ವಾಸ್ತು ನಿಯಮಗಳೂ, ಸರಳ ಪರಿಹಾರಗಳೂ
ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ...
ಮನೆಯನ್ನು ಕಟ್ಟುವಾಗಿನ ವಾಸ್ತು ನಿಯಮಗಳನ್ನು ಪ್ರಮುಖವಾಗಿ ಪಡಸಾಲೆ, ಅಡುಗೆ ಮನೆ, ಬಚ್ಚಲುಮನೆ, ಮಲಗುವ ಕೋಣೆ, ಸಂಡಾಸು, ಸ್ಟೋರ್ ರೂಂ. ಕಿಟಕಿ ಬಾಗಿಲು, ದೇವರ ಕೋಣೆ ಮುಂತಾದವುಗಳೆಲ್ಲ ಸೂಕ್ತವಾಗಿಯೇ ಮಾಡಿರುತ್ತೀರಿ ಎಂದುಕೊಳ್ಳೋಣ. ಇವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಅಷ್ಟು ಸುಲಭವಲ್ಲ ಎಂಬ ಮಾತು ಬೇರೆ. ಏನೋ ಒಂದು ದೋಷ ಹಾಗೆ ಸುಮ್ಮನೆ ಉಳಿದೇಬಿಡುತ್ತದೆ. ಸರಿಯಾದ ಶಕ್ತಿ ಧಾತುಗಳನ್ನು ಸಂಪಾದಿಸಿಕೊಂಡರೆ ಉಳಿದಿರುವ ಕಿಂಚತ್ ಲೋಪಗಳನ್ನು ಸುಧಾರಿಸಿಕೊಳ್ಳಬಹುದಾಗಿದೆ. ವಿವೇಚನೆಯೊಂದಿಗೆ ಇಂದಿನ ಕೆಲವು ಸರಳ ಪರಿಹಾರಗಳನ್ನು ನೀವು ನಡೆಸಿ, ಉಳಿದುಹೋದ ದೋಷಗಳನ್ನು ಸಮತೋಲನಗೊಳಿಸಿ, ಉಂಟಾಗಲಿರುವ ತೊಂದರೆಗಳನ್ನು ತಪ್ಪಿಸಿಕೊಳ್ಳುವುದು ಸೂಕ್ತ.
ಸಾಧಕ ಶಕ್ತಿಗಾಗಿನ ಜಾಗ್ರತ ಕೋಶಗಳು ನಿಮ್ಮಲ್ಲಿ ಕ್ರಿಯಾಶೀಲವಾಗಬೇಕು. ದೇವಿ ಆರಾಧನೆ, ದತ್ತಾತ್ರೇಯ ಆರಾಧನೆ, ಗಣಪತಿ, ರಾಮರಕ್ಷಾ, ಮಾರುತಿ ಆರಾಧನೆಗಳು ಎಷ್ಟು ಪ್ರಾಬಲ್ಯವನ್ನು ತಡೆಯಲು ಸಾಧ್ಯ? ಎಂಬುದು ಇಲ್ಲಿ ಮುಖ್ಯ. ಜೀವ ಧಾತುಗಳಾದ ಗಾಳಿ, ನೀರು, ಬೆಂಕಿ, ಮಣ್ಣುಗಳ ಜೊತೆ ಆಕಾಶ ತತ್ವ ಒಂದು ಸುಲಲಿತವಾದ ಧಾಟಿಯಲ್ಲಿ ನಿಮ್ಮ ನಿಯಂತ್ರಣಕ್ಕೆ ಸಿಕ್ಕಿದರೆ ಅದರಿಂದ ಇಂದ್ರಾದಿ ದೇವತೆಗಳ, ತ್ರಿಮೂರ್ತಿಗಳ ಕುರಿತಾದ ಸಿದ್ಧಿ ಸೂತ್ರಗಳ, ಆದಿ ಶಕ್ತಿ ಮಹಾಮಾಯ ಆ ಶ್ರೀಪೀಠ ಶೋಭಿತಳಾದ ಕ್ಷೀರ ಸಮುದ್ರ ತನಯೆ ಲಕ್ಷ್ಮಿಯ, ಬುದ್ಧಿಬಲ ನೀಡುವ ಕಾಮರೂಪಿಣಿ ಮಂಗಳಮಯ ಶ್ರೀಶಾರದೆಯ ಅಭಯ, ರಕ್ಷೆ ಸಿಗಲು ಸಾಧ್ಯ. ಪರಾತ್ಪರವಾದ ಶಕ್ತಿಯನ್ನು ಧ್ಯಾನಿಸುವ ಏಕಾಗ್ರತೆಯನ್ನು ಮಂತ್ರಶಕ್ತಿಯಿಂದ, ಧಾರ್ಢ್ಯತೆ ಪಡೆದ ಧಾತುಗಳಿಂದ, ವಾಸ್ತುಪುರುಷನ ಅಭಿವ್ಯಕ್ತಿ ವೃದ್ಧಿಸುವ ಚೈತನ್ಯ ಪಡೆಯಬೇಕು. ಇದು ಸುಲಭದ ಕೆಲಸವಲ್ಲ.
