Wednesday, 3 January 2018

ಮರ ಗಿಡಗಳು ಮತ್ತು ವಾಸ್ತು

ಮನೆಯ ಭದ್ರತೆಯ ದೃಷ್ಟಿಯಿಂದ ಅಪಾರವಾದ ಜನರು ವಿಧವಿಧವಾದ ಯೋಚನೆಗಳಲ್ಲಿ ಇರುತ್ತಾರೆ. ವಾಸ್ತುಶಾಸ್ತ್ರ ಮುಖ್ಯವಾಗಿ ಭಾರತೀಯ ವಿಧಾನದಲ್ಲಿ ಪಂಚ ಭೂತಗಳಾದ ಮಣ್ಣು, ಗಾಳಿ, ನೀರು, ಬೆಂಕಿ ಹಾಗೂ ಆಕಾಶ ತತ್ವಗಳನ್ನು ಒಂದು ಶಿಸ್ತಿಗೆ ಒಳಪಡಿಸುತ್ತದೆಯೇ ವಿನಾ ಜನರ ಮನಸ್ಸಿನಲ್ಲಿ ಭಯವನ್ನು ಎಬ್ಬಿಸಲು ಮುಂದಾಗದು. ನಮಗೆ ಈ ಪಂಚಭೂತಗಳ ವಿನಾ ಇಹಲೋಕದ ಕಾರ್ಯ ವಿಧಾನ ಸಂದರ್ಭಗಳಲ್ಲಿ ಪರಿಪೂರ್ಣ ಮನಸ್ಸು, ಉತ್ಸಾಹ, ಲವಲವಿಕೆಗಳು ದೊರೆಯಲಾರವು. ಅಂತೆಯೇ ಜಗತ್ತು ಮತ್ತು ವಿಶ್ವ ಅಪಾರವಾದ ಶಕ್ತಿ ಮೂಲದೊಂದಿಗೆ, ವಿಶಿಷ್ಟವಾದ ಕಾಂತೀಯ ಶಕ್ತಿಯೊಂದಿಗೆ ತನ್ನದೇ ಆದ ಸ್ಥಿರತೆಯನ್ನು, ಸ್ಥಿರತೆಯಿಂದಾಗಿ ಭದ್ರತೆಯನ್ನು ಪಡೆದುಕೊಳ್ಳುತ್ತದೆ.

ಭೂಮಿಯೇ ಒಂದು ಬೃಹತ್‌ ಆದ ಆಯಸ್ಕಾಂತ. ಕಾಂತಿ ವಲಯಗಳಿಂದ ಭೂಮಿ ಸಮೃದ್ದ. ಇದು ಗಮನಾರ್ಹವಾದ ಸಂಗತಿ. ಹೀಗಾಗಿಯೇ ದಿಕ್ಕುಗಳ ವಿಷಯಗಳು ಭಾರತೀಯ ವಾಸ್ತುಶಾಸ್ತ್ರದ ವಿಚಾರದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಉತ್ತರ ಭಾಗಕ್ಕೆ ತಲೆ ಹಾಕಿ ಮಲಗಬಾರದು. ಆಗ್ನೇಯದಲ್ಲಿ ತ್ಯಾಜ್ಯಗಳ ವಿಲೇವಾರಿ ಆಗಬಾರದು. ನೀರಿಗಿಂತ ಎತ್ತರದ ಭಾಗಕ್ಕೆ ಬೆಂಕಿಯ ಒಲೆಗಳು ಬರಬಾರದು. ನೀರಿನ ವಿಚಾರ ತಗ್ಗಿನಲ್ಲೇ ಇರುವಂತಾದರೆ ಅದು ಹರಿಯಲು ಸುಲಭವಾಗದೇ, ನಿಂತ ನೀರಾಗುವ ಅಪಾಯ ಇರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ನಮ್ಮ ವಾಸ್ತು ಪರಂಪರೆಗೆ ಸೂಕ್ಷ್ಮವಾಗಿ ಹೇಳಿದೆ. ಇಲ್ಲಿ ಜನ ಈ ಪರಂಪರೆಯ ಆಶಯಗಳ ಕುರಿತು ಗಮನ ಹರಿಸಬೇಕೇ ವಿನಾ, ವಾಸ್ತು ಒಂದೊಮ್ಮೆ ತುಸು ದೋಷ ಪಡೆದಿದೆ ಎಂದ ಮಾತ್ರಕ್ಕೆ ಎಲ್ಲವೂ ಆಯೋಮಯವಾಗುವ ಪರಿಸ್ಥಿತಿ ಬರಲಾರದು. ಯಾವುದೇ ನಿಯಮಗಳನ್ನು ಅವುಗಳ ಆಶಯದ ಬೆನ್ನು ಹತ್ತಿ, ಅದರಿಂದಾಗಿ ಹೊಮ್ಮುವ ಸಕಾರಾತ್ಮಕ ಅಂಶಗಳನ್ನು ಹಿಡಿಯಲು ಹೋಗಬೇಕೇ ವಿನಾ, ಆಯೋಮಯಗೊಳ್ಳಕೂಡದು.

