Wednesday, 28 February 2018

ಜ್ಞಾನಕ್ಕೆ ಉತ್ತರ ದಿಕ್ಕು ಉತ್ತಮ

ಭಾರತೀಯ ಮೀಮಾಂಸೆಯು ಲೌಕಿಕವನ್ನು ಅಲೌಕಿಕವನ್ನು ಒಟ್ಟಂದದಲ್ಲಿ ಸಮಾನ ದೃಷ್ಟಿಯಲ್ಲೇ ನೋಡಿದೆ. ಬದುಕನ್ನು ಶೂನ್ಯ ಎನ್ನುವುದಿಲ್ಲ. ಭಾವನಾಮಯವಾದ ಜಗದ
ಯಾತ್ರೆಯಲ್ಲಿ ಅಧ್ಯಾತ್ಮವನ್ನು ಬೆರೆಸಿಕೊಂಡು ನಿನ್ನೊಳಗೇ ಪರಮಾತ್ಮನನ್ನು ಹುಡುಕು ಎಂದೂ ಹೇಳುತ್ತದೆ. ನಿನ್ನಿಂದ ಅನ್ಯನಾದ ಪರಮಾತ್ಮನಲ್ಲಿ ಶರಣಾಗುವ ವಿನಯವನ್ನು ತೋರು ಎಂದು ಬೋಧಿಸುತ್ತದೆ. ಮಂಗಳಮಯನಾಗಿ ಮಂಗಳಪ್ರದನನಾದವನ್ನು ಹುಡುಕಿಕೊಂಡಿರು ಎಂದು ಬೋಧಿಸುತ್ತದೆ. ಒಂದು ಎಲೆಯ ಹಸಿರು ಉದುರಿ ಬೀಳುವ ಮುನ್ನ ಅಕಸ್ಮಾತ್ತಾಗಿ ಹಸುವಿನ ಆಹಾರವಾಗಿಯೂ ಮಾಯವಾಗಿಬಿಡಬಹುದು. ಹೀಗಾಗಿ ಒಂದು ಗೊಂದಲ ಇದೇ ಇರುತ್ತದೆ. ಯಾವುದು ತನ್ನ ಕಾರ್ಯವನ್ನು ಪೂರ್ತಿ ಮುಗಿಸಿ ಉದುರುತ್ತದೆ. ಮುಗಿಸುವ ಮುನ್ನವೇ ಯಾವುದು ಮರೆಯಾಗುತ್ತದೆ ಎಂಬ ಗೊಂದಲಕ್ಕೆ ಉತ್ತರವಿಲ್ಲ. ಇದನ್ನು ಅದೃಷ್ಟ ಎಂದು ಕರೆದರು. ಅದೃಷ್ಟದ ಬೇರುಗಳು ಅಧ್ಯಾತ್ಮದ ಚಿಂತನೆಯಿಂದಲೇ ಕೆಲವಷ್ಟು ಉತ್ತರಗಳನ್ನು ತಡೆಯಬಹುದು. ಜಾnನದಿಂದಾಗಿ ಆಧ್ಯಾತ್ಮದ ಬತ್ತಿಗೆ ಬೆಳಕಿನ ಸೌಭಾಗ್ಯ ಒದಗಿಬರಬಹುದು. ಬೆಳಕು ಕತ್ತಲನ್ನು ಹೊಡೆದೋಡಿಸುತ್ತದೆ. ಆದರೆ ಕತ್ತಲು ಏಕೆ? ಹೇಗೆ? ಎಲ್ಲಿಂದ ಬಂತು. ಬೆಳಕು ಕತ್ತಲಿಗೆ ಪ್ರತಿರೋಧ ತರುವ ತನ್ನ ಹುಟ್ಟನ್ನು ಹೇಗೆ ಕಂಡುಕೊಂಡಿತು ಹೀಗೆ ಆಳವಾಗಿ ಇಳಿಯುತ್ತ ಹೊರಟರೆ ಎಲ್ಲವೂ ಮತ್ತೆ ಪ್ರಶ್ನೆಗಳೆ.

ಉತ್ತರಗಳನ್ನು ಕೆಲವುಸಲ ನೀಡಬಹುದೇ ವಿನಾ ಪ್ರತಿಯೊಂದಕ್ಕೂ ಉತ್ತರವಿಲ್ಲ ಹೀಗಾಗಿ ಅದೃಷ್ಟವನ್ನು ಮನಗಾಣಲೇ ಬೇಕು. ಏನೋ ಒಂದು ನಮ್ಮನ್ನು ಮೀರಿ ಇದೆಯೆಂಬುದು ನಂಬಬೇಕು. ದಾಡ್ಯìತೆ ಇದ್ದರೆ ನಂಬದೆ ಇರಿ. ಪ್ರಧಾನವಾಗಿ ಮನೆಯಲ್ಲಿ ಮನಸ್ಸು ಕಂಡ
ರೀತಿಯಲ್ಲಿ ದೇವರುಗಳನ್ನು, ದೇವರುಗಳ ಪಟವನ್ನು ಇಡಬೇಡಿ. ದೇವರು ಎನ್ನುವುದು ನಮ್ಮನ್ನು ಒಂದು ಶಕ್ತಿಯ ಎದುರು ಬಾಗುವ ವಿನಯಕ್ಕಾಗಿ ಇರಬೇಕಾದದ್ದು. ಕುಳಿತಲ್ಲಿ, ನಿಂತಲ್ಲಿ, ಕಂಡಕಂಡಲ್ಲಿ ದೇವರನ್ನು ಪ್ರತಿಷ್ಠಾಪಿಸುತ್ತಾ ಹೋದರೆ ತುಂಬಾ ಅಪಾಯಕರವಾದ ರೀತಿಯಲ್ಲಿ ನೀವು ಕರಗಿಹೋಗುತ್ತೀರಿ. ಬೌದ್ಧಿಕ ವಿಕಸನಕ್ಕೆ  ಅಡೆತಡೆ ಉಂಟಾಗುತ್ತದೆ. ಜಾnನವನ್ನು ವಿಸ್ತರಿಸಿಕೊಳ್ಳಿ. ದೇವರನ್ನು ವಿಸ್ತರಿಸಿಕೊಳ್ಳಲು ಮುಂದಾಗದಿರಿ. ದೇವರು ನಿಮ್ಮಿಂದ ವಿಸ್ತಾರಗೊಳ್ಳಬೇಕಾಗಿಲ್ಲ. ಜಾnನದಿಂದ ಹೊಸಹೊಸ ಹೊಳಹುಗಳು ಸಿಗುತ್ತವೆ. ಜೀವನವನ್ನು ಸರಳವಾಗಿಸಿಕೊಳ್ಳಲಿಕ್ಕೆ ನಾಗರೀಕತೆಯ ಸಂಪನ್ನತೆಗೆ ವೃದ್ಧಿ ತರುತ್ತದೆ.

ಈಶಾನ್ಯ ದಿಕ್ಕು ಜಾnನಕ್ಕೆ ಹಾಗೂ ಓದು ಕಲಿಕೆಗಳಿಗೆ ತನ್ನನ್ನು ಸಮೃದ್ಧಿಯ ವೇದಿಕೆಯನ್ನಾಗಿ ರೂಪಿಸುವ ಸಿದ್ಧಿ ಪಡೆದಿದೆ. ಮಣ್ಣು ಇದರ ಮೂಲ ವಸ್ತು. ಪ್ರತಿದಿಕ್ಕುಗಳಲ್ಲೂ ಮೂಲವಸ್ತು ಮಣ್ಣೇ ಇದ್ದರೂ ಬೆಂಕಿತತ್ವ, ವಾಯುತತ್ವ, ಜಲತತ್ವಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಸ್ವಾಮ್ಯವನ್ನು ಮೆರೆಯುತ್ತದೆ. ಅಲ್ಲಿ ಈಶಾನ್ಯ ದಿಕ್ಕಿನಲ್ಲಿ ಚಿಂತನೆಗೆ ಅಧ್ಯಯನಕ್ಕೆ ದೈವ ಸಂಬಂಧಿ ಅನುಷ್ಠಾನಗಳಿಗೆ ಸೂಕ್ತವಾಗಿದೆ. ನೀರು, ಬೆಂಕಿ ಅಥವಾ ಗಾಳಿಯ ಪ್ರಕ್ಷುಬ್ಧತೆಗಳಿಗೆ ಈ ದಿಕ್ಕಿನಲ್ಲಿ ಅವಕಾಶ ಇರುವುದಿಲ್ಲ. ಆನೆಯ ಚಿಕ್ಕ ಶಿಲ್ಪವೊಂದು ಇದ್ದರೆ ಈಶಾನ್ಯ ದಿಕ್ಕಿನಲ್ಲಿ ಮಕ್ಕಳು ಅಭ್ಯಾಸ ಅಧ್ಯಯನ ನಡೆಸಬಹುದು.
ಆನೆಯು ಬೃಹತ್‌ ನಿಲುವು ಗಟ್ಟಿ ಬಲವುಳ್ಳ ಪ್ರಾಣಿ ಎಂಬ ನಂಬಿಕೆ ಮಕ್ಕಳಲ್ಲಿ ಒಂದು ಸುರಕ್ಷಿತ ವಲಯವನ್ನು ಪ್ರಜ್ಞೆಯ ಪರಿಧಿಯಲ್ಲಿ ನಿರ್ಮಿಸುತ್ತದೆ. ಎಲ್ಲವನ್ನೂ ತಿಳಿದ ವ್ಯಾಸ ಮಹರ್ಷಿಗಳು ಆನೆಯ ಮುಖದ ಗಣಪನಿಂದಲೇ ಮಹಾಭಾರತದ ಮಹಾಕಾವ್ಯದ ರಚನೆಯನ್ನು ಮಾಡಿಸಿದರು. ಕಥೆಯ ಪ್ರಕಾರ ಉತ್ತರ ದಿಕ್ಕಿಗೆ ತಲೆಇಟ್ಟು ಮಲಗಿದವರ ತಲೆ ಕತ್ತರಿಸಿ ತಂದುಕೊಡಿ ಎಂದು ಶಿವನು ಪ್ರಲಾಪಿಸಿದ ಕತೆ ಎಲ್ಲರಿಗೂ ತಿಳಿದಿದ್ದೆ. ಉತ್ತರ ದಿಕ್ಕಿಗೆ ಮಲಗಿದ ಒಂದು ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಲಾಯ್ತು.

ಜಾnನಕ್ಕೆ ಹೀಗಾಗಿ ಉತ್ತರ ದಿಕ್ಕು ಉತ್ತಮ. ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು. ಅಂದರೆ ಚಿಂತನೆಯ ಸಂವರ್ಧನೆಗೆ ಎಚ್ಚರವಾಗಿದ್ದಾಗ ಉತ್ತರದಿಕ್ಕು ಶ್ರೇಷ್ಠ. ಮಲಗಿರುವಾಗ ಬೌದ್ಧಿಕ ಚಿಂತನೆಗೆ ವೇದಿಕೆಯಾದ ತಲೆ ಉತ್ತರದಿಕ್ಕಿನಲ್ಲಿ ಸ್ಥಗಿತವಾಗಕೂಡದು. ಗಣಪತಿಯ ಆನೆಯ ಮುಖದ ಕಥೆಯನ್ನೇ ಒಂದು ಆಧಾರಗೊಳಿಸಬೇಕಾಗಿಲ್ಲ. ಇದೊಂದು ದಂತ ಕಥೆ ಇದ್ದರೂ ಉತ್ತರ ದಿಕ್ಕು ಜಾnನಕ್ಕೆ ಕುಂಭ ಎಂಬುದು ನಿಸ್ಸಂಶಯ. ಒಟ್ಟಿನಲ್ಲಿ ಪರರದೆ ಇಹವಲ್ಲ. ಇಹದ ಸಾûಾತ್ಕಾರಕ್ಕೆ ಪದಾರ್ಥಚಿಂತನೆಯ ಅವಶ್ಯಕತೆ ಇದೆ. ಹಿಡಿಯಲಾಗದ್ದನ್ನು ಹಿಡಿಯುವ ಅನನ್ಯತೆಗೆ ಜಾnನವೇ ಆಧಾರ. ಜಾnನವು ಶೂನ್ಯದಿಂದ ಬರಲಾರದು. ಅದು ಅವನ ಸಂಕಲ್ಪ, ಅದೃಷ್ಟ. ಅದೃಷ್ಠದ ಸಿದ್ಧಿಗಾಗಿ ಮನೆಯ ಈಶಾನ್ಯದ ಶಿಸ್ತು ಜಾರಿಗೆ, ಮಂಥನಕ್ಕೆ ದೊರಕಲಿ.


Tuesday, 27 February 2018

ಮನೆಯಲ್ಲಿ ಹೂಗಳನ್ನು ಎಲ್ಲಿ, ಹೇಗೆ ಇಡಬೇಕು?

ಈ ಹಿಂದಿನ ಅಂಕಣಗಳಲ್ಲಿ ವಾಸ್ತು ಸಂಬಂಧವಾಗಿ ನೂರಕ್ಕೆ ನೂರು ಸರಿಯಾದ ಯುಕ್ತ ವಿಚಾರಗಳನ್ನು ಪೂರೈಸಲು, ಸಂಯೋಜಿಸಲು ಎಂದೂ ಮಾಡಲಾಗದು ಎಂಬುದರ ಬಗ್ಗೆ ಚರ್ಚಿಸಿದ್ದೇವೆ. ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಬಂದಾಗ ಅನೇಕರು ಫೋನ್‌ ಕರೆಗಳಲ್ಲಿ ನೂರಕ್ಕೆ ನೂರು ಎಲ್ಲವನ್ನೂ ಭದ್ರವಾಗುವ ಹಾಗೆ ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿ ಇಷ್ಟು ಖರ್ಚುಬರುತ್ತದೆ ಎಂದು ಹೇಳುತ್ತಾರಲ್ಲಾ ಏನು ಮಾಡುವುದು ಎಂದು ಪ್ರಶ್ನಿಸುತ್ತಾರೆ. ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವಾಸ್ತವವಾಗಿ ಇದು ಸಾಧ್ಯವಿಲ್ಲ. ಹಾಗೆಂದು ಸಾಧ್ಯವಾದಷ್ಟು ಮಾಡಿಕೊಳ್ಳುವುದು ಕಡಿಮೆ ಹೊರೆಯಾಗುವಂತೆ ಸರಳ ವಿಧಾನಗಳಲ್ಲಿ ನಿರೂಪಿಸಿಕೊಳ್ಳುವುದು ಸೂಕ್ತ. ವೃಥಾ ಹಣಪೋಲು ಮಾಡಬೇಡಿ.
ಮುಖ್ಯವಾಗಿ ನಿಮ್ಮ ಮನೆ ಬಾಗಿಲು ಪೂರ್ವಭಾಗಕ್ಕೆ ಬರುತ್ತಿದ್ದಲ್ಲಿ ಪೂರ್ವಭಾಗದ ಒಂದೆಡೆ ಪುಟ್ಟ ಟೇಬಲ್‌ ಒಂದನ್ನು ಇರಿಸಿ ಗಾಜಿನ ಒಂದು ಚಿಕ್ಕ ಹೂದಾನಿಯಲ್ಲಿ ಕೆಂಪು, ಹಳದಿ, ಬಿಳಿ ಹೂಗಳು ಸೇರಿಕೊಂಡಿರುವ ಹೂ ಗುತ್ಛ ಒಂದನ್ನು ಎರಡು ಅಥವಾ ಮೂರು ದಿನಕ್ಕೊಮ್ಮೆ ಇಡಿ. ಹೂದಾನಿಯಲ್ಲಿ ಶುದ್ಧವಾದ ನೀರಿರಲಿ. ಹೂಗಳು ಯಾವ ಕಾರಣಕ್ಕೂ ಒಣಗುವಂತಿರಬಾರದು. ಮನೆಯ ಪೂಜಾಗೃಹದಲ್ಲಿ ಈ ಹೂಗಳನ್ನು ಹೂದಾನಿಯಲ್ಲಿ ಒಂದೆಡೆ ಇರಿಸಿದರೂ ಸೂಕ್ತವೇ. ಕೆಂಪು ಹಾಗೂ ಬಿಳಿ ಹೂಗಳು ಜಾಸ್ತಿ ಇರಲಿ. ಮನೆಯ ಬಾಗಿಲು ಪಶ್ಚಿಮಾಭಿಮುಖವಾಗಿದ್ದಲ್ಲಿ ಮೇಲೆ ಹೇಳಿದ ರೀತಿಯಲ್ಲೇ ಹೂಗಳನ್ನು ಸೂಕ್ತವಾಗಿ ಇರಿಸಿ. ಆದರೆ ಉಳಿದ ಹೂಗಳಿಗಿಂತ ಹಾಗೂ ಬಿಳಿ ಹೂಗಳು ಜಾಸ್ತಿ ಇರಲಿ. ಹಳದಿ ಹೂಗಳೂ ಇರಲಿ. ಆದರೆ ಪ್ರಮಾಣ ಕಡಿಮೆ ಇರಬೇಕು. ಕೆಂಪು ಹೂಗಳೂ ಅಷೇr.

ಮನೆಯ ಬಾಗಿಲು ದಕ್ಷಿಣಾಭಿಮುಖವಾಗಿದ್ದಲ್ಲಿ ಪುಟ್ಟ ಟೇಬಲ್‌ನ ಮೇಲೆ ಚಿಕ್ಕ ಹೂದಾನಿಯಲ್ಲಿ ನೀರು ತುಂಬಿ ಪ್ರಧಾನವಾಗಿ ನೀಲಿ ಹೂಗಳು ಜಾಸ್ತಿ ಇರುವಂತೆ ಗಮನವಿರಿಸಿ ಜಾಸ್ತಿ ಹಸಿರು, ಜೇನು ಹಾಗೂ ನೇರಳೇ ಬಣ್ಣದ ಹೂಗುತ್ಛ ಇರಲಿ. ಯಾವ ಕಾರಣಕ್ಕೂ ಬಿಳಿ, ಕೆಂಪು ಹಳದಿ ಹೂಗಳಾಗಲೀ ಉಳಿದಂತೆ ಕಿತ್ತಳೆ ಕೇಸರಿ ಬಣ್ಣದ ಹೂಗಳಾಗಲೀ ಇರಲೇ ಕೂಡದು. ಈ ಬಣ್ಣಗಳು ದಕ್ಷಿಣಾಭಿ ಮುಖದ ಸ್ಪಂದನಗಳನ್ನು ಕೆಡಿಸುತ್ತದೆ. ದಕ್ಷಿಣಾಭಿಮುಖದ ಬಾಗಿಲ ಕಡೆಯ ಧನಾತ್ಮಕವಲ್ಲದ ಸ್ಪಂದನಗಳು ನೀಲಿ ಹೂಗಳಿಂದಾಗಿ ನಿಯಂತ್ರಣಕ್ಕೆ ಬರುತ್ತದೆ.

