Tuesday, 29 October 2019

ಅಡುಗೆ ಮನೆ ಈ ಭಾಗದಲ್ಲಿ ಇದ್ದರೆ ಕಲಹ ಗ್ಯಾರಂಟಿ!

ಮನೆಯ ವಾಸ್ತು ನಮ್ಮ ಜೀವನದ ಸಂತಸ-ಬೇಸರಕ್ಕೆ ಕಾರಣವಾಗುತ್ತದೆ ಎಂಬುದು ನಮ್ಮ ನಂಬಿಕೆ. ಅದರಲ್ಲೂ ಅಡುಗೆ ಮನೆ ಎನ್ನುವುದು ಒಂದು ಮನೆಯಲ್ಲಿ ಬಹುಮುಖ್ಯವಾದ ಭಾಗ.


ಅದು ಮನೆಯ ಸದಸ್ಯರನ್ನು ಬೆಸೆಯುವ ಜಾಗ ಎಂದರೂ ತಪ್ಪಾಗಲಾರದು. ಈ ಅಡುಗೆ ಮನೆ ಎನ್ನುವುದು ಮನೆಯ ಯಾವ ಭಾಗದಲ್ಲಿ ಎನ್ನುವುದರ ಮೇಲೆ ಆ ಮನೆಯ ಸುಖ-ದುಃಖ ನಿರ್ಧಾರವಾಗಿರುತ್ತದೆ.

ಒಂದು ಮನೆಯಲ್ಲಿ ಅಡುಗೆ ಮನೆ ಎನ್ನುವುದು ಮನೆಯ ಆಗ್ನೇಯ ಅಥವಾ ವಾಯವ್ಯ ದಿಕ್ಕಿನಲ್ಲಿರಬೇಕು. ಆದರೆ ಯಾವುದೇ ಕಾರಣಕ್ಕೂ ನೈಋತ್ಯ, ಉತ್ತರ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಬೇಡಿ. ಅಡುಗೆ ಮನೆ ಈ ಭಾಗದಲ್ಲಿ ಇಟ್ಟುಕೊಂಡರೆ ಅಂತಹ ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಕಲಹ, ವಿರಸ ಸಾಮಾನ್ಯವಾಗಿರುತ್ತದೆ. ಹೀಗಾಗಿ ಮನೆಯಲ್ಲಿ ಶಾಂತಿ ನೆಲೆಸಿರಬೇಕಾದರೆ ಅಡುಗೆ ಮನೆ ವಾಸ್ತು ಕೂಡಾ ಮುಖ್ಯವಾಗುತ್ತದೆ.

Tuesday, 22 October 2019

ಆರೋಗ್ಯ ಮತ್ತು ಸಂಪತ್ತಿಗೆ ವಾಸ್ತು ಟಿಪ್ಸ್

* ಕಸ ಗುಡಿಸುವ ಪೊರಕೆಗಳನ್ನು ಕಣ್ಣಿನಿಂದ ಮರೆಯಾಗುವಂತೆ ಮ‌ೂಲೆಯಲ್ಲಿ ತಲೆಕೆಳಗಾಗಿ ಇಡುವುದರಿಂದ ಕುಟುಂಬದ ಜೀವನ ತೊಳೆದುಹೋಗದಂತೆ ತಪ್ಪಿಸುತ್ತದೆ.

* ಸ್ನಾನದ ಗೃಹ ಅಥವಾ ಅಡುಗೆ ಮನೆಯ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕದಂತೆ ಖಾತರಿ ಮಾಡಿಕೊಳ್ಳಿ.ಸತತ ನೀರಿನ ತೊಟ್ಟಿಕ್ಕುವಿಕೆಯು ನಕಾರಾತ್ಮಕ ಶಕ್ತಿಯನ್ನು ಸೂಸುವುದರಿಂದ ನೀರಿನ ತೊಟ್ಟಿಕ್ಕುವಿಕೆಯು ಸಂಪತ್ತಿನ ಸೋರುವಿಕೆಯನ್ನು ಸಂಕೇತಿಸುತ್ತದೆ.

* ಸ್ವಚ್ಛವಾದ ಡೆಸ್ಕ್ ಸ್ಪಷ್ಟ ಯೋಚನೆಗೆ ಪ್ರೋತ್ಸಾಹಿಸುತ್ತದೆ. ಇದು ಆರ್ಥಿಕ ಶಕ್ತಿ ಮತ್ತು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಕಂಪ್ಯೂಟರ್, ಫೋನ್ ಮುಂತಾದುವನ್ನು ಡೆಸ್ಕ್‌ನಲ್ಲಿ ಬಳಸಬಹುದು.

* ಎಲ್ಲ ಗಡಿಯಾರಗಳು ಸುಸ್ಥಿತಿಯಲ್ಲಿ ಇರಬೇಕು. ಕಾರ್ಯನಿರ್ವಹಿಸದ ಗಡಿಯಾರವು ಹಣಕಾಸು ಸ್ಥಿತಿ ಸುಧಾರಿಸದೇ ಅಲ್ಲೇ ನಿಲ್ಲುವಂತೆ ಮಾಡುತ್ತದೆ. ನಿಧಾನ ಗಡಿಯಾರದಿಂದ ನಿಮ್ಮ ಕೆಲಸಗಳು ವಿಳಂಬವಾಗುತ್ತದೆ.

