Friday, 29 June 2018

ಮನೆಯ ನೈಋತ್ಯ ಮೂಲೆಯಲ್ಲೇ ಕುಟುಂಬ ಸೌಖ್ಯ

ಮನೆಯ ನೈಋತ್ಯ ಮೂಲೆಯು ಇತರ ಯಾವುದೇ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿ ಇರುವುದು ಸೂಕ್ತ. ಹಾಗೆಯೇ ಮನೆಯ ಸುತ್ತಲೂ ಕಟ್ಟುವ ಗಡಿ ಗೋಡೆಯ ವಿಚಾರದಲ್ಲಿಯೂ ನೈಋತ್ಯ ಭಾಗದ ಗಡಿಗೋಡೆ ಇತರ ದಿಕ್ಕಿಗಿಂತಲೂ ತುಸು ಹೆಚ್ಚೇ ಎತ್ತರವನ್ನು ಕಾಯ್ದುಕೊಳ್ಳಬೇಕು. ವಿಷಮತೆಗಳನ್ನು ತಂದೊಡ್ಡುವ ಸ್ಪಂದನಗಳನ್ನು ತಡೆದು ಒಳ್ಳೆಯ ಪರಿಣಾಮಗಳನ್ನು  ನಿರೀಕ್ಷಿಸಬಹುದು. ಇದರಿಂದ ಮನೆಯ ಜನರಿಗೆ ಒಳ್ಳೆಯ ಭವಿಷ್ಯಕ್ಕೆ ಇದು ಸಕಾರಾತ್ಮಕವಾಗಿರುತ್ತದೆ. 

ಹಾಗೆಯೇ ಈ ದಿಕ್ಕಿನಲ್ಲಿ ಇಡುವ ಕಬ್ಬಿಣದ ಪೆಟ್ಟಿಗೆಯ ಕುರಿತಂತೆ ಎಚ್ಚರ ಬೇಕೇ ಬೇಕು. ಉತ್ತರ ಅಥವಾ ಪೂರ್ವ ದಿಕ್ಕುಗಳಿಗೆ ಮುಖ ಮಾಡುವಂತೆ ಈ ಪೆಟ್ಟಿಗೆಗಳನ್ನು ಕೂಡಿಸಬೇಕು. ಪಶ್ಚಿಮ ಅಥವಾ ದಕ್ಷಿಣ ದಿಕ್ಕುಗಳನ್ನು ಒಳಗೊಳ್ಳುವ ಮೂಲೆಯ ಭಾಗವೇ ನೈಋತ್ಯ ದಿಕ್ಕಾಗಿದೆ. ಅಷ್ಟದಿಕಾ³ಲಕರಲ್ಲಿ ಒಬ್ಬನಾದ ನಿಯತನ ಆಳ್ವಿಕೆಗೊಳಪಟ್ಟ ದಿಕ್ಕು ಇದು. ಜೀವ ತತ್ವಕ್ಕೆ ಬೇಕಾದ ನೀರಿನ ವಿಚಾರವನ್ನು ನಿಯಂತ್ರಿಸುವ ಮೂಲೆ ಇದು. ಮನೆಯ ಕುರಿತಾದ ಮಹಡಿಯ ಮೆಟ್ಟಿಲುಗಳನ್ನು ಕೂಡಾ ನೈಋತ್ಯಕ್ಕೆ ಸಮಾವೇಶಗೊಳಿಸುವ ರಚನೆ ಇರಬೇಕು. ಈ ರೀತಿಯ ಮಹಡಿ ಮೆಟ್ಟಿಲುಗಳು ಯಶಸ್ಸನ್ನು ಸಂಪಾದಿಸುವ ಎತ್ತರಕ್ಕೆ ತನ್ನ ಸ್ಪಂದನವನು ಕ್ರೋಢೀಕರಿಸಿಕೊಳ್ಳುತ್ತದೆ. ಅನುಮಾನವಿಲ್ಲ. 
ಮನೆಗೆ ಬೇಕಾದ ನೀರನ್ನು ಹಿಡಿದಿಡುವ ತೊಟ್ಟಿ ಅಥವಾ ವಾಟರ್‌ ಟ್ಯಾಂಕ್‌ ನೈಋತ್ಯ ಮೂಲೆಯಲ್ಲಿ ಕೂಡಿಸುವುದು ಒಳ್ಳೆಯದು. ನೀರಿನ ಸಂಬಂಧವಾದ ಸಲಿಲತೆ ಒದಗದೆ ಇರುವ ನೀರಿನ ಕುರಿತಾದ ಕೊರತೆಗೆ ಇದು ಶುಭದಾಯಕ. ಒಂದೊಮ್ಮೆ ನಿರ್ವಾಹವಿಲ್ಲದೆ ಅನಿವಾರ್ಯವಾಗಿ ಅಗ್ನಿಮೂಲೆಯಲ್ಲೋ, ವಾಯುವ್ಯದಲ್ಲೋ ನೀರಿನ ತೊಟ್ಟಿ ಇಡುವ ಅನಿವಾರ್ಯತೆ ಒದಗಿದಲ್ಲಿ ಅಂಥ ನೀರಿನ ತೊಟ್ಟಿಗಿಂತಲೂ ಎತ್ತರ ಎತ್ತರ ಹೊಂದುವ ಹಾಗೆ ನೈಋತ್ಯ ಮೂಲೆಯಲ್ಲಿ ಗೋಡೆಯ ಮಟ್ಟವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ನೈಋತ್ಯ ಮೂಲೆ ನೇರವಾದ ಕೋನವನ್ನು ಹೊಂದಿರಬೇಕೇ ವಿನಾ ಅಂಕುಡೊಂಕಾಗಿ ಇರಕೂಡದು. ಹೀಗೇನಾದರೂ ಆದರೆ ಮುಖ್ಯವಾಗಿ ರಕ್ತ ಪರಿಚಲನೆಗೆ ಸಂಬಂಧಿಸಿದ ಏರುಪೇರುಗಳು ಮನೆಯ ಜನರಲ್ಲಿ ಉಂಟಾಗಬಹುದು. ಅಂತರ್ಗತ ಭೂಜಲ ಮನೆಯ ಪರಿಧಿಯಲ್ಲಿ ಒಣಗಿಬಿಡಬಹುದು. 

ಈ ದಿಕ್ಕಿನಲ್ಲಿ ಬಾವಿಗಳು, ಬೋರವೆಲ್‌ಗ‌ಳು, ನೀರಿನ ಸಂಪು ಇರಬಾರದು. ನೀರಿನ ಕೊಳಾಯಿಯನ್ನು ಕೂಡಾ ಇಡಬಾರದು. ಇದರಿಂದ ವಿಧವಿಧವಾದ ಹಾನಿಗೆ ಎಡೆ ಮಾಡಿಕೊಡುವುದನ್ನು ಮನೆಯ ಜನವೇ ನಿರ್ಮಿಸಿದಂತಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಸ್ತ್ರೀಯರಿಗೆ ತೊಂದರೆ ಎದುರಾಗುವ ವಿಚಾರ ತಲೆದೋರುತ್ತದೆ. ನಿರಂತರವಾದ  ರೋಗರುಜಿನಗಳಿಗೆ ವ್ಯಾಧಿಗಳಿಗೆ ಅವಕಾಶ ಉಂಟಾಗಿ ಆಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಈ ಮೂಲೆಯಲ್ಲಿ ಸರ್ವಥಾ ಚರಂಡಿಗಳು ಹಾಳುಗುಂಡಿಗಳು ಇರದಂತೆ ನೋಡಿಕೊಳ್ಳುವುದು ಕ್ಷೇಮ. ದಕ್ಷಿಣ ಮತ್ತು ಪಡುವಣ ದಿಕ್ಕುಗಳಲ್ಲಿ ಕೂಡಾ ಈ ಕ್ರಮವನ್ನು ಅನುಸರಿಸಬೇಕು.

ಒಟ್ಟಿನಲ್ಲಿ ನೈಋತ್ಯ ಮೂಲೆಯ ಸಮತೋಲನ ಸಿದ್ಧಿಯಿಂದ ಕುಟುಂಬ ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಗೆ ಸಂತೋಷ ನೆಮ್ಮದಿಗಳನ್ನು ಸಂಪಾದಿಸಿಕೊಳ್ಳಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ. ಹೀಗಾಗಿ ನೈಋತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಲದ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶಗಳಾಗಿದೆ. ವಿಶೇಷವಾಗಿ ಸ್ತ್ರೀಯರ ಪಾಳಿನ ನೆಮ್ಮದಿಗೆ ವಿಶೇಷ ಗಟ್ಟಿತನ ದೊರಕುತ್ತದೆ. ಇದರಿಂದಾಗಿಯೇ ಗಂಡಸರ ಪಾಲಿನ ನೆಮ್ಮದಿ ಮಾನಸಿಕ ಶಾಂತಿ ಅಂತರ್ಗತ ಉತ್ಸಾಹಗಳಿಗೆ ದಾರಿ ಸಿಗುತ್ತದೆ. 


