ವಾಯುವ್ಯ ಮೂಲೆಯು ಉತ್ತರ ಹಾಗೂ ದಕ್ಷಿಣ ದಿಕ್ಕನ್ನು ಸಮಾವೇಶಗೊಳಿಸುವ ಭಾಗವಾಗಿದೆ. ಅಗ್ನಿಮೂಲೆಗಿದು ಸಮಾನಾಂತರ ಭಾಗವಾಗಿದ್ದು ಅಗ್ನಿಧರ್ಮಕ್ಕೆ ವಿರುದ್ಧವಾದ ವಾಯುತತ್ವಕ್ಕೆ ಒಂದರ್ಥದಲ್ಲಿ ಇಂಬು ಕೊಡುವಂಥದ್ದು. ಅಗ್ನಿ ಮತ್ತು ಗಾಳೀ ಎರಡೂ ಸೇರಿದರೆ ಆಗುವ ಅನಾಹುತವೇನು ಎಂಬುದು ಎಲ್ಲರೂ ತಿಳಿದ ವಿಷಯವಾಗಿದೆ. ಪ್ರತ್ಯೇಕವಾದ ವಿಶ್ಲೇಷಣೆ ಏನೂ ಬೇಕಿಲ್ಲ. ಆದರೂ ಅಗ್ನಿ ಹಾಗೂ ವಾಯು ತತ್ವ ಒಂದಕ್ಕೊಂದು ಸ್ನೇಹ ಹಾಗೂ ಆತ್ಮೀಯತೆಗೆ ಪೂರಕವಾದುದೂ ಆಗಿವೆ. ಅಗ್ನಿಗೆ ವಾಯುವೇ ಪ್ರಾಣ, ಜೀವಂತಿಕೆಗೆ ಉಸಿರು.
ಹೀಗಾಗಿ ಅಗ್ನಿ ಮೂಲೆಯ ವಿಚಾರವಾಗಿ ಟಿಪ್ಪಣಿಗಳನ್ನು ಒದಗಿಸಿದ್ದು ನೆನಪಿಸಿಕೊಳ್ಳುತ್ತಲೂ ಒಂದೊಮ್ಮೆ ಅಗ್ನಿಮೂಲೆಯಲ್ಲಿ ಅಡುಗೆ ಮನೆ ಇರಿಸಲು, ಕೂಡ್ರಿಸಲು ಸಾಧ್ಯವಾಗದಲ್ಲಿ ಮನೆಯ ವಾಯುವ್ಯ ಮೂಲೆಯಲ್ಲೂ ಅಡುಗೆ ಮನೆಯನ್ನು ಒಳಗೊಳ್ಳಬಹುದಾಗಿದೆ. ಹಾಗೆ ಒಳಗೊಳಿಸುವ ಸಂದರ್ಭದಲ್ಲಿ ಹೀಗೆ ನಿರ್ಮಿಸಿದ ಅಡುಗೆ ಮನೆಯ ಅಗ್ನಿಮೂಲೆಗೆ ಒಲೆಯು ಬರುವಂತೆ ನೋಡಿಕೊಂಡು ಅದರ ಪೂರ್ವಾಭಿಮುಖವಾಗಿ ಮನೆಯೊಡತಿ ಅಡುಗೆ ಮಾಡುವಂತಿರಬೇಕು.
ವಾಯುವ್ಯ ಮೂಲೆ ಈಶಾನ್ಯ ದಿಕ್ಕಿಗಿಂದ ತುಸು ಎತ್ತರವೇ ಇರಬೇಕು. ಈ ಎತ್ತರದ ಭಾಗದ ಉದ್ದ ತುಸು ನೈಋತ್ಯ ಮೂಲೆಗೆ ಸಮೀಪವಾಗುವ ಹಾಗೇ ರಚನೆ ಇದ್ದರೆ ಒಳ್ಳೆಯದು.
ಆದರೆ ನೈಋತ್ಯಕ್ಕೆ ಹತ್ತಿರವಾಗಬೇಕು ಎಂಬ ಕಾರಣಕ್ಕೆ ಕ್ಲಿಷ್ಟತೆಗಳನ್ನು ರೂಪಿಸಿಕೊಳ್ಳುವುದು ಬೇಕಾಗಿಲ್ಲ. ಕ್ಲಿಷ್ಟತೆಗಳನ್ನು ಸಹಿಸಿ ಈ ರಚನೆ ಅಳವಡಿಸುವುದು ಬೇಕಾಗಿಲ್ಲ. ಹಾಗೆಯೇ ವಾಯುಮೂಲೆ ನೆಂಟರಿಷ್ಟರು ಬಂಧು-ಮಿತ್ರರಿಗಾಗಿನ ಕೊಠಡಿಗಳನ್ನು ಒಳಗೊಳ್ಳುವುದೇ ಸೂಕ್ತ. ಮನೆಯಲ್ಲಿನ ಚಿಕ್ಕ ಮಕ್ಕಳಿಗೂ ಕೂಡಾ ಇಲ್ಲಿ ಕೊಠಡಿಗಳಿರುವುದು ಸೂಕ್ತ. ಹೀಗಾಗದಿದ್ದಲ್ಲಿ ವಿಚಿತ್ರವಾದ ರೀತಿಯಲ್ಲಿ ಭಾರವಾಗುವ ಖರ್ಚುಗಳು ಬಂದೊದಗುತ್ತವೆ.
