Monday, 30 April 2018

ಉತ್ತರ ದಿಕ್ಕಿನಲ್ಲಿ ತಲೆ ಇರಿಸಬೇಡಿ

1,ಅಡುಗೆ ಮಾಡುವಾಗ, ಆಹಾರ ಸೇವಿಸುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕಿನಲ್ಲಿ ಕುಳಿತು ಕೊಳ್ಳಲೇಬಾರದು. ಆಹಾರವು ಸರಿಯಾಗಿ ಪಚನಗೊಂಡು ಉತ್ತಮ ಆರೋಗ್ಯ ಲಭಿಸಬೇಕಾದರೆ ಪೂರ್ವ ದಿಕ್ಕಿಗೆ ಮುಖಮಾಡಿ ಸೇವಿಸಬೇಕು.

2.ಆರೋಗ್ಯ ಮತ್ತು ಸಂತೋಷವನ್ನು ಗಳಿಸಲು ಕೊಠಡಿಯ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿರಿ.ಒಂದೇ ರೀತಿಯ ಬಣ್ಣಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.

3.ಹಾಸಿಗೆಯ ಮುಂಭಾಗದಲ್ಲಿ ಕನ್ನಡಿಯನ್ನು ಇರಿಸುವುದು ಬೇಡ, ಅಥವಾ ಇದ್ದರೆ ಅವುಗಳನ್ನು ಮುಚ್ಚಿ ದುಸ್ವಪ್ನಗಳಿಂದ ಮುಕ್ತಿ ಪಡೆಯಿರಿ.

4.ಮಲಗುವಾಗ ತಲೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಲೇ ಬಾರದು. ಸುಖನಿದ್ದೆಗಾಗಿ ದಕ್ಷಿಣ ಅಥವಾ ಪೂರ್ವಭಾಗಗಳನ್ನು ಆರಿಸುವುದು ಉತ್ತಮ.

5.ತುಳಸಿಗಿಡವನ್ನು ಈಶಾನ್ಯ ಭಾಗದಲ್ಲಿ ನೆಡುವುದರಿಂದ ವಾಯು ಶುದ್ಧೀಕರಿಸಲು ಸಹಾಯಕವಾಗುತ್ತದೆ.

6.ಗರ್ಭಿಣಿಯರು ಈಶಾನ್ಯ ಭಾಗದಲ್ಲಿರುವ ಕೊಠಡಿಯನ್ನು ಮಲಗಲು ಉಪಯೋಗಿಸದಿರುವುದು ಒಳ್ಳೆಯದು, ಇದರಿಂದಾಗಿ ಗರ್ಭ ಸ್ರಾವ, ಗರ್ಭಛಿದ್ರ ಮೊದಲಾದ ಅಪಾಯಗಳಿಂದ ರಕ್ಷಣೆಯನ್ನು ಪಡೆಯಬಹುದು.

7.ಕಬ್ಬಿಣದಿಂದ ಅಥವಾ ಇನ್ನಾವುದೇ ಲೋಹದಿಂದ ಮಾಡಿದ ಹಾಸಿಗೆಯನ್ನು ಬಳಸದಿದ್ದರೆ ಉತ್ತಮ, ಯಾಕೆಂದರೆ ಇಂತವುಗಳು ಹೃದಯ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ.

8.ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕೆಲಸ ಮಾಡುವುದು ಅಥವಾ ಓದು ಬರಹವನ್ನು ಅಭ್ಯಸಿಸುತ್ತಿದ್ದರೆ ಕಾಂತೀಯ ಬಲವು ಇಲ್ಲಿ ಪ್ರಬಲವಾಗಿದ್ದು ಇದರಿಂದಾಗಿ ಉತ್ತಮ ಗ್ರಹಿಸುವಿಕೆ ದೊರೆತು ಮತ್ತು ಸ್ಮರಣ ಶಕ್ತಿ ಹೆಚ್ಚುವುದು.