ಇನ್ನು ಉತ್ತರಾಭಿಮುಖದ ಬಾಗಿಲಿಗಿರುವ ಮನೆಗಳಲ್ಲಿ ಎಲ್ಲಾ ರೀತಿಯ ಬಣ್ಣಗಳನ್ನು ಬಳಸಿಕೊಂಡು ಹೂಗುತ್ಛ ಇರಿಸಬಹುದು. ಒಂದೇ ಒಂದು ನೆನಪಿಡಿ. ತಪ್ಪಿ ಕೂಡಾ ನೀಲಿ ಹೂಗಳನ್ನು ಇಲ್ಲಿ ಸಂಯೋಜಿಸಬೇಡಿ. ಇದು ಕುಬೇರನ ದಿಕ್ಕಾದುದರಿಂದ ನೀಲಿಯನ್ನು ಜೋಡಿಸಬಾರದು. ನೇರಳೆ ಬಣ್ಣದ ಹೂಗಳು ಜಾಸ್ತಿ ಇದ್ದಷ್ಟೂ ಉತ್ತಮ. ಧನಪ್ರಾಪ್ತಿಗೆ ಇದರಿಂದ ಸಿದ್ಧಿ ಉಂಟಾಗುತ್ತದೆ. ಒಂದು ಮುಖ್ಯವಾದ ವಿಚಾರ ಎಂದರೆ ಎಲ್ಲಾ ಸಂದರ್ಭಗಳಲ್ಲೂ ಹೂಗಳು ಬಾಡದಂತಿರಲಿ. ಹೂಗಳು ಸೊಗಸಾಗೇ ಇದ್ದಲ್ಲಿ ವಾರಕ್ಕೊಮ್ಮೆ ಹೂಗಳನ್ನು ಬದಲಾಯಿಸಿದರೂ ಪರವಾಗಿಲ್ಲ. ಇನ್ನು ಬದಲಾಯಿಸಬೇಕಾದ ದಿನಗಳ ವಿಚಾರದಲ್ಲೂ ಇಂಥದ್ದೇ ದಿನ ಎಂದು ಪರಿಗಣಿಸಬೇಕಾದ ಅವಶ್ಯಕತೆಯಿಲ್ಲ. ಆದರೆ ಅಮಾವಾಸ್ಯೆಯ ದಿನಗಳಂದು ಮಾತ್ರ ಬದಲಿಸಬೇಡಿ. ಒಂದು ವಾರಕ್ಕಿಂತ ಅಧಿಕವಾಗಿ ಉಪಯೋಗಿಸಿದ ಹೂಗುತ್ಛಗಳು ಮುಂದುವರೆಯದಂತಿರಲಿ. ಈ ಕುರಿತು ನಿಗಾ ವಹಿಸಿ. ಈ ಹೂಗಳಿಂದ ಅಷ್ಟ ದಿಕಾ³ಲಕರಾದ ಈಶ್ವರ, ಇಂದ್ರ, ಅಗ್ನಿ, ಯಮ, ನಿಋತ, ವರುಣ, ವಾಯು ಹಾಗೂ ಕುಬೇರಾದಿಗಳು ಮನೆಯ ದಿವ್ಯತೆಗೊಂದು ಪರಿಶೋಭೆ ಒದಗಿಸುತ್ತಾರೆ.


Monday, 26 February 2018

ಅಗ್ನಿಮೂಲೆಯ ಮಹತ್ವವೇನು?

ಅಗ್ನಿಗೆ ಹವ್ಯವಾಹನ ಎಂಬ ಹೆಸರಿದೆ. ವೈಶ್ವಾನರ ಎಂಬ ಹೆಸರೂ ಇದೆ. ಅಗ್ನಿದೇವ ಎಂಬುದಂತೂ ಎಲ್ಲರೂ ತಿಳಿದ ಹೆಸರು. ಶಿವನ ಶಕ್ತಿಯೇ ದುರ್ಗೆಯಲ್ಲಿ ಅಡಕವಾಗಿದೆ. ದುರ್ಗಾರಹಿತನಾದ ಶಿವ ಜಡತ್ವ ಪಡೆದಿರುತ್ತಾನೆ. ಶಿವನೇ ಆದರೂ ಶಕ್ತಿಯ ಹೊರತಾಗಿ ಶಿವನು ಕೇವಲ ಶೂನ್ಯ. ದುರ್ಗೆ ಅಗ್ನಿಯೇ ಆಗಿದ್ದಾಳೆ. ಅಗ್ನಿಗೆ ಎಲ್ಲವನ್ನೂ ಸುಟ್ಟೊಗೆಯುವ ಶಕ್ತಿ ಇದೆ. ಚಿನ್ನದಂಥ ಅಪೂರ್ವ ವಸ್ತುವಿಗೆ ಪುಟ ನೀಡುವ ಶಕ್ತಿ ಇದೆ. ಇದೇ ಅಗ್ನಿಯನ್ನು ನಮ್ಮ ಪೂಜನೀಯ ಋಷಿಮಹರ್ಷಿಗಳು ಪೂರ್ವದಲ್ಲಿ ಪೂಜಿಸುತ್ತಿದ್ದರು. ಹವಿಸ್ಸನ್ನು ಅಗ್ನಿಗೆ ಒಪ್ಪಿಸಿದಾಗ ಅಗ್ನಿದೇವನು ಈ ಹವಿಸ್ಸನ್ನು ತಮ್ಮ ಪಿತೃ ಪಿತಾಮಹರಿಗೆ ದೇವತೆಗಳಿಗೆ ಅದನ್ನು ತಲುಪಿಸುವವನಾದ್ದರಿಂದ ಅಗ್ನಿದೇವ ಹವ್ಯವಾಹನನಾದ. ಅಂದರೆ ಲೌಕಿಕವನೂ,° ಅಲೌಕಿಕವನ್ನೂ ಬೆಸೆಯುವ ಶಕ್ತಿ ಅಗ್ನಿದೇವನಿಗೆ ಅಡಕವಾಗಿದೆ.
ಇದರಿಂದಾಗಿಯೇ ಯುಕ್ತಕಾಲದಲ್ಲಿ ನಮ್ಮ ಧಾರಿಣಿಯ ಫ‌ಲವಂತಿಕೆಗೆ ಕಾರಣವಾಗುವ ನಮ್ಮ ಆರು ಋತುಗಳು ಅಗ್ನಿಪೂಜೆಯ ಸಂಬಂಧವಾಗಿ ಒದಗಿದ ಫ‌ಲವಂತಿಕೆಯಿಂದ ಸಮೃದ್ಧತೆಯನ್ನು ಕಂಡು ಭೂಮಿಯ ಸಮತೋಲನಕ್ಕೆ ಕಾರಣವಾಗಿದ್ದವು. ಕ್ರಮೇಣ ಯಜ್ಞ ಯಾಗ ಹವನಾದಿಗಳು ತಟಸ್ಥವಾಗತೊಡಗಿದವು. ನಮ್ಮ ಅಂದರೆ ಮನುಷ್ಯರಷ್ಟೇ ಅಲ್ಲದೆ ಸರ್ವಸ್ವ ಚರಾಚರ ಜಂತುಗಳ ಒಳಗೂ ಅವಿತಿರುವ ಜಠರಾಗ್ನಿಗೆ ಆಹಾರವೇ ಉರುವಲು. ಹೀಗೆ ಅಗ್ನಿಯಿಂದಲೇ ಜೀವಂತಿಕೆ. ಜೀವನೋತ್ಸಾಹ. ಅಗ್ನಿ ಸತ್ವ ಕಳೆದುಕೊಂಡಾಗ ನಿಶ್ಚಲತೆ ಅಂದರೆ ಸಾವು ಅಷ್ಟೆ. ಯಾವಾಗಲೂ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳ ನಡುವಣ ದಿಕ್ಕು ಸಮಾವೇಶಗೊಳ್ಳುವ ಮೂಲೆಯೇ ಅಗ್ನಿಮೂಲೆ. ಅಂದರೆ ಆಗ್ನೇಯ ದಿಕ್ಕು. ಸರ್ವವಿಧದಲ್ಲೂ ಸ್ವತ್ಛತೆಯನ್ನು ಬೇಡುತ್ತದೆ. ಈ ದಿಕ್ಕಿನಲ್ಲಿ ಸಂಸ್ಕರಿಸಲ್ಪಟ್ಟ ಆಹಾರಗಳು ಉತ್ತಮವಾದ ಪೌಷ್ಟಿಕ ಧಾತುಗಳೊಂದಿಗೆ ಮನುಷ್ಯನ ಜೈವಿಕ ಶಕ್ತಿ ಮತ್ತು ಉತ್ಸಾಹಗಳಿಗೆ ವಾಹಕ ಸಂವಹನಗಳಿಗೆ ಮುಮ್ಮುಖವಾಗುವ ಸೂಕ್ತ ಶಕ್ತಿ ಪುಷ್ಟಿ ಹಾಗೂ ಲವಲವಿಕೆಗಳನ್ನೆಲ್ಲ ಒದಗಿಸುತ್ತದೆ. ಹೀಗಾಗಿ ಅನಿವಾರ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ ಅಗ್ನಿಮೂಲೆಯಲ್ಲೇ ನಮ್ಮ ದೈನಂದಿನ ಊಟದ ಸಂಸ್ಕರಣಕ್ಕೆ ಆವರಣಗಳು ಬೇಕು. ಈ ದಿಕ್ಕಿನಲ್ಲಿ ಅಡುಗೆ ಮನೆ ರೂಪುಗೊಳ್ಳಬೇಕು. ಇದರಿಂದ ಜೀವನದಲ್ಲಿನ ದಿವ್ಯವೂ, ಅಗ್ನಿದಿವ್ಯವೂ ಸತ್ವಪರೀಕ್ಷೆಗಳನ್ನು ಗೆಲ್ಲುವ ಹುರುಪೂ ಒಟ್ಟಿಗೆ ಬರುತ್ತದೆ.

ಈ ದಿಕ್ಕಿನಲ್ಲಿ ಟಾಯ್ಲೆಟ್‌ಗಳು, ಸ್ನಾನಗೃಹಗಳು ಮನೆಯ ತ್ಯಾಜ್ಯಗಳು ಸಾಗುವ ಕೊಳವೆಗಳು ದೇವರ ಪೀಠ ಮಂಟಪ, ಗೂಡುಗಳು ಬರಲೇ ಬಾರದು. ಇವುಗಳ ಸಂಯೋಜನೆಗಳು ಇರಬಾರದು. ಊಟ ಮಾಡುವ ಟೇಬಲ್‌ ಅಡಿಗೆ ಮನೆಯ ಸಮೀಪಕ್ಕೇ ಇರಬೇಕು. ಮಲಗುವ ಕೋಣೆಗಳು ಕೂಡಾ ಇಲ್ಲಿ ಸಮಾವೇಶವಾಗಕೂಡದು. ಕೈತೊಳೆಯುವ, ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೆ ಅಗ್ನಿಮೂಲೆಯಲ್ಲಿ ನೀರಿನ ಮೂಲ ಸಂಗ್ರಹ ಸಂಪು, ಬಾವಿ, ಬೋರ್‌ ವೆಲ್‌ ಇರಲೇಬಾರದು. ಕೈ ತೊಳೆಯುವುದು ಕೂಡಾ ಕೈಯ ಎಂಜಲನ್ನು ತೊಳೆಯುವುದಕ್ಕೆ ಉಪಯೋಗವಾಗುವ ರೀತಿ ಇರಬಾರದು. ಹೀಗೆ ಮಾಡುವುದರಿಂದ ದೇವತೆಗಳಲ್ಲೇ ಪರಮ ಪವಿತ್ರವಾದ ಅಗ್ನಿಗೆ ಸಂಪನ್ನತೆ ಒದಗಿ ಮನೆಯ ಆರೋಗ್ಯವೂ ಲವಲವಿಕೆಗಳು ಒಗ್ಗೂಡಿದ ಹರ್ಷದಲೆಗಳು ಮನೆಯ ಜನರ ಸಂತೋಷಕ್ಕೆ ಉತ್ತಮವಾದ ನಿರ್ಮಿಕೆ ಸಾಧ್ಯವಾಗುತ್ತದೆ.

ಅಗ್ನಿಮೂಲೆಯ ಮಟ್ಟ ತುಸು ಎತ್ತರದಲ್ಲಿದ್ದರೆ ಸೂಕ್ತ. ಗ್ಯಾಸ್‌ ಸಿಲಿಂಡರ್‌ಗಳು ಒಲೆಯ ಇರುವ ಮಟ್ಟಕ್ಕೆ ತಳದಲ್ಲಿದ್ದರೆ ಸೂಕ್ತ. . ಒಲೆಯಿರುವ ಪೂರ್ವ ಮೂಲೆಯ ಹೊರಗೆ ಗೋಡೆಯಾಚೆ ಇದ್ದರೆ ಚೆನ್ನವೂ ಯುಕ್ತವೂ ಆಗಿದೆ. ಅಡುಗೆ ಮನೆಯಲ್ಲಿ ಕನ್ನಡಿಯೊಂದು ಇರಲೇ ಕೂಡದು. ಹೊತ್ತಿಸಿದ ಒಲೆಯ ಬೆಂಕಿ ಕನ್ನಡಿಯಲ್ಲಿ ಪ್ರತಿಫ‌ಲಿಸಬಾರದು. ಪೂರ್ವ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುವ ಕ್ರಮ ರೂಡಿಗೊಂಡರೆ ಮನೆಯೊಡತಿಗೆ ಅಗ್ನಿಯ ಸಾûಾತ್ಕಾರದಿಂದ ಮನೆಯ ಧಾನ್ಯ, ಆಹಾರ, ಕ್ಷೀರೋತ್ಪನ್ನಗಳಿಗೆ ಸಮೃದ್ಧಿಯೊಂದು ವಿಪುಲವಾಗಿ ಕೂಡಿಕೊಂಡಿರಲು ಸಾಧ್ಯವಾಗುತ್ತದೆ. ಮನೆಯ ಸಮೃದ್ಧಿಗೆ ಪೂರ್ವ ದಿಕ್ಕಿನ ಕಡೆಗೆ ಅಗ್ನಿಮೂಲೆಯಲ್ಲಿ ಕಿಟಕಿ ಇಡುವುದು ಉತ್ತಮವಾಗಿದೆ. ಗಟ್ಟಿಯಾದ ಫ‌ಗೈಬರ್‌ ಗ್ಲಾಸುಗಳು ಕಿಟಕಿಗೆ ಬಳಸಿಕೊಂಡಿದ್ದರೆ ಒಳ್ಳೆಯದು. ಮರಮಟ್ಟುಗಳನ್ನು ಮಿತಿಯಲ್ಲಿ ಉಪಯೋಗಿಸುವುದು ಸ್ವಾಗತಾರ್ಹ. ಕಿಟಕಿಯ ಫ್ರೆàಮುಗಳು ಸ್ಟೀಲು, ಉಕ್ಕು ಅಲಂಕಾರಿಕ ಅಲ್ಯುಮಿನಿಯಂ ಧಾತುಗಳಿಂದ ಸಂಯೋಜನೆಯಾಗಿರುವುದನ್ನು ಅವಶ್ಯವಾಗಿ ಗಮನಿಸಬೇಕು. ಒಟ್ಟಿನಲ್ಲಿ ಆಗ್ನೇಯ ಮೂಲೆಯ ಅಗ್ನಿ ಶಕ್ತಿ ಸ್ವತ್ಛತೆಯಲ್ಲಿ ಹಿಗ್ಗಿಕೊಳ್ಳುವಂತಿರಲಿ.


Saturday, 24 February 2018

ಮನೆಯ ಶುಚಿಯೂ, ವಾಸ್ತು ವಿಚಾರವೂ....

ಭಾರತೀಯ ವಾಸ್ತುಕಲೆಯ ವಸ್ತು ಸಂಯೋಜನೆಗಳನ್ನು ಸೂಕ್ತರೀತಿಯಲ್ಲಿ ಹೊಂದಿಸಿಡಲು ಒತ್ತಿ ಹೇಳುತ್ತದೆ. ಉದಾಹರಣೆಗೆ ಪತ್ರವಾದ ತುಳಸಿ, ದೂರ್ವಾಂಕುರ, ಶ್ರೀಗಂಧ, ಚಂದನ, ರುದ್ರಾಕ್ಷಿ$, ಶಂಖ, ಸಾಲಿಗ್ರಾ, ಗಂಟೆ, ಕಿರುಗಂಟೆ, ಸುವಾಸನಾ ಬತ್ತಿ, ಕಡ್ಡಿ, ಆರತಿಯ ಸಲಕರಣೆಗಳು ದೇವರ ಮನೆಯಲ್ಲಿಯೇ ಇರಬೇಕು. ನಾವು ಅದನ್ನು ಇನ್ನೆಲ್ಲಿಯೋ ಇಡಕೂಡದು. ಪುಸ್ತಕಗಳನ್ನು ಓದುವ ಕೋಣೆ, ಮಲಗುವ ಕೋಣೆಗಳಲ್ಲಿ ಹಜಾರದಲ್ಲಿಡಬೇಕೇ ಧಿವಿನಾ ಉಳಿದ ಕಡೆ ಅಲ್ಲ. ಇನ್ನು ಹಜಾರದಲ್ಲಾಗಲೀ, ಮಲಗುವ ಕೋಣೆಯಲ್ಲಾಗಲೀ ಪುಸ್ತಕಗಳ ರಾಶಿ ತುಂಬಿರಬಾರದು. ಪುಸ್ತಕಗಳು ನಮ್ಮ ಸಂಸ್ಕೃತಿಯಲ್ಲಿ ಧಿದೇಧಿವಿಸರಸ್ವತಿಯ ವಾಸಸ್ಥಾನ. ಪ್ರತ್ಯಕ್ಷ ಅದು ಸರಸ್ವತಿಯೇ ಆಗಿದೆ.

ಹೀಗಾಗಿ ಪಾವಿತ್ರತೆಯನ್ನು ಉಳಿಸಿಕೊಳ್ಳುವ ವಿಚಾರ ಪುಸ್ತಕಗಳ ಬಗೆಗೆ ಅನಿವಾರ್ಯವಾಗಿದೆ.

ನಿಯತಕಾಲಿಕೆಗಳು ಹಜಾರದಲ್ಲಿರುವುದು ಸೂಕ್ತ. ನಿಯತಕಾಲಿಕೆಗಳು ಹೊಸಕಾಲದ ಆವಿಷ್ಕಾರ. ಅವು ರದ್ದಿಗೆ ಸೇರಲ್ಪಡುವ ಧಿವಿಚಾರವನ್ನು ಗಮನಿಸಿ ಹಜಾರದಲ್ಲಿಡುವುದು ತಾರ್ಕಿಕವಾಗಿಸರಿ. ಸಂಗ್ರಹ ಯೋಗ್ಯ ಪುಸ್ತಕಗಳು ಓದಿನ ಕೋಣೆಯಲ್ಲಿರಲಿ. ಅದು ಹಜಾರದಲ್ಲಿರಬಾರದು.

ರದ್ದಿ ಪೇಪರುಗಳು ಇತರ ಉಪಯೋಗಧಿವಿರದ ಬಾಟಲು, ಕರಡಿಗೆ ಪೊಟ್ಟಣ, ಪ್ಲಾಸ್ಟಿಕ್‌ ತ್ಯಾಜ್ಯ, ಟೂತ್‌ ಪೇಸ್ಟ್‌ ಟ್ಯೂಬುಗಳು ತುಕ್ಕು ಹಿಡಿದ ವಸ್ತುಗಳು, ಉಪಯೋಗಕ್ಕೆ ಬಾರದ ಆದರೆ ನೋಡಲು ಅನ್ಯ ಕಾರಣಗಳಿಗಾಗಿ ಇಟ್ಟುಕೊಂಡ ಹಗರಣಗಳನ್ನು ಸೂಕ್ತವಾಗಿ ಲೇವಾರಿ ಮಾಡಿ ಮನೆಯಿಂದ ದೂರವಿಡುವುದೇ ಕ್ಷೇಮ. ಪೀಠೊಪಕರಣಗಳ ವಿಚಾರದಲ್ಲಿ ಜಾಗ್ರತೆ ಇರಲಿ. ಅವು ಎಂಥೆಂಥದೋ ರೀತಿಯಲ್ಲಿ ಜೋಡಿಸಲ್ಪಡುವ ವಿಚಾರ ಯುಕ್ತವಾಗದು. ಹಲವು ಸಲ ಸೋಫಾಗಳು, ಕುರ್ಚಿಗಳು ಮನೆಗೆ ಬರುವ ಅಭ್ಯಾಗತರನ್ನು ಒಂದು ರೀತಿಯ ದಿವ್ಯ ಕಲ್ಪನಾ ಲಹರಿಗೆ ಒಯ್ಯುವ ಹಾಗೆ ಇರಲಾರದು. ಬೇಕಾಬಿಟ್ಟಿ ಇರುತ್ತದೆ. ಬದಲು ಅಂದವಾಗಿ ಜೋಡಿಸಿ ಇಡಲ್ಪಟ್ಟರೆ ಅತಿಥಿಗೆ ಒಂದು ಸುಂದರ ತಾಣಕ್ಕೆ ಹಾರ್ದಿಕವಾದ ತೃಪ್ತಿಯೊಂದಿಗೆ ಬಂದ ಅನುಭವ ಉದಿಸಿ ಒಳ್ಳೆಯ ವಿಚಾರವನ್ನು ಹಂಚಿಕೊಳ್ಳಬಹುದು. ಮನೆಗೆ ಬರುತತಿರುವಂತೆ ಹೊರಗೆ ಓಡಿ ಹೋಗುವ ಅನುಭವ ಆಗಬಾರದು.

