Saturday, 3 March 2018

ಮನೆಯಲ್ಲಿ ಓಂಕಾರ; ಎಲ್ಲದಕ್ಕೂ ಅದೇ ಶ್ರೀಕಾರ

ಭಾರತೀಯ ಸಂಸ್ಕೃತಿಯಲ್ಲಿ ಪಂಚಮ ಸ್ಥಾನಕ್ಕೆ ಬಹುತರವಾದ ತೂಕ ಹಾಗೂ ಎತ್ತರವಿದೆ. ಪಂಚ ಮಹಾಭೂತಗಳು ಪಂಚತತ್ವದಲ್ಲಿನ ದಾರಿ ಕಾರ್ಯಕ್ಕೆ ಸಿದ್ಧಿಯಾಗುತ್ತದೆಂಬ ನಂಬಿಕೆ. ಪಂಚಮುಖೀ ಶಿವ, ಪಂಚಮುಖೀ ಆಂಜನೇಯ ಸೌರಭಕ್ಕೆ ದಾರಿ ಮಾಡುವ ಪಂಚವಳಿ, ಪಂಚವಾಳದಲ್ಲಿರುವ ಅರಿಶಿಣ, ಕುಂಕುಮಾದಿ ಸುದ್ರವ್ಯ, ಕ್ಷೀರ, ಮಧು, ಘೃತ, ತವರಾಜಾದಿ ಪಂಚಾಮೃತಗಳು ಪಂಚಮಹಾ ಪುರುಷಗಳೆಂಬ ಸಿದ್ದಿಯ ದಾರಿಯ ಜಾತಕದಲ್ಲಿನ ಯೋಗಗಳು, ಪಂಚಮಹಾ ಕನ್ನಿಕೆಯರು, ಪಂಚಮ ಸ್ವರ, ಮಾಧುರ್ಯ, ಶಿವನ ಸಾûಾತ್ಕಾರಕ್ಕಾಗಿನ ಪಂಚಮನ ಬಗೆಗಿನ ನಮ್ಮ ಗೌರವಾದರಗಳು, ಇತ್ಯಾದಿ ಇತ್ಯಾದಿ ನಮ್ಮ ಆಂತರ್ಯ ಹಾಗೂ ಬಾಹ್ಯ ಸಂಬಂಧವಾದ ಶುಚಿತ್ವಕ್ಕೆ ದಾರಿ ದೀಪಗಳಾಗಿದೆ. ಬ್ರಹ್ಮನು ಸೃಷ್ಟಿ ಕರ್ತನಾದರೂ ವಿಷ್ಣುವು ಪಾಠ, ಪಾಲನೆಯ ಹೊಣೆ ಹೊತ್ತರೂ ಶಿವನು ತನ್ನೊಳಗಿನ ಅಪೂರ್ಣತೆಗಾಗಿ ದುಃಖೀತನಾದಾಗ ಸತಿಯಾದ ದಾûಾಯಿಣಿಯನ್ನು ತನ್ನ ಅಪೂರ್ಣತ್ವವನ್ನು ನಿವಾರಿಸಿಕೊಳ್ಳು ತನ್ನ ಮಡದಿಯಾಗು ಎಂದು ಅಂಗಲಾಚಿಕೊಳ್ಳುತ್ತಾನೆ.

