಸುತ್ತಾ ಎಷ್ಟು ಹತ್ತಿರ ತಲುಪಕೂಡದೋ ಅಷ್ಟು ಹತ್ತಿರ ಬರುತ್ತಿದೆ. ಆಧುನಿಕತೆಯ ಹೆಸರಿನಲ್ಲಿ ಅಮೆರಿಕಾ ಹತ್ತಿರವಾದದ್ದು. ನಮ್ಮನ್ನು ನಾವು ನಮಗೆ ಬೇಕಾದುದಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸುತ್ತಿದ್ದೇವೆ ನಮ್ಮ ಮನೆಗಳನ್ನು.

ಈ ಕಾರಣದಿಂದ ನಮ್ಮ ಮನೆಗಳು ನಮಗೆ ಜೀವನೋಲ್ಲಾಸವನ್ನು ಚಿಮ್ಮಿಸುವ ವಿಚಾರದಲ್ಲಿ ಕಟ್ಟಲ್ಪಡದೆ ಸಂಯೋಜಿಸಲ್ಪಡದೆ ಮನೆಮನೆಯ ಶಾಂತಿ ಹಾಗೂ ನೆಮ್ಮದಿಗಳು ಒಂದು ರೀತಿಯ ಶುಷ್ಕ ನೆಲೆಯಲ್ಲಿ ಸಪ್ಪೆಯಾಗತೊಡಗಿದೆ. ಶುಷ್ಕ ನೆಲೆಗಳೇ ನಮ್ಮ ಆಧುನಿಕತೆಯನ್ನು ಪ್ರತಿಪಾದಿಸುತ್ತಿರುವ ಕೀಲಿ ಕೈಗಳಾಗಿರುವುದರಿಂದ ನಮ್ಮ ಸಾಂಸ್ಕೃತಿಕ ಚೌಕಟ್ಟು ಸಮತೋಲನ ಕಳೆದುಕೊಂಡಿದೆ. ಆಧುನಿಕ ಉಪಕರಣಗಳಾದ ಟೀ, ಓವನ್‌ ಮೈಕ್ರೋವೇವ್‌, ಗೀಸರ್‌, ಲಿಫ್ಟ್, ವ್ಯಾಕ್ಯೂಮ್‌ ಕ್ಲೀನರ್‌ ಇತ್ಯಾದಿ ಇತ್ಯಾದಿ ಅಸಂಪ್ರದಾಯಿಕವಾದ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ.

ಇದರಿಂದಾಗಿ ವಿವಿಧ ರೀತಿಯ ನಕಾರಾತ್ಮಕ ಸ್ಪಂದನಗಳು ಮನೆಯನ್ನು ಆಕ್ರಮಣ ಮಾಡಿ ಹಿಂಸಿಸುತ್ತದೆ. ಉದಾಹರಣೆಗೆ ಹಾಗೂ ಗ್ಯಾಸಿನ ಒಲೆಯ ಗ್ಯಾಸಿನ ಸಿಲಿಂಡರ್‌ ಅಂತರಗಳು ಸದಾ ಮುಖ್ಯವಾದ ಸ್ವಿಚ್‌ ಒಂದು ಟೀವಿಯಲ್ಲಿ ವಿಸಿಆರ್‌ ಇತ್ಯಾದಿಗಳು ಆರಿಸದೇ ಇರುವುದು ತಪ್ಪುದಿಕ್ಕಿನಲ್ಲಿ ಟೀವಿಯನ್ನೋ ವಿಸಿಆರ್‌ ಅನ್ನೋ ಕೂಡಿಸುವುದು ಓವನ್‌ ಅಥವಾ ಮೈಕ್ರೋವೇವ್‌ ಉಪಕರಣಗಳನ್ನು ತಪ್ಪಾದ ಕಡೆ ಸಂಯೋಜಿಸುವುದು ಗೀಸರ್‌ ಅನ್ನು ಒಂದೆಡೆ ಬಚ್ಚಲಿಗೆ ತಗುಲಿ ಹಾಕುವುದು ಇತ್ಯಾದಿ ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ.

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ ನಿಣದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ. ಈ ಸಂದರ್ಭದಲ್ಲಿ ಹೈಟೆನÒನ್‌ ವಿದ್ಯುತ್‌ ಕಂಬಗಳು ಹೈಟೆನ್‌ ಲೋಡಿರುವ ವೈರುಗಳು ಜಾಲಾಡಿಕೊಂಡಿರುವ ಮನೆಯ ಹೊರವಲಯದ ಜೋಡಣೆಗಳ ವಿಚಾರವನ್ನು ಮನದಟ್ಟು ಮಾಡಿಕೊಂಡು ವಿದ್ಯುತ್‌ ಬಗೆಗೆ ಸೂಕ್ತ ಮಾಹಿತಿ ಇರುವ ತಜ್ಞರಿಂದ ಪಶ್ಚಿಮವೂ ತೊಂದರೆಗೆ ಈಡಾಗುವ ಬಿಂದುವೇ ಎಂಬುದನ್ನು ತಿಳಿದುಕೊಳ್ಳಿ. ಟೀವಿಯನ್ನಾಗಲೀ ಕಂಪ್ಯೂಟರ್‌ನ್ನಾಗಲೀ ಮಲಗುವ ಕೋಣೆಯಲ್ಲಿ ಇಡಲೇ ಕೂಡದು. ಇದು ಮಾನಸಿಕವಾದ ಅಂತರ್‌ ವಲಯವನ್ನು ಮೆದುಳಿನ ಸೂಕ್ಷ್ಮ ಕೋಶಗಳನ್ನು ಬಾಧಿಸುವ ವಿಚಾರವಾಗಿರುವುದರಿಂದ ಟೀ ಕಂಪ್ಯೂಟರ್‌ ಹಾಗೂ ಮೊಬೈಲ್‌ ವಿಷಯದಲ್ಲಿ ಟೆಲಿಫೋನಿನ ಲ್ಯಾಂಡ್‌ ಲೈನ್‌ ವಿಚಾರದಲ್ಲಿ ಎಚ್ಚರವಾಗಿರಿ.

ಅನಪೇಕ್ಷಿತ ವಿಚಾರವನ್ನು ತಿಳಿದು ಜಾಗರೂಕತೆಯಿಂದ ವರ್ತಿಸಿ. ಇನ್ನು ಎಷ್ಟೇ ಆದರೂ ಉಂಟಾಗುವ ಪಡಿಪಾಟಲುಗಳಿಂದಾಗಿ ದೇವರ ಮನೆಯಲ್ಲಿ ದೇವರ ಪೀಠ ಇರಿಸುವ ಕಟ್ಟೆಯ ಕೆಳಗಡೆ ಹವಳವನ್ನು ಇಟ್ಟು ಕಟ್ಟೆ ಕಟ್ಟುವುದು ಸೂಕ್ತ ವಿಚಾರ. ಧರಣಿ ಗರ್ಭಸಂಭೂತನಾದ ಅಂಗಾರಕನೇ ವಿದ್ಯುತ್‌ ಉಪಕರಣಗಳ ವಿಷಯದಲ್ಲಿ ನಿಯಂತ್ರಣಕ್ಕಾಗಿ ಜವಾಬ್ದಾರಿಯನ್ನು ಹೊತ್ತ ಗ್ರಹವಾದ್ದರಿಂದ ಹವಳವು ಪ್ರಧಾನವಾದ ದೇವರ ಕೋಣೆಯಲ್ಲಿ ಸೇರಿಕೊಂಡಿರುವುದು ಸೂಕ್ತವಾಗಿದೆ.


Monday, 29 January 2018

ಯಾರಿಗೆ, ಯಾವ ದಿಕ್ಕು ಯೋಗ್ಯ, ಯಾವ ದಿಕ್ಕು ಕ್ಷೇಮ?

ಈಗಾಗಲೇ ಹಲವು ವಾಸ್ತು ವಿಚಾರಗಳು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ

ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪಡೆಯುತ್ತದೆ. ಇಡೀ ವಿಶ್ವವು ಒಂದು ಶಕ್ತಿಯ ನಕಾರಾತ್ಮಕ ಸಕಾರಾತ್ಮಕ ಹೊಯ್ದಾಟಗಳ ನಡುವೆ ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತವೆ. ಹೀಗಾಗಿ ವಿಶ್ವವೇ ತನ್ನ ಆಸ್ತಿತ್ವಕ್ಕಾಗಿ ನಿರಂತರವಾಗಿ ತನ್ನನ್ನು ಕಸನ ಗೊಳಿಸುತ್ತಿರುವಾಗ ವಿಶ್ವದ ಭಾಗವೇ ಆದ ನಾವು ಮನುಷ್ಯರು ಸಾಧಕ ಬಾಧಕಗಳ ನಡುವೆ ನಮ್ಮನ್ನು ಸಂರಕ್ಷಿಸಿಕೊಳ್ಳಬೇಕು. ಇದು ಅನಿವಾರ್ಯ.

ಉತ್ತರ ದಿಕ್ಕನು ನೀವು ಮಹತ್ವದ ಅಧ್ಯಯನದ ಸಂದರ್ಭದಲ್ಲಿ ಪರಿಣಾಮಕಾರಿ ಯಾದ ಬರಹಗಳ ಸಮಯದಲ್ಲಿ ಅಥವಾ ಹೊಸತೇನನ್ನೋ ಪರಿಶೋಧಿಸುವ ಸಮಯವೇ ಇರಲಿ ಮುಖ ಮಾಡಿರುವುದು ಸೂಕ್ತ. ಪೂರ್ವವೂ ಕೂಡಾ ಇದಕ್ಕೆ ಸೂಕ್ತ. ನಿಮ್ಮ ವ್ಯಾಪಾರ ಅಥವಾ ಇನ್ನೇನೇ ವ್ಯಾವಹಾರಿಕ ವಿಚಾರಗಳನ್ನು ನಿಮ್ಮ ಗ್ರಾಹಕರೊಡನೆ ಮಾತನಾಡುವಾಗಲೂ ಇಷ್ಟಾರ್ಥ ಸಿದ್ಧಿಗಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳನ್ನು ಗಮನಿಸಿ ಮುಖ ಮಾಡಿಯೇ ಮಾತಾಡಬೇಕು. ಬೆಳಕಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಸ್ಪಂದನವಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫ‌ಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು.
ಯೋಗೀರ್ಶವರ ಶಕ್ತಿಯ ಸಂಪನ್ನತೆಯು ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವ ದಿಕ್ಕುಗಳ ಫ‌ಲವಂತಿಕೆಯೇ ಉತ್ತಮವಾಗಿದೆ.

ಆದರೆ ಅಡುಗೆಯನ್ನು ಮಾಡುವಾಗ ಉತ್ತರ ದಿಕ್ಕನ್ನು ಮುಖಮಾಡಿ ಅಡುಗೆ ಮಾಡಕೂಡದು. ಹೀಗೆನ್ನುವುದಿರಲಿ, ಕುಡಿಯುವುದಿರಲಿ ಉತ್ತರ ದಿಕ್ಕು ನಿಷಿದ್ಧ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖ ಮಾಡುವುದು ಉತ್ತಮ. ಆಹಾರ ಸಂವರ್ಧನಾ, ತಯಾರಿಕಾ ಪ್ರಗತಿ, ಸಾಫ‌ಲ್ಯ, ರುಚಿ, ಪ್ರಸನ್ನತೆಗಳು ಪೂರ್ವದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ ಜೀರ್ಣಕ್ರಿಯೆ ಆರೋಗ್ಯ ಸಂವರ್ಧನೆಗಳಿಗೆಲ್ಲ ಇದು ಸೂಕ್ತ. ಒಲೆಯೋ, ಸ್ಟೋವ್‌, ಗ್ಯಾಸ್‌ ಬರ್ನರ್‌ ಇತ್ಯಾದಿ ಪೂರ್ವಕ್ಕೆ ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿತಗೊಳ್ಳಬೇಕು. ಈ ವಿಚಾರವನ್ನು ಅಳತೆಬದ್ಧವಾಗಿ ರೂಪಗೊಳಿಸಲು ಮನೆಯ ಖುಲ್ಲಾ ಇರುವ ಜಾಗ ಉತ್ತರ ಮತ್ತು ಪೂರ್ವಭಾಗದಲ್ಲಿ ವಿಸ್ತರಿಸಿಕೊಂಡಿರಲಿ. ಹೆಚ್ಚಿನ ಸೂರ್ಯಪ್ರಕಾಶ ಪೂರ್ವದಿಂದ ಒಳಹೊಮ್ಮುವಂತಿದ್ದು ಶಾಖ ಸೂಕ್ತವಾಗಿ ಹೊರಹೋಗುವಂತೆ ನೈಸರ್ಗಿಕ ವಾತಾವರಣದ ವ್ಯವಸ್ಥೆ ಸೂಕ್ತವಾಗಿರಬೇಕು. ದೈಹಿಕ ಸಮೃದ್ಧಿಗೆ ಆರೋಗ್ಯ ಚಟುವಟಿಕೆಗಳ ಗಟ್ಟಿತನಕ್ಕೆ ಇದರಿಂದ ದಾರಿ ಲಭ್ಯ. ಮಾನಸಿಕ ನೆಮ್ಮದಿಗೂ ಇದರಿಂದ ಸಾಧ್ಯ.

ಮಲಗುವ ಮನೆಯಲ್ಲಿ ಎಲೆಕ್ಟ್ರಾನಿಕ್‌ ಗೂಡ್ಸ್‌ ಬೇಡ. ಟೀವಿ, ಕಂಪ್ಯೂಟರ್‌ ಲ್ಯಾಪ್‌ ಟ್ಯಾಪ್‌ ಉಪಯೋಗಗಳನ್ನು ಮಲಗುವ ಕೋಣೆಯಲ್ಲಿ ನಿಷೇಧಿಸಿ. ಮಲಗುವ ಕೋಣೆಯು ಒಂದು ಕ್ರಿಯಾ ಶಕ್ತಿಗೆ ಎಲೆಕ್ಟ್ರಾನಿಕ್‌ ಉಪಕರಣಗಳ ಕಿರಣದಿಂದ ತೊಂದರೆಗೆ ದಾರಿ ಇದೆ. ದಯಮಾಡಿ ಇವುಗಳ ಉಪಯೋಗ ಮಲಗುವ ಕೋಣೆಯಲ್ಲಿ ಬೇಡ. ಇದ್ದರೂ ಒಂದು ಮಿತಿ ಇರಲಿ.

ಮಿತಿ ಮೀರಿದ ಉಪಯೋಗವೇನೇ ಇದ್ದರೂ ನಿಯಂತ್ರಿಸಿ ಇದರಿಂದ ಕ್ಷೇಮ. ಹಾಸಿಗೆಯ ಎದುರಿಗೆ ಕನ್ನಡಿಯನ್ನು ನಿಷೇಧಿಸಿ. ಇದ್ದರೂ ಕನ್ನಡಿಯನ್ನು ಬಟ್ಟೆಯಿಂದ ರಾತ್ರಿ ಮುಚ್ಚಿಡಿ. ಮನೆಯ ಎಲ್ಲಾ ಗೋಡೆಗಳಿಗೂ ಒಂದೇ ಬಣ್ಣದ ಅಲಂಕಾರ ಬೇಡ. ತುಳಸೀ ಗಿಡಗಳು ಮನೆಯ ವಾಯುಶುದ್ಧಿಗಾಗಿ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರಲಿ. ಮನೆಯಲ್ಲಿ ಭಾರಿ ತೊಲೆಗಳು ಅಚ್ಚು ಹಾಗೂ ಅಡ್ಡಪಟ್ಟಿಗಳಿರುವ ತಾರಸಿಯ ಕೆಳಗಡೆ ಮಲಗಬೇಡಿ. ಭಯಾನಕ ಕನಸುಗಳಿಗೆ, ಖನ್ನತೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಇದೇ ರೀತಿ ಕಬ್ಬಿಣದ ಮಂಚಗಳೂ ಹಾಸಿಗೆ ಹಾಸಲು ಉಪಯೋಗಿಸಬೇಡಿ. ಹೃದಯವ್ಯಾಧಿ ಹಾಗೂ ಮೆದುಳಿಗೆ ಇದರಿಂದ ಹಾನಿಯಾಗುತ್ತದೆ. ಮಂಚಗಳು ಮರದಿಂದಲೇ ಮಾಡಿರಲಿ.

ಈಶಾನ್ಯದ ಕಡೆ ಬಸುರಿ ಹೆಂಗಸರು ಮಲಗಬೇಕು. ಉತ್ತರರದ ಕಡೆ ತಲೆ ಇಡುವುದು ಬೇಡ. ಯಾರೂ ಉತ್ತರ ದಿಕ್ಕಿನೆಡೆ ತಲೆ ಇಟ್ಟು ಮಲಗಬಾರದು. ಕಾಂತೀಯವಾದ ಉದ್ವಿಗ್ನ ತರಂಗಗಳು ಅಶಾಂತಿಗೆ ಅಪ್ರಸನ್ನತೆಗೆ ಉದ್ವಿಗ್ನತೆ ತುಂಬಿದ ಮನೊಸ್ಥಿತಿಗೆ ಕಾರಣವಾತ್ತದೆ. ಉತ್ತರ ಮತ್ತು ಪೂರ್ವ ದಿಕ್ಕಿನ ಕಿಟಕಿಗಳು ತೆರೆದಿರಲಿ ಕಳ್ಳಕಾಕರರ ಕಾಟವಿರದಂತೆ ಜಾಲರಿ ಜೋಡಿಸಿದ್ದರೆ ಉತ್ತಮ.

