Saturday, 28 April 2018

ಮನೆಯ ಎದುರಿಗೇ ರಸ್ತೆ ಇರಬಹುದಾ?

ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು, ಛೇದಿಸಿರುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ರಸ್ತೆಗಳು ಯಾವಾಗಲೂ ಸಾರ್ವಜನಿಕರು ಓಡಾಡುವ ಜಾಗವಾದರೂ ಓಡಾಡುವ ಜನರ ದೃಷ್ಟಿ ಚಿಂತನ ಸ್ವಭಾವಗಳು ಅಲ್ಲಿನ ಸಮೀಪದ ಮನೆಗಳ ಮೇಲೂ ಪ್ರಭಾವ ಬೀರುತ್ತವೆ.
 ರಸ್ತೆಗಳ ಸಂಖ್ಯೆಯು ತನ್ನದೇ ಆದ ಪ್ರಭಾವವನ್ನು ಮನೆಯ ಯಜಮಾನನ ಸಂಖ್ಯಾಭಾವಗಳ ಮೇಲೆ ತನ್ನದೇ ಆದ ಹಿಡಿತಗಳನ್ನು ಹೊಂದಿರುತ್ತದೆ. ರಸ್ತೆಗಳ ನಿರ್ಮಾಣದ ರೀತಿ ನೀತಿಗಳು ಪ್ರಮುಖವೇ ಆಗಿವೆ. ಇದರಿಂದಾಗಿ ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು ಛೇದಿಸುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ನಿಮ್ಮ ಮನೆಗೆ ಉತ್ತರಕ್ಕೋ ಪೂರ್ವಕ್ಕೋ ಇರುವ ರಸ್ತೆಗಳು ಉತ್ತಮ ಹಾಗೂ
ಅದೃಷ್ಟವೇ ಸರಿ. ನೀವು ಪೂರ್ವದಿಂದ ಸಂಚರಿಸಿ ಆಗ್ನೇಯಕ್ಕೆ ಹೊರಳಿಕೊಳ್ಳುವಂತಿದ್ದರೆ
ಇದು ಮನಸ್ಸಿನ ಸಮಾಧಾನಕ್ಕೆ ಯೋಗ್ಯ. ನಿಮ್ಮ ಮನೆಯ ಭಾಗದಿಂದ ನೇರವಾಗಿ ಈಶಾನ್ಯ ಪೂರ್ವ ಉತ್ತರದಿಕ್ಕುಗಳನ್ನು ಕ್ರಮಿಸುವ ರೀತಿಯ ರಸ್ತೆ ಇದ್ದರೆ ಅದು ಚೆಂದ ಹಾಗೂ ಅಪೇಕ್ಷಣೀಯ. ರಸ್ತೆಯಲ್ಲಿ ಜನನಿಬಿಡ ದಟ್ಟಣೆ ಉಪಯುಕ್ತ. ಮನೆಯೆದುರು ಇರುವ ಪೂರ್ವ ರಸ್ತೆಗೆ ಪೂರ್ವದ ಕಡೆಯನ್ನು ಒಳಗೊಳ್ಳುವ ಈಶಾನ್ಯ ದಿಕ್ಕಿಗೆ ಗೇಟ್‌ ಇಡುವುದು ಉತ್ತಮ. ಕೇವಲ ಪೂರ್ವಕ್ಕೇ ನೇರ ದಟ್ಟ ಸಾಂದ್ರ ಗೇಟು ರಚಿಸುವುದೂ ಒಳ್ಳೆಯದೇ.

ದಕ್ಷಿಣದ ಕಡೆಯ ರಸ್ತೆ ಇದ್ದರೆ ದಕ್ಷಿಣವೂ ದಕ್ಷಿಣಭಾಗವೂ ಹೆಚ್ಚಿನಂಶ ಸಿಗುವಂತ ಆಗ್ನೇಯ ದಿಕ್ಕಲ್ಲಿ ಗೇಟ್‌ ಉತ್ತಮ. ದಕ್ಷಿಣವನ್ನೇ ಪೂರ್ತಿ ಬಳಸಿಕೊಳ್ಳುವುದಾದರೆ ನಡುವೆ ದಕ್ಷಿಣದ ಸಾಂದ್ರತೆ ಉತ್ತಮ. ಪಶ್ಚಿಮದ ರಸ್ತೆ ಇದ್ದಲ್ಲಿ ನೇರ ಪಶ್ಚಿಮದ ನಡುಭಾಗದ ಗೇಟ್‌ ಸ್ವಾಗತಾರ್ಹ. ಇಲ್ಲಾ ಪಶ್ಚಿಮವು ಅಧಿಕವಾಗಿ ದೊರಕುವ ವಾಯವ್ಯ ಭಾಗದಲ್ಲಿ ಗೇಟ್‌ ಇರುವಂತಾಗಲಿ. ಉತ್ತರದ ಕಡೆಯ ರಸ್ತೆ ಇದ್ದರೆ ನೇರ ಉತ್ತರದ ನಡುಭಾಗದಲ್ಲಿ ಗೇಟ್‌ ಇರಲಿ. ಇಲ್ಲವೇ ಉತ್ತರ ವಿಸ್ತಾರಕ್ಕೆ ಒಳಗೊಳ್ಳುವಂತೆ ಈಶಾನ್ಯದಲ್ಲಿ ಗೇಟು ಕೂಡಿಬರಲಿ.
ಗೇಟುಗಳು ಯಾವಾಗಲೂ ಸಂರಕ್ಷಣಾ ಘಟಕಗಳಾಗಿ ತಮ್ಮ ಕಾರ್ಯ ನಿರ್ವಹಿಸುತ್ತವೆ.
ಇವುಗಳ ಬಣ್ಣ, ದಪ್ಪ ಎತ್ತರ ಅಗಲಗಳು ಮನೆಯ ವಿಸ್ತಾರವನ್ನೂ ಒಟ್ಟೂ ವಿಸ್ತೀರ್ಣವನ್ನು ಅನುಲಕ್ಷಿಸಿ ಅಳತೆಗಳನ್ನು ಹೊಂದಿರಬೇಕಾದ್ದು ಜರೂರಾಗಿದೆ.

