Wednesday, 14 February 2018

ಮನೆಯ ಬಚ್ಚಲು ಮನೆ ಮನ ಮೆಚ್ಚುವಂತಿರಲಿ

ವಾಸ್ತುವಿನ ವಿಚಾರದಲ್ಲಿ ಯುಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ಹಾಗೆ ಇಂದಿನ ಮನೆಗಳನ್ನು ಕಟ್ಟುವ ಪರಿಸ್ಥಿತಿ ಒದಗಿದೆ. ಮನೆಯೊಳಗೇ ಸಂಡಾಸು, ಪ್ರತಿ ಕೋಣೆಯಲ್ಲೂ ಬಚ್ಚಲುಕೋಣೆ. ಹಾಗೂ ಅದರೊಳಗೇ ಸಂಡಾಸು ಈಗ ಇದೇ. ಇದು ಒಂದು ಫ್ಯಾಷನ್‌ ಆಗಿದೆ. ಊರಿನ ವ್ಯಾಖ್ಯೆ ಬದಲಾಗುತ್ತಿದೆ. ಎಲ್ಲೆಲ್ಲೂ ಸ್ಥಳ ಖರೀದಿಸಿ ಸೌಧಗಳನ್ನು ಕಟ್ಟಿಸುತ್ತಿದ್ದಾರೆ.
ಕೆರೆಯನ್ನು ಒಣಗಿಸಿ ತಗ್ಗು ಮುಚ್ಚಿದೆವು ಎಂದು ಮಣ್ಣು ಮುಚ್ಚಿಸಿ ಎತ್ತರೆತ್ತರ ಸಮುಚ್ಛಯಗಳು ತಲೆ ಎತ್ತುತ್ತಿದೆ. ಇತೀಚೆಗೆ ಬಹು ಪ್ರಸಿದ್ಧವಾದ ಕ್ಷೇತ್ರವೊಂದಕ್ಕೆ ಹೋದಾಗ ಆಶ್ಚರ್ಯವಾಯಿತು. ತಲೆಬುಡ ವಿಚಾರವಿಲ್ಲದೆ ಕಟ್ಟಲ್ಪಟ್ಟ ಮನೆಗಳಿಂದಾಗಿ ಊರ ಚರಂಡಿಗಳು ಮಾಯವಾಗಿ ಚರಂಡಿಯ ನೀರು ನುಗ್ಗಬಾರದ ಕಡೆಗಳಿಗೆಲ್ಲಾ ನುಗ್ಗುತ್ತಿದೆ. ಕುಡಿಯುವ ನೀರು ದುರ್ಗಂಧಮಯವಾಗಿದೆ.

ಹಣವನ್ನು ಗಳಿಸುವುದು ಕೆಲವರಿಗೆ ಬಹು ಸುಲಭದ ಮಾತಾಗಿ ನಿವೇಶನಗಳನ್ನು
ಬಂಗಾರದೊಡವೆಗಳನ್ನು ಖರೀದಿಸುವ ಸಮತೋಲನದ ಶ್ರೀಮಂತಿಕೆ ಜಾಸ್ತಿಯಾಗಿದೆ.

ಬಚ್ಚಲು ಮನೆ ಹಾಗು ಸಂಡಾಸು ಮನೆಯ ಹೊರಗಡೆಗೆ ಇರಬೇಕು. ಆದರೆ ಈಗ ಸುರಕ್ಷತೆಯ ದೃಷ್ಟಿಯಿಂದ ಪ್ರದರ್ಶನದ ಅತಿರೇಕತೆಗಳು ಒಗ್ಗೂಡಿರುವುದರಿಂದ ಮನೆಯೊಳಗೇ ಸಂಡಾಸು ಬಚ್ಚಲುಗಳನ್ನು ಕಟ್ಟಿಕೊಂಡಿರುತ್ತಾವೆ. ಹಾಗೆ ನೋಡಿದರೆ ವಾಸ್ತುಶಾಸ್ತ್ರದ ನಿಯಮಗಳಿಗೆ ಇದು ತೀರಾ ವಿರೋಧದ ವಿಚಾರ.