 ಹೀಗಾಗಿ ಶಿವನ ಪೂರ್ಣತ್ವವೆಂದರೆ ನಾರೀತನ ಸಮ್ಮಿಳಿಸಿದ ಅರ್ಧನಾರೀಶ್ವರತ್ವ. ಸಕಲ ಸಂನ್ಮಂಗಳೆಯಾದ ಪ್ರಕೃತಿಯು ತನ್ನ ಪೂರ್ಣ ಸಂವರ್ಧನೆಗಾಗಿ ಪುರುಷನಾದ ಶಿವನನ್ನು ಸ್ತುತಿಸುತ್ತಾಳೆ. ಶಿವನೆಂಬ ಪುರುಷ ಚೇತನ ಪಡೆದು ನಿಗುರುವುದೇ ಪ್ರಕೃತಿ ತನ್ನ ಬಳಿ ಬಂದಾಗ. ಈ ಆಧಾರದ ಮೇಲೆ ಬ್ರಹ್ಮನ ಸೃಷ್ಟಿಗೆ ಅವಕಾಶ. ಬ್ರಹ್ಮ ಹಾಗೂ ಮಹೇಶ್ವರರ ಸಂಪರ್ಕದ ಕೊಂಡಿಯಾಗಿ ಮಹಾವಿಷ್ಣು ಇದ್ದಾನೆ. ಶಿವನ ಮೂರನೆಯ ಕಣ್ಣು ವಿಶ್ವದ ಚೈತನ್ಯದ, ನಾಶದ ಬೆಂಕಿಯ ಭಾಗವಾಗಿದೆ. ಈ ಬೆಂಕಿಯೂ ಸರ್ವಸ್ವವನ್ನೂ ರುದ್ರ ಭಯಂಕರವಾದ ರೀತಿಯಲ್ಲಿ ಶುದ್ಧಗೊಳಿಸಿದರೆ ಪಂಚಗವ್ಯ ಪಂಚಭೂತಾತ್ಮಕವಾದ ಶರೀರವನ್ನು ಶುದ್ಧಗೊಳಿಸುತ್ತದೆ.

 ಹಾಗೆಯೇ ಗ್ರಹವೆಂಬುದು ನಮ್ಮ ವಾಸದ ಶಿವನ ಆಲಯವಾಗಿದ್ದು, ಶಿವನನ್ನು ಸಂತುಷ್ಟಗೊಳಿಸುವ ದಾರಿಯಲ್ಲಿ ಹೆಜ್ಜೆ ಇರಿಸಿದಾಗಲೇ ಅದು ಸಾಧ್ಯ. ಹೊರನೋಟಕ್ಕೆ ವಿಕೃತವಾಗಿ ಕಾಣಿಸುವ ವಿರೂಪಾಕ್ಷ ಶಿವ ಒಳಗಿನಾಳದ ಒಳಗೆ ಪರಮಶುಚಿತ್ವದ ಕಣಜನಾಗಿದ್ದಾನೆ. ಅದು ಬೆಂಕಿಯ ಸುಡುಜಾÌಲೆಯಿಂದಾಗಿ ಮಾತ್ರವಲ್ಲ, ಪ್ರೇಮದ ಶಾಂತಭಾವ ಸಾಂಪ್ರತದಲ್ಲಿ ಹುಟ್ಟುವ ಜೀವಜೀವದ ನಡುವಣ ಅವಲಂಭನದ ಸತ್ಯದ ಕಾವು. ಜೀವ ಬೆಳೆಸುವ ಜೀವದ್ರವ್ಯದ ಕಾವೂ ಹೌದು. ಹೀಗಾಗಿ ಆಂತರಿಕವಾದ ಜೀವದ ಕಾವು ಚಲನಶೀಲತೆಯಿಂದ ತುಂಬಿದೆ. ಕಾವು ಆರಿದಾಗ ಮರಣ ಸಂಪ್ರಾಪ್ತ. ಜೀವ ಹೋದಾಗ ಜೀವಿಯ ದೇಹ ಹಾವಿನಂತೆ ತಣ್ಣನೆಯ ಬರಿಮೈ.