9.ಮಲಗುವ ಕೋಣೆಯಲ್ಲಿರಿಸಿದ ಟಿ.ವಿ ಅಥವಾ ಕಂಪ್ಯೂಟರ್‌ನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಇಂತಹ ಉಪಕರಣಗಳಿಂದ ಹೊರ ಸೂಸುವ ವಿಕಿರಣಗಳು ಕೋಣೆಯ ಚೈತನ್ಯವನ್ನು ಕಡಿಮೆ ಮಾಡಿ ಅಸ್ವಸ್ತತೆಗೆ ಎಡೆ ಮಾಡುವ ಸಾಧ್ಯತೆ ಕಂಡುಬರುತ್ತದೆ.

10. ಮನೆಯ ನೈಋತ್ಯ ಭಾಗದಲ್ಲಿರುವ ಕಿಟಕಿಗಳನ್ನು ತೆರೆದಿಡುವ ಬದಲಾಗಿ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರುವ ಕಿಟಕಿಗಳನ್ನು ತೆರೆದಿಟ್ಟರೆ ಉತ್ತಮ ಆರೋಗ್ಯ ಮತ್ತು ಕುಟುಂಬದಲ್ಲಿ ಏಕತೆ ನೆಲೆಗೊಳ್ಳುತ್ತದೆ.

Saturday, 28 April 2018

ಮನೆಯ ಎದುರಿಗೇ ರಸ್ತೆ ಇರಬಹುದಾ?

ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು, ಛೇದಿಸಿರುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ರಸ್ತೆಗಳು ಯಾವಾಗಲೂ ಸಾರ್ವಜನಿಕರು ಓಡಾಡುವ ಜಾಗವಾದರೂ ಓಡಾಡುವ ಜನರ ದೃಷ್ಟಿ ಚಿಂತನ ಸ್ವಭಾವಗಳು ಅಲ್ಲಿನ ಸಮೀಪದ ಮನೆಗಳ ಮೇಲೂ ಪ್ರಭಾವ ಬೀರುತ್ತವೆ.
 ರಸ್ತೆಗಳ ಸಂಖ್ಯೆಯು ತನ್ನದೇ ಆದ ಪ್ರಭಾವವನ್ನು ಮನೆಯ ಯಜಮಾನನ ಸಂಖ್ಯಾಭಾವಗಳ ಮೇಲೆ ತನ್ನದೇ ಆದ ಹಿಡಿತಗಳನ್ನು ಹೊಂದಿರುತ್ತದೆ. ರಸ್ತೆಗಳ ನಿರ್ಮಾಣದ ರೀತಿ ನೀತಿಗಳು ಪ್ರಮುಖವೇ ಆಗಿವೆ. ಇದರಿಂದಾಗಿ ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು ಛೇದಿಸುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ನಿಮ್ಮ ಮನೆಗೆ ಉತ್ತರಕ್ಕೋ ಪೂರ್ವಕ್ಕೋ ಇರುವ ರಸ್ತೆಗಳು ಉತ್ತಮ ಹಾಗೂ
ಅದೃಷ್ಟವೇ ಸರಿ. ನೀವು ಪೂರ್ವದಿಂದ ಸಂಚರಿಸಿ ಆಗ್ನೇಯಕ್ಕೆ ಹೊರಳಿಕೊಳ್ಳುವಂತಿದ್ದರೆ
ಇದು ಮನಸ್ಸಿನ ಸಮಾಧಾನಕ್ಕೆ ಯೋಗ್ಯ. ನಿಮ್ಮ ಮನೆಯ ಭಾಗದಿಂದ ನೇರವಾಗಿ ಈಶಾನ್ಯ ಪೂರ್ವ ಉತ್ತರದಿಕ್ಕುಗಳನ್ನು ಕ್ರಮಿಸುವ ರೀತಿಯ ರಸ್ತೆ ಇದ್ದರೆ ಅದು ಚೆಂದ ಹಾಗೂ ಅಪೇಕ್ಷಣೀಯ. ರಸ್ತೆಯಲ್ಲಿ ಜನನಿಬಿಡ ದಟ್ಟಣೆ ಉಪಯುಕ್ತ. ಮನೆಯೆದುರು ಇರುವ ಪೂರ್ವ ರಸ್ತೆಗೆ ಪೂರ್ವದ ಕಡೆಯನ್ನು ಒಳಗೊಳ್ಳುವ ಈಶಾನ್ಯ ದಿಕ್ಕಿಗೆ ಗೇಟ್‌ ಇಡುವುದು ಉತ್ತಮ. ಕೇವಲ ಪೂರ್ವಕ್ಕೇ ನೇರ ದಟ್ಟ ಸಾಂದ್ರ ಗೇಟು ರಚಿಸುವುದೂ ಒಳ್ಳೆಯದೇ.

ದಕ್ಷಿಣದ ಕಡೆಯ ರಸ್ತೆ ಇದ್ದರೆ ದಕ್ಷಿಣವೂ ದಕ್ಷಿಣಭಾಗವೂ ಹೆಚ್ಚಿನಂಶ ಸಿಗುವಂತ ಆಗ್ನೇಯ ದಿಕ್ಕಲ್ಲಿ ಗೇಟ್‌ ಉತ್ತಮ. ದಕ್ಷಿಣವನ್ನೇ ಪೂರ್ತಿ ಬಳಸಿಕೊಳ್ಳುವುದಾದರೆ ನಡುವೆ ದಕ್ಷಿಣದ ಸಾಂದ್ರತೆ ಉತ್ತಮ. ಪಶ್ಚಿಮದ ರಸ್ತೆ ಇದ್ದಲ್ಲಿ ನೇರ ಪಶ್ಚಿಮದ ನಡುಭಾಗದ ಗೇಟ್‌ ಸ್ವಾಗತಾರ್ಹ. ಇಲ್ಲಾ ಪಶ್ಚಿಮವು ಅಧಿಕವಾಗಿ ದೊರಕುವ ವಾಯವ್ಯ ಭಾಗದಲ್ಲಿ ಗೇಟ್‌ ಇರುವಂತಾಗಲಿ. ಉತ್ತರದ ಕಡೆಯ ರಸ್ತೆ ಇದ್ದರೆ ನೇರ ಉತ್ತರದ ನಡುಭಾಗದಲ್ಲಿ ಗೇಟ್‌ ಇರಲಿ. ಇಲ್ಲವೇ ಉತ್ತರ ವಿಸ್ತಾರಕ್ಕೆ ಒಳಗೊಳ್ಳುವಂತೆ ಈಶಾನ್ಯದಲ್ಲಿ ಗೇಟು ಕೂಡಿಬರಲಿ.
ಗೇಟುಗಳು ಯಾವಾಗಲೂ ಸಂರಕ್ಷಣಾ ಘಟಕಗಳಾಗಿ ತಮ್ಮ ಕಾರ್ಯ ನಿರ್ವಹಿಸುತ್ತವೆ.
ಇವುಗಳ ಬಣ್ಣ, ದಪ್ಪ ಎತ್ತರ ಅಗಲಗಳು ಮನೆಯ ವಿಸ್ತಾರವನ್ನೂ ಒಟ್ಟೂ ವಿಸ್ತೀರ್ಣವನ್ನು ಅನುಲಕ್ಷಿಸಿ ಅಳತೆಗಳನ್ನು ಹೊಂದಿರಬೇಕಾದ್ದು ಜರೂರಾಗಿದೆ.