ಇನ್ನು ಹೊಸ ಕಾಲದ ಒತ್ತಡದಿಂದ ಏನೂ ಮಾಡಲಾಗದು ಎಂದು ಆಗಾಗ ಬಚ್ಚಲು
ಮನೆಯನ್ನು ಮುಖ್ಯವಾಗಿ ಪೂರ್ವ ಅಥವಾ ಉತ್ತರ ಭಾಗದಲ್ಲಿ ರೂಪಿಸಿಕೊಳ್ಳುವುದು ಒಳ್ಳೆಯದು. ಏನು ಅಟ್ಯಾಚ್ಡ್ ಅಂದರೆ ಮಲಗುವ ಕೋಣೆಗೇ ಬಳಸಿ ಕಟ್ಟಿಕೊಳ್ಳುವ ಬಚ್ಚಲು ಮನೆ ಪೂರ್ವ ಅಥವಾ ಉತ್ತರದಲ್ಲಿ ಕಟ್ಟಲ್ಪಡಲಿ. ಈಶಾನ್ಯದ ಮೂಲೆ ಮುಚ್ಚಿಹೋಗುವ ಹಾಗೆ ಬಚ್ಚಲುಗಳು ಬರಬಾರದು.

ಕ್ಷೇಮಕರವಾದ ದಾರಿಗೆ ಇದು ಅಡಿಪಾಯ ಒದಗಿಸುತ್ತದೆ. ಇನ್ನು ಸಂಡಾಸಿನ ಸಲುವಾಗಿ ಹೆಚ್ಚು ಹೆಚ್ಚು ಯೋಚಿಸಿ ಕಟ್ಟುವ ಯೋಜನೆ ರೂಪಿಸಿಕೊಳ್ಳಬೇಕು. ಹಿಂದಿನ ರೀತಿಗೂ ಇಂದಿನ ರೀತಿಗೂ ಈಗ ಅಜಗಜಾಂತರ ವ್ಯತ್ಯಾಸವಿದೆ. ಸೆಪ್ಟಿಕ್‌ ಟ್ಯಾಂಕ್‌ ವಿಚಾರ ಈ ಹಿಂದೆ ಇದ್ದಿರಲಿಲ್ಲ. ಸೆಪ್ಟಿಕ್‌ ಟ್ಯಾಂಕ್‌ಗೆ ಒಂದು ಗುಂಡಿ ತೋಡಲು ಮನೆಯ ಆಗ್ನೇಯ ಭಾಗದ ಪೂರ್ವದ ಗೋಡೆಗೆ ಹೊಂದುವಂತೆ ತೋಡುವುದೇ ಸೂಕ್ತ. ಸೆಪ್ಟಿಕ್‌ ಟ್ಯಾಂಕ್‌ ಪೂರ್ವದ ಭಾಗದ ಗೋಡೆಯಲ್ಲಿ ಪೂರ್ವಭಾಗದ ತುಸು ಎತ್ತರದಲ್ಲಿರಬೇಕು. ವಾಯುವ್ಯ ಬಳಸಿಕೊಂಡರೆ ಉತ್ತರ ಗೋಡೆಗೆ ಸೇರದಂತೆ ಪಶ್ಚಿಮ ಭಾಗವನ್ನು ಉಪಯೋಗಿಸಿಕೊಳ್ಳಬೇಕು. ಪಶ್ಚಿಮದಿಕ್ಕಿನ ಉತ್ಛದಲ್ಲಿ ಇದು ಸಂಯೋಜನೆಗೊಳ್ಳದಂತೆ ಇದ್ದರೆ ಶುಭಕರವಾದದ್ದು. ಹೀಗೆಲ್ಲಾ ವಿವರಿಸಿದ ವಿಚಾರಗಳು ಭಾರತೀಯ ವಾಸ್ತುಶಾಸ್ತ್ರದಲ್ಲಿ ಉಲ್ಲೇಖೀಸಲ್ಪಟ್ಟ ವಿಚಾರಗಳಲ್ಲವಾದ್ದರಿಂದ ಮನೆಯ ಮಲಿನತೆ ಅಧಿಕವಾಗದಂತೆ ಶುಭ್ರತೆಗೆ ಆದ್ಯತೆ ಕೊಟ್ಟು, ವಾಸನೆಗೆ ಅವಕಾಶಲ್ಲದಂತೆ ಗಾಳಿಯ ಶುದ್ಧತೆಗೆ ಶಕ್ತಿ ಇರುವಂತೆ ರೂಪುಗೊಳ್ಳಬೇಕು.

