Saturday, 30 December 2017

ವಾಸ್ತುವಿಗೂ, ಮನೆಯ ಸ್ವತ್ಛತೆಗೂ ಸಂಬಂಧ ಇದೆಯಾ?

ಮನೆಯ ಒಳಗಡೆಯ ಅಂದಚೆಂದ ಅಲಂಕಾರ ಪೇಂಟಿಂಗ್‌ ಉಪಕರಣಗಳ ಸೌಂದರ್ಯ ಎಲ್ಲಾ ಸರಿ. ಆದರೆ ಇವು ಒಂದು ಒಳ್ಳೆಯ ಮನೆಯನ್ನು ರೂಪಿಸಲಾರವು. ಒಳಗೆ ಕಾಪೆìಟ್‌ ಹಾಸು, ಆಧುನಿಕತೆಯಿಂದ ಸುಸಜ್ಜಿತಗೊಂಡ ಸಂಯೋಜನೆಗಳೆಲ್ಲಾ ಒಳಿತು ತರುವುದಾಗಿದ್ದರೆ ಅನೇಕಾನೇಕ ಕೋಟ್ಯಾಧಿಶರುಗಳಿಗೆ ಸುಖದ ವಿನಾ ದುಃಖ, ಒತ್ತಡ, ನಿರಾಶೆ, ಹಳಹಳಿಕೆಗಳೆಲ್ಲಾ ಇರುತ್ತಲೇ ಇರಲಿಲ್ಲ. ಹಾಗಾದರೆ ಮಾನಸಿಕ ಶಾಂತಿಗೆ ಯಾವುದು ಕಾರಣ. ಏನು? ಯಾವಾಗ? ಎಷ್ಟು? ಹೇಗೆ? ಯಾವೆಲ್ಲ ವಿಚಾರಗಳು ಯಾಕೆ ಮನಸ್ಸಿನ ಶಾಂತಿಗೆ ಒಳಿತನ್ನು ತರುತ್ತವೆ ಎಂಬುದು ಪ್ರಧಾನವಾದ ಅಂಶಗಳಾಗುತ್ತದೆ.

ನಿಜ, ಮನೆಯು ಸರಳವಾಗಿ ಗುಡಿಸಲೇ ಆಗಿದ್ದರೂ ಸರಿ ಸ್ವತ್ಛತೆಯ ದೃಷ್ಟಿಯಿಂದ ಎಲ್ಲವನ್ನೂ ಪರಿಶೀಲಿಸಬೇಕು. ಬೇಕಾದಲ್ಲಿ ವಸ್ತುಗಳನ್ನು ತುಂಬಿಡುವ ಎಸೆದುಬಿಡುವ ಪರಿಪಾಠ ಬೆಳೆಸಿಕೊಳ್ಳಲೇ ಬಾರದು. ಕಣ್ಣಮುಂದೇ ಇರಲಿ ಎಂದು ಇಟ್ಟರೂ ಕೂಡಾ ಯಾವುದೂ ಕಾರಣಕ್ಕೆ ಮುಖ್ಯವಾದೊಂದು ವಸ್ತು ಹಲವು ವಸ್ತುಗಳ ನಡುವೆ ಸಿಕ್ಕಿ ಎಲ್ಲೋ ಮಾಯವಾಗಿ ಬಿಡುತ್ತದೆ. ಎಲ್ಲಾ ಒಮ್ಮೆ ರಗಳೆ ಎಂದೆನಿಸಿದರೂ ಯಾವುದು ಬೇಕಾದ್ದು, ಯಾವುದು ಬೇಡದ್ದು ಎಂಬುದನ್ನು ಕೂಡಲೇ ತ್ಯಾಜ್ಯದ ಜೊತೆ ಕಳಿಸಿಬಿಡಿ. ಮನೆಯಿಂದ ದೂರಕ್ಕೆ ಒಯ್ಯಲ್ಪಡಲಿ.

ನೋಡಿ ನಮ್ಮ ಸ್ನೇಹಿತರೊಬ್ಬರ ಮನೆ ಒಳ್ಳೆಯ ಸ್ನೇಹಿತ ಮನೆತನ ದೊಡ್ಡದು ಆಸ್ತಿವಂತ ಸ್ಥಿತಿವಂತ. ಆದರೆ ಆಸ್ತಿಯ ವಿಚಾರದಲ್ಲಿ ಯುಕ್ತವಾದ ನಿಶ್ಚಿತ ಸಂಧಾನವನ್ನು ಮಾಡಿಕೊಳ್ಳಲು ದಾಯಾದಿಗಳು ಅವಕಾಶ ಕೊಡುತ್ತಿಲ್ಲ. ಒಂದು ವಿಸ್ತಾರವಾದ ಜಾಗೆಯನ್ನು ಬ್ಯಾಂಕ್‌ ಒಂದಕ್ಕೆ ಅನುಕೂಲಕರ ರೀತಿಯಲ್ಲಿ ಯುಕ್ತವಾಗಿ, ಸೂಕ್ತವಾಗಿ ಮಾಡಿಕೊಡುವ ಎಲ್ಲಾ ಅವಕಾಶ ಖರ್ಚುವೆಚ್ಚವನ್ನೂ ಈ ನಮ್ಮ ಗೆಳೆಯ ಪೂರೈಸಿದರು. ಪ್ರತಿತಿಂಗಳ ಬಾಡಿಗೆ ಅರವತ್ತು ಸಾವಿರ ಎಂಬುದೂ ನಿಶ್ಚಿತವಾಯ್ತು. ಅರವತ್ತು ಸಾವಿರದಲ್ಲಿ ಉತ್ತಮವಾದ ರೀತಿಯಲ್ಲಿ ಬದುಕಿ ಬಾಳೂವುದೆಂಬ ಕನಸನ್ನು ಗೆಳೆಯ ಕಾಣುತ್ತಲೇ ಇದ್ದ. ಆದರೆ ದಾಯಾದಿಗಳ ಜೊತೆಯಲ್ಲೇ ಎಲ್ಲಾ ವ್ಯಾವಹಾರಿಕ ವಹಿವಾಟಿಗಳೂ ನಡೆಯುತ್ತಿದ್ದವು.
ಎಲ್ಲರ ಮನೆಗಳು ಬೇರಾಗಿದ್ದರೂ ವಹಿವಾಟುಗಳು ಎಲ್ಲರ ಒಕ್ಕೂಟದ ಪಾಲುದಾರಿಕೆಯಲ್ಲಿತ್ತು. ಬ್ಯಾಂಕಿಗೆ ಎಂದು ರೂಪಿಸಿಕೊಟ್ಟ ಸ್ಥಳ ಮಾತಿನ ಪ್ರಕಾರ ಒಂದು ಪ್ರತ್ಯೇಕ ಖಾಲಿ ಕಾಗದದಲ್ಲಿ ಎಲ್ಲರೂ ಸಹಿ ಹಾಕಿಕೊಟ್ಟ ಆಧಾರದ ಪ್ರಕಾರ ನಮ್ಮ ಈ ಗೆಳೆಯನಿಗೆ ಸೇರುವಂತದಿತ್ತು.

ಹೀಗಾಗಿ ಆ ಎಲ್ಲಾ ಸಹಿ ಹಾಕಿದ ಗಟ್ಟಿ ಆಧಾರದ ಕಾಗದದ ಬಲದಿಂದಲೇ ಗೆಳೆಯ ಬ್ಯಾಂಕಿಗೆ ಅವಶ್ಯವಾದ ಮಾರ್ಪಾಟುಗಳನ್ನು ಒಟ್ಟೂ ಇಪ್ಪತ್ತೆ„ದು ಲಕ್ಷ ವೆಚ್ಚ ಮಾಡಿ ಹಸ್ತಾಂತರ ಮಾಡಿಕೊಟ್ಟ ಮೇಲೆ ದಾಯಾದಿಗಳು ಬರುವ ಬಾಡಿಗೆಗೆ ತಾವೂ ಪಾಲುದಾರರು ಎಂದು ಧ್ವನಿಗೂಡಿಸಿದರು. ಈ ನಮ್ಮ ಗೆಳೆಯ ದಾಯಾದಿಗಳು ಒಗ್ಗೂಡಿ ಇವನ ಸುಪರ್ದಿಗೆ ಎಂದು ನಿರ್ಣಯಕ್ಕೆ ಬಂದು ಸಹಿ ಹಾಕಿದ ಕಾಗದದ ಪ್ರತ್ಯೇಕ ಪತ್ರ ಈಗ ನಮ್ಮ ಗೆಳೆಯನಿಗೆ ಹುಡುಕಲಾಗುತ್ತಿಲ್ಲ. ಇಲ್ಲೇ ಇಟ್ಟಿದ್ದೆ. ಇವುಗಳ ನಡುವೆಯೇ ಇತ್ತು ಎಂದು ಹುಡುಕುತ್ತಲೇ ಇದ್ದಾನೆ. ಒಂದು ವರ್ಷದಿಂದ ಹುಡುಕುತ್ತಿದ್ದಾನೆ. ವೈಯುಕ್ತಿಕ ಹೆಸರಿನಲ್ಲಿ ಸಾಲ ಇದೆ. ಬಾಡಿಗೆಯನ್ನೀಗ ಎಲ್ಲರೂ ಒಟ್ಟುಗೂಡಿ ಪಡೆಯುತ್ತಿದ್ದಾರೆ. ನಮ್ಮ ಗೆಳೆಯನಿಗೆ ಬರೀ ಐದು ಸಾವಿರ ಸಿಗುತ್ತಿದೆ. ತುಂಬುವ ಬಡ್ಡಿಯೇ 25 ಸಾವಿರ ಇದೆ. ಬರುವ ಅರವತ್ತು ಸಾವಿರ ಬಾಡಿಗೆಯಲ್ಲಿ ಸಾಲಕ್ಕೆ 25 ಸಾವಿರ ಕಟ್ಟಿ ಉಳಿದ 35 ಸಾವಿರದಲ್ಲಿ ಜೀವನ ನಡೆಸುವ ಅವನ ಯೋಜನೆ ಕುಸಿದು ಬಿದ್ದಿದೆ. ಮನೆಯಲ್ಲಿ ಯುಕ್ತತೆ ಹಾಗೂ ಸೂಕ್ತ ಜೋಡಣೆ ಸಾಧ್ಯವಾಗದಿದ್ದಲ್ಲಿ ಎಲ್ಲರೂ ಸಹಿ ಹಾಕಿದ್ದ ಪತ್ರ ಕಳೆದುಹೋಗುತ್ತಿರಲಿಲ್ಲ. ಅನೇಕಾನೇಕ ವಾಸ್ತು ದೋಷಗಳು ಇವನು ನಮ್ಮಿà ಗೆಳೆಯ ವಾಸಿಸುತ್ತಿರುವ ಮನೆಯಲ್ಲಿ ಅಂತರ್ಗತವಾಗಿದ್ದರಿಂದ ಅವನ ಮನಸ್ಸು ಸ್ಥಿಮಿತದಲ್ಲಿಲ್ಲ. ಕಾಗದ ಪತ್ರ ಕಳೆಯುವಂಥ ಪರಿಸ್ಥಿತಿ ನಿರ್ಮಾಣವಾಯ್ತು. ಹೀಗಾಗಿ ಸ್ವತ್ಛತೆ, ಮನೆಯ ಶಾಂತಿಯ ದೃಷ್ಟಿಯಿಂದ ಮುಖ್ಯ. ಉಳಿದ ವಿವರಗಳನ್ನು ಮುಂದಿನ ವಾರ ಚರ್ಚಿಸೋಣ.

Thursday, 28 December 2017

ಮನೆಯ ಎದುರಿಗೇ ರಸ್ತೆ ಇರಬಹುದಾ?

ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು, ಛೇದಿಸಿರುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ರಸ್ತೆಗಳು ಯಾವಾಗಲೂ ಸಾರ್ವಜನಿಕರು ಓಡಾಡುವ ಜಾಗವಾದರೂ ಓಡಾಡುವ ಜನರ ದೃಷ್ಟಿ ಚಿಂತನ ಸ್ವಭಾವಗಳು ಅಲ್ಲಿನ ಸಮೀಪದ ಮನೆಗಳ ಮೇಲೂ ಪ್ರಭಾವ ಬೀರುತ್ತವೆ.
 ರಸ್ತೆಗಳ ಸಂಖ್ಯೆಯು ತನ್ನದೇ ಆದ ಪ್ರಭಾವವನ್ನು ಮನೆಯ ಯಜಮಾನನ ಸಂಖ್ಯಾಭಾವಗಳ ಮೇಲೆ ತನ್ನದೇ ಆದ ಹಿಡಿತಗಳನ್ನು ಹೊಂದಿರುತ್ತದೆ. ರಸ್ತೆಗಳ ನಿರ್ಮಾಣದ ರೀತಿ ನೀತಿಗಳು ಪ್ರಮುಖವೇ ಆಗಿವೆ. ಇದರಿಂದಾಗಿ ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು ಛೇದಿಸುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ನಿಮ್ಮ ಮನೆಗೆ ಉತ್ತರಕ್ಕೋ ಪೂರ್ವಕ್ಕೋ ಇರುವ ರಸ್ತೆಗಳು ಉತ್ತಮ ಹಾಗೂ
ಅದೃಷ್ಟವೇ ಸರಿ. ನೀವು ಪೂರ್ವದಿಂದ ಸಂಚರಿಸಿ ಆಗ್ನೇಯಕ್ಕೆ ಹೊರಳಿಕೊಳ್ಳುವಂತಿದ್ದರೆ
ಇದು ಮನಸ್ಸಿನ ಸಮಾಧಾನಕ್ಕೆ ಯೋಗ್ಯ. ನಿಮ್ಮ ಮನೆಯ ಭಾಗದಿಂದ ನೇರವಾಗಿ ಈಶಾನ್ಯ ಪೂರ್ವ ಉತ್ತರದಿಕ್ಕುಗಳನ್ನು ಕ್ರಮಿಸುವ ರೀತಿಯ ರಸ್ತೆ ಇದ್ದರೆ ಅದು ಚೆಂದ ಹಾಗೂ ಅಪೇಕ್ಷಣೀಯ. ರಸ್ತೆಯಲ್ಲಿ ಜನನಿಬಿಡ ದಟ್ಟಣೆ ಉಪಯುಕ್ತ. ಮನೆಯೆದುರು ಇರುವ ಪೂರ್ವ ರಸ್ತೆಗೆ ಪೂರ್ವದ ಕಡೆಯನ್ನು ಒಳಗೊಳ್ಳುವ ಈಶಾನ್ಯ ದಿಕ್ಕಿಗೆ ಗೇಟ್‌ ಇಡುವುದು ಉತ್ತಮ. ಕೇವಲ ಪೂರ್ವಕ್ಕೇ ನೇರ ದಟ್ಟ ಸಾಂದ್ರ ಗೇಟು ರಚಿಸುವುದೂ ಒಳ್ಳೆಯದೇ.

ದಕ್ಷಿಣದ ಕಡೆಯ ರಸ್ತೆ ಇದ್ದರೆ ದಕ್ಷಿಣವೂ ದಕ್ಷಿಣಭಾಗವೂ ಹೆಚ್ಚಿನಂಶ ಸಿಗುವಂತ ಆಗ್ನೇಯ ದಿಕ್ಕಲ್ಲಿ ಗೇಟ್‌ ಉತ್ತಮ. ದಕ್ಷಿಣವನ್ನೇ ಪೂರ್ತಿ ಬಳಸಿಕೊಳ್ಳುವುದಾದರೆ ನಡುವೆ ದಕ್ಷಿಣದ ಸಾಂದ್ರತೆ ಉತ್ತಮ. ಪಶ್ಚಿಮದ ರಸ್ತೆ ಇದ್ದಲ್ಲಿ ನೇರ ಪಶ್ಚಿಮದ ನಡುಭಾಗದ ಗೇಟ್‌ ಸ್ವಾಗತಾರ್ಹ. ಇಲ್ಲಾ ಪಶ್ಚಿಮವು ಅಧಿಕವಾಗಿ ದೊರಕುವ ವಾಯವ್ಯ ಭಾಗದಲ್ಲಿ ಗೇಟ್‌ ಇರುವಂತಾಗಲಿ. ಉತ್ತರದ ಕಡೆಯ ರಸ್ತೆ ಇದ್ದರೆ ನೇರ ಉತ್ತರದ ನಡುಭಾಗದಲ್ಲಿ ಗೇಟ್‌ ಇರಲಿ. ಇಲ್ಲವೇ ಉತ್ತರ ವಿಸ್ತಾರಕ್ಕೆ ಒಳಗೊಳ್ಳುವಂತೆ ಈಶಾನ್ಯದಲ್ಲಿ ಗೇಟು ಕೂಡಿಬರಲಿ.
ಗೇಟುಗಳು ಯಾವಾಗಲೂ ಸಂರಕ್ಷಣಾ ಘಟಕಗಳಾಗಿ ತಮ್ಮ ಕಾರ್ಯ ನಿರ್ವಹಿಸುತ್ತವೆ.
ಇವುಗಳ ಬಣ್ಣ, ದಪ್ಪ ಎತ್ತರ ಅಗಲಗಳು ಮನೆಯ ವಿಸ್ತಾರವನ್ನೂ ಒಟ್ಟೂ ವಿಸ್ತೀರ್ಣವನ್ನು ಅನುಲಕ್ಷಿಸಿ ಅಳತೆಗಳನ್ನು ಹೊಂದಿರಬೇಕಾದ್ದು ಜರೂರಾಗಿದೆ.

ಹೊಸ ಕಾಲವು ಈಗ ಮಾಡ್ರನ್‌ ಎಂಬ ಹೆಸರಿನಲ್ಲಿ ಚಿತ್ರ ರೀತಿಯ ಪಟ್ಟಿ ವರ್ತುಲಗಳ ಚೌಕಗಳನ್ನೊಳಗೊಂಡ ಗೇಟುಗಳನ್ನು ಬಳಸುವ ವಿಚಾರಗಳನ್ನು ಹುಟ್ಟು ಹಾಕುತ್ತದೆ. ಗೇಟ್‌ ಎಂಬುದು ನಮ್ಮ ಧನಶಕ್ತಿಯನ್ನು ತೋರಿಸುವ ಆಡಂಬರ ಹೊಂದಿರುವುದು ಅವಶ್ಯಕವಾಗಿಲ್ಲ. ಗೇಟುಗಳು ಹೊರಭಾಗದ ಸುರಕ್ಷಿತ ದೂರವಾದ ಸ್ಪಂದನಗಳನ್ನು ತಡೆಗಟ್ಟುವಂತಿರಬೇಕು. ಪೂರ್ತಿ ಗೇಟ್‌ ದಪ್ಪ ಒಂದೇ ಮರದ ಪಟ್ಟಿಯಿಂದಾಗಲೀ ಕಬ್ಬಿಣದ ಫ್ರೆàಮ್‌ ನಿಂದಾಗಲೀ ಇರುವುದು ಸೂಕ್ತವಲ್ಲ. ಮನೆಯೊಳಗಿನಿಂದಲೇ ಗೇಟಿನಾಚೆಗೆ ಕಾಣುವ ಹಾಗೆ ನಡುನಡುವೆ ಖಾಲಿಯಾಗಿ ಸರಳು ಪಟ್ಟಿಗಳಿಂದ ರಚನೆಗೊಂಡಿರಲಿ. ಇಲ್ಲಿನ ಪಟ್ಟಿಗಳು ಡೈಮಂಡ್‌, ಸ್ವಸ್ತಿಕ್‌, ಮಂಡಲಾಕೃತಿಗಳನ್ನು ತ್ರಿಶೂಲ, ಸುಭ್ರಮ್ಯಣ್ಯ ಕರಶೂಲ ಇತ್ಯಾದಿ ಆಕೃತಿಗಳನ್ನು ಹೊಂದಿದ್ದರೆ ಶುಭ.

ಮನೆಯ ಎದುರಿಗೆ ರಸ್ತೆ ಎಡಬಲಕ್ಕೆ ಇರದೆ ನೇರವಾಗಿ ಇದ್ದಿದ್ದರೆ ವಾಸ್ತು ಗಣಪತಿಯನ್ನು ಗೇಟಿನ ಇಕ್ಕೆಲದ ಒಂದು ಭಾಗ ಮುಖ್ಯವಾಗಿ ಬಲಗಡೆಗೆ ಇಡುವುದು ಸೂಕ್ತ. ವಾಸ್ತು ಪುರುಷನ ಮಂಡಲ ಕಾಂತಿ ರಚನಾ ಶೈಲಿಯ ಬಣ್ಣಗಳ ಚಿತ್ರ ಇರುವುದೂ ಉತ್ತಮವೇ. ಒಟ್ಟಿನಲ್ಲಿ ಈ ಚಿತ್ರಗಳು ಗಣಪನ ಉಪಸ್ಥಿತಿಗಳು ಅಶುಭವನ್ನು ನಿಯಂತ್ರಿಸಿ ವಾಸ್ತವಕ್ಕೆ ಅನಿವಾರ್ಯವಾದ ಸಾಮಾಜಿಕತೆಗೆ ಯಶಸ್ಸಿನ ಆವರಣ ಒದಗಿಸಲು ಕ್ಷಿಪ್ರ ಒಳದಾರಿಗಳಾಗಿ ಪರಿವರ್ತನೆ ಆಗುತ್ತದೆ.


Wednesday, 27 December 2017

ಮನೆಯಲ್ಲಿ ಕಸಬರಿಗೆಗಳನ್ನು ತೆರೆದಿಟ್ಟರೆ ಏನೇನಾಗುತ್ತದೆ ಗೊತ್ತಾ?

ಮನೆಯಲ್ಲಿ ಕಸಬರಿಕೆಗಳಿರದೆ ನೆಲ ಒರೆಸುವ, ಮೇಜು, ಟೇಬಲ್‌, ಊಟದ ಟೇಬಲ್‌ ವರೆಸುವ ಬಟ್ಟೆ ತುಂಡುಗಳೇ ಇರದೆ ಯಾವ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರಿ¤ಯಾಗಿ ಯಾರಿಗೂ ಕಾಣಿಸದಂñ ೆಮುಚ್ಚಿಡುವುದು ಅವಶ್ಯವಾಗಿದೆ. ಈ ಕಸಬರಿಕೆ ಇತ್ಯಾದಿ ಮನೆಯೊಳಗೇ ಇರಲಿ. ಹೊರಗಡೆಯೇ ಇರಲಿ ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು. ಮನೆಯೊಳಗಿನವರಿಗೇ ಆಗಲಿ, ಮನೆಯ ಹೊರಗಿನವರಿಗೇ ಆಗಲಿ ಇದು ಕಾಣುವಂತಿರಬಾರದು.