ಹೊಸ ಕಾಲವು ಈಗ ಮಾಡ್ರನ್‌ ಎಂಬ ಹೆಸರಿನಲ್ಲಿ ಚಿತ್ರ ರೀತಿಯ ಪಟ್ಟಿ ವರ್ತುಲಗಳ ಚೌಕಗಳನ್ನೊಳಗೊಂಡ ಗೇಟುಗಳನ್ನು ಬಳಸುವ ವಿಚಾರಗಳನ್ನು ಹುಟ್ಟು ಹಾಕುತ್ತದೆ. ಗೇಟ್‌ ಎಂಬುದು ನಮ್ಮ ಧನಶಕ್ತಿಯನ್ನು ತೋರಿಸುವ ಆಡಂಬರ ಹೊಂದಿರುವುದು ಅವಶ್ಯಕವಾಗಿಲ್ಲ. ಗೇಟುಗಳು ಹೊರಭಾಗದ ಸುರಕ್ಷಿತ ದೂರವಾದ ಸ್ಪಂದನಗಳನ್ನು ತಡೆಗಟ್ಟುವಂತಿರಬೇಕು. ಪೂರ್ತಿ ಗೇಟ್‌ ದಪ್ಪ ಒಂದೇ ಮರದ ಪಟ್ಟಿಯಿಂದಾಗಲೀ ಕಬ್ಬಿಣದ ಫ್ರೆàಮ್‌ ನಿಂದಾಗಲೀ ಇರುವುದು ಸೂಕ್ತವಲ್ಲ. ಮನೆಯೊಳಗಿನಿಂದಲೇ ಗೇಟಿನಾಚೆಗೆ ಕಾಣುವ ಹಾಗೆ ನಡುನಡುವೆ ಖಾಲಿಯಾಗಿ ಸರಳು ಪಟ್ಟಿಗಳಿಂದ ರಚನೆಗೊಂಡಿರಲಿ. ಇಲ್ಲಿನ ಪಟ್ಟಿಗಳು ಡೈಮಂಡ್‌, ಸ್ವಸ್ತಿಕ್‌, ಮಂಡಲಾಕೃತಿಗಳನ್ನು ತ್ರಿಶೂಲ, ಸುಭ್ರಮ್ಯಣ್ಯ ಕರಶೂಲ ಇತ್ಯಾದಿ ಆಕೃತಿಗಳನ್ನು ಹೊಂದಿದ್ದರೆ ಶುಭ.

ಮನೆಯ ಎದುರಿಗೆ ರಸ್ತೆ ಎಡಬಲಕ್ಕೆ ಇರದೆ ನೇರವಾಗಿ ಇದ್ದಿದ್ದರೆ ವಾಸ್ತು ಗಣಪತಿಯನ್ನು ಗೇಟಿನ ಇಕ್ಕೆಲದ ಒಂದು ಭಾಗ ಮುಖ್ಯವಾಗಿ ಬಲಗಡೆಗೆ ಇಡುವುದು ಸೂಕ್ತ. ವಾಸ್ತು ಪುರುಷನ ಮಂಡಲ ಕಾಂತಿ ರಚನಾ ಶೈಲಿಯ ಬಣ್ಣಗಳ ಚಿತ್ರ ಇರುವುದೂ ಉತ್ತಮವೇ. ಒಟ್ಟಿನಲ್ಲಿ ಈ ಚಿತ್ರಗಳು ಗಣಪನ ಉಪಸ್ಥಿತಿಗಳು ಅಶುಭವನ್ನು ನಿಯಂತ್ರಿಸಿ ವಾಸ್ತವಕ್ಕೆ ಅನಿವಾರ್ಯವಾದ ಸಾಮಾಜಿಕತೆಗೆ ಯಶಸ್ಸಿನ ಆವರಣ ಒದಗಿಸಲು ಕ್ಷಿಪ್ರ ಒಳದಾರಿಗಳಾಗಿ ಪರಿವರ್ತನೆ ಆಗುತ್ತದೆ.