Saturday, 27 January 2018

ಮಲಗುವ ಕೋಣೆಗಿರಲಿ ಸರಳ ಸಂಪನ್ನ ಗುಣ

ಆಧುನಿಕ ಜೀವನ ಕ್ರಮ ವಿವಿಧ ಕಾರಣಗಳಿಂದಾಗಿ ಮನೆಯ ಯಜಮಾನ ವಿಶೇಷ ಹಾಗೂ ಜರೂರು ಕೆಲಸ ಕಾರ್ಯಗಳಿಗಾಗಿ ಮಲಗು ಕೋಣೆಯನ್ನು ಉಪಯೋಗಿಸುತ್ತಾನೆ. ಮನೆಯಲ್ಲಿ ಪ್ರತ್ಯೇಕ ಕಚೇರಿ ಎಂಬ ಒಂದು ಸ್ಥಳವನ್ನು ರೂಪಿಸಿ ಕೊಳ್ಳುವುದು ತುಂಬಾ ಕಷ್ಟದ ಕೆಲಸ. ವಿರಾಮಕ್ಕೆ, ನಿದ್ದೆಗೆ ಉಪಯೋಗಿಸುವುದಲ್ಲದೇ, ಮನೆಯಲ್ಲೇ
ಪೂರೈಸಬೇಕಾದ ತನ್ನ ಹೊರ ವಹಿವಾಟುಗಳ ಮುಂಚಿನ ತಯಾರಿಗಳು ಬೆಡ್‌ ರೂಮಿನಲ್ಲೇ ಅವುಗಳ ಆವರಣಗಳನ್ನ ಯಜಮಾನ ನಿಯೋಜಿಸುತ್ತಾನೆ. ಹೀಗಾಗಿ ಬೆಡ್‌ರೂಂ ಸಂಯೋಜನೆ ಈ ಎಲ್ಲಾ ನಿಟ್ಟಿನಿಂದ ಸೂಕ್ತ ರೂಪವನ್ನು ವಾಸ್ತು ದೃಷ್ಟಿಯಿಂದ ಪಡೆಯಲೇ ಬೇಕಾದ್ದು ಅನಿವಾರ್ಯವಾಗಿದೆ. ಜೀವನದ ಶೈಲಿಯಲ್ಲಿನ ಶಾಂತಿ, ನೆಮ್ಮದಿಗೆ ಬೆಡ್‌ರೂಮ್‌ ಪ್ರಧಾನವಾಗಿದೆ.

ಶಾಂತಿ, ನೆಮ್ಮದಿಯ ವಿಚಾರದಲ್ಲಿ ಏರುಪೇರುಗಳಾದ ಬೆಡ್‌ ರೂಮ್‌ ವಿನ್ಯಾಸಕ್ಕೆ ಕೆಲವು ಚಾಲನೆಗಳನ್ನು ನೀಡಲೇಬೇಕು. ಮಲಗುವ ಕೋಣೆಯ ಕಿಟಕಿಗಳ ಸ್ವರೂಪ, ಬಾಗಿಲು, ಕನ್ನಡಿಗಳ ಹೊಂದಾಣಿಕೆಯಲ್ಲಿ, ಗೋಡೆಗಳ ಬಣ್ಣ, ಅಲಂಕಾರಕ್ಕಾಗಿ ಇರಿಸಲ್ಪಟ್ಟ ಚಿತ್ರಗಳು, ಅಂದ ಹೆಚ್ಚಿಸುವ ಕೆತ್ತನೆಗಳಲ್ಲಿ ಯಾವಾ ಯಾವ ಚಿತ್ರಗಳು ಮೂಡಿವೆ ಎಂಬಿತ್ಯಾದಿ ಅಂಶಗಳತ್ತ ಗಮನಹರಿಸಿ. ಮಲಗುವ ಕೋಣೆಯಲ್ಲೇ ದೇವರ ಪೀಠ, ಪೂಜಾ ಸ್ಥಳ ಒಳಗೊಳ್ಳಕೂಡದು.

ಕಸ, ತ್ಯಾಜ್ಯಗಳು ಬೆಡ್‌ರೂಮಿನಲ್ಲಿ ಪೇರಿಸಲ್ಪಡುವ ಅಂಶವನ್ನ ಸರಿಪಡಿಸಿ. ನಿಮ್ಮ ಜನ್ಮ ಕುಂಡಲಿಯ ಆಧಾರದಲ್ಲಿ ಬಹು ಮುಖ್ಯವಾದ ವರ್ಣಗಳನ್ನು ಗೋಡೆಯ ಬಣ್ಣಗಳ ವಿಷಯದಲ್ಲಿ ಆಯ್ಕೆ ಮಾಡಿಕೊಳ್ಳಿ. ಜೀವನದ ಸುಗಮತೆಗೂ, ಹಗಲಿನ ಆಕಾಶದ ನೀಲ ಛಾಯೆಗೂ ಒಂದು ಸುಸಂಬದ್ಧ ಹೊಂದಾಣಿಕೆ ಇರುವುದರಿಂದ ಆಕಾಶ ನೀಲಿಯು ಮಲಗುವ ಕೋಣೆಗೆ ಸೂಕ್ತವಾದ ಬಣ್ಣ ಬಹುತೇಕವಾಗಿ ಮನುಷ್ಯನ ಮನಸ್ಸಿನ ಮೂಲೆಯ ಬುದ್ಧಿ ಚೇತನವನ್ನು ಸ್ಪಂದಿಸಲಾರದು ಕಪ್ಪು ಬಣ್ಣವನ್ನು ಮಲಗುವ ಮಂಚದೆದುರಿಗೆ ದೃಷ್ಟಿಗೆ ಬೀಳುವಂತೆ ಇರದಿರುವಂತೆ ನೋಡಿಕೊಳ್ಳಿ.

ಕಿಟಕಿಗಳನ್ನು ತೆರೆದಾಗ, ಮುಚ್ಚಿದಾಗ ಯಾವ ಕಾಲದಲ್ಲಿ ಯಾವುದು ಸೂಕ್ತ ಎಂಬುದನ್ನರಿತು. ಎಷ್ಟೆಷ್ಟು ಹೊರಗಿನ ಗಾಳಿ ಒಳಗೆ ಬರುತ್ತಿರಬೇಕು ಎಂಬುದನ್ನು ನಿರ್ಧರಿಸಿ. ಆ ರೀತಿಯಲ್ಲಿ ಕಿಟಕಿಗಳನ್ನು ತೆರೆಯುವ, ಮುಚ್ಚುವ ವ್ಯವಸ್ಥೆ ಇರಲಿ. ಗಾಳಿ ಜೋರಾಗಿ ಬಂದಾಗ ಡಬ್‌ ಎಂದು ಕಿಟಿಕಿಗಳು ಬಡಿದು ಕೊಳ್ಳುವಂತೆ ಇರಲಿ. ಕಿಟಕಿಗಳಿಗೆ ಉಜ್ಜಿದ ಹುರುಬುರುಕು ಗಾಜು ಇರಲಿ. ಪೂರ್ತಿ ಪಾರದರ್ಶಕವಾದ ಗಾಜುಗಳು ಬೇಡ. ನೀಲಿ, ಕೇಸರಿ, ಚಾಕಲೇಟ್‌, ಹಸಿರು ಬಣ್ಣಗಳ
ಚಿತ್ತಾರದ ಡೊಂಕು ಗೆರೆಗಳು ಗಾಜುಗಳ ಮೇಲೆ ಉಬ್ಬಿದ ಸ್ವರೂಪದಲ್ಲಿ ಮೂಡಿರುವುದು ಸೂಕ್ತ.

ಪ್ರಖರ ಬೆಳಕು ರಾಚದಿರಲಿ ಬೆಡ್‌ರೂಮಿನಲ್ಲಿ. ಮಂದ ಸ್ವರೂಪದಿಂದ, ಓದಲು ಖುಷಿ ಇರುವಷ್ಟೇ ಬೆಳಕಿದ್ದರೆ ಉತ್ತಮ. ಮಲಗುವ ಮಂಚದ ನೇರ ಎತ್ತರಕ್ಕೆ ದೀಪದ ಗೊಂಚಲು ತೂಗಿಕೊಂಡಿರುವುದು ಬೇಡ. ಭಾರವಾದ ಕಬ್ಬಿಣದ ತೊಲೆಗಳು ಮಲಗುವ ಸ್ಥಳದ ನೇರಕ್ಕೆ ಛಾವಣಿಗೆ ಬೇಡ. ಹಾಗೆಯೇ ತಲೆ ದಿಂಬುಗಳ ಕಡೆಗೆ ಒರಟು ವಸ್ತುಗಳನ್ನು ಇಡಬೇಡಿ. ಮಂಚದ ಅವಶ್ಯಕತೆ ಮಲಗುವುದಕ್ಕೆ ಮಾತ್ರ ಸೀಮಿತವಿರಲಿ. ಎಲ್ಲಾ ದಿಕ್ಕುಗಳಿಂದ ಮಂಚವನ್ನು ತಲುಪುವ ಹಾಗೆ ಅಂತರ ಇರಲಿ. ಒಂದು ಕಡೆ ಇಳಿ ಜಾರಿರುವಂತೆ ಮಲಗುವ ಕೋಣೆಯ ಛಾವಣಿಯ ವಿನ್ಯಾಸವನ್ನು ರೂಪಿಸಬೇಡಿ. ತಲೆಯ ಕಡೆಯಿಂದ ತುಸು ದೂರಕ್ಕೆ ಇಳಿ ಬಿಟ್ಟ ಫ್ಯಾನ್‌ಗಳಿರಲಿ. ಕಿಟಕಿಗಳ ಒಮ್ಮೆಗೇ ತೀರಾ ಹತ್ತಿರಕ್ಕೆ
ಮಲಗುವ ಮಂಚ ಇರದಿರಲಿ. ಅಂತೂ ಮಲಗುವ ರೂಮು ನಿಮ್ಮ ದಿವ್ಯವಾದ ದಿನವೊಂದನ್ನು ಮುಗಿಸಿ ಮಗದೊಂದು ದಿವ್ಯತೆಯನ್ನು ಸ್ವಾಗತಿಸುವ ವರ್ತಮಾನಕ್ಕೆ ಹೊಂದಿಕೊಳ್ಳುವಂತೆ ಶುಚಿಯಾಗಿರಲಿ.


Friday, 26 January 2018

ಮನೆಯ ಸುತ್ತ ಪರಿಸರ

* ಮೇಲ್ಚಾವಣಿಯಿಂದ ಹರಿದು ಬರುವ ನೀರು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಿಂದ ಹರಿದುಹೋಗುವಂತೆ ನೋಡಿಕೊಳ್ಳಬೇಕು.

* ಮನೆಯ ಪೂರ್ವ ಅಧವಾ ಉತ್ತರ ಭಾಗದಲ್ಲಿ ದೊಡ್ಡ ಮರಗಳನ್ನು ಬೆಳೆಸಬಾರದು.

* ಓದುವಾಗ ನಿಮ್ಮ ಮುಖ ಪೂರ್ವದ ಕಡೆಗೆ ಮುಖಮಾಡಿರಲಿ

* ಮಲಗಿಕೊಂಡಾಗ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಬೇಡಿ.

Thursday, 25 January 2018

ಉತ್ತರ ದಿಕ್ಕಿನಲ್ಲಿ ತಲೆ ಇರಿಸಬೇಡಿ

1,ಅಡುಗೆ ಮಾಡುವಾಗ, ಆಹಾರ ಸೇವಿಸುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕಿನಲ್ಲಿ ಕುಳಿತು ಕೊಳ್ಳಲೇಬಾರದು. ಆಹಾರವು ಸರಿಯಾಗಿ ಪಚನಗೊಂಡು ಉತ್ತಮ ಆರೋಗ್ಯ ಲಭಿಸಬೇಕಾದರೆ ಪೂರ್ವ ದಿಕ್ಕಿಗೆ ಮುಖಮಾಡಿ ಸೇವಿಸಬೇಕು.

2.ಆರೋಗ್ಯ ಮತ್ತು ಸಂತೋಷವನ್ನು ಗಳಿಸಲು ಕೊಠಡಿಯ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿರಿ.ಒಂದೇ ರೀತಿಯ ಬಣ್ಣಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.

3.ಹಾಸಿಗೆಯ ಮುಂಭಾಗದಲ್ಲಿ ಕನ್ನಡಿಯನ್ನು ಇರಿಸುವುದು ಬೇಡ, ಅಥವಾ ಇದ್ದರೆ ಅವುಗಳನ್ನು ಮುಚ್ಚಿ ದುಸ್ವಪ್ನಗಳಿಂದ ಮುಕ್ತಿ ಪಡೆಯಿರಿ.

4.ಮಲಗುವಾಗ ತಲೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಲೇ ಬಾರದು. ಸುಖನಿದ್ದೆಗಾಗಿ ದಕ್ಷಿಣ ಅಥವಾ ಪೂರ್ವಭಾಗಗಳನ್ನು ಆರಿಸುವುದು ಉತ್ತಮ.

5.ತುಳಸಿಗಿಡವನ್ನು ಈಶಾನ್ಯ ಭಾಗದಲ್ಲಿ ನೆಡುವುದರಿಂದ ವಾಯು ಶುದ್ಧೀಕರಿಸಲು ಸಹಾಯಕವಾಗುತ್ತದೆ.

6.ಗರ್ಭಿಣಿಯರು ಈಶಾನ್ಯ ಭಾಗದಲ್ಲಿರುವ ಕೊಠಡಿಯನ್ನು ಮಲಗಲು ಉಪಯೋಗಿಸದಿರುವುದು ಒಳ್ಳೆಯದು, ಇದರಿಂದಾಗಿ ಗರ್ಭ ಸ್ರಾವ, ಗರ್ಭಛಿದ್ರ ಮೊದಲಾದ ಅಪಾಯಗಳಿಂದ ರಕ್ಷಣೆಯನ್ನು ಪಡೆಯಬಹುದು.

7.ಕಬ್ಬಿಣದಿಂದ ಅಥವಾ ಇನ್ನಾವುದೇ ಲೋಹದಿಂದ ಮಾಡಿದ ಹಾಸಿಗೆಯನ್ನು ಬಳಸದಿದ್ದರೆ ಉತ್ತಮ, ಯಾಕೆಂದರೆ ಇಂತವುಗಳು ಹೃದಯ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ.

8.ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕೆಲಸ ಮಾಡುವುದು ಅಥವಾ ಓದು ಬರಹವನ್ನು ಅಭ್ಯಸಿಸುತ್ತಿದ್ದರೆ ಕಾಂತೀಯ ಬಲವು ಇಲ್ಲಿ ಪ್ರಬಲವಾಗಿದ್ದು ಇದರಿಂದಾಗಿ ಉತ್ತಮ ಗ್ರಹಿಸುವಿಕೆ ದೊರೆತು ಮತ್ತು ಸ್ಮರಣ ಶಕ್ತಿ ಹೆಚ್ಚುವುದು.

9.ಮಲಗುವ ಕೋಣೆಯಲ್ಲಿರಿಸಿದ ಟಿ.ವಿ ಅಥವಾ ಕಂಪ್ಯೂಟರ್‌ನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಇಂತಹ ಉಪಕರಣಗಳಿಂದ ಹೊರ ಸೂಸುವ ವಿಕಿರಣಗಳು ಕೋಣೆಯ ಚೈತನ್ಯವನ್ನು ಕಡಿಮೆ ಮಾಡಿ ಅಸ್ವಸ್ತತೆಗೆ ಎಡೆ ಮಾಡುವ ಸಾಧ್ಯತೆ ಕಂಡುಬರುತ್ತದೆ.

10. ಮನೆಯ ನೈಋತ್ಯ ಭಾಗದಲ್ಲಿರುವ ಕಿಟಕಿಗಳನ್ನು ತೆರೆದಿಡುವ ಬದಲಾಗಿ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರುವ ಕಿಟಕಿಗಳನ್ನು ತೆರೆದಿಟ್ಟರೆ ಉತ್ತಮ ಆರೋಗ್ಯ ಮತ್ತು ಕುಟುಂಬದಲ್ಲಿ ಏಕತೆ ನೆಲೆಗೊಳ್ಳುತ್ತದೆ.

Wednesday, 24 January 2018

ಮನೆಯಲ್ಲಿ ಜಗಳ, ಅಶಾಂತಿಗೆ ಈ ವಾಸ್ತು ಕಾರಣವೇ?

ವಾಸ್ತು ವಿಚಾರದಲ್ಲಿ ಜನರು ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಜನರು ಯಾವಾಗಲೂ ದಿಢೀರಾದ ಬದಲಾವಣೆಯ ಕುರಿತು ಅವಸರದಲ್ಲಿರುತ್ತಾರೆ. ಹೀಗಾಗಿ ತಾವು ಏನು ಬೇಕಾದರು ಮಾಡಲು ಸಿದ್ಧ ಎಂದು ಸಿದ್ಧರಾಗಿರುತ್ತಾರೆ. ಸಾಲ ಮಾಡಿಯಾದರೂ ಸರಿ ನಿವಾರಣೆಗಾಗಿನ ಕ್ರಮಗಳನ್ನು ಕೈಗೊಳ್ಳಲು ಪರಿಹಾರಕ್ಕಾಗಿನ ಅವಸರ ತೋರುತ್ತಾರೆ. ಇಷ್ಟೆಲ್ಲಾ ಅವಸರದಲ್ಲಿ ನಿರ್ಣಯ ಕೈಗೊಳ್ಳುವುದು ಇನ್ನೊಂದು ರೀತಿಯ ತೊಂದರೆಗೆ ಕಾರಣವಾಗುತ್ತದೆ.  ದಿಢೀರಾಗಿ ಸಮಸ್ಯೆ ಕರಗಿಹೋಗಲಾರದು. ಕರಗಿ ಹೋಗುವುದಕ್ಕಾಗಿ ಪ್ರಯತ್ನ ಇರಲಿ. ಆದರೆ ಅವಸರ ಬೇಡ.