* ನಿಮ್ಮ ಮಲಗುವ ಕೋಣೆಯ ಕಿಟಕಿಗಳನ್ನು ಕನಿಷ್ಠ 20 ನಿಮಿಷಗಳ ಕಾಲ ತೆರೆದು ಹೊಸ ಗಾಳಿ ಒಳಪ್ರವೇಶಕ್ಕೆ ಅವಕಾಶ ನೀಡಿ. ಇಲ್ಲದಿದ್ದರೆ ಪ್ರತಿ ರಾತ್ರಿ ನೀರಸ ಗಾಳಿಯೊಂದಿಗೆ ನೀವು ಮಲಗಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಿದರೆ, ಜೀವನದಲ್ಲಿ ಉತ್ತಮ ಅದೃಷ್ಟವನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ?

* ನೆಲದಿಂದ ಒಂದು ಅಡಿ ಎತ್ತರದಲ್ಲಿ ಹಾಸಿಗೆಯಿರಬೇಕು. ಇದರಿಂದ ನೆಲದಲ್ಲಿ ಮುಕ್ತವಾಗಿ ಶಕ್ತಿ ಹರಿಯಲು ಅವಕಾಶ ಕಲ್ಪಿಸುತ್ತದೆ. ಶಕ್ತಿಯ ಮುಕ್ತ ಹರಿಯುವಿಕೆ ತಡೆದರೆ ನಿಮ್ಮ ಸಂಪತ್ತು ಗಳಿಸುವ ಅವಕಾಶ ಕೂಡ ಮೊಟಕಾಗುತ್ತದೆ.

* ತಲೆಯ ಹಿಂಭಾಗದಲ್ಲಿ ಭದ್ರಗೋಡೆಯೊಂದಿಗೆ ಮಲಗಿ. ಈ ಸ್ಥಿತಿಯು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ತಲೆಯ ಹಿಂಭಾಗದಲ್ಲಿ ಕಿಟಕಿಗಳು ಮತ್ತು ಬಾಗಿಲಿಗೆ ಅವಕಾಶ ಕೊಡಬಾರದು.

* ನೆಲವನ್ನು ಮನೆಯ ಒಳಗೆ ಗುಡಿಸಿಕೊಂಡು ಹೋಗಬೇಕು. ಮುಖ್ಯ ದ್ವಾರದತ್ತ ಕಸ ಗುಡಿಸುವುದರಿಂದ ಸಂಪತ್ತು ಕ್ಷೀಣಿಸುತ್ತದೆ.

* ಕಸದ ಬುಟ್ಟಿಗಳನ್ನು ಸದಾ ಮುಚ್ಚಿರಬೇಕು. ಇಲ್ಲದಿದ್ದರೆ ಸಂಪತ್ತಿನ ಶಕ್ತಿಯ ಭ್ರಷ್ಟತೆಗೆ ದಾರಿಕಲ್ಪಿಸುತ್ತದೆ.

* ಮನೆಯ ಮುಖ್ಯದ್ವಾರದಲ್ಲಿ ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬಾರದು. ಮುಖ್ಯದ್ವಾರದಲ್ಲಿ ಮುಕ್ತ ಮತ್ತು ಸ್ವಚ್ಛ ಜಾಗವಿರಬೇಕು. ಇಲ್ಲದಿದ್ದರೆ ಗಾಳಿಯೊಂದಿಗೆ ಹರಿಯುವ ಶಕ್ತಿಯು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯೊಂದಿಗೆ ಮಿಶ್ರಣಗೊಂಡು ಮನೆಯಲ್ಲಿ ನಷ್ಟಗಳು ಪ್ರಾಪ್ತವಾಗುತ್ತದೆ.

* ತೊಳೆಯದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೇ ಬಿಡದೇ ಆದಷ್ಟು ಬೇಗ ತೊಳೆಯುವುದು ಒಳ್ಳೆಯದು. ತಕ್ಷಣವೇ ತೊಳೆಯದಿರುವುದು ಅಪೂರ್ಣತೆಯ ಸಂಕೇತವಾಗಿದ್ದು, ಹಣಕಾಸು ಪರಿಸ್ಥಿತಿಯ ಅವ್ಯವಸ್ಥೆಗೆ ಪುರಾವೆ ಒದಗಿಸುತ್ತದೆ.

* ಮುಖ್ಯ ಪ್ರವೇಶದ್ವಾರದ ಮೇಲೆ ಶೌಚಾಲಯಗಳು ಇರಬಾರದು. ಅದು ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ. ಇದು ಮುಖ್ಯದ್ವಾರದಿಂದ ಪ್ರವೇಶಿಸುವ ನಕಾರಾತ್ಮಕ ಶಕ್ತಿಗೆ ಹಸ್ತಕ್ಷೇಪ ಉಂಟುಮಾಡುತ್ತದೆ.

Wednesday, 16 October 2019

ಚಪ್ಪಲಿಗೂ ನಿಮ್ಮ ವೃತ್ತಿ ಜೀವನದ ಯಶಸ್ಸಿಗೂ ಸಂಬಂಧವಿದೆ!