Thursday, 5 April 2018

ವಾಸ್ತು ಮನದ ಮೂಲೆಯ ಭಯಕ್ಕೆ ಕಾರಣವಾಗದಿರಲಿ

ಜಗತ್ತು ಬಹುವಿಧದಲ್ಲಿ ವೈವಿಧ್ಯಪೂರ್ಣತೆಯಿಂದ ತುಂಬಿದೆ. ಜೀವಜಂತುಗಳನ್ನು ಲಕ್ಷಗಟ್ಟಲೆ ಪ್ರಬೇಧಗಳನ್ನು ಹೊಂದಿದೆ. ಸ್ವಭಾವದಲ್ಲಿ ಒಂದು ಜೀವದ ವಿಧಾನ ಇನ್ನೊಂದಕ್ಕೆ ವಿರೋಧಿಯಾಗುತ್ತದೆ. ಗಂಡ ಹೆಂಡತಿಯರೇ ಆದರೂ ಹೊಂದಾಣಿಕೆಗೆ ಕಷ್ಟವಾಗುತ್ತದೆ. ನೀರಿಗಿಂತ ರಕ್ತ ಹೆಚ್ಚು ಸಾಂದ್ರತೆಯದ್ದಾದರೂ ತಂದೆ ಮಕ್ಕಳಿಗೇ ಹೊಂದಾಣಿಕೆ ಬರಲಾರದು. ಮನದೊಳಗೆ ಪ್ರೀತಿಯಿದ್ದರೂ ಹೊರಗೆ ಕಟುವಾಗಿ ವರ್ತಿಸುವ ಮಂದಿ. ಏನೋ ಅಹಂ ಒಂದು ಒಳಗೆ ಸುರಕ್ಷಿತ. ಹೇಳುವುದು ಆಚಾರ ತಿನ್ನುವುದು ಬದನೆಕಾಯಿ ಎಂಬ ಮಾತು ಪ್ರತಿದಿನ ನಮ್ಮ ಗಮನಕ್ಕೆ ಬರುತ್ತಿರುತ್ತದೆ.  ಬೇರೆಯವರು ತಿನ್ನುವ ಬದನೆಕಾಯಿ ಬಗ್ಗೆ ತಿಳಿಯುವ ಜಾಣತನ ನಮಗಿದೆ. ನಮ್ಮದನ್ನು ನಾವು ವೈಯುಕ್ತಿಕವಾಗಿ ಗಮನಿಸಲಾರೆವು. ಇದೊಂದು ಚೋದ್ಯ. ಹೀಗಾಗಿ ಆಹಾರ, ನಿದ್ರಾ, ಮೈಥುನಾದಿ ಅವಶ್ಯಕತೆಗಳ ಮೂಲಭೂತ ವಿಚಾರಗಳೊಂದಿಗೆ ಭಯವೂ, ಪ್ರಾಣಗಳನ್ನು ಮಾನವನೂ ಒಂದು ಪ್ರಾಣಿಯಾದ್ದರಿಂದ ಅದು ನಮ್ಮನ್ನು ಸುತ್ತಿಕೊಂಡಿತು.

 ಹೀಗಾಗಿ ಆಹಾರ ನಿದ್ರಾ ಭಯ ಮೈಥುನಗಳು ನಮಗೆ ಅನಿವಾರ್ಯ. ಆಹಾರಕ್ಕಾಗಿ ಶ್ರಮ ಬೇಕು. ಶ್ರಮದ ಕಾರಣದಿಂದ ನಿದ್ರೆ ಬೇಕು. ಜೀವ ಜಾಲರಿಯಲ್ಲಿ ಜೀವಗಳ ಕೋಟಿ ಕೋಟಿ ಮಿಸುಕಾಟಗಳು ಕಾಮದ ನೀಲಾಂಜನದ ಬತ್ತಿ ಉರಿಸಿ ಮೈಥುನವನ್ನು ಅನಿವಾರ್ಯವಾಗಿಸಿತು. ನಮ್ಮನ್ನು ನಾವು ಪುನರ್‌ ರೂಪಿಸಿಕೊಳ್ಳುವ ಸಂತಾನಾಭಿವೃದ್ಧಿ ಅತ್ಯಗತ್ಯವಾದ ವಿಷಯ. ಈ ಎಲ್ಲದರ ನಡುವೆ ಏನೋ ಭಯ ಆತಂಕ ಅಸುರಕ್ಷತೆ ಪಾಪಭೀತಿ ಬೆನ್ನು ಬಿಡದು.

