Tuesday, 31 October 2017

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

 ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ.
ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿಂದ ಅವರಿಗೆ ಜ್ಞಾನೋದಯವಾಗುತ್ತದೆ.

ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗ ಶೈಕ್ಷಣಿಕ ಪರಿಣತಿ ಸಾಧಿಸಲು ಪೂರ್ವ ದಿಕ್ಕಿಗೆ ತಿರುಗಿರಬೇಕು
ಪ್ರವಾಸ ಮಾಡುವಾಗ ಪಶ್ಚಿಮಕ್ಕೆ ಒಬ್ಬರು ತಲೆ ಹಾಕಿಕೊಂಡು ಮಲಗಬೇಕು.

ಮನೆ ನಿರ್ಮಾಣಕ್ಕೆ ಮುಂಚೆ ನಿವೇಶನದ ಈಶಾನ್ಯ ಮೂಲೆಯಲ್ಲಿ ವಾಸ್ತು ಮತ್ತು ಗಣಪತಿ ಪೂಜೆಯನ್ನು ನೆರವೇರಿಸಬೇಕು.
ಯಾವುದೇ ಕೆಲಸ ಮಾಡುವ ಮುಂಚೆ ಪೂಜೆಯನ್ನು ಮಾಡಬೇಕು.

ನೀರನ್ನು ತುಂಬಲು ತಾಮ್ರದ ಪಾತ್ರೆಯನ್ನು ಬಳಸಬೇಕು ಮತ್ತು ಹಣತೆ ಹಚ್ಚಲು ಹಿತ್ತಾಳೆಯನ್ನು ಬಳಸಬೇಕು
ಸ್ವಂತ ಮನೆಯಲ್ಲಿ ಕುಟುಂಬದ ಸದಸ್ಯರು ಪಶ್ಚಿಮ ದಿಕ್ಕಿಗೆ ತಲೆಇಟ್ಟುಕೊಂಡು ಮಲಗಬಾರದು. ಇದು ದುಃಖ ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ.

ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಬಾರದು.

 ಪೂಜೆಗೆ ಕಬ್ಬಿಣ, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಲ್ಯುಮಿನಿಯಂ ವಸ್ತುಗಳನ್ನು ಬಳಸಬಾರದು.

 ಪ್ರಾಣಿಗಳ ಹೋರಾಟದ, ಹಣ್ಣುಗಳು ಮತ್ತು ಹೂವುಗಳಿಲ್ಲದ ಮರ, ಸತ್ತ ಪ್ರಾಣಿಗಳು, ಮನೆಗೆ ಬಿದ್ದ ಬೆಂಕಿ, ಯುದ್ಧದ ದೃಶ್ಯಗಳ ಚಿತ್ರಗಳನ್ನು ನೇತುಹಾಕಬೇಡಿ

ಮನೆಯ ಉತ್ತರದ ಕಡೆ ತಡೆ ಇದ್ದರೆ ಅದು ಸಮೃದ್ಧಿಯನ್ನು ತಡೆಯುತ್ತದೆ. ನಗದು ಪೆಟ್ಟಿಗೆ ಅಥವಾ ಲಾಕರ್ ಬಿಂಬಿಸಲು ಕನ್ನಡಿಯೊಂದನ್ನು ನೇತುಹಾಕಿದರೆ ಅದು ಸಾಂಕೇತಿಕವಾಗಿ ಸಂಪತ್ತು ಮತ್ತು ಅವಕಾಶಗಳನ್ನು ಇಮ್ಮಡಿಗೊಳಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Monday, 30 October 2017

ಮನೆಯಲ್ಲಿ ತುಳಸಿ ಗಿಡ ಎಲ್ಲಿರಬೇಕು, ಹೇಗಿರಬೇಕು?

ಮನೆಯಲ್ಲಿ ಪೂಜಾ ಸ್ಥಳದಷ್ಟೇ ಮಹದ್ವದ್ದಾಗಿ ತುಳಸಿ ಗಿಡವನ್ನು ಕೂಡಾ ಪರಿಗಣಿಸಬೇಕು. ತುಳಸೀ ಗಿಡದ ಔಷಧೀಯ ಗುಣಗಳ ಕುರಿತಂತೆ ಎಲ್ಲರೂ ಒಪ್ಪುವವಾದ ಒಂದೆಡೆಯಾದರೆ ಇನ್ನೊಂದೆಡೆ ಅನಾಚೂನವಾಗಿ ತುಳಸೀ ಗಿಡದ ಕುರಿತು ನಮ್ಮ ಧರ್ಮ ನಂಬಿಕೊಂಡು ಬಂದ ಗೌರವಯುತವಾದ ಆಷೇìಯ ವಿಚಾರ. ತುಳಸೀ ಗಿಡದ ಉಪಸ್ಥಿತಿ ಮನೆಯನ್ನು ಹತ್ತು ಹಲವು ಉಪಟಳಗಳಿಂದ ಪಾರು ಮಾಡಿ ಒಂದು ಅವಿಚ್ಛಿನ್ನವಾದ ದೈಹೀಕ ಶಕ್ತಿಯನ್ನು ಮನೆಯೊಳಗೆ ಹರಳುಗಟ್ಟಿಸುತ್ತದೆ.

ಅನೇಕ ರೀತಿಯ ಸೂûಾ¾ಣುಗಳನ್ನು ವೈರಸ್‌ಗಳನ್ನು ಕಣ್ಣಿಗೆ ಗೋಚರಿಸದ ಏಕಕೋಶ ಉಪದ್ರವ ನೀಡುವ ಜೀವಿಗಳನ್ನು ಕೇವಲ ತನ್ನ ಪರಿಮಳಭರಿತ ಸುವಾಸನೆಯಿಂದಲೇ ತುಳಸಿ ನಿವಾರಿಸ ಬಲ್ಲದು ಎಂಬುದು ವೈಜಾnನಿಕವಾಗಿ ನಿರೂಪಿತಗೊಂಡ ವಾಸ್ತವ. ಅಂದಮೇಲೆ ಒಂದು ಮನೆಯಲ್ಲಿ ತುಳಸೀ ಗಿಡ ಸಂಜೀನಿಯಾಗುತ್ತದೆ.
ಕಾವಲು ಭಂಟನಂತಿರುತ್ತದೆ. ನಮ್ಮ ಸಂಸ್ಕೃತಿ ತುಳಸಿಯನ್ನು ಲಕ್ಷಿ$¾ದೇವಿಯನ್ನಾಗಿ ಪರಿಗ್ರಹಿಸಿದೆ. ಆರೋಗ್ಯ ಸಂಪತ್ತನ್ನು ಸಂವರ್ಧಿಸುವ ಕೈಂಕರ್ಯದಲ್ಲಿ ತುಳಸೀ ಗಿಡ ಅಕ್ಷರಶಃ ಲಕ್ಷಿ$¾àದೇವಿಯೇ ಆಗಿದ್ದಾಳೆ.

ಈ ಗಿಡವನ್ನು ಎಲ್ಲಿ ನೆಡಬಹುದು ಸಾಮಾನ್ಯವಾಗಿ ತುಳಸೀಗಿಡದ ಬುಡದಲ್ಲಿ ಒಂದು ದೀಪವನ್ನೂ ಕೂಡಾ ಸಂಜೆಯೂ ಹಗಲೂ ತುಳಿತಗೊಳ್ಳುವ ಮೂರು ಸಂಜೆಯ ಹೊತ್ತಿಗೆ ಬೆಳಗುವುದು ನಮ್ಮೆಲ್ಲರ ವಾಡಿಕೆಯಾಗಿದೆ. ಹೀಗಾಗಿ ದೀಪವನ್ನು ಬೆಳಗುವ ವೈಶಿಷ್ಠ$Âವನ್ನು ತುಳಸೀಗಿಡ ಬಯಸುವುದರಿಂದ ವಾಯುವ್ಯ ದಿಕ್ಕಿನಲ್ಲಿ ಈ ಗಿಡವನ್ನು ಇಡಬಹುದಾಗಿದೆ.
ಮನೆಯ ವಾಯುವ್ಯ ದಿಕ್ಕು ಪ್ರಶಸ್ತವಾಗಿದೆ.

ನೈರುತ್ಯವನ್ನು ಆಗಬಹುದಾದರೂ ನೈರುತ್ಯಕ್ಕೆ ದೀಪವನ್ನು ಹಚ್ಚುವುದು ಸೂಕ್ತವಲ್ಲ. ಹೀಗಾಗಿ ತುಳಸೀಗಿಡಕ್ಕೆ ವಾಯುವ್ಯವೇ ಸರಿ. ಹಾಗೆಯೇ ತುಳಸೀಕಟ್ಟೆಗೆ ಕೆಲವರು ಮನಸ್ಸಿಗೆ ಬಂದಂತೆ ವಿಧ ವಿಧ ದೇವರ ಚೌಕಗಳನ್ನು ಕೂಡ್ರಿಸುತ್ತಾರೆ.

