Friday, 31 August 2018

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ.
ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿಂದ ಅವರಿಗೆ ಜ್ಞಾನೋದಯವಾಗುತ್ತದೆ.

ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗ ಶೈಕ್ಷಣಿಕ ಪರಿಣತಿ ಸಾಧಿಸಲು ಪೂರ್ವ ದಿಕ್ಕಿಗೆ ತಿರುಗಿರಬೇಕು
ಪ್ರವಾಸ ಮಾಡುವಾಗ ಪಶ್ಚಿಮಕ್ಕೆ ಒಬ್ಬರು ತಲೆ ಹಾಕಿಕೊಂಡು ಮಲಗಬೇಕು.

ಮನೆ ನಿರ್ಮಾಣಕ್ಕೆ ಮುಂಚೆ ನಿವೇಶನದ ಈಶಾನ್ಯ ಮೂಲೆಯಲ್ಲಿ ವಾಸ್ತು ಮತ್ತು ಗಣಪತಿ ಪೂಜೆಯನ್ನು ನೆರವೇರಿಸಬೇಕು.
ಯಾವುದೇ ಕೆಲಸ ಮಾಡುವ ಮುಂಚೆ ಪೂಜೆಯನ್ನು ಮಾಡಬೇಕು.

ನೀರನ್ನು ತುಂಬಲು ತಾಮ್ರದ ಪಾತ್ರೆಯನ್ನು ಬಳಸಬೇಕು ಮತ್ತು ಹಣತೆ ಹಚ್ಚಲು ಹಿತ್ತಾಳೆಯನ್ನು ಬಳಸಬೇಕು
ಸ್ವಂತ ಮನೆಯಲ್ಲಿ ಕುಟುಂಬದ ಸದಸ್ಯರು ಪಶ್ಚಿಮ ದಿಕ್ಕಿಗೆ ತಲೆಇಟ್ಟುಕೊಂಡು ಮಲಗಬಾರದು. ಇದು ದುಃಖ ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ.

ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಬಾರದು.

 ಪೂಜೆಗೆ ಕಬ್ಬಿಣ, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಲ್ಯುಮಿನಿಯಂ ವಸ್ತುಗಳನ್ನು ಬಳಸಬಾರದು.

 ಪ್ರಾಣಿಗಳ ಹೋರಾಟದ, ಹಣ್ಣುಗಳು ಮತ್ತು ಹೂವುಗಳಿಲ್ಲದ ಮರ, ಸತ್ತ ಪ್ರಾಣಿಗಳು, ಮನೆಗೆ ಬಿದ್ದ ಬೆಂಕಿ, ಯುದ್ಧದ ದೃಶ್ಯಗಳ ಚಿತ್ರಗಳನ್ನು ನೇತುಹಾಕಬೇಡಿ

ಮನೆಯ ಉತ್ತರದ ಕಡೆ ತಡೆ ಇದ್ದರೆ ಅದು ಸಮೃದ್ಧಿಯನ್ನು ತಡೆಯುತ್ತದೆ. ನಗದು ಪೆಟ್ಟಿಗೆ ಅಥವಾ ಲಾಕರ್ ಬಿಂಬಿಸಲು ಕನ್ನಡಿಯೊಂದನ್ನು ನೇತುಹಾಕಿದರೆ ಅದು ಸಾಂಕೇತಿಕವಾಗಿ ಸಂಪತ್ತು ಮತ್ತು ಅವಕಾಶಗಳನ್ನು ಇಮ್ಮಡಿಗೊಳಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Monday, 27 August 2018

ನಿಮ್ಮ ಮನೆಗೆ ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು

1.ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.

2. ನಿಮ್ಮ ಮಲಗುವ ಕೋಣೆಯಲ್ಲಿ ಟೆಲಿವಿಷನ್ ಸೆಟ್ ಇಡಬಾರದು. ಆ ಅಭ್ಯಾಸ ಬಿಡಲಾಗದಿದ್ದರೆ ಟಿವಿ ವೀಕ್ಷಿಸಿದ ಬಳಿಕ ಪ್ಲಾಸ್ಟಿಕ್ ಟೇಬಲ್ ಕ್ಲಾತ್‌ನಿಂದ ಅದನ್ನು ಮುಚ್ಚಿರಿ.

3. ನಿಮ್ಮ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿಯಿರಬಾರದು. ಹಾಸಿಗೆಎದುರು ಕನ್ನಡಿಯಿದ್ದರೆ ಮ‌ೂರನೇ ವ್ಯಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ನಿಮ್ಮ ಇಷ್ಟಬಂದ ಕಡೆ ಕನ್ನಡಿಗಳನ್ನು ಇಡಬೇಡಿ.

4.ನಿಮ್ಮ ಮನೆಯಲ್ಲಿ ಒಳಾಂಗಣ ನೀರಿನ ಚಿಲುಮೆಯನ್ನು ಇಡಿ. ನಿಮ್ಮ ಜೀವನಕ್ಕೆ ಬೇಕಾದ್ದೆಲ್ಲ ಸಿಗಲು ಅನುಕೂಲಕರ ಸ್ಥಳದಲ್ಲಿಡಿ.

5. ಮನೆಯೊಳಗೆ ಈಗಾಗಲೇ ಮೀನಿನ ಟ್ಯಾಂಕ್ ಇದ್ದರೆ ಎಚ್ಚರವಾಗಿರಿ. ನಿಮ್ಮ ಮೀನಿನ ಟ್ಯಾಂಕ್ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾಗಿದ್ದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ, ನಿಮಗೆ ಕಾನೂನಿನ ದಾವೆಗಳು, ದಿವಾಳಿ, ಕೆಲಸದ ಒತ್ತಡ, ತೊಂದರೆಗಳು, ಸಮಸ್ಯೆಗಳು ಉದ್ಭವಿಸಬಹುದು. ಮೀನಿನ ಟ್ಯಾಂಕ್ ನಾಲ್ಕು ತಿಂಗಳವರೆಗೆ ಇರಿಸಿದ ಬಳಿಕ ಮೇಲಿನ ಯಾವುದನ್ನಾದರೂ ಗಮನಿಸಿದರೆ, ನಿಮ್ಮ ಮೀನಿನ ಟ್ಯಾಂಕನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿ. 

6. ಅಡುಗೆಮನೆಯಲ್ಲಿ ಸ್ಟವ್‌ಗೆ ಎದುರಾಗಿ ರೆಫ್ರಿಜಿರೇಟರ್, ವಾಷಿಂಗ್ ಮೆಷಿನ್, ವಾಷ್‌ಬೇಸಿನ್ ಮತ್ತು ಟಾಯ್ಲೆಟ್ ಇರದಂತೆ ಖಾತರಿ ಮಾಡಿ. ಬೆಂಕಿ ಮತ್ತು ನೀರಿನ ನಡುವೆ ಸಂಘರ್ಷದಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.

7. ಮಕ್ಕಳಿಗೆ ನೆಲದಲ್ಲಿರುವ ಚಾಪೆಯ ಮೇಲೆ ಮಲಗಲು ಅವಕಾಶ ಕೊಡಬೇಡಿ. ಇದರಿಂದ ಮಕ್ಕಳು ಮಂಚದ ಮೇಲಿನಿಂದ ಬೀಳದಿದ್ದರೂ, ಆಗಾಗ್ಗೆ ಅಸ್ವಸ್ಥತೆಗೆ ದಾರಿ ಕಲ್ಪಿಸುತ್ತದೆ. ಕಾರಣವೇನೆಂದರೆ ಹಾಸಿಗೆಯ ಕೆಳಗೆ ಶಕ್ತಿಸಂಚಲನ ಸಾಧ್ಯವಾಗುವುದಿಲ್ಲ. ಮಕ್ಕಳು ಮಲಗುವ ಹಾಸಿಗೆಯ ಸುತ್ತ ಶಕ್ತಿಯ ಚಲನೆಯಾಗುತ್ತಿದ್ದರೆ ಅವರು ಆರೋಗ್ಯದಿಂದಿರುತ್ತಾರೆ.