ಚಪ್ಪಲಿ ಎನ್ನುವುದು ಹಿಂದೂ ನಂಬಿಕೆ ಪ್ರಕಾರ ಶನಿಗೆ ಸಮಾನ. ಇದನ್ನು ಹೇಗೆ ಧರಿಸುತ್ತೀರಿ, ಇಟ್ಟುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ವೃತ್ತಿ ಜೀವನದ ಯಶಸ್ಸು, ಅಪಜಯ ನಿರ್ಧಾರವಾಗುತ್ತದೆ ಎಂದರೆ ನೀವು ನಂಬಲೇಬೇಕು.
ಚಪ್ಪಲಿಗೂ ನಮ್ಮ ಜೀವನದ ಸುಖ-ದುಃಖಕ್ಕೂ ಸಂಬಂದವಿದೆ. ವಾಸ್ತು ಪ್ರಕಾರ ನಮಗೆ ಸರಿಹೊಂದದ ಚಪ್ಪಲಿ ಧರಿಸಿದರೆ ಐಶ್ವರ್ಯಕ್ಕೆ ಧಕ್ಕೆಯಾಗುವುದಲ್ಲದೆ, ವೃತ್ತಿ ಜೀವನದಲ್ಲೂ ಸೋಲಿಗೆ ಕಾರಣವಾಗುತ್ತದೆ.

ಯಾವತ್ತೂ ಯಾರಾದರೂ ಉಡುಗೊರೆಯಾಗಿ ಕೊಟ್ಟ, ಕದ್ದು ತಂದ ಚಪ್ಪಲಿ ಅಥವಾ ನಮ್ಮ ಚಪ್ಪಲಿ ಕಳುವಾಯಿತೆಂದು ಅಲ್ಲೇ ಇದ್ದ ಇನ್ನೊಂದು ಚಪ್ಪಲಿ ಹಾಕಿಕೊಂಡು ಬರುವುದು ಮುಂತಾದ್ದನ್ನು ಮಾಡಬಾರದು.

ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಹರಿದು ಹೋದ, ಕಿತ್ತು ಹೋದ ಚಪ್ಪಲಿ ಹಾಕಿಕೊಂಡು ಹೋಗಬೇಡಿ. ಇದು ದುರದೃಷ್ಟ ತರುತ್ತದೆ. ಹಾಗೆಯೇ ಊಟ ಮಾಡುವಾಗ ಚಪ್ಪಲಿ ಹಾಕಿಕೊಂಡು ಊಟ ಮಾಡಬಾರದು. ಹಾಗೆಯೇ ಚಪ್ಪಲಿಯನ್ನು ಇಡುವ ಸ್ಟ್ಯಾಂಡ್ ನ್ನು ಉತ್ತರ ದಿಕ್ಕಿಗೆ ಇಡುವುದರಿಂದ ಶುಭವಾಗದು. ಹಾಗೆಯೇ ಪ್ರವೇಶ ಧ್ವಾರದ ಬಳಿಯೇ ಶೂ ರ್ಯಾಕ್ ಇಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Tuesday, 15 October 2019

ವಾಸ್ತು ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು!

ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.

ನಿಮ್ಮ ಮಗುವು-
*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.

*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.

*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.

*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.

*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.

*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.

*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.

*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.

*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.

*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.

*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.

*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.

*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.

*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ

*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.

*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.

*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.

*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.

*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ.

*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ.

ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.

Monday, 14 October 2019

ನೈಜ ವಾಸ್ತುವಿನ ನಿಯಮ

ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.

ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ.

ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ.

Sunday, 13 October 2019

ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ವಾಸ್ತು!

ಮನೆಗೆ ಹಾಕುವ ಬಣ್ಣ ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಮನೆಯ ವಾಸ್ತು ಸರಿಯಿದ್ದರೆ, ಮನೆಯವರ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೂ ಆರ್ಥಿಕ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಆರೋಗ್ಯ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಮನೆಯ ಗೋಡೆಗಳಿಗೆ ಸರಿಯಾದ ಬಣ್ಣವನ್ನು ಬಳಿಯಿರಿ.

ಅಡುಗೆ ಒಲೆಯು ಪೂರ್ವ ಇಲ್ಲವೇ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ವ್ಯವಸ್ಥೆ ಮಾಡಿ. ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನ ಕಡೆಗಿರಬೇಕು.

ನೈಋತ್ಯ ಕಿಟಕಿಗಳ ಬದಲಿಗೆ ಉತ್ತರ ಮತ್ತು ಪೂರ್ವದ ಕಿಟಕಿಗಳನ್ನು ತೆರೆದಿಡುವುದು ಒಳ್ಳೆಯದು. ಇದರಿಂದ ಸಂತೋಷ, ಆರೋಗ್ಯ ಮತ್ತು ಕೌಟುಂಬಿಕ ಸಾಮರಸ್ಯ ಉಂಟಾಗುತ್ತದೆ.

ಅಡುಗೆ ಮಾಡುವಾಗ, ತಿನ್ನುವಾಗ ಅಥವಾ ಕುಡಿಯುವಾಗ ಉತ್ತರ ದಿಕ್ಕಿನತ್ತ ಮುಖ ಮಾಡಬೇಡಿ. ಉತ್ತಮ ರುಚಿ, ಜೀರ್ಣಶಕ್ತಿ ಮತ್ತು ಆರೋಗ್ಯಕರ ದೇಹಕ್ಕಾಗಿ ಪೂರ್ವದ ಕಡೆ ಮುಖ ಮಾಡುವುದು ಉತ್ತಮ.

Wednesday, 9 October 2019

ನಿಮ್ಮ ಮನೆಯ ವಾಸ್ತು ಹೀಗಿರಲಿ...




ನಿಮ್ಮ ಮನೆಯ ವಾಸ್ತು ಹೀಗಿರಲಿ...

* ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

* ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

* ದಕ್ಷಿಣ ಅಧವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

ಇದರಲ್ಲಿ ಇನ್ನಷ್ಟು ಓದಿ :  ಮನೆ, ವಾಸ್ತು, ಪೂರ್ವ, ದಕ್ಷಿಣ

ಅದೃಷ್ಟ ವೃದ್ಧಿಸುವ ಅಕ್ವೇರಿಯಂ

ನಿಮ್ಮ ಅದೃಷ್ಟ ವೃದ್ಧಿಸಬೇಕೆ ಹಾಗಾದರೆ ಮನೆಗೆ ಒಂದು ಅಕ್ವೇರಿಯಮ್ ತನ್ನಿ. ಬಂಗಾರದ ಜಾತಿಯ ಮೀನುಗಳನ್ನು (ಗೋಲ್ಡ್ ಫಿಶ್) ಮನೆಯ ನೀರಿನ ಟ್ಯಾಂಕ್‌ನಲ್ಲಿ ಅಥವಾ ಅಕ್ವೇರಿಯಮ್‌ನಲ್ಲಿ ಶೇಖರಿಸಿ ಇಡಿ. ಇದೊಂದು ಅದೃಷ್ಟ ವೃದ್ಧಿಸುವ ಪ್ರಭಾವಿ ಮಾರ್ಗ.

ಆದರೆ ಈ ಟ್ಯಾಂಕ್‌ನಲ್ಲಿ ಒಂಬತ್ತು ಬಂಗಾರದ ಮೀನುಗಳನ್ನು ಇಡಬೇಕು. ಅವುಗಳಲ್ಲಿ ಎಂಟು ಕೆಂಪು ಬಣ್ಣ ಅಥವಾ ಬಂಗಾರದ ಬಣ್ಣ ಮತ್ತು ಒಂದು ಕಪ್ಪುಬಣ್ಣದ್ದಾಗಿರಬೇಕು. ಒಂದೊಮ್ಮೆ ಇದರಲ್ಲಿ ಒಂದು ಬಂಗಾರದ ಮೀನು ಸತ್ತರೆ ಚಿಂತಿಸುವ ಅಗತ್ಯವಿಲ್ಲ. ಇನ್ನೊಂದನ್ನು ತಂದು ಟ್ಯಾಂಕ್ ನಲ್ಲಿ ಬಿಡಬಹುದು. ಅಕ್ವೇರಿಯಂನಲ್ಲಿ ಒಂದು ಮೀನು ಸತ್ತರೆ ಮನೆಯಲ್ಲಿನ ದುರಾದೃಷ್ಟ ತೊಲಗುತ್ತದೆ ಎನ್ನುವ ನಂಬಿಕೆ. ಇಲ್ಲದಿದ್ದರೆ ಆಪತ್ತು ಮನೆಯ ಕುಟುಂಬದ ಸದಸ್ಯನಿಗೆ ಬರುತ್ತಿತ್ತು ಎಂದು ಹೇಳಲಾಗುತ್ತದೆ.

ಶಯನಗೃಹ, ಶೌಚಾಲಯಗಳಲ್ಲಿ ಬಂಗಾರದ ಮೀನುಗಳನ್ನು ಇಡಬಾರದು. ಉತ್ತಮ ಸ್ಥಳವೆಂದರೆ ಮನೆಯಹಾಲ್‌ ಮತ್ತು ಸರಿಯಾದ ದಿಕ್ಕು ಪೂರ್ವ,ಆಗ್ನೆಯ ಅಥವಾ ಉತ್ತರ. ಅಕ್ವೇರಿಯಂಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ಇದು ಅದೃಷ್ಟ ತಂದು ಕೊಡುತ್ತದೆ. ತಪ್ಪು ಸ್ಥಳದಲ್ಲಿ ಇಟ್ಟರೆ ಆಪಾಯಕಾರಿ ಎಂದು ರುಜುವಾತುಪಡಿಸುತ್ತದೆ. ಪ್ರವೇಶದ್ವಾರದ ಬಲಗಡೆ ಅಕ್ವೇರಿಯಂ ಇಡಬಾರದು. ಹಾಗೆ ಇಟ್ಟಲ್ಲಿ ಮನೆಯ ಯಜಮಾನನ ದೃಷ್ಟಿ ಪರಸ್ತ್ರೀಯರೆಡೆಗೆ ಹರಿಯುತ್ತದೆ ಎನ್ನಲಾಗಿದೆ.

Tuesday, 8 October 2019

ಜಾಗ ಕೊಳ್ಳಬೇಕಾಗುವಾಗ ಪಾಲಿಸಬೇಕಾದ ವಾಸ್ತು!

ಒಂದು ಮನೆ ಅಥವಾ ಮನುಷ್ಯನು ವಾಸ ಮಾಡುವ ಜಾಗವನ್ನು ಕೊಳ್ಳುವ ಮುನ್ನ ಮೊದಲೇ ಜಾಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು.  ಒಂದು ಜಾಗವು ಕೊಂಡುಕೊಳ್ಳುವಾಗ ಆ ಜಾಗವು ನಮ್ಮ ಜಾತಕಕ್ಕೆ ಅನುಕೂಲಕರವಾಗಿದ್ದರೆ  ಎಲ್ಲವೂ ಶುಭವಾಗುತ್ತದೆ. ಇಲ್ಲದಿದ್ದರೆ ಸರಿಯಾದ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು.