ಅಡುಗೆ ಮನೆಯಲ್ಲಿ ಅಗ್ನಿಗೆ ಸಂಬಂಧಿಸಿದ ಸಲಕರಣೆಗಳು ಒಲೆಯ ಬೆಂಕಿಯಲ್ಲಿ ಅಡುಗೆಗೆ ಒದಗಿ ಬರುವ ಸರಂಜಾಮುಗಳೇ ಇರಬೇಕು. ಆಗ್ನೇಯ ದಿಕ್ಕನ್ನು ಅಡುಗೆ ಕೋಣೆಯ ಬಗೆಗೆ ಅಡುಗೆಗೆ ಬೇಕಾದ ಇತರ ಘಟಕಗಳಾದ ಗ್ಯಾಸ್‌ ವಿದ್ಯುತ್‌ ಒಲೆ, ಒಲೆಯ ಹತ್ತಿರವೇ ಆಗಿರದ ಹಾಗೆ ಆದರೂ ಆಗ್ನೇಯನ ಸಮೀಪಕ್ಕೇ ಫ್ರಿಡುj, ಪಾತ್ರೆ ಹರಿವಾಣ ಲೋಟ ಮುಚ್ಚಳಗಳು, ಇತ್ಯಾದಿ ಅಂದವಾಗಿ ಜೋಡಿಸಿಕೊಂಡಿರಬೇಕು. ಅಡುಗೆ ಮನೆಯಲ್ಲೇ ಅಥವಾ ಹಜಾರದಲ್ಲೇ ಊಟದ ಸ್ಥಳ ಇರಬಾರದು. ದೇವರ ಮನೆ ಅಥವಾ ಪೀಠ ಕೂಡಾ ಊಟದ ಸ್ಥಳಕ್ಕೂ ದೇವರ ಪೀಠಕ್ಕೂ ದೇವರ ಪೀಠದಿಂದ ಸ್ನಾನಗೃಹಗಳ ಶೌಚಾಲಯಗಳಿಗೂ ಅಂತರ ಇರಬೇಕು. ಒಂದೊಂದು ಕಡೆಯ ವಸ್ತುಗಳು ಇನ್ನೊಂದೆಡೆ ಬಂದಿರಬಾರದು. ಊಟದ ಟೇಬಲ್ಲೇ ಗಮನಿಸಿ, ಹಲವರಿಗೆ ಊಟದ ಟೇಬಲ್ಲಿನ ಪುಸ್ತಕ ಪೇಪರುಗಳನ್ನು ಇಟ್ಟು ಓದದೆ ಇದ್ದರೆ ಸಮಾಧಾನವೇ ಆಗದು. ಊಟದ ಎಂಜಲು ಮುಸುರೆಗಳಿರುವ ತಿನಿಸು.  ಅನ್ನ ಸಾಂಬಾರುಗಳು ಪುಸ್ತಕ ಅಥವಾ ಪೇಪರುಗಳಿಗೆ ಅಂಟಿಕೊಂಡು ಕೊಳೆಯಾಗುತ್ತದೆಂಬ ಅರಿವು ಇವರಿಗೆ ಬಾರದು. ಇನ್ನು ಕೆಲವರು ಟೂತ್‌ ಬ್ರಷ್‌ ಪೇಸ್ಟ್‌ ತಂದು ಮಲಗುವ ಕೋಣೆಯಲ್ಲಿಡುವುದೂ ಇದೆ. ದವಸ ದಾನ್ಯಗಳನ್ನು ಹಜಾರದಲ್ಲಿಡುವುದೂ ಇದೆ. ಅಂದವಾದ ಜೋಡಣೆಗಾಗಿ ಸಹಕರಿಸಿ ಮುಂದಾಗದಿರುವ ಪರಿಸ್ಥಿತಿ ಇದೆ. ಇದರಿಂದ ಸಕಾರಾತ್ಮಕ ಶಕ್ತಿ ಸುಳಿಗಳು, ಅಲೆಗಳು, ಹೊಯ್ದಾಟಗಳು, ತರಂಗ ಧಿದಾಡ್ಯìತೆಗಳು ಸೊರಗುತ್ತವೆ. ಮನೆಯೊಂದು ಪುಟ್ಟ ಅಮರಾಬತಿಯಾಗಿರಬೇಕು. ಇರಬೇಕಾದ್ದು ಇರಬೇಕಾದಲ್ಲಿಯೇ ಇದ್ದರೆ ಸೊಗಸು ಪುಟಿಯುತ್ತದೆ. ದುರ್ಗಾ ಲಕ್ಷಿ$¾à ಹಾಗೂ ಸರಸ್ವತಿಯರಿಗೆ ತಾಣ ಒದಗುತ್ತದೆ.

Friday, 23 February 2018

ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ

ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.

ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.

ನಗರೀಕರಣ ಬೆಳೆಯುತ್ತಿರುವ ಇಂದಿನ ಯುಗ ಮತ್ತು ಕಾಲದಲ್ಲಿ, ಸ್ಥಳದ ನ್ಯೂನತೆ ಮತ್ತು ಆಧುನಿಕ ವಿಜ್ಞಾನ ವಿವರಣೆಗೆ ವಿಫಲವಾದ ಎಲ್ಲವುದರಲ್ಲೂ ಮಿತಿಮೀರಿದ ನಂಬಿಕೆಕಳೆದುಕೊಂಡಿರುವಾಗ, ವಾಸ್ತು ನಿಯಮಗಳಿಗೆ ಬದ್ಧವಾದ ಮನೆಯನ್ನು ಕನಸಿನಲ್ಲೂ ಎಣಿಸುವುದು ಕಾರ್ಯತಃ ಅಸಾಧ್ಯವೆನಿಸಿದೆ.

ಆಕಾಶ
ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.

ಗಾಳಿ(ವಾಯು)

ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ

ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.
ಜಲ
ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ
ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.
ಕೋನಾರ್ಕ್ ಸೂರ್ಯ ದೇವಸ್ಥಾನ, ಆಗ್ರಾದ ತಾಜ್ ಮಹಲ್, ಪುಟ್ಟಪರ್ತಿಯ ಸಾಯಿಬಾಬ ಆಶ್ರಮ, ಪ್ರಶಾಂತಿ ನಿಲಯಂ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.

Thursday, 22 February 2018

ವಾಸ್ತು, ಮನೆ, ಕಪಾಟು, ಸಂದೂಕಗಳು

ಮನೆ ಎಂದ ಮೇಲೆ ಕಪಾಟುಗಳು ಗೋಡೆಗೇ ಸಂಯೋಜಿಸಿದ ಸಂದೂಕಗಳು ವಸತಿಯ ಸಂದರ್ಭದ ಎಲ್ಲಾ ಅವಶ್ಯಕತೆಗಳಲ್ಲಿ ಪ್ರಾಮುಖ್ಯ ಪಡೆದ ಘಟಕಗಳಾಗಿವೆ.

ಪುಸ್ತಕ, ಬಟ್ಟೆ, ಬರೆ ಹಣ ಒಡವೆ, ಕಾಗದ ಪತ್ರ, ಸಾಮಾನಿನ ಗಂಟು ಧಾನ್ಯ ಕಾಳು ತರಕಾರಿ ಇತ್ಯಾದಿಗಳ ಸಂಬಂಧ ಕಪಾಟುಗಳನ್ನು ಶೇಖರಣೆಗಾಗಿ ಉಪಯೋಗಿಸಲೇ ಬೇಕಾಗುತ್ತದೆ. ವಾರ್ಡ್‌ರೋಬ್‌ ಹೊಸಕಾಲದ ಜೀವನಶೈಲಿಯಲ್ಲಿ ಮನೆಯ ಅಲಂಕಾರಿಕ ಘಟಕಗಳಾಗಿ ಮಿಂಚುವ ರೀತಿ ಅನನ್ಯವೇ ಆಗಿದೆ. ಹಾಗೆ ಹೇಗೆ ಬೇಕಂದರೆ ಹಾಗೆ ಕಪಾಟು ವಾರ್ಡ್‌ರೋಬ್‌ಗಳಿಗಾಗಿ ದಿಕ್ಕುಗಳನ್ನು ದಿಕ್ಕಿನ ಗೋಡೆಗಳನ್ನು ಬಳಸಿಕೊಳ್ಳುವುದು ವಾಸ್ತು ಶಿಸ್ತಿಗೆ ಯುಕ್ತವಾದುದಲ್ಲ.

ನಿಮ್ಮ ಬೆಡ್‌ ರೂಂ ನಲ್ಲಿ ದಕ್ಷಿಣವನ್ನು ಈ ನಿಟ್ಟಿನಲ್ಲಿ ಉಪಯೋಗಿಸಿಕೊಂಡು ಪೂರ್ವದ ಗೋಡೆಗೆ ಉತ್ತರದಿಕ್ಕಿನ ಗೋಡೆಯವರೆಗೆ ಕಪಾಟುಗಳಿಗಾಗಿ ವಾರ್ಡ್‌ರೋಬ್‌ಗಳಿಗಾಗಿ ಸಂದೂಕಗಳಿಗಾಗಿ ಬಳಸಿಕೊಳ್ಳಬಹುದು. ಉತ್ತರದಲ್ಲಿನ ಸಂವಹನಕ್ಕೆ ಕಪಾಟುಗಳಿಂದಾಗಿ ಆಗ ತೊಂದರೆಯಾಗುವುದಿಲ್ಲ. ಉತ್ತರವನ್ನು ಉಪಯೋಗಿಸಲೇ ಬಾರದು ಎಂದಲ್ಲ ಪೂರ್ವದ ಕಡೆ ಕೂಡುವ ಉತ್ತರದ ಕಡೆಯ ಭಾಗವನ್ನು ಉಪಯೋಗಿಸಲೇ ಬಾರದು. ಅನುಕೂಲಕರವಾಗಿರಲು ಸಾಧ್ಯದ್ದರೆ ದಕ್ಷಿಣದ ಗೋಡೆಯನ್ನು ಪೂರ್ವದ ತನಕವೂ ಬಳಸಿ ಕಪಾಟುಗಳನ್ನು ಸಂಯೋಜಿಸಿಕೊಳ್ಳಬಹುದು. ಪಶ್ಚಿಮದ ದಿಕ್ಕಿನಿಂದಲೇ ಪೂರ್ವದ ವರೆಗೆ ದಕ್ಷಿಣ ದಿಕ್ಕಇನ ಗೋಡೆಯನ್ನು ಉಪಯೋಗಿಸಿಕೊಳ್ಳುವುದಕ್ಕೆ ಅಭ್ಯಂತರಲ್ಲ. ಆದರೆ ಆಗ್ನೇಯದ ಮೂಲೆಯನ್ನು ಬಿಟ್ಟು ಉಳಿದಂತ ಉಪಯೋಗಿಸಿಕೊಳ್ಳುವುದೇ ಹೆಚ್ಚು ಕ್ಷೇಮಕರ. ಆದರೆ ದಕ್ಷಿಣ ದಿಕ್ಕಿಗೆ ಕೂಡುವ ನೈರುತ್ಯಮೂಲೆ ಮಾತ್ರ ಖಾಲಿ ಬಿಡಬಾರದೆಂದು ನೆನಪಿರಲಿ.

ಪಶ್ಚಿಮ ದಿಕ್ಕಿನ ಗೋಡೆಯನ್ನು ಪೂರ್ತಿಯಾಗಿ ಬಳಸಿಕೊಳ್ಳಬಹುದು. ಪಶ್ಚಿಮ ದಿಕ್ಕಿಗೆ ಕೂಡುವ ನೈರುತ್ಯವನ್ನು ಖಾಲಿ ಬಿಡಬೇಡಿ. ಇದು ಗಮನದಲ್ಲಿರಲಿ. ವಾಯುವ್ಯದತ್ತದ ಉತ್ತರ ಗೋಡೆಯ ಭಾಗವನ್ನು ಬಳಸಿಕೊಳ್ಳಬಹುದು. ಪಶ್ಚಿಮದಿಕ್ಕಿನಿಂದ ಉತ್ತರದಿಕ್ಕನ್ನೂ ಬಳಸಿಕೊಳ್ಳುವುದು ತೊಂದರೆ ಇರದಿದ್ದರೂ ಈಶಾನ್ಯ ಮೂಲೆಯನ್ನು ಬಳಸಿಕೊಳ್ಳವುದು ನಿದ್ಧವಾಗಿದೆ. ಉತ್ತರದ ಮೂಲೆಗೆ ಅಡಕವಾಗುವ ವಾಯುವ್ಯವನ್ನು  ಖಾಲಿ ಬಿಡಬಾರದು. ಇವೆಲ್ಲಾ ಗಮನರಲಿ. ಕೋಣೆಯ ಈಶಾನ್ಯದಮೂಲೆ ಮಾತ್ರ ಕಪಾಟಿನಿಂದ ತಡೆಗೊಳ್ಳಬಾರದುಕಿದು ಮುಖ್ಯ. ಕಪಾಟುಗಳನ್ನೋ ಸಂದೂಕಗಳನ್ನೋ ಇರಿಸುವುದಾದರೂ ಈಶಾನ್ಯದ ಗೋಡೆಯನ್ನು ುàರಿ ಅದು ಮುಂದೆ ಬಾರದಂತೆ ಜಾಗ್ರತೆ ವಸಿ. ಈ ಕುರಿತಾದ ಸಂಯೋಜನೆಗೆ ಮುಂದಾಗಬೇಕು.

ಕಪಾಟಿ ಸಂದೂಕುಗಳ ಚಾರವಾಗಿ ಈ ಮೇಲಿನ ಷಯಗಳೆಲ್ಲಾ ಮನೆಯ ಸಂಬಂಧವಾದ ಕೆಲಸಕಾರ್ಯಗಳೆಲ್ಲದರ ಚಾರವಾಗಿ ಉತ್ತಮ ಸ್ಪಂದನಗಳನ್ನು ಒದಗಿಸುತ್ತದ. ಅಡಿಗೆ ಮನೆಯ ಸುàಪದಲ್ಲಿ ಒಡವೆ, ಹಣ, ದ್ರವ್ಯ ರಣ್ಯ ಧನಾದಿಗಳುವರ್ಧಿಸುವ ನಿಟ್ಟಿಗೆ ಅವಕಾಶ ಕೂಡಿ ಬರುತ್ತದೆ. ವಾಸ್ತು ಸಿದ್ದಿಗಳು ಮನುಷ್ಯನ ಸಕಾರಾತ್ಮಕ ಬೆಳವಣಿಗಗಳಿಗೆ ಗ್ರಾಸ ಒದಗಿಸುತ್ತದೆ. ಆಗ್ನೇಯದಲ್ಲಿ ಅಡಿಗೆ ಮನೆಯ ಸಂಯೋಜನೆ ಇರಬೇಕು. ಬೆಂಕಿಯ ಝಳಕ್ಕೆ ಆಹಾರವನ್ನು ದಿವ್ಯವಾಗಿಸುವ ಸಂಜೀನಿ  ದ್ಯೆ ತಿಳಿದಿರುತ್ತದೆ. ಧನಕನಕ ಆಸ್ತಿ ಕಾಗದ ಪತ್ರ ಶೇರುಗಳ ಚಾರವಾಗಿ ನಅಗ್ನಿಯ ದಿವ್ಯ ಉಪಯೋಗಕ್ಕರ ಬಾರದು. ಕುಬೇರನಿಂದಲೇ ಅದಕ್ಕೆ ಸಿದ್ಧಿ ಹಾಗೂ ವೃದ್ಧಿ ಮತ್ತು ಸಮೃದ್ಧಿ.


Wednesday, 21 February 2018

ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ

ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.

ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.

ನಗರೀಕರಣ ಬೆಳೆಯುತ್ತಿರುವ ಇಂದಿನ ಯುಗ ಮತ್ತು ಕಾಲದಲ್ಲಿ, ಸ್ಥಳದ ನ್ಯೂನತೆ ಮತ್ತು ಆಧುನಿಕ ವಿಜ್ಞಾನ ವಿವರಣೆಗೆ ವಿಫಲವಾದ ಎಲ್ಲವುದರಲ್ಲೂ ಮಿತಿಮೀರಿದ ನಂಬಿಕೆಕಳೆದುಕೊಂಡಿರುವಾಗ, ವಾಸ್ತು ನಿಯಮಗಳಿಗೆ ಬದ್ಧವಾದ ಮನೆಯನ್ನು ಕನಸಿನಲ್ಲೂ ಎಣಿಸುವುದು ಕಾರ್ಯತಃ ಅಸಾಧ್ಯವೆನಿಸಿದೆ.

ಆಕಾಶ
ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.

ಗಾಳಿ(ವಾಯು)

ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ

ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.
ಜಲ
ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ
ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.
ಕೋನಾರ್ಕ್ ಸೂರ್ಯ ದೇವಸ್ಥಾನ, ಆಗ್ರಾದ ತಾಜ್ ಮಹಲ್, ಪುಟ್ಟಪರ್ತಿಯ ಸಾಯಿಬಾಬ ಆಶ್ರಮ, ಪ್ರಶಾಂತಿ ನಿಲಯಂ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.

Monday, 19 February 2018

ಮರ ಗಿಡಗಳು ಮತ್ತು ವಾಸ್ತು

ಮನೆಯ ಭದ್ರತೆಯ ದೃಷ್ಟಿಯಿಂದ ಅಪಾರವಾದ ಜನರು ವಿಧವಿಧವಾದ ಯೋಚನೆಗಳಲ್ಲಿ ಇರುತ್ತಾರೆ. ವಾಸ್ತುಶಾಸ್ತ್ರ ಮುಖ್ಯವಾಗಿ ಭಾರತೀಯ ವಿಧಾನದಲ್ಲಿ ಪಂಚ ಭೂತಗಳಾದ ಮಣ್ಣು, ಗಾಳಿ, ನೀರು, ಬೆಂಕಿ ಹಾಗೂ ಆಕಾಶ ತತ್ವಗಳನ್ನು ಒಂದು ಶಿಸ್ತಿಗೆ ಒಳಪಡಿಸುತ್ತದೆಯೇ ವಿನಾ ಜನರ ಮನಸ್ಸಿನಲ್ಲಿ ಭಯವನ್ನು ಎಬ್ಬಿಸಲು ಮುಂದಾಗದು. ನಮಗೆ ಈ ಪಂಚಭೂತಗಳ ವಿನಾ ಇಹಲೋಕದ ಕಾರ್ಯ ವಿಧಾನ ಸಂದರ್ಭಗಳಲ್ಲಿ ಪರಿಪೂರ್ಣ ಮನಸ್ಸು, ಉತ್ಸಾಹ, ಲವಲವಿಕೆಗಳು ದೊರೆಯಲಾರವು. ಅಂತೆಯೇ ಜಗತ್ತು ಮತ್ತು ವಿಶ್ವ ಅಪಾರವಾದ ಶಕ್ತಿ ಮೂಲದೊಂದಿಗೆ, ವಿಶಿಷ್ಟವಾದ ಕಾಂತೀಯ ಶಕ್ತಿಯೊಂದಿಗೆ ತನ್ನದೇ ಆದ ಸ್ಥಿರತೆಯನ್ನು, ಸ್ಥಿರತೆಯಿಂದಾಗಿ ಭದ್ರತೆಯನ್ನು ಪಡೆದುಕೊಳ್ಳುತ್ತದೆ.