ಮನೆಯ ಪರಿಸರದಲ್ಲಿ ತುಳಸಿ, ಗುಲಾಬಿ, ಸಂಪಿಗೆ, ಕರವೀರ, ಬಿಲ್ವಪತ್ರೆ, ಮಜ್ಜಿಗೆ ಹುಲ್ಲು, ಸರ್ಪಗಂಧಿ, ಬಾಳೆ, ತೆಂಗು, ಪೇರಲ, ಬಿಂಬಲದಂಥ ಸಸ್ಯಗಳು ಬೆಳೆದರೆ, ಸೇವಂತಿಗೆ, ಮಲ್ಲಿಗೆ, ಜಾಜಿ, ನಿತ್ಯ ಪುಷ್ಪಗಳಂಥವನ್ನು ಬೆಳೆಯುವುದು ಉತ್ತಮವೇ. ನಿಷಿದ್ಧವೇನಲ್ಲ. ಮನೆಯಲ್ಲಿನ ದೇವರ ಪೂಜೆಗೆ ಈ ಗಿಡಗಳು ಅವಶ್ಯವಾಗಿಬೇಕು. ಈ ಹೂಗಳು ಗಿಡ, ತುಳಸಿ ಗಿಡ ಮುಂತಾದವು ಒಂದು ಸೊಗಸನ್ನೂ ಮನೆಯ ಪರಿಸರಕ್ಕೆ ನೀಡುತ್ತವೆ. ವಿನಾಕಾರಣ ಹೂ ಗಿಡಗಳ, ಹಣ್ಣು ಕಾಯಿಗಳ ಗಿಡ, ಮರಗಳ ವಿಚಾರದಲ್ಲಿ ಭಯದ ಅವಶ್ಯಕತೆಯೇ ಇಲ್ಲ.

ಆದರೆ ಯಾವುದೇ ರೀತಿಯ ಬೃಹದ್‌ ಮರಗಳು ಮನೆ ಎದುರು, ಸುತ್ತು ಮುತ್ತ ಬೆಳೆಯುವಂತಾಗಬಾರದು. ಭಾರೀ ಗಾತ್ರದ ಮರಗಳ ಬೇರುಗಳು ಮನೆಯ ತಳಹದಿಯನ್ನು ಹಾಳುಗೆಡವುತ್ತವೆ. ಮನೆಯ ಬುನಾದಿಯನ್ನು ಶಿಥಿಲಗೊಳಿಸುತ್ತವೆ. ಈ ಕಾರಣವಾಗಿ ಇಂಥ ಮರಗಳು ಭದ್ರತೆಯ ದೃಷ್ಟಿಯಿಂದ ನಿಷಿದ್ಧ. ಇನ್ನೂ ಒಂದು ಸೂಕ್ಷ್ಮವಿದೆ. ಬೃಹತ್‌ ಮರಗಳು ಮಳೆಗಾಲದ ಬಿರುಗಾಳಿಗೆ ಉರುಳಿ ಮನೆಯ ಮೇಲೇ ಬಿದ್ದರೆ ಎಂಥ ಅಪಾಯವೆಂಬುದನ್ನು ಯಾರಾದರೂ ಊಹಿಸಬಹುದು. ಬೃಹತ್‌ ಮರಗಳಲ್ಲಿ ಸೂಕ್ತವಲ್ಲದ ಪ್ರಾಣಿಗಳು, ಹಾವು, ಸರೀಸೃಪಗಳು, ಪಕ್ಷಿಗಳು ವಾಸಿಸುತ್ತ ಅವು ಜಂತು ಜನ್ಯವಾದ ಸಮಸ್ಯೆಗಳನ್ನು ಮನೆಯಲ್ಲಿ ನಿರ್ಮಿಸಬಹುದಾಗಿದೆ.