ಆದಷ್ಟು ಈ ಕ್ರಮವನ್ನು ತಪ್ಪಿಸುವುದು ಒಳ್ಳೆಯದು. ತುಳಸೀ ಗಿಡಕ್ಕೆ ದೇವರನ್ನು ಪ್ರತಿಷ್ಟಾಪಿಸುವಾಗಿನ ಮೂಲಭೂತ ನಿಯಮ ರೀತಿ ರಿವಾಜುಗಳನ್ನು ಪೂರೈಸಬೇಕಾಗಿಲ್ಲ. ಪಂಚಭೂತಾತ್ಮಕವಾದ ನೆಲೆಯಲ್ಲಿ ತುಳಸೀಗಿಡವನ್ನು ಹಾಗೆಯೇ ಪ್ರಕಟಗೊಳಿಸಬಹುದು. ದೇವರುಗಳ ಫ‌ಲಕ ಚೌಕಗಳನ್ನು ಗಿಡದ ಕಟ್ಟೆಗೆ ಕಟ್ಟಿಹಾಕುವುದು ಶಾಸ್ತ್ರಕ್ಕೆ ವಿರೋಧವಾದ ಕ್ರಮವಾಗುತ್ತದೆ. ಆಗಮ ಶಾಸ್ತ್ರವು ನಿರೂಪಿಸುವ ಸಂಧಾನ ಕ್ರಮದಲ್ಲಿ ಈ ಜೋಡಣೆಗಳು ಅಚ್ಚುಗಳು ತಾಳೆಯಾಗುವುದಿಲ್ಲ.

ಹಲವಾರು ಬೀದಿಗಳಲ್ಲಿ ಖಾಲಿ ಜಾಗೆಗಳ ಗೋಡೆಗಳಿಗೆ ಕಾಪೌಂಡ್‌ಗಳಿಗೆ ಧಾರಾಳವಾಗಿ ಲಕ್ಷಿ$¾ ಗಣಪತಿ ಈಶ್ವರ ಮಾರುತಿ ಪಾರ್ವತಿ ಸರಸ್ವತಿ ಮೊದಲಾದ ದೇವರ ಅಚ್ಚುಗಳು ಅಂಟಿಸಿರುತ್ತಾರೆ. ಸಾರ್ವಜನಿಕರು ಮನಬಂದಂತೆ
ಮೂತ್ರವಿಸರ್ಜನೆ ಮಾಡಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಚಾಲ್ತಿಗೆ ಬಂದಿದೆ. ಆದರೆ ಇದು ತಪ್ಪು ಸಂಧಾನವಾಗಿದೆ. ದೇವರ ವಿಷಯದಲ್ಲಿ ಕೆಲವು ನಿಯಮಗಳಿರುತ್ತವೆ. ಒಂದೋ ದೇವರು ಎಲ್ಲಾ ಕಡೆಗೂ ಇದ್ದಾನೆ ಎಂದು ತಿಳಿದು ಆರಾಧಿಸುವ ಕ್ರಮ ಒಳಿತು. ದೇವರನ್ನು ಕೂರಿಸುವುದೇ ಆದರೆ ಅದಕ್ಕೆ ನಿಯಮಗಳುಂಟು. ನಿಯಮ ಪಾಲಿಸದ ಕ್ರಮ ಸಮಂಜಸವಾಗದು ಎಂಬುದು ಗಮನಾರ್ಹ.



Saturday, 28 October 2017

ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ

ಕೆಲವು ಸಣ್ಣಪುಟ್ಟ ವಿಚಾರಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಹೆಚ್ಚು ನೆಮ್ಮದಿ ಮೂಡಿಸಬಹುದು. ಈ ಕೆಳಗಿನ ಅಂಶಗಳನ್ನು ಮನದಲ್ಲಿರಿಸಿಕೊಳ್ಳಿ.

*ಮನೆಯಲ್ಲಿ ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ

*ಬೆಡ್ ರೂಮಲ್ಲಿ ಟೀವಿ ಇರಿಸುವುದು ಸೂಕ್ತವಲ್ಲ

*ಬೆಡ್ ರೂಮಿನಲ್ಲಿ ನೀರಿರುವ ಯಾವುದೇ ವಸ್ತು ಅಥವಾ ಸಸಿಗಳನ್ನು ಇರಿಸಬೇಡಿ

*ಲೀವಿಂಗ್ ರೂಮಿನ ದಕ್ಷಿಣ ಗೋಡೆಯ ಮೇಲೆ ಪ್ರಜ್ವಲಿಸುವ ಸೂರ್ಯೋದಯ ಚಿತ್ರವಿರಲಿ

* ಮುಳ್ಳಿನ ಕಳ್ಳಿಗಿಡ ಅಥವಾ ಇನ್ಯಾವುದೇ ಚುಚ್ಚುವಂತಹ ಗಿಡಗಳನ್ನು ಮನೆಯೊಳಗೆ ಇರಿಸುವುದು ಬೇಡ

*ಅಡುಗೆ ಮನೆಯಲ್ಲಿ ಕನ್ನಡಿ ಬೇಡವೇ ಬೇಡ

*ಪೊರಕೆ ಮತ್ತು ನೆಲಉಜ್ಜುವ ಮಾಪ್‌ಗಳನ್ನು ಅಡುಗೆ ಮನೆಯಲ್ಲಿ ಕಣ್ಣಿಗೆ ಕಾಣದಂತೆ ಇರಿಸಿ

*ತ್ರಿಕೋನ, ಅಂಡಾಕಾರ ಇಲ್ಲವೇ ವೃತ್ತಾಕಾರದ ಕೋಣೆ ಇರಲೇಬ

Friday, 27 October 2017

ಮನೆಯಲ್ಲಿ ವಾಸ್ತು ಶೈಲಿ

*ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

*ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

*ದಕ್ಷಿಣ ಅಥವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

(ಜೋಮೆನ್ ವರ್ಗೀಸ್)

Thursday, 26 October 2017

ವಾಸ್ತು ಸಲಹೆ: ವಾಯುವ್ಯ ದಿಕ್ಕಿನಲ್ಲಿ ಲಕ್ಷ್ಮೀ ಓಡಾಟ ಸಲೀಸು

ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ ಶ್ರೀಮಂತಿಕೆಗೆ ದಿವ್ಯದ ಬೆಳಕಿದೆ. ಹೀಗಾಗಿಯೇ ಶ್ರೀ ಮನ್ಮಹಾಲಕ್ಷ್ಮೀಯನ್ನು ಲೋಕದ ಏಕೈಕ ಬೆಳಕಿನ ಶಕ್ತಿ, ಬೆಳಕಿನ ಬೀಜ ಗರ್ಭವೇ ಮಹಾಲಕ್ಷ್ಮೀ ಎಂಬ ಮಾತಿದೆ ನಮ್ಮಲ್ಲಿ.

ಹೀಗಾಗಿ ಮನೆಯ ವಾಯುವ್ಯ ದಿಕ್ಕಿನ ಮಹತ್ವ, ಸ್ವಚ್ಛತೆಯಿಂದ ಒಗ್ಗೂಡಿದ್ದರೆ ಸಂಪತ್ತಿಗೆ ಪ್ರೇರಕನಾದ ಚೈತನ್ಯ ಮನೆಯೊಡೆಯನಿಗೆ ನಿಶ್ಚಿತ. ಮನೆಯ ವ್ಯಾಪ್ತಿಗೆ ಸ್ಥಾವರ (ನಿಂತಲ್ಲಿಯೇ ನಿಂತ) ಸ್ಥಿತಿ ಒದಗಿದ್ದರೂ, ಅದು ತನ್ನೊಳಗಿನ ಜೀವಗಳನ್ನ ಚಲನಶೀಲತೆಗೆ ಒಳಪಡಿಸಿ ಚೈತನ್ಯದ ಸೆಲೆಯನ್ನು ತುಂಬಿ ತುಳುಕಿಸುವ ಕೆಲಸ ಮಾಡುತ್ತದೆ. ಯಾವುದೇ ಕೆಲಸದ ಬಗೆಗಿನ ಮೊದಲ ಹೆಜ್ಜೆ ನಿಮ್ಮ ಮನೆಯೊಳಗಿನಿಂದಲೇ ಪ್ರಾರಂಭಗೊಳ್ಳಬೇಕು. ಬಾಡಿಗೆ ಮನೆಯಾಗಿದ್ದರೂ ಸದ್ಯ ಅದು ನಿಮ್ಮದೇ ಮನೆ. ನಿಮ್ಮ ಉತ್ಸಾಹ, ನಿರಾಸೆ, ಅಸಹಾಯಕತೆ, ಕೇಕೆ, ಚಾತುರ್ಯ ಅದು ಒಟ್ಟಾಗಿ ಸೇರಿ ಮನೆಯ ಮೇಲೂ ಪ್ರಭಾವ ಬೀರುತ್ತದೆ.