8. ನಿಮ್ಮ ಹಾಸಿಗೆಯನ್ನು ಗಟ್ಟಿಯಾದ ಗೋಡೆಗೆ ತಾಗಿಸಿ ಇರಿಸಬೇಕು. ಗಟ್ಟಿಯಾದ ಗೋಡೆಯಿದ್ದರೆ ನೀವು ಆಳವಾದ ನಿದ್ರೆಗೆ ಜಾರಬಹುದು ಮತ್ತು ಬೆಳಿಗ್ಗೆ ಏಳುವಾಗ ನೀವು ಪೂರ್ಣ ವಿಶ್ರಾಂತಿ ಪಡೆದು ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ.

9.ನಿಮ್ಮ ಹಾಸಿಗೆಯ ಮೇಲಿನಿಂದ ಬೆಳಕು ಬೀಳಬಾರದು. ಬೆಳಕು ಶಕ್ತಿಯ ಮೇಲೆ ಒತ್ತಡ ಹಾಕುವುದರಿಂದ ಜೀವನದಲ್ಲೂ ಒತ್ತಡಗಳು ಉಂಟಾಗುತ್ತದೆ.

10. ಅಮೃತಶಿಲೆಯ ಮೇಜು ನಿಮ್ಮ ಊಟದ ಕೋಣೆಯಲ್ಲಿದ್ದರೆ ಕೆಲಸದ ಒತ್ತಡ ಜಾಸ್ತಿಯಿರುತ್ತದೆ. ಅದನ್ನು ಬದಲಾಯಿಸಿ ಮರದ ಮೇಜನ್ನು ಇರಿಸಿ.

11. ನಿಮ್ಮ ಮಗು ಮಲಗುವ ಕೋಣೆಯಲ್ಲಿ ಅಸ್ವಸ್ಥತೆಗೆ ಗುರಿಯಾದರೆ ಇನ್ನೊಂದು ಕೋಣೆಗೆ ಮಗುವನ್ನು ಬದಲಾಯಿಸಿ ಅಥವಾ 6 ರಾಡ್‌ಗಳ ಲೋಹದ ವಿಂಡ್ ಚೈಮ್ ಕೋಣೆಯಲ್ಲಿ ನೇತುಹಾಕಿ. ಇದು ಕೋಣೆಯ ಸರ್ವ ಭೂಶಕ್ತಿಗಳನ್ನು ಒಡೆಯುತ್ತದೆ.

Monday, 20 August 2018

ಮನೆಯಲ್ಲಿ ಕಸಬರಿಗೆಗಳನ್ನು ತೆರೆದಿಟ್ಟರೆ ಏನೇನಾಗುತ್ತದೆ ಗೊತ್ತಾ?

ಮನೆಯಲ್ಲಿ ಕಸಬರಿಕೆಗಳಿರದೆ ನೆಲ ಒರೆಸುವ, ಮೇಜು, ಟೇಬಲ್‌, ಊಟದ ಟೇಬಲ್‌ ವರೆಸುವ ಬಟ್ಟೆ ತುಂಡುಗಳೇ ಇರದೆ ಯಾವ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರಿ¤ಯಾಗಿ ಯಾರಿಗೂ ಕಾಣಿಸದಂñ ೆಮುಚ್ಚಿಡುವುದು ಅವಶ್ಯವಾಗಿದೆ. ಈ ಕಸಬರಿಕೆ ಇತ್ಯಾದಿ ಮನೆಯೊಳಗೇ ಇರಲಿ. ಹೊರಗಡೆಯೇ ಇರಲಿ ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು. ಮನೆಯೊಳಗಿನವರಿಗೇ ಆಗಲಿ, ಮನೆಯ ಹೊರಗಿನವರಿಗೇ ಆಗಲಿ ಇದು ಕಾಣುವಂತಿರಬಾರದು.

ಇದಕ್ಕೆ ಕಾರಣ ಸರಳ. ಈ ಕಸಬರಿಗೆ ಇತ್ಯಾದಿಗಳು ಮಾನವನಲ್ಲಿ ಒಂದು ಕ್ಷಣ ಅವನೊಳಗೆ ಪ್ರವಹಿಸುವ ಧನಾತ್ಮಕ ಭಾವನೆಗಳನ್ನು ಒಮ್ಮೆ ಸ್ಥಂಬನಗೊಳಿಸಿ ಬಿಡುತ್ತದೆ. ಧನಾತ್ಮಕ ಭಾವನೆಗಳು ಒಮ್ಮೆ ತಟಸ್ಥಗೊಳ್ಳುವ ವಿಷಯ ಹದಿಗಟ್ಟಿತಾದರೆ ಮೊದಲಿನ ಸುಹಾಸಕರತೆಯಲ್ಲೆ ಅದನ್ನು ಮುಂದುವರೆಸಲು ಸಾಧ್ಯವಾಗದು. ಮನೆಯ ಹೊರಗಿನ ಜನರಿಗೆ ಕಸಬರಿಗೆಗಳು ಇತ್ಯಾದಿ ಕಾಣುವಂತಿದ್ದರೆ ಅದು ಆ ವ್ಯಕ್ತಿಗಳಲ್ಲಿ ನಕಾರಾತ್ಮಕ ಭಾವನೆಗಳನ್ನು ಹೊಂದಲು ಕಾರಣವಾಗಬಹುದು. ಧೂಳು ಜೇಡರ ಬಲೆ, ಕೊಳೆ ಹಾಗೂ ಕಸಗಳನ್ನು ತಮ್ಮಲ್ಲಿ ಹೊಂದಿರುವ ಕಸಬರಿಕೆ ಇತ್ಯಾದಿಗಳು ಶುಭ ಸೂಚಕವಾಗಿರಲು ಸಾಧ್ಯವಾಗದು ಎಂಬುದು ಒಂದೆಡೆಯಾದರೆ ಇದು ಮನಸ್ಸಿನ ಹೊಯ್ದಾಟಗಳಿಗೆ ಇನ್ನಿಷ್ಟು ವಿಚಾರಗಳನ್ನು ಒದಗಿಸಿ ನಿಷ್ಕಿ$›ಯತೆಯನ್ನು ಉಂಟು ಮಾಡಬಲ್ಲವು.

ಯಾಕೆ ಹೀಗಾಗುತ್ತದೆ ಎಂಬುದಕ್ಕೆ ನೇರ ಕಾರಣಗಳಿಲ್ಲ. ಒಂದು ಸುಂದರ ನಾಯಿಯನ್ನೋ,  ಮೊಲವನ್ನೋ, ಜಿಂಕೆಯನ್ನೋ ನೋಡುವುದಕ್ಕೂ, ಒಂದು ಇಲಿ ಒಂದು ಜಿರಲೆ ಅಥವಾ ತಿಗಣೆ ಅಥವಾ ಜೇಡವನ್ನು ಮನೆಯೊಳಗೆ ಕಾಣುವುದಕ್ಕೂ ವ್ಯತ್ಯಾಸವಿದೆ. ಯಾರ ಮನಸ್ಸೂ ಇಲಿ ಅಥವಾ ಜಿರಲೆಗಳನ್ನು ನೋಡುತ್ತಾ ಕ್ರಿಯಾಶೀಲವಾಗದು. ಇದೇ ಸೂತ್ರ ಕಸಬರಿಗೆಗಳು ಇತ್ಯಾದಿ ವಿಷಯದಲ್ಲೂ ನಾವು ವಿಶ್ಲೇಷಿಸಬಹುದು. ಮನಸ್ಸು ಬಹಳ ಸೂಕ್ಷ್ಮವಾದದ್ದು.
ಅದು ತನ್ನ ಆಯ್ಕೆಯನ್ನೂ, ನಿರಾಸಕ್ತಿಗಳನ್ನೂ ಒಬ್ಬರಿಂದ ಇನ್ನೊಬ್ಬರಿಗೆ ಬಹುತೇಕ ಸಂದರ್ಭಗಳಲ್ಲಿ 
ವಿಧವಿಧವಾಗಿ ಒಡಮೂಡಿಸುವುದು. ಸತ್ಯವಾದರೂ ಇಲಿ, ಜಿರಲೆ ಕಸಬರಿಕೆಗಳಂಥ ವಿಚಾರಗಳಲ್ಲಿ ವಿಧವಿಧವಾದ ಭಾವನೆಗಳನ್ನು ರೂಪುಗೊಳಿಸವು. ಕೇವಲ ಜಿಗುಪ್ಸೆ ಅಷ್ಟೇ. ಇದು ಎಲ್ಲರಿಗೂ ಸ್ವಾಭಾವಿಕ. ಎಲ್ಲರಲ್ಲೂ ಸ್ವಾಭಾವಿಕ.

