Monday, 30 September 2019

ಮನೆಗೆ ಭಾಗ್ಯತರುವ 'ಭಾಗ್ಯ ಬಿದಿರು'

ರಶ್ಮಿ ಪೈ 


'ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ.

ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರಧಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ ಎಂದು ಫೆಂಗ್‌ಶುಯಿ ವಿಶ್ವಾಸ.

ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಬ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗುತ್ತದೆ. ಕಾಂಡಗಳನ್ನಿರಿಸುವಾಗ ಅವುಗಳ ಸಂಖ್ಯೆಗಳಲ್ಲಿ ಜಾಗರೂಕರಾಗಿರಬೇಕು.

1. ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಸಂತೋಷ ಪ್ರಧಾನವಾಗುತ್ತದೆ.

2. ಐದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.

3. ಇಪ್ಪತ್ತೊಂದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಬಾಗಿಲಿಗೆ ಬಂದು ಸೇರುವುವು.

4. ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ Four- ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ. ಆದುದರಿಂದ ನಾಲ್ಕು ಕಾಂಡಗಳನ್ನು ಒಟ್ಟಿಗೆ ಎಂದೂ ಬಳಸಬಾರದು.

ಬೆಳೆಸುವ ವಿಧಾನ

ಇದನ್ನಿರಿಸುವ ನೀರಿನಲ್ಲಿ ಕ್ಲೋರಿನ್ ಅಂಶ ಇರದಂತೆ ಜಾಗ್ರತೆವಹಿಸಬೇಕು ಮತ್ತು ಅಲ್ಪ ಸೂರ್ಯಪ್ರಕಾಶ ತಾಗುವಂತಿರಬೇಕು. ಅತಿ ಉಷ್ಣಾಂಶವಿದ್ದರೆ ಇವುಗಳು ಹಳದಿ ಬಣ್ಣಕ್ಕ ತಿರುಗುತ್ತವೆ ಆದುದರಿಂದ ಕೋಣೆಯ ಉಷ್ಣತೆ ಮಿತವಾಗಿರಲಿ. ಎಳೆ ಕಾಂಡದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯಲಾರಂಭಿಸುತ್ತವೆ. ಬುಡದಲ್ಲಿ ನೀರು ಅಧಿಕವಾಗಿ ತಂಗಿನಿಲ್ಲದಂತೆ ಜಾಗ್ರತೆವಹಿಸಿದರೆ ಇವುಗಳು ದಟ್ಟವಾಗಿ ಬೆಳೆಯುವುವು.

Saturday, 28 September 2019

ನೈಜ ವಾಸ್ತುವಿನ ನಿಯಮ

ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.

ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ. 

ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ.

Friday, 27 September 2019

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಕಾರಿದ್ದರೆ, ವಿಮಾನದಂತೆ ಮೇಲೆ ಹಾರಬೇಕೆಂದು ನೀವು ಅದರಿಂದ ನಿರೀಕ್ಷಿಸುವಂತಿಲ್ಲ. ಅದೇ ರೀತಿ ಒಳ್ಳೆಯ ವಾಸ್ತು ಕೂಡ ನಿಮ್ಮ ಹಣಕಾಸು ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುತ್ತದೆ.
1.ಹಣ ಮತ್ತು ಆಭರಣಗಳನ್ನು ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು.

2. ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ.

3.ದಕ್ಷಿಣದಲ್ಲಿ ಕೊಳವೆ ಬಾವಿ ಅಥವಾ ಟ್ಯೂಬ್ ಬಾವಿ ಇದ್ದರೆ ಅದು ಆರ್ಥಿಕ ಶಕ್ತಿಗೆ ಹಾನಿಕಾರಕ.

4. ದಕ್ಷಿಣದಲ್ಲಿ ಭೂಗತ ಟ್ಯಾಂಕ್ ಅಥವಾ ಹೊಂಡವು ಹಣಕಾಸಿಗೆ ತುಂಬ ಹಾನಿಕಾರಕ. ಕೆಲವು ದೇವ, ದೇವತೆಗಳ ಚಿತ್ರ ಮತ್ತು ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಮನೆಗೆ ಸಿಗಬಹುದು.

5. ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ತುಂಬ ಒಳ್ಳೆಯದು.

6. ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆಯಿರುವುದು ತುಂಬ ಒಳ್ಳೆಯದು.

7. 9 ಗೋಲ್ಡ್‌ಫಿಷ್ ಮತ್ತು ಒಂದು ಕಪ್ಪು ಮೀನಿನ ಮತ್ಸ್ಯಾಲಯ ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಮ‌ೂಲೆಯಲ್ಲಿರುವುದು ತುಂಬ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Thursday, 26 September 2019

ಶೌಚಾಲಯ ಮತ್ತು ಸ್ನಾನದ ಮನೆಗಾಗಿ ವಾಸ್ತು ಟಿಪ್ಸ್

ವಾಸ್ತುಶಾಸ್ತ್ರದ ಪ್ರಕಾರ, ಶೌಚಾಲಯ ಮತ್ತು ಸ್ನಾನದ ಮನೆಗಳು ಮನೆಯ ಋಣಾತ್ಮಕ ಶಕ್ತಿಯ ಮೂಲಸ್ಥಾನಗಳು. ಹೀಗಾಗಿ, ಅವುಗಳ ನಿರ್ಮಾಣ ಮತ್ತು ದಿಕ್ಕಿನ ಕುರಿತು ತಜ್ಞರೊಂದಿಗೆ ಸಮಾಲೋಚಿಸಬೇಕಾಗುತ್ತದೆ. ಅವುಗಳನ್ನು ವಾಸ್ತು ಮಾರ್ಗದರ್ಶನಗಳ ಪ್ರಕಾರ ಕಟ್ಟದಿದ್ದರೆ, ಮನೆ ಮತ್ತು ಮನೆಯಲ್ಲಿ ವಾಸಿಸುವ ಜನರ ಮೇಲೆ ಅವು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಮನೆಯೊಳಗೆ ಋಣಾತ್ಮಕ ಶಕ್ತಿಯ ಪ್ರವೇಶವನ್ನು ತಡೆಯಲು, ಹಿಂದಿನ ಕಾಲದಲ್ಲಿ ಭಾರತೀಯ ಮನೆಗಳಲ್ಲಿ ಋಣಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಲು ಶೌಚಾಲಯ ಮತ್ತು ಸ್ನಾನದ ಮನೆಗಳನ್ನು ಮನೆಯಿಂದ ಹೊರಗೆ ಕಟ್ಟಲಾಗುತ್ತಿತ್ತು; ಆದರೆ ಎಲ್ಲಾ ಸಂದರ್ಭಗಳಲ್ಲೂ ಹಾಗೆ ಮಾಡಲು ಸಾಧ್ಯವಿಲ್ಲವಾದ್ದರಿಂದ, ನಾವು ಮನೆ ನಿರ್ಮಿಸುವ ಸಮಯದಲ್ಲೇ ಶೌಚಾಲಯ ಮತ್ತು ಸ್ನಾನದ ಮನೆಗಾಗಿ ವಾಸ್ತುವನ್ನು ಅನುಸರಿಸಬೇಕಾಗುತ್ತದೆ. ಅಪಾರ್ಟ್‌ಮೆಂಟಿನಲ್ಲಿ ದೋಷಪೂರ್ಣ ಟಾಯ್ಲೆಟ್ ನಿರ್ಮಾಣದಿಂದ ಉಂಟಾದ ದೋಷಗಳನ್ನು ಸರಿಪಡಿಸಲೂ ಸಹ ವಾಸ್ತುವಿನಲ್ಲಿ ಪರಿಹಾರ ಕ್ರಮಗಳು ಲಭ್ಯವಿವೆ. 