Tuesday, 26 June 2018

ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು: ವಾಸ್ತು ಟಿಪ್ಸ್‌ಗಳು

ನಿಮ್ಮ ಮನೆ ಅಥವಾ ಕಚೇರಿಯ ವಾಸ್ತುವಿನಲ್ಲಿ ಕನ್ನಡಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸತ್ಯ. ಕನ್ನಡಿ ಅಳವಡಿಸುವ ಸ್ಥಳವು ತುಂಬಾ ಪ್ರಭಾವ ಬೀರಲಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಇದನ್ನು ನಂಬಲು ತಯಾರಿಲ್ಲವೆಂದರೆ ಅಚ್ಚರಿಯಾಗದು. ಆದರೆ ನಿಮ್ಮ ಮನೆಯಲ್ಲಿ ಇಡುವ ಕನ್ನಡಿ ಮನೆಯ ಶಕ್ತಿ ಹೆಚ್ಚಿಸುವ ಅಥವಾ ಕಡಿಮೆಗೊಳಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ನಿಮ್ಮ ಮನೆಯ ಯಾವ ಭಾಗದಲ್ಲಿ ಕನ್ನಡಿ ಇಟ್ಟಿರುತ್ತಾರೆ ಎನ್ನುವ ಮೇಲೆ ಒಳಬರುವ ಧನಾತ್ಮಕ ಶಕ್ತಿಯು ಅವಲಂಬಿತವಾಗಿರುತ್ತದೆ. ವಾಸ್ತುವಿನ ಪ್ರಕಾರ ಕನ್ನಡಿಗಳು ಮತ್ತು ಅದನ್ನು ಇಡುವ ಎಲ್ಲಾ ಜಾಗ ಒಳ್ಳೆಯದಲ್ಲ. ಮನೆಯ ಕೆಲವೊಂದು ಭಾಗದಲ್ಲಿ ಅಳವಡಿಸುವ ಕನ್ನಡಿ ಋಣಾತ್ಮಕ ಶಕ್ತಿ ಉಂಟುಮಾಡುತ್ತದೆ ಎಂದು ಪರಿಗಣಿಸಲ್ಪಟ್ಟರೆ,

ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : 


ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು! ಮತ್ತೆ ಕೆಲವು ಧನಾತ್ಮಕ ಶಕ್ತಿ ಮನೆಯೊಳಗೆ ಬರುವಂತೆ ಮಾಡುತ್ತದೆ. ನಿಮ್ಮ ಮನೆಗೆ ಕನ್ನಡಿ ಬಗ್ಗೆ ಯೋಜನೆ ಹಾಕಿಕೊಂಡಿದ್ದರೆ ಆಗ ಇಲ್ಲಿರುವ ಕೆಲವೊಂದು ಮೂಲ ಟಿಪ್ಸ್ ಗಳು ನಿಮ್ಮ ನೆರವಿಗೆ ಬರಲಿದೆ. ಇಲ್ಲಿ ಕೊಟ್ಟಿರುವ ಕೆಲವೊಂದು ಟಿಪ್ಸ್‌ಗಳ ಹೊರತಾಗಿಯೂ ಹಲವಾರು ಟಿಪ್ಸ್ ಗಳಿವೆ. ಆದರೆ ಇದು ತುಂಬಾ ಮೂಲ ಮತ್ತು ಅತೀ ಹೆಚ್ಚು ಉಲ್ಲೇಖಿಸಲ್ಪಡುವ ಕನ್ನಡಿಯ ವಾಸ್ತು ಟಿಪ್ಸ್ ಗಳೆಂದು ಪರಿಗಣಿಸಲಾಗಿದೆ.


 ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : 


ವಾಸ್ತು ಪ್ರಕಾರ ಬೆಡ್ ರೂಂನ ವಿನ್ಯಾಸ ಹೀಗಿರಬೇಕು! ಮನೆಯ ವಾಸ್ತುವಿಗೆ ಕನ್ನಡಿಯ ಟಿಪ್ಸ್ ನಿಮ್ಮ ಮನೆಯಲ್ಲಿ ಕನ್ನಡಿ ಹಾಕುವ ಯೋಜನೆ ಹಾಕಿಕೊಂಡಿದ್ದರೆ ಆಗ ಕೆಲವೊಂದು ವಿಷಯಗಳನ್ನು ಪರಿಗಣಿಸಿ. ನಿಮ್ಮ ಹಾಸಿಗೆ ಕಾಣುವಂತೆ ಕನ್ನಡಿ ಇಡಬೇಡಿ. ಇದರಿಂದ ಹೆಚ್ಚಿನ ಅನಾರೋಗ್ಯ ಹಾಗೂ ಋಣಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಕನ್ನಡಿಯಲ್ಲಿ ಮುಖ್ಯ ದ್ವಾರ ಕಾಣಿಸುತ್ತಿದ್ದರೆ ಆಗ ನೀವು ಇದನ್ನು ಸ್ಥಳಾಂತರಿಸುವ ಬಗ್ಗೆ ಮರುಚಿಂತಿಸಬೇಕಾಗಿದೆ. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಋಣಾತ್ಮಕ ಶಕ್ತಿಯಿರುವ ಬೀರುವಂತಹ ವಸ್ತುಗಳಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದು ಮನೆಯೊಳಗಿನ ಎಲ್ಲಾ ಋಣಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ ಎನ್ನುವುದು ಮನೆಯಲ್ಲಿ ಕನ್ನಡಿ ಅಳವಡಿಸಲು ಇರುವ ವಾಸ್ತು ಟಿಪ್ಸ್. 

ಕಚೇರಿಯ ವಾಸ್ತುವಿಗೆ ಕನ್ನಡಿ ಟಿಪ್ಸ್ ನಿಮ್ಮ ವೃತ್ತಿಪರ ವಾತಾವರಣದಲ್ಲಿ ಎಲ್ಲಾ ಧನಾತ್ಮಕ ಶಕ್ತಿ ತರಲು ಬಯಸುತ್ತಿದ್ದೀರಾ? ಹಾಗಿದ್ದರೆ ಎರಡನ್ನು ಜತೆಯಾಗಿಟ್ಟುಕೊಳ್ಳಿ. ಇದಕ್ಕಾಗಿ ಕನ್ನಡಿಯು ಕೇವಲ ಧನಾತ್ಮಕ ಶಕ್ತಿ ಹೊರಹಾಕಬೇಕು. ಸಮೃದ್ಧಿ ಪಡೆಯಲು ನಿಮ್ಮ ಕಚೇರಿಯ ಲಾಕರ್ ಮುಂದೆ ಕನ್ನಡಿ ಅಳವಡಿಸಬೇಕು. ಕಿರಿದಾದ ಪ್ಯಾಸೆಜ್ ಗಳಲ್ಲಿ ಕನ್ನಡಿ ಅಳವಡಿಸಿದರೆ ಆಗ ಋಣಾತ್ಮಕ ಶಕ್ತಿ ಬರುತ್ತದೆ. ಕಿರಿದಾದ ಪ್ಯಾಸೆಜ್ ಗಳಲ್ಲಿ ಋಣಾತ್ಮಕತೆ ಮತ್ತು ಸುತ್ತಮುತ್ತಲಿನ ಇಕ್ಕಟ್ಟನ್ನು ಪ್ರತಿಫಲಿಸುತ್ತದೆ. ಇಂತಹ ಸ್ಥಳದಲ್ಲಿ ಕನ್ನಡಿ ಇಡಬೇಡಿ. 

ಕನ್ನಡಿಯಲ್ಲಿ ಒಳ್ಳೆಯ ದೃಶ್ಯಗಳು, ಧನಾತ್ಮಕ ಶಕ್ತಿ ಪ್ರತಿಫಲಿಸುತ್ತಿರಲಿ. ಕಿರುಕೋಣೆಯ ಕಿಟಕಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದರಿಂದ ನಿಮ್ಮ ಕಚೇರಿಗೆ ಧನಾತ್ಮಕ ಶಕ್ತಿ ಬರುತ್ತದೆ. ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಬೆಡ್ ರೂಂನಲ್ಲಿ ಮಾಡುವ ಐದು ತಪ್ಪುಗಳು ಕನ್ನಡಿಯ ಸಾಮಾನ್ಯ ವಾಸ್ತು ಟಿಪ್ಸ್‌ಗಳು ನಿಮ್ಮ ಸ್ನಾಹಗೃಹದಲ್ಲಿ ಕನ್ನಡಿ ಅಳವಡಿಸಲು ಬಯಸಿದ್ದರೆ ಆಗ ಅದನ್ನು ಉತ್ತರ ಅಥವಾ ಪೂರ್ವದಲ್ಲಿಡಿ. ಮನೆಯ ಮಧ್ಯಭಾಗದಲ್ಲಿ ಗೋಡೆಯಿದ್ದರೆ ಆಗ ಮನೆಯನ್ನು ಸಂಪರ್ಕಿಸುವಂತಾಗಲು ನೀವು ಅದರಲ್ಲಿ ಒಂದು ಕನ್ನಡಿಯನ್ನಿಡಿ. 

