Wednesday, 22 November 2017

ವ್ಯಾಪಾರದ ಸ್ಥಳದಲ್ಲಿನ ಕೆಲ ವಾಸ್ತು ಶಿಸ್ತುಗಳು

ಹೊಟ್ಟೆ ತುಂಬಿದ ಮೇಲೆ ದುಷ್ಟತನವನ್ನು ಮನುಷ್ಯನ ನೀಚ ಬುದಿಟಛಿ ಮಾಡಿಸುತ್ತದೆ. ಹೊಟ್ಟೆ ತುಂಬಿರದವನ ಕ್ರೌರ್ಯದಲ್ಲಿ ಸಮಾಜದ ಪಾತ್ರವೂ ಇದೆ. ಹೀಗಾಗಿ ಇವೆರಡರ ಅಂತರವನ್ನು ಚೆನ್ನಾಗಿ ತಿಳಿದು ವ್ಯಾಪಾರದ ವಿಷಯದಲ್ಲಿ ಎಚ್ಚರ ವಹಿಸಬೇಕು. ನಮ್ಮ ವ್ಯಾಪಾರದಿಂದ ಇತರರ ಶೋಷಣೆಯ ಬಗೆಗಾಗಿನ ಬುನಾದಿ ಹಾಕಬಾರದು.

ವಾಸಿಸುವ ಮನೆಗಳಲ್ಲಿ ಕೆಲವು ಉತ್ತೇಜಕ ಸ್ಪಂದನಗಳು ಹೇಗೆ ಮುಖ್ಯವೋ ಹಾಗೆ
ವ್ಯಾಪಾರದ ಸ್ಥಳದಲ್ಲಿ ಅನೇಕ ವಿಧವಾದ ಎಚ್ಚರಿಕೆಗಳನ್ನು ನಾವು ಹೊಂದಬೇಕಾಗುತ್ತದೆ.
ಜೀವನದ ಯಾತ್ರೆಯಲ್ಲಿ ಮನೆಯ ಪಾತ್ರವಷ್ಟೇ ಮುಖ್ಯವಾದ ಪಾತ್ರ ಕೆಲಸದ ಸ್ಥಳದಲ್ಲಿನ
ಶಕ್ತಿಗೆ ಸಿಗುವ ಸಕಾರಾತ್ಮಕತೆಯ ಸಿದಿಟಛಿ. ಒಂದು ಇನ್ನೊಂದನ್ನು ಹೊಂದಿಕೊಂಡೇ ಸಾಗಿದರೆ ಜೀವನದ ಸಮತೋಲನಕ್ಕೆ ಪೂರ್ತಿ ಅರ್ಥ. ಹೊಟ್ಟೆ ತುಂಬಿರದ ಮನುಷ್ಯನ ಕ್ರೌರ್ಯ ಬೇರೆ. ತುಂಬಿರದವನ ಕ್ರೌರ್ಯಕ್ಕೆ ಬೆಂಬಲ ಸಿಗಬೇಕು ಎಂದಲ್ಲ ಈ ಮಾತಿನ ಅರ್ಥ.

ಹೊಟ್ಟೆ ತುಂಬಿದ ಮೇಲೆ ದುಷ್ಟತನವನ್ನು ಮನುಷ್ಯನ ನೀಚ ಬುದಿಟಛಿ ಮಾಡಿಸುತ್ತದೆ.
ಹೊಟ್ಟೆ ತುಂಬಿರದವನ ಕ್ರೌರ್ಯದಲ್ಲಿ ಸಮಾಜದ ಪಾತ್ರವೂ ಇದೆ. ಹೀಗಾಗಿ ಇವೆರಡರ
ಅಂತರವನ್ನು ಚೆನ್ನಾಗಿ ತಿಳಿದು ವ್ಯಾಪಾರದ ವಿಷಯದಲ್ಲಿ ಎಚ್ಚರ ವಹಿಸಬೇಕು. ನಮ್ಮ
ವ್ಯಾಪಾರದಿಂದ ಇತರರ ಶೋಷಣೆಯ ಬಗೆಗಾಗಿನ ಬುನಾದಿ ಹಾಕಬಾರದು.

