Thursday, 3 May 2018

ಮನೆ ಮತ್ತು ನಿವೇಶನದ ತಾಳಮೇಳ ಹೇಗಿರಬೇಕು?

ಬಹಳ ಜನರು ಸೈಟುಗಳ ಬಗೆಗೆ ಮನೆಗಳ ಬಗೆಗೆ ತಿರುತಿರುಗಿ ಅದೇ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಒಟ್ಟಿನಲ್ಲಿ ಜನರಿಗೆ ತಮ್ಮ ಸೈಟು ಚೆನ್ನಾಗಿದೆ, ವಾಸ್ತುವಿನ ಪ್ರಕಾರ ಸಮರ್ಪಕವಾಗಿದೆ ಎಂಬ ಉತ್ತರ ಬೇಕು. ಒಮ್ಮೊಮ್ಮೆ ತಮ್ಮ ಎಲ್ಲಾ ಕಷ್ಟಗಳಿಗೂ ವಾಸ್ತು ದೋಷಗಳೇ ಕಾರಣ. ಮನೆಯ ವಾಸ್ತು ಅವ್ಯವಸ್ಥೆಗಳನ್ನು ಮುಂದೆ ಮಾಡಿಕೊಂಡು ಕೊರಗುತ್ತಿರುತ್ತಾರೆ. ಸೈಟಿನ ಉತ್ತಮ ಅಥವಾ ದೌರ್ಬಲ್ಯದ ಕುರಿತು ಸೈಟಿನ ಸಂಬಂಧ ರಸ್ತೆಯ ಜೊತೆ ಹೇಗೆ ಹೊಂದಿಕೊಂಡಿದೆ ಎಂಬುದರ ಮೆಲೆ ನಿರ್ಧರಿಸಬಹುದು. ಈ ಕುರಿತಾಗಿ ಸೂಕ್ತವಾದ ವಿಶ್ಲೇಷಣೆಯ ಅವಶ್ಯಕತೆ ಇದೆ. ಜನರು ಒಂದೇ ಸಮನೆ ಸಣ್ಣ ತೊಂದರೆಯ ಬಗೆಗೂ ತಲ್ಲಣಿಸಬಾರದು. ಒಂದು ಫ್ಲಾಟ್‌ ಬೇರೆಬೇರೆ ಕಾರಣಗಳಿಗಾಗಿ ತನ್ನ ಸಂಪನ್ನತೆ ಪಡೆಯುತ್ತದೆ. ಎದುರಾಗುವ ರಸ್ತೆ ಕೂಡಾ ಮುಖ್ಯವಾಗುತ್ತದೆ.