ಇದಕ್ಕೆ ಕಾರಣ ಸರಳ. ಈ ಕಸಬರಿಗೆ ಇತ್ಯಾದಿಗಳು ಮಾನವನಲ್ಲಿ ಒಂದು ಕ್ಷಣ ಅವನೊಳಗೆ ಪ್ರವಹಿಸುವ ಧನಾತ್ಮಕ ಭಾವನೆಗಳನ್ನು ಒಮ್ಮೆ ಸ್ಥಂಬನಗೊಳಿಸಿ ಬಿಡುತ್ತದೆ. ಧನಾತ್ಮಕ ಭಾವನೆಗಳು ಒಮ್ಮೆ ತಟಸ್ಥಗೊಳ್ಳುವ ವಿಷಯ ಹದಿಗಟ್ಟಿತಾದರೆ ಮೊದಲಿನ ಸುಹಾಸಕರತೆಯಲ್ಲೆ ಅದನ್ನು ಮುಂದುವರೆಸಲು ಸಾಧ್ಯವಾಗದು. ಮನೆಯ ಹೊರಗಿನ ಜನರಿಗೆ ಕಸಬರಿಗೆಗಳು ಇತ್ಯಾದಿ ಕಾಣುವಂತಿದ್ದರೆ ಅದು ಆ ವ್ಯಕ್ತಿಗಳಲ್ಲಿ ನಕಾರಾತ್ಮಕ ಭಾವನೆಗಳನ್ನು ಹೊಂದಲು ಕಾರಣವಾಗಬಹುದು. ಧೂಳು ಜೇಡರ ಬಲೆ, ಕೊಳೆ ಹಾಗೂ ಕಸಗಳನ್ನು ತಮ್ಮಲ್ಲಿ ಹೊಂದಿರುವ ಕಸಬರಿಕೆ ಇತ್ಯಾದಿಗಳು ಶುಭ ಸೂಚಕವಾಗಿರಲು ಸಾಧ್ಯವಾಗದು ಎಂಬುದು ಒಂದೆಡೆಯಾದರೆ ಇದು ಮನಸ್ಸಿನ ಹೊಯ್ದಾಟಗಳಿಗೆ ಇನ್ನಿಷ್ಟು ವಿಚಾರಗಳನ್ನು ಒದಗಿಸಿ ನಿಷ್ಕಿ$›ಯತೆಯನ್ನು ಉಂಟು ಮಾಡಬಲ್ಲವು.

ಯಾಕೆ ಹೀಗಾಗುತ್ತದೆ ಎಂಬುದಕ್ಕೆ ನೇರ ಕಾರಣಗಳಿಲ್ಲ. ಒಂದು ಸುಂದರ ನಾಯಿಯನ್ನೋ,  ಮೊಲವನ್ನೋ, ಜಿಂಕೆಯನ್ನೋ ನೋಡುವುದಕ್ಕೂ, ಒಂದು ಇಲಿ ಒಂದು ಜಿರಲೆ ಅಥವಾ ತಿಗಣೆ ಅಥವಾ ಜೇಡವನ್ನು ಮನೆಯೊಳಗೆ ಕಾಣುವುದಕ್ಕೂ ವ್ಯತ್ಯಾಸವಿದೆ. ಯಾರ ಮನಸ್ಸೂ ಇಲಿ ಅಥವಾ ಜಿರಲೆಗಳನ್ನು ನೋಡುತ್ತಾ ಕ್ರಿಯಾಶೀಲವಾಗದು. ಇದೇ ಸೂತ್ರ ಕಸಬರಿಗೆಗಳು ಇತ್ಯಾದಿ ವಿಷಯದಲ್ಲೂ ನಾವು ವಿಶ್ಲೇಷಿಸಬಹುದು. ಮನಸ್ಸು ಬಹಳ ಸೂಕ್ಷ್ಮವಾದದ್ದು.
ಅದು ತನ್ನ ಆಯ್ಕೆಯನ್ನೂ, ನಿರಾಸಕ್ತಿಗಳನ್ನೂ ಒಬ್ಬರಿಂದ ಇನ್ನೊಬ್ಬರಿಗೆ ಬಹುತೇಕ ಸಂದರ್ಭಗಳಲ್ಲಿ
ವಿಧವಿಧವಾಗಿ ಒಡಮೂಡಿಸುವುದು. ಸತ್ಯವಾದರೂ ಇಲಿ, ಜಿರಲೆ ಕಸಬರಿಕೆಗಳಂಥ ವಿಚಾರಗಳಲ್ಲಿ ವಿಧವಿಧವಾದ ಭಾವನೆಗಳನ್ನು ರೂಪುಗೊಳಿಸವು. ಕೇವಲ ಜಿಗುಪ್ಸೆ ಅಷ್ಟೇ. ಇದು ಎಲ್ಲರಿಗೂ ಸ್ವಾಭಾವಿಕ. ಎಲ್ಲರಲ್ಲೂ ಸ್ವಾಭಾವಿಕ.

ಅಡುಗೆ ಮನೆಯಲ್ಲಿ ಹೊರ ಜಗುಲಿಯಲ್ಲಿ ಕಸಬರಿಗೆಗಳು ಕಾಣುವಂತೆ ಇರಲೇ ಕೂಡದು. ಇದು ತಿನ್ನುವ ಅನ್ನ ತಿನಿಸುಗಳ ವಿಷಯದಲ್ಲಿ ಒಂದು ರೀತಿಯ ಅಭಾವವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಿನಲ್ಲಿ ಇಂಥ ಅಭಾವಗಳ ಸೃಷ್ಟಿಗೆ ನಮಗೆ ನಾವೇ ಅವಕಾಶ ಒದಗಿಸ ಬಾರದು. ಒಂದರ್ಥದಲ್ಲಿ ಮನೆ ಬಾಗಿಲ ಎದುರುಗಡೆ ಕಸಬರಿಕೆ ಇತ್ಯಾದಿಗಳನ್ನು ಮೇಲ್ಮುಖವಾಗಿ ಇಡುವುದು ದುಷ್ಟ ಹಾಗೂ ಅನಪೇಕ್ಷಿತ ಸ್ಪಂದನಗಳನ್ನು ಮನೆಯೊಳಗಡೆ ಬಂದು ಸೇರುವ ಕ್ರಿಯೆಗೆ ಪೂರಕವಾಗಿ ಒಳಿತಾಗಬಲ್ಲದು. ಆದರೆ ರಾತ್ರಿಯ ಹೊತ್ತು ಮಾತ್ರ ಇದ ಸ್ವಾಗತಾರ್ಹ.  ಹಗಲ ಹೆಗಲಿಗೆ ಇದು ಸಹವಾಸ ಬೇಡ.

ಇನ್ನು ಮನೆಯೊಳಗಿನ ಕಸ ಹಾಗೂ ಕೊಳೆಗಳನ್ನು ಧೂಳು ಹಾಗೂ ಮಣ್ಣನ್ನು ವಿಶೇಷವಾಗಿ ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಸಬರಿಗೆಗಳೀಂದ ಒತ್ತಿ ಝಾಡಿಸಿ ಹೊರದೂಡುವಂತೆ ಮಾಡಲೇ ಬಾರದು. ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಣ್ತಪ್ಪಿ ಬಿದ್ದ ಅಥವಾ ಬೆಲೆ ಬಾಳುವ ವಸ್ತುಗಳು ಹೊರ ತಳ್ಳಲ್ಪಡುವ ಸಾಧ್ಯತೆಗಳು ಇರುವುದರಿಂದ ರಾತ್ರಿಯ ಹೊತ್ತು ಕಸಬರಿಗೆಗಳ ಉಪಯೋಗ ಮಾಡಿದರೆ ಮನೆಯಲ್ಲಿ ಲಕ್ಷಿ$¾ದೇವಿ ನೆಲೆಯೂರಳು ಎಂಬ ನಂಬಿಕೆ ಇದೆ. ಕೆಲವು ವಿಚಾರಗಳು ಆಧುನಿಕತೆಯನ್ನು ಅಣಕಿಸುವಂತಿದ್ದರೂ ಲಾಗಾಯ್ತಿನಿಂದ ರೂಢಿಯಾಗಿ ಬಂದ ವಿಚಾರಗಳ ಕುರಿತು ಅಲಕ್ಷ್ಯ ಬೇಡ. ವರ್ತಮಾನದ ಆಧುನಿಕ ಬೆಳವಣಿಗೆಗಳು ಮಾನವನ ಎಲ್ಲ ನೋವು ಹಾಗೂ ಕಷ್ಟಗಳನ್ನು ನೀಗಿಸುವಷ್ಟು ಆಧುನಿಕವಲ್ಲ. ಹೀಗಾಗಿ ಯಾವುದೇ ಹಳೆಯ ವಿಚಾರವಲ್ಲ. ಅವೆಲ್ಲಾ ಆಧುನಿಕತೆ ಪೂರಕವಾಗೇ ಇರುತ್ತದೆ.


Tuesday, 26 December 2017

ಮನೆಯೊಳಗೆ ಹಳೇ ಸರಂಜಾಮುಗಳ ತಿಪ್ಪೆ ಗುಂಡಿ ಮಾಡಲೇ ಬೇಡಿ

ಅನಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತಾರವಿಲ್ಲ. ಮನಸ್ಸಿಗೆ ಸುಖವೂ ಇಲ್ಲ. ಹಳತರಿಂದ ಹೊರಬರಲಾಗದೆ, ಹೊಸತೇ ಆದದ್ದನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತಾ ವರ್ತಮಾನವನ್ನು ಬೇಟೆಯಾಡುತ್ತವೆ.

ಇದು ಯಾರನ್ನೂ ಬೇಸರಿಸಲಿಕ್ಕೆಂದು ಬರೆದದ್ದಲ್ಲ. ಆದರೆ ಕೆಲವರ ಮನೆಯನ್ನು ಗಮನಿಸಿದರೆ ಇಡೀ ಮನೆ ಪೂರ್ತಿಯಾಗಿ ಬೊಬ್ಬಿರಿದ ತಿಪ್ಪೆಗುಂಡಿಯಂತಿರುತ್ತದೆ. ಒಂದು ರೂಮಿನಲ್ಲಿ ಹಳೆಯ ಪೇಪರ್‌, ಅರ್ಧರ್ಧ ತುಂಬಿದ ಪ್ಲಾಸ್ಟಿಕ್‌ ಚೀಲಗಳು ಎಲ್ಲಿಂದಲೋ ಬಂದ ಪತ್ರಗಳು ಉಪಯೋಗಿಸಲು ಮನಬಾರದೆ ಉಪಯೋಗಿಸಬೇಕು ಎಂಬ
ಮನಸ್ಸನ್ನು ಬಿಟ್ಟೂ ಬಿಡದೆ ಎಷ್ಟೆಷ್ಟೋ ವಸ್ತುಗಳು, ಎಷ್ಟೋ ವರ್ಷಗಳಿಂದ ಒಂದೆಡೆ ಕಿಕ್ಕಿರಿದು ತುಂಬಿಕೊಂಡಿರುತ್ತದೆ. ಮೋಕ್ಷಕಾಣದ ಆತ್ಮಗಳಂತೆ ಇವು ಕಾಣುತ್ತದೆ ಎಂದರೂ ತಪ್ಪಿಲ್ಲ. ಪಂಕ್ಚರ್‌ ಆದ ಟಯರು, ಹಳೆ ಸೈಕಲ್‌, ಹಳೆ ಚಪ್ಪಲಿಗಳು ಖಾಲಿ ಹಾಲಿನ ಪ್ಯಾಕೆಟ್ಟಿನ ಕವರುಗಳು, ಹಳೆ ಬೆಂಕಿ ಪೊಟ್ಟಣಗಳು, ಅಂಗಡಿಯಲ್ಲಿದ್ದಾಗ ಚೆನ್ನಾಗಿ ಕಂಡಿದ್ದಕ್ಕೆ ಖರೀದಿಸಿ ತಂದಿಟ್ಟುಕೊಂಡ ಪ್ಲಾಸ್ಟಿಕ್‌ ಹೂಗಿಡಗಳು, ಹೂಬಳ್ಳಿಗಳು ಹಸಿರು ತರುಲತೆಗಳು ಜೀವವಿಲ್ಲದ ಧೂಳ ಲೇಪದಲ್ಲಿ ಎಷ್ಟೋ ವರ್ಷಗಳಿಂದ ಹೊರಳಾಡಿಕೊಂಡಿರುತ್ತದೆ. ಯಾರೋ ಕೊಟ್ಟ ಉಡುಗೊರೆಗಳನ್ನು ಬಿಡಿ, ಅವುಗಳನ್ನು ಸುತ್ತಿದ್ದ ಪ್ಯಾಕಿಂಗ್‌ ಝರಿಗಳು ಬೇಗಡೆಗಳು ಸುತ್ತಿದ್ದ ಕಲರ್‌ ಸ್ತಿಂಗ್‌ಗಳು ಹಳತಾದ ಫೋಟೋ ಆಲ್ಬಂಗಳು ಹಳೆ ಫೋಟೋಗಳು ಕೆಸೆಟ್‌ಗಳು ಕೆಸೆಟ್‌ ಪ್ಲೇಯರYಳು, ಛತ್ರಿಗಳು ಹಳೆ ವಾಚು, ಎಷ್ಟು ಹಳತೆಂದರೆ ರಿಪೇರಿಯೂ ಸಾಧ್ಯವಿಲ್ಲದಷ್ಟು ಹಳತಾಗಿ ಕರಕಲಾಗಿರುವಂಥದ್ದು ಇತ್ಯಾದಿ ಸಾವಿರ ವಸ್ತುಗಳು ಮನೆಯಲ್ಲಿ ಬಿದ್ದಿರುತ್ತದೆ.

ಸೆಂಟಿಮೆಂಟಲ್‌ ಅಂಶಗಳೊಂದಿಗೆ ಅವು ನೆರಳು ಪಡೆದಿರುತ್ತದೆ ಅಥವಾ ಮುಂದೆ ಉಪಯೋಗಕ್ಕೆ ಬರಲಿದೆ ಎಂದು ಹಾಗೆ ಬಿದ್ದಿರುತ್ತದೆ. ಹಾಗೇ ಅವು ದಶಕಗಳಿಂದ ಅಲ್ಲಿರುತ್ತದೆ. ಹಳೆ ಬಟ್ಟೆಗಳ ವಿಷಯದಲ್ಲೂ ಇದೇ ಅನುಭವ. ಹಳೆ ಪುಸ್ತಕಗಳು ಹೀಗಯೇ ಜಾಗ ಪಡೆದುಕೊಂಡಿರುತ್ತದೆ. ಬಿಸಾಡಲಾಗದು ಇಟ್ಟುಕೊಳ್ಳಲಾಗದು. ಎರಡು ಅಲಗಿನ ಚೂರಿಯಂತೆ ನೆತ್ತಿಗೆ ತೂಗುವ ಈ ತಿಪ್ಪೆ ಎಂಬ ಮಾಯೆ ಬಹುತೇಕ ಜನರಿಗೆ ಒಂದು ಪ್ರಾರಬ್ಧದ ಭೇತಾಳ. ಬೆನ್ನು ಹತ್ತಿಕೊಂಡೇ ಇರುತ್ತದೆ. ವಿನೋದವೆಂದರೆ ನಿರಂತರವಾಗಿ ಮೂರು ವರ್ಷಗಳ ಕಾಲ ಒಂದು ದಿನವೂ ಉಪಯೋಗಕ್ಕೆ
ಬಂದಿರದ ವಸ್ತುನಿಂದ ಯಾವ ಉಪಯೋಗವೂ ಇಲ್ಲವೆಂಬುದನ್ನು ಗಮನಿಸಬೇಕು. ಮನೆಯ ವರ್ತಮಾನದಲ್ಲಿ ಅನವಶ್ಯಕವಾದ ವಸ್ತುಗಳಿಗೆ ಒದಗಿಸಲೇ ಬೇಕಾದ ಆದ್ರìತೆಯ ಪರಿಮಾಣ ಜಾಸ್ತಿಯಾಗುತ್ತಾ ಹೋದರೆ, ಅವಶ್ಯಕ ವಸ್ತುಗಳಿಗೆ ಇದು ಬೇಕಾದಷ್ಟು ಪ್ರಮಾಣದಲ್ಲಿ ಹಿತಕರವಾಗಿ, ಆರೋಗ್ಯಕರವಾಗಿ ಸಿಗುವುದಿಲ್ಲ.

ಕ್ಷೀಣ ಚಂದ್ರನ ಉಪಟಳದಿಂದಾಗಿ ಈ ತಿಪ್ಪೆಗುಂಡಿಯನ್ನು ಮನೆಯಲ್ಲಿ ಯಾರೋ ಒಬ್ಬರು ನಿರ್ಮಿಸುತ್ತಾರೆ. ಕ್ಷೀಣ ಚಂದ್ರನು ಇವರ ಜಾತಕದಲ್ಲಿ ಸುಖಸ್ಥಾನವನ್ನೂ, ಭಾಗ್ಯ ಹಾಗೂ ಲಾಭಾದಿ ಕುಟುಂಬ ಸ್ಥಾನಗಳನ್ನೂ ನಿಯಂತ್ರಿಸಿ ಇಡೀ ಬದುಕನ್ನು ಧನಾತ್ಮಕವಲ್ಲದ ಸ್ಪಂದನಗಳಿಂದ ಗೋಳಿನಿಂದ ತುಂಬಿಸಿ ಬಿಡುತ್ತಾನೆ. ಇದೇ ಚಂದ್ರನಿಂದ ಶನಿಕಾಟದ
ಸಂದರ್ಭದಲ್ಲಿ ಶನೈಶ್ಚರನಿಂದ ಅನೇಕ ತೊಂದರೆಗಳು ಎದುರಾಗುತ್ತದೆ. ಹಳೆಯ ವಸ್ತುಗಳನ್ನು ಶಿಸ್ತಿನಿಂದ ಒಂದೆಡೆ ಜೋಡಿಸಿ ಯಾವುದೋ ಶತಮಾನದ ತುಣುಕೊಂದನ್ನು ಪ್ರಗಲ#ತೆಯಿಂದ ಬಿಂಬಿಸುವುದು ಬೇರೆ. ಆದರೆ ಇಂದು ಎಂಬುದು ಎಂದೋ ದೂರದೊಂದು ಕಾಲದಲ್ಲಿ ಭೂತಕಾಲವಾಗಿದ್ದ ಭಾಗದ ವಿಚಾರವೊಂದನ್ನು, ವಸ್ತುವೊಂದನ್ನು
ಹದಗಟ್ಟಿಸುವುದು ಬೇರೆ. ಆದರೆ ಅದೇ ಇಂದು ಹೊಸ ಹೊಸ ಡಿವಿಡಿ, ಸಿಡಿಗಳ ಬೂಜು ಹಿಡಿದು ಕಗ್ಗಂಟಾದ ಕೆಸೆಟ್‌ಗಳನ್ನು ಒಂದು ಹಳೆ ಪೆಟ್ಟಿಗೆಯಲ್ಲಿ ಧೂಳಿನ ಕಲ್ಪದಲ್ಲಿ ಕಟ್ಟಿಕೊಂಡ ದಿನ, ತುಂಬಿದ ಬಸುರಿಯಂತೆ ಉಸಿರು ಬಿಡುತ್ತಿದ್ದರೆ ಅದು ನರಕಸದೃಶವಾದ ವಿಚಾರ. ಅನಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತಾರವಿಲ್ಲ. ಮನಸ್ಸಿಗೆ ಸುಖವೊ ಇಲ್ಲ. ಹಳತರಿಂದ ಹೊರಬರಲಾಗದೆ ಹೊಸತೇ ಆದದ್ದನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತಾ ವರ್ತಮಾನವನ್ನು ಬೇಟೆಯಾಡುತ್ತದೆ.


Saturday, 23 December 2017

ಸ್ನಾನ ಗೃಹದ ವಾಸ್ತು, ಅದರ ಮಹತ್

ಮನೆಯ ಶೌಚ ಗೃಹವಾಗಲೀ, ಸ್ನಾನದ ಮನೆಯಾಗಲೀ ಶುಚಿ, ಶುದ್ಧತೆ ಹಾಗೂ ಸರಳ ಸ್ವರೂಪದಲ್ಲಿ ಸ್ಥಾಯಿ ಗೊಂಡಿದ್ದಲ್ಲಿ ಮನೆಯಲ್ಲಿನ ಶಾಂತಿ ಹಾಗೂ ಸಮೃದ್ಧಿಗಳಿಗೆ ತೂಕ ಒದಗಿಬರುತ್ತದೆ. ಮನೆಯ ಯಜಮಾನನಿಗೆ ತಾತ್ವಿಕ, ಅಲೌಕಿಕ, ದೈವೀಕ ಸಿದ್ಧಿ ಸಂಪ್ರಾಪ್ತಿಯಾಗುತ್ತದೆ.  ಈ ರೀತಿಯಾಗಿ ಸಂಪತ್ತು ಬರುವ ಸಂದರ್ಭದಲ್ಲಿ ದೈವಾನುಗ್ರಹವೂ ದೊರಕಿ ಸಂಪತ್ತು ಒಳಿತಿಗೆ, ಸನ್ಮಾರ್ಗಕ್ಕೆ ಕಾರಣವಾಗುತ್ತದೆ. ಮೊತ್ತ ಮೊದಲಾಗಿ ಸ್ನಾನ ಗೃಹ, ಶೌಚಾಲಯಗಳು ಮನೆಯ ನಡು ಭಾಗದಲ್ಲಿ ಇರಲೇ ಕೂಡದು. ತೊಟ್ಟಿ ಮನೆಗಳೆಂದು ಮನೆಯ ನಡು ಭಾಗದಲ್ಲಿ ಖಾಲಿ ಜಾಗವನ್ನು ಇಟ್ಟು ಮನೆಯನ್ನು ಕಟ್ಟುವುದು ಮನೆಯ ಅಗ್ನಿ ಧಾತುವಿಗೆ ಮತ್ತು ಮನೆಯ ವಾಯು ತತ್ವಕ್ಕೆ ಭಂಗ ಬರುತ್ತದೆ. ವಾಯುವ್ಯ ದಿಕ್ಕಿನ ಭಾಗಕ್ಕೆ ತಡೆಯಾಗದಂತಿರುವುದು ಶೌಚಾಲಯ ಹಾಗೂ ಸ್ನಾನ ಗೃಹಗಳಿಗೆ ಅಪ್ಯಾಯಮಾನವಾದ ಅಂಶ.
ಸ್ನಾನಾದಿ ಶೌಚ ಗೃಹಗಳ ಇಳಿಜಾರು ಮುಖ್ಯವಾಗಿ ಪೂರ್ವದ ಕಡೆಗೋ, ಉತ್ತರದ ಕಡೆಗೋ ಇರಬೇಕು.    ತ್ಯಾಜ್ಯ ಹೊರ ಹೋಗುವ ಸ್ಥಳಾವಕಾಶವಾಗುವಂತೆ ಕೊಳೆವೆಗಳೂ ಹೀಗೆ ಈ ದಿಕ್ಕಿನಲ್ಲೇ ಇರಬೇಕು. ಸಂಗಮರವರೀ ಕಲ್ಲುಗಳ, ನುಣುಪು ಹಾಸುಗಳ ಜೋಡಣೆ ಶೌಚಾಲಯದ ತಳ ನೆಲಕ್ಕೆ ಇರಬಾರದು.