ಅಂಗಡಿಯ ವ್ಯಾಪಾರಿ ಸ್ಥಳವು ದಕ್ಷಿಣ ದಿಕ್ಕಿನ ಕಡೆಯ ಬಾಗಿಲಾಗಿದ್ದರೆ ಕೆಲವು ನಿಭಂಧನೆಗಳು ಮುಖ್ಯವಾಗುತ್ತದೆ. ದಕ್ಷಿಣದಿಂದ ಉತ್ತರಕ್ಕೆ ನೆಲದ ಮಟ್ಟ ಇಳಿಜಾರಾಗಿರಲಿ. ಪಶ್ಚಿಮದಿಂದ ಪೂರ್ವಕ್ಕೆ ಕೂಡಾ ಇಳಿಜಾರಾಗಿ ಇರಬೇಕು. ಹೀಗಿರುವಾಗ ನೈರುತ್ಯವನ್ನು ಪ್ರಧಾನವಾಗಿಸಿಕೊಳ್ಳಬೇಕು. ನೈಋತ್ಯದಲ್ಲಿ ವ್ಯಾಪಾರದ ಸ್ಥಳದ ಹಣದ ಗಲ್ಲಾಪೆಟ್ಟಿಗೆಯ ವಿಚಾರ ಮುಖ್ಯವಾಗಿರಬೇಕು. ನೈಋತ್ಯದಿಂದ ಪೂರ್ವದಿಕ್ಕನ್ನು ಗಮನಿಸುವ ಹಾಗೆ ಇದ್ದು ಬಲಗಡೆಗೆ ಗಲ್ಲಾಪೆಟ್ಟಿಗೆ ಬರುವಂತಾಗಲಿ.
ಕಪಾಟುಗಳು ಲೆಕ್ಕದ ಕಡತಗಳು ಯೋಜನಾ ಕೋಷ್ಟಕಗಳ ಫೈಲುಗಳನ್ನು ತುಂಬಿಕೊಂಡಿರಲಿ. ಮೊದಲು ವ್ಯಾಪಾರದ ಕೆಲಸದ ಸ್ಥಳದಲ್ಲಿ ಗಾದಿಯ ಮೇಲೆ ಕುಳಿತು ಭಾರತ ದೇಶದಲ್ಲಿ ವಹಿವಾಟು ನಡೆಯುತ್ತಿತ್ತು. ಈಗ ಮೇಜು ಟೇಬಲ್ಲುಗಳು ಆಧುನಿಕವಾಗಿ ಈ ಗಾದಿಗಳನ್ನು ಹಿಂದಕ್ಕೆ ಸರಿಸಿದೆ. ತೊಂದರೆ ಇಲ್ಲ.

ಮನೆಯ ಮುಖವು ಈಶಾನ್ಯ ಅಥವಾ ಪೂರ್ವವನ್ನು ನೋಡಲಿ ವಿನಾ ಮೇಜು ಖುರ್ಚಿಗಳು ಕಪಾಟುಗಳಿ ಈಶಾನ್ಯ/ಪೂರ್ವವನ್ನು ಆಕ್ರಮಿಸಬಾರದು. ಆದರೆ ಉತ್ತರಾಭಿಮುಖವಾಗಿ ಗಲ್ಲಾಪೆಟ್ಟಿಗೆ ಎಡಭಾಗಕ್ಕೆ ಜರುಗಲ್ಪಡಲಿ. ಪೂರ್ವಕ್ಕೆ ಮುಖವಾದಾಗ ಬಲಗಡೆಗೆ ಇರಬೇಕು. ಇದನ್ನು ಗಮನಿಸಿ. ದಕ್ಷಿಣದ ಕಡೆ ಮುಂಬಾಗಿಲು ಇರುವ ವ್ಯಾಪಾರಿ ಸ್ಥಳದಲ್ಲಿ ಆಗ್ನೇಯ ಈಶಾನ್ಯ ವಾಯುವ್ಯಗಳ ಕಡೆ ಕುಳಿತು ವ್ಯಾಪಾರ ನಡೆಸಕೂಡದು. ಇವು ಗೋಜಲುಗಳಂತೆ ಕಂಡರೂ ಸಮಾಧಾನದಿಂದ ತಿಳಿಯಿರಿ.