ಜನರು ಅನುಸರಿಸಬಹುದಾದ ಕೆಲ ಸುಲಭ ವಾಸ್ತು ಉಪಾಯಗಳು ಈ ಕೆಳಗಿನಂತಿವೆ: –



ಋಣಾತ್ಮಕ ಶಕ್ತಿಯ ಹರಿವನ್ನು ತಡೆಯಲು ಟಾಯ್ಲೆಟ್ / ಬಾತ್‌ರೂಮನ್ನು ಉಪಯೋಗಿಸದೇ ಇರುವಾಗಲೂ ಅವುಗಳ ಬಾಗಿಲನ್ನು ಮುಚ್ಚಿರಿ. ವಾಸ್ತುವಿನ ಹಲವು ಅಂಶಗಳಲ್ಲಿ ಒಂದು ಅಂಶವೆಂದರೆ, ಅದು ಹಿತಕರವಾದ ಸುವಾಸನೆ. ಟಾಯ್ಲೆಟಿನಿಂದ ಹೊರಬರುವ ಕೆಟ್ಟ ವಾಸನೆ ನಕಾರಾತ್ಮಕತೆಗೆ ಎಡೆ ಮಾಡಿಕೊಡುತ್ತದೆ, ಹೀಗಾಗಿ ಬಾಗಿಲನ್ನು ಪೂರ್ತಿ ಮುಚ್ಚಿರಬೇಕು.

ನಿಮ್ಮ ಮಗು ಅಧ್ಯಯನ ಮಾಡುವ ಟೇಬಲ್, ಟಾಯ್ಲೆಟ್ ಹತ್ತಿರವಿದೆಯೇ? ಅಧ್ಯಯನ ಮಾಡುವಾಗ ಟಾಯ್ಲೆಟ್ ಅಥವಾ ಬಾತ್‌ರೂಮ್ ಎದುರು ಕುಳಿತುಕೊಳ್ಳಬಾರದು; ಹೀಗೆ ಮಾಡುವುದು ನಿಮ್ಮ ಮಗುವಿನ ಗಮನ ಕೇಂದ್ರೀಕರಣದ ಮೇಲೆ ಪ್ರಭಾವ ಬೀರುತ್ತದೆ. ಟಾಯ್ಲೆಟ್‌ಗಳು ಋಣಾತ್ಮಕವಾಗಿ ಮನಸ್ಸನ್ನು ಚಂಚಲಗೊಳಿಸುತ್ತವೆ; ಹೀಗಾಗಿ ಅಧ್ಯಯನ ಮಾಡುವಾಗ ಮಗು ಅದರಿಂದ ದೂರವಿರಬೇಕು.

ನೀವು ಬಾತ್‌ರೂಮ್‌ನಲ್ಲಿ ಕನ್ನಡಿ ಇರಿಸುತ್ತೀರಾ? ವಾಸ್ತು ಪ್ರಕಾರ ಟಾಯ್ಲೆಟ್ ಮತ್ತು ಬಾತ್‌ರೂಮ್‌ನಲ್ಲಿ ಯಾವುದೇ ಕನ್ನಡಿ ಇರಿಸಬಾರದು, ಇರಿಸಿದರೆ ಅದು ಋಣಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಮತ್ತು ಮನೆಯಲ್ಲಿ ವಾಸಿಸುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕನ್ನಡಿಗಳನ್ನು ಸರಿಯಾದ ಸ್ಥಳದಲ್ಲಿರಿಸಿದರೆ ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಾಧ್ಯವಿದೆ.

Wednesday, 25 September 2019

ಮನೆಯಲ್ಲಿ ಸಿರಿ ಸಂಪತ್ತು ತುಂಬಿರಲು ಶುಕ್ರವಾರದಂದು ಈ ರೀತಿ ಪೂಜೆ ಮಾಡಿ

ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಸಂಪತ್ತಿನ ಅಧಿದೇವತೆ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಹಾಗೇ ಶುಕ್ರವಾರದಂದು ಈ ರೀತಿ ಪೂಜೆ ಮಾಡಿದರೆ ಮನೆಯಲ್ಲಿ ಸಿರಿ ಸಂಪತ್ತು ತುಂಬಿರುತ್ತದೆಯಂತೆ.

ಶುಕ್ರವಾರದ ದಿನ ಈ ದೇವಿಗೆ ಪ್ರತಿರೂಪವಾದ ಸರಸ್ವತಿ, ದೇವಿಯ ಲಲಿತಾ ತ್ರಿಪುರ ಸುಂದರಿ, ಲಲಿತಾ ಪರಮೇಶ್ವರಿ, ಇವರನ್ನು ಪೂಜಿಸುವುದರಿಂದ ಸಹ ಸಿರಿ ಸಂಪತ್ತು ಲಭಿಸುತ್ತದೆ. ಶುಕ್ರವಾರದ ದಿನ ಮೊದಲಿಗೆ ಮನೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ತಲೆಸ್ನಾನವನ್ನು ಮಾಡಬೇಕು.


ಶುಕ್ರವಾರದ ದಿನ ವಿಷ್ಣುವಿನ ಪ್ರತಿರೂಪವಾದ ಪದ್ಮ ರಂಗೋಲಿಯನ್ನು ಹಾಕಿ ಲಕ್ಷ್ಮೀದೇವಿಯನ್ನು ಮನೆಯೊಳಗೆ ಆಹ್ವಾನಿಸಬೇಕು. ತುಳಸಿ ಕಟ್ಟೆಗೆ ಅರಿಶಿನ, ಕುಂಕುಮದಿಂದ ಅಲಂಕಾರ ಮಾಡಿ ದೀಪಾರಾಧನೆ ಮಾಡಬೇಕು. ಹೀಗೆ ಮಾಡುವುದರಿಂದ ಸಿರಿಸಂಪತ್ತನ್ನು ನಿಮ್ಮದಾಗಿಸಿಕೊಳ್ಳಬಹುದು.

Tuesday, 24 September 2019

ಮನೆಯಲ್ಲಿ ವಾಸ್ತು ಶೈಲಿ

*ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

*ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

*ದಕ್ಷಿಣ ಅಥವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

Monday, 23 September 2019

ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ

ಕೆಲವು ಸಣ್ಣಪುಟ್ಟ ವಿಚಾರಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಹೆಚ್ಚು ನೆಮ್ಮದಿ ಮೂಡಿಸಬಹುದು. ಈ ಕೆಳಗಿನ ಅಂಶಗಳನ್ನು ಮನದಲ್ಲಿರಿಸಿಕೊಳ್ಳಿ.

*ಮನೆಯಲ್ಲಿ ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ

*ಬೆಡ್ ರೂಮಲ್ಲಿ ಟೀವಿ ಇರಿಸುವುದು ಸೂಕ್ತವಲ್ಲ

*ಬೆಡ್ ರೂಮಿನಲ್ಲಿ ನೀರಿರುವ ಯಾವುದೇ ವಸ್ತು ಅಥವಾ ಸಸಿಗಳನ್ನು ಇರಿಸಬೇಡಿ

*ಲೀವಿಂಗ್ ರೂಮಿನ ದಕ್ಷಿಣ ಗೋಡೆಯ ಮೇಲೆ ಪ್ರಜ್ವಲಿಸುವ ಸೂರ್ಯೋದಯ ಚಿತ್ರವಿರಲಿ

* ಮುಳ್ಳಿನ ಕಳ್ಳಿಗಿಡ ಅಥವಾ ಇನ್ಯಾವುದೇ ಚುಚ್ಚುವಂತಹ ಗಿಡಗಳನ್ನು ಮನೆಯೊಳಗೆ ಇರಿಸುವುದು ಬೇಡ

*ಅಡುಗೆ ಮನೆಯಲ್ಲಿ ಕನ್ನಡಿ ಬೇಡವೇ ಬೇಡ

*ಪೊರಕೆ ಮತ್ತು ನೆಲಉಜ್ಜುವ ಮಾಪ್‌ಗಳನ್ನು ಅಡುಗೆ ಮನೆಯಲ್ಲಿ ಕಣ್ಣಿಗೆ ಕಾಣದಂತೆ ಇರಿಸಿ

*ತ್ರಿಕೋನ, ಅಂಡಾಕಾರ ಇಲ್ಲವೇ ವೃತ್ತಾಕಾರದ ಕೋಣೆ ಇರಲೇಬ

Saturday, 21 September 2019

ವಾಸ್ತು ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು!

ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.

ನಿಮ್ಮ ಮಗುವು-

*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.

*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.

*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.

*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.

*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.

*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.

*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.

*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.

*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.

*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.

*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.

*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.

*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.

*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ

*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.

*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.

*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.

*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.

*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ.

*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ.

ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.

Friday, 20 September 2019

ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು: ವಾಸ್ತು ಟಿಪ್ಸ್‌ಗಳು

ನಿಮ್ಮ ಮನೆ ಅಥವಾ ಕಚೇರಿಯ ವಾಸ್ತುವಿನಲ್ಲಿ ಕನ್ನಡಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸತ್ಯ. ಕನ್ನಡಿ ಅಳವಡಿಸುವ ಸ್ಥಳವು ತುಂಬಾ ಪ್ರಭಾವ ಬೀರಲಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಇದನ್ನು ನಂಬಲು ತಯಾರಿಲ್ಲವೆಂದರೆ ಅಚ್ಚರಿಯಾಗದು. ಆದರೆ ನಿಮ್ಮ ಮನೆಯಲ್ಲಿ ಇಡುವ ಕನ್ನಡಿ ಮನೆಯ ಶಕ್ತಿ ಹೆಚ್ಚಿಸುವ ಅಥವಾ ಕಡಿಮೆಗೊಳಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ನಿಮ್ಮ ಮನೆಯ ಯಾವ ಭಾಗದಲ್ಲಿ ಕನ್ನಡಿ ಇಟ್ಟಿರುತ್ತಾರೆ ಎನ್ನುವ ಮೇಲೆ ಒಳಬರುವ ಧನಾತ್ಮಕ ಶಕ್ತಿಯು ಅವಲಂಬಿತವಾಗಿರುತ್ತದೆ. ವಾಸ್ತುವಿನ ಪ್ರಕಾರ ಕನ್ನಡಿಗಳು ಮತ್ತು ಅದನ್ನು ಇಡುವ ಎಲ್ಲಾ ಜಾಗ ಒಳ್ಳೆಯದಲ್ಲ. ಮನೆಯ ಕೆಲವೊಂದು ಭಾಗದಲ್ಲಿ ಅಳವಡಿಸುವ ಕನ್ನಡಿ ಋಣಾತ್ಮಕ ಶಕ್ತಿ ಉಂಟುಮಾಡುತ್ತದೆ ಎಂದು ಪರಿಗಣಿಸಲ್ಪಟ್ಟರೆ,

ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : 

ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು! 

ಮತ್ತೆ ಕೆಲವು ಧನಾತ್ಮಕ ಶಕ್ತಿ ಮನೆಯೊಳಗೆ ಬರುವಂತೆ ಮಾಡುತ್ತದೆ. ನಿಮ್ಮ ಮನೆಗೆ ಕನ್ನಡಿ ಬಗ್ಗೆ ಯೋಜನೆ ಹಾಕಿಕೊಂಡಿದ್ದರೆ ಆಗ ಇಲ್ಲಿರುವ ಕೆಲವೊಂದು ಮೂಲ ಟಿಪ್ಸ್ ಗಳು ನಿಮ್ಮ ನೆರವಿಗೆ ಬರಲಿದೆ. ಇಲ್ಲಿ ಕೊಟ್ಟಿರುವ ಕೆಲವೊಂದು ಟಿಪ್ಸ್‌ಗಳ ಹೊರತಾಗಿಯೂ ಹಲವಾರು ಟಿಪ್ಸ್ ಗಳಿವೆ. ಆದರೆ ಇದು ತುಂಬಾ ಮೂಲ ಮತ್ತು ಅತೀ ಹೆಚ್ಚು ಉಲ್ಲೇಖಿಸಲ್ಪಡುವ ಕನ್ನಡಿಯ ವಾಸ್ತು ಟಿಪ್ಸ್ ಗಳೆಂದು ಪರಿಗಣಿಸಲಾಗಿದೆ.

ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : 

ವಾಸ್ತು ಪ್ರಕಾರ ಬೆಡ್ ರೂಂನ ವಿನ್ಯಾಸ ಹೀಗಿರಬೇಕು!

 ಮನೆಯ ವಾಸ್ತುವಿಗೆ ಕನ್ನಡಿಯ ಟಿಪ್ಸ್ 

ನಿಮ್ಮ ಮನೆಯಲ್ಲಿ ಕನ್ನಡಿ ಹಾಕುವ ಯೋಜನೆ ಹಾಕಿಕೊಂಡಿದ್ದರೆ ಆಗ ಕೆಲವೊಂದು ವಿಷಯಗಳನ್ನು ಪರಿಗಣಿಸಿ. 

ನಿಮ್ಮ ಹಾಸಿಗೆ ಕಾಣುವಂತೆ ಕನ್ನಡಿ ಇಡಬೇಡಿ. ಇದರಿಂದ ಹೆಚ್ಚಿನ ಅನಾರೋಗ್ಯ ಹಾಗೂ ಋಣಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಕನ್ನಡಿಯಲ್ಲಿ ಮುಖ್ಯ ದ್ವಾರ ಕಾಣಿಸುತ್ತಿದ್ದರೆ ಆಗ ನೀವು ಇದನ್ನು ಸ್ಥಳಾಂತರಿಸುವ ಬಗ್ಗೆ ಮರುಚಿಂತಿಸಬೇಕಾಗಿದೆ.

 ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಋಣಾತ್ಮಕ ಶಕ್ತಿಯಿರುವ ಬೀರುವಂತಹ ವಸ್ತುಗಳಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದು ಮನೆಯೊಳಗಿನ ಎಲ್ಲಾ ಋಣಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ ಎನ್ನುವುದು ಮನೆಯಲ್ಲಿ ಕನ್ನಡಿ ಅಳವಡಿಸಲು ಇರುವ ವಾಸ್ತು ಟಿಪ್ಸ್. ಕಚೇರಿಯ ವಾಸ್ತುವಿಗೆ ಕನ್ನಡಿ ಟಿಪ್ಸ್ ನಿಮ್ಮ ವೃತ್ತಿಪರ ವಾತಾವರಣದಲ್ಲಿ ಎಲ್ಲಾ ಧನಾತ್ಮಕ ಶಕ್ತಿ ತರಲು ಬಯಸುತ್ತಿದ್ದೀರಾ? ಹಾಗಿದ್ದರೆ ಎರಡನ್ನು ಜತೆಯಾಗಿಟ್ಟುಕೊಳ್ಳಿ. 

ಇದಕ್ಕಾಗಿ ಕನ್ನಡಿಯು ಕೇವಲ ಧನಾತ್ಮಕ ಶಕ್ತಿ ಹೊರಹಾಕಬೇಕು. ಸಮೃದ್ಧಿ ಪಡೆಯಲು ನಿಮ್ಮ ಕಚೇರಿಯ ಲಾಕರ್ ಮುಂದೆ ಕನ್ನಡಿ ಅಳವಡಿಸಬೇಕು. ಕಿರಿದಾದ ಪ್ಯಾಸೆಜ್ ಗಳಲ್ಲಿ ಕನ್ನಡಿ ಅಳವಡಿಸಿದರೆ ಆಗ ಋಣಾತ್ಮಕ ಶಕ್ತಿ ಬರುತ್ತದೆ. ಕಿರಿದಾದ ಪ್ಯಾಸೆಜ್ ಗಳಲ್ಲಿ ಋಣಾತ್ಮಕತೆ ಮತ್ತು ಸುತ್ತಮುತ್ತಲಿನ ಇಕ್ಕಟ್ಟನ್ನು ಪ್ರತಿಫಲಿಸುತ್ತದೆ. 