ನೀರು ತುಂಬುವ ಡ್ರಂ, ಕೊಳಾಯಿಗಳು  ಪೂರ್ವ ಅಥವಾ ವಾಯುವ್ಯ ದಿಕ್ಕಿಗೇ ಇರಬೇಕು. ಶೌಚ ಮಂಡಲ  ಕೂಡ
ಇದೇ ದಿಕ್ಕಿಗೆ ಅಥವಾ ವಾಯುವ್ಯ ದಿಕ್ಕಿನಲ್ಲಿ ಅಡಕವಾಗಿರಲಿ. ಸರ್ವಥಾ ಅಗ್ನಿ ಮೂಲೆಯಲ್ಲಿ ಅಡಕವಾಗಿರಲಿ. ನೈಋತ್ಯಕ್ಕೂ ಕೂಡ ಇರದಿರಲಿ. ಇದನ್ನು ಮುಖ್ಯವಾಗಿ ಗಮನಿಸಬೇಕು. ಹಾಗೆಯೇ ಸ್ನಾನ ಗೃಹ ತಳದ ಸಪಾಟಿಗಿಂತ ಎರಡು ಫ‌ೂಟು ಏರು ಎತ್ತರ ಹೊಂದಿರಲಿ. ಸ್ನಾನ ಗೃಹದ ಬಾಗಿಲುಗಳು ಪೂರ್ವ ಅಥವಾ ಉತ್ತರ ದಿಕ್ಕಿಗೆ ಸಮ್ಮಳಿತವಾಗಿರಲಿ. ಶೌಚಾಲಯದ ಒಳ ವಿನ್ಯಾಸದ ಬಣ್ಣ ಹೆಚ್ಚಾಗಿ ಹಸಿರು, ನೀಲಿ ಅಥವಾ ನೇರಳೆ ಬಣ್ಣದಿಂದ ಕೂಡಿರಲಿ. ಊತ್ತರ ಪೂರ್ವ, ಪಶ್ಚಿಮ ದಿಕ್ಕಿಗೆ ಚಿಕ್ಕ ಒಂದು ಕಿಂಡಿಯ ರೂಪದ ಕಿಟಕಿ ಇರಲಿ.

 ಔಡಲ ಮರದ ಎಲೆಗಳನ್ನು ಸ್ನಾನ ಗೃಹದ ಒಂದೆಡೆ ಪೇರಿಸಿಡುವುದು (ನಾಲ್ಕಾರು ಎಲೆಗಳು ಮಾತ್ರ) ಉತ್ತಮ ವಿಚಾರ. ಇದರಿಂದ ಪಂಚಭೂತ ಧಾತುಗಳ ಸಮತೋಲನ ಸುಸಂಬದ್ಧತೆಗೆ ಅವಕಾಶ ಹೇರಳ. ಮಲ ವಿಸರ್ಜನೆಗೆ ಉತ್ತರ , ದಕ್ಷಿಣ ದಿಕ್ಕಿಗೆ ಮುಖ ಇರುವುದು ಸೂಕ್ತ. ಪೂರ್ವ ದಿಕ್ಕಿನೆಡೆ ಮುಖ ಮಾಡಿ ಸ್ನಾನ ಮಾಡುವುದು ಅಪೇಕ್ಷಣೀಯ.

 ಮನೆಯ ದೇವರ ಪೀಠದಷ್ಟೇ ಶೌಚ ಮತ್ತು ಸ್ನಾ ಗೃಹ ಮುಖ್ಯ. ಯಮಾದಿ ದಶ ಕೋಟಿ ಅಪರ ಶಕ್ತಿ ಸೂಕ್ತಗಳು ತಂತಮ್ಮ ಧನಾತ್ಮಕವಲ್ಲದ ವಿಪ್ಲವಗಳನ್ನು ಕಳಕೊಳ್ಳುವುದೇ ಸ್ನಾನ ಹಾಗೂ ಶೌಚ ಗೃಹಗಳ ಶುದ್ಧ ಸ್ವರೂಪದಲ್ಲಿ. ಹೀಗಾಗಿ ಸ್ನಾನ ಗೃಹವನ್ನು ಇಂದ್ರ ಶಕ್ತಿಯ ಪ್ರತ್ಛನ್ನತೆಗೆ ಮೂಲ ಶಕ್ತಿ ಸ್ವರೂಪವಾಗಿ ಬಳಸಿಕೊಳ್ಳಬೇಕು. ಶೌಚದ ನಂತರ ಸ್ನಾನ ಪೂರೈಸಿ ಸ್ವತ್ಛವಾದ ಉಡುಪಿನಲ್ಲಿ ಮುಂದಿನ ಕೆಲಸಗಳಿಗೆ ಮುಂದಾಗುವಾಗ ಈ ಕೆಳಗಿನ ಮಂತ್ರ ಭಾಗವನ್ನು ಅವಶ್ಯವಾಗಿ ಓದಿಕೊಳ್ಳಿ. ಸಾಲಿಗ್ರಾಮ ಶಿಲಾವಾರಿ ಪಾಪಹಾರಿ ವಿಶೇಷತಃ
ಆ ಜನ್ಮ ಕೃತ ಪಾಪಾನಾಂ ಪ್ರಾಯಶ್ಚಿತ್ತಂ ದಿನೇ ದಿನೇ

 ಸ್ವರೂಪ ಕುಸುಮ ಮಾಲಾದ ಈ ಮಂತ್ರ ವಿಶೇಷ ವಿಷಜನ್ಯಕ್ಕೆ ಕಾರಣವಾಗುವ ದೇಹದ ವಿಕಾರಗಳನ್ನು ನಾಶ ಪಡಿಸುತ್ತದೆ. ಅಂತರಂಗದ, ಬಹಿರಂಗ ಶುದ್ಧತೆಗಳು ಸದಾ ಒಬ್ಬನನ್ನ, ಒಬ್ಬಳನ್ನ ಸದಾ ಆರೋಗ್ಯ ಹಾಗೂ ಹರ್ಷ, ಉತ್ಸಾಹಗಳಲ್ಲಿ ಇರಿಸಲು ಸಹಾಯವಾಗುತ್ತದೆ.


Friday, 22 December 2017

ನೆಮ್ಮದಿಯ ಜೀವನಕ್ಕೆ ವಾಸ್ತು

ರತಿಯೊಬ್ಬರೂ ನೆಮ್ಮದಿಯ ಜೀವನದ ಕನಸು ಕಾಣುವುದು ಸಹಜ. ಇದಕ್ಕಾಗಿ ಮನೆಯನ್ನು ಕೆಟ್ಟ ದೃಷ್ಟಿ ಮತ್ತು ನೆಗೆಟಿವ್‌ ಎನರ್ಜಿಯಿಂದ ಕಾಪಾಡಿಕೊಳ್ಳಬೇಕು. ಆದರಿಂದ ಮಾತ್ರ ಸುಖ ಜೀವನ ಸಾಧ್ಯವಾಗುತ್ತದೆ. ಅದಕ್ಕಾಗಿ ಇಲ್ಲಿದೆ ಒಂದಿಷ್ಟು ವಾಸ್ತು ಟಿಪ್ಸ್.

ನೇಮ್‌ ಪ್ಲೇಟ್‌: 


ಮನೆಯ ಮುಖ್ಯ ದ್ವಾರದ ಹೊರ ಬದಿಯಲ್ಲಿ ನೇಮ್‌ ಪ್ಲೇಟ್‌ ಇರಬೇಕು. ಇದರಿಂದ ಮನೆಗೆ ಪಾಸಿಟಿವ್‌ ಎನರ್ಜಿ ಮತ್ತು ಉತ್ತಮ ಅವಕಾಶಗಳು ಮಾಲೀಕರಿಗೆ ಲಭ್ಯವಾಗುತ್ತದೆ ಎಂದು ವಾಸ್ತು ನಿಯಮ ಹೇಳುತ್ತದೆ.

 ದೀಪ ಹಚ್ಚಿ: 


ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ, ಹಣತೆ ಮತ್ತು ಅಗರಬತ್ತಿ ಹಚ್ಚಬೇಕು. ಇದು ನೆಗೆಟಿವ್‌ ಎನರ್ಜಿಯನ್ನು ಮನೆಯಿಂದ ಹೊರ ದೂಡಲು ನೆರವು ನೀಡುತ್ತದೆ.

ಅಡುಗೆ ಮನೆ: 


ಮನೆಯ ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆ ಇರಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ವಾಯುವ್ಯ ಭಾಗವನ್ನು ಆರಿಸಿಕೊಳ್ಳಬಹುದು. ಆದರೆ ಸ್ಟೌವ್‌ ಮಾತ್ರ ಆಗ್ನೇಯ ದಿಕ್ಕಿನಲ್ಲಿರಲಿ.

ಲಿಂಬೆಯ ಶಕ್ತಿ:


 ಲಿಂಬೆ ಹಣ್ಣಿಗೆ ನೆಗೆಟಿವ್‌ ಎನರ್ಜಿಯನ್ನು ಓಡಿಸುವ ಶಕ್ತಿಯಿದೆ. ಹೀಗಾಗಿ ಯಾವಾಗಲೂ ಮನೆಯಲ್ಲಿ ಒಂದು ಗ್ಲಾಸ್‌ ನೀರಿನಲ್ಲಿ ಲಿಂಬೆಯನ್ನು ಹಾಕಿಟ್ಟು, ಪ್ರತಿ ಶನಿವಾರ ಅದನ್ನು ಬದಲಾಯಿಸಿ.

ಔಷಧ ಸಾಮಗ್ರಿ: 


ಅಡುಗೆ ಮನೆಯಲ್ಲಿ ಔಷಧಗಳನ್ನು ಇಡಲೇ ಬಾರದು. ಯಾಕೆಂದರೆ ಔಷಧ ಕೂಡ ಕೆಟ್ಟ ದೃಷ್ಟಿಯ ಸಂಕೇತ. ಹೀಗಾಗಿ ಆರೋಗ್ಯಕರ ಜೀವನಕ್ಕೆ ಅಡುಗೆ ಮನೆಯಲ್ಲಿ ಇವುಗಳನ್ನು ಇಡಲೇ ಬಾರದು.

ಧ್ಯಾನಕ್ಕೆ ಒತ್ತು:


 ಮೈ ಮನಸ್ಸನ್ನು ಶುದ್ಧಗೊಳಿಸುವ ಸಾಮರ್ಥ್ಯ ಧ್ಯಾನಕ್ಕೆ ಇದೆ. ಹೀಗಾಗಿ ಪ್ರತಿ ದಿನ 15ರಿಂದ 20 ನಿಮಿಷ ಧ್ಯಾನ ಮಾಡಿ. ಇದು ಮನಸ್ಸನ್ನು ಹಗುರಗೊಳಿಸುತ್ತದೆ. ಸುತ್ತಲು ಪಾಸೆಟಿವ್‌ ಎನರ್ಜಿಯನ್ನು ತುಂಬಲು ನೆರವಾಗುತ್ತದೆ.

ಕನ್ನಡಿ ಬಳಕೆ: 


ಬೆಡ್‌ ರೂಂನಲ್ಲಿ ಕನ್ನಡಿ ಇರಬಾರದು. ಒಂದು ವೇಳೆ ಈಗಾಗಲೇ ಡ್ರೆಸ್ಸಿಂಗ್‌ ಟೇಬಲ್‌ ಅಥವಾ ವಾರ್ಡ್‌ರೋಬ್‌ನಲ್ಲಿ ಕನ್ನಡಿ ಇದ್ದರೆ ಅದನ್ನು ಮಲಗುವ ಸಮಯದಲ್ಲಿ ಕರ್ಟನ್‌ನಿಂದ ಮುಚ್ಚಬೇಕು.

ಪವಿತ್ರ ತೀರ್ಥ:


 ಮನೆಯ ಬಳಕೆ ಮಾಡದ ಮೂಲೆಯಲ್ಲಿ ಯಾವಾಗಲೂ ಗಂಗಾ ಜಲ ಇಡಬೇಕು. ಇದನ್ನು ಪ್ರತಿ ವಾರ ಬದಲಾಯಿಸಬೇಕು. ಇದು ಪಾಸಿಟಿವ್‌ ಎನರ್ಜಿ ಮನೆಯಲ್ಲಿ ತುಂಬಲು ಸಹಾಯ ಮಾಡುತ್ತದೆ.

ಸ್ವಸ್ತಿಕ್‌ ಇರಲಿ: 


ಸ್ವಸ್ತಿಕ ಚಿನ್ಹೆಯು ಸಂಪತ್ತು ಮತ್ತು ಶ್ರೇಯಸ್ಸಿನ ಸಂಕೇತ. ಆದ್ದರಿಂದ ಮನೆಯಲ್ಲಿ ಸ್ವಸ್ತಿಕ ಚಿನ್ಹೆಯನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರ. ಯಾವಾಗಲೂ ಮನೆಯ ಹೊರ ಬಾಗಿಲ ಹೊರಗಡೆ ಇದನ್ನು ಅಳವಡಿಸಿ.

ಕಿರು ಗಂಟೆಗೆ ಆದ್ಯತೆ: 


ಮನೆಯಲ್ಲಿ ಕಿರು ಗಂಟೆಗಳನ್ನು ಅಲ್ಲಲ್ಲಿ ತೂಗು ಹಾಕಿ. ಅದರಲ್ಲೂ ದೇವರ ಕೋಣೆಯ ಬಾಗಿಲಿಗೆ ಹಾಕಿದರೆ ಉತ್ತಮ. ಇದರ ನಾದದಿಂದ ನೆಗೆಟಿವ್‌ ಎನರ್ಜಿ ಮನೆಯಿಂದ ಹೊರಗೆ ಹೋಗುತ್ತದೆ.

ಉಪ್ಪಿನ ಬಳಕೆ: 


ಉಪ್ಪು ನೆಗೆಟಿವ್‌ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮನೆಯ ಮೂಲೆಗಳಲ್ಲಿ ಚಿಕ್ಕ ಬೌಲ್‌ನಲ್ಲಿ ಉಪ್ಪು ಹಾಕಿಡಬೇಕು.
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ
ತಾಜಾ ಸುದ್ದಿಗಾಗಿ ವಿಕ ಫೇಸ್‌ಬುಕ್ ಪುಟ ಲೈಕ್ ಮಾಡಿ.


Thursday, 21 December 2017

ಗ್ರಹದೋಷಕ್ಕೆ ವಾಸ್ತು ಪರಿಹಾರ

ಒಬ್ಬೊಬ್ಬರಿಗೆ ಒಂದೊಂದು ರೀತಿ ತೊಂದರೆ. ಕೆಲವರು ಮನೆಕಟ್ಟಿಸಿದರೂ ಅದರಲ್ಲಿ ವಾಸ ಮಾಡುವ ಯೋಗವಿರುವುದಿಲ್ಲ. ಮತ್ತೆ ಕೆಲವರು ಮನೆ ಕಟ್ಟಲು, ಭೂಮಿ ಖರೀದಿಸಲು ಯತ್ನಿಸಿದರೂ ಯಶಸ್ಸು ಕಾಣುವುದಿಲ್ಲ. ಇನ್ನೂ ಕೆಲವರು ಮನೆಯನ್ನೇನೋ ಕೊಳ್ಳುತ್ತಾರೆ 
ಅಥವಾ ಕಟ್ಟಿಸುತ್ತಾರೆ. ಆದರೆ ವಿನಾಕಾರಣ ಮನೆಯಲ್ಲಿ ಜಗಳ, ಅಶಾಂತಿ, ಅನಾರೋಗ್ಯದ ವಾತಾವರಣವಿರುತ್ತದೆ. ಆದರೆ ಇದೇಕೆ ಹೀಗೆ ಎಂಬ ಪ್ರಶ್ನೆಗೆ ಪ್ರತಿಯೊಬ್ಬ ಮನುಷ್ಯನು ನವಗ್ರಹಗಳ ಅಧೀನವಾಗಿರುತ್ತಾನೆ. ವಾಸ್ತುಶಾಸ್ತ್ರವು ನವಗ್ರಹಗಳ ಸ್ಥಿತಿಗೆ ಅನುಗುಣವಾಗಿ ಮನುಷ್ಯನಲ್ಲಿ ಏರಿಳಿಕೆಯನ್ನು ಉಂಟು ಮಾಡುತ್ತವೆ.

ಯಾವ ಗ್ರಹದಿಂದ ಯಾವ ತೊಂದರೆ ಎದುರಾಗಬಹುದು, ಅದಕ್ಕೆ ಸುಲಭ ಪರಿಹಾರವೇನು ಎಂದು ತಿಳಿದುಕೊಳ್ಳೋಣ.

ರವಿ ಗ್ರಹ : 

ಮನೆ ಅಥವಾ ನಿವೇಶನ ಕೊಳ್ಳಲು ಹೋದಾಗ ತೊಂದರೆಗಳು ಉಂಟಾಗುತ್ತಿದ್ದರೆ ರವಿ ಯಂತ್ರವನ್ನು ಸ್ಥಾಪಿಸಿ ಪೂಜಿಸಿದರೆ ಒಳ್ಳೆಯದಾಗುತ್ತದೆ. ಮಂತ್ರ : ಓಂ ಸೂರ್ಯಾಯ ನಮಃ. ಈ ಮಂತ್ರವನ್ನು 108 ಬಾರಿ ಜಪಿಸಬೇಕು.

ಚಂದ್ರ ಗ್ರಹ : 

ಯಾವುದೇ ಮನೆ, ಅಂಗಡಿ, ಕಚೇರಿ, ಕಾರ್ಖಾನೆ, ಕಾರ್ಯಾಲಯದಲ್ಲಿ ಆಗಾಗ್ಗೆ ಅಪಘಾತ, ಲುಕ್ಸಾನ ಸಂಭವಿಸುತ್ತಿದ್ದರೆ ಚಂದ್ರ ಯಂತ್ರವನ್ನು ಸ್ಥಾಪಿಸಿ ಪೂಜಿಸಬೇಕು. ಮಂತ್ರ : ಓಂ ಚಂದ್ರಾಯ ನಮಃ ಅಥವಾ ಸೌಂ ಸೋಮಾಯ ನಮಃ. 108 ಬಾರಿ ಜಪಿಸುವುದು ಒಳ್ಳೆಯದು.

ಮಂಗಳ ಗ್ರಹ :

 ಮನೆಯಲ್ಲಿ ಸದಾ ಜಗಳ, ಕದನ, ಕಲಹ, ಕಾಯಿಲೆ, ಉದ್ಯೋಗದಲ್ಲಿ ವಿರೋಧಿಗಳಿಂದ ಸದಾ ತೊಂದರೆ, ಮಾನಸಿಕ ಹಿಂಸೆ, ವ್ಯಾಪಾರ ವ್ಯವಹಾರದಲ್ಲಿ ಮೋಸ ಮತ್ತಿತರ ಅಶಾಂತಿಯ ವಾತಾವರಣವಿದ್ದರೆ ಮಂಗಳ ಯಂತ್ರವನ್ನು ಸ್ಥಾಪಿಸುವುದು ಒಳ್ಳೆಯದು. ಓಂ ಭೌಂ ಭೌಮಾಯ ನಮಃ ಅಥವಾ ಓಂ ಮಂಗಳಾಯ ನಮಃ ಎನ್ನುವ ಮಂತ್ರವನ್ನು 108 ಬಾರಿ ಜಪಿಸಬೇಕು.

ಬುಧ ಗ್ರಹ : 

ವಾಸ್ತು ದೋಷವಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರೆ, ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿದ್ದರೆ, ಮಾಡುವ ಉದ್ಯೋಗದಲ್ಲಿ ನಷ್ಟ ಉಂಟಾಗುತ್ತಿದ್ದರೆ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಬುಧ ಯಂತ್ರವನ್ನು ಸ್ಥಾಪಿಸಬೇಕು. ಓಂ ಬಂ ಬುಧಾಯ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು.

ಗುರು ಗ್ರಹ :

ಮಾಡುವ ಕೆಲಸದಲ್ಲಿ ವಿಳಂಬ ಕಾಣುತ್ತಿದ್ದರೆ, ಹಣಕಾಸಿನ ಸ್ಥಿತಿಗತಿಗಳಲ್ಲಿ ತೊಂದರೆ ಕಂಡು ಬಂದರೆ, ಆರೋಗ್ಯ, ಐಶ್ವರ್ಯ, ಲಾಭ, ನೆಮ್ಮದಿ, ಶಾಂತಿ ಬಯಸುತ್ತಿದ್ದರೆ ಗುರು ಯಂತ್ರವನ್ನು ಸ್ಥಾಪಿಸಿ ಪೂಜಿಸುವುದು ಒಳ್ಳೆಯದು. ಓಂ ಬೃಂ ಬೃಹಸ್ಪತೆಯೇ ನಮಃ ಅಥವಾ ಓಂ ಗುರವೇ ನಮಃ ಎನ್ನುವ ಮಂತ್ರವನ್ನು 108 ಬಾರಿ ಜಪಿಸಬೇಕು.

ಶುಕ್ರ ಗ್ರಹ :

 ಮಾನಸಿಕ ಹಾಗೂ ದೈಹಿಕ ತೊಂದರೆ ತೊಳಲಾಟ, ನೆಮ್ಮದಿ, ಶಾಂತಿ ಇಲ್ಲದೆ ಇರುವುದು, ಕೆಲಸ ಕಾರ್ಯದಲ್ಲಿ ಹಿನ್ನೆಡೆ, ಕ್ರಯ ವಿಕ್ರಯದಲ್ಲಿ ಅಭಿವೃದ್ಧಿ ಕಾಣದೇ ಇರುವುದು, ಮನೆ ಕಟ್ಟುವಾಗ ಪದೇ ಪದೇ ತೊಂದರೆ ಉಂಟಾಗುವುದು, ಜಮೀನು, ನಿವೇಶನ ಮಾರಾಟದಲ್ಲಿ ಅಡ್ಡಿ ಆತಂಕ ನಿವಾರಣೆಗೆ ಶುಕ್ರ ಯಂತ್ರವನ್ನು ಸ್ಥಾಪಿಸುವುದು ಒಳ್ಳೆಯದು. ಓಂ ಶುಂ ಶುಕ್ರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.

ಶನೈಶ್ಚರ ಗ್ರಹ :

 ಲೇಔಟ್‌ ನಿರ್ಮಾಣದಲ್ಲಿ ಹಿನ್ನೆಡೆ, ಬಹು ಅಂತಸ್ತಿನ ಕಟ್ಟಡ ನಿರ್ಮಾಣದಲ್ಲಿ ಅಡೆತಡೆ, ರಸ್ತೆ ನಿರ್ಮಾಣಕಾರ್ಯದಲ್ಲಿ ವಿಳಂಬ ಮತ್ತಿತರ ದೋಷ ನಿವಾರಣೆಗೆ ಶನಿಯಂತ್ರವನ್ನು ಸ್ಥಾಪಿಸಿ ಪೂಜಿಸಿ. ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು 108 ಬಾರಿ ಪಠಿಸಿ.