ಎದುರುಬದುರಾಗಿ ಯಾವಾಗಲೂ ಕನ್ನಡಿ ಅಳವಡಿಸಬೇಡಿ. ಇದಕ್ಕೆ ವಾಸ್ತು ಟಿಪ್ಸ್ ಎಂದರೆ ಹೀಗೆ ಅಳವಡಿಸಿದರೆ ಮನೆಯಲ್ಲಿ ವಿಶ್ರಾಂತಿ ಎನ್ನುವುದು ಇರಲ್ಲ. ಸ್ನಾನಗೃಹವನ್ನು ಹೊರತುಪಡಿಸಿ ಮನೆಯ ಯಾವುದೇ ಭಾಗದಲ್ಲಿ ಉತ್ತರ ಅಥವಾ ಪೂರ್ವ ಭಾಗದಲ್ಲಿ ಅಳವಡಿಸಬೇಡಿ. ಇದರಿಂದ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ನಿಮ್ಮ ಚಿತ್ರಗಳು ಕನ್ನಡಿಯಲ್ಲಿ ಪ್ರತಿಫಲಿಸುವಂತಹ ರೀತಿಯಲ್ಲಿ ಕನ್ನಡಿ ಅಳವಡಿಸಬೇಡಿ. ಮುಖ್ಯದ್ವಾರ ಕಾಣುವಂತೆ ಕನ್ನಡಿ ಇಡಲೇಬಾರದು.

Saturday, 23 June 2018

ಪೂಜಾ ಕೋಣೆಗಾಗಿ ವಾಸ್ತು ಟಿಪ್ಸ್

ಪೂಜಾ ಕೋಣೆ ಅಥವಾ ದೇವರಮನೆ ಒಂದು ಮನೆ ಅಥವಾ ಆಫೀಸ್‌ನ ಪವಿತ್ರವಾದ ಮೂಲೆ. ಇದು ಧ್ಯಾನ ಮತ್ತು ಶಾಂತಿಯ ಸ್ಥಳ. ಮನೆಯ ಯಾವುದೇ ಭಾಗದಲ್ಲೂ ಪೂಜಾ ಕೋಣೆ ಒಳ್ಳೆಯದೇ ಎಂದು ಪರಿಗಣಿಸಲಾಗುತ್ತದೆ ಆದರೆ ಇದನ್ನು ವಾಸ್ತು ಪ್ರಕಾರ ಸ್ಥಾನೀಕರಿಸಿದರೆ ಈ ಕೋಣೆಯಿಂದ ಭಕ್ತರು ಪಡೆಯುವಂತಹ ಶಕ್ತಿ ಹೆಚ್ಚಿನ ಮಟ್ಟಿಗೆ ವೃದ್ಧಿಸುತ್ತದೆ. ಪೂಜಾ ಕೋಣೆಗಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದರಿಂದ ಇಡೀ ಮನೆಯ ವಾತಾವರಣದಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಪೂಜಾ ಕೋಣೆಯನ್ನು ಕಟ್ಟಲು ಈಶಾನ್ಯ ದಿಕ್ಕಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ವಾಸ್ತು ಪುರುಷನ ತಲೆ ಈಶಾನ್ಯ ದಿಕ್ಕಿನಲ್ಲಿರುವಂತೆ ಆತನನ್ನು ನೆಲದ ಮೇಲೆ ಮಲಗಿಸಿಲಾಯಿತೆಂದು ಹೇಳಲಾಗುತ್ತದೆ. ಈ ದಿಕ್ಕಿನ ಮೇಲೆ ವಾತಾವರಣವನ್ನು ಶುದ್ಧಗೊಳಿಸುವ, ನಮ್ಮ ದಿನಕ್ಕೆ ಸ್ಫೂರ್ತಿಯಾಗುವಂತಹ, ಬೆಳಗಿನ ಜಾವದ ಸೂರ್ಯನ ಮೊದಲ ಕಿರಣಗಳು ಬೀಳುತ್ತವೆ. ಆದರೂ ಮನೆಯ ನಿರ್ಮಾಣವನ್ನು ಅವಲಂಬಿಸಿ ಹಾಗು ಮನೆಯ ಮಾಲೀಕರ ಜನ್ಮ ದಿನಾಂಕವನ್ನು ಅವಲಂಬಿಸಿ ಈ ದಿಕ್ಕು ಬದಲಾಗಬಹುದು. ಹೆಚ್ಚಿನ ಚಿಂತೆ ಅಗತ್ಯವಿಲ್ಲ, ಏಕೆಂದರೆ ಪೂಜಾ ಕೋಣೆಗಾಗಿ ವಾಸ್ತು ಪ್ರತಿ ದೋಷಕ್ಕೂ ಪರಿಹಾರ ಹೊಂದಿದೆ.

ಈ ಕೆಳಗೆ ಪೂಜಾ ಕೋಣೆಗಾಗಿ ಕೆಲ ವಾಸ್ತು ಉಪಾಯಗಳನ್ನು ನೀಡಲಾಗಿದೆ: –
ಮನೆಯ ಮುಖ್ಯ ಬಾಗಿಲಿನ ಎದುರು ಪೂಜಾ ಕೋಣೆ ಇರಬಹುದೇ? ವಾಸ್ತು ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಎದುರು ಪೂಜಾ ಕೋಣೆ ಇರಬಾರದು, ಇದ್ದರೆ ಅದು ಪೂಜಾ ಕೋಣೆಯಲ್ಲಿ ಸೃಷ್ಟಿಯಾದ ಸಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ.
ಪೂಜಾ ಕೋಣೆಯಲ್ಲಿ ಕತ್ತಲು ಇರಬಾರದು. ಪೂಜಾ ಕೋಣೆ ಎಂಬುದು ನಿಮ್ಮ ಮನೆಯಲ್ಲಿ ದೇವರ ರೂಮ್ ಆಗಿರುತ್ತದೆ ಮತ್ತು ಅದು ಎಂದೂ ಕತ್ತಲಾಗಿರಬಾರದು. ಪೂಜಾ ಕೋಣೆಯಲ್ಲಿ ಕತ್ತಲಿದ್ದರೆ ಅದು ಇಡೀ ಮನೆಯ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ; ಆದ್ದರಿಂದ ಈ ಕೋಣೆಯಲ್ಲಿ ಒಂದು ತೈಲದ ದೀಪವನ್ನಾದರೂ ಬೆಳಗುವುದು ಶುಭಕರ.
ಪೂಜಾ ಕೋಣೆಯನ್ನು ಎಂದೂ ನಿಮ್ಮ ಬೆಡ್‌ರೂಮ್‌ನಲ್ಲಿ ಸ್ಥಾನೀಕರಿಸಬೇಡಿ, ಏಕೆಂದರೆ ಬೆಡ್‌ರೂಮ್‌ ಇರುವುದು ವಿಶ್ರಾಂತಿ ಮತ್ತು ಭೋಗಕ್ಕಾಗಿ. ಟಾಯ್ಲೆಟ್‌ನ ಋಣಾತ್ಮಕ ಶಕ್ತಿಯು ಪೂಜಾ ಕೋಣೆಯ ಶುಭಕರ ವಾತಾವರಣವನ್ನು ಹಾಳು ಮಾಡುವುದನ್ನು ತಡೆಯಲು ಪೂಜಾ ಕೋಣೆಯ ಮೇಲೆ, ಕೆಳಗೆ ಅಥವಾ ಎದುರು ಟಾಯ್ಲೆಟ್ ನಿರ್ಮಿಸುವುದನ್ನು ತಪ್ಪಿಸಿ.

Tuesday, 19 June 2018

ಇರಬೇಕು ಒಂದು ಇಂಥ ಓದಿನ ಕೋಣೆ

ಮನೆ ಎಂದರೆ ಉಳಿಯಲು ಬೇಕಾದ ನಾಲ್ಕು ಗೋಡೆಗಳಿಗೆ, ಮೇಲ್ಛಾವಣಿಗೆ ಮಾತ್ರ ಬೇಕಾದ ತಾಣವಲ್ಲ. ಮನೆ ಎಂದರೆ ವಾಸಿಸಲು ಬೇಕಾದ ನಿರ್ಮಲ ಸ್ಥಳ. ವಾಸದ ಮನೆ ವಿಶ್ರಾಂತಿಗೆ ಅನುಪಮವಾದ ಅವಕಾಶ ಒದಗಿಸಿ, ಸಂಜೀವಿನಿಯಂತೆ ಬದುಕನ್ನು ತಿರುತಿರುಗಿ ಸಶಕ್ತಗೊಳಿಸಿ ಪುನರುತ್ಥಾನಕ್ಕೆ ದಾರಿಯಾಗಿಸುವ ಉಲ್ಲಾಸದ ಸ್ಥಳ. ಹಾಗೆಯೇ ಬುದ್ಧಿ ಶಕ್ತಿ, ಚಾತುರ್ಯ, ಸಮಯ ಪ್ರಜ್ಞೆ, ವಿನಯ, ಸದ್ಬುದ್ಧಿಗಳೊಂದಿಗೆ ಸಂಪನ್ನ ಸಂಸ್ಕಾರವನ್ನ ಒದಗಿಸುವ ನೆಲೆಯೂ ಆಗಿದೆ. 