ಹೊಸ ಕಾಲವು ಈಗ ಮಾಡ್ರನ್‌ ಎಂಬ ಹೆಸರಿನಲ್ಲಿ ಚಿತ್ರ ರೀತಿಯ ಪಟ್ಟಿ ವರ್ತುಲಗಳ ಚೌಕಗಳನ್ನೊಳಗೊಂಡ ಗೇಟುಗಳನ್ನು ಬಳಸುವ ವಿಚಾರಗಳನ್ನು ಹುಟ್ಟು ಹಾಕುತ್ತದೆ. ಗೇಟ್‌ ಎಂಬುದು ನಮ್ಮ ಧನಶಕ್ತಿಯನ್ನು ತೋರಿಸುವ ಆಡಂಬರ ಹೊಂದಿರುವುದು ಅವಶ್ಯಕವಾಗಿಲ್ಲ. ಗೇಟುಗಳು ಹೊರಭಾಗದ ಸುರಕ್ಷಿತ ದೂರವಾದ ಸ್ಪಂದನಗಳನ್ನು ತಡೆಗಟ್ಟುವಂತಿರಬೇಕು. ಪೂರ್ತಿ ಗೇಟ್‌ ದಪ್ಪ ಒಂದೇ ಮರದ ಪಟ್ಟಿಯಿಂದಾಗಲೀ ಕಬ್ಬಿಣದ ಫ್ರೆàಮ್‌ ನಿಂದಾಗಲೀ ಇರುವುದು ಸೂಕ್ತವಲ್ಲ. ಮನೆಯೊಳಗಿನಿಂದಲೇ ಗೇಟಿನಾಚೆಗೆ ಕಾಣುವ ಹಾಗೆ ನಡುನಡುವೆ ಖಾಲಿಯಾಗಿ ಸರಳು ಪಟ್ಟಿಗಳಿಂದ ರಚನೆಗೊಂಡಿರಲಿ. ಇಲ್ಲಿನ ಪಟ್ಟಿಗಳು ಡೈಮಂಡ್‌, ಸ್ವಸ್ತಿಕ್‌, ಮಂಡಲಾಕೃತಿಗಳನ್ನು ತ್ರಿಶೂಲ, ಸುಭ್ರಮ್ಯಣ್ಯ ಕರಶೂಲ ಇತ್ಯಾದಿ ಆಕೃತಿಗಳನ್ನು ಹೊಂದಿದ್ದರೆ ಶುಭ.

ಮನೆಯ ಎದುರಿಗೆ ರಸ್ತೆ ಎಡಬಲಕ್ಕೆ ಇರದೆ ನೇರವಾಗಿ ಇದ್ದಿದ್ದರೆ ವಾಸ್ತು ಗಣಪತಿಯನ್ನು ಗೇಟಿನ ಇಕ್ಕೆಲದ ಒಂದು ಭಾಗ ಮುಖ್ಯವಾಗಿ ಬಲಗಡೆಗೆ ಇಡುವುದು ಸೂಕ್ತ. ವಾಸ್ತು ಪುರುಷನ ಮಂಡಲ ಕಾಂತಿ ರಚನಾ ಶೈಲಿಯ ಬಣ್ಣಗಳ ಚಿತ್ರ ಇರುವುದೂ ಉತ್ತಮವೇ. ಒಟ್ಟಿನಲ್ಲಿ ಈ ಚಿತ್ರಗಳು ಗಣಪನ ಉಪಸ್ಥಿತಿಗಳು ಅಶುಭವನ್ನು ನಿಯಂತ್ರಿಸಿ ವಾಸ್ತವಕ್ಕೆ ಅನಿವಾರ್ಯವಾದ ಸಾಮಾಜಿಕತೆಗೆ ಯಶಸ್ಸಿನ ಆವರಣ ಒದಗಿಸಲು ಕ್ಷಿಪ್ರ ಒಳದಾರಿಗಳಾಗಿ ಪರಿವರ್ತನೆ ಆಗುತ್ತದೆ.


No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...