ಬೇಡವಾದುದನ್ನು ಹೊರತಳ್ಳಿ
ಮನೆಯಲ್ಲಿನ ಕಿಟಕಿ ಬಾಗಿಲುಗಳೆಲ್ಲ ತೆರೆದಿರಲಿ. ಒಳಗಿನ ಗಾಳಿ ಹೊರಗೆ (ಇರುವ ಕಲ್ಮಷಗಳನ್ನು ಒಗ್ಗೂಡಿಸಿಕೊಂಡು) ಹೋಗಲು ಸಹಾಯಕವಾಗುತ್ತದೆ. ವಾಯುವ್ಯ ದಿಕ್ಕಿನ ಸ್ವಚ್ಛತೆ, ನೈರ್ಮಲ್ಯಗಳಿಂದ ಅಲ್ಲಿನ ಗಾಳಿ ಕಿಟಿಕಿ ಬಾಗಿಲುಗಳ ಮೂಲಕ ಮನೆಯೊಳಗೆ ಬರಲೂ ಸಹಾಯವಾಗುತ್ತದೆ. ಒಳ ಬರುವ ಹೊಸಗಳಿಗೆ ಲಕ್ಷ್ಮೀಯ ಕೃಪೆಯನ್ನು ಉದ್ದೀಪಿಸುವ ಸಿಗ್ನತೆ ಕೂಡಿಕೊಂಡಿರುತ್ತದೆ. ಧಾನ್ಯಕ್ಕೆ ಮನಸ್ಸನ್ನು ಸ್ಥೈರ್ಯಗೊಳಿಸುವ ಶಕ್ತಿ ಇದೆ. ಮನಸ್ಸು ಮತ್ತು ಸ್ವಚ್ಛ ಹೊಸಗಾಳಿ ಪರಸ್ಪರ ಬಂಧುಗಳಂತೆ ಒಂದು ಇನ್ನೊಂದನ್ನು ಶಕ್ತಿ ಸ್ಪಂದನಗಳೊಡನೆ ಸಕಾರಾತ್ಮಕಗೊಳಿಸುತ್ತದೆ. ಬೇಕಾದ ವಸ್ತುಗಳು ಮಾತ್ರ ಮನೆಯೊಳಗೆ ಇರಲಿ. ಬೇಡವಾದುದನ್ನು ನಿರ್ದಾಕ್ಷಿಣ್ಯವಾಗಿ ಹೊರತಳ್ಳಿ ಇಲ್ಲದಿದ್ದರೆ ಒಂದು ಸುಸಂಬದ್ಧ ಚಕ್ರಮಯ ಪ್ರಕೃತಿ ಹಾರಕ್ಕೆ ಧಕ್ಕೆ ಬರುತ್ತದೆ.

ಜ್ಞಾನವೂ, ಸಂಪತ್ತು ಎರಡೂ ಹದವಾಗಿ ಸೇರಿಕೊಂಡಾಗ ಕುಟುಂಬ ಕ್ಷೇಮಕರವಾಗಿ ಇರುತ್ತದೆ. ಬಾಗಿಲುಗಳನ್ನೆಲ್ಲ ಹಾಕಿ ಒಳಗಿನ ಗಾಳಿ ಯನ್ನು ಹೊರ ಹೋಗದಂತೆ ಕಟ್ಟಿಡ ಬೇಡಿ. ಮನೆಯ ವಾಯುವ್ಯ ದಿಕ್ಕಿನಲ್ಲಿ ಒಂದೆಡೆಯಿಂದ ಶುದ್ಧ ಗಾಳಿ ಹರಿಯುವಂತಾದರೆ ಲಕ್ಷ್ಮೀಯ ಬರುವಿಕೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ ಸೌಭಾಗ್ಯ ನಿಮ್ಮದಾಗುತ್ತದೆ. ಶೌಚ ಗೃಹವಾಗಲೀ, ವಿಸರ್ಜನಾ ಘಟಕಗಳಾಗಲೀ ಅವು ಮುಚ್ಚಿರಬೇಕು. ಬಾಗಿಲು ತೆರೆದಿಡಬೇಡಿ. ಅದನ್ನು ಜಾಗೃತೆಯಿಂದ ಮುಚ್ಚಿ, ಮತ್ತೂಂದೆಡೆಯ ಪ್ರತ್ಯೇಕ ಕಿಟಕಿಯೋ, ಇನ್ನೇನೋ ಒಂದು ತೆರೆದ ಭಾಗದಿಂದ ಗಾಳಿ ಒಳಬರುವಂತಾಗುವುದು ಕ್ಷೇಮ.

ಗಂಧದ ಪರಿಮಳ, ಹಾವಿನ ಪರಿಮಳ, ದೇವ ನೀಲಾಂಜನದೆದುರಿನ ಸುವಾಸನಾ ದ್ರವ್ಯಗಳ ಹಿತಮಿತವಾದ ಸುವಾಸನೆ ಪಸರಿಸಿದ್ದರೆ ಅದು ಮನೆಯ ಕ್ರಿಯಾಶೀಲತೆಗೆ, ಸಕಾರಾತ್ಮಕ ಸ್ಪಂದನಗಳಿಗೆ ಸಹಾಯಕಾರಿ. ಹಾಲಕ್ಷ್ಮೀಯು ಅನಿಲ ಸ್ವರೂಪದಲ್ಲಿಯೇ ಇದ್ದಾಳೆಂಬುದು ಅರ್ಥವಲ್ಲ. ವಾಯುವ್ಯ ದಿಕ್ಕಿನ ಪರಿಪಕ್ವ ನಿರ್ಮಲತೆ ಮನೆಯೊಳಗಿನ ಮನಸ್ಸುಗಳನ್ನು ಕಾಯಕದಿಂದ ಕೈಲಾಸ ನಿರ್ಮಿಸುವತ್ತ ಶಕ್ತಿಯುತಗೊಳಿಸುತ್ತದೆ. ಈ ನಿರ್ಮಾಣಕ್ಕಾಗಿನ ದ್ರವ್ಯ(ಲಕ್ಷ್ಮೀ)ವನ್ನು ಚೈತನ್ಯಪೂರ್ಣವಾಗಿ ಓಡಾಡಿಸುವ, ದಾಸರು ಹೇಳಿದಂತೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಭಾಗ್ಯವನ್ನು ಚಿಗುರಿಸಲು ಶಕ್ತಿಯುತ ಮನಸ್ಸುಗಳು ನಿಸ್ಸಂದೇಹವಾಗಿ ಗೆಲ್ಲುತ್ತವೆ. ಹೀಗಾಗಿ ನಿಮ್ಮ ಮನೆಯ ಒಳಗಿನ ಗಾಳಿ ಹಿತವೆನಿಸುವ ಗಾಳಿಯಾಗಿ, ಸ್ಫೂರ್ತಿಯಾಗಿ ತುಂಬಿಕೊಂಡಿರಲಿ.


Wednesday, 25 October 2017

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಕಾರಿದ್ದರೆ, ವಿಮಾನದಂತೆ ಮೇಲೆ ಹಾರಬೇಕೆಂದು ನೀವು ಅದರಿಂದ ನಿರೀಕ್ಷಿಸುವಂತಿಲ್ಲ. ಅದೇ ರೀತಿ ಒಳ್ಳೆಯ ವಾಸ್ತು ಕೂಡ ನಿಮ್ಮ ಹಣಕಾಸು ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುತ್ತದೆ.

1.ಹಣ ಮತ್ತು ಆಭರಣಗಳನ್ನು ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು.

2. ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ.

3.ದಕ್ಷಿಣದಲ್ಲಿ ಕೊಳವೆ ಬಾವಿ ಅಥವಾ ಟ್ಯೂಬ್ ಬಾವಿ ಇದ್ದರೆ ಅದು ಆರ್ಥಿಕ ಶಕ್ತಿಗೆ ಹಾನಿಕಾರಕ.

4. ದಕ್ಷಿಣದಲ್ಲಿ ಭೂಗತ ಟ್ಯಾಂಕ್ ಅಥವಾ ಹೊಂಡವು ಹಣಕಾಸಿಗೆ ತುಂಬ ಹಾನಿಕಾರಕ. ಕೆಲವು ದೇವ, ದೇವತೆಗಳ ಚಿತ್ರ ಮತ್ತು ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಮನೆಗೆ ಸಿಗಬಹುದು.

5. ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ತುಂಬ ಒಳ್ಳೆಯದು.

6. ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆಯಿರುವುದು ತುಂಬ ಒಳ್ಳೆಯದು.

7. 9 ಗೋಲ್ಡ್‌ಫಿಷ್ ಮತ್ತು ಒಂದು ಕಪ್ಪು ಮೀನಿನ ಮತ್ಸ್ಯಾಲಯ ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಮ‌ೂಲೆಯಲ್ಲಿರುವುದು ತುಂಬ ಒಳ್ಳೆಯದು.

Tuesday, 24 October 2017

ವಾಸ್ತು Tips: ಮನೆಯಲ್ಲಿ ಗಣೇಶ, ಲಕ್ಷ್ಮೀ, ಸರಸ್ವತಿ ಇರಬೇಕು...