ಮಾನವನ ಧೀ ಶಕ್ತಿಗೆ ಉತ್ತಮವಾದೊಂದು ಅಡಿಪಾಯ ಕೂಡ ವಾಸದ ಮನೆಯಲ್ಲಿ ದೊರಕಬೇಕು. ಶಾಲೆ, ಕಾಲೇಜು, ಗುರು ಕುಲಗಳಲ್ಲಿ ಓದು, ಬರಹ, ಪಾಠ, ಬೋಧನೆಗಳೆಲ್ಲ ದೊರಕಿದರೂ ಮನೆ, ಚಿಂತನೆಗೆ, ಮಂಥನಕ್ಕೆ, ಅಂತೆಯೇ ಇತರ ಅನೇಕ ವಿಚಾರಗಳನ್ನು ತಿಳಿಯುವ ಓದಿಗೆ ಸೂಕ್ತ ಭೂಮಿಕೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ ನಿರಂತರ ಅಭ್ಯಾಸನಗಳಿಗೆ ಮನೆ ಫ‌ಲವಂತಿಕೆಯ ಬೀಡೇ ಆಗಿದೆ. ಪಶ್ಚಿಮ ದಿಕ್ಕಿನಲ್ಲಿ ಓದುವ ಕೋಣೆಯೊಂದು ಮನೆಯಲ್ಲಿರುವುದು ಒಳ್ಳೆಯ ವಿಚಾರವಾಗಿದೆ. ನೈಋತ್ಯ ಮೂಲೆಯಲ್ಲಿ ಓದಿನ ಕೋಣೆ ಬರಬಾರದು. ವಾಯವ್ಯದ ಮೂಲೆಗೂ ಓದಿನ ಕೋಣೆ ಇರಬಾರದು. ಓದಿನ ಸತ್ವ ಈ ದಿಕ್ಕುಗಳಲ್ಲಿ ನೂಕಲ್ಪಡುತ್ತದೆ. 

 ಪಶ್ಚಿಮ ದಿಕ್ಕಿನ ಓದಿನ ಕೋಣೆಯಲ್ಲಿ ಓದಿನ ಶಕ್ತಿಗೆ ಸಂಪನ್ನತೆ, ಆರೋಗ್ಯಕರ ಸಮತೋಲನ ದೊರಕಿ ಬೌದ್ಧಿಕ ಹಾಗೂ ಮಾನಸಿಕ ವಿಕಾಸಗಳಿಗೆ ಅವಕಾಶ ಒದಗಿಬರುತ್ತದೆ. ಈ ದಿಕ್ಕಿನಲ್ಲಿ ಬುಧ,ಗುರು, ಶುಕ್ರ ಹಾಗೂ ಚಂದ್ರ ಗ್ರಹಗಳ 
ಶುಭಕಾರಕವಾದ ಪ್ರೇರಕ ಶಕ್ತಿ ಕೂಡಿಬರುತ್ತದೆ. ಈ ಎಲ್ಲಾ ಗ್ರಹಗಳೂ ಶುಭ ಗ್ರಹಗಳ ಪಟ್ಟಿಯಲ್ಲಿ ಸಮಾವೇಶಗೊಳ್ಳುತ್ತವೆ. ಈ ಶುಭಕಾರಕವಾದ ಶಕ್ತಿಯೇ ಬೌದ್ಧಿಕ ವಿಕಸನಕ್ಕೆ ಹೆದ್ದಾರಿ ರೂಪಿಸುವ ಧಾತವಾಗಿದೆ. ಬುಧನಿಂದ ಮೇಧಾ ಶಕ್ತಿ, ಗುರುವಿನಿಂದ ಜ್ಞಾನ, ಚಂದ್ರನಿಂದ ಮಾನಸಿಕ ಸ್ಥೈರ್ಯ, ಶುಕ್ರನಿಂದ ಸಂಕಲ್ಪಿತ ಕಾರ್ಯದಲ್ಲಿ ಮುಂದಡಿ ಇಡುವ ಇಚ್ಛಾಶಕ್ತಿಗಳು ಚಿಮ್ಮುಕೊಳ್ಳುತ್ತಿರುತ್ತವೆ. ಪ್ರಾಣಿಗಳಿಗಿಂತ ಮನುಷ್ಯ ಹೀಗೆ ಭಿನ್ನನಾಗುತ್ತಾನೆ. 

 ಈ ಭಿನ್ನ ಸಂವಿಧಾನದಿಂದಾಗಿ ಪಾಶವೀ ಗುಣ, ಕ್ರೌರ್ಯಗಳು ಮೂಲೆ ಸೇರಿ ಸಾತ್ವಿಕ ಮಾರ್ಗಕ್ಕೆ ಬಾಗಿಲು ತೆರೆದು ಕೊಳ್ಳುತ್ತದೆ. ಹುರುಪು, ಮಹತ್ವಾಕಾಂಕ್ಷೆ, ಪೂರಕ ಪ್ರಯತ್ನಗಳಿಗೆ ಸಿದ್ಧಿಯೂ ಸಾಧ್ಯ. ಶುಕ್ರನ ಮತ್ತೂಂದು ದೊಡ್ಡ ಶಕ್ತಿ ಎಂದರೆ ಪ್ರತಿಭೆಗೆ ಉದ್ದೀಪನೆ ನೀಡುವ ವಿಫ‌ುಲ ಉತ್ಸಾಹವನ್ನ ನೈಸರ್ಗಿಕವಾಗಿ ಒದಗಿಸಿಕೊಡುವ ಪ್ರಚೋದಕ ಕ್ರಿಯೆ. ಹೀಗೆ ಓದಿನಿಂದ, ಮಾತು, ಪ್ರತಿಭೆಯ ವಿಕಸನ, ವಿನಯಗಳ ಸಿದ್ಧಿ ಸಾಧ್ಯ. ಈ ಸಿದ್ಧಿಯಿಂದ ಜೀವನಕ್ಕೆ ಬೇಕಾದ ದ್ರವ್ಯ ಸಂಪಾದನೆಗಳಿಗೆ ಸಾತ್ವಿಕ ಅವಕಾಶಕ್ಕೆ ದಾರಿ ಸಿಗುತ್ತದೆ. ಮನೆಯಲ್ಲಿ ನಮ್ಮ ಓದು ಪೂರ್ವದ ಕಡೆ ಅಥವಾ ಉತ್ತರದ ಕಡೆ ಮುಖ ಮಾಡಿಯೇ ಇರಬೇಕು. ಓದಿನ ಕೋಣೆಯ ಗೋಡೆಗಳ ಬಣ್ಣ ಆಕಾಶ ನೀಲಿ ಅಥವಾ ಕೆನೆ ಬಣ್ಣದಲ್ಲಿದ್ದರೆ ಒಳ್ಳೆಯದು. ಬಿಳಿ ಅಥವಾ ಹಸಿರು ಬಣ್ಣಗಳೂ ಕೂಡ ಅನುಪಮವೇ ಆಗಿವೆ.

ನೆಲದ ಹಾಸುಗಳೂ ಕೂಡ ಇವೇ ಬಣ್ಣವನ್ನು ಹೊಂದಿದ್ದಲ್ಲಿ ಉತ್ತಮ ಫ‌ಲ ಸಿಗಬಹುದಾಗಿದೆ. ಓದಿನ ಕೋಣೆಯ ಕಿಡಕಿಗಳು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳಿಗೆ ಇದ್ದಿರುವುದು ಸೂಕ್ತ.

 ಪುಸ್ತಕಗಳು ಜೋಡಿಸಲ್ಪಟ್ಟು, ಓರಣವಾಗಿ ಅಭ್ಯಾಸದ ಕೋಣೆ ಇರುವುದು ಮುಖ್ಯ. ಚಲ್ಲಾಪಿಲ್ಲಿಯಾಗಿ ಪುಸ್ತಕಗಳು ಹರಡಿ ಹಂಚಿಕೊಂಡು ಇರಬಾರದು. ಪುಸ್ತಕಗಳ ಕಪಾಟುಗಳು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರುವುದು 
ಪ್ರಶಸ್ತವೆನಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕೂಡಾ ಪುಸ್ತಕದ ಕಪಾಟುಗಳನ್ನು ಇಡಬಹುದಾಗಿದ್ದು, ಉತ್ತಮ ಓದಿಗೆ ಇದು ಸಹಾಯಕವೇ. 

