ಅಡುಗೆಮನೆಗಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದು ಎರಡು ಕಾರಣಗಳಿಂದ ಮುಖ್ಯವಾಗುತ್ತದೆ. ಮೊದಲನೆಯದಾಗಿ ಇದು ಆಹಾರ ತಯಾರಾಗುವಂತಹ ಸ್ಥಳ ಮತ್ತು ಎರಡನೆಯದಾಗಿ, ಮನೆಯ ಹೆಂಗಸರು ತಮ್ಮ ಬಹಳಷ್ಟು ಸಮಯವನ್ನು ಇಲ್ಲಿಯೇ ಕಳೆಯುತ್ತಾರೆ. ವಾಸ್ತು, ಪೌಷ್ಟಿಕ ಆಹಾರ ಮತ್ತು ಮಹಿಳೆಯರ ಆರೋಗ್ಯವನ್ನು ಖಾತ್ರಿಪಡಿಸುತ್ತದೆ. ಮತ್ತೊಂದು ಪ್ರಮುಖ ಕಾರಣವೇನೆಂದರೆ ಈ ಸ್ಥಳವು, ಮನೆಯಲ್ಲಿ ಅಗ್ನಿ ತತ್ವವು ನೆಲೆಸಿರುವಂತಹ ಸ್ಥಳ, ಹೀಗಾಗಿ ಈ ಸ್ಥಳವನ್ನು ಎಚ್ಚರದಿಂದ ವಿನ್ಯಾಸಗೊಳಿಸಬೇಕು. ಅಡುಗೆಮನೆಗಾಗಿ ವಾಸ್ತು, ಅಡುಗೆಮನೆಯಲ್ಲಿ ಸಲಕರಣೆಗಳನ್ನು ಇರಿಸಬೇಕಾದ ಸ್ಥಳ ಮತ್ತು ದಿಕ್ಕಿನ ಕುರಿತು ನಿಯಮಗಳನ್ನು ತಿಳಿಸುವುದಷ್ಟೇ ಅಲ್ಲದೆ, ಅಡುಗೆ ಮನೆಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿ ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಆಧರಿಸಿ ಅಂತಹ ವ್ಯಕ್ತಿ ಇರಬೇಕಾದ ಸ್ಥಳ ಮತ್ತು ದಿಕ್ಕಿನ ನಿಯಮಗಳನ್ನೂ ತಿಳಿಸುತ್ತದೆ. ವಾಸ್ತುವಿನಲ್ಲಿ ಅಡುಗೆಮನೆಗಾಗಿಯೇ ಒಂದು ದಿಕ್ಕನ್ನು ನಿರ್ದಿಷ್ಟಪಡಿಸಲಾಗಿದೆ. ಆದರೆ ಕಟ್ಟಡ ನಿರ್ಮಾಣವನ್ನು ಆಧರಿಸಿ ಈ ದಿಕ್ಕು ಬದಲಾಗುತ್ತದೆ.
ಅಡುಗೆಮನೆಗಾಗಿ ವಾಸ್ತು ಉಪಾಯಗಳಲ್ಲಿ ಕೆಲವನ್ನು ಈ ಕೆಳಗೆ ನೀಡಲಾಗಿದೆ: –
ನಿಮ್ಮ ಅಡುಗೆಮನೆಯ ಸಲಕರಣೆಗಳನ್ನು ಯಾವ ರೀತಿ ಇರಿಸಲಾಗಿದೆ ಎಂದು ಪರಿಶೀಲಿಸಿ. ಸ್ಟೊವ್ ಮತ್ತು ನೀರಿನ ಸಿಂಕ್‌ಗಳನ್ನು ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇರಿಸದೇ ಇದ್ದರೆ, ಅದರಿಂದ ಮನೆಯಲ್ಲಿ ಸತತ ಜಗಳಗಳಾಗುತ್ತಿರುತ್ತವೆ. ಇವೆರಡೂ ವಿಭಿನ್ನ ತತ್ವಗಳನ್ನು ಪ್ರತಿನಿಧಿಸುವುದರಿಂದ, ಎರಡನ್ನೂ ಒಟ್ಟಿಗೇ ಇರಿಸುವುದು ಮನೆಯಲ್ಲಿ ಟೆನ್ಶನ್ ಉಂಟು ಮಾಡುತ್ತದೆ.
ಮನೆಯ ಮುಖ್ಯಸ್ಥರಾದ ವ್ಯಕ್ತಿಯ ಅನುಕೂಲಕರ ದಿಕ್ಕಿನಲ್ಲಿ ಸ್ಟೊವ್ ನಾಬ್ ಅನ್ನು ಸ್ಥಾನೀಕರಿಸಬೇಕು. ಇದು ಇಡೀ ಕುಟುಂಬಕ್ಕೆ ಉತ್ತಮ ಆರೋಗ್ಯವನ್ನು ಖಚಿತಪಡಿಸುತ್ತದೆ. ನಿಮ್ಮ ಅನುಕೂಲಕರ ದಿಕ್ಕುಗಳು ಯಾವುವೆಂದು ಅರಿತುಕೊಳ್ಳಲು ಸರಳ ವಾಸ್ತು ನಿಮಗೆ ಸಹಾಯ ಮಾಡಬಲ್ಲದು.
ಅಡುಗೆ ಮನೆಯು ಮೆಟ್ಟಿಲುಗಳ ಹತ್ತಿರ ಇರಬಾರದು, ಈ ರೀತಿ ಇದ್ದರೆ ಶಕ್ತಿಯ ಹರಿವಿಗೆ ತಡೆಯುಂಟಾಗುತ್ತದೆ.

No comments:
Post a Comment