ಭೂಮಿ ಅಥವಾ ಸೈಟ್ ನ ಯಾವುದಾದರೂ ಒಂದು ಭಾಗದಲ್ಲಿ ಅರ್ಧ ಅಡಿ ವ್ಯಾಸ ಒಂದು ಅಡಿ ಆಳವಿರುವಂತೆ ಗುಂಡಿಯೊಂದನ್ನು ತೋಡಿ. ಹೀಗೆ ಅಗೆದ ಜಾಗದಲ್ಲಿ ತೋರು ಬೆರಳಿನಿಂದ ಓಂಕಾರ ಶಬ್ಧವನ್ನು ಬರೆಯಿರಿ. ಆಮೇಲೆ ಅಷ್ಟದಿಕ್ಕುಗಳ ದೇವರನ್ನು ನೆನೆಯಿರಿ. ಮಣ್ಣನ್ನು ಶೇಖರಣೆ ಮಾಡಿ. ಮೂರು ರಾತ್ರಿಗಳ ಕಾಲ ಆ ಜಾಗವನ್ನು ಹಾಗೇ ಬಿಡಿ. ನಾಲ್ಕನೆಯ ದಿನ ಅಗೆದ ಜಾಗದಲ್ಲಿ ಶೇಖರಿಸಿಟ್ಟುಕೊಂಡ ಮಣ್ಣನ್ನು ತುಂಬಿ. ಒಂದೊಮ್ಮೆ ಮಣ್ಣು ತುಂಬಿದ ಮೇಲೂ ಒಂದಷ್ಟು ಮಣ್ಣು ಉಳಿದರೆ ನೀವು ಕೊಳ್ಳಲಿರುವ ಜಾಗ ಒಳ್ಳೆಯದು ಮುಂದೆ ಅಭಿವೃದ್ಧಿ ಕಾಣುತ್ತದೆ ಎಂದು ಅರ್ಥ. ಶೇಖರಿಸಿದ ಮಣ್ಣು ತುಂಬದೇ ಹೋದರೆ ಆ ಜಾಗ ಪ್ರಶಸ್ತವಲ್ಲ ಎಂದು ಅರ್ಥ.

Monday, 7 October 2019

ಬೆಕ್ಕು ಶಕುನವೇ ಅಥವಾ ಅಪಶಕುನವೇ?

* ಬೆಕ್ಕು ಅಳುವುದು ಮತ್ತು ಜಗಳವಾಡುವುದು ನೋಡಿದರೆ ನಿಮಗೆ ಅಪಶಕುನವಾಗುತ್ತದೆ. 

* ನೀವು ಶುಭಕಾರ್ಯಕ್ಕೆ ಹೋಗುತ್ತಿರಬೇಕಾದರೆ ಬೆಕ್ಕಿನ ಬಾಯಿಯಲ್ಲಿ ಮಾಂಸದ ತುಂಡು ಇರುವುದನ್ನು ನೋಡಿದರೆ ಅದು ಶುಭವಾಗಿರುತ್ತದೆ. 

* ಮಲಗಿದ ವ್ಯಕ್ತಿಯ ಕಾಲಿಗೆ ಬೆಕ್ಕು ತಗುಲಿದರೆ ಅನಾರೊಗ್ಯದ ಸೂಚನೆಯಾಗಿರುತ್ತದೆ . 

* ಕೆಲಸಕ್ಕಾಗಿ ಅಥವಾ ಇನ್ನಾವುದೇ ಶುಭಕಾರ್ಯಕ್ಕೆ ಹೊರಟಿರುವಾಗ ಬೆಕ್ಕು ಅಡ್ಡ ಬಂದರೆ ಅದು ಅಪಶಕುನವಾಗಿರುತ್ತದೆ. 

* ನೀವು ಮಲಗಿರುವಾಗ ಬೆಕ್ಕು ನಿಮ್ಮ ಮೇಲಿಂದ ಹಾರಿದರೆ ಸಾವಿನ ಕ್ಷಣಗಳು ಕಷ್ಟಮಯವಾಗಿರುತ್ತವೆ. 

* ಎಲ್ಲಾದರು ಹೋಗುತ್ತಿರುವ ಸಂದರ್ಭದಲ್ಲಿ ಬೆಕ್ಕು ಅಡ್ಡ ಹೋದರು ಕೂಡ ಕೆಟ್ಟ ಪರಿಣಾಮ ಬೀರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Sunday, 6 October 2019

ವಾಸ್ತುವಿನಿಂದ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ…?

ವಾಸ್ತು  ಕೂಡ ನಮ್ಮ ಜೀವನದ ಮೇಲೆ ತುಂಬ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸರಿಯಾದ ವಾಸ್ತುವಿಲ್ಲದಿದ್ದರೆ, ನೆಮ್ಮದಿ ಇರುವುದಿಲ್ಲ, ಜತೆಗೆ ಏನೇ ಕೆಲಸ ಕೈಗೊಂಡರೂ ಅದು ಸರಿಯಾಗಿ ನೇರವೇರುವುದಿಲ್ಲ. ಹಾಗಾಗಿ ಒಳ್ಳೆಯ ವಾಸ್ತು ಕೂಡ ನಿಮ್ಮ ಆರ್ಥಿಕ ಸಮಸ್ಯೆ ನಿವಾರಿಸುತ್ತದೆ.