ಒಂದೊಮ್ಮೆ ಅಂಗಡಿಗೆ ಪೂರ್ವಾಭಿಮುಖವಾಗಿ ಬಾಗಿಲು ಇದೆ ಎಂದಾದರೆ ನಷ್ಟವೇನಿಲ್ಲ. ಆದರೆ ಪಶ್ಚಿಮದಿಂದ ಪೂರ್ವಕ್ಕೆ ದಕ್ಷಿಣದಿಂದ ಉತ್ತರಕ್ಕೆ ನೆದ ಮಟ್ಟ ಇಳಿಜಾರಾಗಿರುವಂತೆ ನೋಡಬೇಕು. ಇದರಲ್ಲಿ ಬದಲಾವಣೆ ಇಲ್ಲ. ಇಲ್ಲಿಯೂ ನೈಋತ್ಯದ ಕಡೆಗೇ ಪೂರ್ವಾಭಿಮುಖವಾಗಿ ಯಜಮಾನ ಕಾರ್ಯಾಚರಣೆ ನಡೆಸಬೇಕು.
ಪೂರ್ವಾಭಿಮುಖವಾದಾಗ ಬಲಗಡೆಗೆ ಗಲ್ಲಾಪೆಟ್ಟಿಗೆ ಬರುವಂತಿರಲಿ.

ಕಡತಗಳ ಹಣ ತುಂಬಿದ ಕಪಾಟುಗಳೂ ಕೂಡಾ ಬಲಗಡೆಗೇ ಬರಬೇಕು. ಒಂದೊಮ್ಮೆ
ಕಾರ್ಯಾಚರಣೆ ಉತ್ತರಾಭಿಮುಖವಾದಾಗ ಗಲ್ಲಾಪೆಟ್ಟಿಗೆ ಕಪಾಟು ಇತ್ಯಾದಿ ಧನಕಾರಕ
ಸಲಕರಣೆಗಳು ಎಡಭಾಗಕ್ಕೆ ಹೊಂದಿಸಲ್ಪಡಲಿ. ವ್ಯಾಪಾರಿಯು ದಕ್ಷಿಣ ಆಗ್ನೇಯ ಭಾಗಕ್ಕೆ
ಒರಗಿ ಕುಳಿತಿರುವಂತೆ ಖುರ್ಚಿ ಮೇಜು ಬರಕೂಡದು. ಆಗ್ನೇಯದಲ್ಲಿ ಪೂರ್ವದ
ಗೋಡೆಯನ್ನು ಒರಗದಂತೆ ಸಂಯೋಜನೆ ಇರಬೇಕು.

ಪೂರ್ವ ಅಥವಾ ಉತ್ತರಾಭಿಮುಖ ತೊಂದರೆ ಇಲ್ಲ. ಕ್ಯಾಂಪ್‌ ಬಾಕ್ಸ್‌ ಕಡತಗಳ
ಕಪಾಟುಗಳಿಗೆ ಸುಸಜ್ಜಿತ ಪರಿಣಾಮಕಾರಿಯಾದ ಸ್ಪಂದನಗಳು ದೊರೆತರೇನೇ ವ್ಯಾಪಾರದ ಸಿದಿಟಛಿಗೆ ಪೂರಕವಾದ ಸಾಫ‌ಲ್ಯತೆ ಒದಗುತ್ತದೆ. ವ್ಯಾಪಾರಿಯ ಉದ್ದೇಶ ಲಾಭದ ವಿನಾ ವೇಳೆ ಕಳೆಯಲು ವ್ಯಾಪಾರವನ್ನು ವೃತ್ತಿಯಾಗಿಸಿಕೊಳ್ಳಬಾರದು. ಇಂಥದೊಂದು ಯೋಜನೆಯನ್ನು ತಂದೆಯೊಬ್ಬರು ಸುಮ್ಮನೆ ವೇಳೆ ಕಳೆಯುವುದಕ್ಕಾಗಿ ಹಾಕಿ ಕೊಟ್ಟಾಗ ಮಗನ ವ್ಯಾಪಾರ ಕುಸಿಯುತ್ತ ಹೋಗಿತ್ತು. ಲಕ್ಷಿ$¾ಯು ದೃಢತೆಯನ್ನು ಬಯಸುತ್ತಾಳೆ ತಿಳಿದಿರಲಿ.


No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...