Thursday, 14 June 2018

ಜ್ಞಾನಕ್ಕೆ ಉತ್ತರ ದಿಕ್ಕು ಉತ್ತಮ

ಭಾರತೀಯ ಮೀಮಾಂಸೆಯು ಲೌಕಿಕವನ್ನು ಅಲೌಕಿಕವನ್ನು ಒಟ್ಟಂದದಲ್ಲಿ ಸಮಾನ ದೃಷ್ಟಿಯಲ್ಲೇ ನೋಡಿದೆ. ಬದುಕನ್ನು ಶೂನ್ಯ ಎನ್ನುವುದಿಲ್ಲ. ಭಾವನಾಮಯವಾದ ಜಗದ 
ಯಾತ್ರೆಯಲ್ಲಿ ಅಧ್ಯಾತ್ಮವನ್ನು ಬೆರೆಸಿಕೊಂಡು ನಿನ್ನೊಳಗೇ ಪರಮಾತ್ಮನನ್ನು ಹುಡುಕು ಎಂದೂ ಹೇಳುತ್ತದೆ. ನಿನ್ನಿಂದ ಅನ್ಯನಾದ ಪರಮಾತ್ಮನಲ್ಲಿ ಶರಣಾಗುವ ವಿನಯವನ್ನು ತೋರು ಎಂದು ಬೋಧಿಸುತ್ತದೆ. ಮಂಗಳಮಯನಾಗಿ ಮಂಗಳಪ್ರದನನಾದವನ್ನು ಹುಡುಕಿಕೊಂಡಿರು ಎಂದು ಬೋಧಿಸುತ್ತದೆ. ಒಂದು ಎಲೆಯ ಹಸಿರು ಉದುರಿ ಬೀಳುವ ಮುನ್ನ ಅಕಸ್ಮಾತ್ತಾಗಿ ಹಸುವಿನ ಆಹಾರವಾಗಿಯೂ ಮಾಯವಾಗಿಬಿಡಬಹುದು. ಹೀಗಾಗಿ ಒಂದು ಗೊಂದಲ ಇದೇ ಇರುತ್ತದೆ. ಯಾವುದು ತನ್ನ ಕಾರ್ಯವನ್ನು ಪೂರ್ತಿ ಮುಗಿಸಿ ಉದುರುತ್ತದೆ. ಮುಗಿಸುವ ಮುನ್ನವೇ ಯಾವುದು ಮರೆಯಾಗುತ್ತದೆ ಎಂಬ ಗೊಂದಲಕ್ಕೆ ಉತ್ತರವಿಲ್ಲ. ಇದನ್ನು ಅದೃಷ್ಟ ಎಂದು ಕರೆದರು. ಅದೃಷ್ಟದ ಬೇರುಗಳು ಅಧ್ಯಾತ್ಮದ ಚಿಂತನೆಯಿಂದಲೇ ಕೆಲವಷ್ಟು ಉತ್ತರಗಳನ್ನು ತಡೆಯಬಹುದು. ಜಾnನದಿಂದಾಗಿ ಆಧ್ಯಾತ್ಮದ ಬತ್ತಿಗೆ ಬೆಳಕಿನ ಸೌಭಾಗ್ಯ ಒದಗಿಬರಬಹುದು. ಬೆಳಕು ಕತ್ತಲನ್ನು ಹೊಡೆದೋಡಿಸುತ್ತದೆ. ಆದರೆ ಕತ್ತಲು ಏಕೆ? ಹೇಗೆ? ಎಲ್ಲಿಂದ ಬಂತು. ಬೆಳಕು ಕತ್ತಲಿಗೆ ಪ್ರತಿರೋಧ ತರುವ ತನ್ನ ಹುಟ್ಟನ್ನು ಹೇಗೆ ಕಂಡುಕೊಂಡಿತು ಹೀಗೆ ಆಳವಾಗಿ ಇಳಿಯುತ್ತ ಹೊರಟರೆ ಎಲ್ಲವೂ ಮತ್ತೆ ಪ್ರಶ್ನೆಗಳೆ. 

ಉತ್ತರಗಳನ್ನು ಕೆಲವುಸಲ ನೀಡಬಹುದೇ ವಿನಾ ಪ್ರತಿಯೊಂದಕ್ಕೂ ಉತ್ತರವಿಲ್ಲ ಹೀಗಾಗಿ ಅದೃಷ್ಟವನ್ನು ಮನಗಾಣಲೇ ಬೇಕು. ಏನೋ ಒಂದು ನಮ್ಮನ್ನು ಮೀರಿ ಇದೆಯೆಂಬುದು ನಂಬಬೇಕು. ದಾಡ್ಯìತೆ ಇದ್ದರೆ ನಂಬದೆ ಇರಿ. ಪ್ರಧಾನವಾಗಿ ಮನೆಯಲ್ಲಿ ಮನಸ್ಸು ಕಂಡ 
ರೀತಿಯಲ್ಲಿ ದೇವರುಗಳನ್ನು, ದೇವರುಗಳ ಪಟವನ್ನು ಇಡಬೇಡಿ. ದೇವರು ಎನ್ನುವುದು ನಮ್ಮನ್ನು ಒಂದು ಶಕ್ತಿಯ ಎದುರು ಬಾಗುವ ವಿನಯಕ್ಕಾಗಿ ಇರಬೇಕಾದದ್ದು. ಕುಳಿತಲ್ಲಿ, ನಿಂತಲ್ಲಿ, ಕಂಡಕಂಡಲ್ಲಿ ದೇವರನ್ನು ಪ್ರತಿಷ್ಠಾಪಿಸುತ್ತಾ ಹೋದರೆ ತುಂಬಾ ಅಪಾಯಕರವಾದ ರೀತಿಯಲ್ಲಿ ನೀವು ಕರಗಿಹೋಗುತ್ತೀರಿ. ಬೌದ್ಧಿಕ ವಿಕಸನಕ್ಕೆ  ಅಡೆತಡೆ ಉಂಟಾಗುತ್ತದೆ. ಜಾnನವನ್ನು ವಿಸ್ತರಿಸಿಕೊಳ್ಳಿ. ದೇವರನ್ನು ವಿಸ್ತರಿಸಿಕೊಳ್ಳಲು ಮುಂದಾಗದಿರಿ. ದೇವರು ನಿಮ್ಮಿಂದ ವಿಸ್ತಾರಗೊಳ್ಳಬೇಕಾಗಿಲ್ಲ. ಜಾnನದಿಂದ ಹೊಸಹೊಸ ಹೊಳಹುಗಳು ಸಿಗುತ್ತವೆ. ಜೀವನವನ್ನು ಸರಳವಾಗಿಸಿಕೊಳ್ಳಲಿಕ್ಕೆ ನಾಗರೀಕತೆಯ ಸಂಪನ್ನತೆಗೆ ವೃದ್ಧಿ ತರುತ್ತದೆ. 

ಈಶಾನ್ಯ ದಿಕ್ಕು ಜಾnನಕ್ಕೆ ಹಾಗೂ ಓದು ಕಲಿಕೆಗಳಿಗೆ ತನ್ನನ್ನು ಸಮೃದ್ಧಿಯ ವೇದಿಕೆಯನ್ನಾಗಿ ರೂಪಿಸುವ ಸಿದ್ಧಿ ಪಡೆದಿದೆ. ಮಣ್ಣು ಇದರ ಮೂಲ ವಸ್ತು. ಪ್ರತಿದಿಕ್ಕುಗಳಲ್ಲೂ ಮೂಲವಸ್ತು ಮಣ್ಣೇ ಇದ್ದರೂ ಬೆಂಕಿತತ್ವ, ವಾಯುತತ್ವ, ಜಲತತ್ವಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಸ್ವಾಮ್ಯವನ್ನು ಮೆರೆಯುತ್ತದೆ. ಅಲ್ಲಿ ಈಶಾನ್ಯ ದಿಕ್ಕಿನಲ್ಲಿ ಚಿಂತನೆಗೆ ಅಧ್ಯಯನಕ್ಕೆ ದೈವ ಸಂಬಂಧಿ ಅನುಷ್ಠಾನಗಳಿಗೆ ಸೂಕ್ತವಾಗಿದೆ. ನೀರು, ಬೆಂಕಿ ಅಥವಾ ಗಾಳಿಯ ಪ್ರಕ್ಷುಬ್ಧತೆಗಳಿಗೆ ಈ ದಿಕ್ಕಿನಲ್ಲಿ ಅವಕಾಶ ಇರುವುದಿಲ್ಲ. ಆನೆಯ ಚಿಕ್ಕ ಶಿಲ್ಪವೊಂದು ಇದ್ದರೆ ಈಶಾನ್ಯ ದಿಕ್ಕಿನಲ್ಲಿ ಮಕ್ಕಳು ಅಭ್ಯಾಸ ಅಧ್ಯಯನ ನಡೆಸಬಹುದು.
ಆನೆಯು ಬೃಹತ್‌ ನಿಲುವು ಗಟ್ಟಿ ಬಲವುಳ್ಳ ಪ್ರಾಣಿ ಎಂಬ ನಂಬಿಕೆ ಮಕ್ಕಳಲ್ಲಿ ಒಂದು ಸುರಕ್ಷಿತ ವಲಯವನ್ನು ಪ್ರಜ್ಞೆಯ ಪರಿಧಿಯಲ್ಲಿ ನಿರ್ಮಿಸುತ್ತದೆ. ಎಲ್ಲವನ್ನೂ ತಿಳಿದ ವ್ಯಾಸ ಮಹರ್ಷಿಗಳು ಆನೆಯ ಮುಖದ ಗಣಪನಿಂದಲೇ ಮಹಾಭಾರತದ ಮಹಾಕಾವ್ಯದ ರಚನೆಯನ್ನು ಮಾಡಿಸಿದರು. ಕಥೆಯ ಪ್ರಕಾರ ಉತ್ತರ ದಿಕ್ಕಿಗೆ ತಲೆಇಟ್ಟು ಮಲಗಿದವರ ತಲೆ ಕತ್ತರಿಸಿ ತಂದುಕೊಡಿ ಎಂದು ಶಿವನು ಪ್ರಲಾಪಿಸಿದ ಕತೆ ಎಲ್ಲರಿಗೂ ತಿಳಿದಿದ್ದೆ. ಉತ್ತರ ದಿಕ್ಕಿಗೆ ಮಲಗಿದ ಒಂದು ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಲಾಯ್ತು.