ಈಗ ಕಾಲದ ರೀತಿನೀತಿ ಬದಲಾಗಿದೆ ಎಂಬುದನ್ನು ಗಮನಿಸಬೇಕು. ಮನೆಯ ವಾಸ್ತು ಬದಲಾವಣೆಯ ವಿಚಾರ ಅಥವಾ ವಾಸ್ತುವಿನ ಉತ್ತಮವಾದ ಸಂಯೋಜನೆಯ ಆವಿಷ್ಕಾರಗಳ ಮೇಲಿಂದ ಒಳಿತು ಹಾಗೂ ಕೆಡಕುಗಳ ನಿರ್ಣಯ ಬೇರೆ. ಆದರೆ ಬದಲಾದ ಕಾಲ ನಡೆಸಿರುವ ಆಘಾತಗಳನ್ನು ವೈಯುಕ್ತಿಕ ನೆಲೆಯಲ್ಲಿ ತಾರ್ಕಿಕವಾಗಿ ಯೋಚಿಸಿ ಸೂಕ್ತ ಅಥವಾ ಸೂಕ್ತವಲ್ಲ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಕುಟುಂಬದ ವ್ಯಾಖ್ಯೆ ಬದಲಾಗಿದೆ. ಸಂಕೀರ್ಣವಾಗಿದೆ. ಹೆಣ್ಣುಮಕ್ಕಳು ಮನೆಯಲ್ಲಿಯೇ ಇದ್ದು ಗೃಹಸೂತ್ರಗಳನ್ನು ಪಾಲನ ಪೋಷಣೆಯ ಕೋಷ್ಟಕಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದ ಕಾಲ ಬದಲಾಗಿದೆ. ಈಗ ವಾಸ್ತು ಶಿಸ್ತು ಮನೆಗೆ ಬೇಕೇ ? ಏಕೆಂಬುದನ್ನು ಅಲ್ಲಗೆಳೆಯಲಾಗದು.
ಆದರೆ ವಾಸ್ತು ಶಿಸ್ತಿನ ಜೊತೆಗೆ ನಮ್ಮ ನಮ್ಮ ಸುತ್ತವೇ ವೈಯುಕ್ತಿಕವಾಗಿ ಪ್ರತಿಯೋರ್ವನಲ್ಲೂ ಒಂದು ಪ್ರಭಾವಲಯದ ಕಾಂತಿ ಇರುತ್ತದೆ. ಪುರುಷನಿಗೂ ಮಳೆಗೂ ನಡುವಣ ಇರುವ ಪ್ರಭಾವಳಿಯ ಸೇತು ಮತ್ತೂಂದು ರೀತಿಯದು. ಸ್ವೇಚ್ಛೆಯು ಯಾರಿಗೂ ಸರಿಯಲ್ಲ. ಸ್ವೇಚ್ಛೆಯ ಪರಿಣಾಮದಿಂದ ನಾವು ನಮ್ಮ ಸುತ್ತಲಿನ ಪ್ರಭಾವಳಿಯನ್ನು ಕಾಂತಿವಲಯವನ್ನೂ ಬಲಿಕೊಡುತ್ತಾ ಬಾಳ ಪಯಣದಲ್ಲಿ ಸೋಲುತ್ತ ಹೋಗುತ್ತೇವೆ. ನಿಮ್ಮ ಪ್ರಭಾವಲಯವನ್ನು ನಮ್ಮ ವರ್ಚಸ್ಸು ನೈತಿಕ ಶಕ್ತಿಯ ಮೂಲಕ ಸಂರಕ್ಷಿಸಿಕೊಂಡಾಗ ಮನೆಯ ಶಾಂತಿ ಒಂದೊಮ್ಮೆಗೇ ಧಕ್ಕೆ ಬರಲಾರದು. ನಮ್ಮ ದೇಹದಲ್ಲಿ ಷಟcಕ್ರಗಳು ವಿವಿಧ ನೆಲೆಯಲ್ಲಿ ತಂತಮ್ಮ ಜಾಗ್ರತಾವಸ್ಥೆ ಪಡೆದುಕೊಳ್ಳಲು ಸಾಧ್ಯವಾದಾಗ ನಮ್ಮಲ್ಲಿಯೇ ಎಲ್ಲವನ್ನೂ ನಿಯಂತ್ರಿಸುವ ಚೈತನ್ಯ ಒದಗಿ ಬರುತ್ತದೆ.

ದಿವ್ಯದ ಸಾûಾತ್ಕಾರಕ್ಕೂ ಅವಕಾಶ ಇರುತ್ತದೆ. ಇತ್ತೀಚೆಗೆ ಮಲೆನಾಡಿನ ಒಂದು ಊರಿಗೆ ಹೋಗಿದ್ದಾಗಿನ ವಿಷಯ ವಿವರಿಸಲು ಯತ್ನಿಸುತ್ತಿದ್ದೇನೆ. ಅಲ್ಲಿ ತುಂಬಿ ತುಳುಕುವ ಶ್ರೀಮಂತಿಕೆ ಇದೆ. ಏನೂ ತೊಂದರೆ ಇರಲಾರದು ಶ್ರೀಮಂತರಿಗೆ ಎಂಬ ವಿಚಾರ ಸುಳ್ಳು ಎಂಬುದಕ್ಕೆ ಉದಾಹರಣೆಯಾಗಿ ಈ ಮನೆಯನ್ನು ಉದಾಹರಿಸಬಹುದು. ಇಲ್ಲಿ ಜಗಳಗಳಿಲ್ಲ. ಆದರೆ ಮನೆಯಲ್ಲಿನ ಶಾಂತಿ ಮಾತ್ರ ಕದಡಲ್ಪಟ್ಟಿದೆ. ಜಗಳಗಳಿರದೆಯೂ ಶಾಂತಿ ಇಲ್ಲವಾಗಿದೆ. ಕೋಟಿ ಲೆಕ್ಕವೇ ಇಲ್ಲ. ನೂರಾರು ಕೋಟಿಯ ಆಸ್ತಿ ಇದೆ.
ಅದ್ಭುತವಾದ ಮನೆ. ನೂರಾರು ಆಳುಕಾಳುಗಳು. ಆದರೆ ಮನಃಶಾಂತಿ ಇಲ್ಲ. ಏನು ಕಾರಣ? ವಾಸ್ತುವನ್ನು ಪರೀಕ್ಷಿಸಿ ಹೇಳುತ್ತೀರಾ? ಎಂದು ಮನೆಯ ಯಜಮಾನರು ವಿನಂತಿಸಿದರು. ಒಬ್ಬ ಕೋಟಿಗಳಷ್ಟು ಆಸ್ತಿಗಳ ಒಡೆಯ ಕೈ ಜೋಡಿಸಿ ವಾಸ್ತು ಪರೀಕ್ಷಿಸುತ್ತೀರಾ ಎಂದು ಅಳುಕುತ್ತಾ ಕೇಳಿದಾಗ ಕೆಲ ಲಕ್ಷಗಳ ವಿಚಾರ ಇರಲಿ ಕೆಲವು ಸಾವಿರಗಳಷ್ಟು ಹಣ ಓಡಾಡುವ ಒಬ್ಬ ಸಾಮಾನ್ಯನನ್ನಂಥವನ ಬಳಿ ವಿನಂತಿಸಿದಾಗ ನಿಜಕ್ಕೂ ನನ್ನ ಕಣ್ಣುಗಳು ಒದ್ದೆಯಾದವು. ಅವರ ಮನೆಯನ್ನು ಪರೀಕ್ಷಿಸಿದೆ. ಮನೆಯ ವಾಸ್ತು ವಿಚಾರದಲ್ಲಿ ಯಾವ ತೊಂದರೆಗಳು ಇಲ್ಲ. ಆದರೂ ತೊಂದರೆಗಳು ಧಾರಾಳವಾಗಿದ್ದವು. ಈ ತೊಂದರೆ ಬೇರೆ.

ಮಗನು ಅಶಾಂತಿಯಲ್ಲಿದ್ದಾನೆ. ಯಾವ ತೊಂದರೆಯೂ ಇಲ್ಲ. ಸೊಸೆಯ ಜೊತೆ ಅತ್ತೆ ಮಾವ ಚೆನ್ನಾಗಿ ಹೊಂದಿಕೊಂಡೇ ಇದ್ದರು. ಆದರೆ ಮಗನಿಗೆ ಮತ್ತು ಸೊಸೆಗೆ ಸದಾ ಕಾದಾಟ, ಕಿರಿಕಿರಿಗಳು. ಹಿಂದಿನ ಕಾಲದಲ್ಲಿ ಮದುವೆಯ ಸಂದರ್ಭದಲ್ಲಿ ನವ ವಧೂವರರನ್ನು ಅಲಂಕರಿಸಿದ ಮೇನೆಯಲ್ಲಿ ಕೂಡಿಸಿ ಊರ ಬೀದಿಗಳಲ್ಲಿ ಓಲಗ, ವಾದ್ಯ, ಸಂಗೀತ ಸಲಕರಣೆಗಳೊಂದಿಗೆ ಸುತ್ತು ಹಾಕಿಕೊಂಡು ಬರುವ ಕ್ರಮವಿತ್ತು.  ಈ ಕೋಟಿ ಕೋಟಿ ಆಸ್ತಿಯ ಒಡೆಯರ ಮನೆಯಲ್ಲಿ ಗತಕಾಲದ ಮೇನೆ ಈಗಲೂ ಇದೆ. ಆದರೆ ಅದನ್ನು ಒಂದೆಡೆ ಮುರಿದು ಸೂಕ್ತವಲ್ಲದ ಕೋಣೆಯಲ್ಲಿ ಅಂದರೆ ಅಲಂಕಾರಿಕವಾಗಿ ಕಾಣುವಂತೆ ಅಂದವಾಗಿಯೇ ಕಾಣುವಂತೆ ಇರಿಸಿದ್ದಾರೆ. ಮುರಿದ ಪಲ್ಲಕ್ಕಿಯಂತೆ ಇವರ ವೈವಾಹಿಕ ಜೀವನವೂ ಮುರಿಯುತ್ತಿದೆ. ಆದರೆ ಇದೊಂದೇ ಕಾರಣವಲ್ಲ. ಅಶಾಂತಿಗೆ ಇನ್ನಷ್ಟು ಕಾರಣಗಳಿವೆ. ಆದರೆ ಇದನ್ನು ಕಾರಣವಲ್ಲ ಎಂದು ತೆಗೆದು ಹಾಕುವಂತಿಲ್ಲ.


Monday, 22 January 2018

ಈಶಾನ್ಯದಿಕ್ಕಿನಲ್ಲಿ ಅಗಲ ಕಿಟಕಿ, ಬಾಗಿಲುಗಳಿಂದ ಸಮೃದ್ಧಿ

ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮ‌ೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಗಲೇ ವಾಸ್ತುಶಾಸ್ತ್ರದ ಫಲವನ್ನು ನಾವು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇವೆ.

ಭೂಮಿಯ ಯಾವುದೇ ಸ್ಥಳದಲ್ಲಿ ವಿವಿಧ ಶಕ್ತಿ ಕ್ಷೇತ್ರಗಳು ಪರಸ್ಪರ ಸಂಧಿಸುತ್ತವೆ ಮತ್ತು ಛೇದಿಸುತ್ತವೆ. ಸಣ್ಣ ನಿವೇಶನಕ್ಕೆ ಕೂಡ ಇದು ಅನ್ವಯವಾಗುತ್ತದೆ. ಕಾಸ್ಮಿಕ್ ಶಕ್ತಿಗಳಾದ ಆಯಸ್ಕಾಂತೀಯ ಶಕ್ತಿ ಭೂಶಕ್ತಿಗಳು ಭೂಮಿಯ ಮೇಲೆ ತನ್ನ ಪ್ರಭಾವ ಬೀರುತ್ತಿರುತ್ತದೆ. ಚೈತನ್ಯ ಮತ್ತು ಚೈತನ್ಯಹೀನತೆಯು ವಾಸ್ತುಶಾಸ್ತ್ರದಲ್ಲಿ ವಿವರಿಸಿರುವಂತೆ ಭೂಮಿಯ ಸೌರಶಕ್ತಿಯ ಮಾರ್ಗಗಳು ಮತ್ತು ಆಯಸ್ಕಾಂತೀಯ ಶಕ್ತಿಯ ಮಾರ್ಗಗಳನ್ನು ಅವಲಂಬಿಸಿದೆ.

ಬೆಳಗಿನ ಸೂರ್ಯಕಿರಣಗಳಲ್ಲಿ ವಿಪುಲ ಸಕಾರಾತ್ಮಕ ಶಕ್ತಿ ಸೂಸುತ್ತವೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿ. ಆದರೆ ಮಧ್ಯಾಹ್ನದ ಸೂರ್ಯಕಿರಣ ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿಯಲ್ಲ ಮತ್ತು ಸುಲಭವಾಗಿ ಆಯಾಸವಾಗುತ್ತದೆ. ಈಶಾನ್ಯ ದಿಕ್ಕಿನಿಂದ ವಾಸ್ತುಪುರುಷ ತನ್ನ ಉಸಿರನ್ನು ಎಳೆದುಕೊಳ್ಳುತ್ತಾನೆ. ಈಶಾನ್ಯ ದಿಕ್ಕಿನಿಂದ ನೀವು ಪಡೆಯುವ ಶಕ್ತಿಯನ್ನು ನೈರುತ್ಯ ದಿಕ್ಕಿನಲ್ಲಿ ಸಂಗ್ರಹಿಸಬೇಕು.

Saturday, 20 January 2018

ಜ್ಞಾನಕ್ಕೆ ಉತ್ತರ ದಿಕ್ಕು ಉತ್ತಮ

ಭಾರತೀಯ ಮೀಮಾಂಸೆಯು ಲೌಕಿಕವನ್ನು ಅಲೌಕಿಕವನ್ನು ಒಟ್ಟಂದದಲ್ಲಿ ಸಮಾನ ದೃಷ್ಟಿಯಲ್ಲೇ ನೋಡಿದೆ. ಬದುಕನ್ನು ಶೂನ್ಯ ಎನ್ನುವುದಿಲ್ಲ. ಭಾವನಾಮಯವಾದ ಜಗದ
ಯಾತ್ರೆಯಲ್ಲಿ ಅಧ್ಯಾತ್ಮವನ್ನು ಬೆರೆಸಿಕೊಂಡು ನಿನ್ನೊಳಗೇ ಪರಮಾತ್ಮನನ್ನು ಹುಡುಕು ಎಂದೂ ಹೇಳುತ್ತದೆ. ನಿನ್ನಿಂದ ಅನ್ಯನಾದ ಪರಮಾತ್ಮನಲ್ಲಿ ಶರಣಾಗುವ ವಿನಯವನ್ನು ತೋರು ಎಂದು ಬೋಧಿಸುತ್ತದೆ. ಮಂಗಳಮಯನಾಗಿ ಮಂಗಳಪ್ರದನನಾದವನ್ನು ಹುಡುಕಿಕೊಂಡಿರು ಎಂದು ಬೋಧಿಸುತ್ತದೆ. ಒಂದು ಎಲೆಯ ಹಸಿರು ಉದುರಿ ಬೀಳುವ ಮುನ್ನ ಅಕಸ್ಮಾತ್ತಾಗಿ ಹಸುವಿನ ಆಹಾರವಾಗಿಯೂ ಮಾಯವಾಗಿಬಿಡಬಹುದು. ಹೀಗಾಗಿ ಒಂದು ಗೊಂದಲ ಇದೇ ಇರುತ್ತದೆ. ಯಾವುದು ತನ್ನ ಕಾರ್ಯವನ್ನು ಪೂರ್ತಿ ಮುಗಿಸಿ ಉದುರುತ್ತದೆ. ಮುಗಿಸುವ ಮುನ್ನವೇ ಯಾವುದು ಮರೆಯಾಗುತ್ತದೆ ಎಂಬ ಗೊಂದಲಕ್ಕೆ ಉತ್ತರವಿಲ್ಲ. ಇದನ್ನು ಅದೃಷ್ಟ ಎಂದು ಕರೆದರು. ಅದೃಷ್ಟದ ಬೇರುಗಳು ಅಧ್ಯಾತ್ಮದ ಚಿಂತನೆಯಿಂದಲೇ ಕೆಲವಷ್ಟು ಉತ್ತರಗಳನ್ನು ತಡೆಯಬಹುದು. ಜಾnನದಿಂದಾಗಿ ಆಧ್ಯಾತ್ಮದ ಬತ್ತಿಗೆ ಬೆಳಕಿನ ಸೌಭಾಗ್ಯ ಒದಗಿಬರಬಹುದು. ಬೆಳಕು ಕತ್ತಲನ್ನು ಹೊಡೆದೋಡಿಸುತ್ತದೆ. ಆದರೆ ಕತ್ತಲು ಏಕೆ? ಹೇಗೆ? ಎಲ್ಲಿಂದ ಬಂತು. ಬೆಳಕು ಕತ್ತಲಿಗೆ ಪ್ರತಿರೋಧ ತರುವ ತನ್ನ ಹುಟ್ಟನ್ನು ಹೇಗೆ ಕಂಡುಕೊಂಡಿತು ಹೀಗೆ ಆಳವಾಗಿ ಇಳಿಯುತ್ತ ಹೊರಟರೆ ಎಲ್ಲವೂ ಮತ್ತೆ ಪ್ರಶ್ನೆಗಳೆ.