ಅಡುಗೆ ಮನೆಯಲ್ಲಿ ಹೊರ ಜಗುಲಿಯಲ್ಲಿ ಕಸಬರಿಗೆಗಳು ಕಾಣುವಂತೆ ಇರಲೇ ಕೂಡದು. ಇದು ತಿನ್ನುವ ಅನ್ನ ತಿನಿಸುಗಳ ವಿಷಯದಲ್ಲಿ ಒಂದು ರೀತಿಯ ಅಭಾವವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಿನಲ್ಲಿ ಇಂಥ ಅಭಾವಗಳ ಸೃಷ್ಟಿಗೆ ನಮಗೆ ನಾವೇ ಅವಕಾಶ ಒದಗಿಸ ಬಾರದು. ಒಂದರ್ಥದಲ್ಲಿ ಮನೆ ಬಾಗಿಲ ಎದುರುಗಡೆ ಕಸಬರಿಕೆ ಇತ್ಯಾದಿಗಳನ್ನು ಮೇಲ್ಮುಖವಾಗಿ ಇಡುವುದು ದುಷ್ಟ ಹಾಗೂ ಅನಪೇಕ್ಷಿತ ಸ್ಪಂದನಗಳನ್ನು ಮನೆಯೊಳಗಡೆ ಬಂದು ಸೇರುವ ಕ್ರಿಯೆಗೆ ಪೂರಕವಾಗಿ ಒಳಿತಾಗಬಲ್ಲದು. ಆದರೆ ರಾತ್ರಿಯ ಹೊತ್ತು ಮಾತ್ರ ಇದ ಸ್ವಾಗತಾರ್ಹ.  ಹಗಲ ಹೆಗಲಿಗೆ ಇದು ಸಹವಾಸ ಬೇಡ.

ಇನ್ನು ಮನೆಯೊಳಗಿನ ಕಸ ಹಾಗೂ ಕೊಳೆಗಳನ್ನು ಧೂಳು ಹಾಗೂ ಮಣ್ಣನ್ನು ವಿಶೇಷವಾಗಿ ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಸಬರಿಗೆಗಳೀಂದ ಒತ್ತಿ ಝಾಡಿಸಿ ಹೊರದೂಡುವಂತೆ ಮಾಡಲೇ ಬಾರದು. ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಣ್ತಪ್ಪಿ ಬಿದ್ದ ಅಥವಾ ಬೆಲೆ ಬಾಳುವ ವಸ್ತುಗಳು ಹೊರ ತಳ್ಳಲ್ಪಡುವ ಸಾಧ್ಯತೆಗಳು ಇರುವುದರಿಂದ ರಾತ್ರಿಯ ಹೊತ್ತು ಕಸಬರಿಗೆಗಳ ಉಪಯೋಗ ಮಾಡಿದರೆ ಮನೆಯಲ್ಲಿ ಲಕ್ಷಿ$¾ದೇವಿ ನೆಲೆಯೂರಳು ಎಂಬ ನಂಬಿಕೆ ಇದೆ. ಕೆಲವು ವಿಚಾರಗಳು ಆಧುನಿಕತೆಯನ್ನು ಅಣಕಿಸುವಂತಿದ್ದರೂ ಲಾಗಾಯ್ತಿನಿಂದ ರೂಢಿಯಾಗಿ ಬಂದ ವಿಚಾರಗಳ ಕುರಿತು ಅಲಕ್ಷ್ಯ ಬೇಡ. ವರ್ತಮಾನದ ಆಧುನಿಕ ಬೆಳವಣಿಗೆಗಳು ಮಾನವನ ಎಲ್ಲ ನೋವು ಹಾಗೂ ಕಷ್ಟಗಳನ್ನು ನೀಗಿಸುವಷ್ಟು ಆಧುನಿಕವಲ್ಲ. ಹೀಗಾಗಿ ಯಾವುದೇ ಹಳೆಯ ವಿಚಾರವಲ್ಲ. ಅವೆಲ್ಲಾ ಆಧುನಿಕತೆ ಪೂರಕವಾಗೇ ಇರುತ್ತದೆ. 


Wednesday, 15 August 2018

ಮನೆ ಮತ್ತು ಮಧ್ಯ ಭಾಗ ಹೀಗಿರಲಿ

ಮನೆಯ ಮಧ್ಯಭಾಗ ಖಾಲಿಯಾಗಿರಬೇಕು. ಮಧ್ಯ ಭಾಗಕ್ಕೆ ಗೋಡೆಗಳು, ಕಪಾಟುಗಳು, ಮಂಚಗಳಿರದೆ ನಿರಾಳವಾಗಿರಬೇಕು. ಮಧ್ಯಭಾಗದಲ್ಲಿ ಹಳದಿ ಬಣ್ಣದ ಹಾಸು ಹಾಸಿರಬೇಕು. ಹೊರಭಾಗದ ಆಗಸದ ನೀಲಿಗೆ ಎದುರಾಗಿ ಹಳದಿ ಹಾಸಿನ ಭಾಗ ಸಮಾನತೆ ಪಡೆದ ಗ್ರಹಭಾವಗಳ ಶನಿ ಹಾಗೂ ಗುರು ಗ್ರಹಗಳ ಸಂಪನ್ನತೆ ಮನೆಯ ಪಾಲಿಗೆ ಸಿದ್ಧಿಯಾಗುತ್ತದೆ. ಈ ಮಧ್ಯಭಾಗದ ಸೂರಿನ ಜಂತಿಗೆ ಅಥವಾ ಗಟ್ಟಿಯಾದ ಲೋಹದ ಭಾಗಕ್ಕೆ ದೀಪ ಗುತ್ಛ ಜೋಡಣೆಗೊಂಡಂತೆ ಇಲ್ಲಾ ಫ್ಯಾನ್‌ ಜೋಡಿಸಿದರೆ ಮನೆಯ ಧನಾತ್ಮಕ ಶಕ್ತಿಗೆ ಹೆಚ್ಚು ತೂಕ ಸಂಪ್ರಾಪ್ತವಾಗುತ್ತದೆ.

ವಾಸ್ತುವಿನ ಸಂಬಂಧವಾಗಿ ಸಾವಿರಾರು ವಿಚಾರಗಳನ್ನು ನಮ್ಮ ಶಾಸ್ತ್ರಗಳು, ಪ್ರಪಂಚದ ಇತರೆ ನಾಗರಿಕ ಸಂಪ್ರದಾಯಗಳು ವಿವರಿಸಿವೆ. ಮನೆಯ ಪೂರ್ವಾದಿ ಅಷ್ಟ ದಿಕ್ಕುಗಳು ಬಗೆಗೆ ನಾವು ಜಾಗ್ರತೆ ವಹಿಸುತ್ತಿರುತ್ತೆವೆಯೋ ಹೊರತು ಮನೆಯ ಮಧ್ಯ ಭಾಗದ ಬಗೆಗೆ ನಾವು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಮುಖ್ಯವಾಗಿ ಬದುಕಿನ ನಮ್ಮ ಆರೋಗ್ಯದ ವಿಚಾರದಲ್ಲಿ ಮಧ್ಯಭಾಗ ಪ್ರಾಮುಖ್ಯವಾಗಿದೆ.  