ರಾಹು ಹಾಗೂ ಕೇತು ಗ್ರಹ : 

ಆರೋಗ್ಯದಲ್ಲಿ ತೊಂದರೆ, ಶಾಂತಿಗೆ ಭಂಗ, ಚರ್ಮದ ಕಾಯಿಲೆ, ಮನೆ, ಅಂಗಡಿಯಲ್ಲಿ ತೊಂದರೆ ತಾಪತ್ರಯಗಳು ಉಂಟಾಗುತ್ತಿದ್ದರೆ, ವ್ಯಾಪಾರದಲ್ಲಿ ಹಿನ್ನಡೆಯುಂಟಾಗಿದ್ದರೆ, ದುಷ್ಟ ಗ್ರಹ ಪ್ರಭಾವದಿಂದ ಪೀಡಿತವಾಗಿದ್ದರೆ, ದುಸ್ವಪ್ನಗಳು ಬೀಳುತ್ತಿದ್ದರೆ ಈ ಯಂತ್ರಗಳ ಸ್ಥಾಪನೆ ಹಾಗೂ ಪೂಜೆಯಿಂದ ಒಳ್ಳೆಯದಾಗುತ್ತದೆ. ರಾಹು ಶಾಂತಿಗೆ ಓಂ ರಾಂ ರಾಹವೇ ನಮಃ, ಕೇತು ಶಾಂತಿಗೆ ಓಂ ಕೇಂ ಕೇತುವೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ
ತಾಜಾ ಸುದ್ದಿಗಾಗಿ ವಿಕ ಫೇಸ್‌ಬುಕ್ ಪುಟ ಲೈಕ್ ಮಾಡಿ.


Wednesday, 20 December 2017

ನವಗ್ರಹಗಳು, ಅಷ್ಟ ದಿಕ್ಪಾಲಕರು ಮತ್ತು ನಿಮ್ಮ ಮನೆ...

ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ.

ನಮ್ಮ ಭಾರತೀಯ ವಾಸ್ತು ಶಾಸ್ತ್ರದಲ್ಲಿ ನವಗ್ರಹಗಳಿಗೆ, ಅಷ್ಟ ದಿಕಾ³ಲಕರಿಗೆ ಬಹಳಷ್ಟು ಮಹತ್ವವನ್ನು ಒದಗಿಸಿದ ವಿಶ್ಲೇಷಣೆಗಳುಂಟು. ಈ ಅಂಕಣದಲ್ಲಿ ಈ ಮೊದಲೇ ವಿವರಿಸಿದ ಹಾಗೆ ಎಲ್ಲ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರುಗಳು ಕಟ್ಟಡ ಇಮಾರತುಗಳು, ಮನೆ, ಅರಮನೆ, ಗುಡಿ ದೇವಾಲಯಗಳ ವಿಚಾರದಲ್ಲಿ ಒಟ್ಟಾಗಿ ಉಂಟು ಮಾಡುವ ಪ್ರಭಾವ,  ಪೂರೈಸುವ ಸ್ಪಂದನಗಳ ಬಗ್ಗೆ ಹೆಚ್ಚಿನ ಅರಿವನ್ನು ನಾವು ಪಡೆದಿರಬೇಕು. ಒಟ್ಟಾರೆಯಾಗಿ ವಾಸ್ತುವಿನ ವಿಷಯದಲ್ಲಿ ಸಂಪೂರ್ಣ ಎಚ್ಚರವನ್ನು ವಹಿಸುವುದು ಹಿಂದಿನ ಕಾಲದಿಂದಲೂ ದುಸ್ತರವಾಗಿಯೇ ಇತ್ತು. ಈಗಂತೂ ಕೇಳುವುದೇ ಬೇಡ. ಪುಟ್ಟ ಪುಟ್ಟ ಉದ್ದಗಲಗಳ ನಿವೇಶನಗಳಲ್ಲಿ ಎಲ್ಲವನ್ನೂ ನಿಭಾಯಿಸುವ ವಿಚಾರ ಅಸಾಧ್ಯವಾದ ಮಾತು.

ಹೀಗಾಗಿ ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಿಂದ ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ ಅವರೆ ಎಳ್ಳು ಉದ್ದು ಹುರುಳಿ ಇತ್ಯಾದಿ ನವದಾನ್ಯಗಳನ್ನು ಇಂತಿಂಥಾ ದಿಕ್ಕಿನ ಲೋಪಗಳಿಗೆ ಎಂದು ಗುರುತಿಸಿಕೊಂಡು ನಿಸರ್ಗದಲ್ಲಿನ ಪಕ್ಷಿ, ಕೀಟ ಜಂತುಗಳಿಗೆ ಆಹಾರವಾಗಿ ಸಮರ್ಪಿಸುವುದು ಅತಿ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ ವಾಸ್ತುವಿನ ಲೋಪ ದೋಷಾದಿಗಳಿಗೆ ಅಷ್ಟರಮಟ್ಟಿಗಿನ ವಿಮೋಚನೆ ದೊರಕುತ್ತದೆ. ಇದು ಅತ್ಯಂತ ಹೆಚ್ಚು ಗಮನಾರ್ಹ.

ಯಾವ ದಿಕ್ಕಿಗೆ ಯಾರು ಅಧಿಪತಿ?
ಇಡೀ ಜಗತ್ತು ಪಂಚಭೂತ ತತ್ವದ ಆಧಾರದ ಮೇಲೆ ನಿಂತಿದೆ ಎಂಬುದನ್ನು ನಾವು ಅರಿತಿದ್ದೇವೆ. ಇದರೊಂದಿಗೆ ಸೃಷ್ಟಿ, ಸ್ಥಿತಿ, ಲಯಾದಿ ವಿಷಯಗಳಿಗೂ ಹೆಚ್ಚಿನ ಮಹತ್ವ ಪಡೆದಿದೆ. ಹುಟ್ಟಿದ ಪ್ರತಿಜೀವಿಗೂ ಹುಟ್ಟಿನಷ್ಟೇ ಸಾವೂ ಅನಿವಾರ್ಯವಾದ ಇನ್ನೊಂದು ಧೃವ, ಹೀಗಾಗಿ ನಮ್ಮ ಆಷೇìಯ ವಿಶೇಷಗಳು ಸಂವರ್ದಿಸಿದ ಪುರಾಣಗಳಲ್ಲಿ ಎಲ್ಲವನ್ನೂ ನಿಯಂತ್ರಿಸುವ ಪರಮಾತ್ಮ ಒಬ್ಬನೇ ಆದರೂ ಆ ಪುರುಷ ಶ್ರೇಷ್ಠನನ್ನು ಮಾಯೆಯಿಂದ ಬೇರ್ಪಡಿಸಿ ನಮ್ಮ ಸಂಸ್ಕೃತಿ ನೋಡಲಿಲ್ಲ. ಹೀಗಾಗಿ ಆ ಪುರುಷ ಶ್ರೇಷ್ಠನೇ ಮಾಯೆಯ ಆವರಣಗಳಿಂದಾಗಿ ತನ್ನಲ್ಲೇ ಚೈತನ್ಯವಾದ ಸ್ತ್ರೀಯನ್ನು ಒಳಗೊಂಡಿದ್ದಾನೆ. ಇವತ್ತಿನ ವೈಜಾnನಿಕವಾದ ಬಿಗ್‌ ಬ್ಯಾಂಗ್‌ ಥಿಯರಿ ಏನಿದೆ ಅದು ನಮ್ಮ ಆಷೇìಯವಾದ ನಂಬಿಕೆಯ ಮಾಯೆಯನ್ನು ಪೂರ್ತಿಯಾಗಿ ದೃಢೀಕರಿಸುವಂತಿದೆ.

ಈ ಮಾಯೆ ಸ್ತ್ರೀಯಾಗಿದ್ದಾಳೆ. ಪ್ರಕೃತಿಯಾಗಿದ್ದಾಳೆ. ಪುರುಷನನ್ನು ಆಶ್ರಯಿಸಿಕೊಂಡೇ ಇದ್ದಾಳೆ. ಪುರುಷನಿಗೂ ಸ್ತ್ರೀಯನ್ನು ಬಿಟ್ಟರೆ ಚೈತನ್ಯವಿಲ್ಲ. ಪ್ರಕೃತಿಗೂ ಪುರುಷನನ್ನು ತೊರೆದರೆ ಫ‌ಲವಂತಿಕೆಗೆ ಬೆಲೆ ಇಲ್ಲ. ಈ ಮಾಯೆ ಆಚ್ಛಾದಿತ ಪುರುಷನೇ ಸರ್ವಾಂತರ್ಯಾಮಿ ಸರ್ವಶಕ್ತ ಪರಮಾತ್ಮ. ಆ ಪರಮಾತ್ಮನೇ ತನ್ನಿಂದ ತಾನು ಛೇದಿಸಿಕೊಂಡು ತ್ರಿಮೂರ್ತಿಗಳ ಸ್ವರೂಪದಲ್ಲಿ ಬ್ರಹ್ಮ, ವಿಷ್ಣು , ಮಹೇಶ್ವರನಾಗಿ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿದ್ದಾನೆ. ಈ ಮೂರು ಶಕ್ತಿಗಳ ಜೊತೆಗೆ ಸ್ತ್ರೀ ಮಣ್ಣು, ಬೆಂಕಿ, ಆಕಾಶ, ವಾಯು, ಜಲ ತತ್ವಗಳಲ್ಲಿ ಒಡೆದು ಪಂಚಭೂತೆಯಾಗಿದ್ದಾಳೆ.

ಒಟ್ಟಿನಲ್ಲಿ ಈ ಪಂಚಭೂತ ತತ್ವ ತ್ರಿಮೂರ್ತಿಗಳ ವಿಂಗಡಣೆಗಳ ತಳಹದಿ ವಿಶಾಲವಾದ ಪೃಥ್ವಿಯನ್ನು ಒಂದು ಹದದಲ್ಲಿ ಸಂರಕ್ಷಿಸಿದೆ. ಈ ಸಂರಕ್ಷಣೆಯ ದೃಷ್ಟಿಯಿಂದ ಅನುಸರಿಸಬೇಕಾದ ವಾಸ್ತುಕ್ರಮಗಳ ಬಗೆಗೆ ಅಂದರೆ ನವಗ್ರಹಗಳು ಅಷ್ಟದಿಕಾ³ಲಕರುಗಳ ಬಗ್ಗೆ ಮುಂದಿನ ವಾರ ಚರ್ಚಿಸೋಣ.


Tuesday, 19 December 2017

ಮನೆಯಲ್ಲಿ ಪೂಜಾಮಂದಿರ ಯಾವ ದಿಕ್ಕಿನಲ್ಲಿ ಇರಬೇಕು?

ಮನೆಯ ನಿರ್ಮಾಣಕ್ಕೆ ತಕ್ಕಂತೆ ಅದರಲ್ಲಿ ವಾಸಿಸುವವರ ಭವಿಷ್ಯ ಆಧಾರಪಟ್ಟಿರುತ್ತದೆಂದು ಹೇಳುತ್ತದೆ ವಾಸ್ತುಶಾಸ್ತ್ರ. ಮನೆಯಲ್ಲಿನ ಆಯಾ ಕೋಣೆಗಳ ರೀತಿಯಲ್ಲೇ ಪೂಜಾಕೋಣೆ ವಿಷಯದಲ್ಲೂ ಕೆಲವು ನಿರ್ದಿಷ್ಟ ಸೂಚನೆಗಳಿವೆ. ಇದರ ಪ್ರಕಾರ ಪೂಜಾಮಂದಿರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಬೇಕು. ಪೂರ್ವ, ಉತ್ತರ ದಿಕ್ಕುಗಳ ನಡುವೆ ಇರುವ ಪ್ರದೇಶವೇ ಈಶಾನ್ಯ. ಪೂಜಾಕೋಣೆ ನಿರ್ಮಾಣಕ್ಕೆ ಇದೇ ಅತ್ಯತ್ತಮವಾದ ಜಾಗ.

ಈ ಕೋಣೆಯಲ್ಲಿ ಬೆಳಗ್ಗೆ ಸೂರ್ಯಕಿರಣಗಳು ಪಸರಿಸುವ ಕಾರಣ ಅಲ್ಲಿ ಮಾಡುವ ಧ್ಯಾನ, ಪೂಜೆಗಳು ಶಾಂತವಾಗಿ ಸಾಗುತ್ತವೆ. ಈ ಕೋಣೆಯಲ್ಲಿ ಪೂಜೆ ಮಾಡಿಕೊಳ್ಳುವವರು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಕುಳಿತುಕೊಳ್ಳುವುದು ಒಳಿತು. ಅಂದರೆ ದೇವರನ್ನು ಪಶ್ಚಿಮದ ಕಡೆ ಆಗಲಿ, ದಕ್ಷಿಣದ ಕಡೆ ಆಗಲಿ ಪ್ರತಿಷ್ಠಾಪಿಸಬೇಕು. ಮನೆಯ ವಿಸ್ತೀರ್ಣಕ್ಕೆ ತಕ್ಕಂತೆ ಅಥವಾ ಅಲ್ಮೆರಾದಂತಹವು ಇಟ್ಟುಕೊಳ್ಳಬಹುದು. ಆದರೆ ಕನಿಷ್ಠ ಒಂದು ಪ್ರತಿಮೆ ಅಥವಾ ಫೋಟೋ ಆದರೂ ಈಶಾನ್ಯ ದಿಕ್ಕಿಗೆ ಕಡೆಗೆ ಇಡಬೇಕು.

ಇನ್ನು ಪೂಜಾಕೋಣೆಗೆ ಕಡ್ಡಾಯವಾಗಿ ಹೊಸಿಲು ಇರಬೇಕು. ಗಂಟೆಗಳುಳ್ಳ ಬಾಗಿಲನ್ನು ವ್ಯವಸ್ಥೆ ಮಾಡಿದರೆ ಒಳಿತು. ನೈರುತ್ಯ, ಆಗ್ನೇಯ ಮೂಲೆಗಳಲ್ಲಿ ಪೂಜಾಕೋಣೆಯನ್ನು ಯಾವುದೆ ಕಾರಣಕ್ಕೂ ಇಟ್ಟುಕೊಳ್ಳಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಅದೇ ರೀತಿ ಬೆಡ್ ರೂಮ್‌ನಲ್ಲೂ ಪೂಜಾ ಕೋಣೆಯನ್ನು ಇಟ್ಟುಕೊಳ್ಳಬಾರದು.
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ
ತಾಜಾ ಸುದ್ದಿಗಾಗಿ ವಿಕ ಫೇಸ್‌ಬುಕ್ ಪುಟ ಲೈಕ್ ಮಾಡಿ.

Monday, 18 December 2017

ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ರುಚಿಕರ ಅಡುಗೆಗಳು

ಕೊಂಕಣ ಪ್ರದೇಶವು ಪ್ರಾರಂಭದಿಂದಲೂ ಪಾಕ ವಿಧಾನದಲ್ಲಿ ತನ್ನದೇ ವಿಶೇಷ ಶೈಲಿಯನ್ನು ಹೊಂದಿದೆ. ಈ ಅಡುಗೆ ತಯಾರಿಕೆಯ ಶೈಲಿಗಳು ಹೆಚ್ಚಾಗಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದ ಸಂಪ್ರದಾಯಗಳಿಂದ ಪ್ರಭಾವಿತವಾಗಿದ್ದು ಮುಖ್ಯವಾಗಿ ಸಮುದ್ರದಲ್ಲಿ ದೊರೆಯುವ ಆಹಾರ ಪಧಾರ್ಥವನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ದಿನಚರಿ. ಅಷ್ಟೇ ಅಲ್ಲ ಇಲ್ಲಿ ಶಾಖಹಾರಿ ಅಡುಗೆಗಳು ಸಹ ರುಚಿಯಲ್ಲಿ ಉಳಿದವುಗಳಿಗಿಂತ ವಿಭಿನ್ನವಾಗಿರುತ್ತದೆ.
ಕರಾವಳಿ ಕೊಂಕಣ ಪ್ರದೇಶದಲ್ಲಿ ಬಹಳ ಜನಪ್ರಿಯರಾಗಿರುವ ಕೆಲವು ವಿಶೇಷ ಕೊಂಕಣಿ ಪಾಕವಿಧಾನಗಳನ್ನು ತಿಳಿಯೋಣ...

 1. ದಾಳಿ ತೋಯ್ (ದಾಲ್)

ದಾಳಿ ತೋಯ್ ಎಲ್ಲ ಕೊಂಕಣಿ ಜನರು ಅಡುಗೆ ಪ್ರಾರಂಭಿಸಿದಾಗ ಕಲಿತ ಮೊಟ್ಟಮೊದಲ ಪಾಕವಿಧಾನ ಇದಾಗಿದ್ದು ಮೆಣಸಿನಕಾಯಿ, ಶುಂಠಿ, ಇಂಗು ಮೊದಲಾದವುಗಳೊಂದಿಗೆ ಸರಳವಾಗಿ ತಯಾರಿಸುವ ದಾಲ್ ಇದಾಗಿದೆ. ಇದು ಬಹುತೇಕ ಎಲ್ಲಾ ಕೊಂಕಣಿ ಪ್ರದೇಶದಲ್ಲಿ, ಕಾರ್ಯಕ್ರಮದಲ್ಲಿ ಮತ್ತು ಉತ್ಸವಗಳಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ.
 

ಬೇಕಾಗುವ ಸಾಮಗ್ರಿ

1 ಕಪ್ ತೊಗರಿ ಬೇಳೆ
3-4 ಹಸಿರು ಮೆಣಸಿನಕಾಯಿಗಳು
1 ಚಿಕ್ಕ ಶುಂಠಿ
ಒಂದು ಚಿಟಿಕೆ ಅರಿಶಿನ ಪುಡಿ
ಕೊತ್ತುಂಬರಿ ಸೋಪ್ಪು
2 ಟೀ ಚಮಚ ತುಪ್ಪ ಅಥವಾ ತೆಂಗಿನ ಎಣ್ಣೆ
½ ಟೀ ಚಮಚ ಸಾಸಿವೆ
½ ಟೀ ಚಮಚ ಜೀರಿಗೆ
1 ಕೆಂಪು ಮೆಣಸು
ಚಿಟಿಕೆ ಇಂಗು
4-5 ಒಗ್ಗರಣೆ ಸೋಪ್ಪು
ಉಪ್ಪು
 

ಮಾಡುವ ವಿಧಾನ-

ಅರಿಶಿನ, ಹಸಿರು ಮೆಣಸಿನಕಾಯಿ ಮತ್ತು ಸಣ್ಣದಾಗಿ ಕೊಚ್ಚಿದ ಶುಂಠಿಯೊಂದಿಗೆ ತೊಗರಿ ಬೇಳೆಯನ್ನು ಕುಕ್ಕರ್‌ನಲ್ಲಿ 3 ಸೀಟಿ ಬರುವವರೆಗೂ ಬೇಯಿಸಿ. ಅದಕ್ಕೆ ಉಪ್ಪು ಸೇರಿಸಿ. ಒಂದು ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಒಗ್ಗರಣೆ ಸೋಪ್ಪು, ಕೆಂಪು ಮೆಣಸು, ಇಂಗು ಸೇರಿಸಿ ಒಗ್ಗರಣೆ ನೀಡಿ. ಇದಕ್ಕೆ ಬೇಯಿಸಿದ ದಾಲ್ ಮತ್ತು ಕೊತ್ತುಂಬರಿ ಸೋಪ್ಪು ಹಾಕಿದರೆ, ರುಚಿಕರವಾದ ಕೊಂಕಣಿ ಶೈಲಿಯ ದಾಳಿ ತೋಯ್ ರೆಡಿ.

 

2. ಸೋಯಿ ಪೋಳೋ (ಕಾಯಿ ದೋಸೆ)


ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ (ದೋಸೆ ಅಕ್ಕಿ, ಇಲ್ಲದಿದ್ದರೆ ಯಾವುದೇ ಸಾಮಾನ್ಯ ಬೇಯಿಸದ ಅಕ್ಕಿ)
3/4 ಕಪ್ ತೆಂಗಿನಕಾಯಿ
ಉಪ್ಪು
 

ಮಾಡುವ ವಿಧಾನ-


ರಾತ್ರಿಯಿಡಿ ನೆನೆಸಿಟ್ಟ ಅಕ್ಕಿ ಮತ್ತು ತೆಂಗಿನಕಾಯಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನಂತರ ಕಾದ ತವಾ ಮೇಲೆ ಎಣ್ಣೆಯನ್ನು ಸವರಿ, ರುಬ್ಬಿದ ಹಿಟ್ಟು ಹಾಕಿ ಒಂದು ಭಾಗ ಮಾತ್ರ ಬೇಯಿಸಿದರೆ ಸೋಯಿ ಪೋಳೋ (ನೀರ್ ದೋಸೆ) ಸವಿಯಲು ಸಿದ್ಧ.
 

3. ಬಂಗಡಾ ಮೀನು ಸಾಂಬಾರ್


ಬೇಕಾಗುವ ಸಾಮಗ್ರಿ

 1/2 ತೆಂಗಿನಕಾಯಿ ತುರಿ
ಹುಣಿಸೇಹಣ್ಣು - 1 ಸಣ್ಣ ತುಂಡು
ಸ್ವಲ್ಪ ಹುರಿದ ಕೆಂಪು ಮೆಣಸು- 8
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 3 ಎಸಳು
ಸ್ವಲ್ಪ ಹುರಿದ ಕೋತ್ತಂಬರಿ ಕಾಳು
ಸ್ವಲ್ಪ ಅರಿಶಿನ ಪುಡಿ
ಉಪ್ಪು
ಈರುಳ್ಳಿ - 1.
ಹಸಿರು ಮೆಣಸಿನಕಾಯಿ- 2
ತೆಂಗಿನ ಎಣ್ಣೆ - 2 ಟೀ ಚಮಚ
4 ಕತ್ತರಿಸಿರುವ ಬಂಗಡಾ ಮೀನು
 

ಮಾಡುವ ವಿಧಾನ-


ಮೀನಿಗೆ ಉಪ್ಪು ಮತ್ತು ಸ್ವಲ್ಪ ಅರಿಶಿನ ಹಚ್ಚಿ ಪಕ್ಕಕ್ಕೆ ಇರಿಸಿ.

ತೆಂಗಿನಕಾಯಿ ತುರಿ, ಹುಣಿಸೇಹಣ್ಣು ಮತ್ತು ಹುರಿದ ಕೆಂಪು ಮೆಣಸಿನಕಾಯಿ, ಹುರಿದ ಕೋತ್ತಂಬರಿ ಕಾಳು, ಈರುಳ್ಳಿ, ಶುಂಠಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ಬಾಣಲೆಯಲ್ಲಿ 2 ಟೀ ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಜಜ್ಜಿರುವ ಬೆಳ್ಳುಳ್ಳಿ ಎಸಳನ್ನು ಹಾಕಿ ಹುರಿಯಿರಿ ನಂತರ ರುಬ್ಬಿದ ಮಸಾಲೆ ಹಾಕಿ, ಮೀನಿನ ತುಂಡುಗಳನ್ನು ಹಾಕಿ ಮತ್ತು ಸ್ವಲ್ಪ ನೀರನ್ನು ಸೇರಿಸಿ. ಅದನ್ನು 5 ರಿಂದ 7 ನಿಮಿಷಗಳವರೆಗೆ ಬೇಯಿಸಿದರೆ ಬಂಗಡಾ ಮೀನು ಸಾಂಬಾರ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ನೀವು ಮನೆ ಕಟ್ಟುವ ಸೈಟು ಹೇಗಿರಬೇಕು ಗೊತ್ತಾ?