ಭೂಮಿಯೇ ಒಂದು ಬೃಹತ್‌ ಆದ ಆಯಸ್ಕಾಂತ. ಕಾಂತಿ ವಲಯಗಳಿಂದ ಭೂಮಿ ಸಮೃದ್ದ. ಇದು ಗಮನಾರ್ಹವಾದ ಸಂಗತಿ. ಹೀಗಾಗಿಯೇ ದಿಕ್ಕುಗಳ ವಿಷಯಗಳು ಭಾರತೀಯ ವಾಸ್ತುಶಾಸ್ತ್ರದ ವಿಚಾರದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಉತ್ತರ ಭಾಗಕ್ಕೆ ತಲೆ ಹಾಕಿ ಮಲಗಬಾರದು. ಆಗ್ನೇಯದಲ್ಲಿ ತ್ಯಾಜ್ಯಗಳ ವಿಲೇವಾರಿ ಆಗಬಾರದು. ನೀರಿಗಿಂತ ಎತ್ತರದ ಭಾಗಕ್ಕೆ ಬೆಂಕಿಯ ಒಲೆಗಳು ಬರಬಾರದು. ನೀರಿನ ವಿಚಾರ ತಗ್ಗಿನಲ್ಲೇ ಇರುವಂತಾದರೆ ಅದು ಹರಿಯಲು ಸುಲಭವಾಗದೇ, ನಿಂತ ನೀರಾಗುವ ಅಪಾಯ ಇರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ನಮ್ಮ ವಾಸ್ತು ಪರಂಪರೆಗೆ ಸೂಕ್ಷ್ಮವಾಗಿ ಹೇಳಿದೆ. ಇಲ್ಲಿ ಜನ ಈ ಪರಂಪರೆಯ ಆಶಯಗಳ ಕುರಿತು ಗಮನ ಹರಿಸಬೇಕೇ ವಿನಾ, ವಾಸ್ತು ಒಂದೊಮ್ಮೆ ತುಸು ದೋಷ ಪಡೆದಿದೆ ಎಂದ ಮಾತ್ರಕ್ಕೆ ಎಲ್ಲವೂ ಆಯೋಮಯವಾಗುವ ಪರಿಸ್ಥಿತಿ ಬರಲಾರದು. ಯಾವುದೇ ನಿಯಮಗಳನ್ನು ಅವುಗಳ ಆಶಯದ ಬೆನ್ನು ಹತ್ತಿ, ಅದರಿಂದಾಗಿ ಹೊಮ್ಮುವ ಸಕಾರಾತ್ಮಕ ಅಂಶಗಳನ್ನು ಹಿಡಿಯಲು ಹೋಗಬೇಕೇ ವಿನಾ, ಆಯೋಮಯಗೊಳ್ಳಕೂಡದು.

ಮನೆಯ ಪರಿಸರದಲ್ಲಿ ತುಳಸಿ, ಗುಲಾಬಿ, ಸಂಪಿಗೆ, ಕರವೀರ, ಬಿಲ್ವಪತ್ರೆ, ಮಜ್ಜಿಗೆ ಹುಲ್ಲು, ಸರ್ಪಗಂಧಿ, ಬಾಳೆ, ತೆಂಗು, ಪೇರಲ, ಬಿಂಬಲದಂಥ ಸಸ್ಯಗಳು ಬೆಳೆದರೆ, ಸೇವಂತಿಗೆ, ಮಲ್ಲಿಗೆ, ಜಾಜಿ, ನಿತ್ಯ ಪುಷ್ಪಗಳಂಥವನ್ನು ಬೆಳೆಯುವುದು ಉತ್ತಮವೇ. ನಿಷಿದ್ಧವೇನಲ್ಲ. ಮನೆಯಲ್ಲಿನ ದೇವರ ಪೂಜೆಗೆ ಈ ಗಿಡಗಳು ಅವಶ್ಯವಾಗಿಬೇಕು. ಈ ಹೂಗಳು ಗಿಡ, ತುಳಸಿ ಗಿಡ ಮುಂತಾದವು ಒಂದು ಸೊಗಸನ್ನೂ ಮನೆಯ ಪರಿಸರಕ್ಕೆ ನೀಡುತ್ತವೆ. ವಿನಾಕಾರಣ ಹೂ ಗಿಡಗಳ, ಹಣ್ಣು ಕಾಯಿಗಳ ಗಿಡ, ಮರಗಳ ವಿಚಾರದಲ್ಲಿ ಭಯದ ಅವಶ್ಯಕತೆಯೇ ಇಲ್ಲ.

ಆದರೆ ಯಾವುದೇ ರೀತಿಯ ಬೃಹದ್‌ ಮರಗಳು ಮನೆ ಎದುರು, ಸುತ್ತು ಮುತ್ತ ಬೆಳೆಯುವಂತಾಗಬಾರದು. ಭಾರೀ ಗಾತ್ರದ ಮರಗಳ ಬೇರುಗಳು ಮನೆಯ ತಳಹದಿಯನ್ನು ಹಾಳುಗೆಡವುತ್ತವೆ. ಮನೆಯ ಬುನಾದಿಯನ್ನು ಶಿಥಿಲಗೊಳಿಸುತ್ತವೆ. ಈ ಕಾರಣವಾಗಿ ಇಂಥ ಮರಗಳು ಭದ್ರತೆಯ ದೃಷ್ಟಿಯಿಂದ ನಿಷಿದ್ಧ. ಇನ್ನೂ ಒಂದು ಸೂಕ್ಷ್ಮವಿದೆ. ಬೃಹತ್‌ ಮರಗಳು ಮಳೆಗಾಲದ ಬಿರುಗಾಳಿಗೆ ಉರುಳಿ ಮನೆಯ ಮೇಲೇ ಬಿದ್ದರೆ ಎಂಥ ಅಪಾಯವೆಂಬುದನ್ನು ಯಾರಾದರೂ ಊಹಿಸಬಹುದು. ಬೃಹತ್‌ ಮರಗಳಲ್ಲಿ ಸೂಕ್ತವಲ್ಲದ ಪ್ರಾಣಿಗಳು, ಹಾವು, ಸರೀಸೃಪಗಳು, ಪಕ್ಷಿಗಳು ವಾಸಿಸುತ್ತ ಅವು ಜಂತು ಜನ್ಯವಾದ ಸಮಸ್ಯೆಗಳನ್ನು ಮನೆಯಲ್ಲಿ ನಿರ್ಮಿಸಬಹುದಾಗಿದೆ.

ಅನಾವಶ್ಯಕವಾದ ಮರಗಳ ಬೃಹತ್‌ ಉಪಸ್ಥಿತಿ ಮನುಷ್ಯನ ಮನೋಮಂಡಲದ ಮೇಲೆ ರಾತ್ರಿಯ ಹೊತ್ತು ನಕಾರಾತ್ಮಕ ಸಂವೇದನೆಗಳನ್ನು ತರುತ್ತವೆ ಎಂಬುದು ವಾಸ್ತುವಿನ ಕುರಿತಾದ ಹಿನ್ನೆಲೆಯಲ್ಲಿ ನಾನು ಅರಿಯಬೇಕು. ನಾಡಿನ ಬೆಳವಣಿಗೆಗೆ ಕಾಡು ಬೇಕೇಬೇಕು. ಆದರೆ ಮನೆಯ ಸುತ್ತವೇ ಕಾಡು ಸರ್ವಥಾ ನಿಷಿದ್ಧ. ಆಧುನಿಕ ವಿಜ್ಞಾನ ಏನನ್ನೂ ಹೇಳಲಿ, ಕೆಲವು ಕ್ಷುದ್ರ ಶಕ್ತಿಗಳು ವಿಸ್ತಾರವಾದ ಪ್ರಪಂಚದುದ್ದಕ್ಕೂ ತನ್ನ ಆಧಿಪತ್ಯವನ್ನು ನಿರ್ವಹಿಸುತ್ತಲೇ ಬಂದಿವೆ. ಷೇಕ್‌ಸ್ಪಿಯರ್‌ನ ನಾಟಕಗಳಲ್ಲಿ, ಜಪಾನೀ, ಚೀನಿ, ಬ್ಯಾಬಿಲೋನಿಯಾ, ಬ್ರಝಿಲ್‌, ಇಸ್ರೇಲಿ, ಈಜಿಪ್ಟ್, ರೋಮನ್‌, ಕಥಾ ಹಂದರಗಳಲ್ಲಿ ಕ್ಷುದ್ರ, ಅಪಸವ್ಯ ಜೀವ ಜಾಲ, ಕೆಲವು ಯಕ್ಷಿಣಿ ಶಕ್ತಿಗಳ ಬಗ್ಗೆ, ಅನಪೇಕ್ಷಿತ ಸಂವಹನ, ವಾಮ ಆಚಾರಗಳ ಬಗ್ಗೆ ಉಲ್ಲೇಖಗಳು ದಟ್ಟವಾಗಿವೆ. ಈ ಕಾರಣಗಳು ಹಾಗೂ ಬೃಹತ್‌ ಮರಗಳು ಒಂದು ಅವಿನಾ ಸಂಬಂಧ ಹೊಂದಿರುವ ವಿಚಾರ ವಿಶ್ವದ ಅನೇಕ ಪ್ರಾಚೀನ ಸಂಸಕೃತಿಗಳ ಉಲ್ಲೇಖ, ಪಠ್ಯಗಳಲ್ಲಿ ಇವು ನಿಕ್ಷೇಪಗೊಂಡಿವೆ. ಇವೆಲ್ಲ ಏನೇ ಇರಲಿ ಬೃಹತ್‌ ಮರಗಳು ಅವುಗಳ ವಿಶಾಲ ಬೆಳವಣಿಗೆಯಿಂದಾಗಿ ಮನೆಯ ಆವರಣಗಳನ್ನು ತಮ್ಮ ಬೇರು, ಕಾಂಡ, ಟೊಂಗೆ, ರೆಂಬೆಗಳಿಂದ ಅಪಾಯಕ್ಕೆ ಒಡ್ಡುವುದಂತೂ ಸತ್ಯ. ನಾವು ಅಲ್ಲಗಳೆಯಲಾಗದು.


Friday, 16 February 2018

ವಾಸ್ತು, ಮನೆ, ಕಪಾಟು, ಸಂದೂಕಗಳು

ಮನೆ ಎಂದ ಮೇಲೆ ಕಪಾಟುಗಳು ಗೋಡೆಗೇ ಸಂಯೋಜಿಸಿದ ಸಂದೂಕಗಳು ವಸತಿಯ ಸಂದರ್ಭದ ಎಲ್ಲಾ ಅವಶ್ಯಕತೆಗಳಲ್ಲಿ ಪ್ರಾಮುಖ್ಯ ಪಡೆದ ಘಟಕಗಳಾಗಿವೆ.

ಪುಸ್ತಕ, ಬಟ್ಟೆ, ಬರೆ ಹಣ ಒಡವೆ, ಕಾಗದ ಪತ್ರ, ಸಾಮಾನಿನ ಗಂಟು ಧಾನ್ಯ ಕಾಳು ತರಕಾರಿ ಇತ್ಯಾದಿಗಳ ಸಂಬಂಧ ಕಪಾಟುಗಳನ್ನು ಶೇಖರಣೆಗಾಗಿ ಉಪಯೋಗಿಸಲೇ ಬೇಕಾಗುತ್ತದೆ. ವಾರ್ಡ್‌ರೋಬ್‌ ಹೊಸಕಾಲದ ಜೀವನಶೈಲಿಯಲ್ಲಿ ಮನೆಯ ಅಲಂಕಾರಿಕ ಘಟಕಗಳಾಗಿ ಮಿಂಚುವ ರೀತಿ ಅನನ್ಯವೇ ಆಗಿದೆ. ಹಾಗೆ ಹೇಗೆ ಬೇಕಂದರೆ ಹಾಗೆ ಕಪಾಟು ವಾರ್ಡ್‌ರೋಬ್‌ಗಳಿಗಾಗಿ ದಿಕ್ಕುಗಳನ್ನು ದಿಕ್ಕಿನ ಗೋಡೆಗಳನ್ನು ಬಳಸಿಕೊಳ್ಳುವುದು ವಾಸ್ತು ಶಿಸ್ತಿಗೆ ಯುಕ್ತವಾದುದಲ್ಲ.

ನಿಮ್ಮ ಬೆಡ್‌ ರೂಂ ನಲ್ಲಿ ದಕ್ಷಿಣವನ್ನು ಈ ನಿಟ್ಟಿನಲ್ಲಿ ಉಪಯೋಗಿಸಿಕೊಂಡು ಪೂರ್ವದ ಗೋಡೆಗೆ ಉತ್ತರದಿಕ್ಕಿನ ಗೋಡೆಯವರೆಗೆ ಕಪಾಟುಗಳಿಗಾಗಿ ವಾರ್ಡ್‌ರೋಬ್‌ಗಳಿಗಾಗಿ ಸಂದೂಕಗಳಿಗಾಗಿ ಬಳಸಿಕೊಳ್ಳಬಹುದು. ಉತ್ತರದಲ್ಲಿನ ಸಂವಹನಕ್ಕೆ ಕಪಾಟುಗಳಿಂದಾಗಿ ಆಗ ತೊಂದರೆಯಾಗುವುದಿಲ್ಲ. ಉತ್ತರವನ್ನು ಉಪಯೋಗಿಸಲೇ ಬಾರದು ಎಂದಲ್ಲ ಪೂರ್ವದ ಕಡೆ ಕೂಡುವ ಉತ್ತರದ ಕಡೆಯ ಭಾಗವನ್ನು ಉಪಯೋಗಿಸಲೇ ಬಾರದು. ಅನುಕೂಲಕರವಾಗಿರಲು ಸಾಧ್ಯದ್ದರೆ ದಕ್ಷಿಣದ ಗೋಡೆಯನ್ನು ಪೂರ್ವದ ತನಕವೂ ಬಳಸಿ ಕಪಾಟುಗಳನ್ನು ಸಂಯೋಜಿಸಿಕೊಳ್ಳಬಹುದು. ಪಶ್ಚಿಮದ ದಿಕ್ಕಿನಿಂದಲೇ ಪೂರ್ವದ ವರೆಗೆ ದಕ್ಷಿಣ ದಿಕ್ಕಇನ ಗೋಡೆಯನ್ನು ಉಪಯೋಗಿಸಿಕೊಳ್ಳುವುದಕ್ಕೆ ಅಭ್ಯಂತರಲ್ಲ. ಆದರೆ ಆಗ್ನೇಯದ ಮೂಲೆಯನ್ನು ಬಿಟ್ಟು ಉಳಿದಂತ ಉಪಯೋಗಿಸಿಕೊಳ್ಳುವುದೇ ಹೆಚ್ಚು ಕ್ಷೇಮಕರ. ಆದರೆ ದಕ್ಷಿಣ ದಿಕ್ಕಿಗೆ ಕೂಡುವ ನೈರುತ್ಯಮೂಲೆ ಮಾತ್ರ ಖಾಲಿ ಬಿಡಬಾರದೆಂದು ನೆನಪಿರಲಿ.

ಪಶ್ಚಿಮ ದಿಕ್ಕಿನ ಗೋಡೆಯನ್ನು ಪೂರ್ತಿಯಾಗಿ ಬಳಸಿಕೊಳ್ಳಬಹುದು. ಪಶ್ಚಿಮ ದಿಕ್ಕಿಗೆ ಕೂಡುವ ನೈರುತ್ಯವನ್ನು ಖಾಲಿ ಬಿಡಬೇಡಿ. ಇದು ಗಮನದಲ್ಲಿರಲಿ. ವಾಯುವ್ಯದತ್ತದ ಉತ್ತರ ಗೋಡೆಯ ಭಾಗವನ್ನು ಬಳಸಿಕೊಳ್ಳಬಹುದು. ಪಶ್ಚಿಮದಿಕ್ಕಿನಿಂದ ಉತ್ತರದಿಕ್ಕನ್ನೂ ಬಳಸಿಕೊಳ್ಳುವುದು ತೊಂದರೆ ಇರದಿದ್ದರೂ ಈಶಾನ್ಯ ಮೂಲೆಯನ್ನು ಬಳಸಿಕೊಳ್ಳವುದು ನಿದ್ಧವಾಗಿದೆ. ಉತ್ತರದ ಮೂಲೆಗೆ ಅಡಕವಾಗುವ ವಾಯುವ್ಯವನ್ನು  ಖಾಲಿ ಬಿಡಬಾರದು. ಇವೆಲ್ಲಾ ಗಮನರಲಿ. ಕೋಣೆಯ ಈಶಾನ್ಯದಮೂಲೆ ಮಾತ್ರ ಕಪಾಟಿನಿಂದ ತಡೆಗೊಳ್ಳಬಾರದುಕಿದು ಮುಖ್ಯ. ಕಪಾಟುಗಳನ್ನೋ ಸಂದೂಕಗಳನ್ನೋ ಇರಿಸುವುದಾದರೂ ಈಶಾನ್ಯದ ಗೋಡೆಯನ್ನು ುàರಿ ಅದು ಮುಂದೆ ಬಾರದಂತೆ ಜಾಗ್ರತೆ ವಸಿ. ಈ ಕುರಿತಾದ ಸಂಯೋಜನೆಗೆ ಮುಂದಾಗಬೇಕು.

ಕಪಾಟಿ ಸಂದೂಕುಗಳ ಚಾರವಾಗಿ ಈ ಮೇಲಿನ ಷಯಗಳೆಲ್ಲಾ ಮನೆಯ ಸಂಬಂಧವಾದ ಕೆಲಸಕಾರ್ಯಗಳೆಲ್ಲದರ ಚಾರವಾಗಿ ಉತ್ತಮ ಸ್ಪಂದನಗಳನ್ನು ಒದಗಿಸುತ್ತದ. ಅಡಿಗೆ ಮನೆಯ ಸುàಪದಲ್ಲಿ ಒಡವೆ, ಹಣ, ದ್ರವ್ಯ ರಣ್ಯ ಧನಾದಿಗಳುವರ್ಧಿಸುವ ನಿಟ್ಟಿಗೆ ಅವಕಾಶ ಕೂಡಿ ಬರುತ್ತದೆ. ವಾಸ್ತು ಸಿದ್ದಿಗಳು ಮನುಷ್ಯನ ಸಕಾರಾತ್ಮಕ ಬೆಳವಣಿಗಗಳಿಗೆ ಗ್ರಾಸ ಒದಗಿಸುತ್ತದೆ. ಆಗ್ನೇಯದಲ್ಲಿ ಅಡಿಗೆ ಮನೆಯ ಸಂಯೋಜನೆ ಇರಬೇಕು. ಬೆಂಕಿಯ ಝಳಕ್ಕೆ ಆಹಾರವನ್ನು ದಿವ್ಯವಾಗಿಸುವ ಸಂಜೀನಿ  ದ್ಯೆ ತಿಳಿದಿರುತ್ತದೆ. ಧನಕನಕ ಆಸ್ತಿ ಕಾಗದ ಪತ್ರ ಶೇರುಗಳ ಚಾರವಾಗಿ ನಅಗ್ನಿಯ ದಿವ್ಯ ಉಪಯೋಗಕ್ಕರ ಬಾರದು. ಕುಬೇರನಿಂದಲೇ ಅದಕ್ಕೆ ಸಿದ್ಧಿ ಹಾಗೂ ವೃದ್ಧಿ ಮತ್ತು ಸಮೃದ್ಧಿ.

Thursday, 15 February 2018

ನವಗ್ರಹಗಳು, ಅಷ್ಟ ದಿಕ್ಪಾಲಕರು ಮತ್ತು ನಿಮ್ಮ ಮನೆ...

ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ.
ನಮ್ಮ ಭಾರತೀಯ ವಾಸ್ತು ಶಾಸ್ತ್ರದಲ್ಲಿ ನವಗ್ರಹಗಳಿಗೆ, ಅಷ್ಟ ದಿಕಾ³ಲಕರಿಗೆ ಬಹಳಷ್ಟು ಮಹತ್ವವನ್ನು ಒದಗಿಸಿದ ವಿಶ್ಲೇಷಣೆಗಳುಂಟು. ಈ ಅಂಕಣದಲ್ಲಿ ಈ ಮೊದಲೇ ವಿವರಿಸಿದ ಹಾಗೆ ಎಲ್ಲ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರುಗಳು ಕಟ್ಟಡ ಇಮಾರತುಗಳು, ಮನೆ, ಅರಮನೆ, ಗುಡಿ ದೇವಾಲಯಗಳ ವಿಚಾರದಲ್ಲಿ ಒಟ್ಟಾಗಿ ಉಂಟು ಮಾಡುವ ಪ್ರಭಾವ,  ಪೂರೈಸುವ ಸ್ಪಂದನಗಳ ಬಗ್ಗೆ ಹೆಚ್ಚಿನ ಅರಿವನ್ನು ನಾವು ಪಡೆದಿರಬೇಕು. ಒಟ್ಟಾರೆಯಾಗಿ ವಾಸ್ತುವಿನ ವಿಷಯದಲ್ಲಿ ಸಂಪೂರ್ಣ ಎಚ್ಚರವನ್ನು ವಹಿಸುವುದು ಹಿಂದಿನ ಕಾಲದಿಂದಲೂ ದುಸ್ತರವಾಗಿಯೇ ಇತ್ತು. ಈಗಂತೂ ಕೇಳುವುದೇ ಬೇಡ. ಪುಟ್ಟ ಪುಟ್ಟ ಉದ್ದಗಲಗಳ ನಿವೇಶನಗಳಲ್ಲಿ ಎಲ್ಲವನ್ನೂ ನಿಭಾಯಿಸುವ ವಿಚಾರ ಅಸಾಧ್ಯವಾದ ಮಾತು.

ಹೀಗಾಗಿ ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಿಂದ ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ ಅವರೆ ಎಳ್ಳು ಉದ್ದು ಹುರುಳಿ ಇತ್ಯಾದಿ ನವದಾನ್ಯಗಳನ್ನು ಇಂತಿಂಥಾ ದಿಕ್ಕಿನ ಲೋಪಗಳಿಗೆ ಎಂದು ಗುರುತಿಸಿಕೊಂಡು ನಿಸರ್ಗದಲ್ಲಿನ ಪಕ್ಷಿ, ಕೀಟ ಜಂತುಗಳಿಗೆ ಆಹಾರವಾಗಿ ಸಮರ್ಪಿಸುವುದು ಅತಿ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ ವಾಸ್ತುವಿನ ಲೋಪ ದೋಷಾದಿಗಳಿಗೆ ಅಷ್ಟರಮಟ್ಟಿಗಿನ ವಿಮೋಚನೆ ದೊರಕುತ್ತದೆ. ಇದು ಅತ್ಯಂತ ಹೆಚ್ಚು ಗಮನಾರ್ಹ.

ಯಾವ ದಿಕ್ಕಿಗೆ ಯಾರು ಅಧಿಪತಿ?
ಇಡೀ ಜಗತ್ತು ಪಂಚಭೂತ ತತ್ವದ ಆಧಾರದ ಮೇಲೆ ನಿಂತಿದೆ ಎಂಬುದನ್ನು ನಾವು ಅರಿತಿದ್ದೇವೆ. ಇದರೊಂದಿಗೆ ಸೃಷ್ಟಿ, ಸ್ಥಿತಿ, ಲಯಾದಿ ವಿಷಯಗಳಿಗೂ ಹೆಚ್ಚಿನ ಮಹತ್ವ ಪಡೆದಿದೆ. ಹುಟ್ಟಿದ ಪ್ರತಿಜೀವಿಗೂ ಹುಟ್ಟಿನಷ್ಟೇ ಸಾವೂ ಅನಿವಾರ್ಯವಾದ ಇನ್ನೊಂದು ಧೃವ, ಹೀಗಾಗಿ ನಮ್ಮ ಆಷೇìಯ ವಿಶೇಷಗಳು ಸಂವರ್ದಿಸಿದ ಪುರಾಣಗಳಲ್ಲಿ ಎಲ್ಲವನ್ನೂ ನಿಯಂತ್ರಿಸುವ ಪರಮಾತ್ಮ ಒಬ್ಬನೇ ಆದರೂ ಆ ಪುರುಷ ಶ್ರೇಷ್ಠನನ್ನು ಮಾಯೆಯಿಂದ ಬೇರ್ಪಡಿಸಿ ನಮ್ಮ ಸಂಸ್ಕೃತಿ ನೋಡಲಿಲ್ಲ. ಹೀಗಾಗಿ ಆ ಪುರುಷ ಶ್ರೇಷ್ಠನೇ ಮಾಯೆಯ ಆವರಣಗಳಿಂದಾಗಿ ತನ್ನಲ್ಲೇ ಚೈತನ್ಯವಾದ ಸ್ತ್ರೀಯನ್ನು ಒಳಗೊಂಡಿದ್ದಾನೆ. ಇವತ್ತಿನ ವೈಜಾnನಿಕವಾದ ಬಿಗ್‌ ಬ್ಯಾಂಗ್‌ ಥಿಯರಿ ಏನಿದೆ ಅದು ನಮ್ಮ ಆಷೇìಯವಾದ ನಂಬಿಕೆಯ ಮಾಯೆಯನ್ನು ಪೂರ್ತಿಯಾಗಿ ದೃಢೀಕರಿಸುವಂತಿದೆ.

ಈ ಮಾಯೆ ಸ್ತ್ರೀಯಾಗಿದ್ದಾಳೆ. ಪ್ರಕೃತಿಯಾಗಿದ್ದಾಳೆ. ಪುರುಷನನ್ನು ಆಶ್ರಯಿಸಿಕೊಂಡೇ ಇದ್ದಾಳೆ. ಪುರುಷನಿಗೂ ಸ್ತ್ರೀಯನ್ನು ಬಿಟ್ಟರೆ ಚೈತನ್ಯವಿಲ್ಲ. ಪ್ರಕೃತಿಗೂ ಪುರುಷನನ್ನು ತೊರೆದರೆ ಫ‌ಲವಂತಿಕೆಗೆ ಬೆಲೆ ಇಲ್ಲ. ಈ ಮಾಯೆ ಆಚ್ಛಾದಿತ ಪುರುಷನೇ ಸರ್ವಾಂತರ್ಯಾಮಿ ಸರ್ವಶಕ್ತ ಪರಮಾತ್ಮ. ಆ ಪರಮಾತ್ಮನೇ ತನ್ನಿಂದ ತಾನು ಛೇದಿಸಿಕೊಂಡು ತ್ರಿಮೂರ್ತಿಗಳ ಸ್ವರೂಪದಲ್ಲಿ ಬ್ರಹ್ಮ, ವಿಷ್ಣು , ಮಹೇಶ್ವರನಾಗಿ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿದ್ದಾನೆ. ಈ ಮೂರು ಶಕ್ತಿಗಳ ಜೊತೆಗೆ ಸ್ತ್ರೀ ಮಣ್ಣು, ಬೆಂಕಿ, ಆಕಾಶ, ವಾಯು, ಜಲ ತತ್ವಗಳಲ್ಲಿ ಒಡೆದು ಪಂಚಭೂತೆಯಾಗಿದ್ದಾಳೆ.

ಒಟ್ಟಿನಲ್ಲಿ ಈ ಪಂಚಭೂತ ತತ್ವ ತ್ರಿಮೂರ್ತಿಗಳ ವಿಂಗಡಣೆಗಳ ತಳಹದಿ ವಿಶಾಲವಾದ ಪೃಥ್ವಿಯನ್ನು ಒಂದು ಹದದಲ್ಲಿ ಸಂರಕ್ಷಿಸಿದೆ. ಈ ಸಂರಕ್ಷಣೆಯ ದೃಷ್ಟಿಯಿಂದ ಅನುಸರಿಸಬೇಕಾದ ವಾಸ್ತುಕ್ರಮಗಳ ಬಗೆಗೆ ಅಂದರೆ ನವಗ್ರಹಗಳು ಅಷ್ಟದಿಕಾ³ಲಕರುಗಳ ಬಗ್ಗೆ ಮುಂದಿನ ವಾರ ಚರ್ಚಿಸೋಣ.

Wednesday, 14 February 2018

ಮನೆಯ ಬಚ್ಚಲು ಮನೆ ಮನ ಮೆಚ್ಚುವಂತಿರಲಿ

ವಾಸ್ತುವಿನ ವಿಚಾರದಲ್ಲಿ ಯುಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ಹಾಗೆ ಇಂದಿನ ಮನೆಗಳನ್ನು ಕಟ್ಟುವ ಪರಿಸ್ಥಿತಿ ಒದಗಿದೆ. ಮನೆಯೊಳಗೇ ಸಂಡಾಸು, ಪ್ರತಿ ಕೋಣೆಯಲ್ಲೂ ಬಚ್ಚಲುಕೋಣೆ. ಹಾಗೂ ಅದರೊಳಗೇ ಸಂಡಾಸು ಈಗ ಇದೇ. ಇದು ಒಂದು ಫ್ಯಾಷನ್‌ ಆಗಿದೆ. ಊರಿನ ವ್ಯಾಖ್ಯೆ ಬದಲಾಗುತ್ತಿದೆ. ಎಲ್ಲೆಲ್ಲೂ ಸ್ಥಳ ಖರೀದಿಸಿ ಸೌಧಗಳನ್ನು ಕಟ್ಟಿಸುತ್ತಿದ್ದಾರೆ.
ಕೆರೆಯನ್ನು ಒಣಗಿಸಿ ತಗ್ಗು ಮುಚ್ಚಿದೆವು ಎಂದು ಮಣ್ಣು ಮುಚ್ಚಿಸಿ ಎತ್ತರೆತ್ತರ ಸಮುಚ್ಛಯಗಳು ತಲೆ ಎತ್ತುತ್ತಿದೆ. ಇತೀಚೆಗೆ ಬಹು ಪ್ರಸಿದ್ಧವಾದ ಕ್ಷೇತ್ರವೊಂದಕ್ಕೆ ಹೋದಾಗ ಆಶ್ಚರ್ಯವಾಯಿತು. ತಲೆಬುಡ ವಿಚಾರವಿಲ್ಲದೆ ಕಟ್ಟಲ್ಪಟ್ಟ ಮನೆಗಳಿಂದಾಗಿ ಊರ ಚರಂಡಿಗಳು ಮಾಯವಾಗಿ ಚರಂಡಿಯ ನೀರು ನುಗ್ಗಬಾರದ ಕಡೆಗಳಿಗೆಲ್ಲಾ ನುಗ್ಗುತ್ತಿದೆ. ಕುಡಿಯುವ ನೀರು ದುರ್ಗಂಧಮಯವಾಗಿದೆ.

ಹಣವನ್ನು ಗಳಿಸುವುದು ಕೆಲವರಿಗೆ ಬಹು ಸುಲಭದ ಮಾತಾಗಿ ನಿವೇಶನಗಳನ್ನು
ಬಂಗಾರದೊಡವೆಗಳನ್ನು ಖರೀದಿಸುವ ಸಮತೋಲನದ ಶ್ರೀಮಂತಿಕೆ ಜಾಸ್ತಿಯಾಗಿದೆ.

ಬಚ್ಚಲು ಮನೆ ಹಾಗು ಸಂಡಾಸು ಮನೆಯ ಹೊರಗಡೆಗೆ ಇರಬೇಕು. ಆದರೆ ಈಗ ಸುರಕ್ಷತೆಯ ದೃಷ್ಟಿಯಿಂದ ಪ್ರದರ್ಶನದ ಅತಿರೇಕತೆಗಳು ಒಗ್ಗೂಡಿರುವುದರಿಂದ ಮನೆಯೊಳಗೇ ಸಂಡಾಸು ಬಚ್ಚಲುಗಳನ್ನು ಕಟ್ಟಿಕೊಂಡಿರುತ್ತಾವೆ. ಹಾಗೆ ನೋಡಿದರೆ ವಾಸ್ತುಶಾಸ್ತ್ರದ ನಿಯಮಗಳಿಗೆ ಇದು ತೀರಾ ವಿರೋಧದ ವಿಚಾರ.

ಇನ್ನು ಹೊಸ ಕಾಲದ ಒತ್ತಡದಿಂದ ಏನೂ ಮಾಡಲಾಗದು ಎಂದು ಆಗಾಗ ಬಚ್ಚಲು
ಮನೆಯನ್ನು ಮುಖ್ಯವಾಗಿ ಪೂರ್ವ ಅಥವಾ ಉತ್ತರ ಭಾಗದಲ್ಲಿ ರೂಪಿಸಿಕೊಳ್ಳುವುದು ಒಳ್ಳೆಯದು. ಏನು ಅಟ್ಯಾಚ್ಡ್ ಅಂದರೆ ಮಲಗುವ ಕೋಣೆಗೇ ಬಳಸಿ ಕಟ್ಟಿಕೊಳ್ಳುವ ಬಚ್ಚಲು ಮನೆ ಪೂರ್ವ ಅಥವಾ ಉತ್ತರದಲ್ಲಿ ಕಟ್ಟಲ್ಪಡಲಿ. ಈಶಾನ್ಯದ ಮೂಲೆ ಮುಚ್ಚಿಹೋಗುವ ಹಾಗೆ ಬಚ್ಚಲುಗಳು ಬರಬಾರದು.

ಕ್ಷೇಮಕರವಾದ ದಾರಿಗೆ ಇದು ಅಡಿಪಾಯ ಒದಗಿಸುತ್ತದೆ. ಇನ್ನು ಸಂಡಾಸಿನ ಸಲುವಾಗಿ ಹೆಚ್ಚು ಹೆಚ್ಚು ಯೋಚಿಸಿ ಕಟ್ಟುವ ಯೋಜನೆ ರೂಪಿಸಿಕೊಳ್ಳಬೇಕು. ಹಿಂದಿನ ರೀತಿಗೂ ಇಂದಿನ ರೀತಿಗೂ ಈಗ ಅಜಗಜಾಂತರ ವ್ಯತ್ಯಾಸವಿದೆ. ಸೆಪ್ಟಿಕ್‌ ಟ್ಯಾಂಕ್‌ ವಿಚಾರ ಈ ಹಿಂದೆ ಇದ್ದಿರಲಿಲ್ಲ. ಸೆಪ್ಟಿಕ್‌ ಟ್ಯಾಂಕ್‌ಗೆ ಒಂದು ಗುಂಡಿ ತೋಡಲು ಮನೆಯ ಆಗ್ನೇಯ ಭಾಗದ ಪೂರ್ವದ ಗೋಡೆಗೆ ಹೊಂದುವಂತೆ ತೋಡುವುದೇ ಸೂಕ್ತ. ಸೆಪ್ಟಿಕ್‌ ಟ್ಯಾಂಕ್‌ ಪೂರ್ವದ ಭಾಗದ ಗೋಡೆಯಲ್ಲಿ ಪೂರ್ವಭಾಗದ ತುಸು ಎತ್ತರದಲ್ಲಿರಬೇಕು. ವಾಯುವ್ಯ ಬಳಸಿಕೊಂಡರೆ ಉತ್ತರ ಗೋಡೆಗೆ ಸೇರದಂತೆ ಪಶ್ಚಿಮ ಭಾಗವನ್ನು ಉಪಯೋಗಿಸಿಕೊಳ್ಳಬೇಕು. ಪಶ್ಚಿಮದಿಕ್ಕಿನ ಉತ್ಛದಲ್ಲಿ ಇದು ಸಂಯೋಜನೆಗೊಳ್ಳದಂತೆ ಇದ್ದರೆ ಶುಭಕರವಾದದ್ದು. ಹೀಗೆಲ್ಲಾ ವಿವರಿಸಿದ ವಿಚಾರಗಳು ಭಾರತೀಯ ವಾಸ್ತುಶಾಸ್ತ್ರದಲ್ಲಿ ಉಲ್ಲೇಖೀಸಲ್ಪಟ್ಟ ವಿಚಾರಗಳಲ್ಲವಾದ್ದರಿಂದ ಮನೆಯ ಮಲಿನತೆ ಅಧಿಕವಾಗದಂತೆ ಶುಭ್ರತೆಗೆ ಆದ್ಯತೆ ಕೊಟ್ಟು, ವಾಸನೆಗೆ ಅವಕಾಶಲ್ಲದಂತೆ ಗಾಳಿಯ ಶುದ್ಧತೆಗೆ ಶಕ್ತಿ ಇರುವಂತೆ ರೂಪುಗೊಳ್ಳಬೇಕು.

ಪ್ರಧಾನವಾದ ಗೃಹಕ್ಕೆ ನೈರುತ್ಯದಲ್ಲಿ ಸಂಡಾಸುಗಳಿರುವುದು ನಿರಂತರವಾಗಿ ಉತ್ತಮವಾದ ಆಯ್ಕೆಯೇ ಸರಿ. ಜೀವನಕ್ಕೆ ಶ್ರೇಯಸ್ಕರವಾದ ಅಂಶವಾಗಿದೆ. ಆದರೂ ಸೆಪ್ಟಿಕ್‌ ಟ್ಯಾಂಕ್‌ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಇಂದಿನ ಸಂಡಾಸುಗಳು ಸದಾ ಮಲ ನಿಲ್ಲುವ ಹಾಗೆ ನೈರುತ್ಯವನ್ನು ಈ ಗುಂಡಿಗಳಿಗೆ ಬಳಸಿಕೊಳ್ಳುವುದು ಅಭ್ಯುದಯದ ದೃಷ್ಟಿಯಿಂದ ಸರಿಯಾದುದಲ್ಲ. ಬೇರೆ ಉಪಾಯಗಳೇ ಇರದೆ ಹೋದಾಗ ಸೆಪ್ಟಿಕ್‌ ಟ್ಯಾಂಕ್‌ಗಳಿಗಾಗಿ ಉತ್ತರದ ದಿಕ್ಕಿನ ಉತ್ಛಭಾಗವನ್ನೋ ಪೂರ್ವ ದಿಕ್ಕಿನ ಉತ್ಛಭಾಗದಲ್ಲೋ ಸೆಪ್ಟಿಕ್‌ ಟ್ಯಾಂಕ್‌ ಇರುವಂತಾಗಲಿ. ಇನ್ನು ಮಲಸರ್ಜನೆಯ ಸಮಯದಲ್ಲಿ ವ್ಯಕ್ತಿಯು ಪೂರ್ವಪಶ್ಚಿಮ ದಿಕ್ಕುಗಳನ್ನು ನೋಡದೆ ಹಾಗೆ ಲೆಟ್ರಿನ್‌ ಬಳಕೆ ಇರಲಿ. ದೇವರ ಮಂಟಪಕ್ಕೋ ಪೂಜಾ ಗೃಹಕ್ಕೋ ಹೊಂದಿ ಸಂಡಾಸು ಕಟ್ಟಬಾರದು. ಇರುವಷ್ಟೇ ಚಿಕ್ಕ ಮನೆಯಲ್ಲಿ ಎಲ್ಲವನ್ನೂ ಪೂರೈಸುವುದು ಹೇಗೆಂಬ ವಿಚಾರ ಬಾಕಿಯೇ ಇರುತ್ತದೆ. ಕಾಲ ಎಲ್ಲವನ್ನೂ ತನ್ನ ತೆಕ್ಕೆಯಲ್ಲಿ ಕಾಲಾನುಕಾಲಕ್ಕೆ ಒಂದೊಂದು ರೀತಿಯ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ಒಟ್ಟಿನಲ್ಲಿ ಶುಚಿಯ ಬಗೆಗೆ ಲಕ್ಷ್ಯ ಪೂರೈಸಿ ಪ್ರಧಾನವಾದದ್ದು ಮನಸ್ಸು ಹಾಗೂ ಇರುವ ಜಾಗ ವಿಸ್ತಾರ ಮನೆಗೆ ಸಂಬಂಧಿಸಿದಂತೆ.
ಬಚ್ಚಲು ಹಾಗೂ ಸಂಡಾಸು ಸರಿಹೊಂದದಂತೆ ಇದ್ದಾಗ, ಬದಲಾವಣೆಗೆ ಅವಕಾಶವೂ
ಇರದಿರುವಾಗ ಪ್ರತಿದಿನದ ಸಂಜೆ ಸಮಯದಲ್ಲಿ ಬಿಳಿ ಅಥವಾ ಕೆಂಪು ಹೂವನ್ನು ದೇವರೆದುರಿಗೆ ಇರಿಸಿ ಒಂದು ಲವಂಗದ ತುಂಡನ್ನು ವಾಯುವ್ಯದ ಮೂಲೆಗಿರಿಸಿ ಪುಟ್ಟದೊಂದು ಹಣತೆಯ ದೀಪ ದೇವರೆದುರು ಬೆಳಗಿಸಿ


