Friday, 13 September 2019

ನಿಮ್ಮ ನೆಮ್ಮದಿಗಾಗಿ ಇಲ್ಲಿದೆ ನೋಡಿ ವಾಸ್ತು ಟಿಪ್ಸ್

ನಮ್ಮ ಮನೆಯಲ್ಲಿನ ವಾಸ್ತು ಕೂಡ ನಮ್ಮ ಆರೋಗ್ಯ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ವಾಸ್ತುಶಾಸ್ತ್ರದ ಪ್ರಕಾರ, ಶೌಚಾಲಯ ಮತ್ತು ಸ್ನಾನದ ಮನೆಗಳು ಮನೆಯ ಋಣಾತ್ಮಕ ಶಕ್ತಿಯ ಮೂಲಸ್ಥಾನಗಳಂತೆ. ಇವುಗಳನ್ನು ವಾಸ್ತು ಮಾರ್ಗದರ್ಶನಗಳ ಪ್ರಕಾರ ಕಟ್ಟದಿದ್ದರೆ, ಮನೆ ಮತ್ತು ಮನೆಯಲ್ಲಿ ವಾಸಿಸುವ ಜನರ ಮೇಲೆ ಅವು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು.

ಎರಡು ಕಡೆ, ಎಂದರೆ ಮುಂಭಾಗ ಹಾಗೂ ಹಿಂಭಾಗದಲ್ಲಿ ರಸ್ತೆಗಳಿರುವ ಮತ್ತು 90 ಡಿಗ್ರಿ ಮೂಲೆಗಳಿರುವ ನಿವೇಶನ ಅತ್ಯುತ್ತಮವಾದದ್ದು.

ಅಡುಗೆ ಒಲೆಯು ಪೂರ್ವ ಇಲ್ಲವೇ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ವ್ಯವಸ್ಥೆ ಮಾಡಿ. ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನ ಕಡೆಗಿರಬೇಕು.

ನೈಋತ್ಯ ಕಿಟಕಿಗಳ ಬದಲಿಗೆ ಉತ್ತರ ಮತ್ತು ಪೂರ್ವದ ಕಿಟಕಿಗಳನ್ನು ತೆರೆದಿಡುವುದು ಒಳ್ಳೆಯದು. ಇದರಿಂದ ಸಂತೋಷ, ಆರೋಗ್ಯ ಮತ್ತು ಕೌಟುಂಬಿಕ ಸಾಮರಸ್ಯ ಉಂಟಾಗುತ್ತದೆ.

ಋಣಾತ್ಮಕ ಶಕ್ತಿಯ ಹರಿವನ್ನು ತಡೆಯಲು ಟಾಯ್ಲೆಟ್ / ಬಾತ್‌ರೂಮನ್ನು ಉಪಯೋಗಿಸದೇ ಇರುವಾಗಲೂ ಅವುಗಳ ಬಾಗಿಲನ್ನು ಮುಚ್ಚಿರಿ.

ಇನ್ನು ನಿಮ್ಮ ಮಗು ಅಧ್ಯಯನ ಮಾಡುವ ಟೇಬಲ್, ಟಾಯ್ಲೆಟ್ ಹತ್ತಿರವಿದೆಯೇ? ಅಧ್ಯಯನ ಮಾಡುವಾಗ ಟಾಯ್ಲೆಟ್ ಅಥವಾ ಬಾತ್‌ರೂಮ್ ಎದುರು ಕುಳಿತುಕೊಳ್ಳಬಾರದಂತೆ.

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...