 ಈ ಕಾರಣದಿಂದಲೇ ಮೆದುಳಿನ ಸರ್ವೋತ್ಕೃಷ್ಟ ಬೆಳವಣಿಗೆಗೆ ಅವಕಾಶ ಒದಗಿದ್ದು ನೆಲೆಗಟ್ಟಾಗಿ ಮಾನವ ಸಾಮಾಜಿಕ ಜೀವಿಯಾದ. ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳಲು ಮನೆ, ವಠಾರ, ಬೀದಿ, ಊರು, ರಾಜ್ಯ, ಮೋಹ, ಸ್ವಾರ್ಥ, ಅತಿಯಾದ ವಿಷಯಾಸಕ್ತಿ, ಹೊನ್ನು ಮಣ್ಣುಗಳಿಗಾಗಿನ ಅತಿಯಾದ ಆಕಾಂಕ್ಷೆ, ಹೆಣ್ಣು ಗಂಡಿಗೆ ಗಂಡು ಹೆಣ್ಣಿಗೆ ಮಾಯೆಯಾಗಿ ಒದಗಿ ಚಿಮ್ಮುವ ಭೋಗಕ್ಕಾಗಿನ ಲಾಲಸೆ ಇತ್ಯಾದಿ ಇತ್ಯಾದಿ ಮನುಷ್ಯ ಮನುಷ್ಯನಾಗಲು ಬಿಡಲಿಲ್ಲ. ಮನುಷ್ಯನಾಗದೆ ಬದುಕಿ ಬಾಳಲು ಸಾಧ್ಯವಾಗಲಿಲ್ಲ.

 ಈ ಸಂದರ್ಭದಲ್ಲಿ ಮನುಷ್ಯನ ನೆರವಿಗೆ ಬಂದದ್ದು ಅವನೊಳಗಿನ ಪ್ರತಿಭೆ. ಮಾತು, ಸಂಗೀತ, ನೃತ್ಯ ಶಿಲ್ಪ ಸಂಗೀತ ಕಸೂತಿ ಕುಸುರೀ ಕಲೆ, ಉಡುಪು, ಒಡವೆ, ಸುಗಂಧ, ಹೂವು ಹಣ್ಣು , ಅಡುಗೆ ಇತ್ಯಾದಿ ಇತ್ಯಾದಿ. ಆದರೆ ಇವನ್ನೆಲ್ಲಾ ಪ್ರತಿಭೆಯ ಮೂಲಕ ಸಾಂಸ್ಕೃತಿಕ ಸಂವಿಧಾನಕ್ಕೆ ಒಳಪಡಿಸಿದ ಮನುಷ್ಯ ತನ್ನ ಸಂವಿಧಾನದಲ್ಲಿ ತಾನು ಬಂಧಿಯಾಗಿರಲೂ ಬಯಸದ ಮೃಗೀಯತೆಯನ್ನು ಬಿಡದಾದ. ಹೀಗಾಗಿ ಅಸಂತೋಷಗಳಿಗೆ ಕಾತರ ಕಿರಿಕಿರಿ ಮಾನಸಿಕ ವಿಹ್ವಲತೆಗಳಿಂದ ನರಳಲ್ಪಟ್ಟ. ಹಾಗಾದರೆ ಮನುಷ್ಯನ ಮೇಲೆ ಕೇವಲ ಅವನ ಇಚ್ಛಾಶಕ್ತಿ ಸ್ಥೈರ್ಯ, ಧೈರ್ಯಗಳು ಮಾತ್ರ ಇದ್ದರೆ ಎಲ್ಲವೂ ಸುಸೂತ್ರವೇ. ಇಲ್ಲ ಎಂಬುದು ಉತ್ತರವಾದಾಗ ಹಾಗಾದರೆ ಏನು ಎಂಬ ಪ್ರಶ್ನೆ ಎದುರಾಯ್ತು.