Saturday, 10 February 2018

ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಪೀಡೆಗೆ ಕಾರಣವಾಗುವ ದಿಕ್ಕು, ದಕ್ಷಿಣ

ನೆನಪಿಡಿ. ದಕ್ಷಿಣದಿಕ್ಕು ಮಾನವನ ಜೀವನದ ಪರಿಸಮಾಪ್ತಿಯ ಕಡೆಗಿನ ದಿಕ್ಕು. ಇದರ ಅರ್ಥ ಕೇವಲ ಸಾವಿಗಾಗಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ದುರ್ಭರ ಹಿಡಿತವನ್ನು ಹಾಕಿ ಹೊಸಕಿಹಾಕುತ್ತದೆ ಎಂದು ಅರ್ಥವಲ್ಲ. ಒಟ್ಟಿನಲ್ಲಿ ಈ ದಿಕ್ಕಿನ ದೋಷ ಶನಿ, ರಾಹು, ಕುಜ, ಕೇತು ಅಥವಾ ಸೂರ್ಯರ ವೈಪರೀತ್ಯಗಳು ಆಯಾ ವ್ಯಕ್ತಿಯ ಮುಖ್ಯ ವೇದಿಕೆಯಲ್ಲಿ ಕೆಟ್ಟ ಹೆಸರನ್ನು ಆರೋಗ್ಯದ ವೈಪರೀತ್ಯಗಳನ್ನು ದಿಢೀರನೆ ಸಲ್ಲದ ಕಾರ್ಯತಂತ್ರಗಳನ್ನು ಸಂಯೋಜಿಸುವ ದುಬುದ್ಧಿಯನ್ನು, ಯುದ್ಧದಂತ ಅನಿಷ್ಟಗಳಿಗೆ ಮುಂದಾಗುವ ನಿರ್ಣಯಗಳನ್ನು ಪರಿಣಾಮಗಳ ಯೋಚನೆಗಳಿರದೆ ಸರ್ರನೆ ಕಾರ್ಯೋನ್ಮುಖರಾಗುವ ಅವಸರಗಳನ್ನು ಕೈಗೆಟುಕಲಾರದ ಕನಸಿನ ಗೋಪುರದ ಶಿಖರಕ್ಕೆ ಕೈಚಾಚುವುದನ್ನು,

ನಿರಪರಾಧಿಗಳನ್ನು ಶಿಕ್ಷಿಸಿ ಕರ್ಮಗಳನ್ನು ಸುತ್ತಿಕೊಳ್ಳುವ ದುರ್ಭರತೆಗಳನ್ನು, ಭಯೋತ್ಪಾದಕ ಘಟನೆಗಳಿಗೆ ಬಲಿಯಾಗುವ ಅತಂತ್ರಗಳನ್ನು, ಮಕ್ಕಳಿಂದಲೇ ಗೋಳಿಗೆ ಸಿಲುಕುವ ಮಿಸುಕಾಟಗಳನ್ನು ಒದಗಿಸಬಹುದು. ಕಟ್ಟಡಗಳಿಗೂ ದುಷ್ಟಗ್ರಹಗಳ ಬಾಧೆಯೇ ಎಂಬ ವಿಚಾರ ಆಶ್ಚರ್ಯವಾಗಬಹುದು. ಆದರೆ ಸತ್ಯ. ಕಟ್ಟಡಗಳಿಗೂ ತೊಂದರೆ ಉದ್ಭವಿಸುತ್ತದೆ. 2001 ಸೆಪ್ಟೆಂಬರ್‌ ನಲ್ಲಿ ಉರುಳಿದ ಅಮೆರಿಕಾದ ವರ್ಲ್ಡ್ ಟ್ರೇಡ್‌ ಸೆಂಟರ್‌ ಅವಳಿ ಕಟ್ಟಡಗಳನ್ನು ನೆನಪಿಸಿಕೊಳ್ಳಿ. ಕಟ್ಟಡದ ದಕ್ಷಿಣ ದಿಕ್ಕಿನ ವಾಸ್ತು ಸಂಯೋಜನೆಗಳು ಅಗ್ನಿತತ್ವಕ್ಕೆ ವೈರುಧ್ಯದಿಂದ ಕೂಡಿದ ಪ್ರಮಾಣದೊಂದಿಗೆ ಸಮತೋಲನ ತಪ್ಪಿದ್ದವು. ತಗ್ಗಿನ ಹೊರ ಆವರಣ ಕಟ್ಟಡದ ದಕ್ಷಿಣ ಭಾಗದಲ್ಲಿ ಹಿಗ್ಗಿಕೊಂಡಿತ್ತು. ಉತ್ತರ ದಿಕ್ಕಿನ ಅಮೃತ ಸ್ಪಂದನಗಳನ್ನು ಅದು ಘರ್ಷಿಸುತ್ತಲೇ ಇತ್ತು. ಹೀಗಾಗಿ ಶನೈಶ್ಚರನು ಆಗಿನ ಪ್ರಧಾನಿ ಬುಶ್‌ರ ಜನನದ ಸಂದರ್ಭದ ರಾಹುವಿನ ಜಾಗೆಗೆ ಬಂದಾಗ ಬುಶ್‌ ಅಧಿಕಾರದ ಪ್ರಥಮ ಅವಧಿಯ ಸಂದರ್ಭದಲ್ಲಿ ಅಷ್ಟಮ ಶನಿಕಾಟದ ವೇಳೆಯಲ್ಲಿ ಒಸಾಮ ಬಿನ್‌ ಲಾಡೆನ್‌ ಅಪಾಯಕಾರಿ ಯೋಜನೆ ರೂಪಿಸುವುದರಲ್ಲಿ ದಕ್ಷಿಣ ದಿಕ್ಕಿನ ದೋಷದ ಅಂಶವನ್ನು ವಾಸ್ತು ವಿಚಾರದಲ್ಲಿ ಹೊಂದಿದ್ದ ವರಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳು ಕುಸಿದು ಬಿದ್ದು ಈ ಭಯೋತ್ಪಾದಕ ಚಟುವಟಿಕೆ ಇಷ್ಟು ದೊಡ್ಡ ಅಗಾಧ ಪರಿಣಾಮ ಹಾನಿ ನಿರ್ಮಿಸಿದಾಗ ಜಗತ್ತಿಗೇ ಭಯೋತ್ಪಾದನೆಯ ಕರಾಳ ಸ್ವರೂಪದ ರೂಪುರೇಷೆಗಳು ಯುಕ್ತವಾಗಿ ಅರ್ಥವಾದದ್ದು ಭಾರತದಲ್ಲಿ 1983ರ ಮುಂಬೈ ಸ್ಫೋಟಗಳು ಭಯೋತ್ಪಾದನೆಯ ನಿಕೃಷ್ಟ ಕ್ರೂರ ಮನಸ್ಸಿನ ಕಟ್ಟಹಾಸವಾಗಿದ್ದರೂ ವರಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳು ಬೆಂಕಿ ಹತ್ತಿ ಉರಿದದ್ದು, ಬೆಂಕಿ ಜಾÌಲೆಯ  ತಾಂಡವ ನೃತ್ಯ ನಡೆದಾಗ ಜಗತ್ತಿನ ಇತಿಹಾಸಕ್ಕೆ ಹೊಸರೂಪ ಒದಗಿ ಜಾಗತಿಕ ಹೋರಾಟದ ವ್ಯಾಖ್ಯೆ ಭಯೋತ್ಪಾದಕತೆಯ ವಿರುದ್ಧ ಹೊಸರೂಪ ಪಡೆಯಿತು. ವಾಸ್ತು ದೋಷದ ಪರಿಣಾಮವು ಒಂದು ಅವಳಿ ಕಟ್ಟಡಗಳ ಕಾರಣದಿಂದಾಗಿ ಜಾಗತಿಕ ವರ್ತಮಾನದ ತಲ್ಲಣಗಳಿಗೆ ಕಾರಣವಾಗುವ ಕ್ರಿಯೆ ಅನೂಹ್ಯ.

ನಾವು ಕಟ್ಟುವ ಕಟ್ಟಡಗಳು, ಮನೆ, ವಸತಿ, ಸಂಕೀರ್ಣ ಅಥವಾ ಏನೇ ಕಟ್ಟೋಣಗಳಿರಲಿ ಎಡವಟ್ಟಾದ ಸ್ವರೂಪದಲ್ಲಿ ಆಗ್ನೇಯ ದಿಕ್ಕು ವಿಸ್ತರಿಸಿಕೊಳ್ಳಬಾರದು. ಎಪ್ಪತ್ತರ ದಶಕದ ಹಿಂದಿ ಚಲನಚಿತ್ರರಂಗದ ಜನಪ್ರಿಯ ಸೂಪರ್‌ ಸ್ಟಾರ್‌ ತನ್ನ ಅರಮನೆಯ ಸದೃಶವಾದ ಬಂಗ್ಲಾದಲ್ಲಿ ಎಷ್ಟು ಎತ್ತರಕ್ಕೆ ಏರಿದ್ದು ಸತ್ಯವೋ ಹಾಗೇ ಇನ್ನಿಲ್ಲದ ರೀತಿಯಲ್ಲಿ ಕುಸಿದದ್ದೂ ಕೂಡಾ ಅಷ್ಟೇ ಸತ್ಯ. ಈ ಕಟ್ಟಡದ ವಿಚಾರದಲ್ಲಿವ ವಾಸ್ತು ದೋಷಗಳು ತನಗೆ ದುರ್ಭರ ದಿನಗಳನ್ನು ತಂದವು ಎಂಬುದನ್ನು ಆ ಪ್ರಸಿದ್ಧ ನಟರೇ ಅವರ ಸಂದರ್ಶನ ಒಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಪತ್ನಿಯೊಂದಿಗೆ ಹೊಂದಿಕೊಂಡು ಹೋಗಲಾರದ ಶನಿದಶಾ ಸಂದರ್ಭವೂ ಈ ನಟ ಡೈವೋರ್ಸ್‌ ಪಡೆದು ಒಂಟಿಯಾಗುವಂತಾಯ್ತು. ಅನೇಕ ರೀತಿಯ ತಾಪತ್ರಯ ಸಾಲಗಳು ಕಷ್ಟಗಳಿಗೆ ವೇದಿಕೆ ಒದಗಿಸಿತು.

ದಕ್ಷಿಣದಿಕ್ಕು ಮೂಲಭೂತವಾಗಿ ಅಗ್ನಿಯನ್ನು ಸಂಕೇತಿಸುವ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡಿರುತ್ತದೆ. ಅಗ್ನಿಯು ಶುಭಕರನಾದಾಗ ಅವನೇ ಶನೈಶ್ಚರ. ಸ್ವರ್ಗ ಹಾಗೂ ಭೂಮಿಯನ್ನು ಕೊಂಡಿ ಕೂಡಿಸುವ ಹವ್ಯವಾಹನ. ನಮ್ಮ ಪ್ರಾರ್ಥನೆಗಳು ನಮ್ಮ ಸಮರ್ಪಣೆಗಳು ದೈವೀಕವಾದ ಅನನ್ಯ ಶಕ್ತಿ ಧಾತುವನ್ನು ಮುಟ್ಟುತ್ತದೆ. ಬೆಂಕಿ ಮುನಿದಾಗ ಅದು ಕಾಳಿYಚ್ಚು. ಅದು ಚಿತೆಯ ದಾರುಣತೆಗೆ ಕಾರಣನಾಗುವ ಸರಕು. ದಕ್ಷಿಣ ದಿಕ್ಕು ವಾಸ್ತು ದೋಷ ಹೊಂದಿದ್ದರೆ ದುರ್ಗಾದೇಯನ್ನು ನೆನೆಯಬೇಕು. ಸ್ತುತಿಸಬೇಕು. ಇದರಿಂದ ಅಗ್ನಿಭೀತಿಯ ಅಗ್ನಿ ದಾರುಣತೆಯ ಶಮನಗಳಿಗೆ ದಾರಿ ಲಭ್ಯ. ಮಲಿನತೆಗಳು ದಕ್ಷಿಣ ದಿಕ್ಕಿನಲ್ಲಿ ಬೇರೂರುವಂತೆ ಆಗದಿರಲಿ. ನಿಮ್ಮ ಪ್ರಯತ್ನ ಈ ದಿಸೆಯಲ್ಲಿ ನಡೆದುದಾದರೆ ಕೊಂಚ ಮಟ್ಟಿಗಿನ ನಿರಾಳತೆ ಸಾಧ್ಯ.


Friday, 9 February 2018

ಉತ್ತರ ದಿಕ್ಕಿನಲ್ಲಿ ತಲೆ ಇರಿಸಬೇಡಿ

1,ಅಡುಗೆ ಮಾಡುವಾಗ, ಆಹಾರ ಸೇವಿಸುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕಿನಲ್ಲಿ ಕುಳಿತು ಕೊಳ್ಳಲೇಬಾರದು. ಆಹಾರವು ಸರಿಯಾಗಿ ಪಚನಗೊಂಡು ಉತ್ತಮ ಆರೋಗ್ಯ ಲಭಿಸಬೇಕಾದರೆ ಪೂರ್ವ ದಿಕ್ಕಿಗೆ ಮುಖಮಾಡಿ ಸೇವಿಸಬೇಕು.

2.ಆರೋಗ್ಯ ಮತ್ತು ಸಂತೋಷವನ್ನು ಗಳಿಸಲು ಕೊಠಡಿಯ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿರಿ.ಒಂದೇ ರೀತಿಯ ಬಣ್ಣಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.

3.ಹಾಸಿಗೆಯ ಮುಂಭಾಗದಲ್ಲಿ ಕನ್ನಡಿಯನ್ನು ಇರಿಸುವುದು ಬೇಡ, ಅಥವಾ ಇದ್ದರೆ ಅವುಗಳನ್ನು ಮುಚ್ಚಿ ದುಸ್ವಪ್ನಗಳಿಂದ ಮುಕ್ತಿ ಪಡೆಯಿರಿ.

4.ಮಲಗುವಾಗ ತಲೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಲೇ ಬಾರದು. ಸುಖನಿದ್ದೆಗಾಗಿ ದಕ್ಷಿಣ ಅಥವಾ ಪೂರ್ವಭಾಗಗಳನ್ನು ಆರಿಸುವುದು ಉತ್ತಮ.

5.ತುಳಸಿಗಿಡವನ್ನು ಈಶಾನ್ಯ ಭಾಗದಲ್ಲಿ ನೆಡುವುದರಿಂದ ವಾಯು ಶುದ್ಧೀಕರಿಸಲು ಸಹಾಯಕವಾಗುತ್ತದೆ.

6.ಗರ್ಭಿಣಿಯರು ಈಶಾನ್ಯ ಭಾಗದಲ್ಲಿರುವ ಕೊಠಡಿಯನ್ನು ಮಲಗಲು ಉಪಯೋಗಿಸದಿರುವುದು ಒಳ್ಳೆಯದು, ಇದರಿಂದಾಗಿ ಗರ್ಭ ಸ್ರಾವ, ಗರ್ಭಛಿದ್ರ ಮೊದಲಾದ ಅಪಾಯಗಳಿಂದ ರಕ್ಷಣೆಯನ್ನು ಪಡೆಯಬಹುದು.

7.ಕಬ್ಬಿಣದಿಂದ ಅಥವಾ ಇನ್ನಾವುದೇ ಲೋಹದಿಂದ ಮಾಡಿದ ಹಾಸಿಗೆಯನ್ನು ಬಳಸದಿದ್ದರೆ ಉತ್ತಮ, ಯಾಕೆಂದರೆ ಇಂತವುಗಳು ಹೃದಯ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ.

8.ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕೆಲಸ ಮಾಡುವುದು ಅಥವಾ ಓದು ಬರಹವನ್ನು ಅಭ್ಯಸಿಸುತ್ತಿದ್ದರೆ ಕಾಂತೀಯ ಬಲವು ಇಲ್ಲಿ ಪ್ರಬಲವಾಗಿದ್ದು ಇದರಿಂದಾಗಿ ಉತ್ತಮ ಗ್ರಹಿಸುವಿಕೆ ದೊರೆತು ಮತ್ತು ಸ್ಮರಣ ಶಕ್ತಿ ಹೆಚ್ಚುವುದು.

9.ಮಲಗುವ ಕೋಣೆಯಲ್ಲಿರಿಸಿದ ಟಿ.ವಿ ಅಥವಾ ಕಂಪ್ಯೂಟರ್‌ನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಇಂತಹ ಉಪಕರಣಗಳಿಂದ ಹೊರ ಸೂಸುವ ವಿಕಿರಣಗಳು ಕೋಣೆಯ ಚೈತನ್ಯವನ್ನು ಕಡಿಮೆ ಮಾಡಿ ಅಸ್ವಸ್ತತೆಗೆ ಎಡೆ ಮಾಡುವ ಸಾಧ್ಯತೆ ಕಂಡುಬರುತ್ತದೆ.

10. ಮನೆಯ ನೈಋತ್ಯ ಭಾಗದಲ್ಲಿರುವ ಕಿಟಕಿಗಳನ್ನು ತೆರೆದಿಡುವ ಬದಲಾಗಿ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರುವ ಕಿಟಕಿಗಳನ್ನು ತೆರೆದಿಟ್ಟರೆ ಉತ್ತಮ ಆರೋಗ್ಯ ಮತ್ತು ಕುಟುಂಬದಲ್ಲಿ ಏಕತೆ ನೆಲೆಗೊಳ್ಳುತ್ತದೆ.

Thursday, 8 February 2018

ಮನೆಯಲ್ಲಿ ಕಸಬರಿಗೆಗಳನ್ನು ತೆರೆದಿಟ್ಟರೆ ಏನೇನಾಗುತ್ತದೆ ಗೊತ್ತಾ?

ಮನೆಯಲ್ಲಿ ಕಸಬರಿಕೆಗಳಿರದೆ ನೆಲ ಒರೆಸುವ, ಮೇಜು, ಟೇಬಲ್‌, ಊಟದ ಟೇಬಲ್‌ ವರೆಸುವ ಬಟ್ಟೆ ತುಂಡುಗಳೇ ಇರದೆ ಯಾವ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರಿ¤ಯಾಗಿ ಯಾರಿಗೂ ಕಾಣಿಸದಂñ ೆಮುಚ್ಚಿಡುವುದು ಅವಶ್ಯವಾಗಿದೆ. ಈ ಕಸಬರಿಕೆ ಇತ್ಯಾದಿ ಮನೆಯೊಳಗೇ ಇರಲಿ. ಹೊರಗಡೆಯೇ ಇರಲಿ ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು. ಮನೆಯೊಳಗಿನವರಿಗೇ ಆಗಲಿ, ಮನೆಯ ಹೊರಗಿನವರಿಗೇ ಆಗಲಿ ಇದು ಕಾಣುವಂತಿರಬಾರದು.