ಏನೇ ಇದ್ದರೂ ಆರೋಗ್ಯವೇ ಸುಸಂಬದ್ಧತೆ ಹೊಂದಿರದೇ ಹೋದರೆ ಬದುಕು ಅಸಹನೀಯ ದೈಹಿಕ, ಹಾಗೆಯೇ ಮಾನಸಿಕ ಆರೋಗ್ಯ ಎರಡೂ ಮುಖ್ಯ. ಹೊರನೋಟಕ್ಕೆ ಏನೂ ತಿಳಿಯದಿದ್ದರೂ ನಮ್ಮ ನಡುವಣ ಅನೇಕಾನೇಕ ಮಂದಿ ದೈಹಿಕವಾಗಿ ಸುಖದಲ್ಲಿದ್ದಂತೆ ಕಂಡರೂ ಮಾನಸಿಕ ನರಳಾಟ ಅನುಭವಿಸುತ್ತಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾರೆ. ದೈಹಿಕವಾಗಿ ಗಟ್ಟಿತನವಿದ್ದರೂ ಅನೇಕ ಮಾನಸಿಕ ಸಮಸ್ಯೆಗಳು ಬದುಕನ್ನು ನರಕವಾಗಿಸ ಬಹುದಾಗಿದೆ. ಈ ವಿಚಾರದಲ್ಲಿ ಚಂದ್ರ ಮಹತ್ವದ ಪಾತ್ರ ನಿರ್ವಹಿಸುತ್ತಾನೆ. ಮನೆಯ ಮಧ್ಯಭಾಗದ     ಒಡೆತನ ಹೀಗಾಗಿ ಚಂದ್ರನದ್ದು ಮನೆಯ ಮಧ್ಯಭಾಗ ಅಂದರೆ, ಇದಕ್ಕೆ ಬ್ರಹ್ಮ ಬಿಂದು ಎಂದೂ ಹೆಸರಿದೆ. ಈ ಬ್ರಹ್ಮಬಿಂದುವಿನ ಚೈತನ್ಯಕ್ಕೆ ಚಂದ್ರನ ಬೆಂಬಲ ದೊರೆತಲ್ಲಿ ಅದು ಸ್ವಾರಸ್ಯಕರ ಗೃಹ ಸೌಖ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಮನೆಯ ಮಧ್ಯಭಾಗದಿಂದ ಆಕಾಶವು ಕಾಣುವಂತೆ ವ್ಯವಸ್ಥೆ ಇದ್ದರೆ ಉತ್ತಮ. ಚಂದ್ರನ ಮೋಹಕತೆ ಈ ಆಕಾಶದ ವ್ಯಾಪ್ತಿಯಲ್ಲಿ ಕಾಣಿಸುವಂತಿದ್ದರೆ ಉತ್ತಮ. ಅಂದರೆ ಮಧ್ಯಭಾಗದ ಸೂರಿಗೆ ಗಾಜನ್ನು ಕೂಡಿಸಿ ಬೆಳಕು ಒಳಬರುವಂತೆ ಜೋಡಣೆ ಇದ್ದರೆ ಬಹಳ ಸಂಪನ್ನತೆ ಸಾಧ್ಯ. ಈ ಗಾಜನ್ನು ಜೋಡಿಸಿದ ಗಾಜಿನ ಅಂಚಲ್ಲಿ ಹಸಿರು ಹುಲ್ಲುಗಳು ತೆಳ್ಳಗೆ ಚಿಗುರಿಕೊಂಡಿರಬೇಕು. 

ಮನೆಯ ಮಧ್ಯಭಾಗ ಖಾಲಿಯಾಗಿರಬೇಕು. ಮಧ್ಯ ಭಾಗಕ್ಕೆ ಗೋಡೆಗಳು, ಕಪಾಟುಗಳು, ಮಂಚಗಳಿರದೆ ನಿರಾಳವಾಗಿರಬೇಕು. ಮಧ್ಯಭಾಗದಲ್ಲಿ ಹಳದಿ ಬಣ್ಣದ ಹಾಸು ಹಾಸಿರಬೇಕು. ಹೊರಭಾಗದ ಆಗಸದ ನೀಲಿಗೆ ಎದುರಾಗಿ ಹಳದಿ ಹಾಸಿನ ಭಾಗ ಸಮಾನತೆ ಪಡೆದ ಗ್ರಹಭಾವಗಳ ಶನಿ ಹಾಗೂ ಗುರು ಗ್ರಹಗಳ ಸಂಪನ್ನತೆ ಮನೆಯ ಪಾಲಿಗೆ ಸಿದ್ಧಿಯಾಗುತ್ತದೆ. ಈ ಮಧ್ಯಭಾಗದ ಸೂರಿನ ಜಂತಿಗೆ ಅಥವಾ ಗಟ್ಟಿಯಾದ ಲೋಹದ ಭಾಗಕ್ಕೆ ದೀಪ ಗುತ್ಛ ಜೋಡಣೆಗೊಂಡಂತೆ ಇಲ್ಲಾ ಫ್ಯಾನ್‌ ಜೋಡಿಸಿದರೆ ಮನೆಯ ಧನಾತ್ಮಕ ಶಕ್ತಿಗೆ ಹೆಚ್ಚು ತೂಕ ಸಂಪ್ರಾಪ್ತವಾಗುತ್ತದೆ.
ಹಾಗೆಯೇ ಮನೆಯ ಮಧ್ಯಭಾಗದಲ್ಲಿ ವಿವಿಧ ಬಣ್ಣಗಳ ಹೂಗಳನ್ನು ಸಂಯೋಜಿಸಿಬಹುದು. ಹೆಚ್ಚು ತೂಕದ ತೊಲೆ ಅಥವಾ ಇತರ ಭಾರವಾದ ವಸ್ತುಗಳಲ್ಲಿ ಇರಕೂಡದು. ಮಧ್ಯಭಾಗದಲ್ಲಿ ಶೌಚಾಲಯವಾಗಲಿ, ಸಿಂಕ್‌ ಆಗಲಿ, ಇರಲೇಕೂಡದು. ಆರೋಗ್ಯದ ವಿಷಮತೆಗೆ ಕಾರಣವಾಗುತ್ತದೆ. 

