Wednesday, 25 September 2019

ಮನೆಯಲ್ಲಿ ಸಿರಿ ಸಂಪತ್ತು ತುಂಬಿರಲು ಶುಕ್ರವಾರದಂದು ಈ ರೀತಿ ಪೂಜೆ ಮಾಡಿ

ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಸಂಪತ್ತಿನ ಅಧಿದೇವತೆ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಹಾಗೇ ಶುಕ್ರವಾರದಂದು ಈ ರೀತಿ ಪೂಜೆ ಮಾಡಿದರೆ ಮನೆಯಲ್ಲಿ ಸಿರಿ ಸಂಪತ್ತು ತುಂಬಿರುತ್ತದೆಯಂತೆ.

ಶುಕ್ರವಾರದ ದಿನ ಈ ದೇವಿಗೆ ಪ್ರತಿರೂಪವಾದ ಸರಸ್ವತಿ, ದೇವಿಯ ಲಲಿತಾ ತ್ರಿಪುರ ಸುಂದರಿ, ಲಲಿತಾ ಪರಮೇಶ್ವರಿ, ಇವರನ್ನು ಪೂಜಿಸುವುದರಿಂದ ಸಹ ಸಿರಿ ಸಂಪತ್ತು ಲಭಿಸುತ್ತದೆ. ಶುಕ್ರವಾರದ ದಿನ ಮೊದಲಿಗೆ ಮನೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ತಲೆಸ್ನಾನವನ್ನು ಮಾಡಬೇಕು.


ಶುಕ್ರವಾರದ ದಿನ ವಿಷ್ಣುವಿನ ಪ್ರತಿರೂಪವಾದ ಪದ್ಮ ರಂಗೋಲಿಯನ್ನು ಹಾಕಿ ಲಕ್ಷ್ಮೀದೇವಿಯನ್ನು ಮನೆಯೊಳಗೆ ಆಹ್ವಾನಿಸಬೇಕು. ತುಳಸಿ ಕಟ್ಟೆಗೆ ಅರಿಶಿನ, ಕುಂಕುಮದಿಂದ ಅಲಂಕಾರ ಮಾಡಿ ದೀಪಾರಾಧನೆ ಮಾಡಬೇಕು. ಹೀಗೆ ಮಾಡುವುದರಿಂದ ಸಿರಿಸಂಪತ್ತನ್ನು ನಿಮ್ಮದಾಗಿಸಿಕೊಳ್ಳಬಹುದು.

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...