ಈ ದಿಕ್ಕಿನಲ್ಲಿ ಬಾವಿ ತೆಗೆಯುವುದು, ತೊಟ್ಟಿಗಳನ್ನು ನಿರ್ಮಿಸುವುದು ಸೂಕ್ತವಾಗದು. ಮನೆಗೆ ಬೇಕಾದ ನೀರಿನ ವಿಚಾರದಲ್ಲಿ ಈ ದಿಕ್ಕಿನಲ್ಲಿ ಇದರದ್ದೇ ಆದ ಅರಿಷ್ಟ ಸ್ಪಂದನೆಗಳಿರುತ್ತದೆ. ಮೋಟರ್ ಪಂಪ್ ಕೂಡಾ ಇಲ್ಲಿ ಜೋಡಣೆಯಾಗಬಾರದು. ಮಕ್ಕಳಿಗೆ ಅನಾರೋಗ್ಯ ಒದಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ನೀರಿಗೆ ಸಂಬಂಧಿಸಿದ ವಿಚಾರಗಳನ್ನು ಇಲ್ಲಿ ಹೆಚ್ಚಾಗಿ ಲಕ್ಷಿಸಿ ಸಾಧ್ಯವಾದಷ್ಟೂ ಈ ಎಲ್ಲಾ ವಿಚಾರಗಳನ್ನೂ ವರ್ಜಿಸುವುದು ಅವಶ್ಯಕವಾಗಿದೆ.
ಉತ್ತಮ ಗಾಳಿಗೆ ಅವಕಾಶವಾಗುವ ಹಾಗೆ ಕೆಟ್ಟ ಗಾಳಿಗಳು ಇಲ್ಲಿಂದ ಹೊರದಬ್ಬಲ್ಪಡುವ ವಿಚಾರಗಳಿಂದಾಗಿ ಮನೆಯಲ್ಲಿ ಮಕ್ಕಳ ಲವಲವಿಕೆ ಚೈತನ್ಯ ಉತ್ಸಾಹಗಳೆಲ್ಲ ಸಂವರ್ಧಿಸಲ್ಪಡುತ್ತದೆ. ಮನೆಯೊಳಗೆ ವಿಶೇಷವಾದ ನೆಮ್ಮದಿ ಬಹುತೇಕವಾಗಿ ಸೋಲುಗಳೇ ಇರದೆ ವಿಜಯದ ಮುಗುಳ್ನಗೆಗೆ ಹೆಚ್ಚಿನ ಅವಕಾಶ ಸಾಧ್ಯ ಎಂಬುದೂ ಇಲ್ಲಿ ಹೆಚ್ಚು ಗಮನಾರ್ಹವಾದ ವಿಚಾರ. ಒಂದೊಮ್ಮೆ ಈ ಮೂಲೆ ಸರಿಯಾದ ಅನುಪಾತದೊಂದಿಗೆ ಇರದೆ ಹೋದರೆ ಕಾರಣವಲ್ಲದ ಕಾರಣಕ್ಕೆ ಅಶಾಂತಿ ತಲೆದೋರಬಹುದು. ಭಿನ್ನಾಭಿಪ್ರಾಯಗಳು ವೃಥಾ ವ್ಯಾಜ್ಯಗಳು ಸಂಭವಿಸುವ ವಿಚಾರವನ್ನು ಅಲ್ಲಗೆಳೆಯಲಾಗದು. ಮನೆ ಮಂದಿಗಾಗಲಿ, ಒಡೆಯನಿಗಾಗಲಿ ಕೆಟ್ಟದೇ ಆದ ಘಟನೆಗಳಿಂದ ವರ್ಚಸ್ಸಿಗೆ ಕುಂದುಗಳು ಉಂಟಾಗುವ ವಿಚಾರಗಳು ಬೇರು ಬಿಡಬಹುದು. ಮುಖ್ಯತವಾಗಿ ಮಕ್ಕಳ ವಿಚಾರದಲ್ಲಿ ಎಲ್ಲವೂ ದುಷ್ಪರಿಣಾಮಗಳನ್ನು ಚಿಮ್ಮಿಸಲು ದಾರಿ ಮಾಡಿಕೊಡಬಲ್ಲವು. ಒಟ್ಟಿನಲ್ಲಿ ಮನೆಯ ವಾಯುವ್ಯ ಮೂಲೆ ಅತುಳ ಬಲಶಾಲಿಯಾದ ವಾಯುದೇವನ ನಿವಾಸವಾಗಿದೆ. ಬಲವರ್ಧನೆಗೆ ಇವನೇ ಆಧಾರವಾಗಿದ್ದಾನೆ.

No comments:
Post a Comment