ಮನೆಯ ಮಧ್ಯಭಾಗದಲ್ಲಿ ಸಿರಾಮಿಕ್‌ನಿಂದ ರೂಪಿಸಲ್ಪಟ್ಟ ಐದು ಕೊಳವೆಗಳನ್ನು ನಿರ್ಮಿಸಿ ಗಾಳಿ ಗಂಟೆಯನ್ನು ಹಾಕಬೇಕು. ಇದರಿಂದ ಹುಟ್ಟುವ ಘಂಟಾ ನಿನಾದಕ್ಕೆ ಮೃದುತ್ವ, ಮಾನಸಿಕ ನೆಮ್ಮದಿ ತರುವ ಹಿತವಾದ ಸ್ಪಂದನಗಳಿರುತ್ತವೆ. ಸ್ಪಟಿಕಾಚ್ಛಾದಿತ ಗಾಳಿ ಗಂಟೆ ಕೂಡಾ ಉತ್ತಮ. ಮುಖ್ಯವಾಗಿ ಇಲ್ಲೀಗ ಪ್ರಸ್ತಾಪಿಸಿದ ಐದು ಸಿರಾಮಿಕ್‌ ಕೊಳವೆಗಳು ಮಧ್ಯಭಾಗದ ಮನೆಯ ಬೆಂಬಲದ ಸಂಖ್ಯೆ 5 ಅನ್ನು ಸೂಚಿಸಿಸುತ್ತದೆ. ಹೀಗಾಗಿ 5 ಕೊಳವೆಗಳನ್ನು ಈ ಭಾಗದಲ್ಲಿ ಸ್ಥಾಯಿಗೊಳಿಸಬೇಕು. ಗುರುಗ್ರಹವೂ ಸಂಖ್ಯೆ 5ರಿಂದ ಸಂಕೇತಿಸಲ್ಪಡುವುದರಿಂದ ಗುರುವಿನ ಅನುಗ್ರಹಕ್ಕೂ ಇದು ಅನುಕೂಲಕರ. ಒಟ್ಟಿನಲ್ಲಿ ಮನೆಯ ಮಧ್ಯಭಾಗಕ್ಕೂ ಗುರು ಚಂದ್ರರ ಕಾರಣದಿಂದ ಉಂಟಾಗುವ ಗಜಕೇಸರಿ ಯೋಗದ ಸಂಪನ್ನತೆಯ ಒದಗಿಸುವ ಸುಖ ವಿಶೇಷಕ್ಕೂ ಉತ್ತಮವಾದ ಜೋಡಣೆ ಮತ್ತು ಸಂಬಂಧಗಳಿವೆ. 


Saturday, 11 August 2018

ಇರಬೇಕು ಒಂದು ಇಂಥ ಓದಿನ ಕೋಣೆ

ಮನೆ ಎಂದರೆ ಉಳಿಯಲು ಬೇಕಾದ ನಾಲ್ಕು ಗೋಡೆಗಳಿಗೆ, ಮೇಲ್ಛಾವಣಿಗೆ ಮಾತ್ರ ಬೇಕಾದ ತಾಣವಲ್ಲ. ಮನೆ ಎಂದರೆ ವಾಸಿಸಲು ಬೇಕಾದ ನಿರ್ಮಲ ಸ್ಥಳ. ವಾಸದ ಮನೆ ವಿಶ್ರಾಂತಿಗೆ ಅನುಪಮವಾದ ಅವಕಾಶ ಒದಗಿಸಿ, ಸಂಜೀವಿನಿಯಂತೆ ಬದುಕನ್ನು ತಿರುತಿರುಗಿ ಸಶಕ್ತಗೊಳಿಸಿ ಪುನರುತ್ಥಾನಕ್ಕೆ ದಾರಿಯಾಗಿಸುವ ಉಲ್ಲಾಸದ ಸ್ಥಳ. ಹಾಗೆಯೇ ಬುದ್ಧಿ ಶಕ್ತಿ, ಚಾತುರ್ಯ, ಸಮಯ ಪ್ರಜ್ಞೆ, ವಿನಯ, ಸದ್ಬುದ್ಧಿಗಳೊಂದಿಗೆ ಸಂಪನ್ನ ಸಂಸ್ಕಾರವನ್ನ ಒದಗಿಸುವ ನೆಲೆಯೂ ಆಗಿದೆ. 

ಮಾನವನ ಧೀ ಶಕ್ತಿಗೆ ಉತ್ತಮವಾದೊಂದು ಅಡಿಪಾಯ ಕೂಡ ವಾಸದ ಮನೆಯಲ್ಲಿ ದೊರಕಬೇಕು. ಶಾಲೆ, ಕಾಲೇಜು, ಗುರು ಕುಲಗಳಲ್ಲಿ ಓದು, ಬರಹ, ಪಾಠ, ಬೋಧನೆಗಳೆಲ್ಲ ದೊರಕಿದರೂ ಮನೆ, ಚಿಂತನೆಗೆ, ಮಂಥನಕ್ಕೆ, ಅಂತೆಯೇ ಇತರ ಅನೇಕ ವಿಚಾರಗಳನ್ನು ತಿಳಿಯುವ ಓದಿಗೆ ಸೂಕ್ತ ಭೂಮಿಕೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ ನಿರಂತರ ಅಭ್ಯಾಸನಗಳಿಗೆ ಮನೆ ಫ‌ಲವಂತಿಕೆಯ ಬೀಡೇ ಆಗಿದೆ. ಪಶ್ಚಿಮ ದಿಕ್ಕಿನಲ್ಲಿ ಓದುವ ಕೋಣೆಯೊಂದು ಮನೆಯಲ್ಲಿರುವುದು ಒಳ್ಳೆಯ ವಿಚಾರವಾಗಿದೆ. ನೈಋತ್ಯ ಮೂಲೆಯಲ್ಲಿ ಓದಿನ ಕೋಣೆ ಬರಬಾರದು. ವಾಯವ್ಯದ ಮೂಲೆಗೂ ಓದಿನ ಕೋಣೆ ಇರಬಾರದು. ಓದಿನ ಸತ್ವ ಈ ದಿಕ್ಕುಗಳಲ್ಲಿ ನೂಕಲ್ಪಡುತ್ತದೆ. 

 ಪಶ್ಚಿಮ ದಿಕ್ಕಿನ ಓದಿನ ಕೋಣೆಯಲ್ಲಿ ಓದಿನ ಶಕ್ತಿಗೆ ಸಂಪನ್ನತೆ, ಆರೋಗ್ಯಕರ ಸಮತೋಲನ ದೊರಕಿ ಬೌದ್ಧಿಕ ಹಾಗೂ ಮಾನಸಿಕ ವಿಕಾಸಗಳಿಗೆ ಅವಕಾಶ ಒದಗಿಬರುತ್ತದೆ. ಈ ದಿಕ್ಕಿನಲ್ಲಿ ಬುಧ,ಗುರು, ಶುಕ್ರ ಹಾಗೂ ಚಂದ್ರ ಗ್ರಹಗಳ 
ಶುಭಕಾರಕವಾದ ಪ್ರೇರಕ ಶಕ್ತಿ ಕೂಡಿಬರುತ್ತದೆ. ಈ ಎಲ್ಲಾ ಗ್ರಹಗಳೂ ಶುಭ ಗ್ರಹಗಳ ಪಟ್ಟಿಯಲ್ಲಿ ಸಮಾವೇಶಗೊಳ್ಳುತ್ತವೆ. ಈ ಶುಭಕಾರಕವಾದ ಶಕ್ತಿಯೇ ಬೌದ್ಧಿಕ ವಿಕಸನಕ್ಕೆ ಹೆದ್ದಾರಿ ರೂಪಿಸುವ ಧಾತವಾಗಿದೆ. ಬುಧನಿಂದ ಮೇಧಾ ಶಕ್ತಿ, ಗುರುವಿನಿಂದ ಜ್ಞಾನ, ಚಂದ್ರನಿಂದ ಮಾನಸಿಕ ಸ್ಥೈರ್ಯ, ಶುಕ್ರನಿಂದ ಸಂಕಲ್ಪಿತ ಕಾರ್ಯದಲ್ಲಿ ಮುಂದಡಿ ಇಡುವ ಇಚ್ಛಾಶಕ್ತಿಗಳು ಚಿಮ್ಮುಕೊಳ್ಳುತ್ತಿರುತ್ತವೆ. ಪ್ರಾಣಿಗಳಿಗಿಂತ ಮನುಷ್ಯ ಹೀಗೆ ಭಿನ್ನನಾಗುತ್ತಾನೆ. 