ಉತ್ತರಗಳನ್ನು ಕೆಲವುಸಲ ನೀಡಬಹುದೇ ವಿನಾ ಪ್ರತಿಯೊಂದಕ್ಕೂ ಉತ್ತರವಿಲ್ಲ ಹೀಗಾಗಿ ಅದೃಷ್ಟವನ್ನು ಮನಗಾಣಲೇ ಬೇಕು. ಏನೋ ಒಂದು ನಮ್ಮನ್ನು ಮೀರಿ ಇದೆಯೆಂಬುದು ನಂಬಬೇಕು. ದಾಡ್ಯìತೆ ಇದ್ದರೆ ನಂಬದೆ ಇರಿ. ಪ್ರಧಾನವಾಗಿ ಮನೆಯಲ್ಲಿ ಮನಸ್ಸು ಕಂಡ
ರೀತಿಯಲ್ಲಿ ದೇವರುಗಳನ್ನು, ದೇವರುಗಳ ಪಟವನ್ನು ಇಡಬೇಡಿ. ದೇವರು ಎನ್ನುವುದು ನಮ್ಮನ್ನು ಒಂದು ಶಕ್ತಿಯ ಎದುರು ಬಾಗುವ ವಿನಯಕ್ಕಾಗಿ ಇರಬೇಕಾದದ್ದು. ಕುಳಿತಲ್ಲಿ, ನಿಂತಲ್ಲಿ, ಕಂಡಕಂಡಲ್ಲಿ ದೇವರನ್ನು ಪ್ರತಿಷ್ಠಾಪಿಸುತ್ತಾ ಹೋದರೆ ತುಂಬಾ ಅಪಾಯಕರವಾದ ರೀತಿಯಲ್ಲಿ ನೀವು ಕರಗಿಹೋಗುತ್ತೀರಿ. ಬೌದ್ಧಿಕ ವಿಕಸನಕ್ಕೆ  ಅಡೆತಡೆ ಉಂಟಾಗುತ್ತದೆ. ಜಾnನವನ್ನು ವಿಸ್ತರಿಸಿಕೊಳ್ಳಿ. ದೇವರನ್ನು ವಿಸ್ತರಿಸಿಕೊಳ್ಳಲು ಮುಂದಾಗದಿರಿ. ದೇವರು ನಿಮ್ಮಿಂದ ವಿಸ್ತಾರಗೊಳ್ಳಬೇಕಾಗಿಲ್ಲ. ಜಾnನದಿಂದ ಹೊಸಹೊಸ ಹೊಳಹುಗಳು ಸಿಗುತ್ತವೆ. ಜೀವನವನ್ನು ಸರಳವಾಗಿಸಿಕೊಳ್ಳಲಿಕ್ಕೆ ನಾಗರೀಕತೆಯ ಸಂಪನ್ನತೆಗೆ ವೃದ್ಧಿ ತರುತ್ತದೆ.

ಈಶಾನ್ಯ ದಿಕ್ಕು ಜಾnನಕ್ಕೆ ಹಾಗೂ ಓದು ಕಲಿಕೆಗಳಿಗೆ ತನ್ನನ್ನು ಸಮೃದ್ಧಿಯ ವೇದಿಕೆಯನ್ನಾಗಿ ರೂಪಿಸುವ ಸಿದ್ಧಿ ಪಡೆದಿದೆ. ಮಣ್ಣು ಇದರ ಮೂಲ ವಸ್ತು. ಪ್ರತಿದಿಕ್ಕುಗಳಲ್ಲೂ ಮೂಲವಸ್ತು ಮಣ್ಣೇ ಇದ್ದರೂ ಬೆಂಕಿತತ್ವ, ವಾಯುತತ್ವ, ಜಲತತ್ವಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಸ್ವಾಮ್ಯವನ್ನು ಮೆರೆಯುತ್ತದೆ. ಅಲ್ಲಿ ಈಶಾನ್ಯ ದಿಕ್ಕಿನಲ್ಲಿ ಚಿಂತನೆಗೆ ಅಧ್ಯಯನಕ್ಕೆ ದೈವ ಸಂಬಂಧಿ ಅನುಷ್ಠಾನಗಳಿಗೆ ಸೂಕ್ತವಾಗಿದೆ. ನೀರು, ಬೆಂಕಿ ಅಥವಾ ಗಾಳಿಯ ಪ್ರಕ್ಷುಬ್ಧತೆಗಳಿಗೆ ಈ ದಿಕ್ಕಿನಲ್ಲಿ ಅವಕಾಶ ಇರುವುದಿಲ್ಲ. ಆನೆಯ ಚಿಕ್ಕ ಶಿಲ್ಪವೊಂದು ಇದ್ದರೆ ಈಶಾನ್ಯ ದಿಕ್ಕಿನಲ್ಲಿ ಮಕ್ಕಳು ಅಭ್ಯಾಸ ಅಧ್ಯಯನ ನಡೆಸಬಹುದು.
ಆನೆಯು ಬೃಹತ್‌ ನಿಲುವು ಗಟ್ಟಿ ಬಲವುಳ್ಳ ಪ್ರಾಣಿ ಎಂಬ ನಂಬಿಕೆ ಮಕ್ಕಳಲ್ಲಿ ಒಂದು ಸುರಕ್ಷಿತ ವಲಯವನ್ನು ಪ್ರಜ್ಞೆಯ ಪರಿಧಿಯಲ್ಲಿ ನಿರ್ಮಿಸುತ್ತದೆ. ಎಲ್ಲವನ್ನೂ ತಿಳಿದ ವ್ಯಾಸ ಮಹರ್ಷಿಗಳು ಆನೆಯ ಮುಖದ ಗಣಪನಿಂದಲೇ ಮಹಾಭಾರತದ ಮಹಾಕಾವ್ಯದ ರಚನೆಯನ್ನು ಮಾಡಿಸಿದರು. ಕಥೆಯ ಪ್ರಕಾರ ಉತ್ತರ ದಿಕ್ಕಿಗೆ ತಲೆಇಟ್ಟು ಮಲಗಿದವರ ತಲೆ ಕತ್ತರಿಸಿ ತಂದುಕೊಡಿ ಎಂದು ಶಿವನು ಪ್ರಲಾಪಿಸಿದ ಕತೆ ಎಲ್ಲರಿಗೂ ತಿಳಿದಿದ್ದೆ. ಉತ್ತರ ದಿಕ್ಕಿಗೆ ಮಲಗಿದ ಒಂದು ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಲಾಯ್ತು.

ಜಾnನಕ್ಕೆ ಹೀಗಾಗಿ ಉತ್ತರ ದಿಕ್ಕು ಉತ್ತಮ. ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು. ಅಂದರೆ ಚಿಂತನೆಯ ಸಂವರ್ಧನೆಗೆ ಎಚ್ಚರವಾಗಿದ್ದಾಗ ಉತ್ತರದಿಕ್ಕು ಶ್ರೇಷ್ಠ. ಮಲಗಿರುವಾಗ ಬೌದ್ಧಿಕ ಚಿಂತನೆಗೆ ವೇದಿಕೆಯಾದ ತಲೆ ಉತ್ತರದಿಕ್ಕಿನಲ್ಲಿ ಸ್ಥಗಿತವಾಗಕೂಡದು. ಗಣಪತಿಯ ಆನೆಯ ಮುಖದ ಕಥೆಯನ್ನೇ ಒಂದು ಆಧಾರಗೊಳಿಸಬೇಕಾಗಿಲ್ಲ. ಇದೊಂದು ದಂತ ಕಥೆ ಇದ್ದರೂ ಉತ್ತರ ದಿಕ್ಕು ಜಾnನಕ್ಕೆ ಕುಂಭ ಎಂಬುದು ನಿಸ್ಸಂಶಯ. ಒಟ್ಟಿನಲ್ಲಿ ಪರರದೆ ಇಹವಲ್ಲ. ಇಹದ ಸಾûಾತ್ಕಾರಕ್ಕೆ ಪದಾರ್ಥಚಿಂತನೆಯ ಅವಶ್ಯಕತೆ ಇದೆ. ಹಿಡಿಯಲಾಗದ್ದನ್ನು ಹಿಡಿಯುವ ಅನನ್ಯತೆಗೆ ಜಾnನವೇ ಆಧಾರ. ಜಾnನವು ಶೂನ್ಯದಿಂದ ಬರಲಾರದು. ಅದು ಅವನ ಸಂಕಲ್ಪ, ಅದೃಷ್ಟ. ಅದೃಷ್ಠದ ಸಿದ್ಧಿಗಾಗಿ ಮನೆಯ ಈಶಾನ್ಯದ ಶಿಸ್ತು ಜಾರಿಗೆ, ಮಂಥನಕ್ಕೆ ದೊರಕಲಿ.


Friday, 19 January 2018

ವಾಸ್ತುವಿಗೂ, ಮನೆಯ ಸ್ವತ್ಛತೆಗೂ ಸಂಬಂಧ ಇದೆಯಾ?

ಮನೆಯ ಒಳಗಡೆಯ ಅಂದಚೆಂದ ಅಲಂಕಾರ ಪೇಂಟಿಂಗ್‌ ಉಪಕರಣಗಳ ಸೌಂದರ್ಯ ಎಲ್ಲಾ ಸರಿ. ಆದರೆ ಇವು ಒಂದು ಒಳ್ಳೆಯ ಮನೆಯನ್ನು ರೂಪಿಸಲಾರವು. ಒಳಗೆ ಕಾಪೆìಟ್‌ ಹಾಸು, ಆಧುನಿಕತೆಯಿಂದ ಸುಸಜ್ಜಿತಗೊಂಡ ಸಂಯೋಜನೆಗಳೆಲ್ಲಾ ಒಳಿತು ತರುವುದಾಗಿದ್ದರೆ ಅನೇಕಾನೇಕ ಕೋಟ್ಯಾಧಿಶರುಗಳಿಗೆ ಸುಖದ ವಿನಾ ದುಃಖ, ಒತ್ತಡ, ನಿರಾಶೆ, ಹಳಹಳಿಕೆಗಳೆಲ್ಲಾ ಇರುತ್ತಲೇ ಇರಲಿಲ್ಲ. ಹಾಗಾದರೆ ಮಾನಸಿಕ ಶಾಂತಿಗೆ ಯಾವುದು ಕಾರಣ. ಏನು? ಯಾವಾಗ? ಎಷ್ಟು? ಹೇಗೆ? ಯಾವೆಲ್ಲ ವಿಚಾರಗಳು ಯಾಕೆ ಮನಸ್ಸಿನ ಶಾಂತಿಗೆ ಒಳಿತನ್ನು ತರುತ್ತವೆ ಎಂಬುದು ಪ್ರಧಾನವಾದ ಅಂಶಗಳಾಗುತ್ತದೆ.

ನಿಜ, ಮನೆಯು ಸರಳವಾಗಿ ಗುಡಿಸಲೇ ಆಗಿದ್ದರೂ ಸರಿ ಸ್ವತ್ಛತೆಯ ದೃಷ್ಟಿಯಿಂದ ಎಲ್ಲವನ್ನೂ ಪರಿಶೀಲಿಸಬೇಕು. ಬೇಕಾದಲ್ಲಿ ವಸ್ತುಗಳನ್ನು ತುಂಬಿಡುವ ಎಸೆದುಬಿಡುವ ಪರಿಪಾಠ ಬೆಳೆಸಿಕೊಳ್ಳಲೇ ಬಾರದು. ಕಣ್ಣಮುಂದೇ ಇರಲಿ ಎಂದು ಇಟ್ಟರೂ ಕೂಡಾ ಯಾವುದೂ ಕಾರಣಕ್ಕೆ ಮುಖ್ಯವಾದೊಂದು ವಸ್ತು ಹಲವು ವಸ್ತುಗಳ ನಡುವೆ ಸಿಕ್ಕಿ ಎಲ್ಲೋ ಮಾಯವಾಗಿ ಬಿಡುತ್ತದೆ. ಎಲ್ಲಾ ಒಮ್ಮೆ ರಗಳೆ ಎಂದೆನಿಸಿದರೂ ಯಾವುದು ಬೇಕಾದ್ದು, ಯಾವುದು ಬೇಡದ್ದು ಎಂಬುದನ್ನು ಕೂಡಲೇ ತ್ಯಾಜ್ಯದ ಜೊತೆ ಕಳಿಸಿಬಿಡಿ. ಮನೆಯಿಂದ ದೂರಕ್ಕೆ ಒಯ್ಯಲ್ಪಡಲಿ.

ನೋಡಿ ನಮ್ಮ ಸ್ನೇಹಿತರೊಬ್ಬರ ಮನೆ ಒಳ್ಳೆಯ ಸ್ನೇಹಿತ ಮನೆತನ ದೊಡ್ಡದು ಆಸ್ತಿವಂತ ಸ್ಥಿತಿವಂತ. ಆದರೆ ಆಸ್ತಿಯ ವಿಚಾರದಲ್ಲಿ ಯುಕ್ತವಾದ ನಿಶ್ಚಿತ ಸಂಧಾನವನ್ನು ಮಾಡಿಕೊಳ್ಳಲು ದಾಯಾದಿಗಳು ಅವಕಾಶ ಕೊಡುತ್ತಿಲ್ಲ. ಒಂದು ವಿಸ್ತಾರವಾದ ಜಾಗೆಯನ್ನು ಬ್ಯಾಂಕ್‌ ಒಂದಕ್ಕೆ ಅನುಕೂಲಕರ ರೀತಿಯಲ್ಲಿ ಯುಕ್ತವಾಗಿ, ಸೂಕ್ತವಾಗಿ ಮಾಡಿಕೊಡುವ ಎಲ್ಲಾ ಅವಕಾಶ ಖರ್ಚುವೆಚ್ಚವನ್ನೂ ಈ ನಮ್ಮ ಗೆಳೆಯ ಪೂರೈಸಿದರು. ಪ್ರತಿತಿಂಗಳ ಬಾಡಿಗೆ ಅರವತ್ತು ಸಾವಿರ ಎಂಬುದೂ ನಿಶ್ಚಿತವಾಯ್ತು. ಅರವತ್ತು ಸಾವಿರದಲ್ಲಿ ಉತ್ತಮವಾದ ರೀತಿಯಲ್ಲಿ ಬದುಕಿ ಬಾಳೂವುದೆಂಬ ಕನಸನ್ನು ಗೆಳೆಯ ಕಾಣುತ್ತಲೇ ಇದ್ದ. ಆದರೆ ದಾಯಾದಿಗಳ ಜೊತೆಯಲ್ಲೇ ಎಲ್ಲಾ ವ್ಯಾವಹಾರಿಕ ವಹಿವಾಟಿಗಳೂ ನಡೆಯುತ್ತಿದ್ದವು.
ಎಲ್ಲರ ಮನೆಗಳು ಬೇರಾಗಿದ್ದರೂ ವಹಿವಾಟುಗಳು ಎಲ್ಲರ ಒಕ್ಕೂಟದ ಪಾಲುದಾರಿಕೆಯಲ್ಲಿತ್ತು. ಬ್ಯಾಂಕಿಗೆ ಎಂದು ರೂಪಿಸಿಕೊಟ್ಟ ಸ್ಥಳ ಮಾತಿನ ಪ್ರಕಾರ ಒಂದು ಪ್ರತ್ಯೇಕ ಖಾಲಿ ಕಾಗದದಲ್ಲಿ ಎಲ್ಲರೂ ಸಹಿ ಹಾಕಿಕೊಟ್ಟ ಆಧಾರದ ಪ್ರಕಾರ ನಮ್ಮ ಈ ಗೆಳೆಯನಿಗೆ ಸೇರುವಂತದಿತ್ತು.

ಹೀಗಾಗಿ ಆ ಎಲ್ಲಾ ಸಹಿ ಹಾಕಿದ ಗಟ್ಟಿ ಆಧಾರದ ಕಾಗದದ ಬಲದಿಂದಲೇ ಗೆಳೆಯ ಬ್ಯಾಂಕಿಗೆ ಅವಶ್ಯವಾದ ಮಾರ್ಪಾಟುಗಳನ್ನು ಒಟ್ಟೂ ಇಪ್ಪತ್ತೆ„ದು ಲಕ್ಷ ವೆಚ್ಚ ಮಾಡಿ ಹಸ್ತಾಂತರ ಮಾಡಿಕೊಟ್ಟ ಮೇಲೆ ದಾಯಾದಿಗಳು ಬರುವ ಬಾಡಿಗೆಗೆ ತಾವೂ ಪಾಲುದಾರರು ಎಂದು ಧ್ವನಿಗೂಡಿಸಿದರು. ಈ ನಮ್ಮ ಗೆಳೆಯ ದಾಯಾದಿಗಳು ಒಗ್ಗೂಡಿ ಇವನ ಸುಪರ್ದಿಗೆ ಎಂದು ನಿರ್ಣಯಕ್ಕೆ ಬಂದು ಸಹಿ ಹಾಕಿದ ಕಾಗದದ ಪ್ರತ್ಯೇಕ ಪತ್ರ ಈಗ ನಮ್ಮ ಗೆಳೆಯನಿಗೆ ಹುಡುಕಲಾಗುತ್ತಿಲ್ಲ. ಇಲ್ಲೇ ಇಟ್ಟಿದ್ದೆ. ಇವುಗಳ ನಡುವೆಯೇ ಇತ್ತು ಎಂದು ಹುಡುಕುತ್ತಲೇ ಇದ್ದಾನೆ. ಒಂದು ವರ್ಷದಿಂದ ಹುಡುಕುತ್ತಿದ್ದಾನೆ. ವೈಯುಕ್ತಿಕ ಹೆಸರಿನಲ್ಲಿ ಸಾಲ ಇದೆ. ಬಾಡಿಗೆಯನ್ನೀಗ ಎಲ್ಲರೂ ಒಟ್ಟುಗೂಡಿ ಪಡೆಯುತ್ತಿದ್ದಾರೆ. ನಮ್ಮ ಗೆಳೆಯನಿಗೆ ಬರೀ ಐದು ಸಾವಿರ ಸಿಗುತ್ತಿದೆ. ತುಂಬುವ ಬಡ್ಡಿಯೇ 25 ಸಾವಿರ ಇದೆ. ಬರುವ ಅರವತ್ತು ಸಾವಿರ ಬಾಡಿಗೆಯಲ್ಲಿ ಸಾಲಕ್ಕೆ 25 ಸಾವಿರ ಕಟ್ಟಿ ಉಳಿದ 35 ಸಾವಿರದಲ್ಲಿ ಜೀವನ ನಡೆಸುವ ಅವನ ಯೋಜನೆ ಕುಸಿದು ಬಿದ್ದಿದೆ. ಮನೆಯಲ್ಲಿ ಯುಕ್ತತೆ ಹಾಗೂ ಸೂಕ್ತ ಜೋಡಣೆ ಸಾಧ್ಯವಾಗದಿದ್ದಲ್ಲಿ ಎಲ್ಲರೂ ಸಹಿ ಹಾಕಿದ್ದ ಪತ್ರ ಕಳೆದುಹೋಗುತ್ತಿರಲಿಲ್ಲ. ಅನೇಕಾನೇಕ ವಾಸ್ತು ದೋಷಗಳು ಇವನು ನಮ್ಮಿà ಗೆಳೆಯ ವಾಸಿಸುತ್ತಿರುವ ಮನೆಯಲ್ಲಿ ಅಂತರ್ಗತವಾಗಿದ್ದರಿಂದ ಅವನ ಮನಸ್ಸು ಸ್ಥಿಮಿತದಲ್ಲಿಲ್ಲ. ಕಾಗದ ಪತ್ರ ಕಳೆಯುವಂಥ ಪರಿಸ್ಥಿತಿ ನಿರ್ಮಾಣವಾಯ್ತು. ಹೀಗಾಗಿ ಸ್ವತ್ಛತೆ, ಮನೆಯ ಶಾಂತಿಯ ದೃಷ್ಟಿಯಿಂದ ಮುಖ್ಯ. ಉಳಿದ ವಿವರಗಳನ್ನು ಮುಂದಿನ ವಾರ ಚರ್ಚಿಸೋಣ.