ನಿಮ್ಮ ಮನೆಯ ಹತ್ತಿರ ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ಇದ್ದರೆ ತುಂಬ ಒಳ್ಳೆಯದು.
ಕೆಲವು ದೇವತೆಗಳ ಫೋಟೊಗಳನ್ನು, ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಸಾಧ್ಯ.
ಇನ್ನು ದಕ್ಷಿಣ ದಿಕ್ಕಿನಲ್ಲಿ ಕೊಳವೆ ಬಾವಿ ಇದ್ದರೆ ಅದು ಆರ್ಥಿಕ ಶಕ್ತಿಗೆ ಸಮಸ್ಯೆ ಉಂಟುಮಾಡುತ್ತದೆ.
ಮನೆ ಅಥವಾ ಫ್ಯಾಕ್ಟರಿಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆ ಇದ್ದರೆ ಇದು ನಿಮ್ಮ ಅದೃಷ್ಟವನ್ನು ಖುಲಾಯಿಸುತ್ತದೆ.

Saturday, 5 October 2019

ನಿಮ್ಮ ಮನೆಗೆ ಲಕ್ಷ್ಮಿ ಬರಬೇಕೆ ? ಇಲ್ಲಿದೆ ವಾಸ್ತು ಟಿಪ್ಸ್‌‌

ನೀವು ಯಾವುದೇ ಕೆಲಸ ಮಾಡಿ ಅದರಿಂದ ಲಾಭ ಬರಲೇಬೇಕು. ಪರಿವಾರದಲ್ಲಿ ಸುಖ ಶಾಂತಿ ಇದ್ದರೆ ಮನೆಯಲ್ಲಿ ಲಕ್ಷ್ಮಿಯ ವಾಸ ವಿರುತ್ತದೆ ಎಂದು ನಂಬಲಾಗುತ್ತದೆ. 

ಲಕ್ಷ್ಮಿ ಮಾತೆ ನಿಮ್ಮ ಮನೆಗೆ ಬರುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಸುಖ ಶಾಂತಿ ಲಭಿಸುತ್ತದೆ. ಆದರೆ ಇದಕ್ಕಾಗಿ ನಿಮ್ಮ ಮನೆಯ ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು. 

ವಾಸ್ತು ಶಾಸ್ತ್ರದ ಪ್ರಕಾರ ಭಾಗ್ಯ ಪ್ರವೇಶ ದ್ವಾರದ ಮೇಲೆ ಬರೆದಿರುತ್ತದೆ ಮತ್ತು ಇದ ಲಾಭ ಮನೆಯಲ್ಲಿ ಇರುವವರ ಮೇಲೆ ಬೀಳುತ್ತದೆ. ಇದಕ್ಕಾಗಿ ಮನೆ ಕಟ್ಟಿಸುವಾಗ ಅಥವಾ ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾದದ್ದು ಅವಶ್ಯಕವಾಗಿರುತ್ತದೆ. 

ಮನೆಯ ಮಖ್ಯದ್ವಾರ ಯಾವ ದಿಕ್ಕಿನಲ್ಲಿ ಇರಬೇಕು? 
 ಮನೆಯ ಮುಖ್ಯ ದ್ವಾರ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇರುವುದು ವಾಸ್ತು ದೃಷ್ಟಿಯಿಂದ ಉತ್ತಮವಾಗಿದೆ. ಮನೆಯ ಯಾವುದಾದರು ಕೋಣೆಗೆ ಎರಡು ಬಾಗಿಲು ಇದ್ದರೆ , ಇವೆರಡು ಎದುರು ಬದುರಾಗಿರಬಾರದು. ಇದರಿಂದ ಹಣ ಹೇಗೆ ಬರುತ್ತದೆಯೋ ಹಾಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ. 

ಗೋಡೆಯ ಈ ಭಾಗಕ್ಕೆ ಮುಖ್ಯ ದ್ವಾರ ಇರಬೇಕು 
 ವಾಸ್ತು ಶಾಸ್ತ್ರದ ಅನುಸಾರ ಗೋಡೆಗೆ ಮುಖ್ಯ  ದ್ವಾರ ಅಳವಡಿಸುವಾಗ ಗೋಡೆಯನ್ನು 9 ಭಾಗದಲ್ಲಿ ಮಾರ್ಕ್ ಮಾಡಿ. ಇದರ ನಂತರ ಮನೆಗೆ ಪ್ರವೇಶದ ದಿಕ್ಕಿನಿಂದ ಎಡ ಮತ್ತು ಐದು ಭಾಗ ಮತ್ತು ಬಲ ಮೂರು ಭಾಗ ಬಿಟ್ಟು ಪ್ರವೇಶ ದ್ವಾರ ಸಿದ್ದಪಡಿಸಿ.  ಹೀಗೆ ಮಾಡುವುದರಿಂದ ಆದಾಯ ಹೆಚ್ಚಾಗುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ.  

Friday, 4 October 2019

ಅಧ್ಯಯನ ಕೋಣೆ ಹೇಗಿರಬೇಕು: ಇಲ್ಲಿದೆ ವಾಸ್ತು ಟಿಪ್ಸ್

ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗದ ವಾಸ್ತು ಪ್ರದೇಶ ಜ್ಞಾನಕ್ಕೆ ಪ್ರೇರಣೆ ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿಕ್ಕು ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ, ವಿದ್ಯೆ ಎಂದರೆ ಜ್ಞಾನ, ಅಭ್ಯಾಸ ಎಂದರೆ ತರಬೇತಿ. ಆದ್ದರಿಂದ, ತರಬೇತಿ ಪಡೆಯುವಾಗ ನೀವು ಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಠಿಣ ಪರಿಶ್ರಮದಿಂದ ಅಭ್ಯಸಿಸಿದಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ.