ಸಾಧನೆಯಿಂದ ಸಾಧಿಸಬೇಕು. ಭಕ್ತಿಯಿಂದ ಗೆಲ್ಲಬೇಕು. ಮನೆಯಲ್ಲಿ ಪ್ರತಿನಿತ್ಯವೂ ಬೇಕಾದ ಸಲಕರಣೆಗಳ ಆಯ್ಕೆಯ ವಿಚಾರದಲ್ಲಿ ಏನನ್ನೂ ಯೋಚಿಸದೆಯೇ ವಾಸ್ತು ನಾಡಿಯನ್ನು ಅಸ್ತವ್ಯಸ್ತಗೊಳಿಸುವ ಕೆಲಸ ಮಾಡಬೇಡಿ. ಪ್ರತಿ ದಿನವೂ ಬಹಳ ಅಮೂಲ್ಯವಾದದ್ದು. ಪ್ರತಿಕ್ಷಣವೂ ಬಾರದಿರುವಂಥದ್ದು. ಸುಮ್ಮನೇ ಕ್ಷಣಗಳು ಜಾರುತ್ತಿರುತ್ತದೆ. ನಾಳೆ ಮಾಡಿದರಾಯ್ತು ಎಂದು ಶುದ್ಧತೆಯನ್ನು ತುಂಬಿಕೊಂಡ ಪ್ರಕೃತಿ ಅಲೆಗಳನ್ನು ಸುಮ್ಮನೆ ವ್ಯರ್ಥ ಗೊಳಿಸಿಕೊಳ್ಳುತ್ತೀರಿ. ಮನೆಯ ದಿಕ್ಕು ಪೂರ್ವ, ಉತ್ತರ ಎಂದು ಗಾಬರಿ ಹುಟ್ಟುವಷ್ಟು ಗಡಿಬಿಡಿಯೊಂದಿಗೆ ಧಾವಿಸಿ ಕೈವಶ ಪಡೆಯಲು ಮುಂದಾಗುತ್ತೀರಿ. ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ. ಸ್ಟೋರ್ ರೂಮಿನಲ್ಲಿ ಇಡಬೇಕಾದ ಸರಕುಗಳೇನು ಎಂಬುದನ್ನು ಯೋಚಿಸದೆಯೇ ಎಲ್ಲವನ್ನೂ ರಾಶಿ ಮಾಡಿ ತುಂಬುತ್ತೀರಿ. ಪಶ್ಚಿಮ ದಿಕ್ಕಿಗೆ ಬೆಡ್ ರೂಮ್ ಗಳಿರಲಿ ಎಂಬ ವಿಚಾರ ಸರಿ. ಆದರೆ ಮುಕ್ತ ಹಜಾರಕ್ಕೂ ಬೆಡ್ ರೂಮಿಗೂ ಹೊಂದಿಸಿಕೊಳ್ಳಬೇಕಾದ ಅಗಲ ಉದ್ದಗಳನ್ನು ಸೂಕ್ತವಾಗಿ ಇರಿಸಿಕೊಳ್ಳಲು ಯೋಚಿಸುವುದಿಲ್ಲ.
ಮುಖ್ಯವಾಗಿ ಅಪಾರ್ಟ್ಮೆಂಟ್ ನಲ್ಲಿ ಮಕ್ಕಳನ್ನು ಎಲ್ಲೆಂದರಲ್ಲಿ ಆಡಲು ಕಳುಹಿಸುತ್ತೀರಿ. ಅವರ ಬಳಿ ಎಲೆಕ್ಟ್ರಾನಿಕ್ ಸರಕುಗಳಾದ ಮೊಬೈಲ್ ಡಿಜಿಟಲ್ ವಾಚ್ ಇನ್ನೇನೋ ಆಟಿಕೆ ಇರುತ್ತದೆ. ದಕ್ಷಿಣ ದಿಕ್ಕಿನ ಆಘಾತಗಳು ಎಂಥದಿರಬಹುದು ಇದರಿಂದಾಗಿ ಎಂಬುದನ್ನು ಯೋಚಿಸುವುದಿಲ್ಲ. ಇವನ್ನೆಲ್ಲ ಸೂಕ್ತವಾದ ಸುವಸ್ತುಗಳು, ಹರಳುಗಳು, ಸ್ವಸ್ತಿಕ್, ಶಂಖು ಚಕ್ರ, ಗದಾ ಪದ್ಮ ತ್ರಿಶೂಲ ಧಾತುಗಳ ಮೂಲಕ ಒಂದು ಸಮತೋಲನ ಪಡೆಯಲು ಸುಲಭವಾದ ದಾರಿ ಏನೆಂಬುದನ್ನು ಅರಿಯಲು ಮುಂದಾಗುವುದಿಲ್ಲ. ಬದಲಾದ ಕಾಲಘಟ್ಟದಲ್ಲಿ ಉಂಟಾಗುವ ವಿಕಿರಣಗಳಿಂದಾಗುವ ಅಪಾಯಗಳನ್ನು ತಪ್ಪಿಸಿಕೊಳ್ಳಲು ರಕ್ಷಣೆಯನ್ನು ಬಯಸುತ್ತದೆ. ಸುಲಭವಾದ ದಾರಿಯಿಂದ, ಸಾಧನಗಳಿಂದ ರಕ್ಷೆ ಸಾಧ್ಯ.

No comments:
Post a Comment