ನಿಯಮಗಳು ಯಾವಾಗಲೂ ಬದಲಾಗುವ ಕಾಲವನ್ನು ಮೊತ್ತಮೊದಲಾಗಿ ಊಸಿಕೊಂಡೆ ರೂಪಿತಗೊಳ್ಳುತ್ತದೆ ಎಂಬುದು ವಾಸ್ತವಿಕ ಸತ್ಯವಾದರು ಎಲ್ಲಾ ಸಂದರ್ಭಗಳಲ್ಲಿ ಅದು ಸಮರ್ಪಕವಾಗಿ ಇದ್ದಿರಲು ಸಾಧ್ಯಲ್ಲ. ವಾಸ್ತುಶಾಸ್ತ್ರದ ಪ್ರಮುಖ ಉದ್ದೇಶ ಮನೆಯ ಶಕ್ತಿ ತರಂಗಗಳನ್ನು ಮನೆಯ ಯಜಮಾನನನ್ನು ಮುಖ್ಯವಾಗಿರಿಸಿಕೊಂಡು ಯಜಮಾನನೂ ಸೇರಿದಂತೆ ಮನೆಯ ಸದಸ್ಯರೆಲ್ಲರ ಒಳಿತುಗಳನ್ನು ಅನುಲಕ್ಷಿಸಿ, ಒಳಿತಿಗಾಗಿ ಬಳಸುವಂತೆ ಮಾಡುವುದು. ಹಲವು ವಿಚಾರಗಳನ್ನು ಸಾಂಕೇತಿಕವಾಗಿ ಗ್ರಹಿಸಬೇಕು. ಇಲೆಕ್ಟ್ರಿಕಲ್ ಸ್ವಿಚ್‌ಗಳ ಬಗ್ಗೆ ಪ್ರಾಚೀನ ವಾಸ್ತುಶಾಸ್ತ್ರವು ವ್ಯಾಖ್ಯಾನಿಸುವುದು ಸಾಧ್ಯವಾಗಿರದ ಮಾತಾಗಿತ್ತು. ಹೀಗಾಗಿ ಸ್ವಿಚ್‌ಗಳನ್ನು ಹೇಗೆ ಜೋಡಿಸಬೇಕು ಎಂಬ ಪ್ರಶ್ನೆಯನ್ನು ಭಾರತೀಯ ವಾಸ್ತುಶಾಸ್ತ್ರ ಸಾಂಕೇತಿಕವಾಗಿ ಹೇಳಿದೆ. ಅಧಿಕವಾದ ವಿದ್ಯುತ್ ತರಂಗಗಳ ಮೋಟಾರ್ ಉಪಕರಣಗಳು ಬೆಂಕಿಯನ್ನು ಒಗ್ಗೂಡಿಸಿಕೊಂಡ ಘಟಕಗಳಾದ್ದರಿಂದ ಅದನ್ನು ದಕ್ಷಿಣದ ಅದರಲ್ಲೂ ಆಗ್ನೇಯ ಭಾಗದಲ್ಲಿ ಸಂಯೋಜಿಸಬೇಕು.
ಮನೆಗಳು ಇರುವುದೇ ತನುಮನಗಳಿಗೆ ಸುಹಾಸಕರ ಶಾಂತಿಯನ್ನು ಒದಗಿಸಲಿಕ್ಕೆ ಎಂಬುದು ತಿಳಿದಿರಿ. ಹಲವರು ಸಾಕುಪ್ರಾಣಿಗಳ ಬಗ್ಗೆ ಮನೆಯಲ್ಲಿ ಎಲ್ಲಿರಲಿ ಎಂಬುದಾಗಿ ಪ್ರಶ್ನಿಸುತ್ತಾರೆ. ಭಾರತೀಯ ವಾಸ್ತುಶಾಸ್ತ್ರ ದನದ ಕೊಟ್ಟಿಗೆಗಳ ಬಗ್ಗೆ, ಕುದುರೆ ಲಾಯಗಳ ಬಗ್ಗೆ ಆನೆ ವಾಸದ ಗಜಶಾಲೆಯ ಬಗ್ಗೆ , ಬೇಟೆ ನಾಯಿಯ ಗೂಡಿನ ಬಗ್ಗೆ , ಶಸ್ತ್ರಾಗಾರದ ಬಗ್ಗೆ , ರಾಜ ಹಾಗೂ ಮಂತ್ರಿಗಳ ಮಂತ್ರಾಗಾರದ ಬಗ್ಗೆ ನಿರ್ದಿಷ್ಟ ವರ್ಗಗಳ ಮನೆಗಳು ಇಂತಿಂಥ ಜಾಗದಲ್ಲಿ ಇರಬೇಕೆಂಬುದರ ಬಗ್ಗೆ ತಿಳಿಸುತ್ತದೆ. ಇದರ ಬಗ್ಗೆ ಇನ್ನೂ ಅನೇಕ ವಿವರಗಳನ್ನು ಕೊಡುತ್ತದೆ. ಒಟ್ಟಿನಲ್ಲಿ ರಾಜನ ವಿಷಯ ಬಂದಾಗ ರಾಜನ ವಿಚಾರದ ನೆಲೆಯಲ್ಲಿಯೇ ಇತರರ ಮನೆಗಳು ವಸತಿ ಪ್ರದೇಶಗಳ ವಿಚಾರ ವ್ಯಾಖ್ಯಾನಗೊಳ್ಳುತ್ತಿತ್ತು. ಆಗ ರಾಜಭಟನ ಮನೆಯ ಮುಖ್ಯದ್ವಾರ ಪೂರ್ವಕ್ಕೋ, ಪಶ್ಚಿಮಕ್ಕೋ, ಉತ್ತರಕ್ಕೋ ಅಥವಾ ದಕ್ಷಿಣಕ್ಕೋ ಎನ್ನುವುದು ಮುಖ್ಯವಾಗುತ್ತಿರಲಿಲ್ಲ. ಪ್ರಶಾಂತವಾದ ದುರ್ಗಂಧಗಳಿರದ ಸ್ವತ್ಛ ಪರಿಸರ ಇರಬೇಕು ರಾಜಭಟನಿಗೆ ಎಂಬುದಷ್ಟೇ ಮುಖ್ಯವಾಗಿರುತ್ತಿತ್ತು.