ಯಾವಾಗಲೂ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಒಂದು ಇರಲೇಬೇಕು. ಮುಖ್ಯವಾಗಿ ಪೂರೈಸಬೇಕಾದ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಆವಶ್ಯಕವಾಗಿದೆ. ಹಾಗೆಯೇ ನಿರ್ವಿಘ್ನದಾಯಕವಾಗಿ ನಡೆಸುವ ಕೆಲಸಗಳಿಂದ ನಿರ್ವಿಘ್ನದಾಯಕವಾದ ನಿರಂತರವಾದ ಅರ್ಥ ವ್ಯವಸ್ಥೆ ಒಂದು ಸಂಪನ್ನತೆಗೆ ಸಾಗಬೇಕು. ಇದಕ್ಕೆ ಲಕ್ಷ್ಮೀ ಕಟಾಕ್ಷ ಬೇಕು. ಅದಕ್ಕಾಗಿ ಶ್ರೀ ಲಕ್ಷ್ಮೀ ಮನೆಯಲ್ಲಿ ಸ್ಥಿರಗೊಂಡಿರಬೇಕು. ಸ್ಥಿರಗೊಳ್ಳುವ ಆರ್ಥಿಕತೆ ಕೇವಲ ನಿರ್ವಿಘ್ನತೆಗಳು ಹಾಗೂ ಲಕ್ಷ್ಮೀ ಕಟಾಕ್ಷದಿಂದ ಒದಗಲಾರದು. ಒದಗಿದ ಆರ್ಥಿಕ ಸೌಲಭ್ಯ ಗಟ್ಟಿಯಾಗಿ ನೆಲೆಯೂರಲು ಉತ್ತಮ ಜ್ಞಾನ, ಚಾಣಾಕ್ಷತೆ ಪ್ರಬುದ್ಧತೆ ವ್ಯಾವಹಾರಿಕತೆಗಳ ಆವಶ್ಯಕತೆ ಇದ್ದೇ ಇದೆ. ಇಲ್ಲದಿದ್ದಲ್ಲಿ ಚಂಚಲೆಯಾದ ಲಕ್ಷ್ಮೀಯನ್ನು ದೋಚಿಕೊಂಡು ಹೋಗುವ ದುಷ್ಟರಿದ್ದಾರೆ. ಪ್ರಾಣಕ್ಕೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜ್ಞಾನವನ್ನು ಹೊಂದಬೇಕಾದರೆ ಸರಸ್ವತಿಯ ಕೃಪೆ ತುಂಬಾ ಆವಶ್ಯಕವಾಗಿದೆ. ಗಣೇಶನ ಆರಾಧನೆಯಿಂದಾಗಿ ಈತನ ತಂದೆ ತಾಯಿಯರಾದ ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ.

ಶ್ರೀ ಲಕ್ಷ್ಮೀಯ ಪ್ರಸನ್ನತೆ ಇದ್ದಲ್ಲಿ ವಿಷ್ಣುವಿನ ಆಶೀರ್ವಾದ ಕಟ್ಟಿಟ್ಟ ಬುತ್ತಿ. ಸರಸ್ವತಿಯೇ ಪ್ರಜಾಪಿತನಾದ ಬ್ರಹ್ಮನ ಪತ್ನಿಯಾಗಿರುವುದರಿಂದ ಶ್ರೀವಾಣಿಯ ಕೃಪೆಯಿಂದಾಗಿ ಬ್ರಹ್ಮನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ. ಅನುಮಾನವೇ ಇಲ್ಲ. ಅಂತೂ ಗಣೇಶ ಲಕ್ಷ್ಮೀ ಸರಸ್ವತಿಯರಿಂದಾಗಿ ನಿರ್ವಿಘ್ನತೆ ಸಂಪತ್ತು ಹಾಗೂ ಜ್ಞಾನದ ಕೊಡಗಳು ತುಂಬಿರುತ್ತವೆೆ. ಬದುಕು ಹಸನಾಗಿರುತ್ತದೆ. ಸೃಷ್ಟಿ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಕೃಪಾಶೀರ್ವಾದಗಳು ಕೂಡ ನಿಸ್ಸಂಶಯ ಆಸ್ತಿ. ಇದರಿಂದಾಗಿ ಮೂವತ್ಮೂರು ಕೋಟಿ ದೇವತೆಗಳ ರಕ್ಷಣಾತ್ಮಕ ನಿಲುವು ಅಷ್ಟ ದಿಗ್ಗಜಗಳು ಅಷ್ಟಾಂಗಗಳು, ಅಷ್ಟ ಸಿದ್ಧಿಗಳು ಅಷ್ಟ ಶೋಭೆಗಳು, ಅಷ್ಟ ಭೋಗಗಳು ಅಷ್ಟ ಮಂಗಲಾವೃತ ಸುಸ್ಥಿತಿಗಳು, ಅಷ್ಟ ದಿಕ್ಕುಗಳಿಂದ ಉತ್ತಮ ಫ‌ಲಗಳು, ಅಷ್ಟ ಐಶ್ವರ್ಯಗಳು, ಪ್ರಸನ್ನತೆ ತೇದಿಯೊಂದಿಗೆ ಒದಗಿಬರುತ್ತದೆ. ಇವನ್ನೆಲ್ಲ ಮುಖ್ಯವಾಗಿ ಗಮನಿಸಬೇಕು.

ಒಟ್ಟಿನಲ್ಲಿ ಮೂಲಭೂತವಾದ ಪ್ರತಿ ಆಂಶಗಳು ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಯರಿಂದಲೇ ಲಭ್ಯ. ನಮ್ಮ ಸಂಸ್ಕೃತಿಯು ನಿಯೋಜಿಸಿದ ಷೋಡಶ ಸಂಸ್ಕಾರಗಳು ಮೂಲಭೂತವಾಗಿ ನಿರ್ವಿಘ್ನತೆಯಿಂದ ಜ್ಞಾನಾರ್ಜನೆಯೊಡನೆ ಸಂಪತ್ತನ್ನು ಗಳಿಸಿ ಜೀವನ ಧರ್ಮವನ್ನು ರೂಪಿಸಿಕೊಂಡು ಹೋಗಲೆಂದೇ ಮುಖ್ಯವಾದ ಮಾನವೀಯತೆಯನ್ನು ಚಿನ್ನದಂತೆ ಪುಟಗೊಳಿಸುತ್ತದೆ. ದುರ್ಬುದ್ಧಿಗಳಿಂದ ರಕ್ಷಿಸುತ್ತದೆ. ಈ ಎಲ್ಲಾ ವಿಷಯಗಳನ್ನೂ ಗ್ರಹಿಸಿದಾಗ ಮನೆಯಲ್ಲಿ ಸಕಲ ಕಾರ್ಯ ಸಿದ್ಧಿಗೆ ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಗಳ ದಿವ್ಯ ಉಪಸ್ಥಿತಿ ಸದಾ ಆತ್ಮ ಪರಿಶುದ್ಧತೆಗಳೊಡನೆ ವಸ್ತು ಸ್ಥಿತಿಯಾಗಿರಲಿ.


Monday, 23 October 2017

ವಾಸ್ತು ನಿಯಮಗಳನ್ನು ಪಾಲಿಸಿ ಜೀವನದಲ್ಲಿ ಸಂತೋಷವಾಗಿರಿ

ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. 
 ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.

ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.
ಏಳು ದೈವಾಜ್ಞೆಗಳು
 

ಹಿರಿಯರಿಗೆ

 

ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.
 

ವೃತ್ತಿನಿರತರಿಗೆ


ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.
 

ಗೃಹಿಣಿಯರಿಗೆ


ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.
 

ವಿದ್ಯಾರ್ಥಿಗಳಿಗೆ


ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.

ಈ ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ ಉತ್ತಮ ಆರೋಗ್ಯ, ಸಾಮರಸ್ಯ ಮತ್ತು ಸಂತೋಷದ ಹಾದಿಯಲ್ಲಿ ಹೆಜ್ಜೆಹಾಕಿ.

Friday, 20 October 2017

ಈಶ್ವರನ ಸ್ಥಾನ ಈಶಾನ್ಯ

ವಾಸ್ತುಶಾಸ್ತ್ರದಲ್ಲಿ ಈಶಾನ್ಯ ದಿಕ್ಕಿಗೆ ಇರುವಷ್ಟು ಮಹತ್ವ ಬೇರಾವ ದಿಕ್ಕಿಗೂ ಇಲ್ಲವೆಂದು ಗುರುಗಳು ಹೇಳುತ್ತಾರೆ. ಈಶಾನ್ಯ ದಿಕ್ಕಿನ ಅಧಿಪತಿ ಸದಾಶಿವನಾದ ಈಶ್ವರನಾಗಿರುತ್ತಾನೆ. ಅದರಲ್ಲಿಯು ಇದು ವಾಸ್ತುಪುರುಷನ ಶಿರಸ್ಥಾನವಾಗಿದೆ(ತಲೆ). ಆದ್ದರಿಂದ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಕಟ್ಟುವುದು ನಮ್ಮ ಎಲ್ಲಾ ರೀತಿಯ ಪ್ರಗತಿಗೆ ಒಳ್ಳೆಯದು. ಕಾರಣ ಆ ಸ್ಥಾನವನ್ನು ಶುಚಿಯಾಗಿಡುವುದಾಗಿದೆ.

