Saturday, 15 June 2019

ಮನೆ ನಿರ್ಮಾಣಕ್ಕೆ ಅಗತ್ಯ ವಾಸ್ತು ನಿಯಮ


ಜನರು ನಿವೇಶನ ಖರೀದಿಸುತ್ತಾರೆ. ಮನೆ ಕಟ್ಟಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಲೇಔಟ್‌ ಮತ್ತು ಮನೆಯ ಬಗ್ಗೆ ಇರುವ ವಾಸ್ತು ನಿಯಮಗಳನ್ನು ಪಾಲಿಸಲಾಗಿದೆಯಾ ಎಂದು ಪರಿಶೀಲಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ ಸೂಕ್ತ ವಾಸ್ತು ನಿಯಮ ಪಾಲಿಸಿದರೆ ಮಾತ್ರ ನಿವಾಸಿಗಳು ನೆಮ್ಮದಿಯಿಂದ ಸುಖ ಜೀವನ ನಡೆಸಬಹುದು. ಅದಕ್ಕೆ ಇಲ್ಲಿದೆ ಒಂದಿಷ್ಟು ಸಲಹೆ. 

ಯಾವುದೇ ನಿವೇಶನ ಇರಲಿ ಅದರ ನೈರುತ್ಯ ಭಾಗದಲ್ಲಿ ಮನೆಯನ್ನು ಕಟ್ಟಬೇಕು. 

ಎತ್ತರದ ಸೇರ್ಪಡೆಯನ್ನು ಕಟ್ಟಡಕ್ಕೆ ಮಾಡಬೇಕಾದರೆ ಅದು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿರಬೇಕು. 

ಮನೆಯ ಪೂರ್ವ ಭಾಗ ಯಾವ ಕಾರಣಕ್ಕೂ ಇತರ ಭಾಗಕ್ಕಿಂತ ಎತ್ತರ ಇರಬಾರದು. 

ಮಳೆ ನೀರು ಮನೆಯ ಉತ್ತರ ಮೂಲೆಯಿಂದ ಪೂರ್ವ ಮೂಲೆಗೆ ಹರಿದು ಹೋಗುವಂತಿರಬೇಕು. 

ನೇರವಾಗಿ ಮೂರು ಬಾಗಿಲು ಅಥವಾ ಒಂದಕ್ಕೊಂದು ತದ್ವಿರುದ್ಧವಾಗಿ ಬಾಗಿಲು ಇರಬಾರದು. 

ಕಾವಲುಗಾರನ ಕೋಣೆ ನಿವೇಶನದ ಆಗ್ನೇಯ ಭಾಗದಲ್ಲಿ ಇರಬೇಕು. 

ಔಟ್‌ಹೌಸ್‌, ಗ್ಯಾರೇಜ್‌ ಇತ್ಯಾದಿ ಈಶಾನ್ಯ, ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. 

ಇದಕ್ಕೆ ಆವರಣ ಗೋಡೆ ಅಂಟಿಕೊಂಡಿರುವುದನ್ನು ಯಾವಾಗಲೂ ತಪ್ಪಿಸಬೇಕು. 

ಸ್ಟೋರ್‌ ರೂಂನ್ನು ಆವರಣ ಗೋಡೆಗೆ ಅಂಟಿಕೊಂಡತೆ ನೈರುತ್ಯ ದಿಕ್ಕಿನಲ್ಲಿ ಕಟ್ಟಿಸಬೇಕು. 

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...