Tuesday, 10 July 2018

ಮನೆಯಲ್ಲಿ ಜಗಳ, ಅಶಾಂತಿಗೆ ಈ ವಾಸ್ತು ಕಾರಣವೇ?

ವಾಸ್ತು ವಿಚಾರದಲ್ಲಿ ಜನರು ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಜನರು ಯಾವಾಗಲೂ ದಿಢೀರಾದ ಬದಲಾವಣೆಯ ಕುರಿತು ಅವಸರದಲ್ಲಿರುತ್ತಾರೆ. ಹೀಗಾಗಿ ತಾವು ಏನು ಬೇಕಾದರು ಮಾಡಲು ಸಿದ್ಧ ಎಂದು ಸಿದ್ಧರಾಗಿರುತ್ತಾರೆ. ಸಾಲ ಮಾಡಿಯಾದರೂ ಸರಿ ನಿವಾರಣೆಗಾಗಿನ ಕ್ರಮಗಳನ್ನು ಕೈಗೊಳ್ಳಲು ಪರಿಹಾರಕ್ಕಾಗಿನ ಅವಸರ ತೋರುತ್ತಾರೆ. ಇಷ್ಟೆಲ್ಲಾ ಅವಸರದಲ್ಲಿ ನಿರ್ಣಯ ಕೈಗೊಳ್ಳುವುದು ಇನ್ನೊಂದು ರೀತಿಯ ತೊಂದರೆಗೆ ಕಾರಣವಾಗುತ್ತದೆ.  ದಿಢೀರಾಗಿ ಸಮಸ್ಯೆ ಕರಗಿಹೋಗಲಾರದು. ಕರಗಿ ಹೋಗುವುದಕ್ಕಾಗಿ ಪ್ರಯತ್ನ ಇರಲಿ. ಆದರೆ ಅವಸರ ಬೇಡ. 

ಈಗ ಕಾಲದ ರೀತಿನೀತಿ ಬದಲಾಗಿದೆ ಎಂಬುದನ್ನು ಗಮನಿಸಬೇಕು. ಮನೆಯ ವಾಸ್ತು ಬದಲಾವಣೆಯ ವಿಚಾರ ಅಥವಾ ವಾಸ್ತುವಿನ ಉತ್ತಮವಾದ ಸಂಯೋಜನೆಯ ಆವಿಷ್ಕಾರಗಳ ಮೇಲಿಂದ ಒಳಿತು ಹಾಗೂ ಕೆಡಕುಗಳ ನಿರ್ಣಯ ಬೇರೆ. ಆದರೆ ಬದಲಾದ ಕಾಲ ನಡೆಸಿರುವ ಆಘಾತಗಳನ್ನು ವೈಯುಕ್ತಿಕ ನೆಲೆಯಲ್ಲಿ ತಾರ್ಕಿಕವಾಗಿ ಯೋಚಿಸಿ ಸೂಕ್ತ ಅಥವಾ ಸೂಕ್ತವಲ್ಲ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಕುಟುಂಬದ ವ್ಯಾಖ್ಯೆ ಬದಲಾಗಿದೆ. ಸಂಕೀರ್ಣವಾಗಿದೆ. ಹೆಣ್ಣುಮಕ್ಕಳು ಮನೆಯಲ್ಲಿಯೇ ಇದ್ದು ಗೃಹಸೂತ್ರಗಳನ್ನು ಪಾಲನ ಪೋಷಣೆಯ ಕೋಷ್ಟಕಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದ ಕಾಲ ಬದಲಾಗಿದೆ. ಈಗ ವಾಸ್ತು ಶಿಸ್ತು ಮನೆಗೆ ಬೇಕೇ ? ಏಕೆಂಬುದನ್ನು ಅಲ್ಲಗೆಳೆಯಲಾಗದು.
ಆದರೆ ವಾಸ್ತು ಶಿಸ್ತಿನ ಜೊತೆಗೆ ನಮ್ಮ ನಮ್ಮ ಸುತ್ತವೇ ವೈಯುಕ್ತಿಕವಾಗಿ ಪ್ರತಿಯೋರ್ವನಲ್ಲೂ ಒಂದು ಪ್ರಭಾವಲಯದ ಕಾಂತಿ ಇರುತ್ತದೆ. ಪುರುಷನಿಗೂ ಮಳೆಗೂ ನಡುವಣ ಇರುವ ಪ್ರಭಾವಳಿಯ ಸೇತು ಮತ್ತೂಂದು ರೀತಿಯದು. ಸ್ವೇಚ್ಛೆಯು ಯಾರಿಗೂ ಸರಿಯಲ್ಲ. ಸ್ವೇಚ್ಛೆಯ ಪರಿಣಾಮದಿಂದ ನಾವು ನಮ್ಮ ಸುತ್ತಲಿನ ಪ್ರಭಾವಳಿಯನ್ನು ಕಾಂತಿವಲಯವನ್ನೂ ಬಲಿಕೊಡುತ್ತಾ ಬಾಳ ಪಯಣದಲ್ಲಿ ಸೋಲುತ್ತ ಹೋಗುತ್ತೇವೆ. ನಿಮ್ಮ ಪ್ರಭಾವಲಯವನ್ನು ನಮ್ಮ ವರ್ಚಸ್ಸು ನೈತಿಕ ಶಕ್ತಿಯ ಮೂಲಕ ಸಂರಕ್ಷಿಸಿಕೊಂಡಾಗ ಮನೆಯ ಶಾಂತಿ ಒಂದೊಮ್ಮೆಗೇ ಧಕ್ಕೆ ಬರಲಾರದು. ನಮ್ಮ ದೇಹದಲ್ಲಿ ಷಟcಕ್ರಗಳು ವಿವಿಧ ನೆಲೆಯಲ್ಲಿ ತಂತಮ್ಮ ಜಾಗ್ರತಾವಸ್ಥೆ ಪಡೆದುಕೊಳ್ಳಲು ಸಾಧ್ಯವಾದಾಗ ನಮ್ಮಲ್ಲಿಯೇ ಎಲ್ಲವನ್ನೂ ನಿಯಂತ್ರಿಸುವ ಚೈತನ್ಯ ಒದಗಿ ಬರುತ್ತದೆ. 