ಇಂತಹ ಸ್ಥಳದಲ್ಲಿ ಕನ್ನಡಿ ಇಡಬೇಡಿ. ಕನ್ನಡಿಯಲ್ಲಿ ಒಳ್ಳೆಯ ದೃಶ್ಯಗಳು, ಧನಾತ್ಮಕ ಶಕ್ತಿ ಪ್ರತಿಫಲಿಸುತ್ತಿರಲಿ. ಕಿರುಕೋಣೆಯ ಕಿಟಕಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದರಿಂದ ನಿಮ್ಮ ಕಚೇರಿಗೆ ಧನಾತ್ಮಕ ಶಕ್ತಿ ಬರುತ್ತದೆ.

ಕನ್ನಡಿಯ ಸಾಮಾನ್ಯ ವಾಸ್ತು ಟಿಪ್ಸ್‌ಗಳು

ನಿಮ್ಮ ಸ್ನಾಹಗೃಹದಲ್ಲಿ ಕನ್ನಡಿ ಅಳವಡಿಸಲು ಬಯಸಿದ್ದರೆ ಆಗ ಅದನ್ನು ಉತ್ತರ ಅಥವಾ ಪೂರ್ವದಲ್ಲಿಡಿ. ಮನೆಯ ಮಧ್ಯಭಾಗದಲ್ಲಿ ಗೋಡೆಯಿದ್ದರೆ ಆಗ ಮನೆಯನ್ನು ಸಂಪರ್ಕಿಸುವಂತಾಗಲು ನೀವು ಅದರಲ್ಲಿ ಒಂದು ಕನ್ನಡಿಯನ್ನಿಡಿ. ಎದುರುಬದುರಾಗಿ ಯಾವಾಗಲೂ ಕನ್ನಡಿ ಅಳವಡಿಸಬೇಡಿ. ಇದಕ್ಕೆ ವಾಸ್ತು ಟಿಪ್ಸ್ ಎಂದರೆ ಹೀಗೆ ಅಳವಡಿಸಿದರೆ ಮನೆಯಲ್ಲಿ ವಿಶ್ರಾಂತಿ ಎನ್ನುವುದು ಇರಲ್ಲ. ಸ್ನಾನಗೃಹವನ್ನು ಹೊರತುಪಡಿಸಿ ಮನೆಯ ಯಾವುದೇ ಭಾಗದಲ್ಲಿ ಉತ್ತರ ಅಥವಾ ಪೂರ್ವ ಭಾಗದಲ್ಲಿ ಅಳವಡಿಸಬೇಡಿ. ಇದರಿಂದ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ನಿಮ್ಮ ಚಿತ್ರಗಳು ಕನ್ನಡಿಯಲ್ಲಿ ಪ್ರತಿಫಲಿಸುವಂತಹ ರೀತಿಯಲ್ಲಿ ಕನ್ನಡಿ ಅಳವಡಿಸಬೇಡಿ. ಮುಖ್ಯದ್ವಾರ ಕಾಣುವಂತೆ ಕನ್ನಡಿ ಇಡಲೇಬಾರದು.

 ಕನ್ನಡಿ ಅಳವಡಿಕೆಗೆ ಇದು ಕೆಲವೊಂದು ವಾಸ್ತು ಟಿಪ್ಸ್ ಗಳು. ಇವುಗಳನ್ನು ಪಾಲಿಸಿದರೆ ಆಗ ನೀವು ಖಂಡಿತವಾಗಿಯೂ ಧನಾತ್ಮಕ ಶಕ್ತಿ ಪಡೆಯಬಹುದು.



Thursday, 19 September 2019

ಅಡುಗೆ ಮನೆ ಈ ಭಾಗದಲ್ಲಿ ಇದ್ದರೆ ಕಲಹ ಗ್ಯಾರಂಟಿ!

ಮನೆಯ ವಾಸ್ತು ನಮ್ಮ ಜೀವನದ ಸಂತಸ-ಬೇಸರಕ್ಕೆ ಕಾರಣವಾಗುತ್ತದೆ ಎಂಬುದು ನಮ್ಮ ನಂಬಿಕೆ. ಅದರಲ್ಲೂ ಅಡುಗೆ ಮನೆ ಎನ್ನುವುದು ಒಂದು ಮನೆಯಲ್ಲಿ ಬಹುಮುಖ್ಯವಾದ ಭಾಗ.
ಅದು ಮನೆಯ ಸದಸ್ಯರನ್ನು ಬೆಸೆಯುವ ಜಾಗ ಎಂದರೂ ತಪ್ಪಾಗಲಾರದು. ಈ ಅಡುಗೆ ಮನೆ ಎನ್ನುವುದು ಮನೆಯ ಯಾವ ಭಾಗದಲ್ಲಿ ಎನ್ನುವುದರ ಮೇಲೆ ಆ ಮನೆಯ ಸುಖ-ದುಃಖ ನಿರ್ಧಾರವಾಗಿರುತ್ತದೆ.

ಒಂದು ಮನೆಯಲ್ಲಿ ಅಡುಗೆ ಮನೆ ಎನ್ನುವುದು ಮನೆಯ ಆಗ್ನೇಯ ಅಥವಾ ವಾಯವ್ಯ ದಿಕ್ಕಿನಲ್ಲಿರಬೇಕು. ಆದರೆ ಯಾವುದೇ ಕಾರಣಕ್ಕೂ ನೈಋತ್ಯ, ಉತ್ತರ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಬೇಡಿ. ಅಡುಗೆ ಮನೆ ಈ ಭಾಗದಲ್ಲಿ ಇಟ್ಟುಕೊಂಡರೆ ಅಂತಹ ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಕಲಹ, ವಿರಸ ಸಾಮಾನ್ಯವಾಗಿರುತ್ತದೆ. ಹೀಗಾಗಿ ಮನೆಯಲ್ಲಿ ಶಾಂತಿ ನೆಲೆಸಿರಬೇಕಾದರೆ ಅಡುಗೆ ಮನೆ ವಾಸ್ತು ಕೂಡಾ ಮುಖ್ಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Wednesday, 18 September 2019

ದಿಕ್ಕು ಹಾಗೂ ಮುಂಬಾಗಿಲು

ಮನೆಯ ಪ್ರವೇಶದ್ವಾರದಲ್ಲಿ ಪೊರಕೆ ಇತ್ಯಾದಿ ಸಾಮಗ್ರಿ ಇರಿಸುವುದು ಅಶುಭ ಕಾರಕ.

ಮುಸ್ಸಂಜೆಯ ವೇಳೆ ಗುಡಿಸುವುದು, ಚಿನ್ನಾಭರಣ ಶುಚಿಗೊಳಿಸುವುದು ಶುಭಕಾರಕವಲ್ಲ. ಮನೆಯ ಮುಂಭಾಗ ಪೂರ್ವ ಭಾಗಕ್ಕಿರುವುದು ಹಿತಕರ. ಆದರ ಪಶ್ಚಿಮ ಭಾಗಕ್ಕಿರುವಂತೆ ಮನೆಯ ಮುಂಭಾಗಿಲು ಇರಿಸುವುದು ಯೋಗ್ಯ..

ಆದರೆ ಇತರ ದಿಕ್ಕುಗಳಿಗೆ ಮನೆ ಬಾಗಿಲು ಇರಿಸುವುದು ಶುಭಕರವಲ್ಲ ಎಂಬುದಾಗಿ ವಾಸ್ತು ಶಾಸ್ತ್ರ ತಿಳಿಸುತ್ತದೆ.

Tuesday, 17 September 2019

ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ

ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.

ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.

ನಗರೀಕರಣ ಬೆಳೆಯುತ್ತಿರುವ ಇಂದಿನ ಯುಗ ಮತ್ತು ಕಾಲದಲ್ಲಿ, ಸ್ಥಳದ ನ್ಯೂನತೆ ಮತ್ತು ಆಧುನಿಕ ವಿಜ್ಞಾನ ವಿವರಣೆಗೆ ವಿಫಲವಾದ ಎಲ್ಲವುದರಲ್ಲೂ ಮಿತಿಮೀರಿದ ನಂಬಿಕೆಕಳೆದುಕೊಂಡಿರುವಾಗ, ವಾಸ್ತು ನಿಯಮಗಳಿಗೆ ಬದ್ಧವಾದ ಮನೆಯನ್ನು ಕನಸಿನಲ್ಲೂ ಎಣಿಸುವುದು ಕಾರ್ಯತಃ ಅಸಾಧ್ಯವೆನಿಸಿದೆ.

ಆಕಾಶ

ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.

ಗಾಳಿ(ವಾಯು)

ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ

ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.

ಜಲ

ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ

ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.
ಕೋನಾರ್ಕ್ ಸೂರ್ಯ ದೇವಸ್ಥಾನ, ಆಗ್ರಾದ ತಾಜ್ ಮಹಲ್, ಪುಟ್ಟಪರ್ತಿಯ ಸಾಯಿಬಾಬ ಆಶ್ರಮ, ಪ್ರಶಾಂತಿ ನಿಲಯಂ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.

Monday, 16 September 2019

ನಿಮ್ಮ ಮನೆಗೆ ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು

1.ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.

2. ನಿಮ್ಮ ಮಲಗುವ ಕೋಣೆಯಲ್ಲಿ ಟೆಲಿವಿಷನ್ ಸೆಟ್ ಇಡಬಾರದು. ಆ ಅಭ್ಯಾಸ ಬಿಡಲಾಗದಿದ್ದರೆ ಟಿವಿ ವೀಕ್ಷಿಸಿದ ಬಳಿಕ ಪ್ಲಾಸ್ಟಿಕ್ ಟೇಬಲ್ ಕ್ಲಾತ್‌ನಿಂದ ಅದನ್ನು ಮುಚ್ಚಿರಿ.

3. ನಿಮ್ಮ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿಯಿರಬಾರದು. ಹಾಸಿಗೆಎದುರು ಕನ್ನಡಿಯಿದ್ದರೆ ಮ‌ೂರನೇ ವ್ಯಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ನಿಮ್ಮ ಇಷ್ಟಬಂದ ಕಡೆ ಕನ್ನಡಿಗಳನ್ನು ಇಡಬೇಡಿ.

4.ನಿಮ್ಮ ಮನೆಯಲ್ಲಿ ಒಳಾಂಗಣ ನೀರಿನ ಚಿಲುಮೆಯನ್ನು ಇಡಿ. ನಿಮ್ಮ ಜೀವನಕ್ಕೆ ಬೇಕಾದ್ದೆಲ್ಲ ಸಿಗಲು ಅನುಕೂಲಕರ ಸ್ಥಳದಲ್ಲಿಡಿ.

5. ಮನೆಯೊಳಗೆ ಈಗಾಗಲೇ ಮೀನಿನ ಟ್ಯಾಂಕ್ ಇದ್ದರೆ ಎಚ್ಚರವಾಗಿರಿ. ನಿಮ್ಮ ಮೀನಿನ ಟ್ಯಾಂಕ್ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾಗಿದ್ದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ, ನಿಮಗೆ ಕಾನೂನಿನ ದಾವೆಗಳು, ದಿವಾಳಿ, ಕೆಲಸದ ಒತ್ತಡ, ತೊಂದರೆಗಳು, ಸಮಸ್ಯೆಗಳು ಉದ್ಭವಿಸಬಹುದು. ಮೀನಿನ ಟ್ಯಾಂಕ್ ನಾಲ್ಕು ತಿಂಗಳವರೆಗೆ ಇರಿಸಿದ ಬಳಿಕ ಮೇಲಿನ ಯಾವುದನ್ನಾದರೂ ಗಮನಿಸಿದರೆ, ನಿಮ್ಮ ಮೀನಿನ ಟ್ಯಾಂಕನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿ.

6. ಅಡುಗೆಮನೆಯಲ್ಲಿ ಸ್ಟವ್‌ಗೆ ಎದುರಾಗಿ ರೆಫ್ರಿಜಿರೇಟರ್, ವಾಷಿಂಗ್ ಮೆಷಿನ್, ವಾಷ್‌ಬೇಸಿನ್ ಮತ್ತು ಟಾಯ್ಲೆಟ್ ಇರದಂತೆ ಖಾತರಿ ಮಾಡಿ. ಬೆಂಕಿ ಮತ್ತು ನೀರಿನ ನಡುವೆ ಸಂಘರ್ಷದಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.

7. ಮಕ್ಕಳಿಗೆ ನೆಲದಲ್ಲಿರುವ ಚಾಪೆಯ ಮೇಲೆ ಮಲಗಲು ಅವಕಾಶ ಕೊಡಬೇಡಿ. ಇದರಿಂದ ಮಕ್ಕಳು ಮಂಚದ ಮೇಲಿನಿಂದ ಬೀಳದಿದ್ದರೂ, ಆಗಾಗ್ಗೆ ಅಸ್ವಸ್ಥತೆಗೆ ದಾರಿ ಕಲ್ಪಿಸುತ್ತದೆ. ಕಾರಣವೇನೆಂದರೆ ಹಾಸಿಗೆಯ ಕೆಳಗೆ ಶಕ್ತಿಸಂಚಲನ ಸಾಧ್ಯವಾಗುವುದಿಲ್ಲ. ಮಕ್ಕಳು ಮಲಗುವ ಹಾಸಿಗೆಯ ಸುತ್ತ ಶಕ್ತಿಯ ಚಲನೆಯಾಗುತ್ತಿದ್ದರೆ ಅವರು ಆರೋಗ್ಯದಿಂದಿರುತ್ತಾರೆ.

8. ನಿಮ್ಮ ಹಾಸಿಗೆಯನ್ನು ಗಟ್ಟಿಯಾದ ಗೋಡೆಗೆ ತಾಗಿಸಿ ಇರಿಸಬೇಕು. ಗಟ್ಟಿಯಾದ ಗೋಡೆಯಿದ್ದರೆ ನೀವು ಆಳವಾದ ನಿದ್ರೆಗೆ ಜಾರಬಹುದು ಮತ್ತು ಬೆಳಿಗ್ಗೆ ಏಳುವಾಗ ನೀವು ಪೂರ್ಣ ವಿಶ್ರಾಂತಿ ಪಡೆದು ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ.

9.ನಿಮ್ಮ ಹಾಸಿಗೆಯ ಮೇಲಿನಿಂದ ಬೆಳಕು ಬೀಳಬಾರದು. ಬೆಳಕು ಶಕ್ತಿಯ ಮೇಲೆ ಒತ್ತಡ ಹಾಕುವುದರಿಂದ ಜೀವನದಲ್ಲೂ ಒತ್ತಡಗಳು ಉಂಟಾಗುತ್ತದೆ.

10. ಅಮೃತಶಿಲೆಯ ಮೇಜು ನಿಮ್ಮ ಊಟದ ಕೋಣೆಯಲ್ಲಿದ್ದರೆ ಕೆಲಸದ ಒತ್ತಡ ಜಾಸ್ತಿಯಿರುತ್ತದೆ. ಅದನ್ನು ಬದಲಾಯಿಸಿ ಮರದ ಮೇಜನ್ನು ಇರಿಸಿ.

