ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ ಬೋರು ಹೊಡೆಸುವ ಸಂದರ್ಭದಲ್ಲಿ ಬೇಕಾದ ನೀರನ್ನು ಕಾರ್ಪೊàರೇಷನ್ನ ನಗರ ಸಭೆ ಮುನಿಸಿಪಾಲಿಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ರೀತಿಯಲ್ಲಿ ಯುಕ್ತವಾದ ವಿಧಿ ವಿಧಾನಗಳನ್ನು ಅನುಸರಿಸುವುದಿಲ್ಲ. ಹೇಗೋ ಸಂಗ್ರಹಿಸುತ್ತಾರೆ. ಹೇಗೋ ನೀರಿನ ಪೂರೈಕೆ ಮನೆಯೊಳಗೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ
ಪ್ರತಿ ನಗರ ಪ್ರತಿ ಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ.
ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ (ಉತ್ತರ ಹಾಗೂ ಪೂರ್ವ ದಿಕ್ಕುಗಳ ನಡುವೆ)
ತೋಡಬೇಕು. ಹಾಗೆಯೇ ಬೋರವೆಲ್ ಹಾಕಿಸುವುದಾದರೂ ಅಲ್ಲಿಯೇ ಹಾಕಿಸಬೇಕು. ಒಳಾಂತರ್ಗತವಾಗಿ ಮನೆಯಲ್ಲಿ
ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡಾ ಈಶಾನ್ಯ ಮೂಲೆಯಲ್ಲೇ ಆಗಬೇಕು. ಹೀಗೆ ನಿರ್ಮಿಸಿಕೊಳ್ಳುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್ ಗೋಡೆಗಳಿಗೆ ಹೊಂದಿರಬೇಕಾ ಮೂಲೆಗೇ ನಿರ್ದಿಷ್ಟವಾಗಿ ಸಮಾವೇಶವಾಗಿರಬೇಕೋ ಎಂಬುದೆಲ್ಲಾ ತಲೆಕೆಡಿಸಿಕೊಳ್ಳುವ ವಿಚಾರವಲ್ಲ.
ಮನೆಯ ಸುಮಾರು ಒಟ್ಟೂ ವಿಸ್ತೀರ್ಣದ ಶೇಕಡಾ ಒಂದು ಭಾಗದಷ್ಟು ಉದ್ದಗಲಗಳು ಸಂಪಿಗೆ ಒದಗಿರಲಿ ಎಂಬುದನ್ನು
ಗಮನಿಸಿ. ಸಂಪಿನ ಆಳ ಆರಡಿಗಳನ್ನು ಮೀರದಿರಲಿ. ಇನ್ನಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪನ್ನು ಆಗಾಗ ಸ್ವತ್ಛಗೊಳಿಸುವುದು ಆರೋಗ್ಯಕ್ಕೆ ಬಹುಮುಖ್ಯ.
ಮಳೆನೀನ ಕೊಯ್ಲನ್ನು ಅಳವಡಿಸಿಕೊಳ್ಳುವುದಾದರೆ ಮುಕ್ತವಾಗಿ ತೆರೆಯಲ್ಪಟ್ಟ ಬಾಯ ರೀತಿಯ ಕ್ರಮವನ್ನು
ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡಾ ಈಶಾನ್ಯ ಮೂಲೆಗೆ ಸ್ಥಾಯಿಗೊಳ್ಳಿ. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರಿಗಿರುತ್ತದೆ. ಈಜುಕೊಳವನ್ನು ಕೂಡಾ ನಿರ್ಮಿಸುವ ವಿಚಾರ ಇಟ್ಟುಕೊಂಡಿರುತ್ತಾರೆ.
ಈ ಏನೇ ಇತರ ನೀರಿಗೆ ಸಂಬಂಧಿಸಿದ ವಿಚಾರಗಳು ಈಶಾನ್ಯ ದಿಕ್ಕಿನ ಜಾಗೆಯನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು ಗಮನರಲಿ.
ಹೀಗೆಯೇ ಮನೆಯ ಮೇಲಿನ ಓವರ್ ಹೆಡ್ ಟ್ಯಾಂಕುಗಳು ಮಾತ್ರ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ
ಪಶ್ಚಿಮ ದಿಕ್ಕುಗಳು ಒಂದಾಗುವ ಜಾಗವೇ ನೈಋತ್ಯವಾಗಿದೆ. ಇಲ್ಲಿ ಟ್ಯಾಂಕ್ ಇಡುವುದು ಸೂಕ್ತವೂ ಕ್ಷೇಮವೂ ಆಗಿದೆ. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ ಪ್ರದಕ್ಷಿಣಾಕಾರದಲ್ಲಿ ಓವರ್ ಹೆಡ್ ಟ್ಯಾಂಕ್‌ಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತಾ ಬೇಡ. ಪ್ರಾಣಿಕ್ ಹೀಲಿಂಗ್ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕ ನೀರಿನ ಓಡಾಟದಿಂದ ದೊರಕುತ್ತದೆ. ಆ ಪ್ರದಕ್ಷಿಣಾ ರೂಪದಲ್ಲಿ ನೀರು ಸರಬರಾಜಾದರೆ ವೈಫಲ್ಯಗಳು ಹೆಚ್ಚು. ಆರೋಗ್ಯದ ಮೇಲೂ ಇದು ದುಷ್ಪರಿಣಾಮ
ಬೀರುತ್ತದೆ.

No comments:
Post a Comment