ಈಗ ಸಾಕು ನಾಯಿಯನ್ನು ಮನೆಯ ಯಾವ ಮೂಲೆಯಲ್ಲಿ ಮಲಗಿಸಬಹುದು? ನೇರವಾಗಿ ನಮ್ಮ ಹಾಸಿಗೆಯಲ್ಲಿಯೇ ಮಲಗಿದರೆ ವಾಸ್ತು ಪ್ರಕಾರ ಕೆಟ್ಟದಾಗಬಹುದೇ? ಇತ್ಯಾದಿ ಇತ್ಯಾದಿ ಪ್ರಶ್ನೆ ಕೇಳುತ್ತಾರೆ. ಮುಖ್ಯವಾಗಿ ಪ್ರಾಣಿಗಳ ಬಗ್ಗೆ ಯಾವ ತಿರಸ್ಕಾರವೂ ಇರದೆ ಮಾತಾಡುವುದಾದರೆ ಮೂಕಪ್ರಾಣಿಗಳನ್ನು ನಮಗೆ ಬೇಕಾದ ವಿಧದಲ್ಲಿ ನಿಯಂತ್ರಿಸುವುದು ಹಿಂಸೆಯ ಭಾಗವಾಗುತ್ತದೆ ಅಲ್ಲವೇ? ನಿದ್ರೆ, ಹಸಿವು, ಭಯ, ಮೈಥುನಾದಿ ವಿಚಾರಗಳಲ್ಲಿ ಅದು ಅದನ್ನು ಸಾಕಿದವರ ಅಂಕಿತದಲ್ಲಿರಬೇಕು ಎಂಬುದನ್ನು ಗ್ರಹಿಸಲು ಸಾಧ್ಯವೇ? ಅಂತಯೇ ನಿದ್ರೆ, ಹಸಿವು, ಭಯ, ಮೈಥುನಾದಿಗಳು ನಾಯಿ ಸಾಕಿದವರ ಮನೆಯಲ್ಲಿ ನಾಯಿ ಸ್ವಾತಂತ್ರ್ಯ ಹರಣಗೊಳ್ಳದೆ ಮುಕ್ತವಾಗಿ ನಡೆದರೆ ಮನೆಯ ಅಸ್ವತ್ಛತೆ ಮನೆಯ ಸದಸ್ಯರ ಮನೋಸ್ಥಿತಿ ಇತ್ಯಾದಿ ಇತ್ಯಾದಿ ಏನಿರುತ್ತದೆ?
ಹೀಗಾಗಿ ವಾಸ್ತುವಿನ ಬಗೆಗೆ ಲಕ್ಷ್ಯ ಕೊಡಬೇಕು. ಆದರೆ ಆಧುನಿಕ ಜೀವನ ಶೈಲಿಯಲ್ಲಿ ವಾಸ್ತುವಿನ ಸಂಬಂಧವಾದ ವಿಚಾರಗಳನ್ನು ಒತ್ತಡದಿಂದ ಎಳೆತಂದು ನಮ್ಮ ಅನುಕೂಲಕ್ಕೆ ತಕ್ಕಂತೆ ಬಗ್ಗಿಸಿ ಹಿಡಿಯಲಾಗುವುದಿಲ್ಲ. ಮನೆ ಕಟ್ಟಲು ಸರಿಯಾದ ಸ್ಥಳ ಮುಖ್ಯ ಎಂಬುದು ತಿಳಿದಿರಲಿ. ಆಧುನಿಕತೆಯು ವಾಸ್ತುಶಾಸ್ತ್ರವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ತಮ್ಮನ್ನು ತಾವು ವಿಮರ್ಶಿಸಿಕೊಳ್ಳಬೇಕೇ ಹೊರತೂ ವಾಸ್ತು ಶಾಸ್ತ್ರವು ಆಧುನಿಕತೆಯ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ. ಯಾವ ನಿಟ್ಟಿನಿಂದಲೂ ವಾಸ್ತು ಜೀವನ್ಮೂಖೀಯಾಗಿ ಪ್ರತಿ ನಾಗರೀಕನ ಅಭ್ಯುದಯಕ್ಕೆ ಹೆಣಗಾಡುತ್ತದೆ. ಆಧುನಿಕತೆ ಈಗ ಬಂದು ಇನ್ನೊಂದಿಷ್ಟು ವರ್ಷಗಳಲ್ಲಿ ಸವಕಲಾಗುವ ವಿಚಾರ. ಟಿವಿಯ ಜಾಹೀರಾತುಗಳನ್ನು ಗಮನಿಸಿ. ಅನೇಕ ಬ್ರಾಂಡ್‌ಗಳು ಹಿಂದೆ ತಾವು ಬೋಧಿಸಿದ್ದನ್ನೇ ಅದು ಈಗ ಸರಿಇಲ್ಲ ಎಂಬ ಜಾಹೀರಾತು ನೀಡುತ್ತದೆ. ಭಾರತೀಯ ವಾಸ್ತು ಹೀಗೆ ಬದಲಾಗುವ ವಿಚಾರವಲ್ಲ.