11. ನಿಮ್ಮ ಮಗು ಮಲಗುವ ಕೋಣೆಯಲ್ಲಿ ಅಸ್ವಸ್ಥತೆಗೆ ಗುರಿಯಾದರೆ ಇನ್ನೊಂದು ಕೋಣೆಗೆ ಮಗುವನ್ನು ಬದಲಾಯಿಸಿ ಅಥವಾ 6 ರಾಡ್‌ಗಳ ಲೋಹದ ವಿಂಡ್ ಚೈಮ್ ಕೋಣೆಯಲ್ಲಿ ನೇತುಹಾಕಿ. ಇದು ಕೋಣೆಯ ಸರ್ವ ಭೂಶಕ್ತಿಗಳನ್ನು ಒಡೆಯುತ್ತದೆ.

ಫೆಂಗ್ ಶುಯಿ ಶಾಸ್ತ್ರದ ಪ್ರಕಾರ ವಾಹನ ಅಪಘಾತಕ್ಕೀಡಾಗುವುದನ್ನು ತಡೆಯಲು ಹೀಗೆ ಮಾಡಿ

ನಿಮ್ಮ ವಾಹನದಲ್ಲಿ ನಕರಾತ್ಮಕ ಶಕ್ತಿ ಒಳಹೊಕ್ಕಾಗ ಆ ವಾಹನ ಅನಾಹುತಕ್ಕೀಡಾಗುತ್ತದೆ. ಫೆಂಗ್ ಶುಯಿ ಶಾಸ್ತ್ರದ ಪ್ರಕಾರ  ಈ ನಕರಾತ್ಮಕ ಶಕ್ತಿಯನ್ನು ಹೊರಗೊಡಿಸಲು ಕೆಲವು ನಿಯಮಗಳನ್ನು ಪಾಲಿಸಬೇಕು.

ವಾಹನವನ್ನು ಮನೆಯ ದಕ್ಷಿಣ-ಪಶ್ಚಿಮ ಭಾಗದಲ್ಲಿ ಇಡುವುದು ಬಹಳ ಒಳ್ಳೆಯದು. ವಾಹನವನ್ನು ಮನೆಯ ಉದ್ದಕ್ಕೆ ಸಮಾನಾಂತರವಾಗಿ ಇಡಬೇಕು. ವಾಹನಗಳು ಯಾವಾಗ್ಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಹಾಗೆ ವಾಹನದಲ್ಲಿರುವ ಅನಾವಶ್ಯಕ ವಸ್ತುಗಳನ್ನು ಹೊರಗೆ ಬಿಸಾಕಿ. ಬೇಡದ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ.

 ಹಾಗೇ ರಾತ್ರಿ ಒಂದು ಪೇಪರ್ ನಲ್ಲಿ ಉಪ್ಪನ್ನು ಹಾಕಿ ಅದನ್ನು ವಾಹನದಲ್ಲಿಡಿ. ಬೆಳಿಗ್ಗೆ ಅದನ್ನು ನದಿಗೆ ಹಾಕಿ. ಇದರಿಂದ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ. ಒಂದು ಬಾಕ್ಸ್ ನಲ್ಲಿ ಸ್ವಲ್ಪ ಕಲ್ಲು ಹಾಗೂ ಮರಳನ್ನು ಹಾಕಿ ವಾಹನದಲ್ಲಿಡಿ. ಇದರಿಂದ ಅಚಾನಕ್ ಆಗುವ ಅನಾಹುತಗಳು ಕಡಿಮೆಯಾಗುತ್ತವೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Friday, 13 September 2019

ನಿಮ್ಮ ನೆಮ್ಮದಿಗಾಗಿ ಇಲ್ಲಿದೆ ನೋಡಿ ವಾಸ್ತು ಟಿಪ್ಸ್

ನಮ್ಮ ಮನೆಯಲ್ಲಿನ ವಾಸ್ತು ಕೂಡ ನಮ್ಮ ಆರೋಗ್ಯ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ವಾಸ್ತುಶಾಸ್ತ್ರದ ಪ್ರಕಾರ, ಶೌಚಾಲಯ ಮತ್ತು ಸ್ನಾನದ ಮನೆಗಳು ಮನೆಯ ಋಣಾತ್ಮಕ ಶಕ್ತಿಯ ಮೂಲಸ್ಥಾನಗಳಂತೆ. ಇವುಗಳನ್ನು ವಾಸ್ತು ಮಾರ್ಗದರ್ಶನಗಳ ಪ್ರಕಾರ ಕಟ್ಟದಿದ್ದರೆ, ಮನೆ ಮತ್ತು ಮನೆಯಲ್ಲಿ ವಾಸಿಸುವ ಜನರ ಮೇಲೆ ಅವು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು.

ಎರಡು ಕಡೆ, ಎಂದರೆ ಮುಂಭಾಗ ಹಾಗೂ ಹಿಂಭಾಗದಲ್ಲಿ ರಸ್ತೆಗಳಿರುವ ಮತ್ತು 90 ಡಿಗ್ರಿ ಮೂಲೆಗಳಿರುವ ನಿವೇಶನ ಅತ್ಯುತ್ತಮವಾದದ್ದು.

ಅಡುಗೆ ಒಲೆಯು ಪೂರ್ವ ಇಲ್ಲವೇ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ವ್ಯವಸ್ಥೆ ಮಾಡಿ. ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನ ಕಡೆಗಿರಬೇಕು.

ನೈಋತ್ಯ ಕಿಟಕಿಗಳ ಬದಲಿಗೆ ಉತ್ತರ ಮತ್ತು ಪೂರ್ವದ ಕಿಟಕಿಗಳನ್ನು ತೆರೆದಿಡುವುದು ಒಳ್ಳೆಯದು. ಇದರಿಂದ ಸಂತೋಷ, ಆರೋಗ್ಯ ಮತ್ತು ಕೌಟುಂಬಿಕ ಸಾಮರಸ್ಯ ಉಂಟಾಗುತ್ತದೆ.

ಋಣಾತ್ಮಕ ಶಕ್ತಿಯ ಹರಿವನ್ನು ತಡೆಯಲು ಟಾಯ್ಲೆಟ್ / ಬಾತ್‌ರೂಮನ್ನು ಉಪಯೋಗಿಸದೇ ಇರುವಾಗಲೂ ಅವುಗಳ ಬಾಗಿಲನ್ನು ಮುಚ್ಚಿರಿ.

ಇನ್ನು ನಿಮ್ಮ ಮಗು ಅಧ್ಯಯನ ಮಾಡುವ ಟೇಬಲ್, ಟಾಯ್ಲೆಟ್ ಹತ್ತಿರವಿದೆಯೇ? ಅಧ್ಯಯನ ಮಾಡುವಾಗ ಟಾಯ್ಲೆಟ್ ಅಥವಾ ಬಾತ್‌ರೂಮ್ ಎದುರು ಕುಳಿತುಕೊಳ್ಳಬಾರದಂತೆ.

ದಂಪತಿಗಳು ಸುಖವಾಗಿ, ಸಂತೋಷದಿಂದಿರಲು ಆರು ವಾಸ್ತು ಸೂತ್ರಗಳು

ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.

ಸುಮಧುರ ಸಂಬಂಧ:

ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.

ಕುಟುಂಬದ ಸದಸ್ಯರ ಜತೆ ಸಾಮರಸ್ಯ

ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.

ಚಾಕು ಮತ್ತು ಕತ್ತರಿಗಳು

ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.

ಮಕ್ಕಳು:

ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.

ಆರೋಗ್ಯಕರ ಲೈಂಗಿಕ ಸಂಬಂಧ

ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.

ಆರ್ಥಿಕ ಶಕ್ತಿ

ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ T-Facing ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ.

Thursday, 12 September 2019

ವಾಸ್ತು ನಿಯಮಗಳನ್ನು ಪಾಲಿಸಿ ಜೀವನದಲ್ಲಿ ಸಂತೋಷವಾಗಿರಿ

ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. 

ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.

ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.
ಏಳು ದೈವಾಜ್ಞೆಗಳು

ಹಿರಿಯರಿಗೆ

ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.

ವೃತ್ತಿನಿರತರಿಗೆ

ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.

ಗೃಹಿಣಿಯರಿಗೆ

ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.

ವಿದ್ಯಾರ್ಥಿಗಳಿಗೆ

ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.

Wednesday, 11 September 2019

ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ

ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.

ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.

ನಗರೀಕರಣ ಬೆಳೆಯುತ್ತಿರುವ ಇಂದಿನ ಯುಗ ಮತ್ತು ಕಾಲದಲ್ಲಿ, ಸ್ಥಳದ ನ್ಯೂನತೆ ಮತ್ತು ಆಧುನಿಕ ವಿಜ್ಞಾನ ವಿವರಣೆಗೆ ವಿಫಲವಾದ ಎಲ್ಲವುದರಲ್ಲೂ ಮಿತಿಮೀರಿದ ನಂಬಿಕೆಕಳೆದುಕೊಂಡಿರುವಾಗ, ವಾಸ್ತು ನಿಯಮಗಳಿಗೆ ಬದ್ಧವಾದ ಮನೆಯನ್ನು ಕನಸಿನಲ್ಲೂ ಎಣಿಸುವುದು ಕಾರ್ಯತಃ ಅಸಾಧ್ಯವೆನಿಸಿದೆ.

ಆಕಾಶ

ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.

ಗಾಳಿ(ವಾಯು)

ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ

ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.

ಜಲ

ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ

ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.
ಕೋನಾರ್ಕ್ ಸೂರ್ಯ ದೇವಸ್ಥಾನ, ಆಗ್ರಾದ ತಾಜ್ ಮಹಲ್, ಪುಟ್ಟಪರ್ತಿಯ ಸಾಯಿಬಾಬ ಆಶ್ರಮ, ಪ್ರಶಾಂತಿ ನಿಲಯಂ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.

Tuesday, 10 September 2019

ಅತಿಥಿಗಳನ್ನು ಆದರಿಸುವ ಮನೆಯ ಮುಖ್ಯದ್ವಾರ.....

ಸಾರ ಕಲ್ಲಕಟ್ಟ

ಮನೆಯ ಮುಖ್ಯದ್ವಾರವು ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ನಿರ್ಮಿಸಲು ಯಾವ ಮರವನ್ನು ಆಯ್ಕೆ ಮಾಡಬೇಕು? ಮನೆಯ ಮುಂದಿನ ಗೇಟು ಯಾವ ರೀತಿ ಇರಿಸಬೇಕು?ಎಂಬುದನ್ನು ಶಾಸ್ತ್ರೀಯ ರೀತಿಯಲ್ಲಿ ವಾಸ್ತುಶಾಸ್ತ್ರವು ವಿವರಿಸುತ್ತದೆ.

ಮನೆಯ ಬಾಗಿಲು ತೆರೆದು ಪ್ರಸನ್ನವದನರರಾಗಿ ಅತಿಥಿಗಳನ್ನು ಬರಮಾಡಿಕೊಳ್ಳುವ ರೀತಿಯು ಅತಿಥಿಗಳ ಮನದಣಿಯುವಂತಿದ್ದರೆ ಮುಖ್ಯದ್ವಾರಕ್ಕೆ ಅಲಂಕಾರಗಳು ಯಾಕೆ ಬೇಕು ಹೇಳಿ? ಆದರೂ ಮುಖ್ಯದ್ವಾರವನ್ನು ಆದಷ್ಟು ಶೃಂಗರಿಸಲು ಪ್ರತಿಯೊಬ್ಬರೂ ಶ್ರಮಿಸುತ್ತಾರೆ ಯಾಕೆಂದರೆ ಮುಖ್ಯದ್ವಾರವು ಪ್ರತೀಮನೆಯ ಆಕರ್ಷಣಾ ಬಿಂದು ಆದುದರಿಂದಲೇ ಪ್ರತಿಯೊಬ್ಬರೂ ಅದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲು ಬಯಸುತ್ತಾರೆ.ಮನೆಯ ಪ್ರಮುಖ ದ್ವಾರವನ್ನು ಶೃಂಗರಿಸುವುದು ಐಶ್ವ್ಯರ್ಯದ ಸಂಕೇತ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.ಮುಖ್ಯದ್ವಾರದ ಬಾಗಿಲುಗಳಲ್ಲಿ ಲಕ್ಷ್ಮಿ,ಸರಸ್ವತಿ,ಗಜಲಕ್ಷ್ಮಿ ಮೊದಲಾದ ಕೆತ್ತನೆಗಳಿದ್ದರೆ ಉತ್ತಮ, ಜೊತೆಗೆ ಇವು ಬಾಗಿಲಿನ ಸೌಂದರ್ಯವನ್ನು ವರ್ಧಿಸುತ್ತವೆ.

ಮನೆಯ ಮಧ್ಯಭಾಗದಲ್ಲಿ ಬರುವಂತೆ ಮುಖ್ಯದ್ವಾರ ನಿರ್ಮಿಸಿದರೆ ಉತ್ತಮ.ಈ ಬಾಗಿಲಿನ ನೇರ ರೇಖೆಯಲ್ಲಿ ಇನ್ನ್ಯಾವುದೇ ಬಾಗಿಲುಗಳು ಇರಬಾರದು.ಮುಖ್ಯದ್ವಾರದ ನೇರವಾಗಿ ಮನೆಯ ಗೇಟನ್ನು ಇರಿಸಬಾರದು.ಈ ಬಾಗಿಲಿನ ನೇರ ಮುಂಭಾಗದಲ್ಲಿ ಯಾವುದೇ ಕಂಬಗಳು ಅಥವಾ ಯಾವುದೇ ಮನೆಗಳೋ ಇರಬಾರದು.ಒಂದು ವೇಳೆ ನಿಮ್ಮ ಮನೆಯ ನೇರ ಮುಂಭಾ-ಗದಲ್ಲಿ ಇನ್ನೊಂದು ಮನೆಯಿದ್ದರೆ ಆ ಮನೆಯ ಬಾಗಿಲಿನ ನೇರವಾಗಿ ನಿಮ್ಮ ಮನೆಯ ಬಾಗಿಲು ಇರದಂತೆ ಶ್ರದ್ಧೆವಹಿಸಿ.

Monday, 9 September 2019

ಮನೆಯ ಈ ಭಾಗದಲ್ಲಿ ಬೆಡ್ ರೂಂ ಇದ್ದರೆ ದಂಪತಿ ನಡುವೆ ವಿರಸ ಜಾಸ್ತಿ!

ದಂಪತಿ ನಡುವಿನ ಸಾಮರಸ್ಯ ನಿರ್ಧರಿಸಲು ಇಬ್ಬರ ನಡುವಿನ ಹೊಂದಾಣಿಕೆ ಜತೆಗೆ ವಾಸ್ತು ಕೂಡಾ ಮುಖ್ಯವಾಗುತ್ತದೆ.

ಮುಖ್ಯವಾಗಿ ದಂಪತಿ ಬಳಸುವ ಬೆಡ್ ರೂಂ ವಾಸ್ತು ಅವರಿಬ್ಬರ ನಡುವಿನ ಸರಸ-ವಿರಸ ನಿರ್ಧರಿಸುತ್ತದೆ. ಅದು ಹೇಗೆ ಗೊತ್ತಾ?