ಅನಾವಶ್ಯಕವಾದ ಮರಗಳ ಬೃಹತ್‌ ಉಪಸ್ಥಿತಿ ಮನುಷ್ಯನ ಮನೋಮಂಡಲದ ಮೇಲೆ ರಾತ್ರಿಯ ಹೊತ್ತು ನಕಾರಾತ್ಮಕ ಸಂವೇದನೆಗಳನ್ನು ತರುತ್ತವೆ ಎಂಬುದು ವಾಸ್ತುವಿನ ಕುರಿತಾದ ಹಿನ್ನೆಲೆಯಲ್ಲಿ ನಾನು ಅರಿಯಬೇಕು. ನಾಡಿನ ಬೆಳವಣಿಗೆಗೆ ಕಾಡು ಬೇಕೇಬೇಕು. ಆದರೆ ಮನೆಯ ಸುತ್ತವೇ ಕಾಡು ಸರ್ವಥಾ ನಿಷಿದ್ಧ. ಆಧುನಿಕ ವಿಜ್ಞಾನ ಏನನ್ನೂ ಹೇಳಲಿ, ಕೆಲವು ಕ್ಷುದ್ರ ಶಕ್ತಿಗಳು ವಿಸ್ತಾರವಾದ ಪ್ರಪಂಚದುದ್ದಕ್ಕೂ ತನ್ನ ಆಧಿಪತ್ಯವನ್ನು ನಿರ್ವಹಿಸುತ್ತಲೇ ಬಂದಿವೆ. ಷೇಕ್‌ಸ್ಪಿಯರ್‌ನ ನಾಟಕಗಳಲ್ಲಿ, ಜಪಾನೀ, ಚೀನಿ, ಬ್ಯಾಬಿಲೋನಿಯಾ, ಬ್ರಝಿಲ್‌, ಇಸ್ರೇಲಿ, ಈಜಿಪ್ಟ್, ರೋಮನ್‌, ಕಥಾ ಹಂದರಗಳಲ್ಲಿ ಕ್ಷುದ್ರ, ಅಪಸವ್ಯ ಜೀವ ಜಾಲ, ಕೆಲವು ಯಕ್ಷಿಣಿ ಶಕ್ತಿಗಳ ಬಗ್ಗೆ, ಅನಪೇಕ್ಷಿತ ಸಂವಹನ, ವಾಮ ಆಚಾರಗಳ ಬಗ್ಗೆ ಉಲ್ಲೇಖಗಳು ದಟ್ಟವಾಗಿವೆ. ಈ ಕಾರಣಗಳು ಹಾಗೂ ಬೃಹತ್‌ ಮರಗಳು ಒಂದು ಅವಿನಾ ಸಂಬಂಧ ಹೊಂದಿರುವ ವಿಚಾರ ವಿಶ್ವದ ಅನೇಕ ಪ್ರಾಚೀನ ಸಂಸಕೃತಿಗಳ ಉಲ್ಲೇಖ, ಪಠ್ಯಗಳಲ್ಲಿ ಇವು ನಿಕ್ಷೇಪಗೊಂಡಿವೆ. ಇವೆಲ್ಲ ಏನೇ ಇರಲಿ ಬೃಹತ್‌ ಮರಗಳು ಅವುಗಳ ವಿಶಾಲ ಬೆಳವಣಿಗೆಯಿಂದಾಗಿ ಮನೆಯ ಆವರಣಗಳನ್ನು ತಮ್ಮ ಬೇರು, ಕಾಂಡ, ಟೊಂಗೆ, ರೆಂಬೆಗಳಿಂದ ಅಪಾಯಕ್ಕೆ ಒಡ್ಡುವುದಂತೂ ಸತ್ಯ. ನಾವು ಅಲ್ಲಗಳೆಯಲಾಗದು.


10 comments:


  1. driver-talent-pro-crack
     can be an all in 1 application package for scanning each of the techniques for virtually any motorist difficulty over a few minutes. This program enables people to install and then put in upgraded drivers on the device or new.

    new crack

    ReplyDelete
  2. It’s still lovely to talk to a person with a new and different perspective. I genuinely appreciate our recent chat.
    kaspersky tdsskiller crack
    avid pro tools crack
    movavi screen recorder crack

    ReplyDelete
  3. Great, submit, very informative.
    I ponder why the opposite experts of this sector don’t realize this.
    You must proceed your writing.
    I’m confident, you have
    a great readers’ base already!
    tally erp crack
    vlc media player crack

    ReplyDelete
  4. This is a good time to think about the future and be happy because now is the best time.
    I just read it and wanted to give you some advice on things that might interest you.
    You can write more articles based on this.
    It fascinates me and I want to know more!
    wolfram alpha crack
    avast ultimate license key
    easeus data recovery wizard crack
    apowersoft video converter studio crack

    ReplyDelete
  5. Your presentation is very easy to follow, yet I don't like it.
    I'm sure I'll never be able to solve this issue.
    It appears to me to be extremely complicated and wide-ranging.
    I can't wait to read your next post. I make an effort at this.
    agree!
    ummy video downloader crack
    easy file renamer crack
    windows 7 home basic crack
    recover my files crack

    ReplyDelete
  6. Here at Karanpccrack, you will get all your favourite software. Our site has a collection of useful software. That will help for your, Visite here and get all your favourite and useful software free.
    karanpccrack
    cleanmymac X Crack

    ReplyDelete
  7. II am very impressed with your post because this post is very beneficial for me and provides new knowledge to me.
    Avira Phantom VPN

    Atomix VirtualDJ Pro Infinity

    ReplyDelete

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...