Saturday, 23 June 2018

ಪೂಜಾ ಕೋಣೆಗಾಗಿ ವಾಸ್ತು ಟಿಪ್ಸ್

ಪೂಜಾ ಕೋಣೆ ಅಥವಾ ದೇವರಮನೆ ಒಂದು ಮನೆ ಅಥವಾ ಆಫೀಸ್‌ನ ಪವಿತ್ರವಾದ ಮೂಲೆ. ಇದು ಧ್ಯಾನ ಮತ್ತು ಶಾಂತಿಯ ಸ್ಥಳ. ಮನೆಯ ಯಾವುದೇ ಭಾಗದಲ್ಲೂ ಪೂಜಾ ಕೋಣೆ ಒಳ್ಳೆಯದೇ ಎಂದು ಪರಿಗಣಿಸಲಾಗುತ್ತದೆ ಆದರೆ ಇದನ್ನು ವಾಸ್ತು ಪ್ರಕಾರ ಸ್ಥಾನೀಕರಿಸಿದರೆ ಈ ಕೋಣೆಯಿಂದ ಭಕ್ತರು ಪಡೆಯುವಂತಹ ಶಕ್ತಿ ಹೆಚ್ಚಿನ ಮಟ್ಟಿಗೆ ವೃದ್ಧಿಸುತ್ತದೆ. ಪೂಜಾ ಕೋಣೆಗಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದರಿಂದ ಇಡೀ ಮನೆಯ ವಾತಾವರಣದಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಪೂಜಾ ಕೋಣೆಯನ್ನು ಕಟ್ಟಲು ಈಶಾನ್ಯ ದಿಕ್ಕಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ವಾಸ್ತು ಪುರುಷನ ತಲೆ ಈಶಾನ್ಯ ದಿಕ್ಕಿನಲ್ಲಿರುವಂತೆ ಆತನನ್ನು ನೆಲದ ಮೇಲೆ ಮಲಗಿಸಿಲಾಯಿತೆಂದು ಹೇಳಲಾಗುತ್ತದೆ. ಈ ದಿಕ್ಕಿನ ಮೇಲೆ ವಾತಾವರಣವನ್ನು ಶುದ್ಧಗೊಳಿಸುವ, ನಮ್ಮ ದಿನಕ್ಕೆ ಸ್ಫೂರ್ತಿಯಾಗುವಂತಹ, ಬೆಳಗಿನ ಜಾವದ ಸೂರ್ಯನ ಮೊದಲ ಕಿರಣಗಳು ಬೀಳುತ್ತವೆ. ಆದರೂ ಮನೆಯ ನಿರ್ಮಾಣವನ್ನು ಅವಲಂಬಿಸಿ ಹಾಗು ಮನೆಯ ಮಾಲೀಕರ ಜನ್ಮ ದಿನಾಂಕವನ್ನು ಅವಲಂಬಿಸಿ ಈ ದಿಕ್ಕು ಬದಲಾಗಬಹುದು. ಹೆಚ್ಚಿನ ಚಿಂತೆ ಅಗತ್ಯವಿಲ್ಲ, ಏಕೆಂದರೆ ಪೂಜಾ ಕೋಣೆಗಾಗಿ ವಾಸ್ತು ಪ್ರತಿ ದೋಷಕ್ಕೂ ಪರಿಹಾರ ಹೊಂದಿದೆ.

ಈ ಕೆಳಗೆ ಪೂಜಾ ಕೋಣೆಗಾಗಿ ಕೆಲ ವಾಸ್ತು ಉಪಾಯಗಳನ್ನು ನೀಡಲಾಗಿದೆ: –
ಮನೆಯ ಮುಖ್ಯ ಬಾಗಿಲಿನ ಎದುರು ಪೂಜಾ ಕೋಣೆ ಇರಬಹುದೇ? ವಾಸ್ತು ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಎದುರು ಪೂಜಾ ಕೋಣೆ ಇರಬಾರದು, ಇದ್ದರೆ ಅದು ಪೂಜಾ ಕೋಣೆಯಲ್ಲಿ ಸೃಷ್ಟಿಯಾದ ಸಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ.
ಪೂಜಾ ಕೋಣೆಯಲ್ಲಿ ಕತ್ತಲು ಇರಬಾರದು. ಪೂಜಾ ಕೋಣೆ ಎಂಬುದು ನಿಮ್ಮ ಮನೆಯಲ್ಲಿ ದೇವರ ರೂಮ್ ಆಗಿರುತ್ತದೆ ಮತ್ತು ಅದು ಎಂದೂ ಕತ್ತಲಾಗಿರಬಾರದು. ಪೂಜಾ ಕೋಣೆಯಲ್ಲಿ ಕತ್ತಲಿದ್ದರೆ ಅದು ಇಡೀ ಮನೆಯ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ; ಆದ್ದರಿಂದ ಈ ಕೋಣೆಯಲ್ಲಿ ಒಂದು ತೈಲದ ದೀಪವನ್ನಾದರೂ ಬೆಳಗುವುದು ಶುಭಕರ.
ಪೂಜಾ ಕೋಣೆಯನ್ನು ಎಂದೂ ನಿಮ್ಮ ಬೆಡ್‌ರೂಮ್‌ನಲ್ಲಿ ಸ್ಥಾನೀಕರಿಸಬೇಡಿ, ಏಕೆಂದರೆ ಬೆಡ್‌ರೂಮ್‌ ಇರುವುದು ವಿಶ್ರಾಂತಿ ಮತ್ತು ಭೋಗಕ್ಕಾಗಿ. ಟಾಯ್ಲೆಟ್‌ನ ಋಣಾತ್ಮಕ ಶಕ್ತಿಯು ಪೂಜಾ ಕೋಣೆಯ ಶುಭಕರ ವಾತಾವರಣವನ್ನು ಹಾಳು ಮಾಡುವುದನ್ನು ತಡೆಯಲು ಪೂಜಾ ಕೋಣೆಯ ಮೇಲೆ, ಕೆಳಗೆ ಅಥವಾ ಎದುರು ಟಾಯ್ಲೆಟ್ ನಿರ್ಮಿಸುವುದನ್ನು ತಪ್ಪಿಸಿ.

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...