ಮನೆಯನ್ನು ಕಟ್ಟಲಿಕ್ಕಾಗಿ ಪಡೆದುಕೊಂಡ ಫ್ಲಾಟ್‌ ಹಲವಾರು ರೀತಿಯಲ್ಲಿ ತನ್ನದೇ ಆದ ಸಂಪನ್ನತೆಗಳನ್ನು ಹೊಂದಿರುವುದು ಮನೆಯ ವಾಸ್ತವ್ಯದ ಸಂದರ್ಭದಲ್ಲಿ ದಕ್ಕಬೇಕಾದ ಒಳಿತುಗಳಿಗೆ ಅವಶ್ಯವಾಗಿದೆ. ಇಂದಿನ ದಿನಗಳು ಹೇಗಿದೆ ಎಂದರೆ ಒಂದು ಫ್ಲಾಟ್‌ ಸಿಕ್ಕಿದರೆ ಸಾಕು ಎಂಬ ವಿಚಾರದಲ್ಲಿ ಹೆಚ್ಚಿನ ಕಾತುರ ಇರುತ್ತದೆ. ಕಾಲ ಸಕಲವನ್ನೂ ಸಂಪನ್ನತೆಯ ದೃಷ್ಟಿಯಿಂದ ಮುಕ್ಕಿ ತಿಂದಿದೆ. ಕಾಲದ ದುಷ್ಟತನವೆಲ್ಲಾ ಇದು. ಹಾಗೆ ನೋಡಿದರೆ ಮನುಷ್ಯನ ಸ್ವಾರ್ಥ ಚಲ್ತಾ ಹೈ ಧೋರಣೆಗಳು ಆಳುವವರ ಉಡಾಫೆ, ಭೂಮಿಗೆ ದಕ್ಕಿದ ಹೆಚ್ಚಿನ ಬೆಲೆ, ಲಂಚ ರುಷುವತ್ತು ಮಸಲ್‌ ಪವರ್‌ ಒಂದು ಸುಂದರ ಮನೆಯನ್ನು ಪಡೆದುಕೊಳ್ಳುವ ಕ್ರಿಯೆಯನ್ನು ಗಗನಕುಸುಮವಾಗಿಸಿದೆ. ಫ್ಲಾಟಿನ ಏರಿಳಿತಗಳು ಆಕಾಶ, ಅಳತೆ, ದಿಕ್ಕು, ಅನುಪಾತ ಇರುವ ಪ್ರದೇಶ, ಫ್ಲಾಟಿಗೆ ಎದುರು ರಸ್ತೆಯ ದಿಕ್ಸೂಚಿ ಸುತ್ತಮುತ್ತಲ ಪರಿಸರದ ವಾಸ್ತವಗಳು ಇತ್ಯಾದಿಗಳೆಲ್ಲಾ ಸಾಮಾಜಿಕ ಪತನಕ್ಕೆ ಕಾರಣವಾಗುವಂತಿರಬಾರದು. ಮನೆ ಕಟ್ಟಿ ವಾಸಿಸ ತೊಡಗಿದವರ ಉತ್ಸಾಹ, ಕ್ರಿಯಾಶೀಲತೆ, ಆರೋಗ್ಯ ಸಂಪತ್ತು ಕುಸಿಯಲು ಕಾರಣವಾಗಬಾರದು.

ಯಾವಾಗಲೂ ಮನೆಯ ವಾಯುವ್ಯ ಹಾಗೂ ಆಗ್ನೇಯ ಬಿಂದುವಿಗೆ ಒಂದು ಸರಳ ರೇಖೆ ಹಾಕಿದರೆ ಉತ್ತರ ಹಾಗೂ ಪೂರ್ವ ಭಾಗದಿಂದ ಆಗ್ನೇಯ ಬಿಂದುವ ವರೆಗಿನ ತ್ರಿಕೋನ ಭಾಗ ಸೂರ್ಯನ ಅಧಿಪತ್ಯಕ್ಕೆ ಒಳಗೊಳ್ಳುತ್ತದೆ. ಮಿಕ್ಕುಳಿದ ಭಾಗ ಚಂದ್ರನ ಅಧಿಪತ್ಯಕ್ಕೆ ಒಳಪಟ್ಟಿರುತ್ತದೆ. ಸೂರ್ಯನ ಭಾಗ ಸ್ವಪ್ರಕಾಶಿಸುವುದರಿಂದ ನಿಮ್ಮ ಪ್ರಯತ್ನಗಳಿಂದಲೇ ಜೀವನದಲ್ಲಿ ಗೆಲ್ಲುವ ಶಕ್ತಿಯನ್ನು ಮನೆಯ ಈ ಭೂಭಾಗನಿಮಗೆ ಕರುಣಿಸಿ ಕೊಡುತ್ತದೆ. ಉಳಿದರ್ಧ ಭಾಗ ನಿಮ್ಮ ವಿಚಾರದಲ್ಲಿ ಒದಗಬೇಕಾದ ದೈಹಿಕ ಸಹಾಯ ಅದೃಷ್ಟಗಳನ್ನು ಪ್ರತಿನಿಧಿಸುತ್ತದೆ. ಈ ರೀತಿಯಲ್ಲಿ ವರಿಸಿದ ಚಂದ್ರನ ಭಾಗ ಸ್ವಲ್ಪ ಎತ್ತರವನ್ನು ಕಾಪಾಡಿಕೊಳ್ಳುವುದು ಫ್ಲಾಟ್‌ನ ವಾಸ್ತು ದೃಷ್ಟಿಯಿಂದ ಉತ್ತಮವಾದುದಾಗಿದೆ. ಉತ್ತರ ಮತ್ತು ಪೂರ್ವದತ್ತ ಇಳಿಜಾರು ಇರಬೇಕಾದುದು ವಾಸ್ತು ಸಿದ್ಧಿಗೆ ಸೂಕ್ತ. ಇದರಿಂದಾಗಿ ನೀರಿನ ಹರಿತ ಪಶ್ಚಿಮದಿಂದ ಪೂರ್ವಕ್ಕೂ ದಕ್ಷಿಣದಿಂದ ಉತ್ತರಕ್ಕೂ ಅವಕಾಶ ಒದಗಿಬರುತ್ತದೆ. ಈ ರೀತಿಯ ವಿಚಾರಗಳು ಒಗ್ಗೂಡಿದರೆ ಈ ರೀತಿಯ ಫ್ಲಾಟ್‌ನಲ್ಲಿ ತಲೆ ಎತ್ತಿದ ಮನೆಯ ನಿವಾಸಿಗಳಿಗೆ ಸುಖಕ್ಕೆ ದಾರಿ ಲಭ್ಯ.

ಯಾವಾಗಲೂ ತುಸು ತಗ್ಗಿದ ಈಶಾನ್ಯ ಮೂಲೆ ತುಸು ಎತ್ತರಿಸಲ್ಪಟ್ಟ ನೈರುತ್ಯ ಮೂಲೆ ಎಲ್ಲಾ ವಿಚಾರಗಳಲ್ಲಿ ಯಶಸಿಗೆ ದಾರಿ ನಿರ್ಮಿಸುತ್ತದೆ. ದೀರ್ಘಾಯಸ್ಸು ಕೂಡಾ ಕೂಡಿ ಬರಲು ಇದು ಸಹಾಯಕ. ಇಡಿಯಾದ ಪಶ್ಚಿಮ ದಿಕ್ಕು ಎತ್ತರವೂ, ಇಡಿಯಾದ ಪೂರ್ವ ದಿಕ್ಕು ತಗ್ಗಿಕೊಂಡಿದ್ದು ಇದ್ದುದಾದರೆ ಇಂಥ ಫ್ಲಾಟಿನಲ್ಲಿ ಕಟ್ಟಿದ ಮನೆಯಲ್ಲಿ ವಾಸಿಸುವ ಜನರಿಗೆ ಸಾಮಾಜಿಕವಾದ ಮನ್ನಣೆ ಧನವೃದ್ಧಿಯು ಉತ್ತಮ ರೀತಿಯಲ್ಲಿ ಲಭ್ಯವಾಗುತ್ತದೆ. ಮನೆಯ ಮಧ್ಯದ ಸ್ಥಳವು ತುಸು ಏರಿಕೊಂಡಿದ್ದು ವಿಕಸನ ಪಡೆದಿದ್ದರೆ ಇದಕ್ಕೆ ಕೂರ್ಮ ವೃದ್ಧಿ ಎನ್ನುತ್ತಾರೆ. ಇದರಿಂದಾಗಿ ಮನೆಯ ಫ್ಲಾಟ್‌ ತುಂಬಾ ಸಂಪನ್ನತೆಯನ್ನು ಪಡೆದು ಶ್ರೇಷ್ಠತ್ವಕೆ ಒಯ್ಯುವ ಸಾಧನವಾಗುತ್ತದೆ. ಇಂಥ ರೀತಿಯ ಮನೆಯಲ್ಲಿನ ವಾಸವು ವಸತಿಗಾರರ ಸುಖ, ಕ್ಷೇಮ, ಲಾಭ, ಜಯ, ಸಿರಿಗೆ ಸಿದ್ಧಿಗೆ ಅಂಶವಾಗಿದೆ.ಒಟ್ಟಿನಲ್ಲಿ ಭೂಮಿಯ ವಿವಿಧ ಏರಿಳಿತಗಳಿಂದಾಗಿ ತನ್ನ ಸಂಪನ್ನತೆಯನ್ನು ಪಡೆದುಕೊಳ್ಳುತ್ತದೆ. ಕೆಲವು ಸಲ ಪ್ಲಾಟ್‌ ಯಾವುದೋ ದಿಕ್ಕಲ್ಲಿ ಮೂಲೆಯಲ್ಲಿ ತುಸು ಬೆಳೆದಿರುತ್ತದೆ. ಈ ರೀತಿಯ ಬೆಳವಣಿಗೆಗಳಲ್ಲಿ ಎಲ್ಲವೂ ಒಳಿತಿಗೆ ಪೂರಕವಾಗಿ ವರ್ತಿಸುವುದಿಲ್ಲ. ಫ್ಲಾಟ್‌ಗೆ ಈಶಾನ್ಯದ ಕಡೆ ತುಸು ಬೆಸೆದುಕೊಂಡಿದ್ದರೆ ಇಂಥ ಫ್ಲಾಟ್‌ ನಲ್ಲಿ ಕಟ್ಟಿದ ಮನೆಯಿಂದ ಉತ್ತಮ ಫ‌ಲ ಸಮೃದ್ಧಿಗಳು ಲಭ್ಯವಾಗುವುವು. ಹಾಗೆಯೇ ದಕ್ಷಿಣ, ಪಶ್ಚಿಮ, ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ದಿಕ್ಕುಗಳು ಸರಿಯಾಗಿ ಲಂಬಕೋನಗಳಲ್ಲಿದ್ದರೆ ಕೂಡಾ ಇಲ್ಲಿನ ಮನೆಗಳು ಸಕಾರಾತ್ಮಕ ಗುಣ ಪಡೆಯುತ್ತದೆ ಅನುಮಾನವಿಲ್ಲ. ಆದರೆ ಆಗ್ನೇಯ ದಿಕ್ಕಿಗೆ ಫ್ಲಾಟಿನ ಬೆಳವಣಿಗೆ ಮನೆ ಕಟ್ಟಲು ಉತ್ತಮವಾಗಿರದು.

ವಾಯುವ್ಯ ದಿಕ್ಕಿಗೂ ಫ್ಲಾಟ್‌ ಬೆಳೆಯಕೂಡದು. ಇಲ್ಲಿ ಮನೆಯ ಕಟ್ಟುವಿಕೆ ಉತ್ತಮ ಫ‌ಲಾವಳಿಗೆ ಪೂರಕವಾಗಿರುವುದಿಲ್ಲ. ಹಾಗೆಯೇ ನೈರುತ್ಯದ ಕಡೆಯ ದೀರ್ಘ‌ತೆ ಫ್ಲಾಟ್‌ ಗಳಿಗೆ ಉಚಿತವಾದುದಲ್ಲ. ದಯಮಾಡಿ ಗಮನಿಸಿ. ಈ ರೀತಿಯಲ್ಲಿ ವಾಸ್ತುವಿನ ಕುರಿತಾದ ಕೆಲವು ಅಂಶಗಳನ್ನು ಕಡೆಗಣಿಸದೆಯೇ ಪುರಸ್ಕರಿಸಿದರೆ ಒಳ್ಳೆಯದು. ಹೆಚ್ಚಾಗಿ ಜಾತಕದ ದಶಾಕಾಲ ಸರಿ ಇರದಿರುವಾಗ, ಶನಿಕಾಟದ ಕೇಮದ್ರುಮಯೋಗದ ನಕಾರಾತ್ಮಕ ದಿನಗಳಲ್ಲಿ ವಾಸ್ತುವಿನ ಶಿಸ್ತು ಬದ್ಧತೆ ಮನೆಯನ್ನು ಪುಷ್ಟೀಕರಿಸಿದ್ದರೆ ಗ್ರಹಗಳ ದೌರ್ಬಲ್ಯವನ್ನು ನಿಯಂತ್ರಿಸುವ ಶಕ್ತಿ ಒದಗಿಬರುತ್ತದೆ.


Saturday, 16 December 2017

ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ

2009ರಲ್ಲಿ ಗುರು ಕಟಕದಲ್ಲಿ ಪ್ರವೇಶಿಸಿ ದುರ್ಬಲಗೊಳ್ಳುತ್ತದೆ. ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. 2009ನೇ ವರ್ಷವು ಮುಖ್ಯ ಶಕ್ತಿ ಪ್ರಥ್ವಿ ಅಥವಾ ಭೂಮಿಯಿಂದ ಆಳಲ್ಪಡುತ್ತದೆ.

ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.

ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.
ಏಳು ದೈವಾಜ್ಞೆಗಳು

ಹಿರಿಯರಿಗೆ


ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.

ವೃತ್ತಿನಿರತರಿಗೆ


ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.

ಗೃಹಿಣಿಯರಿಗೆ


ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.

ವಿದ್ಯಾರ್ಥಿಗಳಿಗೆ


ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.

ಈ ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ ಉತ್ತಮ ಆರೋಗ್ಯ, ಸಾಮರಸ್ಯ ಮತ್ತು ಸಂತೋಷದ ಹಾದಿಯಲ್ಲಿ ಹೆಜ್ಜೆಹಾಕಿ.

Friday, 15 December 2017

ಮನೆಯ ನೈಋತ್ಯ ಮೂಲೆಯಲ್ಲಿ ಇದೆ, ಕೌಟುಂಬಿಕ ಸೌಖ್ಯ

ನೈಋತ್ಯ ಮೂಲೆಯ ಸಮತೋಲನ ಸಿದ್ಧಿಯಿಂದ ಕುಟುಂಬದಲ್ಲಿ, ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳ ಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ.  ಹೀಗಾಗಿ ನೈರುತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿ ಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಲದ ತೊಂದರೆಗಳೀಂದ ತಪ್ಪಿಸಿಕೊಳ್ಳಲು ಕೂಡಾ ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶವಾಗಿದೆ.

ಮನೆಯ ನೈಋತ್ಯ ಮೂಲೆಯು ಇತರ ಯಾವುದೇ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿ ಇರುವುದು ಸೂಕ್ತ. ಹಾಗೆಯೇ ಮನೆಯ ಸುತ್ತಲೂ ಕಟ್ಟುವ ಗಡಿ ಗೋಡೆಯ ವಿಚಾರದಲ್ಲೂ ನೈಋತ್ಯ ಭಾಗದ ಗಡಿಗೋಡೆ ಇತರ ದಿಕ್ಕಿಗಿಂತಲೂ ತುಸು ಹೆಚ್ಚೇ ಎತ್ತರವನ್ನು ಕಾಯ್ದುಕೊಳ್ಳುವುದು ಸೂಕ್ತ. ವಿಷಮತೆಗಳನ್ನು ತಂದೊಡ್ಡುವ ಸ್ಪಂದನಗಳನ್ನು ತಡೆದು ಒಳ್ಳೆಯ ಪರಿಣಾಮಗಳನ್ನು ನಿರೀಕ್ಷಿಸಬಹುದು.  ಇದರಿಂದ ಮನೆಯ ಜನರಿಗೆ ಒಳ್ಳೆಯ ಭವಿಷ್ಯಕ್ಕೆ ಇದು ಸಕಾರಾತ್ಮಕವಾಗಿ ಇರುತ್ತದೆ.

ಹಾಗೆಯೇ, ಈ ದಿಕ್ಕಿನಲ್ಲಿ ಇಡುವ ಕಬ್ಬಿಣದ ಪೆಟ್ಟಿಗೆಯ ಕುರಿತಂತೆ ಎಚ್ಚರ ಬೇಕೇ ಬೇಕು. ಉತ್ತರ ಅಥವಾ ಪೂರ್ವ ದಿಕ್ಕುಗಳಿಗೆ ಮುಖ ಮಾಡುವಂತೆ ಈ ಪೆಟ್ಟಿಗೆಗಳನ್ನು ಕೂಡಿಸಬೇಕು. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳನ್ನು ಒಳಗೊಳ್ಳುವ ಮೂಲೆ ಭಾಗವೇ ನೈಋತ್ಯ ದಿಕ್ಕಾಗಿದೆ. ಅಷ್ಟ ದಿಕಾ³ಲಕರಲ್ಲಿ ಒಬ್ಬರಾದ ನಿಋತನ ಆಳ್ವಿಕೆಗೊಳಪಟ್ಟ ದಿಕ್ಕು ಇದು. ಜೀವ ತತ್ವಕ್ಕೆ ಬೇಕಾದ ನೀರಿನ ವಿಚಾರವನ್ನು ನಿಯಂತ್ರಿಸುವ ಮೂಲೆ ಇದು. ಮನೆಯ ಕುರಿತಾದ ಮಹಡಿಯ ಮೆಟ್ಟಿಲುಗಳನ್ನು ಕೂಡಾ ನೈಋತ್ಯಕ್ಕೆ ಸಮಾವೇಶಗೊಳಿಸುವಂತೆ ರಚನೆ ಇರಬೇಕು. ಈ ರೀತಿಯ ಮಹಡಿ ಮೆಟ್ಟಿಲುಗಳು ಯಶಸ್ಸನ್ನು ಸಂಪಾದಿಸುವ ಎತ್ತರಕ್ಕೆ ತನ್ನ ಸ್ಪಂದನವನ್ನು ಕ್ರೋಢೀಕರಿಸಿಕೊಳ್ಳುತ್ತದೆ. ಅನುಮಾನವಿಲ್ಲ. ಮನೆಗೆ ಬೇಕಾದ ನೀರನ್ನು ಹಿಡಿದಿಡುವ ತೊಟ್ಟಿ ಅಥವಾ ವಾಟರ್‌ ಟ್ಯಾಂಕ್‌ ನೈಋತ್ಯ ಮೂಲೆಯಲ್ಲಿ ಕೂಡಿಸುವುದು ಒಳ್ಳೆಯದು. ನೀರಿನ ಸಂಬಂಧವಾದ ಸಲಿಲತೆ ಒದಗದೆ ಇರುವ ನೀರಿನ ಕುರಿತಾದ ಒರತೆಗೆ ಇದು ಶುಭದಾಯಕ. ಒಂದೊಮ್ಮೆ ನಿರ್ವಾಹವಿಲ್ಲದೆ ಅನಿವಾರ್ಯವಾಗಿ ಅಗ್ನಿಮೂಲೆಯಲ್ಲಿ ಅಥವಾ ವಾಯುವ್ಯದಲ್ಲಿ ನೀರಿನ ತೊಟ್ಟಿ ಇಡುವ ಅನಿವಾರ್ಯತೆ ಒದಗಿದಲ್ಲಿ, ಅಂತ ನೀರಿನ ತೊಟ್ಟಿಗಿಂತಲೂ ಎತ್ತರ ಹೊಂದುವ ಹಾಗೆ ನೈಋತ್ಯ ಮೂಲೆಯಲ್ಲಿ ಗೋಡೆಯ ಎತ್ತರ ಕಾಯ್ದುಕೊಳ್ಳಬೇಕು. ಜೊತೆಗೆ ನೈಋತ್ಯ ಮೂಲೆಯ ನೇರವಾದ ಕೋನವನ್ನು ಹೊದಿರಬೇಕೇ ವಿನಾ ಅಂಕುಡೊಂಕಾಗಿ ಇರಕೂಡದು. ಹೀಗೇನಾದರೂ ಆದರೆ ಮುಖ್ಯವಾಗಿ ರಕ್ತ ಪರಿಚಲನೆಗೆ ಸಂಬಂಧಿಸಿ ಏರುಪೇರುಗಳು ಮನೆಯ ಜನರಲ್ಲಿ ಉಂಟಾಗಬಹುದು. ಅಂತರ್ಗತ ಭೂಜಲ ಮನೆಯ ಪರಿಧಿಯಲ್ಲಿ ಒಣಗಿ ಬಿಡಬಹುದು.

ಈ ದಿಕ್ಕಿನಲ್ಲಿ ಬಾವಿಗಳು ಇರಬಾರದು. ನೀರಿನ ಕೊಳಾಯಿಯನ್ನು ಕೂಡಾ ಕೂಡಿಸಬಾರದು. ಇದರಿಂದ ವಿಧವಿಧವಾದ ಹಾನಿಗೆ ಎಡೆ ಮಾಡಿಕೊಡುವುದನ್ನು ಮನೆಯ ಜನವೇ ನಿರ್ಮಿಸಿದಂತಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಸ್ತ್ರೀಯರಿಗೆ ತೊಂದರೆ ಎದುರಾಗುವ ವಿಚಾರ ತಲೆದೋರುತ್ತದೆ. ನಿರಂತರವಾದ ರೋಗ ರುಜಿನಗಳಿಗೆ ವ್ಯಾಧಿಗಳಿಗೆ ಅವಕಾಶವಾಗಿ ಆಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಈ ಮೂಲೆಯಲ್ಲಿ ಚರಂಡಿಗಳು ಹಾಳು ಗುಂಡಿಗಳು ಸರ್ವಥಾ ಇರಕೂಡದು. ದಕ್ಷಿಣ ಮತ್ತು ಪಡುವಣ ದಿಕ್ಕುಗಳಲ್ಲಿ ಕೂಡಾ ಈ ಕ್ರಮವನ್ನು ಅನುಸರಿಸಬೇಕು.