ಒಂದು ವೇಳೆ ನಿಮ್ಮ ಮನೆಯಲ್ಲಿ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಇಲ್ಲದಿದ್ದರೆ, ಆ ಭಾಗವನ್ನು ಶುಚಿಯಾಗಿ, ಆ ಸ್ಥಳದಲ್ಲಿ ಹೆಚ್ಚು ಭಾರಗಳನ್ನು ಹಾಕದೆ, ಅಕ್ವೇರಿಯಮ್ ಅಥವಾ ಇತರ ನೀರಿನ ಮೂಲಕ್ಕೆ ಸಂಬಂಧಿಸಿದವುಗಳನ್ನು ಆ ಸ್ಥಾನದಲ್ಲಿಡಬಹುದು, ಆದರೆ ಯಾವುದೇ ಕಾರಣಕ್ಕೂ ಅಲ್ಲಿ ಟಿ.ವಿ, ಕಂಪ್ಯೂಟರ್, ಬಲ್ಬ್‌ಗಳಂತಹ ಬೆಂಕಿಯ ಮೂಲಗಳನ್ನಿಡಬೇಡಿ.

ಈ ಭಾಗದಲ್ಲಿ ಭಾರ ಹೆಚ್ಚಿದಷ್ಟು ನಿಮ್ಮ ಮನಃಶಾಂತಿ ಮತ್ತು ಮನೆಯ ಶಾಂತಿಯನ್ನು ಹಾಳುಮಾಡಲು ಕಾರಣವಾಗುತ್ತದೆ. ಈ ಭಾಗದಲ್ಲಿ ಅಡುಗೆ ಮನೆ ಇದ್ದರೆ ಅದನ್ನು ಆದಷ್ಟು ಬೇಗ ತೆರವುಗೊಳಿಸಿ. ಇಲ್ಲವಾದಲ್ಲಿ ನಿಮಗೆ ಎಲ್ಲಾ ರೀತಿಯಿಂದಲೂ ಹಾನಿ ತಪ್ಪಿದ್ದಲ್ಲ. ಅಡುಗೆ ಮನೆಗೆ ಯೋಗ್ಯ ಸ್ಥಾನ ಆಗ್ನೇಯವಾಗಿರುತ್ತದೆ.

Thursday, 19 October 2017

ಪಶ್ಚಿಮದ ದಿಕ್ಕಿನ ಅಂಗಡಿಯ ವ್ಯಾಪಾರ, ವ್ಯವಹಾರ ಚೆನ್ನಾಗಿರುತ್ತಾ?

ಪಶ್ಚಿಮದ ದಿಕ್ಕಿನ ಅಂಗಡಿಯ ವ್ಯಾಪಾರ, ವ್ಯವಹಾರ ಚೆನ್ನಾಗಿರುತ್ತಾ?
ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ, ಇಂಟರ್‌ ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ. ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ.

ಕನಕೋತ್ತಮ ಕಾಂತಿಃ ಕನಕಭೂಷಣಃ ಇತ್ಯಾದಿ - ದುರ್ಗಾಳ ಕುರಿತಾಗಿ ದುರ್ಗಾ ಸಪ್ತಶತಿಯಲ್ಲಿ ಇದು ಬರುತ್ತದೆ. ದೇವಿಯ ಸುವರ್ಣ ಕಾಂತಿಯ ಮೂರ್ತಿ ವಿವರಣೆಯ ಸಂದರ್ಭದಲ್ಲಿ ಉಲ್ಲೇಖವಾಗುತ್ತದೆ. ಪಶ್ಚಿಮ ದಿಕ್ಕನ್ನು ದೃಷ್ಟಿಸುವ ಅಂಗಡಿಯ ವ್ಯಾಪಾರವು ಅಂಬಾಳಿಂದಲೇ ಜಗದಂಬಾ ಎಂದು ಆರಾಧಿಸುವ ದುರ್ಗಾಳಿಂದಲೇ ಒದಗಿಬರಬೇಕು. ಸರ್ವತ್ರ ಭೂತಳಾದ ದೇವಿಯು ಸಜ್ಜನನ ಪಾಲಿಗೆ ವರ ಕೊಡುವ ಕಾಮಧೇನು. ಅಂಗಡಿಯಲ್ಲಿ ನೈಋತ್ಯ ಮೂಲೆಯಲ್ಲಿ ಯಜಮಾನ ಅಥವಾ ಯಜಮಾನತಿ ಕುಳಿತಿರಬೇಕು.

ಈ ಮೂಲೆ ಕೊಂಚ ಎತ್ತರವಾಗಿರಬೇಕು. ಉಳಿದ ಯಾವ ದಿಕ್ಕುಗಳೂ ಅಂಗಡಿಯ ಮಾಲೀಕ ಜನಕ್ಕೆ ಉಪಯೋಗಕ್ಕೆ  ಬರುವಂಥದ್ದಲ್ಲ. ವಾಯುವ್ಯ ಮೂಲೆಯನ್ನು ಅನೇಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರಿದು ಸೂಕ್ತ ವಿಚಾರವಲ್ಲ. ಇಲ್ಲಿ ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ ಇಂಟರ್‌ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ.

ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ. ಅದೇ ರೀತಿ ಯಜಮಾನ ಅಥವಾ ಒಡತಿಗೆ ಪೂರ್ವ ಅಥವಾ ಉತ್ತರ ದಿಕ್ಕನ್ನು ನೋಡುತ್ತಾ ಜವಾಬ್ದಾರಿ ನಿರ್ವಹಿಸಬೇಕು. ಶಟರ್ಸ್‌ಗಳ ವಿಚಾರದಲ್ಲೂ ಕೆಲವು ಅಗತ್ಯವಾದ ಚಿಂತನ ಗಮನಗಳ ಔಚಿತ್ಯ ಸೂಕ್ತವಾಗಿರಲಿ. ಎರಡು ಶಟರ್ಸ್‌ಗಳನ್ನು ಹೊಂದಿರುವರಾದರೂ ಎರಡನ್ನೂ ಉಪಯೋಗಿಸುವುದಕ್ಕೆ ತೊಂದರೆ ಇಲ್ಲ. ಆದರೆ ವಾಯುವ್ಯ ಮೂಲೆಯ ಶಟರ್‌ ಮಾತ್ರ ಪ್ರಧಾನವಾದ ಆಯ್ಕೆಯನ್ನು ಉಪಯೋಗದ ವಿಷಯದಲ್ಲಿ ಪಡೆದಿರಲಿ. ಪ್ರಾಶಸ್ತ್ಯವಂತೂ ವಾಯುವ್ಯ ದಿಕ್ಕಿನ ಶಟರ್‌ಗೇ ದೊರಕುವಂತಾಗಲಿ.

ಯಾವುದೇ ದೈವಿಕ ಪೂಜಾ ಕೆಲಸಗಳಿಗಾಗಿ ಸಂಬಂಧಿಸಿದ ಮೂರ್ತಿ ಅಥವಾ ಸ್ತುತಿ ಈಶಾನ್ಯದಲ್ಲೇ ನಡೆಯಲಿ. ಕಸಬರಿಗೆ ಒರೆಸುವ ವಸ್ತ್ರ, ಟಾಯ್ಲೆಟ್‌ ಸಲಕರಣೆಗಳು ನ್ಯಾಪ್‌ಕಿನ್‌, ಪೇಪರ್‌ ಕಬ್ಬಿಣದ ತ್ಯಾಜ್ಯಗಳನ್ನು ಈಶಾನ್ಯ ಅಥವಾ ವಾಯುವ್ಯ ನೈಋತ್ಯ ವಹಿವಾಟಿನ ಜಾಗೆಯಲ್ಲಿ ಇಡಬೇಡಿ. ದೇವರನ್ನಿಡುವ ಜಾಗದಲ್ಲಿ ಚಿಕ್ಕದೊಂದು ಕ್ರಿಷ್ಟಲ್‌ ಪಿರಮಿಡ್‌ ಅಥವಾ ಅಭಿಮಂತ್ರಿಸಿದ ಶಂಖ, ಗದಾ, ಧಾತು, ಸಮಷ್ಟಿ ಸಂಪುಟಗಳು ಇದ್ದಿರಲಿ. ಸಮಸ್ಯೆಗಳೇನೂ ಇಲ್ಲ. ಅತಿಯಾದ ಅಲಂಕಾರಗಳು ಬೇಡ. ಯಜಮಾನ / ಒಡತಿಯ ಹಿಂದಗಡೆಯ ದಕ್ಷಿಣ ದಿಕ್ಕಿಗೋ ವಿಸ್ತರಿಸಿದ ಜಾಗೆಯಲ್ಲಿ ಕನ್ನಡಿಯ ಜೋಡಣೆ ಅಥವಾ ದೇವರ ಮೂರ್ತಿ ಅಥವಾ ಚಿತ್ರಗಳು ಬೇಡ. ನಿಮ್ಮ ನಿಮ್ಮ ಜಾತಕದ ಆಧಾರದಲ್ಲಿ ದೇವರ ಸಲುವಾಗಿನ ಆರಾಧನೆಗಾಗಿನ ಹೂವುಗಳ ಬಣ್ಣ ಇರಲಿ. ನೈಋತ್ಯ ದಿಕ್ಕಿನಲ್ಲಿ ಸಿಮೆಂಟಿನ ಕಟ್ಟೆ ಸಮಾವೇಶಗೊಳಿಸಿ, ಅಲ್ಲಿ ಆರಾಧನೆಗಾಗಿನ ಸಲಕರಣೆಗಳು ಇಡಲ್ಪಟ್ಟರೆ ತೊಂದರೆಗಳಿಲ್ಲ.