ಆದ್ದರಿಂದ ಅಧ್ಯಯನ ಕೋಣೆಯ ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗ ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ. ಜ್ಞಾನಕ್ಕೆ ಸಂಬಂಧಿಸಿದಂತೆ ಬೇಕಾಗುವ ನೆನಪಿನ ಶಕ್ತಿ, ಸಾಮರ್ಥ್ಯ ಮತ್ತು ಜ್ಞಾನವನ್ನು ಗ್ರಹಿಸುವ ಶಕ್ತಿಗೆ ವಾಸ್ತು ಹೆಚ್ಚಿನ ಬೆಂಬಲ ಸೂಚಿಸುತ್ತದೆ.   

ಇಂತಹ ಪ್ರದೇಶದಲ್ಲಿ ವಾಶಿಂಗ್‌ಮಶಿನ್ ಯಾವತ್ತು ಇಡಬಾರದು.ಒಂದು ವೇಳೆ, ನೀವು ಈ ಪ್ರದೇಶದಲ್ಲಿ ವಾಶಿಂಗ್ ಮಶಿನ್ ಇಟ್ಟಲ್ಲಿ ನಿಮ್ಮ ಮಕ್ಕಳು ಎಷ್ಟೇ ಪರಿಶ್ರಮ ಪಟ್ಟು ಅಭ್ಯಾಸ ಮಾಡಿದರೂ ಪರೀಕ್ಷೆ ಹಾಲ್‌ನಲ್ಲಿ ಮರೆತುಹೋಗುವ ಸಾಧ್ಯತೆಗಳಿರುತ್ತವೆ.

ಮಕ್ಕಳು ವಿದ್ಯಾವಂತರು, ಪ್ರತಿಭಾವಂತರಾಗಬೇಕು ಎನ್ನುವುದು ಎಲ್ಲಾ ತಂದೆ ತಾಯಿಗಳ ಬಯಕೆಯಾಗಿರುತ್ತದೆ. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸ ಮಾಡುವ ಕೋಣೆಯ ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗದಲ್ಲಿ ಪುಸ್ತಕಗಳ ಚಿತ್ರಗಳು ಅಥವಾ ಲೈಬ್ರೆರಿ ಮಾಡುವುದು ಉತ್ತಮ.

ಯಾವ ವಿಷಯಗಳ ಬಗ್ಗೆ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ವಾಸ್ತು ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸಾಧನೆ ಮಾಡಬೇಕು ಎಂದು ಬಯಸಿದಲ್ಲಿ ವಿದ್ಯಾರ್ಥಿಗಳು ಪಶ್ಚಿಮದತ್ತ ಮುಖ ಮಾಡಿ ಅಭ್ಯಾಸ ಮಾಡಬೇಕು.  

ಒಂದು ವೇಳೆ, ವಿದ್ಯಾರ್ಥಿಗಳು ಕೋಣೆಯ ದಕ್ಷಿಣ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಭಾಷಣ ಮಾಡುವ ಸಾಮರ್ಥ್ಯ, ಉದ್ಯಮಿಯಾಗುವ ಮುನ್ಸೂಚನೆಗಳು ಕಂಡು ಬರುತ್ತವೆ. 

ಒಂದು ವೇಳೆ, ವಿದ್ಯಾರ್ಥಿಗಳು ಪೂರ್ವದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಅವರು ಧಾರ್ಮಿಕ ಕಾರ್ಯಗಳಲ್ಲಿ ಜ್ಞಾನ ಪಡೆಯುತ್ತಾರೆ. 

ಒಂದು ವೇಳೆ, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಪಶ್ಚಿಮ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುವಂತೆ ಸಲಹೆ ನೀಡಬೇಕು. 

Thursday, 3 October 2019

ಮನೆಯಲ್ಲಿ ನೆಮ್ಮದಿಯಿಲ್ಲವೇ.. ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು

ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.

ಸುಮಧುರ ಸಂಬಂಧ:

ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.

ಕುಟುಂಬದ ಸದಸ್ಯರ ಜತೆ ಸಾಮರಸ್ಯ 

ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.

ಚಾಕು ಮತ್ತು ಕತ್ತರಿಗಳು 

ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.

ಮಕ್ಕಳು: 

ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.

ಆರೋಗ್ಯಕರ ಲೈಂಗಿಕ ಸಂಬಂಧ 

ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.

ಆರ್ಥಿಕ ಶಕ್ತಿ 

ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ T-Facing ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ.

ಉತ್ತರ ದಿಕ್ಕಿನಲ್ಲಿ ತಲೆ ಇರಿಸಬೇಡಿ

1,ಅಡುಗೆ ಮಾಡುವಾಗ, ಆಹಾರ ಸೇವಿಸುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕಿನಲ್ಲಿ ಕುಳಿತು ಕೊಳ್ಳಲೇಬಾರದು. ಆಹಾರವು ಸರಿಯಾಗಿ ಪಚನಗೊಂಡು ಉತ್ತಮ ಆರೋಗ್ಯ ಲಭಿಸಬೇಕಾದರೆ ಪೂರ್ವ ದಿಕ್ಕಿಗೆ ಮುಖಮಾಡಿ ಸೇವಿಸಬೇಕು.

