ವಾಸ್ತುಶಾಸ್ತ್ರದ ಪ್ರಕಾರ, ಶೌಚಾಲಯ ಮತ್ತು ಸ್ನಾನದ ಮನೆಗಳು ಮನೆಯ ಋಣಾತ್ಮಕ ಶಕ್ತಿಯ ಮೂಲಸ್ಥಾನಗಳು. ಹೀಗಾಗಿ, ಅವುಗಳ ನಿರ್ಮಾಣ ಮತ್ತು ದಿಕ್ಕಿನ ಕುರಿತು ತಜ್ಞರೊಂದಿಗೆ ಸಮಾಲೋಚಿಸಬೇಕಾಗುತ್ತದೆ. ಅವುಗಳನ್ನು ವಾಸ್ತು ಮಾರ್ಗದರ್ಶನಗಳ ಪ್ರಕಾರ ಕಟ್ಟದಿದ್ದರೆ, ಮನೆ ಮತ್ತು ಮನೆಯಲ್ಲಿ ವಾಸಿಸುವ ಜನರ ಮೇಲೆ ಅವು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಮನೆಯೊಳಗೆ ಋಣಾತ್ಮಕ ಶಕ್ತಿಯ ಪ್ರವೇಶವನ್ನು ತಡೆಯಲು, ಹಿಂದಿನ ಕಾಲದಲ್ಲಿ ಭಾರತೀಯ ಮನೆಗಳಲ್ಲಿ ಋಣಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಲು ಶೌಚಾಲಯ ಮತ್ತು ಸ್ನಾನದ ಮನೆಗಳನ್ನು ಮನೆಯಿಂದ ಹೊರಗೆ ಕಟ್ಟಲಾಗುತ್ತಿತ್ತು; ಆದರೆ ಎಲ್ಲಾ ಸಂದರ್ಭಗಳಲ್ಲೂ ಹಾಗೆ ಮಾಡಲು ಸಾಧ್ಯವಿಲ್ಲವಾದ್ದರಿಂದ, ನಾವು ಮನೆ ನಿರ್ಮಿಸುವ ಸಮಯದಲ್ಲೇ ಶೌಚಾಲಯ ಮತ್ತು ಸ್ನಾನದ ಮನೆಗಾಗಿ ವಾಸ್ತುವನ್ನು ಅನುಸರಿಸಬೇಕಾಗುತ್ತದೆ. ಅಪಾರ್ಟ್‌ಮೆಂಟಿನಲ್ಲಿ ದೋಷಪೂರ್ಣ ಟಾಯ್ಲೆಟ್ ನಿರ್ಮಾಣದಿಂದ ಉಂಟಾದ ದೋಷಗಳನ್ನು ಸರಿಪಡಿಸಲೂ ಸಹ ವಾಸ್ತುವಿನಲ್ಲಿ ಪರಿಹಾರ ಕ್ರಮಗಳು ಲಭ್ಯವಿವೆ.
ಋಣಾತ್ಮಕ ಶಕ್ತಿಯ ಹರಿವನ್ನು ತಡೆಯಲು ಟಾಯ್ಲೆಟ್ / ಬಾತ್‌ರೂಮನ್ನು ಉಪಯೋಗಿಸದೇ ಇರುವಾಗಲೂ ಅವುಗಳ ಬಾಗಿಲನ್ನು ಮುಚ್ಚಿರಿ. ವಾಸ್ತುವಿನ ಹಲವು ಅಂಶಗಳಲ್ಲಿ ಒಂದು ಅಂಶವೆಂದರೆ, ಅದು ಹಿತಕರವಾದ ಸುವಾಸನೆ. ಟಾಯ್ಲೆಟಿನಿಂದ ಹೊರಬರುವ ಕೆಟ್ಟ ವಾಸನೆ ನಕಾರಾತ್ಮಕತೆಗೆ ಎಡೆ ಮಾಡಿಕೊಡುತ್ತದೆ, ಹೀಗಾಗಿ ಬಾಗಿಲನ್ನು ಪೂರ್ತಿ ಮುಚ್ಚಿರಬೇಕು.
ನಿಮ್ಮ ಮಗು ಅಧ್ಯಯನ ಮಾಡುವ ಟೇಬಲ್, ಟಾಯ್ಲೆಟ್ ಹತ್ತಿರವಿದೆಯೇ? ಅಧ್ಯಯನ ಮಾಡುವಾಗ ಟಾಯ್ಲೆಟ್ ಅಥವಾ ಬಾತ್‌ರೂಮ್ ಎದುರು ಕುಳಿತುಕೊಳ್ಳಬಾರದು; ಹೀಗೆ ಮಾಡುವುದು ನಿಮ್ಮ ಮಗುವಿನ ಗಮನ ಕೇಂದ್ರೀಕರಣದ ಮೇಲೆ ಪ್ರಭಾವ ಬೀರುತ್ತದೆ. ಟಾಯ್ಲೆಟ್‌ಗಳು ಋಣಾತ್ಮಕವಾಗಿ ಮನಸ್ಸನ್ನು ಚಂಚಲಗೊಳಿಸುತ್ತವೆ; ಹೀಗಾಗಿ ಅಧ್ಯಯನ ಮಾಡುವಾಗ ಮಗು ಅದರಿಂದ ದೂರವಿರಬೇಕು.
ನೀವು ಬಾತ್‌ರೂಮ್‌ನಲ್ಲಿ ಕನ್ನಡಿ ಇರಿಸುತ್ತೀರಾ? ವಾಸ್ತು ಪ್ರಕಾರ ಟಾಯ್ಲೆಟ್ ಮತ್ತು ಬಾತ್‌ರೂಮ್‌ನಲ್ಲಿ ಯಾವುದೇ ಕನ್ನಡಿ ಇರಿಸಬಾರದು, ಇರಿಸಿದರೆ ಅದು ಋಣಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಮತ್ತು ಮನೆಯಲ್ಲಿ ವಾಸಿಸುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕನ್ನಡಿಗಳನ್ನು ಸರಿಯಾದ ಸ್ಥಳದಲ್ಲಿರಿಸಿದರೆ ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಾಧ್ಯವಿದೆ.
ಜನರು ಅನುಸರಿಸಬಹುದಾದ ಕೆಲ ಸುಲಭ ವಾಸ್ತು ಉಪಾಯಗಳು ಈ ಕೆಳಗಿನಂತಿವೆ: –

No comments:
Post a Comment