Thursday, 11 January 2018

ನೀವು ಮನೆ ಕಟ್ಟುವ ಸೈಟು ಹೇಗಿರಬೇಕು ಗೊತ್ತಾ?

ಮನೆಯನ್ನು ಕಟ್ಟಲಿಕ್ಕಾಗಿ ಪಡೆದುಕೊಂಡ ಫ್ಲಾಟ್‌ ಹಲವಾರು ರೀತಿಯಲ್ಲಿ ತನ್ನದೇ ಆದ ಸಂಪನ್ನತೆಗಳನ್ನು ಹೊಂದಿರುವುದು ಮನೆಯ ವಾಸ್ತವ್ಯದ ಸಂದರ್ಭದಲ್ಲಿ ದಕ್ಕಬೇಕಾದ ಒಳಿತುಗಳಿಗೆ ಅವಶ್ಯವಾಗಿದೆ. ಇಂದಿನ ದಿನಗಳು ಹೇಗಿದೆ ಎಂದರೆ ಒಂದು ಫ್ಲಾಟ್‌ ಸಿಕ್ಕಿದರೆ ಸಾಕು ಎಂಬ ವಿಚಾರದಲ್ಲಿ ಹೆಚ್ಚಿನ ಕಾತುರ ಇರುತ್ತದೆ. ಕಾಲ ಸಕಲವನ್ನೂ ಸಂಪನ್ನತೆಯ ದೃಷ್ಟಿಯಿಂದ ಮುಕ್ಕಿ ತಿಂದಿದೆ. ಕಾಲದ ದುಷ್ಟತನವೆಲ್ಲಾ ಇದು. ಹಾಗೆ ನೋಡಿದರೆ ಮನುಷ್ಯನ ಸ್ವಾರ್ಥ ಚಲ್ತಾ ಹೈ ಧೋರಣೆಗಳು ಆಳುವವರ ಉಡಾಫೆ, ಭೂಮಿಗೆ ದಕ್ಕಿದ ಹೆಚ್ಚಿನ ಬೆಲೆ, ಲಂಚ ರುಷುವತ್ತು ಮಸಲ್‌ ಪವರ್‌ ಒಂದು ಸುಂದರ ಮನೆಯನ್ನು ಪಡೆದುಕೊಳ್ಳುವ ಕ್ರಿಯೆಯನ್ನು ಗಗನಕುಸುಮವಾಗಿಸಿದೆ. ಫ್ಲಾಟಿನ ಏರಿಳಿತಗಳು ಆಕಾಶ, ಅಳತೆ, ದಿಕ್ಕು, ಅನುಪಾತ ಇರುವ ಪ್ರದೇಶ, ಫ್ಲಾಟಿಗೆ ಎದುರು ರಸ್ತೆಯ ದಿಕ್ಸೂಚಿ ಸುತ್ತಮುತ್ತಲ ಪರಿಸರದ ವಾಸ್ತವಗಳು ಇತ್ಯಾದಿಗಳೆಲ್ಲಾ ಸಾಮಾಜಿಕ ಪತನಕ್ಕೆ ಕಾರಣವಾಗುವಂತಿರಬಾರದು. ಮನೆ ಕಟ್ಟಿ ವಾಸಿಸ ತೊಡಗಿದವರ ಉತ್ಸಾಹ, ಕ್ರಿಯಾಶೀಲತೆ, ಆರೋಗ್ಯ ಸಂಪತ್ತು ಕುಸಿಯಲು ಕಾರಣವಾಗಬಾರದು.

ಯಾವಾಗಲೂ ಮನೆಯ ವಾಯುವ್ಯ ಹಾಗೂ ಆಗ್ನೇಯ ಬಿಂದುವಿಗೆ ಒಂದು ಸರಳ ರೇಖೆ ಹಾಕಿದರೆ ಉತ್ತರ ಹಾಗೂ ಪೂರ್ವ ಭಾಗದಿಂದ ಆಗ್ನೇಯ ಬಿಂದುವ ವರೆಗಿನ ತ್ರಿಕೋನ ಭಾಗ ಸೂರ್ಯನ ಅಧಿಪತ್ಯಕ್ಕೆ ಒಳಗೊಳ್ಳುತ್ತದೆ. ಮಿಕ್ಕುಳಿದ ಭಾಗ ಚಂದ್ರನ ಅಧಿಪತ್ಯಕ್ಕೆ ಒಳಪಟ್ಟಿರುತ್ತದೆ. ಸೂರ್ಯನ ಭಾಗ ಸ್ವಪ್ರಕಾಶಿಸುವುದರಿಂದ ನಿಮ್ಮ ಪ್ರಯತ್ನಗಳಿಂದಲೇ ಜೀವನದಲ್ಲಿ ಗೆಲ್ಲುವ ಶಕ್ತಿಯನ್ನು ಮನೆಯ ಈ ಭೂಭಾಗನಿಮಗೆ ಕರುಣಿಸಿ ಕೊಡುತ್ತದೆ. ಉಳಿದರ್ಧ ಭಾಗ ನಿಮ್ಮ ವಿಚಾರದಲ್ಲಿ ಒದಗಬೇಕಾದ ದೈಹಿಕ ಸಹಾಯ ಅದೃಷ್ಟಗಳನ್ನು ಪ್ರತಿನಿಧಿಸುತ್ತದೆ. ಈ ರೀತಿಯಲ್ಲಿ ವರಿಸಿದ ಚಂದ್ರನ ಭಾಗ ಸ್ವಲ್ಪ ಎತ್ತರವನ್ನು ಕಾಪಾಡಿಕೊಳ್ಳುವುದು ಫ್ಲಾಟ್‌ನ ವಾಸ್ತು ದೃಷ್ಟಿಯಿಂದ ಉತ್ತಮವಾದುದಾಗಿದೆ. ಉತ್ತರ ಮತ್ತು ಪೂರ್ವದತ್ತ ಇಳಿಜಾರು ಇರಬೇಕಾದುದು ವಾಸ್ತು ಸಿದ್ಧಿಗೆ ಸೂಕ್ತ. ಇದರಿಂದಾಗಿ ನೀರಿನ ಹರಿತ ಪಶ್ಚಿಮದಿಂದ ಪೂರ್ವಕ್ಕೂ ದಕ್ಷಿಣದಿಂದ ಉತ್ತರಕ್ಕೂ ಅವಕಾಶ ಒದಗಿಬರುತ್ತದೆ. ಈ ರೀತಿಯ ವಿಚಾರಗಳು ಒಗ್ಗೂಡಿದರೆ ಈ ರೀತಿಯ ಫ್ಲಾಟ್‌ನಲ್ಲಿ ತಲೆ ಎತ್ತಿದ ಮನೆಯ ನಿವಾಸಿಗಳಿಗೆ ಸುಖಕ್ಕೆ ದಾರಿ ಲಭ್ಯ.

ಯಾವಾಗಲೂ ತುಸು ತಗ್ಗಿದ ಈಶಾನ್ಯ ಮೂಲೆ ತುಸು ಎತ್ತರಿಸಲ್ಪಟ್ಟ ನೈರುತ್ಯ ಮೂಲೆ ಎಲ್ಲಾ ವಿಚಾರಗಳಲ್ಲಿ ಯಶಸಿಗೆ ದಾರಿ ನಿರ್ಮಿಸುತ್ತದೆ. ದೀರ್ಘಾಯಸ್ಸು ಕೂಡಾ ಕೂಡಿ ಬರಲು ಇದು ಸಹಾಯಕ. ಇಡಿಯಾದ ಪಶ್ಚಿಮ ದಿಕ್ಕು ಎತ್ತರವೂ, ಇಡಿಯಾದ ಪೂರ್ವ ದಿಕ್ಕು ತಗ್ಗಿಕೊಂಡಿದ್ದು ಇದ್ದುದಾದರೆ ಇಂಥ ಫ್ಲಾಟಿನಲ್ಲಿ ಕಟ್ಟಿದ ಮನೆಯಲ್ಲಿ ವಾಸಿಸುವ ಜನರಿಗೆ ಸಾಮಾಜಿಕವಾದ ಮನ್ನಣೆ ಧನವೃದ್ಧಿಯು ಉತ್ತಮ ರೀತಿಯಲ್ಲಿ ಲಭ್ಯವಾಗುತ್ತದೆ. ಮನೆಯ ಮಧ್ಯದ ಸ್ಥಳವು ತುಸು ಏರಿಕೊಂಡಿದ್ದು ವಿಕಸನ ಪಡೆದಿದ್ದರೆ ಇದಕ್ಕೆ ಕೂರ್ಮ ವೃದ್ಧಿ ಎನ್ನುತ್ತಾರೆ. ಇದರಿಂದಾಗಿ ಮನೆಯ ಫ್ಲಾಟ್‌ ತುಂಬಾ ಸಂಪನ್ನತೆಯನ್ನು ಪಡೆದು ಶ್ರೇಷ್ಠತ್ವಕೆ ಒಯ್ಯುವ ಸಾಧನವಾಗುತ್ತದೆ. ಇಂಥ ರೀತಿಯ ಮನೆಯಲ್ಲಿನ ವಾಸವು ವಸತಿಗಾರರ ಸುಖ, ಕ್ಷೇಮ, ಲಾಭ, ಜಯ, ಸಿರಿಗೆ ಸಿದ್ಧಿಗೆ ಅಂಶವಾಗಿದೆ.ಒಟ್ಟಿನಲ್ಲಿ ಭೂಮಿಯ ವಿವಿಧ ಏರಿಳಿತಗಳಿಂದಾಗಿ ತನ್ನ ಸಂಪನ್ನತೆಯನ್ನು ಪಡೆದುಕೊಳ್ಳುತ್ತದೆ. ಕೆಲವು ಸಲ ಪ್ಲಾಟ್‌ ಯಾವುದೋ ದಿಕ್ಕಲ್ಲಿ ಮೂಲೆಯಲ್ಲಿ ತುಸು ಬೆಳೆದಿರುತ್ತದೆ. ಈ ರೀತಿಯ ಬೆಳವಣಿಗೆಗಳಲ್ಲಿ ಎಲ್ಲವೂ ಒಳಿತಿಗೆ ಪೂರಕವಾಗಿ ವರ್ತಿಸುವುದಿಲ್ಲ. ಫ್ಲಾಟ್‌ಗೆ ಈಶಾನ್ಯದ ಕಡೆ ತುಸು ಬೆಸೆದುಕೊಂಡಿದ್ದರೆ ಇಂಥ ಫ್ಲಾಟ್‌ ನಲ್ಲಿ ಕಟ್ಟಿದ ಮನೆಯಿಂದ ಉತ್ತಮ ಫ‌ಲ ಸಮೃದ್ಧಿಗಳು ಲಭ್ಯವಾಗುವುವು. ಹಾಗೆಯೇ ದಕ್ಷಿಣ, ಪಶ್ಚಿಮ, ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ದಿಕ್ಕುಗಳು ಸರಿಯಾಗಿ ಲಂಬಕೋನಗಳಲ್ಲಿದ್ದರೆ ಕೂಡಾ ಇಲ್ಲಿನ ಮನೆಗಳು ಸಕಾರಾತ್ಮಕ ಗುಣ ಪಡೆಯುತ್ತದೆ ಅನುಮಾನವಿಲ್ಲ. ಆದರೆ ಆಗ್ನೇಯ ದಿಕ್ಕಿಗೆ ಫ್ಲಾಟಿನ ಬೆಳವಣಿಗೆ ಮನೆ ಕಟ್ಟಲು ಉತ್ತಮವಾಗಿರದು.

ವಾಯುವ್ಯ ದಿಕ್ಕಿಗೂ ಫ್ಲಾಟ್‌ ಬೆಳೆಯಕೂಡದು. ಇಲ್ಲಿ ಮನೆಯ ಕಟ್ಟುವಿಕೆ ಉತ್ತಮ ಫ‌ಲಾವಳಿಗೆ ಪೂರಕವಾಗಿರುವುದಿಲ್ಲ. ಹಾಗೆಯೇ ನೈರುತ್ಯದ ಕಡೆಯ ದೀರ್ಘ‌ತೆ ಫ್ಲಾಟ್‌ ಗಳಿಗೆ ಉಚಿತವಾದುದಲ್ಲ. ದಯಮಾಡಿ ಗಮನಿಸಿ. ಈ ರೀತಿಯಲ್ಲಿ ವಾಸ್ತುವಿನ ಕುರಿತಾದ ಕೆಲವು ಅಂಶಗಳನ್ನು ಕಡೆಗಣಿಸದೆಯೇ ಪುರಸ್ಕರಿಸಿದರೆ ಒಳ್ಳೆಯದು. ಹೆಚ್ಚಾಗಿ ಜಾತಕದ ದಶಾಕಾಲ ಸರಿ ಇರದಿರುವಾಗ, ಶನಿಕಾಟದ ಕೇಮದ್ರುಮಯೋಗದ ನಕಾರಾತ್ಮಕ ದಿನಗಳಲ್ಲಿ ವಾಸ್ತುವಿನ ಶಿಸ್ತು ಬದ್ಧತೆ ಮನೆಯನ್ನು ಪುಷ್ಟೀಕರಿಸಿದ್ದರೆ ಗ್ರಹಗಳ ದೌರ್ಬಲ್ಯವನ್ನು ನಿಯಂತ್ರಿಸುವ ಶಕ್ತಿ ಒದಗಿಬರುತ್ತದೆ.


Wednesday, 10 January 2018

ಆರೋಗ್ಯ ಮತ್ತು ಸಂಪತ್ತಿಗೆ ವಾಸ್ತು ಟಿಪ್ಸ್

* ಕಸ ಗುಡಿಸುವ ಪೊರಕೆಗಳನ್ನು ಕಣ್ಣಿನಿಂದ ಮರೆಯಾಗುವಂತೆ ಮ‌ೂಲೆಯಲ್ಲಿ ತಲೆಕೆಳಗಾಗಿ ಇಡುವುದರಿಂದ ಕುಟುಂಬದ ಜೀವನ ತೊಳೆದುಹೋಗದಂತೆ ತಪ್ಪಿಸುತ್ತದೆ.

* ಸ್ನಾನದ ಗೃಹ ಅಥವಾ ಅಡುಗೆ ಮನೆಯ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕದಂತೆ ಖಾತರಿ ಮಾಡಿಕೊಳ್ಳಿ.ಸತತ ನೀರಿನ ತೊಟ್ಟಿಕ್ಕುವಿಕೆಯು ನಕಾರಾತ್ಮಕ ಶಕ್ತಿಯನ್ನು ಸೂಸುವುದರಿಂದ ನೀರಿನ ತೊಟ್ಟಿಕ್ಕುವಿಕೆಯು ಸಂಪತ್ತಿನ ಸೋರುವಿಕೆಯನ್ನು ಸಂಕೇತಿಸುತ್ತದೆ.

* ಸ್ವಚ್ಛವಾದ ಡೆಸ್ಕ್ ಸ್ಪಷ್ಟ ಯೋಚನೆಗೆ ಪ್ರೋತ್ಸಾಹಿಸುತ್ತದೆ. ಇದು ಆರ್ಥಿಕ ಶಕ್ತಿ ಮತ್ತು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಕಂಪ್ಯೂಟರ್, ಫೋನ್ ಮುಂತಾದುವನ್ನು ಡೆಸ್ಕ್‌ನಲ್ಲಿ ಬಳಸಬಹುದು.

* ಎಲ್ಲ ಗಡಿಯಾರಗಳು ಸುಸ್ಥಿತಿಯಲ್ಲಿ ಇರಬೇಕು. ಕಾರ್ಯನಿರ್ವಹಿಸದ ಗಡಿಯಾರವು ಹಣಕಾಸು ಸ್ಥಿತಿ ಸುಧಾರಿಸದೇ ಅಲ್ಲೇ ನಿಲ್ಲುವಂತೆ ಮಾಡುತ್ತದೆ. ನಿಧಾನ ಗಡಿಯಾರದಿಂದ ನಿಮ್ಮ ಕೆಲಸಗಳು ವಿಳಂಬವಾಗುತ್ತದೆ.

* ನಿಮ್ಮ ಮಲಗುವ ಕೋಣೆಯ ಕಿಟಕಿಗಳನ್ನು ಕನಿಷ್ಠ 20 ನಿಮಿಷಗಳ ಕಾಲ ತೆರೆದು ಹೊಸ ಗಾಳಿ ಒಳಪ್ರವೇಶಕ್ಕೆ ಅವಕಾಶ ನೀಡಿ. ಇಲ್ಲದಿದ್ದರೆ ಪ್ರತಿ ರಾತ್ರಿ ನೀರಸ ಗಾಳಿಯೊಂದಿಗೆ ನೀವು ಮಲಗಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಿದರೆ, ಜೀವನದಲ್ಲಿ ಉತ್ತಮ ಅದೃಷ್ಟವನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ?