ವಾಯುವ್ಯ ಮೂಲೆಯಲ್ಲಿನ ಪಶ್ಚಿಮದ ಭಾಗದಲ್ಲಿ ಮೆಟ್ಟಿಲುಗಳು ಇದ್ದು ಅಂಗಡಿಯ ಒಳಬರಲು ಸಾಧ್ಯವಾಗುವ ಹಾಗೆ ರಚನೆ ಇರಲಿ. ವ್ಯಾಪಾರದ ವಾಣಿಜ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ಮಾತುಕತೆಗಳ ಕಾಲದಲ್ಲಿ ಹೊರರಸ್ತೆಯ ಧೂಳು ಬರದಂತೆ ಬಾಗಿಲು ಮುಚ್ಚಿರಲಿ. ರೆಸ್ಟೋರಂಟ್‌ಗಳಾದರೆ ಸ್ಪಾಂಜ್‌ ಬಳಸಿದ ದ್ರಾವಣ, ಪ್ಲಾಸ್ಟಿಕ್‌ ಕಸಬರಿಕೆ, ಉದ್ದನೆಯ ಕೋಲಿಗೆ ಕಟ್ಟಿದ ನೆಲ ಒರೆಸುವ ಮಾಪು ನಡೆಯಲಿ. ಗ್ರಾಹಕರಿಗೆ ದ್ರಾವಣ ಸಿಡಿಯದಂತೆ, ಕಸಬರಿಕೆ ಸೋರದಂತೆ ಎಚ್ಚರಿಕೆ ವಹಿಸಿ. ಕೆಲಸಗಾರರಿಗೆ ಈ ಕುರಿತು ಸರಳವಾದ ಬೋಧನೆ ಮಾಡಿ. ಯಜಮಾನನ ಜಾತಕಕ್ಕೆ ಹೊಂದುವ ಬಣ್ಣದ ಅನುಸಾರ ಕೆಲಸಗಾರರ ಸಮವಸ್ತ್ರವಿರಲಿ. ಎಲ್ಲವೂ ಸರಿಯಾಗಿದ್ದರೆ ಲಕ್ಷ್ಮೀಯ ಚಿತ್ತ ಆನಂದವಾಗಿರುತ್ತದೆ.





ವಾಸ್ತು ನಿಯಮಗಳೂ, ಸರಳ ಪರಿಹಾರಗಳೂ

ವಾಸ್ತು ನಿಯಮಗಳೂ, ಸರಳ ಪರಿಹಾರಗಳೂ





ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ...

ಮನೆಯನ್ನು ಕಟ್ಟುವಾಗಿನ ವಾಸ್ತು ನಿಯಮಗಳನ್ನು ಪ್ರಮುಖವಾಗಿ ಪಡಸಾಲೆ, ಅಡುಗೆ ಮನೆ, ಬಚ್ಚಲುಮನೆ, ಮಲಗುವ ಕೋಣೆ, ಸಂಡಾಸು, ಸ್ಟೋರ್‌ ರೂಂ. ಕಿಟಕಿ ಬಾಗಿಲು, ದೇವರ ಕೋಣೆ ಮುಂತಾದವುಗಳೆಲ್ಲ ಸೂಕ್ತವಾಗಿಯೇ ಮಾಡಿರುತ್ತೀರಿ ಎಂದುಕೊಳ್ಳೋಣ. ಇವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಅಷ್ಟು ಸುಲಭವಲ್ಲ ಎಂಬ ಮಾತು ಬೇರೆ.  ಏನೋ ಒಂದು ದೋಷ ಹಾಗೆ ಸುಮ್ಮನೆ ಉಳಿದೇಬಿಡುತ್ತದೆ. ಸರಿಯಾದ ಶಕ್ತಿ ಧಾತುಗಳನ್ನು ಸಂಪಾದಿಸಿಕೊಂಡರೆ ಉಳಿದಿರುವ ಕಿಂಚತ್‌ ಲೋಪಗಳನ್ನು ಸುಧಾರಿಸಿಕೊಳ್ಳಬಹುದಾಗಿದೆ. ವಿವೇಚನೆಯೊಂದಿಗೆ ಇಂದಿನ ಕೆಲವು ಸರಳ ಪರಿಹಾರಗಳನ್ನು ನೀವು ನಡೆಸಿ, ಉಳಿದುಹೋದ ದೋಷಗಳನ್ನು ಸಮತೋಲನಗೊಳಿಸಿ, ಉಂಟಾಗಲಿರುವ ತೊಂದರೆಗಳನ್ನು ತಪ್ಪಿಸಿಕೊಳ್ಳುವುದು ಸೂಕ್ತ.

ಸಾಧಕ ಶಕ್ತಿಗಾಗಿನ ಜಾಗ್ರತ ಕೋಶಗಳು ನಿಮ್ಮಲ್ಲಿ ಕ್ರಿಯಾಶೀಲವಾಗಬೇಕು. ದೇವಿ ಆರಾಧನೆ, ದತ್ತಾತ್ರೇಯ ಆರಾಧನೆ, ಗಣಪತಿ, ರಾಮರಕ್ಷಾ, ಮಾರುತಿ ಆರಾಧನೆಗಳು ಎಷ್ಟು  ಪ್ರಾಬಲ್ಯವನ್ನು ತಡೆಯಲು ಸಾಧ್ಯ? ಎಂಬುದು ಇಲ್ಲಿ ಮುಖ್ಯ. ಜೀವ ಧಾತುಗಳಾದ ಗಾಳಿ, ನೀರು, ಬೆಂಕಿ, ಮಣ್ಣುಗಳ ಜೊತೆ ಆಕಾಶ ತತ್ವ  ಒಂದು ಸುಲಲಿತವಾದ ಧಾಟಿಯಲ್ಲಿ ನಿಮ್ಮ ನಿಯಂತ್ರಣಕ್ಕೆ ಸಿಕ್ಕಿದರೆ ಅದರಿಂದ ಇಂದ್ರಾದಿ ದೇವತೆಗಳ, ತ್ರಿಮೂರ್ತಿಗಳ ಕುರಿತಾದ ಸಿದ್ಧಿ ಸೂತ್ರಗಳ, ಆದಿ ಶಕ್ತಿ ಮಹಾಮಾಯ ಆ ಶ್ರೀಪೀಠ ಶೋಭಿತಳಾದ ಕ್ಷೀರ ಸಮುದ್ರ ತನಯೆ ಲಕ್ಷ್ಮಿಯ, ಬುದ್ಧಿಬಲ ನೀಡುವ ಕಾಮರೂಪಿಣಿ ಮಂಗಳಮಯ ಶ್ರೀಶಾರದೆಯ ಅಭಯ, ರಕ್ಷೆ ಸಿಗಲು ಸಾಧ್ಯ. ಪರಾತ್ಪರವಾದ ಶಕ್ತಿಯನ್ನು ಧ್ಯಾನಿಸುವ ಏಕಾಗ್ರತೆಯನ್ನು ಮಂತ್ರಶಕ್ತಿಯಿಂದ, ಧಾರ್ಢ್ಯತೆ ಪಡೆದ ಧಾತುಗಳಿಂದ, ವಾಸ್ತುಪುರುಷನ ಅಭಿವ್ಯಕ್ತಿ ವೃದ್ಧಿಸುವ ಚೈತನ್ಯ ಪಡೆಯಬೇಕು. ಇದು ಸುಲಭದ ಕೆಲಸವಲ್ಲ.

