Thursday, 12 July 2018

ಮನೆಯ ಶುಚಿಯೂ, ವಾಸ್ತು ವಿಚಾರವೂ....

ಭಾರತೀಯ ವಾಸ್ತುಕಲೆಯ ವಸ್ತು ಸಂಯೋಜನೆಗಳನ್ನು ಸೂಕ್ತರೀತಿಯಲ್ಲಿ ಹೊಂದಿಸಿಡಲು ಒತ್ತಿ ಹೇಳುತ್ತದೆ. ಉದಾಹರಣೆಗೆ ಪತ್ರವಾದ ತುಳಸಿ, ದೂರ್ವಾಂಕುರ, ಶ್ರೀಗಂಧ, ಚಂದನ, ರುದ್ರಾಕ್ಷಿ$, ಶಂಖ, ಸಾಲಿಗ್ರಾ, ಗಂಟೆ, ಕಿರುಗಂಟೆ, ಸುವಾಸನಾ ಬತ್ತಿ, ಕಡ್ಡಿ, ಆರತಿಯ ಸಲಕರಣೆಗಳು ದೇವರ ಮನೆಯಲ್ಲಿಯೇ ಇರಬೇಕು. ನಾವು ಅದನ್ನು ಇನ್ನೆಲ್ಲಿಯೋ ಇಡಕೂಡದು. ಪುಸ್ತಕಗಳನ್ನು ಓದುವ ಕೋಣೆ, ಮಲಗುವ ಕೋಣೆಗಳಲ್ಲಿ ಹಜಾರದಲ್ಲಿಡಬೇಕೇ ಧಿವಿನಾ ಉಳಿದ ಕಡೆ ಅಲ್ಲ. ಇನ್ನು ಹಜಾರದಲ್ಲಾಗಲೀ, ಮಲಗುವ ಕೋಣೆಯಲ್ಲಾಗಲೀ ಪುಸ್ತಕಗಳ ರಾಶಿ ತುಂಬಿರಬಾರದು. ಪುಸ್ತಕಗಳು ನಮ್ಮ ಸಂಸ್ಕೃತಿಯಲ್ಲಿ ಧಿದೇಧಿವಿಸರಸ್ವತಿಯ ವಾಸಸ್ಥಾನ. ಪ್ರತ್ಯಕ್ಷ ಅದು ಸರಸ್ವತಿಯೇ ಆಗಿದೆ.

ಹೀಗಾಗಿ ಪಾವಿತ್ರತೆಯನ್ನು ಉಳಿಸಿಕೊಳ್ಳುವ ವಿಚಾರ ಪುಸ್ತಕಗಳ ಬಗೆಗೆ ಅನಿವಾರ್ಯವಾಗಿದೆ. 

ನಿಯತಕಾಲಿಕೆಗಳು ಹಜಾರದಲ್ಲಿರುವುದು ಸೂಕ್ತ. ನಿಯತಕಾಲಿಕೆಗಳು ಹೊಸಕಾಲದ ಆವಿಷ್ಕಾರ. ಅವು ರದ್ದಿಗೆ ಸೇರಲ್ಪಡುವ ಧಿವಿಚಾರವನ್ನು ಗಮನಿಸಿ ಹಜಾರದಲ್ಲಿಡುವುದು ತಾರ್ಕಿಕವಾಗಿಸರಿ. ಸಂಗ್ರಹ ಯೋಗ್ಯ ಪುಸ್ತಕಗಳು ಓದಿನ ಕೋಣೆಯಲ್ಲಿರಲಿ. ಅದು ಹಜಾರದಲ್ಲಿರಬಾರದು.

ರದ್ದಿ ಪೇಪರುಗಳು ಇತರ ಉಪಯೋಗಧಿವಿರದ ಬಾಟಲು, ಕರಡಿಗೆ ಪೊಟ್ಟಣ, ಪ್ಲಾಸ್ಟಿಕ್‌ ತ್ಯಾಜ್ಯ, ಟೂತ್‌ ಪೇಸ್ಟ್‌ ಟ್ಯೂಬುಗಳು ತುಕ್ಕು ಹಿಡಿದ ವಸ್ತುಗಳು, ಉಪಯೋಗಕ್ಕೆ ಬಾರದ ಆದರೆ ನೋಡಲು ಅನ್ಯ ಕಾರಣಗಳಿಗಾಗಿ ಇಟ್ಟುಕೊಂಡ ಹಗರಣಗಳನ್ನು ಸೂಕ್ತವಾಗಿ ಲೇವಾರಿ ಮಾಡಿ ಮನೆಯಿಂದ ದೂರವಿಡುವುದೇ ಕ್ಷೇಮ. ಪೀಠೊಪಕರಣಗಳ ವಿಚಾರದಲ್ಲಿ ಜಾಗ್ರತೆ ಇರಲಿ. ಅವು ಎಂಥೆಂಥದೋ ರೀತಿಯಲ್ಲಿ ಜೋಡಿಸಲ್ಪಡುವ ವಿಚಾರ ಯುಕ್ತವಾಗದು. ಹಲವು ಸಲ ಸೋಫಾಗಳು, ಕುರ್ಚಿಗಳು ಮನೆಗೆ ಬರುವ ಅಭ್ಯಾಗತರನ್ನು ಒಂದು ರೀತಿಯ ದಿವ್ಯ ಕಲ್ಪನಾ ಲಹರಿಗೆ ಒಯ್ಯುವ ಹಾಗೆ ಇರಲಾರದು. ಬೇಕಾಬಿಟ್ಟಿ ಇರುತ್ತದೆ. ಬದಲು ಅಂದವಾಗಿ ಜೋಡಿಸಿ ಇಡಲ್ಪಟ್ಟರೆ ಅತಿಥಿಗೆ ಒಂದು ಸುಂದರ ತಾಣಕ್ಕೆ ಹಾರ್ದಿಕವಾದ ತೃಪ್ತಿಯೊಂದಿಗೆ ಬಂದ ಅನುಭವ ಉದಿಸಿ ಒಳ್ಳೆಯ ವಿಚಾರವನ್ನು ಹಂಚಿಕೊಳ್ಳಬಹುದು. ಮನೆಗೆ ಬರುತತಿರುವಂತೆ ಹೊರಗೆ ಓಡಿ ಹೋಗುವ ಅನುಭವ ಆಗಬಾರದು.