ಒಟ್ಟಿನಲ್ಲಿ ನೈಋತ್ಯ ಮೂಲೆಯ ಸಮತೋಲನ ಸಿದ್ದಿಯಿಂದ ಕುಟುಂಬ ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ.  ಹೀಗಾಗಿ ನೈರುತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿ ಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಲದ ತೊಂದರೆಗಳೀಂದ ತಪ್ಪಿಸಿಕೊಳ್ಳಲು ಕೂಡಾ ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶವಾಗಿದೆ. ವಿಶೇಷವಾಗಿ ಸ್ತ್ರೀಯರ ಪಾಳಿನ ನೆಮ್ಮದಿಗೆ, ವಿಶೇಷ ಗಟ್ಟಿತನ ದೊರಕುತ್ತದೆ. ಇದರಿಂದಾಗಿಯೇ ಗಂಡಸರ ಪಾಲಿನ ನೆಮ್ಮದಿ, ಮಾನಸಿಕ ಶಾಂತಿ, ಅಂತರ್ಗತ ಉತ್ಸಾಹಗಳಿಗೆ ದಾರಿ ಸಿಗುತ್ತದೆ.


Wednesday, 13 December 2017

ಆಧುನಿಕ ಉಪಕರಣಗಳು ಮತ್ತು ನಿಮ್ಮ ಮನೆ

ಆಧುನಿಕ ಉಪಕರಣಗಳಾದ ಫ್ರಿಡ್ಜ್, ಟೀವಿ, ಓವನ್‌, ಮೈಕ್ರೋವೇವ್‌, ಗೀಸರ್‌, ಲಿಫ್ಟ್ ವ್ಯಾಕ್ಯೂಂ ಕ್ಲೀನರ್‌ ಇತ್ಯಾದಿ ಅಸಂಪ್ರದಾಯಿಕ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ. ಇದರಿಂದಾಗಿ ವಿವಿಧ ರೀತಿಯ ಧನಾತ್ಮಕವಾಗಿರದ ಸ್ಪಂದನಗಳು ಮನೆಯನ್ನು ಆಕ್ರಮಣದಲ್ಲಿ ಹಿಂಸಿಸುತ್ತದೆ.

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯ ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ. ನಿಜ ಹೇಳಬೇಕೆಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು ವರ್ಧಿಸುತ್ತ ಹೋಗಬೇಕಿತ್ತು. ಆದರೆ ನಾವು ಇಂದು ಬದುಕುತ್ತಿರುವ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಅನಿಸುತ್ತಿದೆಯೇ? ದೂರದ ಅಮೆರಿಕಾ ಎಷ್ಟು ಹತ್ತಿರವಾಗಿದೆಯೆಂದರೆ, ಅಮೆರಿಕಾದವರಿಗೂ ಭಾರತ ಅಪರಿಚಿತ ದೇಶವಾಗಿ ಉಳಿದಿಲ್ಲ. ಇದು ತಮಗೆ ಬೇಕೇ ಬೇಕಾದ ದೇಶ. ಅನಿವಾರ್ಯವಾಗಿ ನಾವು ಆಶ್ರಯಿಸಿ ಇರಬೇಕಾದ ದೇಶ ಎಂಬ ಅವರ ಮನೋಭಾವವನ್ನು ಗಮನಿಸುತ್ತ ಎಷ್ಟು ಹತ್ತಿರ ತಲುಪಕೂಡದೋ, ಅಷ್ಟು ಹತ್ತಿರಕ್ಕೆ ಬರುತ್ತಿದೆ.

ಆಧುನಿಕತೆಯ ಹೆಸರಿನಲ್ಲಿ ಅಮೆರಿಕಾ ಹತ್ತಿರವಾದುದು ನಮ್ಮನ್ನು ನಾವು ನಮಗೆ ಬೇಕಾದುದಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸಿಕೊಳ್ಳುತ್ತಿದ್ದೇವೆ. ನಮ್ಮ ಮನೆಗಳನ್ನು ಈ ಕಾರಣದಿಂದ ನಮಗೆ ಜೀವನೋಲ್ಲಾಸವನ್ನು ಚಿಮ್ಮಿಸುವ ವಿಚಾರದಲ್ಲಿ ಕಟ್ಟಲ್ಪಡದೆ, ಸಂಯೋಜಿಸಲ್ಪಡದೆ ಮನೆಯ ಶಾಂತಿ ಹಾಗೂ ನೆಮ್ಮದಿಗಳು ಒಂದು ರೀತಿಯ ಶುಷ್ಕ ರೀತಿಯಲ್ಲಿ ಸಪ್ಪೆಯಾಗತೊಡಗಿದೆ.

ಈ ಶುಷ್ಕ ನೆಲೆಗಳೇ ನಮ್ಮ ಆಧುನಿಕತೆಯನ್ನು ಪ್ರತಿಪಾದಿಸುತ್ತಿರುವ ಕೀಲಿ ಕೈಗಳಾಗಿರುವುದರಿಂದ ನಮ್ಮ ಸಾಂಸ್ಕೃತಿಕ ಚೌಕಟ್ಟು ಸಮತೋಲನ ಕಳೆದುಕೊಂಡಿದೆ. ಆಧುನಿಕ ಉಪಕರಣಗಳಾದ ಫ್ರಿಡುj, ಟೀವಿ, ಓವನ್‌, ಮೈಕ್ರೋವೇವ್‌, ಗೀಸರ್‌, ಲಿಫ್ಟ್ ವ್ಯಾಕ್ಯೂಂ ಕ್ಲೀನರ್‌ ಇತ್ಯಾದಿ ಅಸಂಪ್ರದಾಯಿಕ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತವೆ. ಇದರಿಂದಾಗಿ ವಿವಿಧ ರೀತಿಯ ಧನಾತ್ಮಕವಾಗಿರದ ಸ್ಪಂದನಗಳು ಮನೆಯನ್ನು ಆಕ್ರಮಣದಲ್ಲಿ ಹಿಂಸಿಸುತ್ತದೆ.

ಉದಾಹರಣೆಗೆ ಫ್ರಿಡ್ಜ್ ಹಾಗೂ ಗ್ಯಾಸಿನ ಒಲೆಯ ಸಿಲಿಂಡರ್‌ ನಂತರಗಳು ಸದಾ ಮುಖ್ಯವಾದ ಸ್ವಿಚ್‌ ಒಂದು ಟಿವಿಯಲ್ಲಿ ಸಿಆರ್‌ ಇತ್ಯಾದಿ ಚಾಲ್ತಿಯಲ್ಲೇ ಇರುತ್ತದೆ.  ತಪ್ಪು ದಿಕ್ಕಿನಲ್ಲಿ ಟಿವಿಯನ್ನೋ ಸಿಆರ್‌ ಅನ್ನೋ ಕೂಡಿಸುವುದು ಓವನ್‌ ಅಥವಾ ಮೈಕ್ರೋವೇವ್‌ ಉಪಕರಣಗಳನ್ನು ತಪ್ಪಾದ ಕಡೆ ಸಂಯೋಜಿಸುವುದು ಗೀಸರ್‌ ಅನ್ನು ಒಂದೆಡೆ ಗೋಡೆಗೆ ಬಚ್ಚಲಲ್ಲಿ ತಗುಲಿ ಹಾಕುವುದು ಇತ್ಯಾದಿ ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ.

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ನಮ್ಮ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಾಗಿರುವುದಿಲ್ಲ. ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ, ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ ನಿಂದ ನಡೆಯುವ ಉಪಕರಣಗಳೆಲ್ಲ ಪಶ್ಚಿಮ ಭಾಗವನ್ನು ವಿಶೇಷವಾಗಿ ನೈರುತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ. ಈ ಸಂದರ್ಭದಲ್ಲಿ ಹೈಟೆನÒನ್‌ ವಿದ್ಯುತ್‌ ಕಂಬಗಳು ಹೈಟೆನÒನ್‌ ಲೋಡಿರುವ ವೈರುಗಳು ಜಾಲಾಡಿಕೊಂಡಿರುವ ಮನೆಯ ಹೊರವಲಯದ ಜೋಡಣೆಗಳ ವಿಚಾರವನ್ನು ಮನದಟ್ಟು ಮಾಡಿಕೊಂಡು ಸೂಕ್ತ ವಿದ್ಯುತ್‌ ಬಗೆಗೆ ಮಾಹಿತಿ ಇರುವ ತಜ್ಞರಿಂದ ಪಶ್ಚಿಮವೂ ತೊಂದರೆಗೆ ಈಡಾಗುವ ಬಿಂದುವೇ ಎಂಬುದನ್ನು ತಿಳಿದುಕೊಳ್ಳಿ.

ಟಿವಿಯನ್ನಾಗಲೀ ಕಂಪ್ಯೂಟರನ್ನಾಗಲೀ ಮಲಗುವ ಕೋಣೆಯಲ್ಲಿ ಇಡಬಾರದು. ಇದು ಮಾನಸಿಕವಾದ ಅಂತರ್‌ ವಲಯವನ್ನು ಮೆದುಳಿನ ಸೂಕ್ಷ್ಮಕೋಶಗಳನ್ನು ಬಾಧಿಸುವ ವಿಚಾರವಾಗಿರುವುದರಿಂದ ಟಿವಿ ಕಂಪ್ಯೂಟರ್‌ ಹಾಗೂ ಮೊಬೈಲ್‌ ವಿಷಯಗಳಲ್ಲಿ ಟೆಲಿಪೋನಿನ ಲ್ಯಾಂಡ್‌ ಲೈನ್‌ ವಿಚಾರದಲ್ಲಿ ಎಚ್ಚರದಿಂದಿರಿ. ಅನಪೇಕ್ಷಿತ ವಿಚಾರವನ್ನು ತಿಳಿದು ಜಾಗರೂಕತೆಯಿಂದ ವರ್ತಿಸಿ. ಇನ್ನು ಎಷ್ಟೇ ಆದರೂ ಉಂಟಾಗಿಯೇ ತೀರುವ ಪಡಿಪಾಟಲುಗಳಿಂದಾಗಿ ದೇವರ ಮನೆಯಲ್ಲಿ ದೇವರ ಪೀಠ ಇರಿಸುವ ಕಟ್ಟೆಯ ಕೆಳಗಡೆ ಹವಳವನ್ನು ಇಟ್ಟು ಕಟ್ಟೆ ಕಟ್ಟುವುದು ಸೂಕ್ತ. ಧರಣಿ ಗರ್ಭ ಸಂಭೂತನಾದ ಅಂಗಾರಕನೇ ವಿದ್ಯುತ್‌ ಉಪಕರಣಗಳ ವಿಷಯದಲ್ಲಿ ನಿಯಂತ್ರಣಕ್ಕಾಗಿ ಜವಾಬ್ದಾರಿಯನ್ನು ಹೊತ್ತ ಗ್ರಹವಾದ್ದರಿಂದ ಹವಳವು ಪ್ರಧಾನವಾದ ದೇವರ ಕೋಣೆಯ ಸ್ಥಳದಲ್ಲಿ ಸೇರಿಕೊಂಡಿರುವುದು ಸೂಕ್ತ ವಿಚಾರ.


Tuesday, 12 December 2017

ಮನೆಯಲ್ಲಿ ನೀರು ಹಿಡಿದಿಟ್ಟರೆ ಏನೆಲ್ಲಾ ಆಗುತ್ತಾ ಎಂದರೆ...

ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಈ ಬಗ್ಗೆ ಗಮನವಿರಲಿ.

ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಹೊಡೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌, ನಗರಸಭೆ, ಮುನಸಿಪಾಲಿಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ರೀತಿಯಲ್ಲಿ ಯುಕ್ತವಾದ ವಿಧಿವಿಧಾನಗಳನ್ನು ಅನುಸರಿಸುವುದಿಲ್ಲ ಜನರು. ಹೇಗೋ ಸಂಗ್ರಹಿಸುತ್ತಾರೆ, ಹೇಗೋ ನೀರಿನ ಪೂರೈಕೆ ಮನೆಯೊಳಗಡೆಗೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿ ನಗರ, ಪ್ರತಿ ಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ.

ಮನೆಯಲ್ಲಿ ಬಾವಿಯನ್ನು ನೋಡುವುದಾದರೆ ಈಶಾನ್ಯ ಮೂಲೆಯಲ್ಲಿ ( ಉತ್ತರ ಹಾಗೂ ಪೂರ್ವ ದಿಕ್ಕುಗಳು ಸಮಾವೇಶವಾಗುವ ಸ್ಥಳ) ಬಾವಿಯನ್ನು ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯ ಮೂಲೆಯೇ ಪ್ರಾಶಸ್ತ್ಯದ ಜಾಗೆಯಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡ ಈಶಾನ್ಯ ಮೂಲೆಯಲ್ಲೇ ಇರಬೇಕು.

ಹೀಗೆ ನಿರ್ಮಿಸಿಕೊಳ್ಳುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೇ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲ ತಲೆಕೆಡಿಸಿಕೊಳ್ಳುವ ವಿಚಾರವಲ್ಲ. ಮನೆಯ ಸುಮಾರು ಒಟ್ಟೂ ವಿಸ್ತ್ರೀರ್ಣದ ಶೇಕಡ ಒಂದು ಭಾಗದಷ್ಟು ಉದ್ದಗಲಗಳು ಸಂಪಿಗೆ ಒದಗಿರಲಿ ಎಂಬುದನ್ನು ಗಮನಿಸಿ. ಸಂಪಿನ ಆಳ ಆರಡಿಯನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪ್‌ ಅನ್ನು ಆಗಾಗ ಸ್ವತ್ಛಗೊಳಿಸುವುದು ನಡೆಯಬೇಕಲ್ಲ? ಆರೋಗ್ಯಕ್ಕೆ ಇದು ಮುಖ್ಯ.

ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವುದಾದರೆ ಯುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡ ಈಶಾನ್ಯ ಮೂಲೆಗೆ ಸ್ಥಾಯಿಗೊಳ್ಳಲಿ. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರದ್ದಿರುತ್ತದೆ. ಈಜುಗೊಳವನ್ನು ಕೂಡ ನಿರ್ಮಿಸುವ ವಿಚಾರ ಇಟ್ಟುಕೊಂಡಿರುತ್ತಾರೆ.

 ಈ ಏನೇ, ಇತರ, ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಗಮನವಿರಲಿ.

ಹೇಗೆಂದರೆ, ಮನೆಯ ಮೇಲಿನ ಓವರ್‌ಹೆಡ್‌ ಟ್ಯಾಂಕ್‌ಗಳು ಮಾತ್ರ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಒಗ್ಗೂಡುವ ಜಾಗದಲ್ಲಿರುವುದು ಸೂಕ್ತ. ಇದರಿಂದ ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ, ಪ್ರದಕ್ಷಿಣಾಕಾರದಲ್ಲಿ ಓವರ್‌ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತ ಬೇಡ. ಪ್ರಾಣಿಕ್‌ ಹೀಲಿಂಗ್‌ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದಾಗಿ ದೊರಕುತ್ತಿರುತ್ತದೆ. ಅಪ್ರದಕ್ಷಿಣಾ ರೂಪದಲ್ಲಿ ನೀರು ಸರಬರಾಜಾಗುವ ವಿಚಾರ ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಇದು ತುಂಬಾ ಮುಖ್ಯ ತಿಳಿದಿರಿ.

ಮುಂದಿನವಾರ ಸಂಪು ಹಾಗೂ ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ಬಳಿಯುವ ಬಣ್ಣಗಳು ಯಾವೆಲ್ಲ ಫ‌ಲಗಳನ್ನು, ಯಶಸ್ಸುಗಳನ್ನು ನೀಡುತ್ತವೆ ಎಂಬ ವಿಚಾರವನ್ನು ಚರ್ಚಿಸೋಣ.  


Monday, 11 December 2017

ಮುಖ್ಯ ಬಾಗಿಲಿಗಾಗಿ ವಾಸ್ತು ಟಿಪ್ಸ್



ಪ್ರವೇಶ ಹಾಗು ಮುಖ್ಯ ಬಾಗಿಲು ಅತಿಥಿಗಳನ್ನು ಸ್ವಾಗತಿಸುವ ಸ್ಥಳ, ಅದರಲ್ಲಿಮೊದಲ ನೋಟದಲ್ಲೇ ಉತ್ತಮ ಅಭಿಪ್ರಾಯ ಮೂಡಿಸುವಂತಹ ಸ್ಥಳವಷ್ಟೇ ಅಲ್ಲದೆ ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಸ್ಥಳ. ವಾಸ್ತು ಪ್ರಕಾರ, ವಾಸಸ್ಥಳದ ಈ ಪ್ರವೇಶವು ಮನೆಯ ಇಡೀ ವಾತಾವರಣಕ್ಕೇ ಸಕಾರಾತ್ಮಕ ಶಕ್ತಿಯ ಸುಗಮವಾದ ಹರಿವನ್ನು ಉಂಟು ಮಾಡುವಂತಹ ಸ್ಥಳ. ಹೀಗಾಗಿ ಮನೆ ಮತ್ತು ಆಫೀಸಗಳಲ್ಲಿ (ಅಂಗಡಿಗಳು, ವರ್ಕ್‌ಶಾಪ್‌ಗಳು, ಫ್ಯಾಕ್ಟರಿಗಳು, ಮುಂತಾದವುಗಳನ್ನು ಒಳಗೊಂಡು) ಮುಖ್ಯ ಬಾಗಿಲಿಗಾಗಿ ವಾಸ್ತುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಾಥಮಿಕವಾಗಿ ವಾಸ್ತು ಉಪಾಯಗಳು ಮುಖ್ಯ ಬಾಗಿಲನ್ನು ಇರಿಸಿರುವ ರೀತಿ ಮತ್ತು ಅದರ ದಿಕ್ಕಿನ ಮೇಲೆ ಗಮನ ಕೇಂದ್ರೀಕೃತಗೊಂಡಿವೆ. ವಾಸ್ತು ಪ್ರಕಾರ ವಿನ್ಯಾಸಪಡಿಸಲಾದ ಮುಖ್ಯ ಪ್ರವೇಶ ದ್ವಾರವು ಮನೆಯಲ್ಲಿನ ಕುಟುಂಬದ ಸದಸ್ಯರ ನಡುವೆ ಹಾಗು ಸಂಬಂಧಿಕರೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬೆಳೆಸಲು ಹಾಗು ಅದನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಹಾಗು ಒಂದು ಆಫೀಸಿಗೆ ಹೆಚ್ಚು ಹೆಚ್ಚು ವ್ಯಾಪಾರದ ವಹಿವಾಟುಗಳನ್ನು ತರುತ್ತದೆ.
ಕೆಲ ಪ್ರವೇಶ ಮತ್ತು ಮುಖ್ಯ ದ್ವಾರದ ಕೆಲ ಮುಖ್ಯ ವಾಸ್ತು ಉಪಾಯಗಳು ಮತ್ತು ಅವು ಏಕೆ ಮುಖ್ಯ ಎಂಬುದು ಈ ಕೆಳಗಿನಂತಿವೆ: –
ನಿಮ್ಮ ಮುಖ್ಯ ಬಾಗಿಲು ಯಾವ ದಿಕ್ಕಿನ ಎದುರಿಗಿದೆ?

ಮನೆಯ ಮುಖ್ಯ ಬಾಗಿಲು ಮನೆಯಲ್ಲಿ ಸಂಪಾದನೆ ಮಾಡುವ ಮುಖ್ಯ ವ್ಯಕ್ತಿಯ (ಅಥವಾ ಆಫೀಸ್‌ನ ವಿಚಾರದಲ್ಲಿ ಮಾಲೀಕರ) ಜನ್ಮ ದಿನಾಂಕಕ್ಕೆ ಅನುಸಾರವಾಗಿರಬೇಕು. ಮುಖ್ಯ ಬಾಗಿಲಿನ ದಿಕ್ಕು ಎಲ್ಲರಿಗೂ ಒಂದೇ ತೆರನಾಗಿ ಸಾಮಾನ್ಯಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಅದು ಸರಳ ವಾಸ್ತು ತಜ್ಞರು ನಿಮ್ಮ ಜನ್ಮ ದಿನಾಂಕದ ಅನುಸಾರ ಲೆಕ್ಕಾಚಾರ ಮಾಡಲಾದಂತಹ ಅನುಕೂಲಕರ ದಿಕ್ಕುಗಳಲ್ಲಿ ಒಂದು ದಿಕ್ಕಾಗಿರಬೇಕು.
ನೀವು ಮುಖ್ಯ ಬಾಗಿಲಿನ ಮುಂದೆ ಮಲಗುತ್ತೀರಾ?

ಮುಖ್ಯ ದ್ವಾರದ ಎದುರು ಮಲಗುವುದು ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಆರೋಗ್ಯದ ಮೇಲೆ ಗಾಢವಾದ ಋಣಾತ್ಮಕ ಪರಿಣಾಮ ಬೀರುತ್ತದೆ. ಹಾಗೆ ಮಾಡದೇ ಬೇರೆ ದಾರಿಯಿಲ್ಲವಾದರೆ, ಮಲಗುವಾಗ ನಿಮ್ಮ ಅನುಕೂಲಕರ ದಿಕ್ಕಿನಲ್ಲಿ ಮಲಗುವುದನ್ನು ಖಚಿತಪಡಿಸಿಕೊಳ್ಳಿ.
ಈ ಮೊದಲೇ ಉಲ್ಲೇಖಿಸಲಾದಂತೆ ಮುಖ್ಯ ಬಾಗಿಲಿನ ಮುಂದೆ, ಒಳಗಿನಿಂದ ಅಥವಾ ಹೊರಗಿನಿಂದ ಯಾವುದೇ ಅಡೆತಡೆಗಳು ಇರಬಾರದು ಎಂದು ಬಾಗಿಲಿನ ವಾಸ್ತು ಉಪಾಯಗಳು ತಿಳಿಸುತ್ತವೆ. ವಾಸಸ್ಥಳದಲ್ಲಿ ಶಕ್ತಿಯ ಹರಿವಿನ ಮೇಲೆ ಇದು ಪ್ರಭಾವ ಬೀರುತ್ತದೆ. ಮುಖ್ಯ ಬಾಗಿಲು ಪೂರ್ಣವಾಗಿ ತೆರೆಯುವುದಕ್ಕೆ ತಡೆಯಾಗಿರುವ ಯಾವುದೇ ಪೀಠೋಪಕರಣ ಅಥವಾ ಶೂ ಗಳನ್ನು ಅಲ್ಲಿಂದ ತೆಗೆಯಿರಿ.
ತೆರೆಯುವಾಗ ಅಥವಾ ಮುಚ್ಚುವಾಗ ನಿಮ್ಮ ಮನೆಯ ಮುಖ್ಯ ಬಾಗಿಲು ಸದ್ದು ಮಾಡುತ್ತದೆಯೇ?