ಜಾnನಕ್ಕೆ ಹೀಗಾಗಿ ಉತ್ತರ ದಿಕ್ಕು ಉತ್ತಮ. ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು. ಅಂದರೆ ಚಿಂತನೆಯ ಸಂವರ್ಧನೆಗೆ ಎಚ್ಚರವಾಗಿದ್ದಾಗ ಉತ್ತರದಿಕ್ಕು ಶ್ರೇಷ್ಠ. ಮಲಗಿರುವಾಗ ಬೌದ್ಧಿಕ ಚಿಂತನೆಗೆ ವೇದಿಕೆಯಾದ ತಲೆ ಉತ್ತರದಿಕ್ಕಿನಲ್ಲಿ ಸ್ಥಗಿತವಾಗಕೂಡದು. ಗಣಪತಿಯ ಆನೆಯ ಮುಖದ ಕಥೆಯನ್ನೇ ಒಂದು ಆಧಾರಗೊಳಿಸಬೇಕಾಗಿಲ್ಲ. ಇದೊಂದು ದಂತ ಕಥೆ ಇದ್ದರೂ ಉತ್ತರ ದಿಕ್ಕು ಜಾnನಕ್ಕೆ ಕುಂಭ ಎಂಬುದು ನಿಸ್ಸಂಶಯ. ಒಟ್ಟಿನಲ್ಲಿ ಪರರದೆ ಇಹವಲ್ಲ. ಇಹದ ಸಾûಾತ್ಕಾರಕ್ಕೆ ಪದಾರ್ಥಚಿಂತನೆಯ ಅವಶ್ಯಕತೆ ಇದೆ. ಹಿಡಿಯಲಾಗದ್ದನ್ನು ಹಿಡಿಯುವ ಅನನ್ಯತೆಗೆ ಜಾnನವೇ ಆಧಾರ. ಜಾnನವು ಶೂನ್ಯದಿಂದ ಬರಲಾರದು. ಅದು ಅವನ ಸಂಕಲ್ಪ, ಅದೃಷ್ಟ. ಅದೃಷ್ಠದ ಸಿದ್ಧಿಗಾಗಿ ಮನೆಯ ಈಶಾನ್ಯದ ಶಿಸ್ತು ಜಾರಿಗೆ, ಮಂಥನಕ್ಕೆ ದೊರಕಲಿ.


Wednesday, 13 June 2018

ಮನೆಯಲ್ಲಿ ಅತಿಥಿ ಗೃಹ ಹೇಗಿರಬೇಕು ಗೊತ್ತಾ?

ನಾವು ವಾಸಿಸುವ ಮನೆ ನಾಲ್ಕು ಗೋಡೆಗಳ ಒಂದು ಛಾವಣಿಯ ಗೂಡು ಎಂಬುದಾಗಿ ಕೇವಲ ಭಾವಿಸಬಾರದು. ಇದು ಹೃದಯ, ಹೃದಯದಲ್ಲಿ ಮನೆ ಮಂದಿ ಸಂಸ್ಥಾಪಿಸಿಕೊಂಡೆ ಇರುವ ದೇವರುಗಳ ಪವಿತ್ರವಾದದ್ದೊಂದು ಗುಡಿ. ನಮ್ಮ ಆಷೇìಯ ಪದ್ಧತಿ ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾûಾತ್‌ ಮಹೇಶ್ವರಃ ಎಂದು ಗುರುವನ್ನು ಶ್ರೇಷ್ಠ ಮಟ್ಟದಲ್ಲಿಟ್ಟಂತೆ ಅತಿಥಿ ದೇವೋಭವ ಎಂದು ಅತಿಥಿಗಳನ್ನು ದೇವರನ್ನಾಗಿ ಪರಿಗಣಿಸಿದೆ. ಇದು ಉತ್ರೇಕ್ಷೆಯ ಮಾತಲ್ಲ. ಪಿತೃ ದೇವೋಭವ, ಮಾತೃದೇವೋಭವ ಎಂದಂತೆ ಆಚಾರ್ಯ ದೇವೋಭವ ಎಂದೆನ್ನುತ್ತಾ ಅತಿಥಿ ದೇವೋಭವ ಎಂಬುದನ್ನು ಸರಿಯಾಗೇ ಗುರುತಿಸಿದೆ.

ಅತಿಥಿಗಳ ಕುರಿತು ಸುಂದರ ವ್ಯಾಖ್ಯೆಯನ್ನು ಸಾವಿರ ಶಬ್ದಗಳಲ್ಲಿ ಕಟ್ಟಿಕೊಡಬಹುದು. ಅತಿಥಿ ಧರ್ಮದ ಕುರಿತು ಒಂದು ಪ್ರತ್ಯೇಕ ವಿಸ್ತಾರದ ಗ್ರಂಥ ಬರೆಯಬಹುದು. ಇಂಥ ಅತಿಥಿಯು ಮನೆಯ ಶೋಭೆಯಾಗಿರುತ್ತಾನೆ. ಮನೆಗೆ ಬಂದ ಅತಿಥಿಗೆ ಎಂದು ತಿರುಗಿ ಹೊರಟೇನೋ ಎಂಬ ಅನುಭವ ಆಗಬಾರದು. ಹೀಗಾಗಿ ಮನೆಯು  ಅತಿಥಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಹೊಂದಿದ್ದರೆ ಒಳ್ಳೆಯದು. ಹೊಸಕಾಲದ ಸಂವಿಧಾನ ಮೊದಲಿನಂತಲ್ಲ. ಅತಿಥಿಯೂ ಪ್ರ„ವೇಸಿಯನ್ನು ಬಯಸುತ್ತಾನೆ.

ಮನೆಯ ಪಶ್ಚಿಮ ಅಥವಾ ವಾಯುವ್ಯ ಭಾಗ 
ಅತಿಥಿ ನಮ್ಮ ಪಂಚಭೂತಾತ್ಮಕ ಅಂಶಗಳ ವಿಂಗಡಣೆಯಲ್ಲಿ ನೀರಿನ ಮತ್ತು ವಾಯುವಿನ ಘಟಕಗಳಿಗೆ ಸೇರ್ಪಡೆಯಾಗುತ್ತದೆ. ನೀರು ಹಾಗೂ ವಾಯು ನಮ್ಮ ಬದುಕಿನ ಸಂಜೀವಿನಿಯಾದ ಭಾಗಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ಅತಿಥಿ ಗೃಹವನ್ನು ಪಶ್ಚಿಮದಲ್ಲೋ, ವಾಯುವ್ಯದಲ್ಲೋ ನಾವು ಕಟ್ಟುವಂತಾಗಬೇಕು. ಆಲಭಾವ, ರಜೋಭಾವಗಳ ಸಿದ್ಧಿ ವಿಶೇಷ ಬರುವುದೂ ಹಾಗೆಯೇ ಹರಿದು ಬೀಸಿ ಹೊರಟುಹೋಗುವುದು ಗಮನಾರ್ಹ. ಅತಿಥಿಯೂ ಅನಿರೀಕ್ಷಿತವಾಗಿ ಆಗಮಿಸಿ ಮತ್ತೆ ಬಹುಕಾಲ ನಿಲ್ಲದೆ ಹೊರಡುವವನು. ಆದರೆ ಬಂದಾಗಲೆಲ್ಲಾ ಹೊಸ ನಿಯಮ, ಹೊಸ ಸಲಹೆ ಹೊಸ ಚೈತನ್ಯ ಒದಗಿಸಲಾರದೆ ಹೊರಡನು. ಅತಿಥಿ ದೇವನಾದಾಗ ಇದು ನಿಜಕ್ಕೂ ಸಾಧ್ಯ. ಅನ್ಯ ವಿಕೃತಿಯ ಪರಿಗಳು ಬೇರೆ. ವಿಕೃತಿ ದುರದೃಷ್ಟದ ಫ‌ಲವಾಗಿರುತ್ತದೆ. 