ಮನೆಯಲ್ಲಿ ಬೆಡ್ ರೂಂ ಎನ್ನುವುದು ಉತ್ತರ, ನೈಋತ್ಯ ಅಥವಾ ಈಶಾನ್ಯ ಭಾಗದಲ್ಲಿರಬೇಕು. ಹೀಗಿದ್ದಾಗ ದಂಪತಿಯ ಸಾಂಸಾರಿಕ ಜೀವನ ಸರಸದಿಂದ ಮತ್ತು ಒತ್ತಡ ರಹಿತವಾಗಿರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Friday, 6 September 2019

ಅಡುಗೆಮನೆಗಾಗಿ ವಾಸ್ತು ಟಿಪ್ಸ್

ಅಡುಗೆಮನೆಗಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದು ಎರಡು ಕಾರಣಗಳಿಂದ ಮುಖ್ಯವಾಗುತ್ತದೆ. ಮೊದಲನೆಯದಾಗಿ ಇದು ಆಹಾರ ತಯಾರಾಗುವಂತಹ ಸ್ಥಳ ಮತ್ತು ಎರಡನೆಯದಾಗಿ, ಮನೆಯ ಹೆಂಗಸರು ತಮ್ಮ ಬಹಳಷ್ಟು ಸಮಯವನ್ನು ಇಲ್ಲಿಯೇ ಕಳೆಯುತ್ತಾರೆ. ವಾಸ್ತು, ಪೌಷ್ಟಿಕ ಆಹಾರ ಮತ್ತು ಮಹಿಳೆಯರ ಆರೋಗ್ಯವನ್ನು ಖಾತ್ರಿಪಡಿಸುತ್ತದೆ. ಮತ್ತೊಂದು ಪ್ರಮುಖ ಕಾರಣವೇನೆಂದರೆ ಈ ಸ್ಥಳವು, ಮನೆಯಲ್ಲಿ ಅಗ್ನಿ ತತ್ವವು ನೆಲೆಸಿರುವಂತಹ ಸ್ಥಳ, ಹೀಗಾಗಿ ಈ ಸ್ಥಳವನ್ನು ಎಚ್ಚರದಿಂದ ವಿನ್ಯಾಸಗೊಳಿಸಬೇಕು. ಅಡುಗೆಮನೆಗಾಗಿ ವಾಸ್ತು, ಅಡುಗೆಮನೆಯಲ್ಲಿ ಸಲಕರಣೆಗಳನ್ನು ಇರಿಸಬೇಕಾದ ಸ್ಥಳ ಮತ್ತು ದಿಕ್ಕಿನ ಕುರಿತು ನಿಯಮಗಳನ್ನು ತಿಳಿಸುವುದಷ್ಟೇ ಅಲ್ಲದೆ, ಅಡುಗೆ ಮನೆಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿ ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಆಧರಿಸಿ ಅಂತಹ ವ್ಯಕ್ತಿ ಇರಬೇಕಾದ ಸ್ಥಳ ಮತ್ತು ದಿಕ್ಕಿನ ನಿಯಮಗಳನ್ನೂ ತಿಳಿಸುತ್ತದೆ. ವಾಸ್ತುವಿನಲ್ಲಿ ಅಡುಗೆಮನೆಗಾಗಿಯೇ ಒಂದು ದಿಕ್ಕನ್ನು ನಿರ್ದಿಷ್ಟಪಡಿಸಲಾಗಿದೆ. ಆದರೆ ಕಟ್ಟಡ ನಿರ್ಮಾಣವನ್ನು ಆಧರಿಸಿ ಈ ದಿಕ್ಕು ಬದಲಾಗುತ್ತದೆ.

ಅಡುಗೆಮನೆಗಾಗಿ ವಾಸ್ತು ಉಪಾಯಗಳಲ್ಲಿ ಕೆಲವನ್ನು ಈ ಕೆಳಗೆ ನೀಡಲಾಗಿದೆ: –

ನಿಮ್ಮ ಅಡುಗೆಮನೆಯ ಸಲಕರಣೆಗಳನ್ನು ಯಾವ ರೀತಿ ಇರಿಸಲಾಗಿದೆ ಎಂದು ಪರಿಶೀಲಿಸಿ. ಸ್ಟೊವ್ ಮತ್ತು ನೀರಿನ ಸಿಂಕ್‌ಗಳನ್ನು ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇರಿಸದೇ ಇದ್ದರೆ, ಅದರಿಂದ ಮನೆಯಲ್ಲಿ ಸತತ ಜಗಳಗಳಾಗುತ್ತಿರುತ್ತವೆ. ಇವೆರಡೂ ವಿಭಿನ್ನ ತತ್ವಗಳನ್ನು ಪ್ರತಿನಿಧಿಸುವುದರಿಂದ, ಎರಡನ್ನೂ ಒಟ್ಟಿಗೇ ಇರಿಸುವುದು ಮನೆಯಲ್ಲಿ ಟೆನ್ಶನ್ ಉಂಟು ಮಾಡುತ್ತದೆ.

ಮನೆಯ ಮುಖ್ಯಸ್ಥರಾದ ವ್ಯಕ್ತಿಯ ಅನುಕೂಲಕರ ದಿಕ್ಕಿನಲ್ಲಿ ಸ್ಟೊವ್ ನಾಬ್ ಅನ್ನು ಸ್ಥಾನೀಕರಿಸಬೇಕು. ಇದು ಇಡೀ ಕುಟುಂಬಕ್ಕೆ ಉತ್ತಮ ಆರೋಗ್ಯವನ್ನು ಖಚಿತಪಡಿಸುತ್ತದೆ. ನಿಮ್ಮ ಅನುಕೂಲಕರ ದಿಕ್ಕುಗಳು ಯಾವುವೆಂದು ಅರಿತುಕೊಳ್ಳಲು ಸರಳ ವಾಸ್ತು ನಿಮಗೆ ಸಹಾಯ ಮಾಡಬಲ್ಲದು.

ಅಡುಗೆ ಮನೆಯು ಮೆಟ್ಟಿಲುಗಳ ಹತ್ತಿರ ಇರಬಾರದು, ಈ ರೀತಿ ಇದ್ದರೆ ಶಕ್ತಿಯ ಹರಿವಿಗೆ ತಡೆಯುಂಟಾಗುತ್ತದೆ.

Thursday, 5 September 2019

ಮನೆಯ ವಾಸ್ತು

1)ಹಾಸಿಗೆ ಮೇಲ್ಭಾಗದಿಂದ ಬೆಳಕು ಬೀಳಬಾರದು.

2) ಮಾಸ್ಟರ್ ಬೆಡ್‌ರೂಂ ನೈರುತ್ಯ ಮೂಲೆಯಲ್ಲಿ ಮತ್ತು ಹಾಸಿಗೆ ದಕ್ಷಿಣದ ಗೋಡೆಗೆ ಇರಬೇಕು.

3)ಬಾಲಕರಿಗೆ ಮಲಗುವ ಕೋಣೆಯು ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿರಬೇಕು ಮತ್ತು ಹಾಸಿಗೆ ಪೂರ್ವ ಗೋಡೆಗೆ ತಾಗಿರಬೇಕು.

4) ಪ್ರವೇಶದ 8 ಅಡಿ ಅಥವಾ ಬಾಗಿಲಿನ ಎತ್ತರದಷ್ಟು ದೂರ ಯಾವುದೇ ಪೀಠೋಪಕರಣಗಳನ್ನು ಇಡಬಾರದು.

5)ಊಟದ ಮೇಜು ಚೌಕ ಅಥವಾ ಆಯತಾಕಾರದಲ್ಲಿದ್ದರೆ ಒಳ್ಳೆಯದು.

6) ಕಂಪ್ಯೂಟರ್ ನೈರುತ್ಯ ದಿಕ್ಕಿನಲ್ಲಿರಬೇಕು.

7)ಮೆಟ್ಟಿಲು ದಕ್ಷಿಣ ಮತ್ತು ಪಶ್ಚಿಮದ ದಿಕ್ಕಿಗೆ ಇರಬೇಕು.

8)ಕನ್ನಡಿ ಹಾಸಿಗೆಗೆ ನಿಖರವಾದ ವಿರುದ್ಧ ದಿಕ್ಕಿನಲ್ಲಿ ಇರಬಾರದು.

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...