 ಈ ಭಿನ್ನ ಸಂವಿಧಾನದಿಂದಾಗಿ ಪಾಶವೀ ಗುಣ, ಕ್ರೌರ್ಯಗಳು ಮೂಲೆ ಸೇರಿ ಸಾತ್ವಿಕ ಮಾರ್ಗಕ್ಕೆ ಬಾಗಿಲು ತೆರೆದು ಕೊಳ್ಳುತ್ತದೆ. ಹುರುಪು, ಮಹತ್ವಾಕಾಂಕ್ಷೆ, ಪೂರಕ ಪ್ರಯತ್ನಗಳಿಗೆ ಸಿದ್ಧಿಯೂ ಸಾಧ್ಯ. ಶುಕ್ರನ ಮತ್ತೂಂದು ದೊಡ್ಡ ಶಕ್ತಿ ಎಂದರೆ ಪ್ರತಿಭೆಗೆ ಉದ್ದೀಪನೆ ನೀಡುವ ವಿಫ‌ುಲ ಉತ್ಸಾಹವನ್ನ ನೈಸರ್ಗಿಕವಾಗಿ ಒದಗಿಸಿಕೊಡುವ ಪ್ರಚೋದಕ ಕ್ರಿಯೆ. ಹೀಗೆ ಓದಿನಿಂದ, ಮಾತು, ಪ್ರತಿಭೆಯ ವಿಕಸನ, ವಿನಯಗಳ ಸಿದ್ಧಿ ಸಾಧ್ಯ. ಈ ಸಿದ್ಧಿಯಿಂದ ಜೀವನಕ್ಕೆ ಬೇಕಾದ ದ್ರವ್ಯ ಸಂಪಾದನೆಗಳಿಗೆ ಸಾತ್ವಿಕ ಅವಕಾಶಕ್ಕೆ ದಾರಿ ಸಿಗುತ್ತದೆ. ಮನೆಯಲ್ಲಿ ನಮ್ಮ ಓದು ಪೂರ್ವದ ಕಡೆ ಅಥವಾ ಉತ್ತರದ ಕಡೆ ಮುಖ ಮಾಡಿಯೇ ಇರಬೇಕು. ಓದಿನ ಕೋಣೆಯ ಗೋಡೆಗಳ ಬಣ್ಣ ಆಕಾಶ ನೀಲಿ ಅಥವಾ ಕೆನೆ ಬಣ್ಣದಲ್ಲಿದ್ದರೆ ಒಳ್ಳೆಯದು. ಬಿಳಿ ಅಥವಾ ಹಸಿರು ಬಣ್ಣಗಳೂ ಕೂಡ ಅನುಪಮವೇ ಆಗಿವೆ.

ನೆಲದ ಹಾಸುಗಳೂ ಕೂಡ ಇವೇ ಬಣ್ಣವನ್ನು ಹೊಂದಿದ್ದಲ್ಲಿ ಉತ್ತಮ ಫ‌ಲ ಸಿಗಬಹುದಾಗಿದೆ. ಓದಿನ ಕೋಣೆಯ ಕಿಡಕಿಗಳು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳಿಗೆ ಇದ್ದಿರುವುದು ಸೂಕ್ತ.

 ಪುಸ್ತಕಗಳು ಜೋಡಿಸಲ್ಪಟ್ಟು, ಓರಣವಾಗಿ ಅಭ್ಯಾಸದ ಕೋಣೆ ಇರುವುದು ಮುಖ್ಯ. ಚಲ್ಲಾಪಿಲ್ಲಿಯಾಗಿ ಪುಸ್ತಕಗಳು ಹರಡಿ ಹಂಚಿಕೊಂಡು ಇರಬಾರದು. ಪುಸ್ತಕಗಳ ಕಪಾಟುಗಳು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರುವುದು 
ಪ್ರಶಸ್ತವೆನಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕೂಡಾ ಪುಸ್ತಕದ ಕಪಾಟುಗಳನ್ನು ಇಡಬಹುದಾಗಿದ್ದು, ಉತ್ತಮ ಓದಿಗೆ ಇದು ಸಹಾಯಕವೇ. 

Monday, 6 August 2018

ವಾಸ್ತು ಮನದ ಮೂಲೆಯ ಭಯಕ್ಕೆ ಕಾರಣವಾಗದಿರಲಿ

ಜಗತ್ತು ಬಹುವಿಧದಲ್ಲಿ ವೈವಿಧ್ಯಪೂರ್ಣತೆಯಿಂದ ತುಂಬಿದೆ. ಜೀವಜಂತುಗಳನ್ನು ಲಕ್ಷಗಟ್ಟಲೆ ಪ್ರಬೇಧಗಳನ್ನು ಹೊಂದಿದೆ. ಸ್ವಭಾವದಲ್ಲಿ ಒಂದು ಜೀವದ ವಿಧಾನ ಇನ್ನೊಂದಕ್ಕೆ ವಿರೋಧಿಯಾಗುತ್ತದೆ. ಗಂಡ ಹೆಂಡತಿಯರೇ ಆದರೂ ಹೊಂದಾಣಿಕೆಗೆ ಕಷ್ಟವಾಗುತ್ತದೆ. ನೀರಿಗಿಂತ ರಕ್ತ ಹೆಚ್ಚು ಸಾಂದ್ರತೆಯದ್ದಾದರೂ ತಂದೆ ಮಕ್ಕಳಿಗೇ ಹೊಂದಾಣಿಕೆ ಬರಲಾರದು. ಮನದೊಳಗೆ ಪ್ರೀತಿಯಿದ್ದರೂ ಹೊರಗೆ ಕಟುವಾಗಿ ವರ್ತಿಸುವ ಮಂದಿ. ಏನೋ ಅಹಂ ಒಂದು ಒಳಗೆ ಸುರಕ್ಷಿತ. ಹೇಳುವುದು ಆಚಾರ ತಿನ್ನುವುದು ಬದನೆಕಾಯಿ ಎಂಬ ಮಾತು ಪ್ರತಿದಿನ ನಮ್ಮ ಗಮನಕ್ಕೆ ಬರುತ್ತಿರುತ್ತದೆ.  ಬೇರೆಯವರು ತಿನ್ನುವ ಬದನೆಕಾಯಿ ಬಗ್ಗೆ ತಿಳಿಯುವ ಜಾಣತನ ನಮಗಿದೆ. ನಮ್ಮದನ್ನು ನಾವು ವೈಯುಕ್ತಿಕವಾಗಿ ಗಮನಿಸಲಾರೆವು. ಇದೊಂದು ಚೋದ್ಯ. ಹೀಗಾಗಿ ಆಹಾರ, ನಿದ್ರಾ, ಮೈಥುನಾದಿ ಅವಶ್ಯಕತೆಗಳ ಮೂಲಭೂತ ವಿಚಾರಗಳೊಂದಿಗೆ ಭಯವೂ, ಪ್ರಾಣಗಳನ್ನು ಮಾನವನೂ ಒಂದು ಪ್ರಾಣಿಯಾದ್ದರಿಂದ ಅದು ನಮ್ಮನ್ನು ಸುತ್ತಿಕೊಂಡಿತು.

 ಹೀಗಾಗಿ ಆಹಾರ ನಿದ್ರಾ ಭಯ ಮೈಥುನಗಳು ನಮಗೆ ಅನಿವಾರ್ಯ. ಆಹಾರಕ್ಕಾಗಿ ಶ್ರಮ ಬೇಕು. ಶ್ರಮದ ಕಾರಣದಿಂದ ನಿದ್ರೆ ಬೇಕು. ಜೀವ ಜಾಲರಿಯಲ್ಲಿ ಜೀವಗಳ ಕೋಟಿ ಕೋಟಿ ಮಿಸುಕಾಟಗಳು ಕಾಮದ ನೀಲಾಂಜನದ ಬತ್ತಿ ಉರಿಸಿ ಮೈಥುನವನ್ನು ಅನಿವಾರ್ಯವಾಗಿಸಿತು. ನಮ್ಮನ್ನು ನಾವು ಪುನರ್‌ ರೂಪಿಸಿಕೊಳ್ಳುವ ಸಂತಾನಾಭಿವೃದ್ಧಿ ಅತ್ಯಗತ್ಯವಾದ ವಿಷಯ. ಈ ಎಲ್ಲದರ ನಡುವೆ ಏನೋ ಭಯ ಆತಂಕ ಅಸುರಕ್ಷತೆ ಪಾಪಭೀತಿ ಬೆನ್ನು ಬಿಡದು.

