ಅಗ್ನಿಗೆ ಹವ್ಯವಾಹನ ಎಂಬ ಹೆಸರಿದೆ. ವೈಶ್ವಾನರ ಎಂಬ ಹೆಸರೂ ಇದೆ. ಅಗ್ನಿದೇವ ಎಂಬುದಂತೂ ಎಲ್ಲರೂ ತಿಳಿದ ಹೆಸರು. ಶಿವನ ಶಕ್ತಿಯೇ ದುರ್ಗೆಯಲ್ಲಿ ಅಡಕವಾಗಿದೆ. ದುರ್ಗಾರಹಿತನಾದ ಶಿವ ಜಡತ್ವ ಪಡೆದಿರುತ್ತಾನೆ. ಶಿವನೇ ಆದರೂ ಶಕ್ತಿಯ ಹೊರತಾಗಿ ಶಿವನು ಕೇವಲ ಶೂನ್ಯ. ದುರ್ಗೆ ಅಗ್ನಿಯೇ ಆಗಿದ್ದಾಳೆ. ಅಗ್ನಿಗೆ ಎಲ್ಲವನ್ನೂ ಸುಟ್ಟೊಗೆಯುವ ಶಕ್ತಿ ಇದೆ. ಚಿನ್ನದಂಥ ಅಪೂರ್ವ ವಸ್ತುವಿಗೆ ಪುಟ ನೀಡುವ ಶಕ್ತಿ ಇದೆ. ಇದೇ ಅಗ್ನಿಯನ್ನು ನಮ್ಮ ಪೂಜನೀಯ ಋಷಿಮಹರ್ಷಿಗಳು ಪೂರ್ವದಲ್ಲಿ ಪೂಜಿಸುತ್ತಿದ್ದರು. ಹವಿಸ್ಸನ್ನು ಅಗ್ನಿಗೆ ಒಪ್ಪಿಸಿದಾಗ ಅಗ್ನಿದೇವನು ಈ ಹವಿಸ್ಸನ್ನು ತಮ್ಮ ಪಿತೃ ಪಿತಾಮಹರಿಗೆ ದೇವತೆಗಳಿಗೆ ಅದನ್ನು ತಲುಪಿಸುವವನಾದ್ದರಿಂದ ಅಗ್ನಿದೇವ ಹವ್ಯವಾಹನನಾದ. ಅಂದರೆ ಲೌಕಿಕವನೂ,° ಅಲೌಕಿಕವನ್ನೂ ಬೆಸೆಯುವ ಶಕ್ತಿ ಅಗ್ನಿದೇವನಿಗೆ ಅಡಕವಾಗಿದೆ.
ಇದರಿಂದಾಗಿಯೇ ಯುಕ್ತಕಾಲದಲ್ಲಿ ನಮ್ಮ ಧಾರಿಣಿಯ ಫಲವಂತಿಕೆಗೆ ಕಾರಣವಾಗುವ ನಮ್ಮ ಆರು ಋತುಗಳು ಅಗ್ನಿಪೂಜೆಯ ಸಂಬಂಧವಾಗಿ ಒದಗಿದ ಫಲವಂತಿಕೆಯಿಂದ ಸಮೃದ್ಧತೆಯನ್ನು ಕಂಡು ಭೂಮಿಯ ಸಮತೋಲನಕ್ಕೆ ಕಾರಣವಾಗಿದ್ದವು. ಕ್ರಮೇಣ ಯಜ್ಞ ಯಾಗ ಹವನಾದಿಗಳು ತಟಸ್ಥವಾಗತೊಡಗಿದವು. ನಮ್ಮ ಅಂದರೆ ಮನುಷ್ಯರಷ್ಟೇ ಅಲ್ಲದೆ ಸರ್ವಸ್ವ ಚರಾಚರ ಜಂತುಗಳ ಒಳಗೂ ಅವಿತಿರುವ ಜಠರಾಗ್ನಿಗೆ ಆಹಾರವೇ ಉರುವಲು. ಹೀಗೆ ಅಗ್ನಿಯಿಂದಲೇ ಜೀವಂತಿಕೆ. ಜೀವನೋತ್ಸಾಹ. ಅಗ್ನಿ ಸತ್ವ ಕಳೆದುಕೊಂಡಾಗ ನಿಶ್ಚಲತೆ ಅಂದರೆ ಸಾವು ಅಷ್ಟೆ. ಯಾವಾಗಲೂ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳ ನಡುವಣ ದಿಕ್ಕು ಸಮಾವೇಶಗೊಳ್ಳುವ ಮೂಲೆಯೇ ಅಗ್ನಿಮೂಲೆ. ಅಂದರೆ ಆಗ್ನೇಯ ದಿಕ್ಕು. ಸರ್ವವಿಧದಲ್ಲೂ ಸ್ವತ್ಛತೆಯನ್ನು ಬೇಡುತ್ತದೆ. ಈ ದಿಕ್ಕಿನಲ್ಲಿ ಸಂಸ್ಕರಿಸಲ್ಪಟ್ಟ ಆಹಾರಗಳು ಉತ್ತಮವಾದ ಪೌಷ್ಟಿಕ ಧಾತುಗಳೊಂದಿಗೆ ಮನುಷ್ಯನ ಜೈವಿಕ ಶಕ್ತಿ ಮತ್ತು ಉತ್ಸಾಹಗಳಿಗೆ ವಾಹಕ ಸಂವಹನಗಳಿಗೆ ಮುಮ್ಮುಖವಾಗುವ ಸೂಕ್ತ ಶಕ್ತಿ ಪುಷ್ಟಿ ಹಾಗೂ ಲವಲವಿಕೆಗಳನ್ನೆಲ್ಲ ಒದಗಿಸುತ್ತದೆ. ಹೀಗಾಗಿ ಅನಿವಾರ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ ಅಗ್ನಿಮೂಲೆಯಲ್ಲೇ ನಮ್ಮ ದೈನಂದಿನ ಊಟದ ಸಂಸ್ಕರಣಕ್ಕೆ ಆವರಣಗಳು ಬೇಕು. ಈ ದಿಕ್ಕಿನಲ್ಲಿ ಅಡುಗೆ ಮನೆ ರೂಪುಗೊಳ್ಳಬೇಕು. ಇದರಿಂದ ಜೀವನದಲ್ಲಿನ ದಿವ್ಯವೂ, ಅಗ್ನಿದಿವ್ಯವೂ ಸತ್ವಪರೀಕ್ಷೆಗಳನ್ನು ಗೆಲ್ಲುವ ಹುರುಪೂ ಒಟ್ಟಿಗೆ ಬರುತ್ತದೆ.
ಈ ದಿಕ್ಕಿನಲ್ಲಿ ಟಾಯ್ಲೆಟ್‌ಗಳು, ಸ್ನಾನಗೃಹಗಳು ಮನೆಯ ತ್ಯಾಜ್ಯಗಳು ಸಾಗುವ ಕೊಳವೆಗಳು ದೇವರ ಪೀಠ ಮಂಟಪ, ಗೂಡುಗಳು ಬರಲೇ ಬಾರದು. ಇವುಗಳ ಸಂಯೋಜನೆಗಳು ಇರಬಾರದು. ಊಟ ಮಾಡುವ ಟೇಬಲ್ ಅಡಿಗೆ ಮನೆಯ ಸಮೀಪಕ್ಕೇ ಇರಬೇಕು. ಮಲಗುವ ಕೋಣೆಗಳು ಕೂಡಾ ಇಲ್ಲಿ ಸಮಾವೇಶವಾಗಕೂಡದು. ಕೈತೊಳೆಯುವ, ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೆ ಅಗ್ನಿಮೂಲೆಯಲ್ಲಿ ನೀರಿನ ಮೂಲ ಸಂಗ್ರಹ ಸಂಪು, ಬಾವಿ, ಬೋರ್ ವೆಲ್ ಇರಲೇಬಾರದು. ಕೈ ತೊಳೆಯುವುದು ಕೂಡಾ ಕೈಯ ಎಂಜಲನ್ನು ತೊಳೆಯುವುದಕ್ಕೆ ಉಪಯೋಗವಾಗುವ ರೀತಿ ಇರಬಾರದು. ಹೀಗೆ ಮಾಡುವುದರಿಂದ ದೇವತೆಗಳಲ್ಲೇ ಪರಮ ಪವಿತ್ರವಾದ ಅಗ್ನಿಗೆ ಸಂಪನ್ನತೆ ಒದಗಿ ಮನೆಯ ಆರೋಗ್ಯವೂ ಲವಲವಿಕೆಗಳು ಒಗ್ಗೂಡಿದ ಹರ್ಷದಲೆಗಳು ಮನೆಯ ಜನರ ಸಂತೋಷಕ್ಕೆ ಉತ್ತಮವಾದ ನಿರ್ಮಿಕೆ ಸಾಧ್ಯವಾಗುತ್ತದೆ.
