Wednesday, 14 March 2018

ಮನೆಯಲ್ಲಿ ಕನ್ನಡಿ ತೂಗು ಹಾಕಲು ವಾಸ್ತು!

ಇಂದಿನ ದಿನಗಳಲ್ಲಿ ವಾಸ್ತು ನಂಬದ ಜನರು ಸಿಗುವುದು ತುಂಬಾ ವಿರಳ. ಪ್ರತಿಯೊಬ್ಬರು ವಾಸ್ತುವಿನೊಳಗೆ ಬಂಧಿಯಾಗಿರುವರು. ಇದು ಕಚೇರಿ ಅಥವಾ ಮನೆಯೇ ಆಗಿರಬಹುದು. ಕೆಲವರು ಗೊತ್ತಿಲ್ಲದೆ ವಾಸ್ತು ಅಳವಡಿಸಿಕೊಂಡರೆ ಇನ್ನು ಕೆಲವರು ವಾಸ್ತು ತಜ್ಞರ ಅಭಿಪ್ರಾಯದ ಪ್ರಕಾರ ಎಲ್ಲವನ್ನು ಮಾಡುವರು. ವಾಸ್ತುವಿನಲ್ಲಿ ಕನ್ನಡಿ ಎನ್ನುವುದು ತುಂಬಾ ಪ್ರಮುಖ ಪಾತ್ರ ವಹಿಸುವುದು. ಕನ್ನಡಿಯು ನಿಮ್ಮ ಮನೆಯಲ್ಲಿ ಶಕ್ತಿಯನ್ನು ತರಬಹುದು ಅಥವಾ ನಾಶ ಮಾಡಬಹುದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಎಲ್ಲಾ ಕನ್ನಡಿಗಳನ್ನು ಒಂದೇ ರೀತಿಯಲ್ಲಿ ಅಳವಡಿಸಲು ಆಗುವುದಿಲ್ಲ. ಕೆಲವು ಸಕಾರಾತ್ಮಕ ಶಕ್ತಿ ತಂದರೆ ಇನ್ನು ಕೆಲವೊಂದು ನಕಾರಾತ್ಮಕ ಶಕ್ತಿಯನ್ನು ತರುವುದು. ಇದನ್ನು ಎಲ್ಲಿ, ಹೇಗೆ ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಪ್ರತಿಯೊಂದು ಅವಲಂಬಿತವಾಗಿದೆ. ಮನೆ ಹಾಗೂ ಕಚೇರಿಯಲ್ಲಿ ಕನ್ನಡಿ ಎಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ. ಅದನ್ನು ಅಳವಡಿಸಿಕೊಂಡು ಹೋದರೆ ನಿಮ್ಮ ವಾಸ್ತು ಸರಿಯಾಗಲಿದೆ. 

ಮನೆಯ 'ಬಾಗಿಲಿನ ವಾಸ್ತು' ಸರಿ ಇಲ್ಲವಾದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ!


ಮನೆ


 ಮನೆಯಲ್ಲಿ ನೀವು ಕನ್ನಡಿ ಅಳವಡಿಸಿಕೊಳ್ಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಅದು ಮಲಗುವ ಹಾಸಿಗೆಯನ್ನು ತೋರಿಸಬಾರದು. ಹೀಗೆ ಮಾಡಿದರೆ ಅದರಿಂದ ನಕಾರಾತ್ಮಕ ಶಕ್ತಿ ಬರುವುದು. ಮನೆಯ ಮುಖ್ಯದ್ವಾರವು ಕನ್ನಡಿಯಲ್ಲಿ ಕಾಣುತ್ತಾ ಇದ್ದರೆ ನೀವು ಆ ಕನ್ನಡಿಯನ್ನು ಸ್ಥಳಾಂತರಿಸಬೇಕು. ವಾಸ್ತುಶಾಸ್ತ್ರದ ಪ್ರಕಾರ ಇದು ಮನೆಯೊಳಗಿನ ಎಲ್ಲಾ ಧನಾತ್ಮಕ ಶಕ್ತಿಯನ್ನು ಹೊರಹಾಕುವುದು ಮತ್ತು ನಿಮಗೆ ಅವಕಾಶಗಳು ಕೈತಪ್ಪುವುದು. ನಿಮಗೆ ಕಿಟಕಿ ಬಾಗಿಲಿನಲ್ಲಿ ಎಲ್ಲವೂ ಕಾಣುತ್ತಲಿದ್ದರೆ ಆಗ ನೀವು ಅದರ ವಿರುದ್ಧ ದಿಕ್ಕಿನಲ್ಲಿ ಕನ್ನಡಿ ಅಳವಡಿಸಿ. ನಕಾರಾತ್ಮಕ ಶಕ್ತಿ ಇರುವಂತಹ ಜಾಗದ ವಿರುದ್ಧ ದಿಕ್ಕಿನಲ್ಲಿ ಕನ್ನಡಿ ಅಳವಡಿಸಿಕೊಳ್ಳಿ. ಇದರಿಂದ ಮನೆಯಲ್ಲಿ ಇರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಗಳು ಹೊರಹೋಗುವುದು.