 ಈ ಕಾರಣದಿಂದಲೇ ಮೆದುಳಿನ ಸರ್ವೋತ್ಕೃಷ್ಟ ಬೆಳವಣಿಗೆಗೆ ಅವಕಾಶ ಒದಗಿದ್ದು ನೆಲೆಗಟ್ಟಾಗಿ ಮಾನವ ಸಾಮಾಜಿಕ ಜೀವಿಯಾದ. ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳಲು ಮನೆ, ವಠಾರ, ಬೀದಿ, ಊರು, ರಾಜ್ಯ, ಮೋಹ, ಸ್ವಾರ್ಥ, ಅತಿಯಾದ ವಿಷಯಾಸಕ್ತಿ, ಹೊನ್ನು ಮಣ್ಣುಗಳಿಗಾಗಿನ ಅತಿಯಾದ ಆಕಾಂಕ್ಷೆ, ಹೆಣ್ಣು ಗಂಡಿಗೆ ಗಂಡು ಹೆಣ್ಣಿಗೆ ಮಾಯೆಯಾಗಿ ಒದಗಿ ಚಿಮ್ಮುವ ಭೋಗಕ್ಕಾಗಿನ ಲಾಲಸೆ ಇತ್ಯಾದಿ ಇತ್ಯಾದಿ ಮನುಷ್ಯ ಮನುಷ್ಯನಾಗಲು ಬಿಡಲಿಲ್ಲ. ಮನುಷ್ಯನಾಗದೆ ಬದುಕಿ ಬಾಳಲು ಸಾಧ್ಯವಾಗಲಿಲ್ಲ. 

 ಈ ಸಂದರ್ಭದಲ್ಲಿ ಮನುಷ್ಯನ ನೆರವಿಗೆ ಬಂದದ್ದು ಅವನೊಳಗಿನ ಪ್ರತಿಭೆ. ಮಾತು, ಸಂಗೀತ, ನೃತ್ಯ ಶಿಲ್ಪ ಸಂಗೀತ ಕಸೂತಿ ಕುಸುರೀ ಕಲೆ, ಉಡುಪು, ಒಡವೆ, ಸುಗಂಧ, ಹೂವು ಹಣ್ಣು , ಅಡುಗೆ ಇತ್ಯಾದಿ ಇತ್ಯಾದಿ. ಆದರೆ ಇವನ್ನೆಲ್ಲಾ ಪ್ರತಿಭೆಯ ಮೂಲಕ ಸಾಂಸ್ಕೃತಿಕ ಸಂವಿಧಾನಕ್ಕೆ ಒಳಪಡಿಸಿದ ಮನುಷ್ಯ ತನ್ನ ಸಂವಿಧಾನದಲ್ಲಿ ತಾನು ಬಂಧಿಯಾಗಿರಲೂ ಬಯಸದ ಮೃಗೀಯತೆಯನ್ನು ಬಿಡದಾದ. ಹೀಗಾಗಿ ಅಸಂತೋಷಗಳಿಗೆ ಕಾತರ ಕಿರಿಕಿರಿ ಮಾನಸಿಕ ವಿಹ್ವಲತೆಗಳಿಂದ ನರಳಲ್ಪಟ್ಟ. ಹಾಗಾದರೆ ಮನುಷ್ಯನ ಮೇಲೆ ಕೇವಲ ಅವನ ಇಚ್ಛಾಶಕ್ತಿ ಸ್ಥೈರ್ಯ, ಧೈರ್ಯಗಳು ಮಾತ್ರ ಇದ್ದರೆ ಎಲ್ಲವೂ ಸುಸೂತ್ರವೇ. ಇಲ್ಲ ಎಂಬುದು ಉತ್ತರವಾದಾಗ ಹಾಗಾದರೆ ಏನು ಎಂಬ ಪ್ರಶ್ನೆ ಎದುರಾಯ್ತು.

 ದೇವರು ಗ್ರಹಗಳ ಪ್ರಭಾವ, ವಾಸ್ತು ಪರಿಶುದ್ಧತೆ, ಸತ್ಯ, ನ್ಯಾಯ, ಧರ್ಮಗಳೆಂಬ ವೈಚಾರಿಕ ಮಂಥನ ಮನುಷ್ಯನಿಂದ ತನ್ನ ನೆಲೆ ಕಂಡುಕೊಳ್ಳಲು ಪ್ರಾರಂಭವಾಯ್ತು. ಆದರೆ ದೇವರುಗಳ ಬಗೆಗೆ, ಗ್ರಹಗಳ ಬಗೆಗೆ ಭಯ ಹುಟ್ಟಿಸುವ ಬುದ್ದಿವಂತರು ಧನದಾಹಕ್ಕೆ ತುತ್ತಾಗೆ ಕ್ರೂರಿಗಳಾದರು. ಇದರ ಅರ್ಥ ಎಲ್ಲರೂ ಎಂದಲ್ಲ. ಹೀಗಾಗಿ ಮನುಷ್ಯ ಮನುಷ್ಯನಾಗಬೇಕೇ ವಿನಃ ದೇವರೂ ಆಗಬಾರದು. ಮೃಗವೂ ಆಗಬಾರದು. ವಾಸ್ತು ಶಿಸ್ತು ಅಗತ್ಯ. ಅದಿರದಿದ್ದಲ್ಲಿ ಮನೆಯ ಪ್ರಸನ್ನತೆ ಏರುಪೇರಾಗುತ್ತದೆ. ಆದರೆ ನಿಧಾನವಾಗಿ ಸರಿಯಾಗಿ ತಿಳಿದವರಿಂದ ಒಂದೇಟಿಗೆ ಎಂಬಂತೆ ಅವಸರವನ್ನು ತೋರದೆ ವಾಸ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು. ಇದನ್ನು ಬಿಟ್ಟು ಒಳ ಹೃದಯದಾಳದಲ್ಲಿ ಅವ್ಯಕ್ತ ಭಯ ಪಟ್ಟುಕೊಂಡು ಅಸ್ತವ್ಯಸ್ತವಾಗದಿರಿ. ನಿಮ್ಮ ಮನಸ್ಸು ದೃಢವಾಗಿರಲಿ. ಪ್ರತಿ ಹಂತಗಳನ್ನು ನಿಧಾನವಾಗಿ ದಾಟಿ ಒಳಿತುಗಳಿಗೆ ಭಯ ತೊರೆದು ದಾರಿ ಮಾಡಿಕೊಡಿ. 

Thursday, 2 August 2018

ಆಧುನಿಕ ಉಪಕರಣಗಳು ಮತ್ತು ಮನೆ

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯವಾದೊಂದು ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ. ನಿಜ ಹೇಳಬೇಕಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು ವರ್ಧಿಸುತ್ತ ಹೋಗಬೇಕಿತ್ತು. ಆದರೆ ನಾವು ಇಂದು ಬದುಕುತ್ತಿರುವ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಅನಿಸುತ್ತದೆಯೇ? ದೂರದ ಅಮೆರಿಕಾ ಎಷ್ಟು ಹತ್ತಿರವಾಗಿದೆಯೆಂದರೆ ಅಮೆರಿಕದವರಿಗೂ ಭಾರತ ಅಪರಿಚಿತವಾದೊಂದು ದೇಶವಲ್ಲ. ಇದು ತಮಗೆ ಬೇಕೆಂದಾಗ ದೇಶ ಅನಿವಾರ್ಯವಾಗಿ ನಾವು ಆಶ್ರಯಿಸಿ ಇರಬೇಕಾದ ದೇಶ ಎಂಬ ಅವರ ಮನೋಭಾವವನ್ನು ಗಮನಿಸುತ್ತಾ ಎಷ್ಟು ಹತ್ತಿರ ತಲುಪಕೂಡದೋ ಅಷ್ಟು ಹತ್ತಿರ ಬರುತ್ತಿದೆ.