ಗಮನಾರ್ಹವಾಗಿ ಅತಿಥಿಯ ಕೊಠಡಿಯಲ್ಲಿ ಚಿಕ್ಕ ಪುಟ್ಟ ಮರಮುಟ್ಟಿನ ಉಪಕರಣಗಳು ಟೇಬಲ್‌, ಕುರ್ಚಿ, ನೀರನ್ನು ಇರಿಸುವ ಸ್ಟೂಲು, ಚಿಕ್ಕ ಕಪಾಟುಗಳ ರೀತಿಯಲ್ಲಿ ವ್ಯವಸ್ಥೆಗೊಂಡಿರುತ್ತದೆ. ಅತಿಥಿಯ ರೂಮಿನ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳತ್ತ ಇವನ್ನು ಸ್ಥಾಯಿಗೊಳಿಸಬೇಕು. ಮಲಗುವ ಮಂಚ ಅತಿಥಿಯ ಶಿರೋಭಾಗ ಪಶ್ಚಿಮದತ್ತ. ವಿಶ್ರಾಂತಿಯ ಸಂದರ್ಭದಲ್ಲಿ ಬಳಕೆಯಾಗುವಂತೆ ಇದ್ದರೆ ಒಳಿತು. ಅತಿಥಿ ಎಂದೂ ಖಾಯಂ ಆದ ಗೃಹ ಸದಸ್ಯನಲ್ಲ. (ಉಳಿಯುವ ವಿಚಾರದಲ್ಲಿ ಹೃದಯದಲ್ಲಿ ಸದಾ ಇರುತ್ತಾನೆ. ಏಕೆಂದರೆ ಅವನೂ ದೇವನಾಗಿದ್ದಾನೆ) ಬಾಗಿಲಿನ ಭಾಗ ಕಿಟಕಿಯ ಭಾಗಗಳು ಅತಿಥಿಗೆ ಅಡ್ಡಿಯಾಗದ ಹಾಗೆ ಪರಿಣಾಮಕಾರಿಯಾಗಿ ಮಲಗುವ ಮಂಚ ಪೂರ್ಣ ದಕ್ಷಿಣದ ಆಯ್ಕೆಯಾಗಿ ಉತ್ತರಕ್ಕೆ ತಲೆ ಹಾಕಬಾರದು. ಇದ್ದರೂ ಸ್ವಾಗತಾರ್ಹವೇ. ಅಪಚಾರ ಏನೂ ಇಲ್ಲ ಎಂಬುದನ್ನೂ ಗಮನಿಸಿ.

ಅನಪೇಕ್ಷಿತ ದೀಪಗಳ ವ್ಯವಸ್ಥೆ
ವಿದ್ಯುತ್‌ ಉಪಕರಣಗಳ ವ್ಯವಸ್ಥೆ ಬೇಡ. ಅತಿಥಿಗೆ ತೀವ್ರವಾದ ಬೆಳಕು ವಿದ್ಯುತ್‌ ಉಪಕರಣಗಳ ಅನಾವಶ್ಯಕ ಕಿರಿಕಿರಿಯ ಅವಶ್ಯಕತೆ ಇಲ್ಲ. ಹೀಗಾಗಿ ಅಥಿತಿಯ ವಿಶ್ರಾಂತಿಗೆ ಅತಿಥಿ ಗೃಹ ಪ್ರಧಾನವಾದ ಗಮನವನ್ನು ಕೊಡುವಂತಾಗಲಿ. ಅಥಿತಿ ಕೋಣೆಯಲ್ಲಿ ಕನ್ನಡಿಯ ವ್ಯವಸ್ಥೆ ವೈವಿಧ್ಯಮಯವಾದ ವಿನ್ಯಾಸಗಳಿಂದ ತುಂಬಿರಲೇ ಬಾರದು. ಅದು ಅತಿಥಿತಿಯ ಮೂಲಕವಾಗಿ ಒಂದು ಆತಂಕದ ಅಲೆಯನ್ನು ಮನೆಯಲ್ಲಿ ಸೃಷ್ಟಿಸಿಬಿಡುತ್ತದೆ. ಕನ್ನಡಿಯ ವಿಚಾರವು ಯಾವಾಗಲೂ ತನ್ನ ಪಾತಳಿಗೆ ಬಂದಿದ್ದನ್ನು ತೂರಿಬಿಡುವುದು. ಈ ವಿಚಾರವನ್ನು ತುಂಬಾ ವಿಶದವಾಗಿ ಇನ್ನೊಮ್ಮೆ ಚರ್ಚಿಸೋಣ..

 ಹಾಂ! ಅತಿಥಿ ಕೋಣೆಯನ್ನು ಬಹುಕಾಲ ಖಾಲಿ ಇಡಬಾರದು. ಅತಿಥಿಯ ಮೂಲಕ ಬಳಕೆಯಾಗಿದ್ದಲ್ಲಿ ಕೋಣೆಯಲ್ಲಿ ತಾಜಾ ಹೂವುಗಳನ್ನು ಇಡುವುದು ಸೂಕ್ತ. ಕಿಟಕಿಗಳನ್ನು ತೆರೆದಿಡುವುದು ಮತ್ತೆ ಮುಚ್ಚಿಡುವುದು ಆಗಬೇಕು. ನಿರಭ್ರವಾದ ಶುಭ್ರ ಗಾಳಿ, ಬೆಳಕು ಈ ಕೋಣೆಯಲ್ಲಿ ಆಸ್ತಿತ್ವವನ್ನು ಕಂಡುಕೊಳ್ಳಬೇಕು.


Monday, 11 June 2018

ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ

ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.

ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.

ನಗರೀಕರಣ ಬೆಳೆಯುತ್ತಿರುವ ಇಂದಿನ ಯುಗ ಮತ್ತು ಕಾಲದಲ್ಲಿ, ಸ್ಥಳದ ನ್ಯೂನತೆ ಮತ್ತು ಆಧುನಿಕ ವಿಜ್ಞಾನ ವಿವರಣೆಗೆ ವಿಫಲವಾದ ಎಲ್ಲವುದರಲ್ಲೂ ಮಿತಿಮೀರಿದ ನಂಬಿಕೆಕಳೆದುಕೊಂಡಿರುವಾಗ, ವಾಸ್ತು ನಿಯಮಗಳಿಗೆ ಬದ್ಧವಾದ ಮನೆಯನ್ನು ಕನಸಿನಲ್ಲೂ ಎಣಿಸುವುದು ಕಾರ್ಯತಃ ಅಸಾಧ್ಯವೆನಿಸಿದೆ.

ಆಕಾಶ
ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.

ಗಾಳಿ(ವಾಯು)

ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ

ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.
ಜಲ
ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ
ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.
ಕೋನಾರ್ಕ್ ಸೂರ್ಯ ದೇವಸ್ಥಾನ, ಆಗ್ರಾದ ತಾಜ್ ಮಹಲ್, ಪುಟ್ಟಪರ್ತಿಯ ಸಾಯಿಬಾಬ ಆಶ್ರಮ, ಪ್ರಶಾಂತಿ ನಿಲಯಂ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.

Saturday, 9 June 2018

ಅಕ್ವೇರಿಯಂ ಮನೆಯಲ್ಲಿದ್ದರೆ ಸಂತೋಷ ಮತ್ತು ಸಮೃದ್ಧಿಗೆ ಕೊರತೆಗಳಿರುವುದಿಲ್ಲ

ಚಟುವಟಿಕೆಯುಕ್ತ, ಉಲ್ಲಾಸಭರಿತ ಮೀನುಗಳ ಸಮೂಹವನ್ನು (ಅಕ್ವೇರಿಯಂ) ನೋಡುವುದರಿಂದ ನಮಗೆ ಮಾನಸಿಕ ಶಾಂತಿ ದೊರೆಯುತ್ತದೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿರುವ ವಿಷಯವಾಗಿದೆ. ಫೆಂಗ್ ಶೂಯಿ ಈ ರೀತಿ ತಿಳಿಸುತ್ತದೆ :- ಮೀನು ಆರೋಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಮತ್ತು ಕುಟುಂಬದ ಸದಸ್ಯರ ಮರಣ, ದುಃಖ, ನೋವುಗಳನ್ನು ಮರೆಸುತ್ತದೆ.
ಫೆಂಗ್ ಶೂಯಿ ಪ್ರಕಾರ ನಿಮ್ಮ ಮನೆಯಲ್ಲಿ ನೀವು ಅಕ್ವೇರಿಯಂ ಅನ್ನು ಇರಿಸಿದರೆ ನೀವು ವಾಸಿಸುವ ಸ್ಥಳದಲ್ಲಿ ಸಂತೋಷ ಮತ್ತು ಸಮೃದ್ಧಿಯು ತುಂಬಿರುತ್ತದೆ. ಅಕ್ವೇರಿಯಂ ಇರಿಸುವಾಗ, ನಿಮ್ಮ ಮನಸ್ಸಿನಲ್ಲಿ ಕೆಲವು ಪ್ರಮುಖ ವಿಷಯಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

ಅಕ್ವೇರಿಯಂ ನಿಮ್ಮ ಮನೆಯ ಪ್ರವೇಶ ದ್ವಾರದ ಬಳಿ ಇರಿಸುವಂತಿಲ್ಲ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು.

ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಅನ್ನು ಇಡುವುದು ಒಳ್ಳೆಯದು. ಈ ಸ್ಥಳವು ವಿತ್ತೀಯ ಮೌಲ್ಯಗಳಲ್ಲಿನ ಹೆಚ್ಚಳಕ್ಕೆ ಹೆಸರುವಾಸಿಯಾಗಿದೆ ಮತ್ತು ಸಮೃದ್ಧಿಯನ್ನು ತರುವಲ್ಲಿ ಆಳವಾದ ಸಂಪರ್ಕವನ್ನು ಹೊಂದಿದೆ. ಇದು 'ನೀರಿನ' ಅಂಶದ ಉತ್ತಮ ಮೂಲವಾಗಿದೆ. ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಹ ಇದು ಪ್ರಯೋಜನಕಾರಿಯಾಗಿದೆ.