ದಿವ್ಯದ ಸಾûಾತ್ಕಾರಕ್ಕೂ ಅವಕಾಶ ಇರುತ್ತದೆ. ಇತ್ತೀಚೆಗೆ ಮಲೆನಾಡಿನ ಒಂದು ಊರಿಗೆ ಹೋಗಿದ್ದಾಗಿನ ವಿಷಯ ವಿವರಿಸಲು ಯತ್ನಿಸುತ್ತಿದ್ದೇನೆ. ಅಲ್ಲಿ ತುಂಬಿ ತುಳುಕುವ ಶ್ರೀಮಂತಿಕೆ ಇದೆ. ಏನೂ ತೊಂದರೆ ಇರಲಾರದು ಶ್ರೀಮಂತರಿಗೆ ಎಂಬ ವಿಚಾರ ಸುಳ್ಳು ಎಂಬುದಕ್ಕೆ ಉದಾಹರಣೆಯಾಗಿ ಈ ಮನೆಯನ್ನು ಉದಾಹರಿಸಬಹುದು. ಇಲ್ಲಿ ಜಗಳಗಳಿಲ್ಲ. ಆದರೆ ಮನೆಯಲ್ಲಿನ ಶಾಂತಿ ಮಾತ್ರ ಕದಡಲ್ಪಟ್ಟಿದೆ. ಜಗಳಗಳಿರದೆಯೂ ಶಾಂತಿ ಇಲ್ಲವಾಗಿದೆ. ಕೋಟಿ ಲೆಕ್ಕವೇ ಇಲ್ಲ. ನೂರಾರು ಕೋಟಿಯ ಆಸ್ತಿ ಇದೆ.
ಅದ್ಭುತವಾದ ಮನೆ. ನೂರಾರು ಆಳುಕಾಳುಗಳು. ಆದರೆ ಮನಃಶಾಂತಿ ಇಲ್ಲ. ಏನು ಕಾರಣ? ವಾಸ್ತುವನ್ನು ಪರೀಕ್ಷಿಸಿ ಹೇಳುತ್ತೀರಾ? ಎಂದು ಮನೆಯ ಯಜಮಾನರು ವಿನಂತಿಸಿದರು. ಒಬ್ಬ ಕೋಟಿಗಳಷ್ಟು ಆಸ್ತಿಗಳ ಒಡೆಯ ಕೈ ಜೋಡಿಸಿ ವಾಸ್ತು ಪರೀಕ್ಷಿಸುತ್ತೀರಾ ಎಂದು ಅಳುಕುತ್ತಾ ಕೇಳಿದಾಗ ಕೆಲ ಲಕ್ಷಗಳ ವಿಚಾರ ಇರಲಿ ಕೆಲವು ಸಾವಿರಗಳಷ್ಟು ಹಣ ಓಡಾಡುವ ಒಬ್ಬ ಸಾಮಾನ್ಯನನ್ನಂಥವನ ಬಳಿ ವಿನಂತಿಸಿದಾಗ ನಿಜಕ್ಕೂ ನನ್ನ ಕಣ್ಣುಗಳು ಒದ್ದೆಯಾದವು. ಅವರ ಮನೆಯನ್ನು ಪರೀಕ್ಷಿಸಿದೆ. ಮನೆಯ ವಾಸ್ತು ವಿಚಾರದಲ್ಲಿ ಯಾವ ತೊಂದರೆಗಳು ಇಲ್ಲ. ಆದರೂ ತೊಂದರೆಗಳು ಧಾರಾಳವಾಗಿದ್ದವು. ಈ ತೊಂದರೆ ಬೇರೆ. 