 ಈ ಎಲ್ಲಾ ಕಾರಣದಿಂದಾಗಿ ಮನೆಯಲ್ಲಿ ಓಂ ಎಂಬ ನೀನಾದ ಪಂಚ ಆವರ್ತನಗಳೊಂದಿಗೆ ಪಂಚೇಂದ್ರಿಯಗಳ ಅನುಭವಕ್ಕೆ ಸ್ಪಂದಿಸುವ ಸಚೇತಕತೆ ಒದಗಿಸಿದಾಗ ಬೇರೆ ರೀತಿಯ ಸಾಮರ್ಥ್ಯವನ್ನು ಮನೆಯೊಳಗಿನ ಸದಸ್ಯರಿಗೆ ಒದಗಿಸುತ್ತದೆ.  ಮನೆಯ ವಾಸ್ತುವಿಗೆ ಕೊರತೆಗಳಿರುವ ದೋಷಗಳು ಓಂಕಾರ ನಾದ ಮನೆಯಲ್ಲಿ ತುಂಬಿದ್ದರೆ ಕೆಡುಕನ್ನು ಹೊಡೆದು ಉತ್ತಮವಾದುದನ್ನು ಬಿತ್ತುವ ಕೆಲಸ ನಡೆಯುತ್ತದೆ. ಹೀಗಾಗಿ ಶಿವನ ಸ್ತೋತ್ರ ರುದ್ರ ಪಠಣ, ಚಮಕ ಪಠಣಗಳೆಲ್ಲ ಸದಾ ಮನೆಯಲ್ಲಿ ತುಂಬಿರಲಿ ಎಂದರೆ ಅದು ಸರ್ವರಿಗೂ ಸಾಧ್ಯವಾಗುವ ಸರಳ ವಿಷಯವಾಗದು. ಆದರೆ ಓಂ ಎನ್ನುವ ಓಂಕಾರ ಜಪದಿಂದ ಐದು ಘಟ್ಟಗಳಲ್ಲಿ
ಸಾಧ್ಯವಾಗಲಿ. ಒಂದು ಬೆಳಗ್ಗೆ ಸ್ನಾನಾ ನಂತರ ಮಧ್ಯಾಹ್ನದ ಊಟಕ್ಕೆ ಮುನ್ನ ಮೂರು ಗೋಧೂಳಿ ಸಮಯದಲ್ಲಿ ನಾಲ್ಕು ರಾತ್ರಿಯ ಊಟದ ಒಂದು ತಾಸಿಗೆ ಮುಂಚೆ, ಐದು ಇನ್ನೇನು ಮಲಗುವ ಮುನ್ನ ಹೀಗೆ ಪಂಚಾವರ್ಣ ಪೂರ್ಣ ಶಿವನ ಓಂಕಾರ ಜಪ ಸಿದ್ಧಿಸಿಕೊಳ್ಳಿ. ಇದರಿಂದ ಮನೆಯ ವಾಸ್ತು ದೋಷಗಳಿಗೆ ತಡೆ ದೊರಕುತ್ತದೆ. ಜೊತೆಗೆ ಶಿವಪುರಾಣ ವಿಷ್ಣು ಪುರಾಣ ಬ್ರಹ್ಮಾನಂದ ಸೂತ್ರಪೂರಕ ಶಾರದಾ ಸ್ತೋತ್ರಗಳ ಪಠಣದಿಂದ ಜೀವಿಯ ದೇಹದ ಕಾಂತಿಗೆ ಆಯುಷ್ಯ ವೃದ್ಧಿಗೆ ದಾರಿ ಸಿಗುತ್ತದೆ. ಎಲ್ಲವೂ ಪಠಿಸಲು ಅಸಾಧ್ಯವಾಗುವ ಒತ್ತಡ ಇಂದಿನ ಆಧುನಿಕ ಜೀವನದಲ್ಲಿದೆ.  ಹೀಗಾಗಿ ಓಂಕಾರದ ನಾದ ತಾದಾತ್ಮವೇ ಸಕಲ ಸನ್ಮಂಗಳಕ್ಕೂ ದಾರಿಯಾಗುವ ಸಂಜೀವಿನಿಯಾಗಿದೆ.

 ದೇವತೆಗಳ ಸಕಲ ವಿಶ್ವ ಜೀವಿಗಳ ಯಶೋಗಾಥೆಗೆ ವಾಸ್ತು ಶ್ರೀಮಂತಿಕೆಗೆ ಜನಕನಾದ ದೇವಶಿಲ್ಪಿ ಮಯನು ಮಹಾವಿಷ್ಣುವನ್ನೇ ವಾಸ್ತುಪುರುಷನನ್ನಾಗಿ ಗುರುತಿಸುತ್ತಾನೆ. ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದಲ್ಲಿ ಬ್ರಹ್ಮನು ಪೂರ್ಣತ್ವಕ್ಕೆ ಸಂಕೇತನಾಗಿದ್ದಾನೆ. ವಿಷ್ಣು ಹಾಗೂ ಬ್ರಹ್ಮಂದಿರು ಓಂಕಾರ ಹಾಗೂ ಪೂರ್ಣವಾದ ಶಿವನಿಂದ ಬಲಾಡ್ಯರು ಎಂದು ಮಯನು ಹೇಳಿದ್ದಾನೆ. 

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...