ಸಾಧನೆಯಿಂದ ಸಾಧಿಸಬೇಕು. ಭಕ್ತಿಯಿಂದ ಗೆಲ್ಲಬೇಕು. ಮನೆಯಲ್ಲಿ ಪ್ರತಿನಿತ್ಯವೂ ಬೇಕಾದ ಸಲಕರಣೆಗಳ ಆಯ್ಕೆಯ ವಿಚಾರದಲ್ಲಿ ಏನನ್ನೂ ಯೋಚಿಸದೆಯೇ ವಾಸ್ತು ನಾಡಿಯನ್ನು ಅಸ್ತವ್ಯಸ್ತಗೊಳಿಸುವ ಕೆಲಸ ಮಾಡಬೇಡಿ. ಪ್ರತಿ ದಿನವೂ ಬಹಳ ಅಮೂಲ್ಯವಾದದ್ದು. ಪ್ರತಿಕ್ಷಣವೂ ಬಾರದಿರುವಂಥದ್ದು. ಸುಮ್ಮನೇ ಕ್ಷಣಗಳು ಜಾರುತ್ತಿರುತ್ತದೆ. ನಾಳೆ ಮಾಡಿದರಾಯ್ತು ಎಂದು ಶುದ್ಧತೆಯನ್ನು ತುಂಬಿಕೊಂಡ ಪ್ರಕೃತಿ ಅಲೆಗಳನ್ನು ಸುಮ್ಮನೆ ವ್ಯರ್ಥ ಗೊಳಿಸಿಕೊಳ್ಳುತ್ತೀರಿ. ಮನೆಯ ದಿಕ್ಕು ಪೂರ್ವ, ಉತ್ತರ ಎಂದು ಗಾಬರಿ ಹುಟ್ಟುವಷ್ಟು ಗಡಿಬಿಡಿಯೊಂದಿಗೆ ಧಾವಿಸಿ ಕೈವಶ ಪಡೆಯಲು ಮುಂದಾಗುತ್ತೀರಿ. ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ. ಸ್ಟೋರ್‌ ರೂಮಿನಲ್ಲಿ ಇಡಬೇಕಾದ ಸರಕುಗಳೇನು ಎಂಬುದನ್ನು ಯೋಚಿಸದೆಯೇ ಎಲ್ಲವನ್ನೂ ರಾಶಿ ಮಾಡಿ ತುಂಬುತ್ತೀರಿ. ಪಶ್ಚಿಮ ದಿಕ್ಕಿಗೆ ಬೆಡ್‌ ರೂಮ್‌ ಗಳಿರಲಿ ಎಂಬ ವಿಚಾರ ಸರಿ. ಆದರೆ ಮುಕ್ತ ಹಜಾರಕ್ಕೂ ಬೆಡ್‌ ರೂಮಿಗೂ ಹೊಂದಿಸಿಕೊಳ್ಳಬೇಕಾದ ಅಗಲ ಉದ್ದಗಳನ್ನು ಸೂಕ್ತವಾಗಿ ಇರಿಸಿಕೊಳ್ಳಲು ಯೋಚಿಸುವುದಿಲ್ಲ.

ಮುಖ್ಯವಾಗಿ ಅಪಾರ್ಟ್ಮೆಂಟ್ ನಲ್ಲಿ ಮಕ್ಕಳನ್ನು ಎಲ್ಲೆಂದರಲ್ಲಿ ಆಡಲು ಕಳುಹಿಸುತ್ತೀರಿ. ಅವರ ಬಳಿ ಎಲೆಕ್ಟ್ರಾನಿಕ್‌ ಸರಕುಗಳಾದ ಮೊಬೈಲ್‌ ಡಿಜಿಟಲ್‌ ವಾಚ್‌ ಇನ್ನೇನೋ ಆಟಿಕೆ ಇರುತ್ತದೆ. ದಕ್ಷಿಣ ದಿಕ್ಕಿನ ಆಘಾತಗಳು ಎಂಥದಿರಬಹುದು ಇದರಿಂದಾಗಿ ಎಂಬುದನ್ನು ಯೋಚಿಸುವುದಿಲ್ಲ. ಇವನ್ನೆಲ್ಲ ಸೂಕ್ತವಾದ ಸುವಸ್ತುಗಳು, ಹರಳುಗಳು, ಸ್ವಸ್ತಿಕ್‌, ಶಂಖು ಚಕ್ರ, ಗದಾ ಪದ್ಮ ತ್ರಿಶೂಲ ಧಾತುಗಳ ಮೂಲಕ ಒಂದು ಸಮತೋಲನ ಪಡೆಯಲು ಸುಲಭವಾದ ದಾರಿ ಏನೆಂಬುದನ್ನು ಅರಿಯಲು ಮುಂದಾಗುವುದಿಲ್ಲ. ಬದಲಾದ ಕಾಲಘಟ್ಟದಲ್ಲಿ ಉಂಟಾಗುವ ವಿಕಿರಣಗಳಿಂದಾಗುವ ಅಪಾಯಗಳನ್ನು ತಪ್ಪಿಸಿಕೊಳ್ಳಲು ರಕ್ಷಣೆಯನ್ನು  ಬಯಸುತ್ತದೆ. ಸುಲಭವಾದ ದಾರಿಯಿಂದ, ಸಾಧನಗಳಿಂದ ರಕ್ಷೆ ಸಾಧ್ಯ.




ಅಕ್ವೇರಿಯಂ, ಸಾಕು ಹಕ್ಕಿಗಳು ಮನೆಯಲ್ಲಿ ಇರಬಹುದೇ?

ಅಕ್ವೇರಿಯಂ, ಸಾಕು ಹಕ್ಕಿಗಳು ಮನೆಯಲ್ಲಿ ಇರಬಹುದೇ?
ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ
ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ.

ಮನೆಯ ಸೊಬಗಿದೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ, ಪಾರಿವಾಳ, ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು, ಲವ್‌ ಬರ್ಡ್ಸ್‌ ಗಳಂಥ ಬಣ್ಣದ ಮೈ ಹೊದಿಕೆಯ ಹಕ್ಕಿಗಳನ್ನುಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣದ ಅವುಗಳ ಹೊರ ಮೈ ಮಿಂಚಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾರದ ಗಾಜಿನ ಗೋಡೆಗಳಿಗೆ ಢೀ ಕೊಡುತ್ತ, ಮೂತಿ ಬಡಿಯುತ್ತ, ಮೂತಿ ಉರುಟುರುಟಾಗಿಸುತ್ತಾ ಓಡಾಡುವ ಮೀನುಗಳು ಕಣ್ಣಿಗೆ
ಆಹ್ಲಾದವನ್ನು ಕೊಡುತ್ತವೆಂಬುದನ್ನು ಆನಂದಿಸುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು, ಜಾಡಿಗಳು, ಗಿಂಡಿಗಳು ಅಶುಭಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿರುವ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ.

ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ
ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು
ಒಳ್ಳೆಯದು. ಹೀಗಿರುವ ಅಕ್ವೇರಿಯಂನಲ್ಲಿ ಕಡುಗಪ್ಪು ಪೂರ್ತಿಯಾಗಿ ಮೈಬಣ್ಣವಾಗಿರುವ ಮೀನುಗಳಿರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸು ನೀಲಿ, ನಸುಗೆಂಪು, ಬಿಳಿಕಪ್ಪುಗಳು ಪಟ್ಟೆಯಾದ ಮೀನುಗಳು ಆಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ, ಕತ್ತು, ಮೂತಿ ಕೊಂಕಿಸುತ್ತಾ ಓಡಾಡುತ್ತಿರಲಿ. ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಮಾಡಬೇಡಿ. ಮುಂಜಾನ ಸೂರ್ಯ
ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸ ನೆರವೇರಲಿ. ಒಳಗಿನ ನೀರು
ನಸು ನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಹೊರಸೂಸುವಂಥ ರೀತಿಯಲ್ಲಿ ಇರಲಿ.

ಇದರಿಂದ ಮನೆಯೊಳಗೆ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ. ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ, ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇ ಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟದಿದ್ದರೆ ಒಳ್ಳೆಯದು.

ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದುಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿಷಿದ್ಧವೇ ಆಗಿವೆ. ಉಳಿದಂತೆ ಗಿಣಿ ಲವ್‌ ,
ಬರ್ಡ್ಸ್‌ ಪಾರಿವಾಳಗಳು ಸಹಾ ಮನೆಯೊಳಗೆ ನಿಷಿದ್ಧವೇ ಆಗಿವೆ. ಇವು ಮನೆಯೊಳಗೆ ತನ್ನಿಂತಾನೆ ವಸತಿ ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ರೆಕ್ಕೆಗಳನ್ನು ಸಂಯೋಜಿಸಿಕೊಂಡ ಇವುಗಳ
ಅಸಹಾಯಕ ಸೆರೆವಾಸವೂ ಬೇಡ.

 

ಆಧುನಿಕ ಉಪಕರಣಗಳು ಮತ್ತು ನಿಮ್ಮ ಮನೆ

ಆಧುನಿಕ ಉಪಕರಣಗಳು ಮತ್ತು ನಿಮ್ಮ ಮನೆ
ಆಧುನಿಕ ಉಪಕರಣಗಳಾದ ಫ್ರಿಡ್ಜ್, ಟೀವಿ, ಓವನ್‌, ಮೈಕ್ರೋವೇವ್‌, ಗೀಸರ್‌, ಲಿಫ್ಟ್ ವ್ಯಾಕ್ಯೂಂ ಕ್ಲೀನರ್‌ ಇತ್ಯಾದಿ ಅಸಂಪ್ರದಾಯಿಕ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ. ಇದರಿಂದಾಗಿ ವಿವಿಧ ರೀತಿಯ ಧನಾತ್ಮಕವಾಗಿರದ ಸ್ಪಂದನಗಳು ಮನೆಯನ್ನು ಆಕ್ರಮಣದಲ್ಲಿ ಹಿಂಸಿಸುತ್ತದೆ.