ಬಾಗಿಲು ಯಾವುದೇ ರೀತಿಯ ಕಿರಿಗುಟ್ಟುವ ಸದ್ದನ್ನು ಮಾಡಬಾರದು, ಏಕೆಂದರೆ ಇಂತಹ ಸದ್ದು ಮನೆಯಲ್ಲಿ ಋಣಾತ್ಮಶಕ್ತಿಯನ್ನು ಹರಡುತ್ತದೆ. ನೀವು ಅದಕ್ಕೆ ಒಂದು ಎಣ್ಣೆ ಸವರಬಹುದು ಅಥವಾ ಕೀಲುಗಳನ್ನು ಬದಲಿಸಬಹುದು.
ನಿಮ್ಮ ಮುಖ್ಯ ಬಾಗಿಲಿನ ಎದುರಿಗೆ ಏನಿದೆ?

ಅದರ ಮುಂದೆ ಯಾವುದೇ ಎಲೆಕ್ಟ್ರಿಕ್ ಕಂಬಗಳು ಇರಬಾರದು. ಏಕೆಂದರೆ ಇವು ಋಣಾತ್ಮಕ ಶಕ್ತಿಯನ್ನು ಉಂಟು ಮಾಡುತ್ತವೆ. ಈ ಕಂಬಗಳಿಂದ ಉಂಟಾಗುವ ವಿದ್ಯುದೀಯ ಅಡಚಣೆಗಳು ಮನೆಯೊಳಗಿನ ಹಾಗು ದೇಹದೊಳಗಿನ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ.

Thursday, 7 December 2017

ಅಗ್ನಿಮೂಲೆಯ ಮಹತ್ವವೇನು?

ಅಗ್ನಿಗೆ ಹವ್ಯವಾಹನ ಎಂಬ ಹೆಸರಿದೆ. ವೈಶ್ವಾನರ ಎಂಬ ಹೆಸರೂ ಇದೆ. ಅಗ್ನಿದೇವ ಎಂಬುದಂತೂ ಎಲ್ಲರೂ ತಿಳಿದ ಹೆಸರು. ಶಿವನ ಶಕ್ತಿಯೇ ದುರ್ಗೆಯಲ್ಲಿ ಅಡಕವಾಗಿದೆ. ದುರ್ಗಾರಹಿತನಾದ ಶಿವ ಜಡತ್ವ ಪಡೆದಿರುತ್ತಾನೆ. ಶಿವನೇ ಆದರೂ ಶಕ್ತಿಯ ಹೊರತಾಗಿ ಶಿವನು ಕೇವಲ ಶೂನ್ಯ. ದುರ್ಗೆ ಅಗ್ನಿಯೇ ಆಗಿದ್ದಾಳೆ. ಅಗ್ನಿಗೆ ಎಲ್ಲವನ್ನೂ ಸುಟ್ಟೊಗೆಯುವ ಶಕ್ತಿ ಇದೆ. ಚಿನ್ನದಂಥ ಅಪೂರ್ವ ವಸ್ತುವಿಗೆ ಪುಟ ನೀಡುವ ಶಕ್ತಿ ಇದೆ. ಇದೇ ಅಗ್ನಿಯನ್ನು ನಮ್ಮ ಪೂಜನೀಯ ಋಷಿಮಹರ್ಷಿಗಳು ಪೂರ್ವದಲ್ಲಿ ಪೂಜಿಸುತ್ತಿದ್ದರು. ಹವಿಸ್ಸನ್ನು ಅಗ್ನಿಗೆ ಒಪ್ಪಿಸಿದಾಗ ಅಗ್ನಿದೇವನು ಈ ಹವಿಸ್ಸನ್ನು ತಮ್ಮ ಪಿತೃ ಪಿತಾಮಹರಿಗೆ ದೇವತೆಗಳಿಗೆ ಅದನ್ನು ತಲುಪಿಸುವವನಾದ್ದರಿಂದ ಅಗ್ನಿದೇವ ಹವ್ಯವಾಹನನಾದ. ಅಂದರೆ ಲೌಕಿಕವನೂ,° ಅಲೌಕಿಕವನ್ನೂ ಬೆಸೆಯುವ ಶಕ್ತಿ ಅಗ್ನಿದೇವನಿಗೆ ಅಡಕವಾಗಿದೆ.
ಇದರಿಂದಾಗಿಯೇ ಯುಕ್ತಕಾಲದಲ್ಲಿ ನಮ್ಮ ಧಾರಿಣಿಯ ಫ‌ಲವಂತಿಕೆಗೆ ಕಾರಣವಾಗುವ ನಮ್ಮ ಆರು ಋತುಗಳು ಅಗ್ನಿಪೂಜೆಯ ಸಂಬಂಧವಾಗಿ ಒದಗಿದ ಫ‌ಲವಂತಿಕೆಯಿಂದ ಸಮೃದ್ಧತೆಯನ್ನು ಕಂಡು ಭೂಮಿಯ ಸಮತೋಲನಕ್ಕೆ ಕಾರಣವಾಗಿದ್ದವು. ಕ್ರಮೇಣ ಯಜ್ಞ ಯಾಗ ಹವನಾದಿಗಳು ತಟಸ್ಥವಾಗತೊಡಗಿದವು. ನಮ್ಮ ಅಂದರೆ ಮನುಷ್ಯರಷ್ಟೇ ಅಲ್ಲದೆ ಸರ್ವಸ್ವ ಚರಾಚರ ಜಂತುಗಳ ಒಳಗೂ ಅವಿತಿರುವ ಜಠರಾಗ್ನಿಗೆ ಆಹಾರವೇ ಉರುವಲು. ಹೀಗೆ ಅಗ್ನಿಯಿಂದಲೇ ಜೀವಂತಿಕೆ. ಜೀವನೋತ್ಸಾಹ. ಅಗ್ನಿ ಸತ್ವ ಕಳೆದುಕೊಂಡಾಗ ನಿಶ್ಚಲತೆ ಅಂದರೆ ಸಾವು ಅಷ್ಟೆ. ಯಾವಾಗಲೂ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳ ನಡುವಣ ದಿಕ್ಕು ಸಮಾವೇಶಗೊಳ್ಳುವ ಮೂಲೆಯೇ ಅಗ್ನಿಮೂಲೆ. ಅಂದರೆ ಆಗ್ನೇಯ ದಿಕ್ಕು. ಸರ್ವವಿಧದಲ್ಲೂ ಸ್ವತ್ಛತೆಯನ್ನು ಬೇಡುತ್ತದೆ. ಈ ದಿಕ್ಕಿನಲ್ಲಿ ಸಂಸ್ಕರಿಸಲ್ಪಟ್ಟ ಆಹಾರಗಳು ಉತ್ತಮವಾದ ಪೌಷ್ಟಿಕ ಧಾತುಗಳೊಂದಿಗೆ ಮನುಷ್ಯನ ಜೈವಿಕ ಶಕ್ತಿ ಮತ್ತು ಉತ್ಸಾಹಗಳಿಗೆ ವಾಹಕ ಸಂವಹನಗಳಿಗೆ ಮುಮ್ಮುಖವಾಗುವ ಸೂಕ್ತ ಶಕ್ತಿ ಪುಷ್ಟಿ ಹಾಗೂ ಲವಲವಿಕೆಗಳನ್ನೆಲ್ಲ ಒದಗಿಸುತ್ತದೆ. ಹೀಗಾಗಿ ಅನಿವಾರ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ ಅಗ್ನಿಮೂಲೆಯಲ್ಲೇ ನಮ್ಮ ದೈನಂದಿನ ಊಟದ ಸಂಸ್ಕರಣಕ್ಕೆ ಆವರಣಗಳು ಬೇಕು. ಈ ದಿಕ್ಕಿನಲ್ಲಿ ಅಡುಗೆ ಮನೆ ರೂಪುಗೊಳ್ಳಬೇಕು. ಇದರಿಂದ ಜೀವನದಲ್ಲಿನ ದಿವ್ಯವೂ, ಅಗ್ನಿದಿವ್ಯವೂ ಸತ್ವಪರೀಕ್ಷೆಗಳನ್ನು ಗೆಲ್ಲುವ ಹುರುಪೂ ಒಟ್ಟಿಗೆ ಬರುತ್ತದೆ.

ಈ ದಿಕ್ಕಿನಲ್ಲಿ ಟಾಯ್ಲೆಟ್‌ಗಳು, ಸ್ನಾನಗೃಹಗಳು ಮನೆಯ ತ್ಯಾಜ್ಯಗಳು ಸಾಗುವ ಕೊಳವೆಗಳು ದೇವರ ಪೀಠ ಮಂಟಪ, ಗೂಡುಗಳು ಬರಲೇ ಬಾರದು. ಇವುಗಳ ಸಂಯೋಜನೆಗಳು ಇರಬಾರದು. ಊಟ ಮಾಡುವ ಟೇಬಲ್‌ ಅಡಿಗೆ ಮನೆಯ ಸಮೀಪಕ್ಕೇ ಇರಬೇಕು. ಮಲಗುವ ಕೋಣೆಗಳು ಕೂಡಾ ಇಲ್ಲಿ ಸಮಾವೇಶವಾಗಕೂಡದು. ಕೈತೊಳೆಯುವ, ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೆ ಅಗ್ನಿಮೂಲೆಯಲ್ಲಿ ನೀರಿನ ಮೂಲ ಸಂಗ್ರಹ ಸಂಪು, ಬಾವಿ, ಬೋರ್‌ ವೆಲ್‌ ಇರಲೇಬಾರದು. ಕೈ ತೊಳೆಯುವುದು ಕೂಡಾ ಕೈಯ ಎಂಜಲನ್ನು ತೊಳೆಯುವುದಕ್ಕೆ ಉಪಯೋಗವಾಗುವ ರೀತಿ ಇರಬಾರದು. ಹೀಗೆ ಮಾಡುವುದರಿಂದ ದೇವತೆಗಳಲ್ಲೇ ಪರಮ ಪವಿತ್ರವಾದ ಅಗ್ನಿಗೆ ಸಂಪನ್ನತೆ ಒದಗಿ ಮನೆಯ ಆರೋಗ್ಯವೂ ಲವಲವಿಕೆಗಳು ಒಗ್ಗೂಡಿದ ಹರ್ಷದಲೆಗಳು ಮನೆಯ ಜನರ ಸಂತೋಷಕ್ಕೆ ಉತ್ತಮವಾದ ನಿರ್ಮಿಕೆ ಸಾಧ್ಯವಾಗುತ್ತದೆ.

ಅಗ್ನಿಮೂಲೆಯ ಮಟ್ಟ ತುಸು ಎತ್ತರದಲ್ಲಿದ್ದರೆ ಸೂಕ್ತ. ಗ್ಯಾಸ್‌ ಸಿಲಿಂಡರ್‌ಗಳು ಒಲೆಯ ಇರುವ ಮಟ್ಟಕ್ಕೆ ತಳದಲ್ಲಿದ್ದರೆ ಸೂಕ್ತ. . ಒಲೆಯಿರುವ ಪೂರ್ವ ಮೂಲೆಯ ಹೊರಗೆ ಗೋಡೆಯಾಚೆ ಇದ್ದರೆ ಚೆನ್ನವೂ ಯುಕ್ತವೂ ಆಗಿದೆ. ಅಡುಗೆ ಮನೆಯಲ್ಲಿ ಕನ್ನಡಿಯೊಂದು ಇರಲೇ ಕೂಡದು. ಹೊತ್ತಿಸಿದ ಒಲೆಯ ಬೆಂಕಿ ಕನ್ನಡಿಯಲ್ಲಿ ಪ್ರತಿಫ‌ಲಿಸಬಾರದು. ಪೂರ್ವ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುವ ಕ್ರಮ ರೂಡಿಗೊಂಡರೆ ಮನೆಯೊಡತಿಗೆ ಅಗ್ನಿಯ ಸಾûಾತ್ಕಾರದಿಂದ ಮನೆಯ ಧಾನ್ಯ, ಆಹಾರ, ಕ್ಷೀರೋತ್ಪನ್ನಗಳಿಗೆ ಸಮೃದ್ಧಿಯೊಂದು ವಿಪುಲವಾಗಿ ಕೂಡಿಕೊಂಡಿರಲು ಸಾಧ್ಯವಾಗುತ್ತದೆ. ಮನೆಯ ಸಮೃದ್ಧಿಗೆ ಪೂರ್ವ ದಿಕ್ಕಿನ ಕಡೆಗೆ ಅಗ್ನಿಮೂಲೆಯಲ್ಲಿ ಕಿಟಕಿ ಇಡುವುದು ಉತ್ತಮವಾಗಿದೆ. ಗಟ್ಟಿಯಾದ ಫ‌ಗೈಬರ್‌ ಗ್ಲಾಸುಗಳು ಕಿಟಕಿಗೆ ಬಳಸಿಕೊಂಡಿದ್ದರೆ ಒಳ್ಳೆಯದು. ಮರಮಟ್ಟುಗಳನ್ನು ಮಿತಿಯಲ್ಲಿ ಉಪಯೋಗಿಸುವುದು ಸ್ವಾಗತಾರ್ಹ. ಕಿಟಕಿಯ ಫ್ರೆàಮುಗಳು ಸ್ಟೀಲು, ಉಕ್ಕು ಅಲಂಕಾರಿಕ ಅಲ್ಯುಮಿನಿಯಂ ಧಾತುಗಳಿಂದ ಸಂಯೋಜನೆಯಾಗಿರುವುದನ್ನು ಅವಶ್ಯವಾಗಿ ಗಮನಿಸಬೇಕು. ಒಟ್ಟಿನಲ್ಲಿ ಆಗ್ನೇಯ ಮೂಲೆಯ ಅಗ್ನಿ ಶಕ್ತಿ ಸ್ವತ್ಛತೆಯಲ್ಲಿ ಹಿಗ್ಗಿಕೊಳ್ಳುವಂತಿರಲಿ.


Wednesday, 6 December 2017

ಸ್ನಾನ ಗೃಹದ ವಾಸ್ತು, ಅದರ ಮಹತ್ವ

ಮನೆಯ ಶೌಚ ಗೃಹವಾಗಲೀ, ಸ್ನಾನದ ಮನೆಯಾಗಲೀ ಶುಚಿ, ಶುದ್ಧತೆ ಹಾಗೂ ಸರಳ ಸ್ವರೂಪದಲ್ಲಿ ಸ್ಥಾಯಿ ಗೊಂಡಿದ್ದಲ್ಲಿ ಮನೆಯಲ್ಲಿನ ಶಾಂತಿ ಹಾಗೂ ಸಮೃದ್ಧಿಗಳಿಗೆ ತೂಕ ಒದಗಿಬರುತ್ತದೆ. ಮನೆಯ ಯಜಮಾನನಿಗೆ ತಾತ್ವಿಕ, ಅಲೌಕಿಕ, ದೈವೀಕ ಸಿದ್ಧಿ ಸಂಪ್ರಾಪ್ತಿಯಾಗುತ್ತದೆ.  ಈ ರೀತಿಯಾಗಿ ಸಂಪತ್ತು ಬರುವ ಸಂದರ್ಭದಲ್ಲಿ ದೈವಾನುಗ್ರಹವೂ ದೊರಕಿ ಸಂಪತ್ತು ಒಳಿತಿಗೆ, ಸನ್ಮಾರ್ಗಕ್ಕೆ ಕಾರಣವಾಗುತ್ತದೆ. ಮೊತ್ತ ಮೊದಲಾಗಿ ಸ್ನಾನ ಗೃಹ, ಶೌಚಾಲಯಗಳು ಮನೆಯ ನಡು ಭಾಗದಲ್ಲಿ ಇರಲೇ ಕೂಡದು. ತೊಟ್ಟಿ ಮನೆಗಳೆಂದು ಮನೆಯ ನಡು ಭಾಗದಲ್ಲಿ ಖಾಲಿ ಜಾಗವನ್ನು ಇಟ್ಟು ಮನೆಯನ್ನು ಕಟ್ಟುವುದು ಮನೆಯ ಅಗ್ನಿ ಧಾತುವಿಗೆ ಮತ್ತು ಮನೆಯ ವಾಯು ತತ್ವಕ್ಕೆ ಭಂಗ ಬರುತ್ತದೆ. ವಾಯುವ್ಯ ದಿಕ್ಕಿನ ಭಾಗಕ್ಕೆ ತಡೆಯಾಗದಂತಿರುವುದು ಶೌಚಾಲಯ ಹಾಗೂ ಸ್ನಾನ ಗೃಹಗಳಿಗೆ ಅಪ್ಯಾಯಮಾನವಾದ ಅಂಶ.
ಸ್ನಾನಾದಿ ಶೌಚ ಗೃಹಗಳ ಇಳಿಜಾರು ಮುಖ್ಯವಾಗಿ ಪೂರ್ವದ ಕಡೆಗೋ, ಉತ್ತರದ ಕಡೆಗೋ ಇರಬೇಕು.    ತ್ಯಾಜ್ಯ ಹೊರ ಹೋಗುವ ಸ್ಥಳಾವಕಾಶವಾಗುವಂತೆ ಕೊಳೆವೆಗಳೂ ಹೀಗೆ ಈ ದಿಕ್ಕಿನಲ್ಲೇ ಇರಬೇಕು. ಸಂಗಮರವರೀ ಕಲ್ಲುಗಳ, ನುಣುಪು ಹಾಸುಗಳ ಜೋಡಣೆ ಶೌಚಾಲಯದ ತಳ ನೆಲಕ್ಕೆ ಇರಬಾರದು.

ನೀರು ತುಂಬುವ ಡ್ರಂ, ಕೊಳಾಯಿಗಳು  ಪೂರ್ವ ಅಥವಾ ವಾಯುವ್ಯ ದಿಕ್ಕಿಗೇ ಇರಬೇಕು. ಶೌಚ ಮಂಡಲ  ಕೂಡ
ಇದೇ ದಿಕ್ಕಿಗೆ ಅಥವಾ ವಾಯುವ್ಯ ದಿಕ್ಕಿನಲ್ಲಿ ಅಡಕವಾಗಿರಲಿ. ಸರ್ವಥಾ ಅಗ್ನಿ ಮೂಲೆಯಲ್ಲಿ ಅಡಕವಾಗಿರಲಿ. ನೈಋತ್ಯಕ್ಕೂ ಕೂಡ ಇರದಿರಲಿ. ಇದನ್ನು ಮುಖ್ಯವಾಗಿ ಗಮನಿಸಬೇಕು. ಹಾಗೆಯೇ ಸ್ನಾನ ಗೃಹ ತಳದ ಸಪಾಟಿಗಿಂತ ಎರಡು ಫ‌ೂಟು ಏರು ಎತ್ತರ ಹೊಂದಿರಲಿ. ಸ್ನಾನ ಗೃಹದ ಬಾಗಿಲುಗಳು ಪೂರ್ವ ಅಥವಾ ಉತ್ತರ ದಿಕ್ಕಿಗೆ ಸಮ್ಮಳಿತವಾಗಿರಲಿ. ಶೌಚಾಲಯದ ಒಳ ವಿನ್ಯಾಸದ ಬಣ್ಣ ಹೆಚ್ಚಾಗಿ ಹಸಿರು, ನೀಲಿ ಅಥವಾ ನೇರಳೆ ಬಣ್ಣದಿಂದ ಕೂಡಿರಲಿ. ಊತ್ತರ ಪೂರ್ವ, ಪಶ್ಚಿಮ ದಿಕ್ಕಿಗೆ ಚಿಕ್ಕ ಒಂದು ಕಿಂಡಿಯ ರೂಪದ ಕಿಟಕಿ ಇರಲಿ.

 ಔಡಲ ಮರದ ಎಲೆಗಳನ್ನು ಸ್ನಾನ ಗೃಹದ ಒಂದೆಡೆ ಪೇರಿಸಿಡುವುದು (ನಾಲ್ಕಾರು ಎಲೆಗಳು ಮಾತ್ರ) ಉತ್ತಮ ವಿಚಾರ. ಇದರಿಂದ ಪಂಚಭೂತ ಧಾತುಗಳ ಸಮತೋಲನ ಸುಸಂಬದ್ಧತೆಗೆ ಅವಕಾಶ ಹೇರಳ. ಮಲ ವಿಸರ್ಜನೆಗೆ ಉತ್ತರ , ದಕ್ಷಿಣ ದಿಕ್ಕಿಗೆ ಮುಖ ಇರುವುದು ಸೂಕ್ತ. ಪೂರ್ವ ದಿಕ್ಕಿನೆಡೆ ಮುಖ ಮಾಡಿ ಸ್ನಾನ ಮಾಡುವುದು ಅಪೇಕ್ಷಣೀಯ.

 ಮನೆಯ ದೇವರ ಪೀಠದಷ್ಟೇ ಶೌಚ ಮತ್ತು ಸ್ನಾ ಗೃಹ ಮುಖ್ಯ. ಯಮಾದಿ ದಶ ಕೋಟಿ ಅಪರ ಶಕ್ತಿ ಸೂಕ್ತಗಳು ತಂತಮ್ಮ ಧನಾತ್ಮಕವಲ್ಲದ ವಿಪ್ಲವಗಳನ್ನು ಕಳಕೊಳ್ಳುವುದೇ ಸ್ನಾನ ಹಾಗೂ ಶೌಚ ಗೃಹಗಳ ಶುದ್ಧ ಸ್ವರೂಪದಲ್ಲಿ. ಹೀಗಾಗಿ ಸ್ನಾನ ಗೃಹವನ್ನು ಇಂದ್ರ ಶಕ್ತಿಯ ಪ್ರತ್ಛನ್ನತೆಗೆ ಮೂಲ ಶಕ್ತಿ ಸ್ವರೂಪವಾಗಿ ಬಳಸಿಕೊಳ್ಳಬೇಕು. ಶೌಚದ ನಂತರ ಸ್ನಾನ ಪೂರೈಸಿ ಸ್ವತ್ಛವಾದ ಉಡುಪಿನಲ್ಲಿ ಮುಂದಿನ ಕೆಲಸಗಳಿಗೆ ಮುಂದಾಗುವಾಗ ಈ ಕೆಳಗಿನ ಮಂತ್ರ ಭಾಗವನ್ನು ಅವಶ್ಯವಾಗಿ ಓದಿಕೊಳ್ಳಿ. ಸಾಲಿಗ್ರಾಮ ಶಿಲಾವಾರಿ ಪಾಪಹಾರಿ ವಿಶೇಷತಃ
ಆ ಜನ್ಮ ಕೃತ ಪಾಪಾನಾಂ ಪ್ರಾಯಶ್ಚಿತ್ತಂ ದಿನೇ ದಿನೇ

 ಸ್ವರೂಪ ಕುಸುಮ ಮಾಲಾದ ಈ ಮಂತ್ರ ವಿಶೇಷ ವಿಷಜನ್ಯಕ್ಕೆ ಕಾರಣವಾಗುವ ದೇಹದ ವಿಕಾರಗಳನ್ನು ನಾಶ ಪಡಿಸುತ್ತದೆ. ಅಂತರಂಗದ, ಬಹಿರಂಗ ಶುದ್ಧತೆಗಳು ಸದಾ ಒಬ್ಬನನ್ನ, ಒಬ್ಬಳನ್ನ ಸದಾ ಆರೋಗ್ಯ ಹಾಗೂ ಹರ್ಷ, ಉತ್ಸಾಹಗಳಲ್ಲಿ ಇರಿಸಲು ಸಹಾಯವಾಗುತ್ತದೆ.