 ದೇವರು ಗ್ರಹಗಳ ಪ್ರಭಾವ, ವಾಸ್ತು ಪರಿಶುದ್ಧತೆ, ಸತ್ಯ, ನ್ಯಾಯ, ಧರ್ಮಗಳೆಂಬ ವೈಚಾರಿಕ ಮಂಥನ ಮನುಷ್ಯನಿಂದ ತನ್ನ ನೆಲೆ ಕಂಡುಕೊಳ್ಳಲು ಪ್ರಾರಂಭವಾಯ್ತು. ಆದರೆ ದೇವರುಗಳ ಬಗೆಗೆ, ಗ್ರಹಗಳ ಬಗೆಗೆ ಭಯ ಹುಟ್ಟಿಸುವ ಬುದ್ದಿವಂತರು ಧನದಾಹಕ್ಕೆ ತುತ್ತಾಗೆ ಕ್ರೂರಿಗಳಾದರು. ಇದರ ಅರ್ಥ ಎಲ್ಲರೂ ಎಂದಲ್ಲ. ಹೀಗಾಗಿ ಮನುಷ್ಯ ಮನುಷ್ಯನಾಗಬೇಕೇ ವಿನಃ ದೇವರೂ ಆಗಬಾರದು. ಮೃಗವೂ ಆಗಬಾರದು. ವಾಸ್ತು ಶಿಸ್ತು ಅಗತ್ಯ. ಅದಿರದಿದ್ದಲ್ಲಿ ಮನೆಯ ಪ್ರಸನ್ನತೆ ಏರುಪೇರಾಗುತ್ತದೆ. ಆದರೆ ನಿಧಾನವಾಗಿ ಸರಿಯಾಗಿ ತಿಳಿದವರಿಂದ ಒಂದೇಟಿಗೆ ಎಂಬಂತೆ ಅವಸರವನ್ನು ತೋರದೆ ವಾಸ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು. ಇದನ್ನು ಬಿಟ್ಟು ಒಳ ಹೃದಯದಾಳದಲ್ಲಿ ಅವ್ಯಕ್ತ ಭಯ ಪಟ್ಟುಕೊಂಡು ಅಸ್ತವ್ಯಸ್ತವಾಗದಿರಿ. ನಿಮ್ಮ ಮನಸ್ಸು ದೃಢವಾಗಿರಲಿ. ಪ್ರತಿ ಹಂತಗಳನ್ನು ನಿಧಾನವಾಗಿ ದಾಟಿ ಒಳಿತುಗಳಿಗೆ ಭಯ ತೊರೆದು ದಾರಿ ಮಾಡಿಕೊಡಿ.


Monday, 2 April 2018

ದಿಢೀರ್ ಶ್ರೀಮಂತರಾಗಬೇಕೆ ಇಲ್ಲಿದೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಕಾರಿದ್ದರೆ, ವಿಮಾನದಂತೆ ಮೇಲೆ ಹಾರಬೇಕೆಂದು ನೀವು ಅದರಿಂದ ನಿರೀಕ್ಷಿಸುವಂತಿಲ್ಲ. ಅದೇ ರೀತಿ ಒಳ್ಳೆಯ ವಾಸ್ತು ಕೂಡ ನಿಮ್ಮ ಹಣಕಾಸು ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುತ್ತದೆ.
 1.ಹಣ ಮತ್ತು ಆಭರಣಗಳನ್ನು ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು.

2. ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ.

3.ದಕ್ಷಿಣದಲ್ಲಿ ಕೊಳವೆ ಬಾವಿ ಅಥವಾ ಟ್ಯೂಬ್ ಬಾವಿ ಇದ್ದರೆ ಅದು ಆರ್ಥಿಕ ಶಕ್ತಿಗೆ ಹಾನಿಕಾರಕ.

4. ದಕ್ಷಿಣದಲ್ಲಿ ಭೂಗತ ಟ್ಯಾಂಕ್ ಅಥವಾ ಹೊಂಡವು ಹಣಕಾಸಿಗೆ ತುಂಬ ಹಾನಿಕಾರಕ. ಕೆಲವು ದೇವ, ದೇವತೆಗಳ ಚಿತ್ರ ಮತ್ತು ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಮನೆಗೆ ಸಿಗಬಹುದು.

5. ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ತುಂಬ ಒಳ್ಳೆಯದು.

6. ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆಯಿರುವುದು ತುಂಬ ಒಳ್ಳೆಯದು.

7. 9 ಗೋಲ್ಡ್‌ಫಿಷ್ ಮತ್ತು ಒಂದು ಕಪ್ಪು ಮೀನಿನ ಮತ್ಸ್ಯಾಲಯ ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಮ‌ೂಲೆಯಲ್ಲಿರುವುದು ತುಂಬ ಒಳ್ಳೆಯದು.


ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...