ಉದಾಹರಣೆಗೆ ಒಬ್ಬ ಯಜಮಾನ ತನ್ನ ಕುಂಡಲಿಯ ವಿಚಾರದಲ್ಲಿ ಅಸಮತೋಲನ ಎದ್ದೇಳತೊಡಗಿದಾಗ ಮನೆ ಅಥವಾ ಮನೆಯ ನಿವೇಶನದ ಸ್ವರೂಪ ಮನೆಯ ಫ್ಲಾಟ್‌ಗೆ ಎದುರಾದ ರಸ್ತೆಯ ದಿಕ್ಕು ಸೂಕ್ತವಾಗಿದ್ದರೂ ಕಷ್ಟಗಳು ಎದುರಾದೀತು. ತಮ್ಮ ಕಷ್ಟಗಳಿಗೆಲ್ಲಾ ಮನೆಯ ವಾಸ್ತು ದೋಷವೇ ಎಂದು ತಿಳಿಯಬೇಕಿಲ್ಲ. ನಾಲ್ಕು ದಶಕಗಳ ಹಿಂದೆ ರಾಜೇಶ್‌ ಖನ್ನಾ ಕೀರ್ತಿ ಶೀಖರಕ್ಕೆ ಏರತೊಡಗಿದ ಹೊತ್ತು. ಅಂದಿನ ಸೂಪರ್‌ ಸ್ಟಾರ್‌ ಎಂದು ಸುಮಾರಾಗಿ ಕರೆಯಬಹುದಾಗಿದ್ದ ರಾಜೇಂದ್ರ ಕುಮಾರ್‌ ಅವರಿಂದ ರಾಜೇಶ್‌ ಖನ್ನಾ ಅವರು ಆಶೀರ್ವಾದ್‌ ಎಂಬ ಬಂಗಲೆಯೊಂದನ್ನು ಖರೀದಿಸಿದ್ದರು. ಆಶೀರ್ವಾದಕ್ಕೆ ಬಂದ ರಾಜೇಶ್‌ ಖನ್ನಾ ಆಗ ಮುಟ್ಟಿದ್ದೆಲ್ಲಾ ಚಿನ್ನವಾಗತೊಡಗಿದ್ದು ಸುಳ್ಳೆನಲ್ಲ. ಪೂರ್ಣಪ್ರಮಾಣದ ಸೂಪರ್‌ ಸ್ಟಾರ್‌ ಆಗಿ ರಾಜೇಶ್‌ ಖನ್ನಾ ಜನಪ್ರಿಯತೆಯ ಮೌಂಟ್‌ ಎವರೆಸ್ಟ್‌ ಏರಿದ್ದರು. ಆದರೆ ಕಾಲದ ಸಂಪನ್ನತೆ ಅಥವಾ ದಾರುಣತೆ ಒಂದೇ ರೀತಿಯಲ್ಲಿರಲಾರದು ಎಂಬಂತೆ ರಾಜೇಶ್‌ ಮೇಲೇರಿದಷ್ಟೇ ವೇಗದಲ್ಲಿ ಕೆಳಗಿಳಿಯ ತೊಡಗಿದ್ದಾಗಲೂ ಆಶೀರ್ವಾದ್‌ ಬಂಗಲೆಯಲ್ಲಿಯೇ ಇದ್ದರು. ಆದರೆ ಏರಲು ಇಳಿಯಲು ಖ್ಯಾತರಾಗಲು ಕೀರ್ತಿ ಪಡೆಯಲು ಧನಲಾಭ ಹೊಂದಲು ಮನೆಯ ನಿವಾಸದ ವಾಸ್ತು ಒಂದೇ ಕಾರಣವಲ್ಲ ಎಂಬುದನ್ನೂ ಆಶೀರ್ವಾದದಲ್ಲಿ ಇದ್ದೂ ಬಿಕ್ಕಟ್ಟಿಗೆ ಜಾರಿದ ಸೋಲಿಗೆ ಮುಖಮಾಡಿದ ರಾಜೇಶ್‌ ಖನ್ನಾರೇ ದೊಡ್ಡ ಸಾಕ್ಷಿ.