ಮಗನು ಅಶಾಂತಿಯಲ್ಲಿದ್ದಾನೆ. ಯಾವ ತೊಂದರೆಯೂ ಇಲ್ಲ. ಸೊಸೆಯ ಜೊತೆ ಅತ್ತೆ ಮಾವ ಚೆನ್ನಾಗಿ ಹೊಂದಿಕೊಂಡೇ ಇದ್ದರು. ಆದರೆ ಮಗನಿಗೆ ಮತ್ತು ಸೊಸೆಗೆ ಸದಾ ಕಾದಾಟ, ಕಿರಿಕಿರಿಗಳು. ಹಿಂದಿನ ಕಾಲದಲ್ಲಿ ಮದುವೆಯ ಸಂದರ್ಭದಲ್ಲಿ ನವ ವಧೂವರರನ್ನು ಅಲಂಕರಿಸಿದ ಮೇನೆಯಲ್ಲಿ ಕೂಡಿಸಿ ಊರ ಬೀದಿಗಳಲ್ಲಿ ಓಲಗ, ವಾದ್ಯ, ಸಂಗೀತ ಸಲಕರಣೆಗಳೊಂದಿಗೆ ಸುತ್ತು ಹಾಕಿಕೊಂಡು ಬರುವ ಕ್ರಮವಿತ್ತು.  ಈ ಕೋಟಿ ಕೋಟಿ ಆಸ್ತಿಯ ಒಡೆಯರ ಮನೆಯಲ್ಲಿ ಗತಕಾಲದ ಮೇನೆ ಈಗಲೂ ಇದೆ. ಆದರೆ ಅದನ್ನು ಒಂದೆಡೆ ಮುರಿದು ಸೂಕ್ತವಲ್ಲದ ಕೋಣೆಯಲ್ಲಿ ಅಂದರೆ ಅಲಂಕಾರಿಕವಾಗಿ ಕಾಣುವಂತೆ ಅಂದವಾಗಿಯೇ ಕಾಣುವಂತೆ ಇರಿಸಿದ್ದಾರೆ. ಮುರಿದ ಪಲ್ಲಕ್ಕಿಯಂತೆ ಇವರ ವೈವಾಹಿಕ ಜೀವನವೂ ಮುರಿಯುತ್ತಿದೆ. ಆದರೆ ಇದೊಂದೇ ಕಾರಣವಲ್ಲ. ಅಶಾಂತಿಗೆ ಇನ್ನಷ್ಟು ಕಾರಣಗಳಿವೆ. ಆದರೆ ಇದನ್ನು ಕಾರಣವಲ್ಲ ಎಂದು ತೆಗೆದು ಹಾಕುವಂತಿಲ್ಲ. 


No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...