ಇದಕ್ಕೆ ಕಾರಣ ಸರಳ. ಈ ಕಸಬರಿಗೆ ಇತ್ಯಾದಿಗಳು ಮಾನವನಲ್ಲಿ ಒಂದು ಕ್ಷಣ ಅವನೊಳಗೆ ಪ್ರವಹಿಸುವ ಧನಾತ್ಮಕ ಭಾವನೆಗಳನ್ನು ಒಮ್ಮೆ ಸ್ಥಂಬನಗೊಳಿಸಿ ಬಿಡುತ್ತದೆ. ಧನಾತ್ಮಕ ಭಾವನೆಗಳು ಒಮ್ಮೆ ತಟಸ್ಥಗೊಳ್ಳುವ ವಿಷಯ ಹದಿಗಟ್ಟಿತಾದರೆ ಮೊದಲಿನ ಸುಹಾಸಕರತೆಯಲ್ಲೆ ಅದನ್ನು ಮುಂದುವರೆಸಲು ಸಾಧ್ಯವಾಗದು. ಮನೆಯ ಹೊರಗಿನ ಜನರಿಗೆ ಕಸಬರಿಗೆಗಳು ಇತ್ಯಾದಿ ಕಾಣುವಂತಿದ್ದರೆ ಅದು ಆ ವ್ಯಕ್ತಿಗಳಲ್ಲಿ ನಕಾರಾತ್ಮಕ ಭಾವನೆಗಳನ್ನು ಹೊಂದಲು ಕಾರಣವಾಗಬಹುದು. ಧೂಳು ಜೇಡರ ಬಲೆ, ಕೊಳೆ ಹಾಗೂ ಕಸಗಳನ್ನು ತಮ್ಮಲ್ಲಿ ಹೊಂದಿರುವ ಕಸಬರಿಕೆ ಇತ್ಯಾದಿಗಳು ಶುಭ ಸೂಚಕವಾಗಿರಲು ಸಾಧ್ಯವಾಗದು ಎಂಬುದು ಒಂದೆಡೆಯಾದರೆ ಇದು ಮನಸ್ಸಿನ ಹೊಯ್ದಾಟಗಳಿಗೆ ಇನ್ನಿಷ್ಟು ವಿಚಾರಗಳನ್ನು ಒದಗಿಸಿ ನಿಷ್ಕಿ$›ಯತೆಯನ್ನು ಉಂಟು ಮಾಡಬಲ್ಲವು.

ಯಾಕೆ ಹೀಗಾಗುತ್ತದೆ ಎಂಬುದಕ್ಕೆ ನೇರ ಕಾರಣಗಳಿಲ್ಲ. ಒಂದು ಸುಂದರ ನಾಯಿಯನ್ನೋ,  ಮೊಲವನ್ನೋ, ಜಿಂಕೆಯನ್ನೋ ನೋಡುವುದಕ್ಕೂ, ಒಂದು ಇಲಿ ಒಂದು ಜಿರಲೆ ಅಥವಾ ತಿಗಣೆ ಅಥವಾ ಜೇಡವನ್ನು ಮನೆಯೊಳಗೆ ಕಾಣುವುದಕ್ಕೂ ವ್ಯತ್ಯಾಸವಿದೆ. ಯಾರ ಮನಸ್ಸೂ ಇಲಿ ಅಥವಾ ಜಿರಲೆಗಳನ್ನು ನೋಡುತ್ತಾ ಕ್ರಿಯಾಶೀಲವಾಗದು. ಇದೇ ಸೂತ್ರ ಕಸಬರಿಗೆಗಳು ಇತ್ಯಾದಿ ವಿಷಯದಲ್ಲೂ ನಾವು ವಿಶ್ಲೇಷಿಸಬಹುದು. ಮನಸ್ಸು ಬಹಳ ಸೂಕ್ಷ್ಮವಾದದ್ದು.
ಅದು ತನ್ನ ಆಯ್ಕೆಯನ್ನೂ, ನಿರಾಸಕ್ತಿಗಳನ್ನೂ ಒಬ್ಬರಿಂದ ಇನ್ನೊಬ್ಬರಿಗೆ ಬಹುತೇಕ ಸಂದರ್ಭಗಳಲ್ಲಿ
ವಿಧವಿಧವಾಗಿ ಒಡಮೂಡಿಸುವುದು. ಸತ್ಯವಾದರೂ ಇಲಿ, ಜಿರಲೆ ಕಸಬರಿಕೆಗಳಂಥ ವಿಚಾರಗಳಲ್ಲಿ ವಿಧವಿಧವಾದ ಭಾವನೆಗಳನ್ನು ರೂಪುಗೊಳಿಸವು. ಕೇವಲ ಜಿಗುಪ್ಸೆ ಅಷ್ಟೇ. ಇದು ಎಲ್ಲರಿಗೂ ಸ್ವಾಭಾವಿಕ. ಎಲ್ಲರಲ್ಲೂ ಸ್ವಾಭಾವಿಕ.

ಅಡುಗೆ ಮನೆಯಲ್ಲಿ ಹೊರ ಜಗುಲಿಯಲ್ಲಿ ಕಸಬರಿಗೆಗಳು ಕಾಣುವಂತೆ ಇರಲೇ ಕೂಡದು. ಇದು ತಿನ್ನುವ ಅನ್ನ ತಿನಿಸುಗಳ ವಿಷಯದಲ್ಲಿ ಒಂದು ರೀತಿಯ ಅಭಾವವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಿನಲ್ಲಿ ಇಂಥ ಅಭಾವಗಳ ಸೃಷ್ಟಿಗೆ ನಮಗೆ ನಾವೇ ಅವಕಾಶ ಒದಗಿಸ ಬಾರದು. ಒಂದರ್ಥದಲ್ಲಿ ಮನೆ ಬಾಗಿಲ ಎದುರುಗಡೆ ಕಸಬರಿಕೆ ಇತ್ಯಾದಿಗಳನ್ನು ಮೇಲ್ಮುಖವಾಗಿ ಇಡುವುದು ದುಷ್ಟ ಹಾಗೂ ಅನಪೇಕ್ಷಿತ ಸ್ಪಂದನಗಳನ್ನು ಮನೆಯೊಳಗಡೆ ಬಂದು ಸೇರುವ ಕ್ರಿಯೆಗೆ ಪೂರಕವಾಗಿ ಒಳಿತಾಗಬಲ್ಲದು. ಆದರೆ ರಾತ್ರಿಯ ಹೊತ್ತು ಮಾತ್ರ ಇದ ಸ್ವಾಗತಾರ್ಹ.  ಹಗಲ ಹೆಗಲಿಗೆ ಇದು ಸಹವಾಸ ಬೇಡ.

ಇನ್ನು ಮನೆಯೊಳಗಿನ ಕಸ ಹಾಗೂ ಕೊಳೆಗಳನ್ನು ಧೂಳು ಹಾಗೂ ಮಣ್ಣನ್ನು ವಿಶೇಷವಾಗಿ ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಸಬರಿಗೆಗಳೀಂದ ಒತ್ತಿ ಝಾಡಿಸಿ ಹೊರದೂಡುವಂತೆ ಮಾಡಲೇ ಬಾರದು. ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಣ್ತಪ್ಪಿ ಬಿದ್ದ ಅಥವಾ ಬೆಲೆ ಬಾಳುವ ವಸ್ತುಗಳು ಹೊರ ತಳ್ಳಲ್ಪಡುವ ಸಾಧ್ಯತೆಗಳು ಇರುವುದರಿಂದ ರಾತ್ರಿಯ ಹೊತ್ತು ಕಸಬರಿಗೆಗಳ ಉಪಯೋಗ ಮಾಡಿದರೆ ಮನೆಯಲ್ಲಿ ಲಕ್ಷಿ$¾ದೇವಿ ನೆಲೆಯೂರಳು ಎಂಬ ನಂಬಿಕೆ ಇದೆ. ಕೆಲವು ವಿಚಾರಗಳು ಆಧುನಿಕತೆಯನ್ನು ಅಣಕಿಸುವಂತಿದ್ದರೂ ಲಾಗಾಯ್ತಿನಿಂದ ರೂಢಿಯಾಗಿ ಬಂದ ವಿಚಾರಗಳ ಕುರಿತು ಅಲಕ್ಷ್ಯ ಬೇಡ. ವರ್ತಮಾನದ ಆಧುನಿಕ ಬೆಳವಣಿಗೆಗಳು ಮಾನವನ ಎಲ್ಲ ನೋವು ಹಾಗೂ ಕಷ್ಟಗಳನ್ನು ನೀಗಿಸುವಷ್ಟು ಆಧುನಿಕವಲ್ಲ. ಹೀಗಾಗಿ ಯಾವುದೇ ಹಳೆಯ ವಿಚಾರವಲ್ಲ. ಅವೆಲ್ಲಾ ಆಧುನಿಕತೆ ಪೂರಕವಾಗೇ ಇರುತ್ತದೆ.


Wednesday, 7 February 2018

ವಾಸ್ತುವಿಗೂ, ಮನೆಯ ಸ್ವತ್ಛತೆಗೂ ಸಂಬಂಧ ಇದೆಯಾ?

ಮನೆಯ ಒಳಗಡೆಯ ಅಂದಚೆಂದ ಅಲಂಕಾರ ಪೇಂಟಿಂಗ್‌ ಉಪಕರಣಗಳ ಸೌಂದರ್ಯ ಎಲ್ಲಾ ಸರಿ. ಆದರೆ ಇವು ಒಂದು ಒಳ್ಳೆಯ ಮನೆಯನ್ನು ರೂಪಿಸಲಾರವು. ಒಳಗೆ ಕಾಪೆìಟ್‌ ಹಾಸು, ಆಧುನಿಕತೆಯಿಂದ ಸುಸಜ್ಜಿತಗೊಂಡ ಸಂಯೋಜನೆಗಳೆಲ್ಲಾ ಒಳಿತು ತರುವುದಾಗಿದ್ದರೆ ಅನೇಕಾನೇಕ ಕೋಟ್ಯಾಧಿಶರುಗಳಿಗೆ ಸುಖದ ವಿನಾ ದುಃಖ, ಒತ್ತಡ, ನಿರಾಶೆ, ಹಳಹಳಿಕೆಗಳೆಲ್ಲಾ ಇರುತ್ತಲೇ ಇರಲಿಲ್ಲ. ಹಾಗಾದರೆ ಮಾನಸಿಕ ಶಾಂತಿಗೆ ಯಾವುದು ಕಾರಣ. ಏನು? ಯಾವಾಗ? ಎಷ್ಟು? ಹೇಗೆ? ಯಾವೆಲ್ಲ ವಿಚಾರಗಳು ಯಾಕೆ ಮನಸ್ಸಿನ ಶಾಂತಿಗೆ ಒಳಿತನ್ನು ತರುತ್ತವೆ ಎಂಬುದು ಪ್ರಧಾನವಾದ ಅಂಶಗಳಾಗುತ್ತದೆ.

ನಿಜ, ಮನೆಯು ಸರಳವಾಗಿ ಗುಡಿಸಲೇ ಆಗಿದ್ದರೂ ಸರಿ ಸ್ವತ್ಛತೆಯ ದೃಷ್ಟಿಯಿಂದ ಎಲ್ಲವನ್ನೂ ಪರಿಶೀಲಿಸಬೇಕು. ಬೇಕಾದಲ್ಲಿ ವಸ್ತುಗಳನ್ನು ತುಂಬಿಡುವ ಎಸೆದುಬಿಡುವ ಪರಿಪಾಠ ಬೆಳೆಸಿಕೊಳ್ಳಲೇ ಬಾರದು. ಕಣ್ಣಮುಂದೇ ಇರಲಿ ಎಂದು ಇಟ್ಟರೂ ಕೂಡಾ ಯಾವುದೂ ಕಾರಣಕ್ಕೆ ಮುಖ್ಯವಾದೊಂದು ವಸ್ತು ಹಲವು ವಸ್ತುಗಳ ನಡುವೆ ಸಿಕ್ಕಿ ಎಲ್ಲೋ ಮಾಯವಾಗಿ ಬಿಡುತ್ತದೆ. ಎಲ್ಲಾ ಒಮ್ಮೆ ರಗಳೆ ಎಂದೆನಿಸಿದರೂ ಯಾವುದು ಬೇಕಾದ್ದು, ಯಾವುದು ಬೇಡದ್ದು ಎಂಬುದನ್ನು ಕೂಡಲೇ ತ್ಯಾಜ್ಯದ ಜೊತೆ ಕಳಿಸಿಬಿಡಿ. ಮನೆಯಿಂದ ದೂರಕ್ಕೆ ಒಯ್ಯಲ್ಪಡಲಿ.

ನೋಡಿ ನಮ್ಮ ಸ್ನೇಹಿತರೊಬ್ಬರ ಮನೆ ಒಳ್ಳೆಯ ಸ್ನೇಹಿತ ಮನೆತನ ದೊಡ್ಡದು ಆಸ್ತಿವಂತ ಸ್ಥಿತಿವಂತ. ಆದರೆ ಆಸ್ತಿಯ ವಿಚಾರದಲ್ಲಿ ಯುಕ್ತವಾದ ನಿಶ್ಚಿತ ಸಂಧಾನವನ್ನು ಮಾಡಿಕೊಳ್ಳಲು ದಾಯಾದಿಗಳು ಅವಕಾಶ ಕೊಡುತ್ತಿಲ್ಲ. ಒಂದು ವಿಸ್ತಾರವಾದ ಜಾಗೆಯನ್ನು ಬ್ಯಾಂಕ್‌ ಒಂದಕ್ಕೆ ಅನುಕೂಲಕರ ರೀತಿಯಲ್ಲಿ ಯುಕ್ತವಾಗಿ, ಸೂಕ್ತವಾಗಿ ಮಾಡಿಕೊಡುವ ಎಲ್ಲಾ ಅವಕಾಶ ಖರ್ಚುವೆಚ್ಚವನ್ನೂ ಈ ನಮ್ಮ ಗೆಳೆಯ ಪೂರೈಸಿದರು. ಪ್ರತಿತಿಂಗಳ ಬಾಡಿಗೆ ಅರವತ್ತು ಸಾವಿರ ಎಂಬುದೂ ನಿಶ್ಚಿತವಾಯ್ತು. ಅರವತ್ತು ಸಾವಿರದಲ್ಲಿ ಉತ್ತಮವಾದ ರೀತಿಯಲ್ಲಿ ಬದುಕಿ ಬಾಳೂವುದೆಂಬ ಕನಸನ್ನು ಗೆಳೆಯ ಕಾಣುತ್ತಲೇ ಇದ್ದ. ಆದರೆ ದಾಯಾದಿಗಳ ಜೊತೆಯಲ್ಲೇ ಎಲ್ಲಾ ವ್ಯಾವಹಾರಿಕ ವಹಿವಾಟಿಗಳೂ ನಡೆಯುತ್ತಿದ್ದವು.
ಎಲ್ಲರ ಮನೆಗಳು ಬೇರಾಗಿದ್ದರೂ ವಹಿವಾಟುಗಳು ಎಲ್ಲರ ಒಕ್ಕೂಟದ ಪಾಲುದಾರಿಕೆಯಲ್ಲಿತ್ತು. ಬ್ಯಾಂಕಿಗೆ ಎಂದು ರೂಪಿಸಿಕೊಟ್ಟ ಸ್ಥಳ ಮಾತಿನ ಪ್ರಕಾರ ಒಂದು ಪ್ರತ್ಯೇಕ ಖಾಲಿ ಕಾಗದದಲ್ಲಿ ಎಲ್ಲರೂ ಸಹಿ ಹಾಕಿಕೊಟ್ಟ ಆಧಾರದ ಪ್ರಕಾರ ನಮ್ಮ ಈ ಗೆಳೆಯನಿಗೆ ಸೇರುವಂತದಿತ್ತು.

ಹೀಗಾಗಿ ಆ ಎಲ್ಲಾ ಸಹಿ ಹಾಕಿದ ಗಟ್ಟಿ ಆಧಾರದ ಕಾಗದದ ಬಲದಿಂದಲೇ ಗೆಳೆಯ ಬ್ಯಾಂಕಿಗೆ ಅವಶ್ಯವಾದ ಮಾರ್ಪಾಟುಗಳನ್ನು ಒಟ್ಟೂ ಇಪ್ಪತ್ತೆ„ದು ಲಕ್ಷ ವೆಚ್ಚ ಮಾಡಿ ಹಸ್ತಾಂತರ ಮಾಡಿಕೊಟ್ಟ ಮೇಲೆ ದಾಯಾದಿಗಳು ಬರುವ ಬಾಡಿಗೆಗೆ ತಾವೂ ಪಾಲುದಾರರು ಎಂದು ಧ್ವನಿಗೂಡಿಸಿದರು. ಈ ನಮ್ಮ ಗೆಳೆಯ ದಾಯಾದಿಗಳು ಒಗ್ಗೂಡಿ ಇವನ ಸುಪರ್ದಿಗೆ ಎಂದು ನಿರ್ಣಯಕ್ಕೆ ಬಂದು ಸಹಿ ಹಾಕಿದ ಕಾಗದದ ಪ್ರತ್ಯೇಕ ಪತ್ರ ಈಗ ನಮ್ಮ ಗೆಳೆಯನಿಗೆ ಹುಡುಕಲಾಗುತ್ತಿಲ್ಲ. ಇಲ್ಲೇ ಇಟ್ಟಿದ್ದೆ. ಇವುಗಳ ನಡುವೆಯೇ ಇತ್ತು ಎಂದು ಹುಡುಕುತ್ತಲೇ ಇದ್ದಾನೆ. ಒಂದು ವರ್ಷದಿಂದ ಹುಡುಕುತ್ತಿದ್ದಾನೆ. ವೈಯುಕ್ತಿಕ ಹೆಸರಿನಲ್ಲಿ ಸಾಲ ಇದೆ. ಬಾಡಿಗೆಯನ್ನೀಗ ಎಲ್ಲರೂ ಒಟ್ಟುಗೂಡಿ ಪಡೆಯುತ್ತಿದ್ದಾರೆ. ನಮ್ಮ ಗೆಳೆಯನಿಗೆ ಬರೀ ಐದು ಸಾವಿರ ಸಿಗುತ್ತಿದೆ. ತುಂಬುವ ಬಡ್ಡಿಯೇ 25 ಸಾವಿರ ಇದೆ. ಬರುವ ಅರವತ್ತು ಸಾವಿರ ಬಾಡಿಗೆಯಲ್ಲಿ ಸಾಲಕ್ಕೆ 25 ಸಾವಿರ ಕಟ್ಟಿ ಉಳಿದ 35 ಸಾವಿರದಲ್ಲಿ ಜೀವನ ನಡೆಸುವ ಅವನ ಯೋಜನೆ ಕುಸಿದು ಬಿದ್ದಿದೆ. ಮನೆಯಲ್ಲಿ ಯುಕ್ತತೆ ಹಾಗೂ ಸೂಕ್ತ ಜೋಡಣೆ ಸಾಧ್ಯವಾಗದಿದ್ದಲ್ಲಿ ಎಲ್ಲರೂ ಸಹಿ ಹಾಕಿದ್ದ ಪತ್ರ ಕಳೆದುಹೋಗುತ್ತಿರಲಿಲ್ಲ. ಅನೇಕಾನೇಕ ವಾಸ್ತು ದೋಷಗಳು ಇವನು ನಮ್ಮಿà ಗೆಳೆಯ ವಾಸಿಸುತ್ತಿರುವ ಮನೆಯಲ್ಲಿ ಅಂತರ್ಗತವಾಗಿದ್ದರಿಂದ ಅವನ ಮನಸ್ಸು ಸ್ಥಿಮಿತದಲ್ಲಿಲ್ಲ. ಕಾಗದ ಪತ್ರ ಕಳೆಯುವಂಥ ಪರಿಸ್ಥಿತಿ ನಿರ್ಮಾಣವಾಯ್ತು. ಹೀಗಾಗಿ ಸ್ವತ್ಛತೆ, ಮನೆಯ ಶಾಂತಿಯ ದೃಷ್ಟಿಯಿಂದ ಮುಖ್ಯ. ಉಳಿದ ವಿವರಗಳನ್ನು ಮುಂದಿನ ವಾರ ಚರ್ಚಿಸೋಣ.


Tuesday, 6 February 2018

ಮೀನು , ಹಕ್ಕಿಗಳನ್ನು ಮನೆಯಲ್ಲಿ ಸಾಕಬಹುದಾ?

ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ ಪಾರಿವಾಳ ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಲÊ ಬರ್ಡ್ಸ್‌ಗಳಂಥ ಬಣ್ಣಬಣ್ಣಗಳ ಮೈ ಹೊದಿಕೆಯ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣಗಳ, ಅವುಗಳ ಹೊರಮೈ ಚೆಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾಗದ ಗಾಜಿನ ಗೋಡೆಗಳೀಗೆ ಡಿಕ್ಕಿ ಹೊಡೆಯುತ್ತ ಮೂತಿ ಬಡೆಯುತ್ತಾ, ಉರಟುರುಟಾಗಿಸುತ್ತ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆ ಎಂದು ಆನಂದಿಸುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪಿದ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು ಜಾಡಿಗಳು ಗಿಂಡಿಗಳು ಅಶುಭ ಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿದ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ.

ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂ ನಲ್ಲಿ ಪೂರ್ತಿಯಾಗಿ ಕಡುಗಪ್ಪು ಮೈಬಣ್ಣವಿರುವ ಮೀನುಗಳು ಇರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸುನೀಲಿ, ನಸುಗೆಂಪು, ಬಿಳಿಕಪ್ಪು ಪಟ್ಟೆಗಳಿರುವ  ಮೀನುಗಳು ಅಲೆ, ಅಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಆಕಾರದಿಂದ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ಕೊಂಕಿಸುತ್ತಾ ಓಡಾಡುವಂತಿರಲಿ.

ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಬೇಡ. ಮುಂಜಾನೆ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸಿಟ್ಟುಕೊಳ್ಳಿ. ಒಳಗಿನ ನೀರು ನಸುನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಇದರಿಂದ ಮನೆಯೊಳಗಿನ ಸ್ನೇಹಪೂರ್ಣ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ.

ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟುವ ವಿಚಾರ ಆಗದಿದ್ದರೆ ಸೂಕ್ತ. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದು ಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ  ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿದ್ದವೇ ಆಗಿದೆ. ಉಳಿದಂತೆ ಗಿಣಿ , ಲವ್‌ಬರ್ಡ್ಸ್‌, ಪಾರಿವಾಳಗಳು ಸಹಾ ಮನೆಯೊಳಗೆ ತಮ್ಮ ವಸತಿಯನ್ನು ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ಕೊಳ್ಳುವುದು ಬೇಡ. ಪಂಜರದಲ್ಲಿ ಇವುಗಳ ಅಸಹಾಯಕ ಪರಿಸ್ಥಿತಿ ಅಥವಾ ಸೆರೆವಾಸ ಅಷ್ಟು ಒಳ್ಳೆಯದಲ್ಲ.


Monday, 5 February 2018

ನಿಮ್ಮ ಮನೆಗೆ ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು

1.ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.

2. ನಿಮ್ಮ ಮಲಗುವ ಕೋಣೆಯಲ್ಲಿ ಟೆಲಿವಿಷನ್ ಸೆಟ್ ಇಡಬಾರದು. ಆ ಅಭ್ಯಾಸ ಬಿಡಲಾಗದಿದ್ದರೆ ಟಿವಿ ವೀಕ್ಷಿಸಿದ ಬಳಿಕ ಪ್ಲಾಸ್ಟಿಕ್ ಟೇಬಲ್ ಕ್ಲಾತ್‌ನಿಂದ ಅದನ್ನು ಮುಚ್ಚಿರಿ.

3. ನಿಮ್ಮ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿಯಿರಬಾರದು. ಹಾಸಿಗೆಎದುರು ಕನ್ನಡಿಯಿದ್ದರೆ ಮ‌ೂರನೇ ವ್ಯಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ನಿಮ್ಮ ಇಷ್ಟಬಂದ ಕಡೆ ಕನ್ನಡಿಗಳನ್ನು ಇಡಬೇಡಿ.

4.ನಿಮ್ಮ ಮನೆಯಲ್ಲಿ ಒಳಾಂಗಣ ನೀರಿನ ಚಿಲುಮೆಯನ್ನು ಇಡಿ. ನಿಮ್ಮ ಜೀವನಕ್ಕೆ ಬೇಕಾದ್ದೆಲ್ಲ ಸಿಗಲು ಅನುಕೂಲಕರ ಸ್ಥಳದಲ್ಲಿಡಿ.

5. ಮನೆಯೊಳಗೆ ಈಗಾಗಲೇ ಮೀನಿನ ಟ್ಯಾಂಕ್ ಇದ್ದರೆ ಎಚ್ಚರವಾಗಿರಿ. ನಿಮ್ಮ ಮೀನಿನ ಟ್ಯಾಂಕ್ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾಗಿದ್ದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ, ನಿಮಗೆ ಕಾನೂನಿನ ದಾವೆಗಳು, ದಿವಾಳಿ, ಕೆಲಸದ ಒತ್ತಡ, ತೊಂದರೆಗಳು, ಸಮಸ್ಯೆಗಳು ಉದ್ಭವಿಸಬಹುದು. ಮೀನಿನ ಟ್ಯಾಂಕ್ ನಾಲ್ಕು ತಿಂಗಳವರೆಗೆ ಇರಿಸಿದ ಬಳಿಕ ಮೇಲಿನ ಯಾವುದನ್ನಾದರೂ ಗಮನಿಸಿದರೆ, ನಿಮ್ಮ ಮೀನಿನ ಟ್ಯಾಂಕನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿ.

6. ಅಡುಗೆಮನೆಯಲ್ಲಿ ಸ್ಟವ್‌ಗೆ ಎದುರಾಗಿ ರೆಫ್ರಿಜಿರೇಟರ್, ವಾಷಿಂಗ್ ಮೆಷಿನ್, ವಾಷ್‌ಬೇಸಿನ್ ಮತ್ತು ಟಾಯ್ಲೆಟ್ ಇರದಂತೆ ಖಾತರಿ ಮಾಡಿ. ಬೆಂಕಿ ಮತ್ತು ನೀರಿನ ನಡುವೆ ಸಂಘರ್ಷದಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.

7. ಮಕ್ಕಳಿಗೆ ನೆಲದಲ್ಲಿರುವ ಚಾಪೆಯ ಮೇಲೆ ಮಲಗಲು ಅವಕಾಶ ಕೊಡಬೇಡಿ. ಇದರಿಂದ ಮಕ್ಕಳು ಮಂಚದ ಮೇಲಿನಿಂದ ಬೀಳದಿದ್ದರೂ, ಆಗಾಗ್ಗೆ ಅಸ್ವಸ್ಥತೆಗೆ ದಾರಿ ಕಲ್ಪಿಸುತ್ತದೆ. ಕಾರಣವೇನೆಂದರೆ ಹಾಸಿಗೆಯ ಕೆಳಗೆ ಶಕ್ತಿಸಂಚಲನ ಸಾಧ್ಯವಾಗುವುದಿಲ್ಲ. ಮಕ್ಕಳು ಮಲಗುವ ಹಾಸಿಗೆಯ ಸುತ್ತ ಶಕ್ತಿಯ ಚಲನೆಯಾಗುತ್ತಿದ್ದರೆ ಅವರು ಆರೋಗ್ಯದಿಂದಿರುತ್ತಾರೆ.

8. ನಿಮ್ಮ ಹಾಸಿಗೆಯನ್ನು ಗಟ್ಟಿಯಾದ ಗೋಡೆಗೆ ತಾಗಿಸಿ ಇರಿಸಬೇಕು. ಗಟ್ಟಿಯಾದ ಗೋಡೆಯಿದ್ದರೆ ನೀವು ಆಳವಾದ ನಿದ್ರೆಗೆ ಜಾರಬಹುದು ಮತ್ತು ಬೆಳಿಗ್ಗೆ ಏಳುವಾಗ ನೀವು ಪೂರ್ಣ ವಿಶ್ರಾಂತಿ ಪಡೆದು ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ.

9.ನಿಮ್ಮ ಹಾಸಿಗೆಯ ಮೇಲಿನಿಂದ ಬೆಳಕು ಬೀಳಬಾರದು. ಬೆಳಕು ಶಕ್ತಿಯ ಮೇಲೆ ಒತ್ತಡ ಹಾಕುವುದರಿಂದ ಜೀವನದಲ್ಲೂ ಒತ್ತಡಗಳು ಉಂಟಾಗುತ್ತದೆ.

10. ಅಮೃತಶಿಲೆಯ ಮೇಜು ನಿಮ್ಮ ಊಟದ ಕೋಣೆಯಲ್ಲಿದ್ದರೆ ಕೆಲಸದ ಒತ್ತಡ ಜಾಸ್ತಿಯಿರುತ್ತದೆ. ಅದನ್ನು ಬದಲಾಯಿಸಿ ಮರದ ಮೇಜನ್ನು ಇರಿಸಿ.

11. ನಿಮ್ಮ ಮಗು ಮಲಗುವ ಕೋಣೆಯಲ್ಲಿ ಅಸ್ವಸ್ಥತೆಗೆ ಗುರಿಯಾದರೆ ಇನ್ನೊಂದು ಕೋಣೆಗೆ ಮಗುವನ್ನು ಬದಲಾಯಿಸಿ ಅಥವಾ 6 ರಾಡ್‌ಗಳ ಲೋಹದ ವಿಂಡ್ ಚೈಮ್ ಕೋಣೆಯಲ್ಲಿ ನೇತುಹಾಕಿ. ಇದು ಕೋಣೆಯ ಸರ್ವ ಭೂಶಕ್ತಿಗಳನ್ನು ಒಡೆಯುತ್ತದೆ.

Saturday, 3 February 2018

ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ

2009ರಲ್ಲಿ ಗುರು ಕಟಕದಲ್ಲಿ ಪ್ರವೇಶಿಸಿ ದುರ್ಬಲಗೊಳ್ಳುತ್ತದೆ. ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. 2009ನೇ ವರ್ಷವು ಮುಖ್ಯ ಶಕ್ತಿ ಪ್ರಥ್ವಿ ಅಥವಾ ಭೂಮಿಯಿಂದ ಆಳಲ್ಪಡುತ್ತದೆ.

ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.

ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.
ಏಳು ದೈವಾಜ್ಞೆಗಳು

ಹಿರಿಯರಿಗೆ

ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.

ವೃತ್ತಿನಿರತರಿಗೆ

ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.

ಗೃಹಿಣಿಯರಿಗೆ

ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.

ವಿದ್ಯಾರ್ಥಿಗಳಿಗೆ

ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.

ಈ ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ ಉತ್ತಮ ಆರೋಗ್ಯ, ಸಾಮರಸ್ಯ ಮತ್ತು ಸಂತೋಷದ ಹಾದಿಯಲ್ಲಿ ಹೆಜ್ಜೆಹಾಕಿ.

Friday, 2 February 2018

ಮನೆಯ ಬಾವಿ ಯಾವ ಮೂಲೆಯಲ್ಲಿ ಇರಬೇಕು ಅನ್ನೋದು ಗೊತ್ತಾ?

ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರ್‌ ಅನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗ.

ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಕೊರೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌ ನಗರಸಭೆ ಮುನಿಸಿಪಾಲ್ಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ವಿಧಿ ವಿಧಾನಗಳನ್ನು ಜನರು ಅನುಸರಿಸುವುದಿಲ್ಲ. ಹೇಗೋ ಸಂಗ್ರಹಿಸುತ್ತಾರೆ. ಹೇಗೋ ನೀರಿನ ಪೂರೈಕೆ ಮನೆಯೊಳಗಡೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ
ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ.

ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗವಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡಾ ಈಶಾನ್ಯವೇ ಆಗಿರಬೇಕು. ಹೀಗೆ ನಿರ್ಮಿಸುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೆ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲಾ ತೆಲೆಕೆಡಿಸಿಕೊಳ್ಳುವ ವಿಚಾರವಲ್ಲ. ಸುಮಾರಿ ಒಟ್ಟು ವಿಸ್ತೀರ್ಣದ
ಶೇ. ಒಂದುರಷ್ಟು ಭಾಗದ ಉದ್ದಗಲಗಳನ್ನು ಸಂಪಿಗೆ ಒದಗಿಸಿರಬೇಕು.

ಸಂಪಿನ ಆಳ ಆರಡಿಗಳನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪನ್ನು ಆಗಾಗ ಸ್ವತ್ಛಗೊಳಿಸುವುದು ಆರೋಗ್ಯಕ್ಕೆ ಒಳ್ಳೆಯದು. ಮಳೆನೀರಿನ ಕೊಯ್ಲು ಮತ್ತು ವಾಸ್ತು ಕೊಯ್ಲು ಇರುವುದಾದರೆ ಮುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡಾ ಈಶಾನ್ಯ ಮೂಲೆಯಲ್ಲೇ ಇರಬೇಕು. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ
ಹಲವರದ್ದಿರುತ್ತದೆ. ಈಜುಕೊಳವನ್ನು ಕೂಡಾ ನಿರ್ಮಿಸುವ ವಿಚಾರವಿರುತ್ತದೆ. ಈ ಏನೇ ಇತರ ನೀರಿಗೆ ಸಂಬಂಧಿಸಿದ ವಿಚಾರಗಳಿದ್ದರೂ, ಈಶಾನ್ಯ ದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲಾ ಮೂಲಗಳೂ ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಂಡಿರಬೇಕು.

ಹೀಗೆಂದು ಮನೆಯ ಮೇಲಿನ ಓವರ್‌ ಹೆಡ್‌ ಟ್ಯಾಂಕ್‌ಗಳು ಈಶಾನ್ಯದಲ್ಲಿರಬಾರದು. ಇವು ಕಡ್ಡಾಯವಾಗಿ ನೈಋತ್ಯದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಸೇರುವ ಮೂಲೆಗೆ ನೈಋತ್ಯವೆನ್ನುತ್ತಾರೆ. ನೈರುತ್ಯದಲ್ಲಿ ಟ್ಯಾಂಕ್‌ ಇಡುವುದು ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಯಾಗುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಿ. ಪ್ರಾಣಿಕ್‌ ಹೀಲಿಂಗ್‌ ಎನ್ನುವ ವಿಚಾರದ ಸಕಾರಾತ್ಮಕ ಬಲ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ
ಓಡಾಟದಿಂದ ದೊರೆಯುತ್ತದೆ. ಅಪ್ರದಕ್ಷಿಣಾ ರೂಪದಲ್ಲಿದ್ದರೆ ನಕಾರಾತ್ಮಕ ಬಲ ದೊರೆಯುತ್ತದೆ. ಇದು ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಈ ಬಲಗಳು ಬಹು ಪರಿಣಾಮಕಾರಿಯಾಗಿದೆ.

ಸಂಪು ಹಾಗೂ ಓವರ್‌ ಹೆಡ್‌ ಟ್ಯಾಂಕ್‌ ವಿಚಾರಗಳಲ್ಲಿ ಪ್ರಧಾನವಾಗಿ ಬಣ್ಣಗಳು ಯಾವೆಲ್ಲಾ ಫ‌ಲಗಳನ್ನು,ಯಶಸ್ಸುಗಳನ್ನು ನೀಡುತ್ತದೆ ಎಂಬ ವಿಚಾರವನ್ನು ಮುಂದಿನ ವಾರ ಚರ್ಚಿಸೋಣ.

Thursday, 1 February 2018

ಪ್ರಕೃತಿವಿಕೋಪ ತಡೆಯಲು ವಾಸ್ತುಶಾಸ್ತ್ರ !

ಪಾಕಿಸ್ತಾನ, ಇಂಡೊನೇಷಿಯಾ, ಶ್ರಿಲಂಕಾ ಹಾಗೂ ಭಾರತದ ಗುಜರಾತ್, ಓರಿಯಾ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ನೈಸರ್ಗಿಕ ವಿಕೋಪಗಳಲ್ಲಿ ಸಾವಿರಾರು ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದರು.

ಆ ದುರ್ಘಟನೆಯಿಂದ ಅನೇಕರು ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ನೈಸರ್ಗಿಕ ವಿಕೋಪಗಳಗಿಗೂ ವಾಸ್ತು ದೋಷಕ್ಕೂ ಸಂಬಂಧವಿದೆ ಅಂದರೆ ನಂಬುತ್ತೀರಾ?

ಪುರಾತನ ಕಾಲದಲ್ಲಿ ವಾಸ್ತುಶಾಸ್ತ್ರಕ್ಕೆ ಬಹಳ ಮಹತ್ವ ನೀಡಲಾಗಿತ್ತು. ಪ್ರತಿಯೊಂದು ಕೆಲಸಕಾರ್ಯಗಳೂ ವಾಸ್ತುವಿಗೆ ಅನುಗುಣವಾಗಿ ನಡೆಯುತ್ತಿತ್ತು.

ನೈಸರ್ಗಿಕ ವಿಕೋಪಗಳನ್ನು ಕೂಡ ತಡೆಗಟ್ಟುವ ಶಕ್ತಿ ವಾಸ್ತುವಿಗಿತ್ತು ಎಂದು ನಂಬಲಾಗಿತ್ತು. ವಾಸ್ತುಶಾಸ್ತ್ರದ ಪ್ರಕಾರ ಕಟ್ಟಿದ ಮನೆ ಮತ್ತು ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತಿದ್ದ ಕಡೆಗಳಲ್ಲಿ ಇಂತಹ ಅಪಾಯಗಳು ಉಂಟಾಗುತ್ತಿರಲಿಲ್ಲ ಎಂದು ಭಾವಿಸಲಾಗುತ್ತಿತ್ತು.

ಭೂಕಂಪ, ನೆರೆಹಾವಳಿ, ಸುನಾಮಿ ಹೀಗೆ ನೈಸರ್ಗಿಕ ವಿಕೋಪಗಳು ಯಾವುದೇ ಇರಲಿ ಅದರ ಮನ್ಸೂಚನೆಗಳು ಘಟನೆ ಸಂಭವಿಸುವ ಒಂದು ವಾರದ ಮೊದಲೆ ಗೋಚರಿಸತೊಡಗುತ್ತದೆ.

ಈ ಸೂಚನೆಗಳನ್ನು ಪೂರ್ವಬಾವಿಯಾಗಿ ವಾಸ್ತುವಿನಿಂದ ತಿಳಿದುಕೊಳ್ಳಬಹುದು ಹಾಗೂ ಇದರ ಪರಿಣಾಮವನ್ನು ನಿಗ್ರಹಿಸಬಹುದು. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.

ಪ್ರಾಚೀನ ಜನರು ಮಣ್ಣು, ಮರ, ನೀರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಹಾಗೂ ಅವುಗಳಿಗೆ ಪ್ರಾಧಾನ್ಯ ಕಲ್ಪಿಸಿದ್ದರು. ವಾಸ್ತುವಿನ ಮೌಲ್ಯಗಳು ಈ ಅಂಶಗಳನ್ನು ಅವಲಂಬಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಮನುಷ್ಯನ ಜೀವನ ಚಕ್ರದ ಮೇಲೆ ಪ್ರಕೃತಿ ನೇರ ಪರಿಣಾಮ ಬೀರುವುದರಿಂದ, ವಾಸ್ತು ಮೌಲ್ಯಗಳನ್ನು ಪಾಲಿಸುವುದರಿಂದ ಇಂತಹ ಪರಿಣಾಮಗಳಿಂದ ರಕ್ಷಣೆ ಪಡೆಯಬಹುದು ಎನ್ನಲಾಗಿದೆ.

ಮನುಷ್ಯನ ನಾಡಿ ಮಿಡಿತವನ್ನು ಪರೀಕ್ಷಿಸಿ ಆರೋಗ್ಯ ತಿಳಿಯುವಂತೆ, ವಾಸ್ತುವಿನಿಂದ ಮುಂದಾಗಲಿರುವ ಅಪಾಯವನ್ನು ಮೊದಲೇ ತಿಳಿಯಬಹುದು ಮತ್ತು ನಿಗ್ರಹ ಶಕ್ತಿ ರೂಪಿಸಬಹುದು.

ಆದರೆ ವಾಸ್ತುವಿನ ಬಳಕೆಯ ಮೊದಲು ಅದರ ಕುರಿತು ಸರಿಯಾದ ಜ್ಞಾನ ಹೊಂದಿರುವುದು ಅಗತ್ಯ.

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...