* ನೆಲದಿಂದ ಒಂದು ಅಡಿ ಎತ್ತರದಲ್ಲಿ ಹಾಸಿಗೆಯಿರಬೇಕು. ಇದರಿಂದ ನೆಲದಲ್ಲಿ ಮುಕ್ತವಾಗಿ ಶಕ್ತಿ ಹರಿಯಲು ಅವಕಾಶ ಕಲ್ಪಿಸುತ್ತದೆ. ಶಕ್ತಿಯ ಮುಕ್ತ ಹರಿಯುವಿಕೆ ತಡೆದರೆ ನಿಮ್ಮ ಸಂಪತ್ತು ಗಳಿಸುವ ಅವಕಾಶ ಕೂಡ ಮೊಟಕಾಗುತ್ತದೆ.

* ತಲೆಯ ಹಿಂಭಾಗದಲ್ಲಿ ಭದ್ರಗೋಡೆಯೊಂದಿಗೆ ಮಲಗಿ. ಈ ಸ್ಥಿತಿಯು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ತಲೆಯ ಹಿಂಭಾಗದಲ್ಲಿ ಕಿಟಕಿಗಳು ಮತ್ತು ಬಾಗಿಲಿಗೆ ಅವಕಾಶ ಕೊಡಬಾರದು.

* ನೆಲವನ್ನು ಮನೆಯ ಒಳಗೆ ಗುಡಿಸಿಕೊಂಡು ಹೋಗಬೇಕು. ಮುಖ್ಯ ದ್ವಾರದತ್ತ ಕಸ ಗುಡಿಸುವುದರಿಂದ ಸಂಪತ್ತು ಕ್ಷೀಣಿಸುತ್ತದೆ.

* ಕಸದ ಬುಟ್ಟಿಗಳನ್ನು ಸದಾ ಮುಚ್ಚಿರಬೇಕು. ಇಲ್ಲದಿದ್ದರೆ ಸಂಪತ್ತಿನ ಶಕ್ತಿಯ ಭ್ರಷ್ಟತೆಗೆ ದಾರಿಕಲ್ಪಿಸುತ್ತದೆ.

* ಮನೆಯ ಮುಖ್ಯದ್ವಾರದಲ್ಲಿ ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬಾರದು. ಮುಖ್ಯದ್ವಾರದಲ್ಲಿ ಮುಕ್ತ ಮತ್ತು ಸ್ವಚ್ಛ ಜಾಗವಿರಬೇಕು. ಇಲ್ಲದಿದ್ದರೆ ಗಾಳಿಯೊಂದಿಗೆ ಹರಿಯುವ ಶಕ್ತಿಯು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯೊಂದಿಗೆ ಮಿಶ್ರಣಗೊಂಡು ಮನೆಯಲ್ಲಿ ನಷ್ಟಗಳು ಪ್ರಾಪ್ತವಾಗುತ್ತದೆ.

* ತೊಳೆಯದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೇ ಬಿಡದೇ ಆದಷ್ಟು ಬೇಗ ತೊಳೆಯುವುದು ಒಳ್ಳೆಯದು. ತಕ್ಷಣವೇ ತೊಳೆಯದಿರುವುದು ಅಪೂರ್ಣತೆಯ ಸಂಕೇತವಾಗಿದ್ದು, ಹಣಕಾಸು ಪರಿಸ್ಥಿತಿಯ ಅವ್ಯವಸ್ಥೆಗೆ ಪುರಾವೆ ಒದಗಿಸುತ್ತದೆ.

* ಮುಖ್ಯ ಪ್ರವೇಶದ್ವಾರದ ಮೇಲೆ ಶೌಚಾಲಯಗಳು ಇರಬಾರದು. ಅದು ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ. ಇದು ಮುಖ್ಯದ್ವಾರದಿಂದ ಪ್ರವೇಶಿಸುವ ನಕಾರಾತ್ಮಕ ಶಕ್ತಿಗೆ ಹಸ್ತಕ್ಷೇಪ ಉಂಟುಮಾಡುತ್ತದೆ.

Tuesday, 9 January 2018

ಗಿಡ ಮರಗಳನ್ನು ಎಲ್ಲಿ ನೆಡಬೇಕು?

1. ಗಿಡ ಮರಗಳನ್ನು ನೆಡುವಾಗ ಅವುಗಳು ಮನೆಯ ಅತೀ ಸಮೀಪದಲ್ಲಿರದಂತೆ ಜಾಗ್ರತೆ ವಹಿಸಿ, ಮುಳ್ಳಿನ ಗಿಡಗಳನ್ನು ಆದಷ್ಟು ದೂರವಿರಿಸಿ.

2. ಪೂರ್ವ ಭಾಗದಲ್ಲಿ ಫಲ ಕೊಡುವ ವೃಕ್ಷಗಳನ್ನು ನೆಡುವುದು ಉತ್ತಮವಲ್ಲ, ಅಲ್ಲಿ ವಟ ಅಥವಾ ಅಶ್ವತ್ಥ ಮರವನ್ನು ನೆಡುವುದು ಶುಭದಾಯಕವೆಂದೆನಿಸುವುದು.

2. ಪಶ್ಚಿಮ ಭಾಗದಲ್ಲಿ ಬಾಳೆ, ಮಾವು ಮೊದಲಾದವುಗಳನ್ನು ನೆಡುವುದು ಅಶುಭಕರ,

3.ದಕ್ಷಿಣ ಭಾಗದಲ್ಲಿ ನಿಂಬೆಯಂತಹ ಗಿಡಗಳನ್ನು ನೆಡುವುದು ಬೇಡ, ಈ ಭಾಗದಲ್ಲಿ ಅತ್ತಿ ಮರವನ್ನು ಬೆಳೆಸಿದರೆ ಅದೃಷ್ಟವೆಂದೆನಿಸುವುದು.

4.ಉತ್ತರ ಭಾಗದಲ್ಲಿ ಎಂದೂ ಹಚ್ಚ ಹಸುರಾಗಿರುವ ಗಿಡಗಳನ್ನು ನೆಡಿರಿ, ಈ ಭಾಗದಲ್ಲಿ ಬಾಳೆ, ಅತ್ತಿ ಮೊದಲಾದ ಗಿಡಗಳನ್ನು ವರ್ಜಿಸಿ.

5.ಆಗ್ನೇಯ ದಿಕ್ಕಿನಲ್ಲಿ ದಾಳಿಂಬೆ ಗಿಡ ನೆಡುವುದು ಶುಭ ಮತ್ತು ಹಾಲು ಕೊಡುವ, ಮುಳ್ಳಿನ ಗಿಡಗಳು ಅಶುಭವಾಗಿರುತ್ತವೆ.

6. ನೈಋತ್ಯ ದಿಕ್ಕಿನಲ್ಲಿ ಹುಣಸೆ ಮರವನ್ನು ನೆಡುವುದು ಶುಭಕರ.

7.ವಾಯುವ್ಯ ದಿಕ್ಕಿನಲ್ಲಿ ಮರಗಳನ್ನು ಮತ್ತು ಮುಳ್ಳಿನ ಗಿಡಗಳನ್ನು ನೆಡುವುದು ಅಶುಭಕರ.

8.ಈಶಾನ್ಯ ದಿಕ್ಕಿನಲ್ಲಿ ನೆಲ್ಲಿಕಾಯಿಯ ಮರವು ಶುಭ ಹಾಗೂ ಬಾಳೆಗಿಡವು ಅಶುಭಕರವಾಗಿರುತ್ತದೆ.

9.ಮನೆಗೆ ತಾಗಿಕೊಂಡು ಇರುವ ಬಳ್ಳಿಗಳನ್ನು ಹರಡುವ ಗಿಡಗಳನ್ನು ಎಂದೂ ನೆಡಬೇಡಿ ಇವುಗಳು ಉರಗ ಅಥವಾ ಇನ್ನಿತರ ಕೀಟಗಳ ವಾಸಸ್ಥಾನವಾಗಿ ಬದಲಾದರೆ ಮನೆಗೆ ಅಪಾಯ.

10.ಹಳದಿ ಬಣ್ಣದ ಹೂಗಳನ್ನು ಬಿಡದ ಹರಿದಾಡುವ ಗಿಡಗಳು ಶುಭದಾಯಕವಾಗಿರುತ್ತವೆ.

Monday, 8 January 2018

ಗೃಹನಿರ್ಮಾಣದಲ್ಲಿ ಆಯಗಳು

ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ.

ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.

ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ.

Saturday, 6 January 2018

ಮನೆಯಲ್ಲಿ ಕಸಬರಿಗೆಗಳನ್ನು ತೆರೆದಿಟ್ಟರೆ ಏನೇನಾಗುತ್ತದೆ ಗೊತ್ತಾ?

ಮನೆಯಲ್ಲಿ ಕಸಬರಿಕೆಗಳಿರದೆ ನೆಲ ಒರೆಸುವ, ಮೇಜು, ಟೇಬಲ್‌, ಊಟದ ಟೇಬಲ್‌ ವರೆಸುವ ಬಟ್ಟೆ ತುಂಡುಗಳೇ ಇರದೆ ಯಾವ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರಿ¤ಯಾಗಿ ಯಾರಿಗೂ ಕಾಣಿಸದಂñ ೆಮುಚ್ಚಿಡುವುದು ಅವಶ್ಯವಾಗಿದೆ. ಈ ಕಸಬರಿಕೆ ಇತ್ಯಾದಿ ಮನೆಯೊಳಗೇ ಇರಲಿ. ಹೊರಗಡೆಯೇ ಇರಲಿ ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು. ಮನೆಯೊಳಗಿನವರಿಗೇ ಆಗಲಿ, ಮನೆಯ ಹೊರಗಿನವರಿಗೇ ಆಗಲಿ ಇದು ಕಾಣುವಂತಿರಬಾರದು.

ಇದಕ್ಕೆ ಕಾರಣ ಸರಳ. ಈ ಕಸಬರಿಗೆ ಇತ್ಯಾದಿಗಳು ಮಾನವನಲ್ಲಿ ಒಂದು ಕ್ಷಣ ಅವನೊಳಗೆ ಪ್ರವಹಿಸುವ ಧನಾತ್ಮಕ ಭಾವನೆಗಳನ್ನು ಒಮ್ಮೆ ಸ್ಥಂಬನಗೊಳಿಸಿ ಬಿಡುತ್ತದೆ. ಧನಾತ್ಮಕ ಭಾವನೆಗಳು ಒಮ್ಮೆ ತಟಸ್ಥಗೊಳ್ಳುವ ವಿಷಯ ಹದಿಗಟ್ಟಿತಾದರೆ ಮೊದಲಿನ ಸುಹಾಸಕರತೆಯಲ್ಲೆ ಅದನ್ನು ಮುಂದುವರೆಸಲು ಸಾಧ್ಯವಾಗದು. ಮನೆಯ ಹೊರಗಿನ ಜನರಿಗೆ ಕಸಬರಿಗೆಗಳು ಇತ್ಯಾದಿ ಕಾಣುವಂತಿದ್ದರೆ ಅದು ಆ ವ್ಯಕ್ತಿಗಳಲ್ಲಿ ನಕಾರಾತ್ಮಕ ಭಾವನೆಗಳನ್ನು ಹೊಂದಲು ಕಾರಣವಾಗಬಹುದು. ಧೂಳು ಜೇಡರ ಬಲೆ, ಕೊಳೆ ಹಾಗೂ ಕಸಗಳನ್ನು ತಮ್ಮಲ್ಲಿ ಹೊಂದಿರುವ ಕಸಬರಿಕೆ ಇತ್ಯಾದಿಗಳು ಶುಭ ಸೂಚಕವಾಗಿರಲು ಸಾಧ್ಯವಾಗದು ಎಂಬುದು ಒಂದೆಡೆಯಾದರೆ ಇದು ಮನಸ್ಸಿನ ಹೊಯ್ದಾಟಗಳಿಗೆ ಇನ್ನಿಷ್ಟು ವಿಚಾರಗಳನ್ನು ಒದಗಿಸಿ ನಿಷ್ಕಿ$›ಯತೆಯನ್ನು ಉಂಟು ಮಾಡಬಲ್ಲವು.

ಯಾಕೆ ಹೀಗಾಗುತ್ತದೆ ಎಂಬುದಕ್ಕೆ ನೇರ ಕಾರಣಗಳಿಲ್ಲ. ಒಂದು ಸುಂದರ ನಾಯಿಯನ್ನೋ,  ಮೊಲವನ್ನೋ, ಜಿಂಕೆಯನ್ನೋ ನೋಡುವುದಕ್ಕೂ, ಒಂದು ಇಲಿ ಒಂದು ಜಿರಲೆ ಅಥವಾ ತಿಗಣೆ ಅಥವಾ ಜೇಡವನ್ನು ಮನೆಯೊಳಗೆ ಕಾಣುವುದಕ್ಕೂ ವ್ಯತ್ಯಾಸವಿದೆ. ಯಾರ ಮನಸ್ಸೂ ಇಲಿ ಅಥವಾ ಜಿರಲೆಗಳನ್ನು ನೋಡುತ್ತಾ ಕ್ರಿಯಾಶೀಲವಾಗದು. ಇದೇ ಸೂತ್ರ ಕಸಬರಿಗೆಗಳು ಇತ್ಯಾದಿ ವಿಷಯದಲ್ಲೂ ನಾವು ವಿಶ್ಲೇಷಿಸಬಹುದು. ಮನಸ್ಸು ಬಹಳ ಸೂಕ್ಷ್ಮವಾದದ್ದು.
ಅದು ತನ್ನ ಆಯ್ಕೆಯನ್ನೂ, ನಿರಾಸಕ್ತಿಗಳನ್ನೂ ಒಬ್ಬರಿಂದ ಇನ್ನೊಬ್ಬರಿಗೆ ಬಹುತೇಕ ಸಂದರ್ಭಗಳಲ್ಲಿ
ವಿಧವಿಧವಾಗಿ ಒಡಮೂಡಿಸುವುದು. ಸತ್ಯವಾದರೂ ಇಲಿ, ಜಿರಲೆ ಕಸಬರಿಕೆಗಳಂಥ ವಿಚಾರಗಳಲ್ಲಿ ವಿಧವಿಧವಾದ ಭಾವನೆಗಳನ್ನು ರೂಪುಗೊಳಿಸವು. ಕೇವಲ ಜಿಗುಪ್ಸೆ ಅಷ್ಟೇ. ಇದು ಎಲ್ಲರಿಗೂ ಸ್ವಾಭಾವಿಕ. ಎಲ್ಲರಲ್ಲೂ ಸ್ವಾಭಾವಿಕ.

ಅಡುಗೆ ಮನೆಯಲ್ಲಿ ಹೊರ ಜಗುಲಿಯಲ್ಲಿ ಕಸಬರಿಗೆಗಳು ಕಾಣುವಂತೆ ಇರಲೇ ಕೂಡದು. ಇದು ತಿನ್ನುವ ಅನ್ನ ತಿನಿಸುಗಳ ವಿಷಯದಲ್ಲಿ ಒಂದು ರೀತಿಯ ಅಭಾವವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಿನಲ್ಲಿ ಇಂಥ ಅಭಾವಗಳ ಸೃಷ್ಟಿಗೆ ನಮಗೆ ನಾವೇ ಅವಕಾಶ ಒದಗಿಸ ಬಾರದು. ಒಂದರ್ಥದಲ್ಲಿ ಮನೆ ಬಾಗಿಲ ಎದುರುಗಡೆ ಕಸಬರಿಕೆ ಇತ್ಯಾದಿಗಳನ್ನು ಮೇಲ್ಮುಖವಾಗಿ ಇಡುವುದು ದುಷ್ಟ ಹಾಗೂ ಅನಪೇಕ್ಷಿತ ಸ್ಪಂದನಗಳನ್ನು ಮನೆಯೊಳಗಡೆ ಬಂದು ಸೇರುವ ಕ್ರಿಯೆಗೆ ಪೂರಕವಾಗಿ ಒಳಿತಾಗಬಲ್ಲದು. ಆದರೆ ರಾತ್ರಿಯ ಹೊತ್ತು ಮಾತ್ರ ಇದ ಸ್ವಾಗತಾರ್ಹ.  ಹಗಲ ಹೆಗಲಿಗೆ ಇದು ಸಹವಾಸ ಬೇಡ.

ಇನ್ನು ಮನೆಯೊಳಗಿನ ಕಸ ಹಾಗೂ ಕೊಳೆಗಳನ್ನು ಧೂಳು ಹಾಗೂ ಮಣ್ಣನ್ನು ವಿಶೇಷವಾಗಿ ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಸಬರಿಗೆಗಳೀಂದ ಒತ್ತಿ ಝಾಡಿಸಿ ಹೊರದೂಡುವಂತೆ ಮಾಡಲೇ ಬಾರದು. ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಣ್ತಪ್ಪಿ ಬಿದ್ದ ಅಥವಾ ಬೆಲೆ ಬಾಳುವ ವಸ್ತುಗಳು ಹೊರ ತಳ್ಳಲ್ಪಡುವ ಸಾಧ್ಯತೆಗಳು ಇರುವುದರಿಂದ ರಾತ್ರಿಯ ಹೊತ್ತು ಕಸಬರಿಗೆಗಳ ಉಪಯೋಗ ಮಾಡಿದರೆ ಮನೆಯಲ್ಲಿ ಲಕ್ಷಿ$¾ದೇವಿ ನೆಲೆಯೂರಳು ಎಂಬ ನಂಬಿಕೆ ಇದೆ. ಕೆಲವು ವಿಚಾರಗಳು ಆಧುನಿಕತೆಯನ್ನು ಅಣಕಿಸುವಂತಿದ್ದರೂ ಲಾಗಾಯ್ತಿನಿಂದ ರೂಢಿಯಾಗಿ ಬಂದ ವಿಚಾರಗಳ ಕುರಿತು ಅಲಕ್ಷ್ಯ ಬೇಡ. ವರ್ತಮಾನದ ಆಧುನಿಕ ಬೆಳವಣಿಗೆಗಳು ಮಾನವನ ಎಲ್ಲ ನೋವು ಹಾಗೂ ಕಷ್ಟಗಳನ್ನು ನೀಗಿಸುವಷ್ಟು ಆಧುನಿಕವಲ್ಲ. ಹೀಗಾಗಿ ಯಾವುದೇ ಹಳೆಯ ವಿಚಾರವಲ್ಲ. ಅವೆಲ್ಲಾ ಆಧುನಿಕತೆ ಪೂರಕವಾಗೇ ಇರುತ್ತದೆ.