ಅವರ ಯಶಸ್ಸಿಗೆ ಕಾರಣವಾದ ಗ್ರಹದ ಚಲಾವಣೆ ಮುಗಿದು ದುರ್ಬಲ ಗ್ರಹವೊಂದರ ಅಧಿಪತ್ಯದ ದಶಾಕಾಲ ಬಂದಾಗ ರಾಜೇಶ್‌ ಖನ್ನಾ ಸೋಲತೊಡಗಿದ್ದರು. ಪತ್ನಿಯ ಜೊತೆಗೂ ಬಿರುಕು ಒಡಮೂಡಿತ್ತು. ಬರೀ ಸುಮ್ಮನೆ ವಾಸ್ತು ದೋಷ ವಾಸ್ತು ದೋಷ ಎಂದನ್ನುತ್ತ ಮನೆಯನ್ನು ದೂಷಿಸುತ್ತಿರಬಾರದು.ನಿಜ ಭಾರತೀಯ ವಾಸ್ತುಶಾಸ್ತ್ರ ಕೆಲವು ವಿಚಾರಗಳನ್ನು ಮನೆಯ ಸೈಟು ಎದುರಿಸುವ ದಿಕ್ಕಿನ ಮೇಲಿಂದ ಸಂಪನ್ನವಾದುದು ಸಂಪನ್ನವಾದುದಲ್ಲ ಎಂದು ಪ್ರತ್ಯೇಕಿಸಿದೆ. ಹಲವು ನಿರ್ದಿಷ್ಟ ಅಂಶಗಳನ್ನು ಈ ನಿಟ್ಟಿನಲ್ಲಿ ಸ್ಪಷ್ಟಪಡಿಸಿದೆ. ಒಂದು ಸೈಟಿಗೆ ರಸ್ತೆ ದಕ್ಷಿಣ ದಿಕ್ಕಿನಲ್ಲಿದ್ದರೆ ಕೆಲವು ತೊಂದರೆಗಳನ್ನು ಇದು ಸೃಷ್ಟಿಸುತ್ತದೆ. ದಕ್ಷಿಣದ ಹಾದಿ ಮನೆಯ ಸೈಟಿಗಿಂತ ತಗ್ಗಿನಲ್ಲಿದ್ದರೆ ಇದು ಸೂಕ್ತವಲ್ಲ. ಪೂರ್ವ ದಿಕ್ಕನ್ನು ಮುಖಮಾಡಿಕೊಂಡ ಸೈಟ್‌ ಸಾಮಾನ್ಯವಾಗಿ ಸಂಪನ್ನವಾದುದು ಎಂದು ಹೇಳಬಹುದು. ಹೀಗೆ ಮುಖಮಾಡಿದ ಮನೆಗಳು ಇತರೆ ಯಾವುದೇ ಅಡೆತಡೆಗಳಿಂದ ತೊಂದರೆಗೆ ಒಳಗಾಗುವುದಿಲ್ಲ. ನೇರವಾಗಿ ಸೂರ್ಯರಶ್ಮಿ ಪೂರ್ವ ದಿಕ್ಕಿನಿಂದ ಮನೆಯೊಳಗಡೆ ಪ್ರವೇಶೀಸುವ ತೀಕ್ಷ್ಣತೆ ಸ್ವಾಗತಾರ್ಹವಾದುದು. ಸೂರ್ಯನ ರಶ್ಮಿಗಳು ಮುತ್ತಿಕ್ಕುವ ಮನೆಯ ಪ್ರಜ್ವಲನಕ್ಕೆ ಒಂದು ರೀತಿಯ ಅನನ್ಯತೆ ಇರುತ್ತದೆ. ಉತ್ತರ ದಿಕ್ಕನ್ನು ದೃಷ್ಟಿಸುವ ಪ್ಲಾಟ್‌/ ಮನೆಗಳು ಉತ್ತಮವೇ. ಖಗೋಲ ಸಂಪನ್ನವಾದ ವಿಶ್ವವನ್ನು/ ವಿಶ್ವದಿಂದ ಸಂವೇದಿಸುವ ಶಕ್ತಿಮೂಲ ಇಂಥ ಮನೆಗಳಿಗೆ ದಕ್ಕುತ್ತದೆ ಎಂಬುದು ಆಷೇìಯ ವಿಷಯವಾಗಿದೆ. ಮುಳುಗುವ ಬಾಗಿಲಿನ ಸೌರಭ ತಟಸ್ಥವಾದ ಶಕ್ತಿಧಾತುವನ್ನು ಪಡೆದಿರುವುದರಿಂದ ನಷ್ಟಗೊಳ್ಳುವುದಾಗಲೀ, ಲಾಭಕ್ಕಾಗಿನ ಅಂಶಗಳಾಗಲೀ ಒಂದು ಇನ್ನೊಂದನ್ನು ಮೀರಿ ನಿಲ್ಲಲಾರದ ರೀತಿಯಲ್ಲಿ ಎರಡೂ ಒಂದೇ ಹದದಲ್ಲಿ ಇರುತ್ತದೆ. ವಾಸ್ತು ಶಾಸ್ತ್ರವನ್ನು ನಾವು ನಿರ್ಲಕ್ಷಿ$ಸಲಾಗದು. ಹಾಗೆಂದು ವಾಸ್ತುವಿಗೆ ವಿರುದ್ಧವಾದುದನ್ನು ಅನುಕೂಲವಾಗಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಅರಿತುಕೊಳ್ಳಬೇಕು.


No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...