Monday, 4 December 2017

ಮನೆಯಲ್ಲಿ ಓಂಕಾರ; ಎಲ್ಲದಕ್ಕೂ ಅದೇ ಶ್ರೀಕಾರ

ಭಾರತೀಯ ಸಂಸ್ಕೃತಿಯಲ್ಲಿ ಪಂಚಮ ಸ್ಥಾನಕ್ಕೆ ಬಹುತರವಾದ ತೂಕ ಹಾಗೂ ಎತ್ತರವಿದೆ. ಪಂಚ ಮಹಾಭೂತಗಳು ಪಂಚತತ್ವದಲ್ಲಿನ ದಾರಿ ಕಾರ್ಯಕ್ಕೆ ಸಿದ್ಧಿಯಾಗುತ್ತದೆಂಬ ನಂಬಿಕೆ. ಪಂಚಮುಖೀ ಶಿವ, ಪಂಚಮುಖೀ ಆಂಜನೇಯ ಸೌರಭಕ್ಕೆ ದಾರಿ ಮಾಡುವ ಪಂಚವಳಿ, ಪಂಚವಾಳದಲ್ಲಿರುವ ಅರಿಶಿಣ, ಕುಂಕುಮಾದಿ ಸುದ್ರವ್ಯ, ಕ್ಷೀರ, ಮಧು, ಘೃತ, ತವರಾಜಾದಿ ಪಂಚಾಮೃತಗಳು ಪಂಚಮಹಾ ಪುರುಷಗಳೆಂಬ ಸಿದ್ದಿಯ ದಾರಿಯ ಜಾತಕದಲ್ಲಿನ ಯೋಗಗಳು, ಪಂಚಮಹಾ ಕನ್ನಿಕೆಯರು, ಪಂಚಮ ಸ್ವರ, ಮಾಧುರ್ಯ, ಶಿವನ ಸಾûಾತ್ಕಾರಕ್ಕಾಗಿನ ಪಂಚಮನ ಬಗೆಗಿನ ನಮ್ಮ ಗೌರವಾದರಗಳು, ಇತ್ಯಾದಿ ಇತ್ಯಾದಿ ನಮ್ಮ ಆಂತರ್ಯ ಹಾಗೂ ಬಾಹ್ಯ ಸಂಬಂಧವಾದ ಶುಚಿತ್ವಕ್ಕೆ ದಾರಿ ದೀಪಗಳಾಗಿದೆ. ಬ್ರಹ್ಮನು ಸೃಷ್ಟಿ ಕರ್ತನಾದರೂ ವಿಷ್ಣುವು ಪಾಠ, ಪಾಲನೆಯ ಹೊಣೆ ಹೊತ್ತರೂ ಶಿವನು ತನ್ನೊಳಗಿನ ಅಪೂರ್ಣತೆಗಾಗಿ ದುಃಖೀತನಾದಾಗ ಸತಿಯಾದ ದಾûಾಯಿಣಿಯನ್ನು ತನ್ನ ಅಪೂರ್ಣತ್ವವನ್ನು ನಿವಾರಿಸಿಕೊಳ್ಳು ತನ್ನ ಮಡದಿಯಾಗು ಎಂದು ಅಂಗಲಾಚಿಕೊಳ್ಳುತ್ತಾನೆ.

 ಹೀಗಾಗಿ ಶಿವನ ಪೂರ್ಣತ್ವವೆಂದರೆ ನಾರೀತನ ಸಮ್ಮಿಳಿಸಿದ ಅರ್ಧನಾರೀಶ್ವರತ್ವ. ಸಕಲ ಸಂನ್ಮಂಗಳೆಯಾದ ಪ್ರಕೃತಿಯು ತನ್ನ ಪೂರ್ಣ ಸಂವರ್ಧನೆಗಾಗಿ ಪುರುಷನಾದ ಶಿವನನ್ನು ಸ್ತುತಿಸುತ್ತಾಳೆ. ಶಿವನೆಂಬ ಪುರುಷ ಚೇತನ ಪಡೆದು ನಿಗುರುವುದೇ ಪ್ರಕೃತಿ ತನ್ನ ಬಳಿ ಬಂದಾಗ. ಈ ಆಧಾರದ ಮೇಲೆ ಬ್ರಹ್ಮನ ಸೃಷ್ಟಿಗೆ ಅವಕಾಶ. ಬ್ರಹ್ಮ ಹಾಗೂ ಮಹೇಶ್ವರರ ಸಂಪರ್ಕದ ಕೊಂಡಿಯಾಗಿ ಮಹಾವಿಷ್ಣು ಇದ್ದಾನೆ. ಶಿವನ ಮೂರನೆಯ ಕಣ್ಣು ವಿಶ್ವದ ಚೈತನ್ಯದ, ನಾಶದ ಬೆಂಕಿಯ ಭಾಗವಾಗಿದೆ. ಈ ಬೆಂಕಿಯೂ ಸರ್ವಸ್ವವನ್ನೂ ರುದ್ರ ಭಯಂಕರವಾದ ರೀತಿಯಲ್ಲಿ ಶುದ್ಧಗೊಳಿಸಿದರೆ ಪಂಚಗವ್ಯ ಪಂಚಭೂತಾತ್ಮಕವಾದ ಶರೀರವನ್ನು ಶುದ್ಧಗೊಳಿಸುತ್ತದೆ.

 ಹಾಗೆಯೇ ಗ್ರಹವೆಂಬುದು ನಮ್ಮ ವಾಸದ ಶಿವನ ಆಲಯವಾಗಿದ್ದು, ಶಿವನನ್ನು ಸಂತುಷ್ಟಗೊಳಿಸುವ ದಾರಿಯಲ್ಲಿ ಹೆಜ್ಜೆ ಇರಿಸಿದಾಗಲೇ ಅದು ಸಾಧ್ಯ. ಹೊರನೋಟಕ್ಕೆ ವಿಕೃತವಾಗಿ ಕಾಣಿಸುವ ವಿರೂಪಾಕ್ಷ ಶಿವ ಒಳಗಿನಾಳದ ಒಳಗೆ ಪರಮಶುಚಿತ್ವದ ಕಣಜನಾಗಿದ್ದಾನೆ. ಅದು ಬೆಂಕಿಯ ಸುಡುಜಾÌಲೆಯಿಂದಾಗಿ ಮಾತ್ರವಲ್ಲ, ಪ್ರೇಮದ ಶಾಂತಭಾವ ಸಾಂಪ್ರತದಲ್ಲಿ ಹುಟ್ಟುವ ಜೀವಜೀವದ ನಡುವಣ ಅವಲಂಭನದ ಸತ್ಯದ ಕಾವು. ಜೀವ ಬೆಳೆಸುವ ಜೀವದ್ರವ್ಯದ ಕಾವೂ ಹೌದು. ಹೀಗಾಗಿ ಆಂತರಿಕವಾದ ಜೀವದ ಕಾವು ಚಲನಶೀಲತೆಯಿಂದ ತುಂಬಿದೆ. ಕಾವು ಆರಿದಾಗ ಮರಣ ಸಂಪ್ರಾಪ್ತ. ಜೀವ ಹೋದಾಗ ಜೀವಿಯ ದೇಹ ಹಾವಿನಂತೆ ತಣ್ಣನೆಯ ಬರಿಮೈ.

 ಈ ಎಲ್ಲಾ ಕಾರಣದಿಂದಾಗಿ ಮನೆಯಲ್ಲಿ ಓಂ ಎಂಬ ನೀನಾದ ಪಂಚ ಆವರ್ತನಗಳೊಂದಿಗೆ ಪಂಚೇಂದ್ರಿಯಗಳ ಅನುಭವಕ್ಕೆ ಸ್ಪಂದಿಸುವ ಸಚೇತಕತೆ ಒದಗಿಸಿದಾಗ ಬೇರೆ ರೀತಿಯ ಸಾಮರ್ಥ್ಯವನ್ನು ಮನೆಯೊಳಗಿನ ಸದಸ್ಯರಿಗೆ ಒದಗಿಸುತ್ತದೆ.  ಮನೆಯ ವಾಸ್ತುವಿಗೆ ಕೊರತೆಗಳಿರುವ ದೋಷಗಳು ಓಂಕಾರ ನಾದ ಮನೆಯಲ್ಲಿ ತುಂಬಿದ್ದರೆ ಕೆಡುಕನ್ನು ಹೊಡೆದು ಉತ್ತಮವಾದುದನ್ನು ಬಿತ್ತುವ ಕೆಲಸ ನಡೆಯುತ್ತದೆ. ಹೀಗಾಗಿ ಶಿವನ ಸ್ತೋತ್ರ ರುದ್ರ ಪಠಣ, ಚಮಕ ಪಠಣಗಳೆಲ್ಲ ಸದಾ ಮನೆಯಲ್ಲಿ ತುಂಬಿರಲಿ ಎಂದರೆ ಅದು ಸರ್ವರಿಗೂ ಸಾಧ್ಯವಾಗುವ ಸರಳ ವಿಷಯವಾಗದು. ಆದರೆ ಓಂ ಎನ್ನುವ ಓಂಕಾರ ಜಪದಿಂದ ಐದು ಘಟ್ಟಗಳಲ್ಲಿ
ಸಾಧ್ಯವಾಗಲಿ. ಒಂದು ಬೆಳಗ್ಗೆ ಸ್ನಾನಾ ನಂತರ ಮಧ್ಯಾಹ್ನದ ಊಟಕ್ಕೆ ಮುನ್ನ ಮೂರು ಗೋಧೂಳಿ ಸಮಯದಲ್ಲಿ ನಾಲ್ಕು ರಾತ್ರಿಯ ಊಟದ ಒಂದು ತಾಸಿಗೆ ಮುಂಚೆ, ಐದು ಇನ್ನೇನು ಮಲಗುವ ಮುನ್ನ ಹೀಗೆ ಪಂಚಾವರ್ಣ ಪೂರ್ಣ ಶಿವನ ಓಂಕಾರ ಜಪ ಸಿದ್ಧಿಸಿಕೊಳ್ಳಿ. ಇದರಿಂದ ಮನೆಯ ವಾಸ್ತು ದೋಷಗಳಿಗೆ ತಡೆ ದೊರಕುತ್ತದೆ. ಜೊತೆಗೆ ಶಿವಪುರಾಣ ವಿಷ್ಣು ಪುರಾಣ ಬ್ರಹ್ಮಾನಂದ ಸೂತ್ರಪೂರಕ ಶಾರದಾ ಸ್ತೋತ್ರಗಳ ಪಠಣದಿಂದ ಜೀವಿಯ ದೇಹದ ಕಾಂತಿಗೆ ಆಯುಷ್ಯ ವೃದ್ಧಿಗೆ ದಾರಿ ಸಿಗುತ್ತದೆ. ಎಲ್ಲವೂ ಪಠಿಸಲು ಅಸಾಧ್ಯವಾಗುವ ಒತ್ತಡ ಇಂದಿನ ಆಧುನಿಕ ಜೀವನದಲ್ಲಿದೆ.  ಹೀಗಾಗಿ ಓಂಕಾರದ ನಾದ ತಾದಾತ್ಮವೇ ಸಕಲ ಸನ್ಮಂಗಳಕ್ಕೂ ದಾರಿಯಾಗುವ ಸಂಜೀವಿನಿಯಾಗಿದೆ.

 ದೇವತೆಗಳ ಸಕಲ ವಿಶ್ವ ಜೀವಿಗಳ ಯಶೋಗಾಥೆಗೆ ವಾಸ್ತು ಶ್ರೀಮಂತಿಕೆಗೆ ಜನಕನಾದ ದೇವಶಿಲ್ಪಿ ಮಯನು ಮಹಾವಿಷ್ಣುವನ್ನೇ ವಾಸ್ತುಪುರುಷನನ್ನಾಗಿ ಗುರುತಿಸುತ್ತಾನೆ. ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದಲ್ಲಿ ಬ್ರಹ್ಮನು ಪೂರ್ಣತ್ವಕ್ಕೆ ಸಂಕೇತನಾಗಿದ್ದಾನೆ. ವಿಷ್ಣು ಹಾಗೂ ಬ್ರಹ್ಮಂದಿರು ಓಂಕಾರ ಹಾಗೂ ಪೂರ್ಣವಾದ ಶಿವನಿಂದ ಬಲಾಡ್ಯರು ಎಂದು ಮಯನು ಹೇಳಿದ್ದಾನೆ. 

Friday, 1 December 2017

ನಿಮ್ಮ ಮನೆ ತಿಪ್ಪೆಗುಂಡಿ ಆಗೋದು ಬೇಡವೇ ಬೇಡ

ಇದನ್ನು ಯಾರನ್ನೂ ಬೇಸರಿಸಲಿಕ್ಕೆಂದು ಬರೆದದ್ದಲ್ಲ. ಆದರೆ ಕೆಲವರ ಮನೆಯನ್ನು ಗಮನಿಸಿದ್ದೀರಾ? ಇಡೀ ಮನೆ ಪೂರ್ತಿಯಾಗಿ ಬೊಬ್ಬಿರಿದ ತಿಪ್ಪೆಗುಂಡಿಯಂತಾಗಿರುತ್ತದೆ. ಒಂದು ರೂಮಿನಲ್ಲಿ ಹಳೆಯ ಪೇಪರು, ಅರ್ಧರ್ಧ ತುಂಬಿದ ಪ್ಲಾಸ್ಟಿಕ್‌ ಚೀಲಗಳು ಎಲ್ಲಿಂದಲೋ ಬಂದ ಪತ್ರಗಳು ಉಪಯೋಗಿಸಲು ಮನ ಬಾರದೆ ಉಪಯೋಗಿಸಬೇಕು ಎಂಬ ಮನಸನ್ನು ಬಿಟ್ಟೂ ಬಿಡದೆ ಎಷ್ಟೆಷ್ಟೋ ವಸ್ತುಗಳು ಎಷ್ಟೋ ವರ್ಷಗಳಿಂದ ಒಂದೆಡೆ ಕಿಕ್ಕಿರಿದು ತುಂಬಿಕೊಂಡಿರುತ್ತದೆ. ಮೋಕ್ಷ ಕಾಣದ ಆತ್ಮಗಳಂತೆ ಇವು ಎನ್ನಬಹುದು.

ಪಂಕ್ಚರ್‌ ಆದ ಟಯರು ಹಳೆ ಸೈಕಲ್ಲು, ಹಳೇ ಚಪ್ಪಲಿಗಳು ಖಾಲಿಯಾದ ಹಾಲಿನ ಪ್ಯಾಕೆಟ್‌ ಗಳು  ಹಳೆ ಬೆಂಕಿ ಪೊಟ್ಟಣಗಳು ಅಂಗಡಿಯಲ್ಲಿದ್ದಾಗ ಚೆನ್ನಾಗಿ ಕಂಡಿದ್ದಕ್ಕೆ ಖರೀದಿಸಿ ತಂದಿಟ್ಟುಕೊಂಡ ಪ್ಲಾಸ್ಟಿಕ್‌ ಹೂಗಿಡಗಳು, ಹೂಬಳ್ಳಿಗಳು ಹಸಿರು ತರುಲತೆಗಳು ಜೀವವಿಲ್ಲದ ಧೂಳಲೇಪನದಲ್ಲಿ ಎಷ್ಟೋ ವರ್ಷಗಳಿಂದ ಹೊರಳಾಡಿಕೊಂಡಿರುತ್ತದೆ. ಯಾರೋ ಕೊಟ್ಟ ಗಿಪ್ಟ್ಗಳನ್ನು ಬಿಡಿ ಗಿಫ್ಟಗಳನ್ನು ಕೊಟ್ಟ ಪ್ಯಾಕಿಂಗ್‌ ಕಾಗದಗಳು ಕೂಡಾ ಹಾಗೇ ಬಿದ್ದಿರುತ್ತದೆ. ಬೇಗಡೆಗಳು, ಸುತ್ತಿದ್ದ ಕಲರ್‌ ಸ್ಪ್ರಿಂಗ್‌ಗಳು ಹಳತಾದ ಪೋಟೋ ಆಲ್ಬಮ್‌ಗಳ ಉಳಿದ ಹಳೇ ಫೋಟೋಗಳು ಕೆಸೆಟ್‌ಗಳು ಕೆಸೆಟ್‌ ಪ್ಲೇಯರ್‌ಗಳು ಚತ್ರಿಗಳು ಹಳೇ ವಾಚುಗಳು ಎಷ್ಟು ಹಳತೆಂದರೆ ಇನ್ನು ರಿಪೇರಿಯಾಗಲು ಸಾಧ್ಯವಿಲ್ಲದಷ್ಟು ಹಳತಾಗಿ ಕರಕಲಾದವುಗಳು ಇತ್ಯಾದಿ. ಸಾವಿರ ವಸ್ತುಗಳು ಮನೆಯಲ್ಲಿ ಬಿದ್ದಿರುತ್ತವೆ. ಭಾವನಾತ್ಮಕ ಅಂಶಗಳೊಡನೆ ಅವು ನೆಲೆ ಪಡೆದಿರುತ್ತದೆ. ಅನೇಕ ಸಲ ಇವೆಲ್ಲಾ ಉಪಯೋಗಕ್ಕೆ ಬರಲಿವೆ ಎಂದು ಯೋಚಿಸಿಕೊಂಡೇ ದಶಕವೇ ಕಳೆದಿರುತ್ತದೆ. ಹಳೆ ಬಟ್ಟೆಗಳ ವಿಷಯದಲ್ಲೂ ಇದೇ ಅನುಭವ. ಹಳೆ ಪುಸ್ತಕಗಳಿಗೂ ಇದೇ. ಬಿಸಾಡಲಾಗದು ಇಟ್ಟುಕೊಳ್ಳಲಾಗದು ಇಬ್ಬಗೆಯ ದ್ವಂದ್ವ. ಎರಡು ಅಲಗಿನ ಚೂರಿಯಂತೆ ಚೂಪಾದ ವರ್ತಮಾನದ ನೆತ್ತಿಗೆ ತೂಗುವ ಈ ತಿಪ್ಪೆ ಎಂಬ ಮಾಯೆ ಬಹುತೇಕ ಜನರಿಗೆ ಒಂದು ಪ್ರಾರಬ್ಧದ ಬೇತಾಳ. ಬೆನ್ನು ಹತ್ತಿಕೊಂಡೇ ಇರುತ್ತದೆ.

ವಿನೋದವೆಂದರೆ ನಿರಂತರವಾಗಿ ಮೂರು ವರ್ಷಗಳ ಕಾಳ ಒಂದು ದಿನವೂ ಉಪಯೋಗಕ್ಕೆ ಬಂದಿರದ ವಸ್ತುನಿಂದ ಉಪಯೋಗವೂ ಇಲ್ಲವೆಂಬುದನ್ನು ಗಮನಿಸಬೇಕು. ಮನೆಯ ವರ್ತಮಾನದಲ್ಲೂ ಅನಾವಶ್ಯಕವಾದ ವಸ್ತುಗಳಿಗೆ ಒದಗಿಸಲೇ ಬೇಕಾದ ಆದ್ರìತೆಯ ಪರಿಮಾಣ ಜಾಸ್ತಿಯಾಗುತ್ತ ಹೋದರೆ ಅವಶ್ಯಕ ವಸ್ತುಗಳಿಗೆ ಇದು ಬೇಕಾದಷ್ಟು ಪ್ರಮಾಣದಲ್ಲಿ ಹಿತಕರವಾಗಿ ಆರೋಗ್ಯಕರವಾಗಿ ಸಿಗುವುದಿಲ್ಲ.

ಕ್ಷೀಣ ಚಂದ್ರನ ಉಪಟಳದಿಂದಾಗಿ ಈ ತಿಪ್ಪೆಗುಂಡಿಯನ್ನು ಮನೆಯಲ್ಲಿ ಯಾರಾದರೊಬ್ಬರು ನಿರ್ಮಿಸುತ್ತಿರುತ್ತಾರೆ. ಕ್ಷೀಣ ಚಂದ್ರನು ಇವರ ಜಾತಕದಲ್ಲಿ ಸುಖಸ್ಥಾನವನ್ನೂ, ಭಾಗ್ಯ, ಲಾಭ, ಕುಟುಂಬ ಸ್ಥಾನಗಳನ್ನು ನಿಯಂತ್ರಿಸಿ ಇಡೀ ಬದುಕನ್ನು ಧನಾತ್ಮಕವಲ್ಲದ ಸ್ಪಂದನಗಳಿಂದಲೇ ಗೋಳುಗಳಿಂದಲೇ ತುಂಬಿಸಿಬಿಡುತ್ತಾನೆ. ಇದೇ ಚಂದ್ರನಿಂದ ಶನಿಕಾಟ ಸಂದರ್ಭದಲ್ಲಿ ಶನೈಶ್ಚರನಿಂದ ಅನೇಕ ತೊಂದರೆಗಳು ಎದುರಾಗುತ್ತದೆ. ಹಳೆಯ ವಸ್ತುಗಳನ್ನು ಶಿಸ್ತಿನಿಂದ ಒಂದೆಡೆ ಜೋಡಿಸಿ ಯಾವುದೋ ಶತಮಾನದ ತುಣುಕೊಂದನ್ನು ಪ್ರಗಲ#ತೆಯಿಂದ ಬಿಂಬಿಸುವುದು ಬೇರೆ. ಆದರೆ ಇಂದು ಎಂಬುದು ಎಂದೋ ದೂರದೊಂದು ಕಾಲದಲ್ಲಿ ಭೂತಕಾಲವಾಗಿದ್ದ ಭಾಗದ ವಿಚಾರವೊಂದನ್ನು ವಸ್ತುವೊಂದನ್ನು ಹದಗಟ್ಟಿಸುವುದು ಬೇರೆ. ಆದರೆ ಅದೇ ಇಂದು ಹೊಸ ಹೊಸ ಡಿವಿಡಿ, ಸಿಡಿಗಳ ಕಾಲದಲ್ಲಿ ಬೂದು ಹಿಡಿದ ಕಗ್ಗಂಟಾದ ಕೆಸೆಟ್‌ಗಳನ್ನು ಒಂದು ಹಳೆ ಪೆಟ್ಟಿಗೆಯಲ್ಲಿ ಧೂಳಿನ ಕಲ್ಪದಲ್ಲಿ ಕಟ್ಟಿಟ್ಟುಕೊಂಡ ದಿನಾ ತುಂಬಿದ ಬಸುರಿಯಂತೆ ಉಸಿರು ಬಿಡುತ್ತಿದ್ದರೆ, ಅದು ನರಕ ಸದೃಶವಾದ ವಿಚಾರ.  ಅರಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತವಿರಲ್ಲ. ಮನಸ್ಸಿಗೆ ಸುಖವಿಲ್ಲ. ಹಳತರಿಂದ ಹೊರಬರಲಾಗದೆ ಹೊಸತನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತ ವರ್ತಮಾನವನ್ನು ಬೇಟೆಯಾಡುತ್ತಿರುತ್ತದೆ.


ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...