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯ ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ. ನಿಜ ಹೇಳಬೇಕೆಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು ವರ್ಧಿಸುತ್ತ ಹೋಗಬೇಕಿತ್ತು. ಆದರೆ ನಾವು ಇಂದು ಬದುಕುತ್ತಿರುವ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಅನಿಸುತ್ತಿದೆಯೇ? ದೂರದ ಅಮೆರಿಕಾ ಎಷ್ಟು ಹತ್ತಿರವಾಗಿದೆಯೆಂದರೆ, ಅಮೆರಿಕಾದವರಿಗೂ ಭಾರತ ಅಪರಿಚಿತ ದೇಶವಾಗಿ ಉಳಿದಿಲ್ಲ. ಇದು ತಮಗೆ ಬೇಕೇ ಬೇಕಾದ ದೇಶ. ಅನಿವಾರ್ಯವಾಗಿ ನಾವು ಆಶ್ರಯಿಸಿ ಇರಬೇಕಾದ ದೇಶ ಎಂಬ ಅವರ ಮನೋಭಾವವನ್ನು ಗಮನಿಸುತ್ತ ಎಷ್ಟು ಹತ್ತಿರ ತಲುಪಕೂಡದೋ, ಅಷ್ಟು ಹತ್ತಿರಕ್ಕೆ ಬರುತ್ತಿದೆ.

ಆಧುನಿಕತೆಯ ಹೆಸರಿನಲ್ಲಿ ಅಮೆರಿಕಾ ಹತ್ತಿರವಾದುದು ನಮ್ಮನ್ನು ನಾವು ನಮಗೆ ಬೇಕಾದುದಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸಿಕೊಳ್ಳುತ್ತಿದ್ದೇವೆ. ನಮ್ಮ ಮನೆಗಳನ್ನು ಈ ಕಾರಣದಿಂದ ನಮಗೆ ಜೀವನೋಲ್ಲಾಸವನ್ನು ಚಿಮ್ಮಿಸುವ ವಿಚಾರದಲ್ಲಿ ಕಟ್ಟಲ್ಪಡದೆ, ಸಂಯೋಜಿಸಲ್ಪಡದೆ ಮನೆಯ ಶಾಂತಿ ಹಾಗೂ ನೆಮ್ಮದಿಗಳು ಒಂದು ರೀತಿಯ ಶುಷ್ಕ ರೀತಿಯಲ್ಲಿ ಸಪ್ಪೆಯಾಗತೊಡಗಿದೆ.

ಈ ಶುಷ್ಕ ನೆಲೆಗಳೇ ನಮ್ಮ ಆಧುನಿಕತೆಯನ್ನು ಪ್ರತಿಪಾದಿಸುತ್ತಿರುವ ಕೀಲಿ ಕೈಗಳಾಗಿರುವುದರಿಂದ ನಮ್ಮ ಸಾಂಸ್ಕೃತಿಕ ಚೌಕಟ್ಟು ಸಮತೋಲನ ಕಳೆದುಕೊಂಡಿದೆ. ಆಧುನಿಕ ಉಪಕರಣಗಳಾದ ಫ್ರಿಡುj, ಟೀವಿ, ಓವನ್‌, ಮೈಕ್ರೋವೇವ್‌, ಗೀಸರ್‌, ಲಿಫ್ಟ್ ವ್ಯಾಕ್ಯೂಂ ಕ್ಲೀನರ್‌ ಇತ್ಯಾದಿ ಅಸಂಪ್ರದಾಯಿಕ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತವೆ. ಇದರಿಂದಾಗಿ ವಿವಿಧ ರೀತಿಯ ಧನಾತ್ಮಕವಾಗಿರದ ಸ್ಪಂದನಗಳು ಮನೆಯನ್ನು ಆಕ್ರಮಣದಲ್ಲಿ ಹಿಂಸಿಸುತ್ತದೆ.

ಉದಾಹರಣೆಗೆ ಫ್ರಿಡ್ಜ್ ಹಾಗೂ ಗ್ಯಾಸಿನ ಒಲೆಯ ಸಿಲಿಂಡರ್‌ ನಂತರಗಳು ಸದಾ ಮುಖ್ಯವಾದ ಸ್ವಿಚ್‌ ಒಂದು ಟಿವಿಯಲ್ಲಿ ಸಿಆರ್‌ ಇತ್ಯಾದಿ ಚಾಲ್ತಿಯಲ್ಲೇ ಇರುತ್ತದೆ.  ತಪ್ಪು ದಿಕ್ಕಿನಲ್ಲಿ ಟಿವಿಯನ್ನೋ ಸಿಆರ್‌ ಅನ್ನೋ ಕೂಡಿಸುವುದು ಓವನ್‌ ಅಥವಾ ಮೈಕ್ರೋವೇವ್‌ ಉಪಕರಣಗಳನ್ನು ತಪ್ಪಾದ ಕಡೆ ಸಂಯೋಜಿಸುವುದು ಗೀಸರ್‌ ಅನ್ನು ಒಂದೆಡೆ ಗೋಡೆಗೆ ಬಚ್ಚಲಲ್ಲಿ ತಗುಲಿ ಹಾಕುವುದು ಇತ್ಯಾದಿ ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ.

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ನಮ್ಮ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಾಗಿರುವುದಿಲ್ಲ. ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ, ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ ನಿಂದ ನಡೆಯುವ ಉಪಕರಣಗಳೆಲ್ಲ ಪಶ್ಚಿಮ ಭಾಗವನ್ನು ವಿಶೇಷವಾಗಿ ನೈರುತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ. ಈ ಸಂದರ್ಭದಲ್ಲಿ ಹೈಟೆನÒನ್‌ ವಿದ್ಯುತ್‌ ಕಂಬಗಳು ಹೈಟೆನÒನ್‌ ಲೋಡಿರುವ ವೈರುಗಳು ಜಾಲಾಡಿಕೊಂಡಿರುವ ಮನೆಯ ಹೊರವಲಯದ ಜೋಡಣೆಗಳ ವಿಚಾರವನ್ನು ಮನದಟ್ಟು ಮಾಡಿಕೊಂಡು ಸೂಕ್ತ ವಿದ್ಯುತ್‌ ಬಗೆಗೆ ಮಾಹಿತಿ ಇರುವ ತಜ್ಞರಿಂದ ಪಶ್ಚಿಮವೂ ತೊಂದರೆಗೆ ಈಡಾಗುವ ಬಿಂದುವೇ ಎಂಬುದನ್ನು ತಿಳಿದುಕೊಳ್ಳಿ.

ಟಿವಿಯನ್ನಾಗಲೀ ಕಂಪ್ಯೂಟರನ್ನಾಗಲೀ ಮಲಗುವ ಕೋಣೆಯಲ್ಲಿ ಇಡಬಾರದು. ಇದು ಮಾನಸಿಕವಾದ ಅಂತರ್‌ ವಲಯವನ್ನು ಮೆದುಳಿನ ಸೂಕ್ಷ್ಮಕೋಶಗಳನ್ನು ಬಾಧಿಸುವ ವಿಚಾರವಾಗಿರುವುದರಿಂದ ಟಿವಿ ಕಂಪ್ಯೂಟರ್‌ ಹಾಗೂ ಮೊಬೈಲ್‌ ವಿಷಯಗಳಲ್ಲಿ ಟೆಲಿಪೋನಿನ ಲ್ಯಾಂಡ್‌ ಲೈನ್‌ ವಿಚಾರದಲ್ಲಿ ಎಚ್ಚರದಿಂದಿರಿ. ಅನಪೇಕ್ಷಿತ ವಿಚಾರವನ್ನು ತಿಳಿದು ಜಾಗರೂಕತೆಯಿಂದ ವರ್ತಿಸಿ. ಇನ್ನು ಎಷ್ಟೇ ಆದರೂ ಉಂಟಾಗಿಯೇ ತೀರುವ ಪಡಿಪಾಟಲುಗಳಿಂದಾಗಿ ದೇವರ ಮನೆಯಲ್ಲಿ ದೇವರ ಪೀಠ ಇರಿಸುವ ಕಟ್ಟೆಯ ಕೆಳಗಡೆ ಹವಳವನ್ನು ಇಟ್ಟು ಕಟ್ಟೆ ಕಟ್ಟುವುದು ಸೂಕ್ತ. ಧರಣಿ ಗರ್ಭ ಸಂಭೂತನಾದ ಅಂಗಾರಕನೇ ವಿದ್ಯುತ್‌ ಉಪಕರಣಗಳ ವಿಷಯದಲ್ಲಿ ನಿಯಂತ್ರಣಕ್ಕಾಗಿ ಜವಾಬ್ದಾರಿಯನ್ನು ಹೊತ್ತ ಗ್ರಹವಾದ್ದರಿಂದ ಹವಳವು ಪ್ರಧಾನವಾದ ದೇವರ ಕೋಣೆಯ ಸ್ಥಳದಲ್ಲಿ ಸೇರಿಕೊಂಡಿರುವುದು ಸೂಕ್ತ ವಿಚಾರ.

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...