ಪ್ರಧಾನವಾದ ಗೃಹಕ್ಕೆ ನೈರುತ್ಯದಲ್ಲಿ ಸಂಡಾಸುಗಳಿರುವುದು ನಿರಂತರವಾಗಿ ಉತ್ತಮವಾದ ಆಯ್ಕೆಯೇ ಸರಿ. ಜೀವನಕ್ಕೆ ಶ್ರೇಯಸ್ಕರವಾದ ಅಂಶವಾಗಿದೆ. ಆದರೂ ಸೆಪ್ಟಿಕ್‌ ಟ್ಯಾಂಕ್‌ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಇಂದಿನ ಸಂಡಾಸುಗಳು ಸದಾ ಮಲ ನಿಲ್ಲುವ ಹಾಗೆ ನೈರುತ್ಯವನ್ನು ಈ ಗುಂಡಿಗಳಿಗೆ ಬಳಸಿಕೊಳ್ಳುವುದು ಅಭ್ಯುದಯದ ದೃಷ್ಟಿಯಿಂದ ಸರಿಯಾದುದಲ್ಲ. ಬೇರೆ ಉಪಾಯಗಳೇ ಇರದೆ ಹೋದಾಗ ಸೆಪ್ಟಿಕ್‌ ಟ್ಯಾಂಕ್‌ಗಳಿಗಾಗಿ ಉತ್ತರದ ದಿಕ್ಕಿನ ಉತ್ಛಭಾಗವನ್ನೋ ಪೂರ್ವ ದಿಕ್ಕಿನ ಉತ್ಛಭಾಗದಲ್ಲೋ ಸೆಪ್ಟಿಕ್‌ ಟ್ಯಾಂಕ್‌ ಇರುವಂತಾಗಲಿ. ಇನ್ನು ಮಲಸರ್ಜನೆಯ ಸಮಯದಲ್ಲಿ ವ್ಯಕ್ತಿಯು ಪೂರ್ವಪಶ್ಚಿಮ ದಿಕ್ಕುಗಳನ್ನು ನೋಡದೆ ಹಾಗೆ ಲೆಟ್ರಿನ್‌ ಬಳಕೆ ಇರಲಿ. ದೇವರ ಮಂಟಪಕ್ಕೋ ಪೂಜಾ ಗೃಹಕ್ಕೋ ಹೊಂದಿ ಸಂಡಾಸು ಕಟ್ಟಬಾರದು. ಇರುವಷ್ಟೇ ಚಿಕ್ಕ ಮನೆಯಲ್ಲಿ ಎಲ್ಲವನ್ನೂ ಪೂರೈಸುವುದು ಹೇಗೆಂಬ ವಿಚಾರ ಬಾಕಿಯೇ ಇರುತ್ತದೆ. ಕಾಲ ಎಲ್ಲವನ್ನೂ ತನ್ನ ತೆಕ್ಕೆಯಲ್ಲಿ ಕಾಲಾನುಕಾಲಕ್ಕೆ ಒಂದೊಂದು ರೀತಿಯ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ಒಟ್ಟಿನಲ್ಲಿ ಶುಚಿಯ ಬಗೆಗೆ ಲಕ್ಷ್ಯ ಪೂರೈಸಿ ಪ್ರಧಾನವಾದದ್ದು ಮನಸ್ಸು ಹಾಗೂ ಇರುವ ಜಾಗ ವಿಸ್ತಾರ ಮನೆಗೆ ಸಂಬಂಧಿಸಿದಂತೆ.
ಬಚ್ಚಲು ಹಾಗೂ ಸಂಡಾಸು ಸರಿಹೊಂದದಂತೆ ಇದ್ದಾಗ, ಬದಲಾವಣೆಗೆ ಅವಕಾಶವೂ
ಇರದಿರುವಾಗ ಪ್ರತಿದಿನದ ಸಂಜೆ ಸಮಯದಲ್ಲಿ ಬಿಳಿ ಅಥವಾ ಕೆಂಪು ಹೂವನ್ನು ದೇವರೆದುರಿಗೆ ಇರಿಸಿ ಒಂದು ಲವಂಗದ ತುಂಡನ್ನು ವಾಯುವ್ಯದ ಮೂಲೆಗಿರಿಸಿ ಪುಟ್ಟದೊಂದು ಹಣತೆಯ ದೀಪ ದೇವರೆದುರು ಬೆಳಗಿಸಿ


No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...