Thursday, 7 June 2018

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. 

ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.

ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ.

Tuesday, 5 June 2018

ಆಧುನಿಕ ಉಪಕರಣಗಳು ಮತ್ತು ಮನೆ

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ.

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯವಾದೊಂದು ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ.

ನಿಜ ಹೇಳಬೇಕಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು ವರ್ಧಿಸುತ್ತ ಹೋಗಬೇಕಿತ್ತು. ಆದರೆ ನಾವು ಇಂದು ಬದುಕುತ್ತಿರುವ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಅನಿಸುತ್ತದೆಯೇ? ದೂರದ ಅಮೆರಿಕಾ ಎಷ್ಟು ಹತ್ತಿರವಾಗಿದೆಯೆಂದರೆ ಅಮೆರಿಕದವರಿಗೂ ಭಾರತ ಅಪರಿಚಿತವಾದೊಂದು ದೇಶವಲ್ಲ. ಇದು ತಮಗೆ ಬೇಕೆಂದಾಗ ದೇಶ ಅನಿವಾರ್ಯವಾಗಿ ನಾವು ಆಶ್ರಯಿಸಿ ಇರಬೇಕಾದ ದೇಶ ಎಂಬ ಅವರ ಮನೋಭಾವವನ್ನು ಗಮನಿಸುತ್ತಾ ಎಷ್ಟು ಹತ್ತಿರ ತಲುಪಕೂಡದೋ ಅಷ್ಟು ಹತ್ತಿರ ಬರುತ್ತಿದೆ. ಆಧುನಿಕತೆಯ ಹೆಸರಿನಲ್ಲಿ ಅಮೆರಿಕಾ ಹತ್ತಿರವಾದದ್ದು. ನಮ್ಮನ್ನು ನಾವು ನಮಗೆ ಬೇಕಾದುದಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸುತ್ತಿದ್ದೇವೆ ನಮ್ಮ ಮನೆಗಳನ್ನು.

ಈ ಕಾರಣದಿಂದ ನಮ್ಮ ಮನೆಗಳು ನಮಗೆ ಜೀವನೋಲ್ಲಾಸವನ್ನು ಚಿಮ್ಮಿಸುವ ವಿಚಾರದಲ್ಲಿ ಕಟ್ಟಲ್ಪಡದೆ ಸಂಯೋಜಿಸಲ್ಪಡದೆ ಮನೆಮನೆಯ ಶಾಂತಿ ಹಾಗೂ ನೆಮ್ಮದಿಗಳು ಒಂದು ರೀತಿಯ ಶುಷ್ಕ ನೆಲೆಯಲ್ಲಿ ಸಪ್ಪೆಯಾಗತೊಡಗಿದೆ. ಶುಷ್ಕ ನೆಲೆಗಳೇ ನಮ್ಮ ಆಧುನಿಕತೆಯನ್ನು ಪ್ರತಿಪಾದಿಸುತ್ತಿರುವ ಕೀಲಿ ಕೈಗಳಾಗಿರುವುದರಿಂದ ನಮ್ಮ ಸಾಂಸ್ಕೃತಿಕ ಚೌಕಟ್ಟು ಸಮತೋಲನ ಕಳೆದುಕೊಂಡಿದೆ. ಆಧುನಿಕ ಉಪಕರಣಗಳಾದ ಟೀ, ಓವನ್‌ ಮೈಕ್ರೋವೇವ್‌, ಗೀಸರ್‌, ಲಿಫ್ಟ್, ವ್ಯಾಕ್ಯೂಮ್‌ ಕ್ಲೀನರ್‌ ಇತ್ಯಾದಿ ಇತ್ಯಾದಿ ಅಸಂಪ್ರದಾಯಿಕವಾದ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ. 

ಇದರಿಂದಾಗಿ ವಿವಿಧ ರೀತಿಯ ನಕಾರಾತ್ಮಕ ಸ್ಪಂದನಗಳು ಮನೆಯನ್ನು ಆಕ್ರಮಣ ಮಾಡಿ ಹಿಂಸಿಸುತ್ತದೆ. ಉದಾಹರಣೆಗೆ ಹಾಗೂ ಗ್ಯಾಸಿನ ಒಲೆಯ ಗ್ಯಾಸಿನ ಸಿಲಿಂಡರ್‌ ಅಂತರಗಳು ಸದಾ ಮುಖ್ಯವಾದ ಸ್ವಿಚ್‌ ಒಂದು ಟೀವಿಯಲ್ಲಿ ವಿಸಿಆರ್‌ ಇತ್ಯಾದಿಗಳು ಆರಿಸದೇ ಇರುವುದು ತಪ್ಪುದಿಕ್ಕಿನಲ್ಲಿ ಟೀವಿಯನ್ನೋ ವಿಸಿಆರ್‌ ಅನ್ನೋ ಕೂಡಿಸುವುದು ಓವನ್‌ ಅಥವಾ ಮೈಕ್ರೋವೇವ್‌ ಉಪಕರಣಗಳನ್ನು ತಪ್ಪಾದ ಕಡೆ ಸಂಯೋಜಿಸುವುದು ಗೀಸರ್‌ ಅನ್ನು ಒಂದೆಡೆ ಬಚ್ಚಲಿಗೆ ತಗುಲಿ ಹಾಕುವುದು ಇತ್ಯಾದಿ ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ.

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ ನಿಣದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ. ಈ ಸಂದರ್ಭದಲ್ಲಿ ಹೈಟೆನÒನ್‌ ವಿದ್ಯುತ್‌ ಕಂಬಗಳು ಹೈಟೆನ್‌ ಲೋಡಿರುವ ವೈರುಗಳು ಜಾಲಾಡಿಕೊಂಡಿರುವ ಮನೆಯ ಹೊರವಲಯದ ಜೋಡಣೆಗಳ ವಿಚಾರವನ್ನು ಮನದಟ್ಟು ಮಾಡಿಕೊಂಡು ವಿದ್ಯುತ್‌ ಬಗೆಗೆ ಸೂಕ್ತ ಮಾಹಿತಿ ಇರುವ ತಜ್ಞರಿಂದ ಪಶ್ಚಿಮವೂ ತೊಂದರೆಗೆ ಈಡಾಗುವ ಬಿಂದುವೇ ಎಂಬುದನ್ನು ತಿಳಿದುಕೊಳ್ಳಿ. ಟೀವಿಯನ್ನಾಗಲೀ ಕಂಪ್ಯೂಟರ್‌ನ್ನಾಗಲೀ ಮಲಗುವ ಕೋಣೆಯಲ್ಲಿ ಇಡಲೇ ಕೂಡದು. ಇದು ಮಾನಸಿಕವಾದ ಅಂತರ್‌ ವಲಯವನ್ನು ಮೆದುಳಿನ ಸೂಕ್ಷ್ಮ ಕೋಶಗಳನ್ನು ಬಾಧಿಸುವ ವಿಚಾರವಾಗಿರುವುದರಿಂದ ಟೀ ಕಂಪ್ಯೂಟರ್‌ ಹಾಗೂ ಮೊಬೈಲ್‌ ವಿಷಯದಲ್ಲಿ ಟೆಲಿಫೋನಿನ ಲ್ಯಾಂಡ್‌ ಲೈನ್‌ ವಿಚಾರದಲ್ಲಿ ಎಚ್ಚರವಾಗಿರಿ.

ಅನಪೇಕ್ಷಿತ ವಿಚಾರವನ್ನು ತಿಳಿದು ಜಾಗರೂಕತೆಯಿಂದ ವರ್ತಿಸಿ. ಇನ್ನು ಎಷ್ಟೇ ಆದರೂ ಉಂಟಾಗುವ ಪಡಿಪಾಟಲುಗಳಿಂದಾಗಿ ದೇವರ ಮನೆಯಲ್ಲಿ ದೇವರ ಪೀಠ ಇರಿಸುವ ಕಟ್ಟೆಯ ಕೆಳಗಡೆ ಹವಳವನ್ನು ಇಟ್ಟು ಕಟ್ಟೆ ಕಟ್ಟುವುದು ಸೂಕ್ತ ವಿಚಾರ. ಧರಣಿ ಗರ್ಭಸಂಭೂತನಾದ ಅಂಗಾರಕನೇ ವಿದ್ಯುತ್‌ ಉಪಕರಣಗಳ ವಿಷಯದಲ್ಲಿ ನಿಯಂತ್ರಣಕ್ಕಾಗಿ ಜವಾಬ್ದಾರಿಯನ್ನು ಹೊತ್ತ ಗ್ರಹವಾದ್ದರಿಂದ ಹವಳವು ಪ್ರಧಾನವಾದ ದೇವರ ಕೋಣೆಯಲ್ಲಿ ಸೇರಿಕೊಂಡಿರುವುದು ಸೂಕ್ತವಾಗಿದೆ.


ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...