Thursday, 4 January 2018

ಮನೆ ಮತ್ತು ನಿವೇಶನದ ತಾಳಮೇಳ ಹೇಗಿರಬೇಕು?

ಬಹಳ ಜನರು ಸೈಟುಗಳ ಬಗೆಗೆ ಮನೆಗಳ ಬಗೆಗೆ ತಿರುತಿರುಗಿ ಅದೇ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಒಟ್ಟಿನಲ್ಲಿ ಜನರಿಗೆ ತಮ್ಮ ಸೈಟು ಚೆನ್ನಾಗಿದೆ, ವಾಸ್ತುವಿನ ಪ್ರಕಾರ ಸಮರ್ಪಕವಾಗಿದೆ ಎಂಬ ಉತ್ತರ ಬೇಕು. ಒಮ್ಮೊಮ್ಮೆ ತಮ್ಮ ಎಲ್ಲಾ ಕಷ್ಟಗಳಿಗೂ ವಾಸ್ತು ದೋಷಗಳೇ ಕಾರಣ. ಮನೆಯ ವಾಸ್ತು ಅವ್ಯವಸ್ಥೆಗಳನ್ನು ಮುಂದೆ ಮಾಡಿಕೊಂಡು ಕೊರಗುತ್ತಿರುತ್ತಾರೆ. ಸೈಟಿನ ಉತ್ತಮ ಅಥವಾ ದೌರ್ಬಲ್ಯದ ಕುರಿತು ಸೈಟಿನ ಸಂಬಂಧ ರಸ್ತೆಯ ಜೊತೆ ಹೇಗೆ ಹೊಂದಿಕೊಂಡಿದೆ ಎಂಬುದರ ಮೆಲೆ ನಿರ್ಧರಿಸಬಹುದು. ಈ ಕುರಿತಾಗಿ ಸೂಕ್ತವಾದ ವಿಶ್ಲೇಷಣೆಯ ಅವಶ್ಯಕತೆ ಇದೆ. ಜನರು ಒಂದೇ ಸಮನೆ ಸಣ್ಣ ತೊಂದರೆಯ ಬಗೆಗೂ ತಲ್ಲಣಿಸಬಾರದು. ಒಂದು ಫ್ಲಾಟ್‌ ಬೇರೆಬೇರೆ ಕಾರಣಗಳಿಗಾಗಿ ತನ್ನ ಸಂಪನ್ನತೆ ಪಡೆಯುತ್ತದೆ. ಎದುರಾಗುವ ರಸ್ತೆ ಕೂಡಾ ಮುಖ್ಯವಾಗುತ್ತದೆ.

ಉದಾಹರಣೆಗೆ ಒಬ್ಬ ಯಜಮಾನ ತನ್ನ ಕುಂಡಲಿಯ ವಿಚಾರದಲ್ಲಿ ಅಸಮತೋಲನ ಎದ್ದೇಳತೊಡಗಿದಾಗ ಮನೆ ಅಥವಾ ಮನೆಯ ನಿವೇಶನದ ಸ್ವರೂಪ ಮನೆಯ ಫ್ಲಾಟ್‌ಗೆ ಎದುರಾದ ರಸ್ತೆಯ ದಿಕ್ಕು ಸೂಕ್ತವಾಗಿದ್ದರೂ ಕಷ್ಟಗಳು ಎದುರಾದೀತು. ತಮ್ಮ ಕಷ್ಟಗಳಿಗೆಲ್ಲಾ ಮನೆಯ ವಾಸ್ತು ದೋಷವೇ ಎಂದು ತಿಳಿಯಬೇಕಿಲ್ಲ. ನಾಲ್ಕು ದಶಕಗಳ ಹಿಂದೆ ರಾಜೇಶ್‌ ಖನ್ನಾ ಕೀರ್ತಿ ಶೀಖರಕ್ಕೆ ಏರತೊಡಗಿದ ಹೊತ್ತು. ಅಂದಿನ ಸೂಪರ್‌ ಸ್ಟಾರ್‌ ಎಂದು ಸುಮಾರಾಗಿ ಕರೆಯಬಹುದಾಗಿದ್ದ ರಾಜೇಂದ್ರ ಕುಮಾರ್‌ ಅವರಿಂದ ರಾಜೇಶ್‌ ಖನ್ನಾ ಅವರು ಆಶೀರ್ವಾದ್‌ ಎಂಬ ಬಂಗಲೆಯೊಂದನ್ನು ಖರೀದಿಸಿದ್ದರು. ಆಶೀರ್ವಾದಕ್ಕೆ ಬಂದ ರಾಜೇಶ್‌ ಖನ್ನಾ ಆಗ ಮುಟ್ಟಿದ್ದೆಲ್ಲಾ ಚಿನ್ನವಾಗತೊಡಗಿದ್ದು ಸುಳ್ಳೆನಲ್ಲ. ಪೂರ್ಣಪ್ರಮಾಣದ ಸೂಪರ್‌ ಸ್ಟಾರ್‌ ಆಗಿ ರಾಜೇಶ್‌ ಖನ್ನಾ ಜನಪ್ರಿಯತೆಯ ಮೌಂಟ್‌ ಎವರೆಸ್ಟ್‌ ಏರಿದ್ದರು. ಆದರೆ ಕಾಲದ ಸಂಪನ್ನತೆ ಅಥವಾ ದಾರುಣತೆ ಒಂದೇ ರೀತಿಯಲ್ಲಿರಲಾರದು ಎಂಬಂತೆ ರಾಜೇಶ್‌ ಮೇಲೇರಿದಷ್ಟೇ ವೇಗದಲ್ಲಿ ಕೆಳಗಿಳಿಯ ತೊಡಗಿದ್ದಾಗಲೂ ಆಶೀರ್ವಾದ್‌ ಬಂಗಲೆಯಲ್ಲಿಯೇ ಇದ್ದರು. ಆದರೆ ಏರಲು ಇಳಿಯಲು ಖ್ಯಾತರಾಗಲು ಕೀರ್ತಿ ಪಡೆಯಲು ಧನಲಾಭ ಹೊಂದಲು ಮನೆಯ ನಿವಾಸದ ವಾಸ್ತು ಒಂದೇ ಕಾರಣವಲ್ಲ ಎಂಬುದನ್ನೂ ಆಶೀರ್ವಾದದಲ್ಲಿ ಇದ್ದೂ ಬಿಕ್ಕಟ್ಟಿಗೆ ಜಾರಿದ ಸೋಲಿಗೆ ಮುಖಮಾಡಿದ ರಾಜೇಶ್‌ ಖನ್ನಾರೇ ದೊಡ್ಡ ಸಾಕ್ಷಿ.
ಅವರ ಯಶಸ್ಸಿಗೆ ಕಾರಣವಾದ ಗ್ರಹದ ಚಲಾವಣೆ ಮುಗಿದು ದುರ್ಬಲ ಗ್ರಹವೊಂದರ ಅಧಿಪತ್ಯದ ದಶಾಕಾಲ ಬಂದಾಗ ರಾಜೇಶ್‌ ಖನ್ನಾ ಸೋಲತೊಡಗಿದ್ದರು. ಪತ್ನಿಯ ಜೊತೆಗೂ ಬಿರುಕು ಒಡಮೂಡಿತ್ತು. ಬರೀ ಸುಮ್ಮನೆ ವಾಸ್ತು ದೋಷ ವಾಸ್ತು ದೋಷ ಎಂದನ್ನುತ್ತ ಮನೆಯನ್ನು ದೂಷಿಸುತ್ತಿರಬಾರದು.ನಿಜ ಭಾರತೀಯ ವಾಸ್ತುಶಾಸ್ತ್ರ ಕೆಲವು ವಿಚಾರಗಳನ್ನು ಮನೆಯ ಸೈಟು ಎದುರಿಸುವ ದಿಕ್ಕಿನ ಮೇಲಿಂದ ಸಂಪನ್ನವಾದುದು ಸಂಪನ್ನವಾದುದಲ್ಲ ಎಂದು ಪ್ರತ್ಯೇಕಿಸಿದೆ. ಹಲವು ನಿರ್ದಿಷ್ಟ ಅಂಶಗಳನ್ನು ಈ ನಿಟ್ಟಿನಲ್ಲಿ ಸ್ಪಷ್ಟಪಡಿಸಿದೆ. ಒಂದು ಸೈಟಿಗೆ ರಸ್ತೆ ದಕ್ಷಿಣ ದಿಕ್ಕಿನಲ್ಲಿದ್ದರೆ ಕೆಲವು ತೊಂದರೆಗಳನ್ನು ಇದು ಸೃಷ್ಟಿಸುತ್ತದೆ. ದಕ್ಷಿಣದ ಹಾದಿ ಮನೆಯ ಸೈಟಿಗಿಂತ ತಗ್ಗಿನಲ್ಲಿದ್ದರೆ ಇದು ಸೂಕ್ತವಲ್ಲ. ಪೂರ್ವ ದಿಕ್ಕನ್ನು ಮುಖಮಾಡಿಕೊಂಡ ಸೈಟ್‌ ಸಾಮಾನ್ಯವಾಗಿ ಸಂಪನ್ನವಾದುದು ಎಂದು ಹೇಳಬಹುದು. ಹೀಗೆ ಮುಖಮಾಡಿದ ಮನೆಗಳು ಇತರೆ ಯಾವುದೇ ಅಡೆತಡೆಗಳಿಂದ ತೊಂದರೆಗೆ ಒಳಗಾಗುವುದಿಲ್ಲ. ನೇರವಾಗಿ ಸೂರ್ಯರಶ್ಮಿ ಪೂರ್ವ ದಿಕ್ಕಿನಿಂದ ಮನೆಯೊಳಗಡೆ ಪ್ರವೇಶೀಸುವ ತೀಕ್ಷ್ಣತೆ ಸ್ವಾಗತಾರ್ಹವಾದುದು. ಸೂರ್ಯನ ರಶ್ಮಿಗಳು ಮುತ್ತಿಕ್ಕುವ ಮನೆಯ ಪ್ರಜ್ವಲನಕ್ಕೆ ಒಂದು ರೀತಿಯ ಅನನ್ಯತೆ ಇರುತ್ತದೆ. ಉತ್ತರ ದಿಕ್ಕನ್ನು ದೃಷ್ಟಿಸುವ ಪ್ಲಾಟ್‌/ ಮನೆಗಳು ಉತ್ತಮವೇ. ಖಗೋಲ ಸಂಪನ್ನವಾದ ವಿಶ್ವವನ್ನು/ ವಿಶ್ವದಿಂದ ಸಂವೇದಿಸುವ ಶಕ್ತಿಮೂಲ ಇಂಥ ಮನೆಗಳಿಗೆ ದಕ್ಕುತ್ತದೆ ಎಂಬುದು ಆಷೇìಯ ವಿಷಯವಾಗಿದೆ. ಮುಳುಗುವ ಬಾಗಿಲಿನ ಸೌರಭ ತಟಸ್ಥವಾದ ಶಕ್ತಿಧಾತುವನ್ನು ಪಡೆದಿರುವುದರಿಂದ ನಷ್ಟಗೊಳ್ಳುವುದಾಗಲೀ, ಲಾಭಕ್ಕಾಗಿನ ಅಂಶಗಳಾಗಲೀ ಒಂದು ಇನ್ನೊಂದನ್ನು ಮೀರಿ ನಿಲ್ಲಲಾರದ ರೀತಿಯಲ್ಲಿ ಎರಡೂ ಒಂದೇ ಹದದಲ್ಲಿ ಇರುತ್ತದೆ. ವಾಸ್ತು ಶಾಸ್ತ್ರವನ್ನು ನಾವು ನಿರ್ಲಕ್ಷಿ$ಸಲಾಗದು. ಹಾಗೆಂದು ವಾಸ್ತುವಿಗೆ ವಿರುದ್ಧವಾದುದನ್ನು ಅನುಕೂಲವಾಗಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಅರಿತುಕೊಳ್ಳಬೇಕು.


Wednesday, 3 January 2018

ಮರ ಗಿಡಗಳು ಮತ್ತು ವಾಸ್ತು

ಮನೆಯ ಭದ್ರತೆಯ ದೃಷ್ಟಿಯಿಂದ ಅಪಾರವಾದ ಜನರು ವಿಧವಿಧವಾದ ಯೋಚನೆಗಳಲ್ಲಿ ಇರುತ್ತಾರೆ. ವಾಸ್ತುಶಾಸ್ತ್ರ ಮುಖ್ಯವಾಗಿ ಭಾರತೀಯ ವಿಧಾನದಲ್ಲಿ ಪಂಚ ಭೂತಗಳಾದ ಮಣ್ಣು, ಗಾಳಿ, ನೀರು, ಬೆಂಕಿ ಹಾಗೂ ಆಕಾಶ ತತ್ವಗಳನ್ನು ಒಂದು ಶಿಸ್ತಿಗೆ ಒಳಪಡಿಸುತ್ತದೆಯೇ ವಿನಾ ಜನರ ಮನಸ್ಸಿನಲ್ಲಿ ಭಯವನ್ನು ಎಬ್ಬಿಸಲು ಮುಂದಾಗದು. ನಮಗೆ ಈ ಪಂಚಭೂತಗಳ ವಿನಾ ಇಹಲೋಕದ ಕಾರ್ಯ ವಿಧಾನ ಸಂದರ್ಭಗಳಲ್ಲಿ ಪರಿಪೂರ್ಣ ಮನಸ್ಸು, ಉತ್ಸಾಹ, ಲವಲವಿಕೆಗಳು ದೊರೆಯಲಾರವು. ಅಂತೆಯೇ ಜಗತ್ತು ಮತ್ತು ವಿಶ್ವ ಅಪಾರವಾದ ಶಕ್ತಿ ಮೂಲದೊಂದಿಗೆ, ವಿಶಿಷ್ಟವಾದ ಕಾಂತೀಯ ಶಕ್ತಿಯೊಂದಿಗೆ ತನ್ನದೇ ಆದ ಸ್ಥಿರತೆಯನ್ನು, ಸ್ಥಿರತೆಯಿಂದಾಗಿ ಭದ್ರತೆಯನ್ನು ಪಡೆದುಕೊಳ್ಳುತ್ತದೆ.

ಭೂಮಿಯೇ ಒಂದು ಬೃಹತ್‌ ಆದ ಆಯಸ್ಕಾಂತ. ಕಾಂತಿ ವಲಯಗಳಿಂದ ಭೂಮಿ ಸಮೃದ್ದ. ಇದು ಗಮನಾರ್ಹವಾದ ಸಂಗತಿ. ಹೀಗಾಗಿಯೇ ದಿಕ್ಕುಗಳ ವಿಷಯಗಳು ಭಾರತೀಯ ವಾಸ್ತುಶಾಸ್ತ್ರದ ವಿಚಾರದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಉತ್ತರ ಭಾಗಕ್ಕೆ ತಲೆ ಹಾಕಿ ಮಲಗಬಾರದು. ಆಗ್ನೇಯದಲ್ಲಿ ತ್ಯಾಜ್ಯಗಳ ವಿಲೇವಾರಿ ಆಗಬಾರದು. ನೀರಿಗಿಂತ ಎತ್ತರದ ಭಾಗಕ್ಕೆ ಬೆಂಕಿಯ ಒಲೆಗಳು ಬರಬಾರದು. ನೀರಿನ ವಿಚಾರ ತಗ್ಗಿನಲ್ಲೇ ಇರುವಂತಾದರೆ ಅದು ಹರಿಯಲು ಸುಲಭವಾಗದೇ, ನಿಂತ ನೀರಾಗುವ ಅಪಾಯ ಇರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ನಮ್ಮ ವಾಸ್ತು ಪರಂಪರೆಗೆ ಸೂಕ್ಷ್ಮವಾಗಿ ಹೇಳಿದೆ. ಇಲ್ಲಿ ಜನ ಈ ಪರಂಪರೆಯ ಆಶಯಗಳ ಕುರಿತು ಗಮನ ಹರಿಸಬೇಕೇ ವಿನಾ, ವಾಸ್ತು ಒಂದೊಮ್ಮೆ ತುಸು ದೋಷ ಪಡೆದಿದೆ ಎಂದ ಮಾತ್ರಕ್ಕೆ ಎಲ್ಲವೂ ಆಯೋಮಯವಾಗುವ ಪರಿಸ್ಥಿತಿ ಬರಲಾರದು. ಯಾವುದೇ ನಿಯಮಗಳನ್ನು ಅವುಗಳ ಆಶಯದ ಬೆನ್ನು ಹತ್ತಿ, ಅದರಿಂದಾಗಿ ಹೊಮ್ಮುವ ಸಕಾರಾತ್ಮಕ ಅಂಶಗಳನ್ನು ಹಿಡಿಯಲು ಹೋಗಬೇಕೇ ವಿನಾ, ಆಯೋಮಯಗೊಳ್ಳಕೂಡದು.