ಕಚೇರಿ


 ವೃತ್ತಿಯಲ್ಲಿ ಧನಾತ್ಮಕ ಶಕ್ತಿ ಬರಬೇಕೆಂದರೆ ನೀವು ಧನಾತ್ಮಕವಾಗಿರುವಂತಹ ಕನ್ನಡಿಯನ್ನು ಅಳವಡಿಸಿಕೊಳ್ಳಬೇಕು. ಸಮೃದ್ಧಿ ಕಚೇರಿಗೆ ಬರಲು ನೀವು ಲಾಕರ್ ಎದುರು ಕನ್ನಡಿ ಅಳವಡಿಸಿಕೊಳ್ಳಿ. ತುಂಬಾ ಇಕ್ಕಟ್ಟಾಗಿರುವ ಜಾಗದಲ್ಲಿ ಕನ್ನಡಿ ಅಳವಡಿಸಬೇಡಿ. ಯಾಕೆಂದರೆ ಇದರಿಂದ ನಕಾರಾತ್ಮಕ ಶಕ್ತಿ ಬರುವುದು. ಇಕ್ಕಟ್ಟಾಗಿರುವ ಜಾಗದಲ್ಲಿ ನಕಾರಾತ್ಮಕತೆ ಮತ್ತು ಕ್ಲಾಸ್ಟ್ರೋಫೋಬಿಕ್ ಸುತ್ತುವರಿದಿರುವುದು. ಇಂತಹ ಜಾಗದಲ್ಲಿ ಕನ್ನಡಿ ಅಳವಡಿಸಬೇಡಿ. ಕನ್ನಡಿಯಲ್ಲಿ ಒಳ್ಳೆಯ ದೃಶ್ಯಗಳು ಮತ್ತು ಧನಾತ್ಮಕ ಶಕ್ತಿಯು ಬರುವಂತಿರಲಿ. ಕಿಟಕಿಗೆ ವಿರುದ್ಧ ದಿಕ್ಕಿನಲ್ಲಿ ಕಿರುಕೋಣೆಯಲ್ಲಿ ಕನ್ನಡಿ ಅಳವಡಿಸಿಕೊಂಡರೆ ಒಳ್ಳೆಯ ಧನಾತ್ಮಕ ಶಕ್ತಿ ಬರುವುದು.

ಕನ್ನಡಿ ಅಳವಡಿಕೆಗೆ ಸಾಮಾನ್ಯ ವಾಸ್ತು ಸಲಹೆಗಳು 


ನೀವು ಶೌಚಾಲಯದಲ್ಲಿ ಕನ್ನಡಿ ಅಳವಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದರೆ ಆಗ ನೀವು ಉತ್ತರ ಅಥವಾ ಪೂರ್ವ ಭಾಗದಲ್ಲಿ ಇದನ್ನು ತೂಗು ಹಾಕಿ. ಮನೆಯ ಮಧ್ಯಭಾಗದಲ್ಲಿ ಗೋಡೆಯಿದ್ದರೆ ಆಗ ನೀವು ಇದರಲ್ಲಿ ಒಂದು ಕನ್ನಡಿ ತೂಗು ಹಾಕಿ ಮನೆಯ ಎರಡು ಭಾಗಗಳು ಸಂಪರ್ಕದಲ್ಲಿರುವಂತೆ ಮಾಡಬಹುದು. ಒಂದು ಕನ್ನಡಿಗೆ ವಿರುದ್ಧವಾಗಿ ಮತ್ತೊಂದನ್ನು ಯಾವತ್ತೂ ಅಳವಡಿಸಬೇಡಿ. ವಾಸ್ತು ಸಂಪೂರ್ಣವಾಗ ಇದರ ವಿರುದ್ಧವಾಗಿದೆ. ಇದರಿಂದ ವಿಶ್ರಾಂತಿ ಇಲ್ಲದಂತೆ ಆಗುವುದು. ಶೌಚಾಲಯವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಗದಲ್ಲಿ ಉತ್ತರ ಅಥವಾ ಪೂರ್ವ ಭಾಗದಲ್ಲಿ ಕನ್ನಡಿ ತೂಗು ಹಾಕಬೇಡಿ. ಇದರಿಂದ ಧನಾತ್ಮಕ ಶಕ್ತಿ ಕಳೆದುಹೋಗಬಹುದು. ಮುಖ್ಯದ್ವಾರಕ್ಕೆ ಎದುರಾಗಿ ಕನ್ನಡಿ ಅಳವಡಿಸಬೇಡಿ ಮತ್ತು ನಿಮ್ಮ ಚಿತ್ರ ಕಾಣುವಂತೆ



ಕನ್ನಡಿ ಇಡಬೇಡಿ!


 ವಾಸ್ತು ಪ್ರಕಾರ ಕನ್ನಡಿಗಳನ್ನು ಅಳವಡಿಸಿಕೊಂಡರೆ ಅದರಿಂದ ಖಂಡಿತವಾಗಿಯೂ ನಿಮ್ಮ ಮನೆಯೊಳಗೆ ಧನಾತ್ಮಕ ಶಕ್ತಿಯು ಹರಿದುಬರುವುದರಲ್ಲಿ ಸಂಶಯವೇ ಇಲ್ಲ.







No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...