ಅಗ್ನಿಮೂಲೆಯ ಮಟ್ಟ ತುಸು ಎತ್ತರದಲ್ಲಿದ್ದರೆ ಸೂಕ್ತ. ಗ್ಯಾಸ್ ಸಿಲಿಂಡರ್‌ಗಳು ಒಲೆಯ ಇರುವ ಮಟ್ಟಕ್ಕೆ ತಳದಲ್ಲಿದ್ದರೆ ಸೂಕ್ತ. . ಒಲೆಯಿರುವ ಪೂರ್ವ ಮೂಲೆಯ ಹೊರಗೆ ಗೋಡೆಯಾಚೆ ಇದ್ದರೆ ಚೆನ್ನವೂ ಯುಕ್ತವೂ ಆಗಿದೆ. ಅಡುಗೆ ಮನೆಯಲ್ಲಿ ಕನ್ನಡಿಯೊಂದು ಇರಲೇ ಕೂಡದು. ಹೊತ್ತಿಸಿದ ಒಲೆಯ ಬೆಂಕಿ ಕನ್ನಡಿಯಲ್ಲಿ ಪ್ರತಿಫಲಿಸಬಾರದು. ಪೂರ್ವ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುವ ಕ್ರಮ ರೂಡಿಗೊಂಡರೆ ಮನೆಯೊಡತಿಗೆ ಅಗ್ನಿಯ ಸಾûಾತ್ಕಾರದಿಂದ ಮನೆಯ ಧಾನ್ಯ, ಆಹಾರ, ಕ್ಷೀರೋತ್ಪನ್ನಗಳಿಗೆ ಸಮೃದ್ಧಿಯೊಂದು ವಿಪುಲವಾಗಿ ಕೂಡಿಕೊಂಡಿರಲು ಸಾಧ್ಯವಾಗುತ್ತದೆ. ಮನೆಯ ಸಮೃದ್ಧಿಗೆ ಪೂರ್ವ ದಿಕ್ಕಿನ ಕಡೆಗೆ ಅಗ್ನಿಮೂಲೆಯಲ್ಲಿ ಕಿಟಕಿ ಇಡುವುದು ಉತ್ತಮವಾಗಿದೆ. ಗಟ್ಟಿಯಾದ ಫಗೈಬರ್ ಗ್ಲಾಸುಗಳು ಕಿಟಕಿಗೆ ಬಳಸಿಕೊಂಡಿದ್ದರೆ ಒಳ್ಳೆಯದು. ಮರಮಟ್ಟುಗಳನ್ನು ಮಿತಿಯಲ್ಲಿ ಉಪಯೋಗಿಸುವುದು ಸ್ವಾಗತಾರ್ಹ. ಕಿಟಕಿಯ ಫ್ರೆàಮುಗಳು ಸ್ಟೀಲು, ಉಕ್ಕು ಅಲಂಕಾರಿಕ ಅಲ್ಯುಮಿನಿಯಂ ಧಾತುಗಳಿಂದ ಸಂಯೋಜನೆಯಾಗಿರುವುದನ್ನು ಅವಶ್ಯವಾಗಿ ಗಮನಿಸಬೇಕು. ಒಟ್ಟಿನಲ್ಲಿ ಆಗ್ನೇಯ ಮೂಲೆಯ ಅಗ್ನಿ ಶಕ್ತಿ ಸ್ವತ್ಛತೆಯಲ್ಲಿ ಹಿಗ್ಗಿಕೊಳ್ಳುವಂತಿರಲಿ.

No comments:
Post a Comment