2.ಆರೋಗ್ಯ ಮತ್ತು ಸಂತೋಷವನ್ನು ಗಳಿಸಲು ಕೊಠಡಿಯ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿರಿ.ಒಂದೇ ರೀತಿಯ ಬಣ್ಣಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.

3.ಹಾಸಿಗೆಯ ಮುಂಭಾಗದಲ್ಲಿ ಕನ್ನಡಿಯನ್ನು ಇರಿಸುವುದು ಬೇಡ, ಅಥವಾ ಇದ್ದರೆ ಅವುಗಳನ್ನು ಮುಚ್ಚಿ ದುಸ್ವಪ್ನಗಳಿಂದ ಮುಕ್ತಿ ಪಡೆಯಿರಿ.

4.ಮಲಗುವಾಗ ತಲೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಲೇ ಬಾರದು. ಸುಖನಿದ್ದೆಗಾಗಿ ದಕ್ಷಿಣ ಅಥವಾ ಪೂರ್ವಭಾಗಗಳನ್ನು ಆರಿಸುವುದು ಉತ್ತಮ.

5.ತುಳಸಿಗಿಡವನ್ನು ಈಶಾನ್ಯ ಭಾಗದಲ್ಲಿ ನೆಡುವುದರಿಂದ ವಾಯು ಶುದ್ಧೀಕರಿಸಲು ಸಹಾಯಕವಾಗುತ್ತದೆ.

6.ಗರ್ಭಿಣಿಯರು ಈಶಾನ್ಯ ಭಾಗದಲ್ಲಿರುವ ಕೊಠಡಿಯನ್ನು ಮಲಗಲು ಉಪಯೋಗಿಸದಿರುವುದು ಒಳ್ಳೆಯದು, ಇದರಿಂದಾಗಿ ಗರ್ಭ ಸ್ರಾವ, ಗರ್ಭಛಿದ್ರ ಮೊದಲಾದ ಅಪಾಯಗಳಿಂದ ರಕ್ಷಣೆಯನ್ನು ಪಡೆಯಬಹುದು.

7.ಕಬ್ಬಿಣದಿಂದ ಅಥವಾ ಇನ್ನಾವುದೇ ಲೋಹದಿಂದ ಮಾಡಿದ ಹಾಸಿಗೆಯನ್ನು ಬಳಸದಿದ್ದರೆ ಉತ್ತಮ, ಯಾಕೆಂದರೆ ಇಂತವುಗಳು ಹೃದಯ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ.

8.ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕೆಲಸ ಮಾಡುವುದು ಅಥವಾ ಓದು ಬರಹವನ್ನು ಅಭ್ಯಸಿಸುತ್ತಿದ್ದರೆ ಕಾಂತೀಯ ಬಲವು ಇಲ್ಲಿ ಪ್ರಬಲವಾಗಿದ್ದು ಇದರಿಂದಾಗಿ ಉತ್ತಮ ಗ್ರಹಿಸುವಿಕೆ ದೊರೆತು ಮತ್ತು ಸ್ಮರಣ ಶಕ್ತಿ ಹೆಚ್ಚುವುದು.

9.ಮಲಗುವ ಕೋಣೆಯಲ್ಲಿರಿಸಿದ ಟಿ.ವಿ ಅಥವಾ ಕಂಪ್ಯೂಟರ್‌ನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಇಂತಹ ಉಪಕರಣಗಳಿಂದ ಹೊರ ಸೂಸುವ ವಿಕಿರಣಗಳು ಕೋಣೆಯ ಚೈತನ್ಯವನ್ನು ಕಡಿಮೆ ಮಾಡಿ ಅಸ್ವಸ್ತತೆಗೆ ಎಡೆ ಮಾಡುವ ಸಾಧ್ಯತೆ ಕಂಡುಬರುತ್ತದೆ.

10. ಮನೆಯ ನೈಋತ್ಯ ಭಾಗದಲ್ಲಿರುವ ಕಿಟಕಿಗಳನ್ನು ತೆರೆದಿಡುವ ಬದಲಾಗಿ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರುವ ಕಿಟಕಿಗಳನ್ನು ತೆರೆದಿಟ್ಟರೆ ಉತ್ತಮ ಆರೋಗ್ಯ ಮತ್ತು ಕುಟುಂಬದಲ್ಲಿ ಏಕತೆ ನೆಲೆಗೊಳ್ಳುತ್ತದೆ.

Tuesday, 1 October 2019

ವಾಸ್ತು ನಿಯಮಗಳನ್ನು ಪಾಲಿಸಿ ಜೀವನದಲ್ಲಿ ಸಂತೋಷವಾಗಿರಿ

ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. 

ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.

ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.
ಏಳು ದೈವಾಜ್ಞೆಗಳು

ಹಿರಿಯರಿಗೆ

ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.

ವೃತ್ತಿನಿರತರಿಗೆ

ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.

ಗೃಹಿಣಿಯರಿಗೆ

ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.

ವಿದ್ಯಾರ್ಥಿಗಳಿಗೆ

ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.

ಈ ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ ಉತ್ತಮ ಆರೋಗ್ಯ, ಸಾಮರಸ್ಯ ಮತ್ತು ಸಂತೋಷದ ಹಾದಿಯಲ್ಲಿ ಹೆಜ್ಜೆಹಾಕಿ.

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...