ಅಡುಗೆ ಮನೆಯಲ್ಲಿ ಅಗ್ನಿಗೆ ಸಂಬಂಧಿಸಿದ ಸಲಕರಣೆಗಳು ಒಲೆಯ ಬೆಂಕಿಯಲ್ಲಿ ಅಡುಗೆಗೆ ಒದಗಿ ಬರುವ ಸರಂಜಾಮುಗಳೇ ಇರಬೇಕು. ಆಗ್ನೇಯ ದಿಕ್ಕನ್ನು ಅಡುಗೆ ಕೋಣೆಯ ಬಗೆಗೆ ಅಡುಗೆಗೆ ಬೇಕಾದ ಇತರ ಘಟಕಗಳಾದ ಗ್ಯಾಸ್‌ ವಿದ್ಯುತ್‌ ಒಲೆ, ಒಲೆಯ ಹತ್ತಿರವೇ ಆಗಿರದ ಹಾಗೆ ಆದರೂ ಆಗ್ನೇಯನ ಸಮೀಪಕ್ಕೇ ಫ್ರಿಡುj, ಪಾತ್ರೆ ಹರಿವಾಣ ಲೋಟ ಮುಚ್ಚಳಗಳು, ಇತ್ಯಾದಿ ಅಂದವಾಗಿ ಜೋಡಿಸಿಕೊಂಡಿರಬೇಕು. ಅಡುಗೆ ಮನೆಯಲ್ಲೇ ಅಥವಾ ಹಜಾರದಲ್ಲೇ ಊಟದ ಸ್ಥಳ ಇರಬಾರದು. ದೇವರ ಮನೆ ಅಥವಾ ಪೀಠ ಕೂಡಾ ಊಟದ ಸ್ಥಳಕ್ಕೂ ದೇವರ ಪೀಠಕ್ಕೂ ದೇವರ ಪೀಠದಿಂದ ಸ್ನಾನಗೃಹಗಳ ಶೌಚಾಲಯಗಳಿಗೂ ಅಂತರ ಇರಬೇಕು. ಒಂದೊಂದು ಕಡೆಯ ವಸ್ತುಗಳು ಇನ್ನೊಂದೆಡೆ ಬಂದಿರಬಾರದು. ಊಟದ ಟೇಬಲ್ಲೇ ಗಮನಿಸಿ, ಹಲವರಿಗೆ ಊಟದ ಟೇಬಲ್ಲಿನ ಪುಸ್ತಕ ಪೇಪರುಗಳನ್ನು ಇಟ್ಟು ಓದದೆ ಇದ್ದರೆ ಸಮಾಧಾನವೇ ಆಗದು. ಊಟದ ಎಂಜಲು ಮುಸುರೆಗಳಿರುವ ತಿನಿಸು.  ಅನ್ನ ಸಾಂಬಾರುಗಳು ಪುಸ್ತಕ ಅಥವಾ ಪೇಪರುಗಳಿಗೆ ಅಂಟಿಕೊಂಡು ಕೊಳೆಯಾಗುತ್ತದೆಂಬ ಅರಿವು ಇವರಿಗೆ ಬಾರದು. ಇನ್ನು ಕೆಲವರು ಟೂತ್‌ ಬ್ರಷ್‌ ಪೇಸ್ಟ್‌ ತಂದು ಮಲಗುವ ಕೋಣೆಯಲ್ಲಿಡುವುದೂ ಇದೆ. ದವಸ ದಾನ್ಯಗಳನ್ನು ಹಜಾರದಲ್ಲಿಡುವುದೂ ಇದೆ. ಅಂದವಾದ ಜೋಡಣೆಗಾಗಿ ಸಹಕರಿಸಿ ಮುಂದಾಗದಿರುವ ಪರಿಸ್ಥಿತಿ ಇದೆ. ಇದರಿಂದ ಸಕಾರಾತ್ಮಕ ಶಕ್ತಿ ಸುಳಿಗಳು, ಅಲೆಗಳು, ಹೊಯ್ದಾಟಗಳು, ತರಂಗ ಧಿದಾಡ್ಯìತೆಗಳು ಸೊರಗುತ್ತವೆ. ಮನೆಯೊಂದು ಪುಟ್ಟ ಅಮರಾಬತಿಯಾಗಿರಬೇಕು. ಇರಬೇಕಾದ್ದು ಇರಬೇಕಾದಲ್ಲಿಯೇ ಇದ್ದರೆ ಸೊಗಸು ಪುಟಿಯುತ್ತದೆ. ದುರ್ಗಾ ಲಕ್ಷಿ$¾à ಹಾಗೂ ಸರಸ್ವತಿಯರಿಗೆ ತಾಣ ಒದಗುತ್ತದೆ. 


No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...