ಆಧುನಿಕತೆಯ ಹೆಸರಿನಲ್ಲಿ ಅಮೆರಿಕಾ ಹತ್ತಿರವಾದದ್ದು. ನಮ್ಮನ್ನು ನಾವು ನಮಗೆ ಬೇಕಾದುದಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸುತ್ತಿದ್ದೇವೆ ನಮ್ಮ ಮನೆಗಳನ್ನು. ಈ ಕಾರಣದಿಂದ ನಮ್ಮ ಮನೆಗಳು ನಮಗೆ ಜೀವನೋಲ್ಲಾಸವನ್ನು ಚಿಮ್ಮಿಸುವ ವಿಚಾರದಲ್ಲಿ ಕಟ್ಟಲ್ಪಡದೆ ಸಂಯೋಜಿಸಲ್ಪಡದೆ ಮನೆಮನೆಯ ಶಾಂತಿ ಹಾಗೂ ನೆಮ್ಮದಿಗಳು ಒಂದು ರೀತಿಯ ಶುಷ್ಕ ನೆಲೆಯಲ್ಲಿ ಸಪ್ಪೆಯಾಗತೊಡಗಿದೆ. ಶುಷ್ಕ ನೆಲೆಗಳೇ ನಮ್ಮ ಆಧುನಿಕತೆಯನ್ನು ಪ್ರತಿಪಾದಿಸುತ್ತಿರುವ ಕೀಲಿ ಕೈಗಳಾಗಿರುವುದರಿಂದ ನಮ್ಮ ಸಾಂಸ್ಕೃತಿಕ ಚೌಕಟ್ಟು ಸಮತೋಲನ ಕಳೆದುಕೊಂಡಿದೆ. ಆಧುನಿಕ ಉಪಕರಣಗಳಾದ ಫ್ರಿಡುj, ಟೀ, ಓವನ್‌ ಮೈಕ್ರೋವೇವ್‌, ಗೀಸರ್‌, ಲಿಫ್ಟ್, ವ್ಯಾಕ್ಯೂಮ್‌ ಕ್ಲೀನರ್‌ ಇತ್ಯಾದಿ ಇತ್ಯಾದಿ ಅಸಂಪ್ರದಾಯಿಕವಾದ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ. ಇದರಿಂದಾಗಿ ವಿವಿಧ ರೀತಿಯ ನಕಾರಾತ್ಮಕ ಸ್ಪಂದನಗಳು ಮನೆಯನ್ನು ಆಕ್ರಮಣ ಮಾಡಿ ಹಿಂಸಿಸುತ್ತದೆ.

ಉದಾಹರಣೆಗೆ ಫ್ರಿಡುj ಹಾಗೂ ಗ್ಯಾಸಿನ ಒಲೆಯ ಗ್ಯಾಸಿನ ಸಿಲಿಂಡರ್‌ ಅಂತರಗಳು ಸದಾ ಮುಖ್ಯವಾದ ಸ್ವಿಚ್‌ ಒಂದು ಟೀವಿಯಲ್ಲಿ ವಿಸಿಆರ್‌ ಇತ್ಯಾದಿಗಳು ಆರಿಸದೇ ಇರುವುದು ತಪ್ಪು$ದಿಕ್ಕಿನಲ್ಲಿ ಟೀವಿಯನ್ನೋ ವಿಸಿಆರ್‌ ಅನ್ನೋ ಕೂಡಿಸುವುದು ಓವನ್‌ ಅಥವಾ ಮೈಕ್ರೋವೇವ್‌ ಉಪಕರಣಗಳನ್ನು ತಪ್ಪಾದ ಕಡೆ ಸಂಯೋಜಿಸುವುದು ಗೀಸರ್‌ ಅನ್ನು ಒಂದೆಡೆ ಬಚ್ಚಲಿಗೆ ತಗುಲಿ ಹಾಕುವುದು ಇತ್ಯಾದಿ ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ. 

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ ನಿಣದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ. ಈ ಸಂದರ್ಭದಲ್ಲಿ ಹೈಟೆನÒನ್‌ ವಿದ್ಯುತ್‌ ಕಂಬಗಳು ಹೈಟೆನÒನ್‌ ಲೋಡಿರುವ ವೈರುಗಳು ಜಾಲಾಡಿಕೊಂಡಿರುವ ಮನೆಯ ಹೊರವಲಯದ ಜೋಡಣೆಗಳ ವಿಚಾರವನ್ನು ಮನದಟ್ಟು ಮಾಡಿಕೊಂಡು ವಿದ್ಯುತ್‌ ಬಗೆಗೆ ಸೂಕ್ತ ಮಾಹಿತಿ ಇರುವ ತಜ್ಞರಿಂದ ಪಶ್ಚಿಮವೂ ತೊಂದರೆಗೆ ಈಡಾಗುವ ಬಿಂದುವೇ ಎಂಬುದನ್ನು ತಿಳಿದುಕೊಳ್ಳಿ. ಟೀವಿಯನ್ನಾಗಲೀ ಕಂಪ್ಯೂಟರ್‌ನ್ನಾಗಲೀ ಮಲಗುವ ಕೋಣೆಯಲ್ಲಿ ಇಡಲೇ ಕೂಡದು. ಇದು ಮಾನಸಿಕವಾದ ಅಂತರ್‌ ವಲಯವನ್ನು ಮೆದುಳಿನ ಸೂಕ್ಷ್ಮ ಕೋಶಗಳನ್ನು ಬಾಧಿಸುವ ವಿಚಾರವಾಗಿರುವುದರಿಂದ ಟೀ ಕಂಪ್ಯೂಟರ್‌ ಹಾಗೂ ಮೊಬೈಲ್‌ ವಿಷಯದಲ್ಲಿ ಟೆಲಿಫೋನಿನ ಲ್ಯಾಂಡ್‌ ಲೈನ್‌ ವಿಚಾರದಲ್ಲಿ ಎಚ್ಚರವಾಗಿರಿ. ಅನಪೇಕ್ಷಿತ ವಿಚಾರವನ್ನು ತಿಳಿದು ಜಾಗರೂಕತೆಯಿಂದ ವರ್ತಿಸಿ. 

ಇನ್ನು ಎಷ್ಟೇ ಆದರೂ ಉಂಟಾಗುವ ಪಡಿಪಾಟಲುಗಳಿಂದಾಗಿ ದೇವರ ಮನೆಯಲ್ಲಿ ದೇವರ ಪೀಠ ಇರಿಸುವ ಕಟ್ಟೆಯ ಕೆಳಗಡೆ ಹವಳವನ್ನು ಇಟ್ಟು ಕಟ್ಟೆ ಕಟ್ಟುವುದು ಸೂಕ್ತ ವಿಚಾರ. ಧರಣಿ ಗರ್ಭಸಂಭೂತನಾದ ಅಂಗಾರಕನೇ ವಿದ್ಯುತ್‌ ಉಪಕರಣಗಳ ವಿಷಯದಲ್ಲಿ ನಿಯಂತ್ರಣಕ್ಕಾಗಿ ಜವಾಬ್ದಾರಿಯನ್ನು ಹೊತ್ತ ಗ್ರಹವಾದ್ದರಿಂದ ಹವಳವು ಪ್ರಧಾನವಾದ ದೇವರ ಕೋಣೆಯಲ್ಲಿ ಸೇರಿಕೊಂಡಿರುವುದು ಸೂಕ್ತವಾಗಿದೆ. 

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...