ಮನೆಯ ಪರಿಸರದಲ್ಲಿ ತುಳಸಿ, ಗುಲಾಬಿ, ಸಂಪಿಗೆ, ಕರವೀರ, ಬಿಲ್ವಪತ್ರೆ, ಮಜ್ಜಿಗೆ ಹುಲ್ಲು, ಸರ್ಪಗಂಧಿ, ಬಾಳೆ, ತೆಂಗು, ಪೇರಲ, ಬಿಂಬಲದಂಥ ಸಸ್ಯಗಳು ಬೆಳೆದರೆ, ಸೇವಂತಿಗೆ, ಮಲ್ಲಿಗೆ, ಜಾಜಿ, ನಿತ್ಯ ಪುಷ್ಪಗಳಂಥವನ್ನು ಬೆಳೆಯುವುದು ಉತ್ತಮವೇ. ನಿಷಿದ್ಧವೇನಲ್ಲ. ಮನೆಯಲ್ಲಿನ ದೇವರ ಪೂಜೆಗೆ ಈ ಗಿಡಗಳು ಅವಶ್ಯವಾಗಿಬೇಕು. ಈ ಹೂಗಳು ಗಿಡ, ತುಳಸಿ ಗಿಡ ಮುಂತಾದವು ಒಂದು ಸೊಗಸನ್ನೂ ಮನೆಯ ಪರಿಸರಕ್ಕೆ ನೀಡುತ್ತವೆ. ವಿನಾಕಾರಣ ಹೂ ಗಿಡಗಳ, ಹಣ್ಣು ಕಾಯಿಗಳ ಗಿಡ, ಮರಗಳ ವಿಚಾರದಲ್ಲಿ ಭಯದ ಅವಶ್ಯಕತೆಯೇ ಇಲ್ಲ.

ಆದರೆ ಯಾವುದೇ ರೀತಿಯ ಬೃಹದ್‌ ಮರಗಳು ಮನೆ ಎದುರು, ಸುತ್ತು ಮುತ್ತ ಬೆಳೆಯುವಂತಾಗಬಾರದು. ಭಾರೀ ಗಾತ್ರದ ಮರಗಳ ಬೇರುಗಳು ಮನೆಯ ತಳಹದಿಯನ್ನು ಹಾಳುಗೆಡವುತ್ತವೆ. ಮನೆಯ ಬುನಾದಿಯನ್ನು ಶಿಥಿಲಗೊಳಿಸುತ್ತವೆ. ಈ ಕಾರಣವಾಗಿ ಇಂಥ ಮರಗಳು ಭದ್ರತೆಯ ದೃಷ್ಟಿಯಿಂದ ನಿಷಿದ್ಧ. ಇನ್ನೂ ಒಂದು ಸೂಕ್ಷ್ಮವಿದೆ. ಬೃಹತ್‌ ಮರಗಳು ಮಳೆಗಾಲದ ಬಿರುಗಾಳಿಗೆ ಉರುಳಿ ಮನೆಯ ಮೇಲೇ ಬಿದ್ದರೆ ಎಂಥ ಅಪಾಯವೆಂಬುದನ್ನು ಯಾರಾದರೂ ಊಹಿಸಬಹುದು. ಬೃಹತ್‌ ಮರಗಳಲ್ಲಿ ಸೂಕ್ತವಲ್ಲದ ಪ್ರಾಣಿಗಳು, ಹಾವು, ಸರೀಸೃಪಗಳು, ಪಕ್ಷಿಗಳು ವಾಸಿಸುತ್ತ ಅವು ಜಂತು ಜನ್ಯವಾದ ಸಮಸ್ಯೆಗಳನ್ನು ಮನೆಯಲ್ಲಿ ನಿರ್ಮಿಸಬಹುದಾಗಿದೆ.

ಅನಾವಶ್ಯಕವಾದ ಮರಗಳ ಬೃಹತ್‌ ಉಪಸ್ಥಿತಿ ಮನುಷ್ಯನ ಮನೋಮಂಡಲದ ಮೇಲೆ ರಾತ್ರಿಯ ಹೊತ್ತು ನಕಾರಾತ್ಮಕ ಸಂವೇದನೆಗಳನ್ನು ತರುತ್ತವೆ ಎಂಬುದು ವಾಸ್ತುವಿನ ಕುರಿತಾದ ಹಿನ್ನೆಲೆಯಲ್ಲಿ ನಾನು ಅರಿಯಬೇಕು. ನಾಡಿನ ಬೆಳವಣಿಗೆಗೆ ಕಾಡು ಬೇಕೇಬೇಕು. ಆದರೆ ಮನೆಯ ಸುತ್ತವೇ ಕಾಡು ಸರ್ವಥಾ ನಿಷಿದ್ಧ. ಆಧುನಿಕ ವಿಜ್ಞಾನ ಏನನ್ನೂ ಹೇಳಲಿ, ಕೆಲವು ಕ್ಷುದ್ರ ಶಕ್ತಿಗಳು ವಿಸ್ತಾರವಾದ ಪ್ರಪಂಚದುದ್ದಕ್ಕೂ ತನ್ನ ಆಧಿಪತ್ಯವನ್ನು ನಿರ್ವಹಿಸುತ್ತಲೇ ಬಂದಿವೆ. ಷೇಕ್‌ಸ್ಪಿಯರ್‌ನ ನಾಟಕಗಳಲ್ಲಿ, ಜಪಾನೀ, ಚೀನಿ, ಬ್ಯಾಬಿಲೋನಿಯಾ, ಬ್ರಝಿಲ್‌, ಇಸ್ರೇಲಿ, ಈಜಿಪ್ಟ್, ರೋಮನ್‌, ಕಥಾ ಹಂದರಗಳಲ್ಲಿ ಕ್ಷುದ್ರ, ಅಪಸವ್ಯ ಜೀವ ಜಾಲ, ಕೆಲವು ಯಕ್ಷಿಣಿ ಶಕ್ತಿಗಳ ಬಗ್ಗೆ, ಅನಪೇಕ್ಷಿತ ಸಂವಹನ, ವಾಮ ಆಚಾರಗಳ ಬಗ್ಗೆ ಉಲ್ಲೇಖಗಳು ದಟ್ಟವಾಗಿವೆ. ಈ ಕಾರಣಗಳು ಹಾಗೂ ಬೃಹತ್‌ ಮರಗಳು ಒಂದು ಅವಿನಾ ಸಂಬಂಧ ಹೊಂದಿರುವ ವಿಚಾರ ವಿಶ್ವದ ಅನೇಕ ಪ್ರಾಚೀನ ಸಂಸಕೃತಿಗಳ ಉಲ್ಲೇಖ, ಪಠ್ಯಗಳಲ್ಲಿ ಇವು ನಿಕ್ಷೇಪಗೊಂಡಿವೆ. ಇವೆಲ್ಲ ಏನೇ ಇರಲಿ ಬೃಹತ್‌ ಮರಗಳು ಅವುಗಳ ವಿಶಾಲ ಬೆಳವಣಿಗೆಯಿಂದಾಗಿ ಮನೆಯ ಆವರಣಗಳನ್ನು ತಮ್ಮ ಬೇರು, ಕಾಂಡ, ಟೊಂಗೆ, ರೆಂಬೆಗಳಿಂದ ಅಪಾಯಕ್ಕೆ ಒಡ್ಡುವುದಂತೂ ಸತ್ಯ. ನಾವು ಅಲ್ಲಗಳೆಯಲಾಗದು.


Tuesday, 2 January 2018

ವಾಸ್ತು ಮನದ ಮೂಲೆಯ ಭಯಕ್ಕೆ ಕಾರಣವಾಗದಿರಲಿ

ಜಗತ್ತು ಬಹುವಿಧದಲ್ಲಿ ವೈವಿಧ್ಯಪೂರ್ಣತೆಯಿಂದ ತುಂಬಿದೆ. ಜೀವಜಂತುಗಳನ್ನು ಲಕ್ಷಗಟ್ಟಲೆ ಪ್ರಬೇಧಗಳನ್ನು ಹೊಂದಿದೆ. ಸ್ವಭಾವದಲ್ಲಿ ಒಂದು ಜೀವದ ವಿಧಾನ ಇನ್ನೊಂದಕ್ಕೆ ವಿರೋಧಿಯಾಗುತ್ತದೆ. ಗಂಡ ಹೆಂಡತಿಯರೇ ಆದರೂ ಹೊಂದಾಣಿಕೆಗೆ ಕಷ್ಟವಾಗುತ್ತದೆ. ನೀರಿಗಿಂತ ರಕ್ತ ಹೆಚ್ಚು ಸಾಂದ್ರತೆಯದ್ದಾದರೂ ತಂದೆ ಮಕ್ಕಳಿಗೇ ಹೊಂದಾಣಿಕೆ ಬರಲಾರದು. ಮನದೊಳಗೆ ಪ್ರೀತಿಯಿದ್ದರೂ ಹೊರಗೆ ಕಟುವಾಗಿ ವರ್ತಿಸುವ ಮಂದಿ. ಏನೋ ಅಹಂ ಒಂದು ಒಳಗೆ ಸುರಕ್ಷಿತ. ಹೇಳುವುದು ಆಚಾರ ತಿನ್ನುವುದು ಬದನೆಕಾಯಿ ಎಂಬ ಮಾತು ಪ್ರತಿದಿನ ನಮ್ಮ ಗಮನಕ್ಕೆ ಬರುತ್ತಿರುತ್ತದೆ.  ಬೇರೆಯವರು ತಿನ್ನುವ ಬದನೆಕಾಯಿ ಬಗ್ಗೆ ತಿಳಿಯುವ ಜಾಣತನ ನಮಗಿದೆ. ನಮ್ಮದನ್ನು ನಾವು ವೈಯುಕ್ತಿಕವಾಗಿ ಗಮನಿಸಲಾರೆವು. ಇದೊಂದು ಚೋದ್ಯ. ಹೀಗಾಗಿ ಆಹಾರ, ನಿದ್ರಾ, ಮೈಥುನಾದಿ ಅವಶ್ಯಕತೆಗಳ ಮೂಲಭೂತ ವಿಚಾರಗಳೊಂದಿಗೆ ಭಯವೂ, ಪ್ರಾಣಗಳನ್ನು ಮಾನವನೂ ಒಂದು ಪ್ರಾಣಿಯಾದ್ದರಿಂದ ಅದು ನಮ್ಮನ್ನು ಸುತ್ತಿಕೊಂಡಿತು.

 ಹೀಗಾಗಿ ಆಹಾರ ನಿದ್ರಾ ಭಯ ಮೈಥುನಗಳು ನಮಗೆ ಅನಿವಾರ್ಯ. ಆಹಾರಕ್ಕಾಗಿ ಶ್ರಮ ಬೇಕು. ಶ್ರಮದ ಕಾರಣದಿಂದ ನಿದ್ರೆ ಬೇಕು. ಜೀವ ಜಾಲರಿಯಲ್ಲಿ ಜೀವಗಳ ಕೋಟಿ ಕೋಟಿ ಮಿಸುಕಾಟಗಳು ಕಾಮದ ನೀಲಾಂಜನದ ಬತ್ತಿ ಉರಿಸಿ ಮೈಥುನವನ್ನು ಅನಿವಾರ್ಯವಾಗಿಸಿತು. ನಮ್ಮನ್ನು ನಾವು ಪುನರ್‌ ರೂಪಿಸಿಕೊಳ್ಳುವ ಸಂತಾನಾಭಿವೃದ್ಧಿ ಅತ್ಯಗತ್ಯವಾದ ವಿಷಯ. ಈ ಎಲ್ಲದರ ನಡುವೆ ಏನೋ ಭಯ ಆತಂಕ ಅಸುರಕ್ಷತೆ ಪಾಪಭೀತಿ ಬೆನ್ನು ಬಿಡದು.

 ಈ ಕಾರಣದಿಂದಲೇ ಮೆದುಳಿನ ಸರ್ವೋತ್ಕೃಷ್ಟ ಬೆಳವಣಿಗೆಗೆ ಅವಕಾಶ ಒದಗಿದ್ದು ನೆಲೆಗಟ್ಟಾಗಿ ಮಾನವ ಸಾಮಾಜಿಕ ಜೀವಿಯಾದ. ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳಲು ಮನೆ, ವಠಾರ, ಬೀದಿ, ಊರು, ರಾಜ್ಯ, ಮೋಹ, ಸ್ವಾರ್ಥ, ಅತಿಯಾದ ವಿಷಯಾಸಕ್ತಿ, ಹೊನ್ನು ಮಣ್ಣುಗಳಿಗಾಗಿನ ಅತಿಯಾದ ಆಕಾಂಕ್ಷೆ, ಹೆಣ್ಣು ಗಂಡಿಗೆ ಗಂಡು ಹೆಣ್ಣಿಗೆ ಮಾಯೆಯಾಗಿ ಒದಗಿ ಚಿಮ್ಮುವ ಭೋಗಕ್ಕಾಗಿನ ಲಾಲಸೆ ಇತ್ಯಾದಿ ಇತ್ಯಾದಿ ಮನುಷ್ಯ ಮನುಷ್ಯನಾಗಲು ಬಿಡಲಿಲ್ಲ. ಮನುಷ್ಯನಾಗದೆ ಬದುಕಿ ಬಾಳಲು ಸಾಧ್ಯವಾಗಲಿಲ್ಲ.

 ಈ ಸಂದರ್ಭದಲ್ಲಿ ಮನುಷ್ಯನ ನೆರವಿಗೆ ಬಂದದ್ದು ಅವನೊಳಗಿನ ಪ್ರತಿಭೆ. ಮಾತು, ಸಂಗೀತ, ನೃತ್ಯ ಶಿಲ್ಪ ಸಂಗೀತ ಕಸೂತಿ ಕುಸುರೀ ಕಲೆ, ಉಡುಪು, ಒಡವೆ, ಸುಗಂಧ, ಹೂವು ಹಣ್ಣು , ಅಡುಗೆ ಇತ್ಯಾದಿ ಇತ್ಯಾದಿ. ಆದರೆ ಇವನ್ನೆಲ್ಲಾ ಪ್ರತಿಭೆಯ ಮೂಲಕ ಸಾಂಸ್ಕೃತಿಕ ಸಂವಿಧಾನಕ್ಕೆ ಒಳಪಡಿಸಿದ ಮನುಷ್ಯ ತನ್ನ ಸಂವಿಧಾನದಲ್ಲಿ ತಾನು ಬಂಧಿಯಾಗಿರಲೂ ಬಯಸದ ಮೃಗೀಯತೆಯನ್ನು ಬಿಡದಾದ. ಹೀಗಾಗಿ ಅಸಂತೋಷಗಳಿಗೆ ಕಾತರ ಕಿರಿಕಿರಿ ಮಾನಸಿಕ ವಿಹ್ವಲತೆಗಳಿಂದ ನರಳಲ್ಪಟ್ಟ. ಹಾಗಾದರೆ ಮನುಷ್ಯನ ಮೇಲೆ ಕೇವಲ ಅವನ ಇಚ್ಛಾಶಕ್ತಿ ಸ್ಥೈರ್ಯ, ಧೈರ್ಯಗಳು ಮಾತ್ರ ಇದ್ದರೆ ಎಲ್ಲವೂ ಸುಸೂತ್ರವೇ. ಇಲ್ಲ ಎಂಬುದು ಉತ್ತರವಾದಾಗ ಹಾಗಾದರೆ ಏನು ಎಂಬ ಪ್ರಶ್ನೆ ಎದುರಾಯ್ತು.

 ದೇವರು ಗ್ರಹಗಳ ಪ್ರಭಾವ, ವಾಸ್ತು ಪರಿಶುದ್ಧತೆ, ಸತ್ಯ, ನ್ಯಾಯ, ಧರ್ಮಗಳೆಂಬ ವೈಚಾರಿಕ ಮಂಥನ ಮನುಷ್ಯನಿಂದ ತನ್ನ ನೆಲೆ ಕಂಡುಕೊಳ್ಳಲು ಪ್ರಾರಂಭವಾಯ್ತು. ಆದರೆ ದೇವರುಗಳ ಬಗೆಗೆ, ಗ್ರಹಗಳ ಬಗೆಗೆ ಭಯ ಹುಟ್ಟಿಸುವ ಬುದ್ದಿವಂತರು ಧನದಾಹಕ್ಕೆ ತುತ್ತಾಗೆ ಕ್ರೂರಿಗಳಾದರು. ಇದರ ಅರ್ಥ ಎಲ್ಲರೂ ಎಂದಲ್ಲ. ಹೀಗಾಗಿ ಮನುಷ್ಯ ಮನುಷ್ಯನಾಗಬೇಕೇ ವಿನಃ ದೇವರೂ ಆಗಬಾರದು. ಮೃಗವೂ ಆಗಬಾರದು. ವಾಸ್ತು ಶಿಸ್ತು ಅಗತ್ಯ. ಅದಿರದಿದ್ದಲ್ಲಿ ಮನೆಯ ಪ್ರಸನ್ನತೆ ಏರುಪೇರಾಗುತ್ತದೆ. ಆದರೆ ನಿಧಾನವಾಗಿ ಸರಿಯಾಗಿ ತಿಳಿದವರಿಂದ ಒಂದೇಟಿಗೆ ಎಂಬಂತೆ ಅವಸರವನ್ನು ತೋರದೆ ವಾಸ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು. ಇದನ್ನು ಬಿಟ್ಟು ಒಳ ಹೃದಯದಾಳದಲ್ಲಿ ಅವ್ಯಕ್ತ ಭಯ ಪಟ್ಟುಕೊಂಡು ಅಸ್ತವ್ಯಸ್ತವಾಗದಿರಿ. ನಿಮ್ಮ ಮನಸ್ಸು ದೃಢವಾಗಿರಲಿ. ಪ್ರತಿ ಹಂತಗಳನ್ನು ನಿಧಾನವಾಗಿ ದಾಟಿ ಒಳಿತುಗಳಿಗೆ ಭಯ ತೊರೆದು ದಾರಿ ಮಾಡಿಕೊಡಿ.


ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...